ಹತ್ತು ಬಾರಿ ಬಿದ್ದರೂ ನಕ್ಕು ಎದ್ದ ಹೋಂಡಾ


Team Udayavani, Dec 1, 2019, 5:24 AM IST

honda

ಅದ್ಹೇಗೆ ಕೆಲವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುತ್ತಲೇ ಅದ್ಭುತ ಪ್ರಗತಿ ಸಾಧಿಸುತ್ತಾ¤ರೆ, ಯಶಸ್ಸಿನ ನಂತರ ಯಶಸ್ಸನ್ನು ಪಡೆಯುತ್ತಾ ಸಾಗುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಬಹಳ ಸರಳವಿದೆ – ಯಶಸ್ವಿ ವ್ಯಕ್ತಿಯು ಹತ್ತು ಬಾರಿ ವಿಫ‌ಲನಾದರೂ 11ನೇ ಬಾರಿ ಎದ್ದು ನಿಂತು ಮುಂದೆ ಸಾಗುತ್ತಲೇ ಇರುತ್ತಾನೆ, ಫೇಲ್ಯೂರ್‌ ಎನಿಸಿಕೊಳ್ಳುವವನು ಎರಡು ಅಥವಾ ಮೂರನೇ ಪ್ರಯತ್ನದಲ್ಲೇ ಕೈಚೆಲ್ಲಿ ಸುಮ್ಮನಾಗಿರುತ್ತಾನೆ.

ಸೋಯಿಚಿರೋ ಹೋಂಡಾ ಎನ್ನುವವರ ಉದಾಹರಣೆ ನೀಡುತ್ತೇನೆ. ಈ ವ್ಯಕ್ತಿ ಬೇರಾರೂ ಅಲ್ಲ, ಜಗದ್ವಿಖ್ಯಾತ ಹೋಂಡಾ ಆಟೊಮೊಬೈಲ್‌ ಸಾಮ್ರಾಜ್ಯದ ಸ್ಥಾಪಕ. ಇಂದು ಹೋಂಡಾ ಎಂದರೆ ಎಲ್ಲರಿಗೂ ಗೊತ್ತಿದೆ, ಈ ಕಂಪನಿಯ ಕಾರುಗಳಿಂದ ಹಿಡಿದು ಬೈಕುಗಳು ಚಿರಪರಿಚಿತ. ಆದರೆ ಈ ಕಂಪನಿಯನ್ನು ಕಟ್ಟಿ ನಿಲ್ಲಿಸಲು ಈ ವ್ಯಕ್ತಿ ಪಟ್ಟ ಕಷ್ಟವೆಷ್ಟು ಗೊತ್ತೇ?
ಹೋಂಡಾ ಹುಟ್ಟಿದ್ದ ಜಪಾನ್‌ನಲ್ಲಿ. ಚಿನ್ನದ ಚಮಚವೇನೂ ಬಾಯಲ್ಲಿಟ್ಟುಕೊಂಡು ಹುಟ್ಟಲಿಲ್ಲ ಈತ. ಕೆಳ ಮಧ್ಯಮ ವರ್ಗದಲ್ಲೇ ಜನನವಾಯಿತು. ದಿನಕ್ಕೆ ಎರಡು ಹೊತ್ತು ಊಟ ಬಿಟ್ಟರೆ ಹೇಳಿ ಕೊಳ್ಳುವಂಥದ್ದೇನೂ ಇರಲಿಲ್ಲ. ಆದರೆ ಚಿಕ್ಕ ವಯಸ್ಸಿನಿಂದಲೇ ಹೋಂಡಾಗೆ ತನ್ನಲ್ಲಿ ಮತ್ತು ಸಮಾಜದಲ್ಲಿ ಬೃಹತ್‌ ಬದಲಾವಣೆ ತರುವಂಥ ಸಾಧನೆ ಮಾಡಬೇಕು ಎಂಬ ಅದಮ್ಯ ಬಯಕೆಯಂತೂ ಕುದಿಯುತ್ತಲೇ ಇತ್ತು. ಬಾಲ್ಯದಿಂದಲೇ ಯಂತ್ರೋಪಕರಣಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಹೋಂಡಾ, ಮುಂದೆ ಇಂಜಿನಿಯರಿಂಗ್‌ ಸ್ಕೂಲ್‌ ಸೇರಿದ. ಆಗ ಆತನ ವಯಸ್ಸು 20 ದಾಟಿರಲಿಲ್ಲ. ಒಂದು ದಿನ ಹಠಾತ್ತನೆ ಹೋಂಡಾಗೆ ವಾಹನಗಳಿಗೆ ಪಿಸ್ಟನ್‌ ರಿಂಗ್‌ಗಳನ್ನು ತಯಾರಿಸುವ ಐಡಿಯಾ ಹೊಳೆಯಿತು. ಆ ಐಡಿಯಾಗೆ ಮೂರ್ತರೂಪ ಕೊಡಲು ಆತ ಸ್ಕೂಲ್‌ಗೆ ತೆರಳಿ ಅಲ್ಲಿನ ವರ್ಕ್‌ಶಾಪ್‌ನಲ್ಲಿ ಹಗಲು ರಾತ್ರಿ ಶ್ರಮಪಟ್ಟ, ಕೆಲವು ದಿನಗಳಲ್ಲಂತೂ ವರ್ಕ್‌ಶಾಪ್‌ನಲ್ಲಿಯೇ ರಾತ್ರಿ ನಿದ್ದೆ ಮಾಡುತ್ತಿದ್ದ. ತಾನೊಂದು ಅದ್ಭುತ ಡಿಸೈನ್‌ ರೆಡಿ ಮಾಡಿ, ಟೊಯೋಟಾ ಕಂಪನಿಗೆ ಮಾರುತ್ತೇನೆ ಎಂಬ ಅದಮ್ಯ ನಂಬಿಕೆ ಹೋಂಡಾಗಿತ್ತು. ಆ ಹೊತ್ತಿಗಾಗಲೇ ಹೋಂಡಾಗೆ ಮದುವೆ ಆಗಿತ್ತು, ಪಿಸ್ಟನ್‌ ತಯಾರಿಕೆಗೆ ಹಣದ ಕೊರತೆ ಎದುರಾದಾಗ ಹೆಂಡತಿಯ ಒಡವೆಯನ್ನೇ ಅಡವಿಟ್ಟ.

ಕೊನೆಗೂ ಪಿಸ್ಟನ್‌ ರಿಂಗ್‌ಗಳಿಗೆ ಒಂದು ಪ್ರೊಟೋಟೈಪ್‌ ಸಿದ್ಧಮಾಡಿ, ಅದನ್ನು ಟೊಯೋಟಾ ಕಂಪೆನಿಯ ಬಳಿಗೊಯ್ದ. ಈ ಅದ್ಭುತ ಡಿಸೈನ್‌ ಅನ್ನು ಟೊಯೋಟಾ ಕಂಪೆನಿ ಖರೀದಿಸುತ್ತದೆ ಎಂದು ಭಾವಿಸಿದ್ದ ಹೋಂಡಾ, ಆದರೆ ಟೊಯೋಟಾ ಕಂಪೆನಿ, ನಮ್ಮ ಗುಣಮಟ್ಟಕ್ಕೆ ತಕ್ಕಂಥ ಉತ್ಪನ್ನ ಇದಲ್ಲ ಎಂದು ನಿರಾಕರಿಸಿಬಿಟ್ಟಿತು! ಹೋಂಡಾ ವರ್ಕ್‌ಶಾಪಿಗೆ ಹಿಂದಿರುಗಿದಾಗ ಅಲ್ಲಿನ ಇಂಜಿನಿಯರ್‌ಗಳು “ನಾವು ಮೊದಲೇ ಹೇಳಿರಲಿಲ್ಲವಾ, ಇದೆಲ್ಲ ಆಗದ ಮಾತು’ ಎಂದು ನಗಲಾರಂಭಿಸಿದರು. “ನೀವು ನಗ್ತಾ ಇರಿ, ನಾನು ಕೆಲಸ ಮಾಡ್ತೇನೆ’ ಎಂದು ಮಂದ ಹಾಸ ಬೀರಿದ ಯುವ ಹೋಂಡಾ, ತನ್ನ ಹೊಸ ಡಿಸೈನ್‌ ರೂಪಿಸುವುದರಲ್ಲಿ ನಿರತನಾದ. ಸುಮಾರು ಎರಡು ವರ್ಷದ ಪರಿಶ್ರಮದ ನಂತರ, ಮತ್ತೂಂದು ಡಿಸೈನ್‌ ಸಿದ್ಧಪಡಿಸಿ ಟೊಯೋಟಾ ಕಂಪೆನಿಯ ಕದ ತಟ್ಟಿದ ಹೋಂಡಾ. ಈ ಬಾರಿ ಟೊಯೋಟಾ ಕಂಪೆನಿ ಈ ಹೊಸ ಡಿಸೈನ್‌ನಿಂದ ಎಷ್ಟು ಖುಷಿಯಾಯಿತೆಂದರೆ, ಪಿಸ್ಟನ್‌ ರಿಂಗ್‌ ತಯ್ನಾರು ಮಾಡುವುದಕ್ಕಾಗಿ ಫ್ಯಾಕ್ಟರಿ ತೆರೆಯಲು ಹಣ ಸಹಾಯವನ್ನೂ ಮಾಡಿತು. ಟೋಯೋಟಾ ಕಂಪನಿಯ ಈ ಪ್ರೋತ್ಸಾಹದಿಂದಾಗಿ ಸಂತುಷ್ಟನಾದ ಹೋಂಡಾ ಅತ್ಯಂತ ಉತ್ಸಾಹದಿಂದ ಫ್ಯಾಕ್ಟರಿ ಕಟ್ಟಿ ನಿಲ್ಲಿಸಿದ..

ಇದೇ ಸಮಯಕ್ಕಾಗಿ ಕಾಯುತ್ತಿತ್ತೇನೋ ಎನ್ನುವಂತೆ, ಹಠಾತ್ತನೆ ಜಪಾನ್‌ನ ವಿವಿಧ ನಗರಿಗಳಿಗೆ ಭೂಕಂಪ ಬಂದಪ್ಪಳಿಸಿತು. ಹೋಂಡಾ ಕಟ್ಟಿದ್ದ ಫ್ಯಾಕ್ಟರಿ ಧರೆಗುರುಳಿತು. ಹೋಂಡಾ ಕಂಪೆನಿಯ ಟೀಂ ತಮಗೆ ಎದುರಾದ ದುಸ್ಥಿತಿಯಿಂದ ಕಂಗಾಲಾಗಿ ಕಣ್ಣೀರಿಟ್ಟಿತು. ಆದರೆ ಹೋಂಡಾ ಮಾತ್ರ ಅದೇ ಮಂದಹಾಸದಿಂದಲೇ ಅಂದ, “ಆದದ್ದಾಯಿತು, ಮತ್ತೆ ಕಟ್ಟೋಣ! ‘.
ಎರಡನೇ ಬಾರಿ ಕಾರ್ಖಾನೆಯ ನಿರ್ಮಾಣದ ಕೆಲಸ ಭರದಿಂದ ಸಾಗಿತ್ತು. ಆದರೆ ಅದು ಪೂರ್ಣವಾಗುವ ಮೊದಲೇ ಜಪಾನ್‌ ಎರಡನೇ ವಿಶ್ವಯುದ್ಧವನ್ನು ಪ್ರವೇಶಿಸಿಬಿಟ್ಟಿತು. ಆ ಸಮಯದಲ್ಲಿ ದೇಶಾದ್ಯಂತ ಸಿಮೆಂಟ್‌ನ ಪೂರೈಕೆ ಅಜಮಾಸು ನಿಂತೇ ಹೋಯಿತು. ಈಗೇನು ಮಾಡಬೇಕು ಎಂದು ಎಲ್ಲರೂ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಾಗ, ಹೋಂಡಾ ಅಂದ, “ಆದದ್ದಾಯಿತು. ಸಿಮೆಂಟ್‌ ಸಿಗುತ್ತಿಲ್ಲ ಎಂದರೆ, ನಾವೇ ಸಿಮೆಂಟ್‌ ತಯಾರಿಸೋಣ!’

ಕೆಲವೇ ಸಮಯದಲ್ಲಿ ಹೋಂಡಾ ಮತ್ತು ತಂಡ ಸಿಮೆಂಟ್‌ ಅನ್ನು ತಯಾರಿಸುವ ಹೊಸ ವಿಧಾನವನ್ನೇ ಕಂಡುಹಿಡಿಯಿತು. ತಾವೇ ತಯಾರಿಸಿದ ಸಿಮೆಂಟ್‌ ಬಳಸಿ ಹೋಂಡಾ ತಂಡ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿತು. ಆದರೆ….

ಅದೊಂದು ದುರ್ದಿನ ಅಮೆರಿಕನ್‌ ಪಡೆಗಳು ಜಪಾನ್‌ನ ಮೇಲೆ ವಾಯುದಾಳಿ ನಡೆಸಿದಾಗ ಹೋಂಡಾ ಫ್ಯಾಕ್ಟರಿಯೂ ಬಾಂಬ್‌ ದಾಳಿಗೆ ತುತ್ತಾಯಿತು. ಆಗ ಜಪಾನ್‌ನಲ್ಲಿ ಸ್ಟೀಲ್‌ನ ತೀವ್ರ ಅಭಾವ ಎದುರಾಯಿತು. ಆಗ ಹೋಂಡಾ ಕೈಚೆಲ್ಲಿದನಾ? ಖಂಡಿತ ಇಲ್ಲ!

ಆ ಸಮಯದಲ್ಲಿ ಅಮೆರಿಕದ ಯುದ್ಧ ವಿಮಾನಗಳೆಲ್ಲ ಇಂಧನದ ಟ್ಯಾಂಕ್‌ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್‌ಗಳಲ್ಲಿದ್ದ ಇಂಧನವನ್ನು ಬಳಸಿದ ನಂತರ, ಆಗಸದಿಂದ ತೆಳಕ್ಕೆ ಬಿಸುಟುತ್ತಿದ್ದವು (ವಿಮಾನದಲ್ಲಿ ಭಾರ ಕಡಿಮೆಯಾಗಲೆಂದು). ಈ ರೀತಿ ಅಮೆರಿಕದ ಯುದ್ಧ ವಿಮಾನಗಳು ಜಪಾನ್‌ನ ತುಂಬೆಲ್ಲ ಸ್ಟೀಲ್‌ ಟ್ಯಾಂಕ್‌ಗಳನ್ನು ಎಸೆದು ಹೋಗಿದ್ದವು. ಹೋಂಡಾ ಅವುಗಳನ್ನೇ ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ ಬಳಸಿಕೊಂಡ. ಈ ಸ್ಟೀಲ್‌ ಟ್ಯಾಂಕ್‌ಗಳನ್ನು ಹೋಂಡಾ “ಅಮೆರಿಕದ ಅಧ್ಯಕ್ಷ ಟ್ರೂಮನ್‌ರ ಕೊಡುಗೆ’ ಎಂದೇ ಕರೆದ.

ಇಷ್ಟಕ್ಕೇ ನಿಲ್ಲಲಿಲ್ಲ ಸಮಸ್ಯೆ, ಯುದ್ಧಾ ನಂತರ ಜಪಾನ್‌ಗೆ ತೀವ್ರ ಇಂಧನ ಅಭಾವ ಎದುರಾಯಿತು. ಇಂಧನವೇ ಇಲ್ಲವೆಂದ ಮೇಲೆ ಕಾರುಗಳನ್ನು ಕೊಳ್ಳುವವರು ಯಾರು? ಹೀಗಾಗಿ ಟೊಯೋಟಾ ಕಂಪನಿಯೂ ಕಾರ್‌ ಉತ್ಪಾದನೆಯನ್ನು ನಿಲ್ಲಿಸಿಬಿಟ್ಟಿತು. ಹೀಗಾಗಿ, ಹೋಂಡಾಗೆ ಪಿಸ್ಟನ್‌ ರಿಂಗ್‌ಗಳಿಗೆ ಆರ್ಡರ್‌ ಬರಲೇ ಇಲ್ಲ.

ಆ ಸಮಯದಲ್ಲಿ ಇಂಧನ ಕೊರತೆಯಿದ್ದ ಕಾರಣ, ಜನರು ಒಂದೋ ಕಾಲ್ನಡಿಗೆಯಲ್ಲಿ ಅಥವಾ ಸೈಕಲ್‌ಗಳ ಮೇಲೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಹೋಂಡಾಗೆ, ಸೈಕಲ್‌ಗೇ ಚಿಕ್ಕ ಇಂಜಿನ್‌ ಕೂಡಿಸಿದರೆ ಹೇಗೆ? ಅದೂ ಹೆಚ್ಚು ಇಂಧನ ಕುಡಿಯದು ಎನ್ನುವ ಐಡಿಯಾ ಬಂತು. ಆ ಐಡಿಯಾ  ಕಾರ್ಯ ರೂಪಕ್ಕೂ ಬಂದಿತು. ಹೋಂಡಾ ಆ್ಯಂಡ್‌ ತಂಡ ಬೈಕ್‌ ಇಂಜಿನ್‌ ತಯಾರಿಸಿತು. ಕೆಲವೇ ವರ್ಷಗಳಲ್ಲಿ ಹೋಂಡಾ ಕಂಪನಿಯ ಬೈಕ್‌ ಇಂಜಿನ್‌ಗಳು ಎಷ್ಟು ಪ್ರಖ್ಯಾತವಾಗಿಬಿಟ್ಟವೆಂದರೆ, ಅವುಗಳನ್ನು ಯೂರೋಪ್‌ ಮತ್ತು ಅಮೆರಿಕಕ್ಕೂ ಸರಬರಾಜು ಮಾಡಲಾಯಿತು.

ಮುಂದಿನದ್ದು ಇತಿಹಾಸ, 1970ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳ ಉತ್ಪಾದನೆಯನ್ನು ಆರಂಭಿಸಿತು. ಅದರೆ ಬೈಕ್‌ಗಳಷ್ಟೇ ಅಲ್ಲದೇ, ಕಾರುಗಳೂ ಲೋಕಪ್ರಿಯವಾದವು..

ಈಗ ಯೋಚಿಸಿ ನೋಡಿ, ಸೋಯಿಚಿರೋ ಹೋಂಡಾ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?ಅವರಂತೆ ಛಲದಂಕ ಮಲ್ಲನಾಗಿ ಯಶಸ್ವಿಯಾಗುತ್ತಿದ್ದರೋ ಅಥವಾ ಟೊಯೋಟಾ ಕಂಪನಿಯು ಪಿಸ್ಟನ್‌ ರಿಂಗ್‌ ಡಿಸೈನ್‌ ಅನ್ನು ನಿರಾಕರಿಸಿದಾಗಲೋ ಅಥವಾ ಕಾರ್ಖಾನೆಯು ಕುಸಿದುಬಿದ್ದಾಗಲೋ ನಿಮ್ಮ ಹಣೆಬರಹವನ್ನು ಹಳಿದು ಕೈ ಚೆಲ್ಲುತ್ತಿದ್ದಿರೋ? ಆಗಲೇ ಹೇಳಿದೆನಲ್ಲ, ಸಕ್ಸಸ್‌ ಮತ್ತು ಫೇಲ್ಯೂರ್‌ನ ನಡುವಿನ ವ್ಯತ್ಯಾಸ ಏನು ಎಂದು!

– ಮುಕುಂದಾ ನಂದ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.