ನಾವೆಂಥ ಸುಳ್ಳರೆಂದು ನಮಗೆ ಚೆನ್ನಾಗಿ ಗೊತ್ತಿದೆಯಲ್ಲವೇ?


Team Udayavani, Nov 3, 2019, 4:08 AM IST

nn-61

ಯಾರನ್ನಾದರೂ ನಾವು ಸುಳ್ಳ-ಸುಳ್ಳಿ ಎಂದು ಕರೆಯುತ್ತೀವಿ ಎಂದರೆ ಅವರ ಬಗ್ಗೆ ನಾವು ನೆಗೆಟಿವ್‌ ಇಮೇಜ್‌ ಕಟ್ಟಿಕೊಂಡಿರುತ್ತೇವೆ ಎಂದೇ ಅರ್ಥ. ಕ್ರಿಶ್ಚಿಯಾನಿಟಿ ಸೇರಿದಂತೆ ಜಗತ್ತಿನ ಎಲ್ಲಾ ಸಂಸ್ಕೃತಿಗಳೂ ಸುಳ್ಳನ್ನು ‘ಪಾಪ’ ಎಂದೇ ಪರಿಗಣಿಸುತ್ತವೆ. ಈ ಕಾರಣಕ್ಕಾಗಿಯೇ, ನಮ್ಮನ್ನು ಯಾರಾದರೂ ಸುಳ್ಳ ಎಂದು ಅಪ್ಪಿತಪ್ಪಿ ಕರೆದುಬಿಟ್ಟರೆ ನಮಗೆ ನೆಲವೇ ಕುಸಿದಂತಾಗುತ್ತದೆ. “ನಾವ್ಯಾಕೆ ಸುಳ್ಳರಲ್ಲ’ ಎಂದು ಅವರಿಗೆ ರುಜುವಾತು ಮಾಡಲು ಆಕಾಶ-ಭೂಮಿಯನ್ನು ಒಂದು ಮಾಡಿಬಿಡುತ್ತೇವೆ.

ಆದರೆ ನಾವು ಸತ್ಯವಂತರಲ್ಲ ಎನ್ನುವುದೇ ಸತ್ಯವಲ್ಲವೇ? ನಾವೆಂಥ ಸುಳ್ಳರು ಎನ್ನುವುದು ನಮಗಿಂತ ಚೆನ್ನಾಗಿ ಯಾರಿಗೆ ಗೊತ್ತಿದೆ? ಯಾವಾಗ ನಮ್ಮನ್ನು ನಾವು ಸುಳ್ಳರು ಎಂದು ಒಪ್ಪಿಕೊಳ್ಳುತ್ತೇವೋ, ಆಗ ಸತ್ಯದ ಹಾದಿಯಲ್ಲಿ ಮೊದಲನೆಯ ಹೆಜ್ಜೆ ಇಟ್ಟಿದ್ದೇವೆ ಎಂದರ್ಥ.

ಸುಳ್ಳು ಹೇಳುವ ಗುಣ ನಮಗೆ ಬಾಲ್ಯದಿಂದಲೇ ರೂಢಿಯಾಗಿರುತ್ತದೆ. ಆರಂಭದ ವರ್ಷಗಳಲ್ಲಿ ಮಕ್ಕಳು “ಸತ್ಯವನ್ನೇ’ ಹೇಳುತ್ತಿರುತ್ತಾರೆ. ಆದರೆ, ಯಾವುದೋ ಒಂದು ಸಂದರ್ಭದಲ್ಲಿ ಸತ್ಯ ಹೇಳಿ ತೊಂದರೆ ಅನುಭವಿಸಿರುತ್ತಾರೆ, ಅಂದಿನಿಂದ ಸುಳ್ಳು ಎಂಬ ಪರದೆ ಅವರ ಜತೆಯಾಗಿಬಿಡುತ್ತದೆ. ಯಾವಾಗ ಬೇಕೋ ಆವಾಗ ಅದನ್ನು ಹೊದ್ದುಕೊಂಡುಬಿಡುತ್ತಾರೆ. ಇದಷ್ಟೇ ಅಲ್ಲದೇ, ಸುಳ್ಳಿಗೆ ತನ್ನದೇ ಆದ ಫಾಯಿದೆ/ ಲಾಭಗಳಿವೆ. ಸತ್ಯದಲ್ಲಿ ಕಹಿ ಜಾಸ್ತಿ, ಸುಳ್ಳಿನಲ್ಲಿ ಸಕ್ಕರೆ ಪ್ರಮಾಣ ಅಧಿಕ. ಹೀಗಾಗಿ, ಸತ್ಯ ಹೇಳಿ ಎದುರಿನವರ ಮನಸ್ಸು ನೋಯಿಸುವುದಕ್ಕಿಂತ, ಸುಳ್ಳು ಹೇಳಿ ಎದುರಿನವನ ಮನ
ಗೆಲ್ಲುವುದು ಸುಲಭ. ಆದರೆ, ಸುಳ್ಳು ಎನ್ನುವುದಕ್ಕೆ ಒಂದೇ ರೂಪ ಇಲ್ಲ. ವಿವಿಧ ಬಗೆಯಲ್ಲಿ ನಾವು ಇತರರಿಗೂ, ನಮ್ಮೊಂದಿಗೆ ನಾವೂ ನಿರಂತರವಾಗಿ ಸುಳ್ಳು ಹೇಳುತ್ತಲೇ ಇರುತ್ತೇವೆ.

ನೋವು
ಎದುರಿನ ವ್ಯಕ್ತಿಯಿಂದ, ಅಂದರೆ, ನಮ್ಮ ಸಂಗಾತಿ, ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳಿಂದಾಗಿ ನಮ್ಮ ಜೀವನ ಎಷ್ಟೇ ನರಕ ಸದೃಶವಾಗಿದ್ದರೂ ಅದನ್ನು ನಾವು ಅವರಿಗೆ ಹೇಳದೇ, ಎಲ್ಲವೂ ಸರಿಯಾಗಿದೆ ಎಂದು ಅವರಿಗೂ- ಜತೆಗೆ ನಮಗೆ ನಾವೂ ಸುಳ್ಳು ಹೇಳಿಕೊಂಡೇ ಸಮಾಧಾನ ಪಟ್ಟುಕೊಳ್ಳುತ್ತೇವೆ. ಆದರೆ ಆ ಸುಳ್ಳು ನಮ್ಮನ್ನು ಒಳಗಿನಿಂದ ಸುಡುತ್ತಲೇ ಹೋಗುತ್ತದೆ. ಅದು ಒಳಗೆ ಹೆಚ್ಚು ಸುಟ್ಟಾಗಲೆಲ್ಲ ನಾವು ಹೆಚ್ಚು ಅಸಹನೆಯ ಗೂಡಾಗುತ್ತಾ ಹೋಗುತ್ತೇವೆ. ಇಲ್ಲವೇ, ಸಂತೋಷವನ್ನು ಕಳೆದುಕೊಂಡು, ದುಃಖದಲ್ಲೇ ಬದುಕು ಕಳೆಯುತ್ತೇವೆ.

ಪಾಪಪ್ರಜ್ಞೆ
ಕೆಲವೊಂದು ಸಂದರ್ಭದಲ್ಲಿ ನಾವು ಎಂಥ ದೊಡ್ಡ ತಪ್ಪು ಮಾಡಿಬಿಟ್ಟಿರುತ್ತೇವೆ ಎಂದರೆ, ಅದರ ಬಗ್ಗೆ ಯೋಚಿಸುವುದಕ್ಕೂ ನಮ್ಮ ಮನಸ್ಸು ಒಪ್ಪುವುದಿಲ್ಲ. ಈ ಕಾರಣಕ್ಕಾಗಿಯೇ ಆ ಘಟನೆಯ ಸುತ್ತ ಹತ್ತಾರು ಸುಳ್ಳು ಕಥೆಗಳನ್ನು ಕಟ್ಟಿಕೊಂಡು ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಾ ಬದುಕುತ್ತಿರುತ್ತೇವೆ. ಅನೇಕರಿಗೆ, ನಮ್ಮಿಂದ ಅತೀವ ನೋವಾಗಿರುತ್ತದೆ. ಆದರೆ, ಅವರಿಗೆ ನಾವು ನೋವು ಕೊಟ್ಟಿದ್ದೇವೆ ಎಂದು ಒಪ್ಪಿಕೊಂಡರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ, ತಪ್ಪನ್ನು ಒಪ್ಪಿಕೊಳ್ಳದೇ ಸುಳ್ಳು ಹೇಳಿಕೊಂಡು ಇರುತ್ತೇವೆ. ಅವರಿಗೆ ಕ್ಷಮಾಪಣೆ ಕೇಳುವುದೇ ಇಲ್ಲ.

ಜ್ಞಾನ
ಎಲ್ಲರಿಗೂ ಎಲ್ಲಾ ವಿಷಯಗಳು ತಿಳಿದಿರಲೇ ಬೇಕೆಂದಿಲ್ಲ, ತಿಳಿದುಕೊಳ್ಳುವುದಕ್ಕೆ ಸಾಧ್ಯವೂ ಇಲ್ಲ. ತಿಳಿದುಕೊಳ್ಳಲು ಪ್ರಯತ್ನಿಸುವ ಅಗತ್ಯವೂ ಇಲ್ಲ. ಆದರೆ, ನಾವು ಕೆಲವೊಂದು ವಿಷಯಗಳಲ್ಲಿ ಅಜ್ಞಾನಿಗಳು ಎಂದು ಹೇಳಿಕೊಂಡುಬಿಟ್ಟರೆ ಜನ ತಿರಸ್ಕರಿಸುತ್ತಾರೆ ಎಂಬ ಪೂರ್ವಗ್ರಹದಿಂದಾಗಿ ಎಲ್ಲವೂ ಗೊತ್ತಿದೆ ಎಂಬಂತೆ ಬಿಂಬಿಸಿಕೊಂಡು ಬದುಕುತ್ತೇವೆ. ನಾವೆಷ್ಟು ಸುಳ್ಳು ಹೇಳುತ್ತಿದ್ದೇವೆ, ಹೇಳಿಕೊಳ್ಳುತ್ತಿದ್ದೇವೆ ಎನ್ನುವುದು ನಮಗಷ್ಟೇ ಗೊತ್ತಿರುತ್ತದೆ. ಇದರಿಂದಾಗಿ,
ನಮ್ಮಲ್ಲಿ ಜ್ಞಾನದ ಕೊರತೆ ಇದೆ ಎಂಬ ಅನವಶ್ಯಕ ಬೇಗುದಿ ಸದಾ ಕಾಡುತ್ತಿರುತ್ತದೆ.

ಇದು ನಮ್ಮೊಬ್ಬರದ್ದೇ ಕಥೆಯಲ್ಲ. ಎಲ್ಲರೂ ತಮಗೆ ತಾವು ಮತ್ತು ಪರಸ್ಪರರಿಗೆ ಸುಳ್ಳು ಹೇಳುತ್ತಲೇ ಬದುಕುತ್ತಿದ್ದಾರೆ. (ಸುಳ್ಳು ಹೇಳದವರೆಂದರೆ ಸತ್ತವರು ಮಾತ್ರ!) ಆದರೆ, ನಮಗೆ ನಾವೇ ಹೇಳಿಕೊಳ್ಳುವ ಸುಳ್ಳುಗಳು ನಮ್ಮನ್ನು ನಿರಂತರವಾಗಿ ಸುಡುತ್ತಲೇ ಹೋಗುತ್ತವೆ. ತತ್ಪರಿಣಾಮವಾಗಿ ನಮಗೆ ನೆಮ್ಮದಿ ಎನ್ನುವುದೇ ಮರೀಚಿಕೆಯಾಗಿಬಿಟ್ಟಿದೆ. ಮೇಲ್ಗಡೆ ಎಷ್ಟೇ ಖುಷಿ ಖುಷಿಯಾಗಿ ಕಾಣಿಸಿಕೊಂಡರೂ, ಒಳಗೆ ನಮ್ಮ ಮನಸ್ಸು ಕುದಿಯುತ್ತಲೇ ಇರುತ್ತದೆ. ಒಂದು ರೀತಿಯಲ್ಲಿ ನಿರಂತರ ಅಸಮಾಧಾನದ ಮೋಡ ನಮ್ಮ ತಲೆಯಲ್ಲಿ ಸುತ್ತುತ್ತಲೇ ಇರುತ್ತದೆ. ಇದರಿಂದಾಗಿ, ನಮ್ಮ ಕೆಲಸ, ಸ್ನೇಹ, ಸಂಬಂಧ, ಪ್ರೀತಿ ಎಲ್ಲವೂ ನಕಲಿಯಾಗಿಬಿಟ್ಟಿವೆ. ನಿಜವಾದ ಪ್ರಾಮಾಣಿಕತೆ ಅಲ್ಲಿ ಇಲ್ಲವೇ ಇಲ್ಲ. ಸತ್ಯವಂತರಾಗಿ ಇರುವುದು ಹೇಗೆ, ಅದರಿಂದ ಸಿಗುವ ಸುಖ-ಸಾಂತ್ವನ, ಅದು ಕೊಡುವ ಧೈರ್ಯ-ಶಿಸ್ತು ಎಂಥದ್ದು ಎನ್ನುವುದನ್ನೇ ಮರೆತುಬಿಟ್ಟಿದ್ದೇವೆ. ನಮ್ಮ ಮನೆ ಕೊಳಕಾಗಿದೆ ಎಂಬ ಸತ್ಯ ಒಪ್ಪಿಕೊಂಡಾಗಲೇ ಅಲ್ಲವೇ ನಾವು ಅದನ್ನು ಸ್ವತ್ಛಗೊಳಿಸುವುದು…ಇಲ್ಲ, ಮನೆಯಲ್ಲಿ ಕೊಳೆಯೇ ಇಲ್ಲ, ಎಲ್ಲಾ ಸರಿಯಾಗಿದೆ ಎಂದು ಸುಳ್ಳು ಹೇಳುತ್ತಾ ಬದುಕಿದರೆ, ಕಸವನ್ನೆಲ್ಲ ಮನೆಯಲ್ಲಿ ಅವಿಸಿಟ್ಟರೆ, ಅದು ಕೊಳೆತು ನಾರುವುದು ನಿಶ್ಚಿತ. ಆ ದುರ್ವಾಸನೆ ಅನುಭವಿಸುವವರೂ ನೀವೇ.

ಸತ್ಯ ಹೇಳುವುದೆಂದರೆ, ನಿಷ್ಠುರವಾಗಿ ಬದುಕುವುದು ಎಂದಲ್ಲ. ಸತ್ಯ ಹೇಳುವುದಕ್ಕೆ ಒರಟಾಗಿ ಮಾತನಾಡುವ ಅಗತ್ಯವೂ ಇಲ್ಲ. ಸತ್ಯ ಹೇಳುವುದರಿಂದ ಎದುರಿನವರ ಮನಸ್ಸಿಗೆ ನೋವಾದರೂ, ಅದರಿಂದ ಅವರಿಗೆ ಬಹಳ ಪ್ರಯೋಜನವಾಗುತ್ತದೆ. ನಿಮ್ಮ ಮೇಲೆ ಅವರಿಗೆ ನಂಬಿಕೆ ಬೆಳೆಯುತ್ತದೆ(ಈಗಲ್ಲದಿದ್ದರೂ ನಾಳೆ). ಬೆಳೆಯಲಿಲ್ಲ ಅಂದರೆ, ಅಂಥ ಸಂಬಂಧಕ್ಕೆ ಅರ್ಥವಾದರೂ ಇದೆಯೇ? ಸತ್ಯವನ್ನು ಅರಗಿಸಿಕೊಳ್ಳದ, ಸುಳ್ಳಿನ ಮೇಲೆ ನಿಂತಿರುವ ಸ್ನೇಹದ ಅಗತ್ಯವಾದರೂ ಏನಿದೆ? ನಾವು ಸತ್ಯವೆಂಬ ಕಹಿ ಗುಳಿಗೆಯನ್ನು ನುಂಗುವುದರಿಂದ ಕಷ್ಟವೇನೋ ಆಗುತ್ತದೆ. ಆದರೆ ಅದರಿಂದ ದೀರ್ಘ‌ಕಾಲಿಕ ಪರಿಹಾರವೂ ಸಿಗುತ್ತದೆ. ನಮ್ಮ ಮಾನಸಿಕ ಆರೋಗ್ಯ ಸರಿಯಾಗುತ್ತದೆ. ಸುಳ್ಳಿನ ಪರದೆಯ ಹಿಂದೆ ಬಚ್ಚಿಟ್ಟ ಎಷ್ಟೋ ಸಂಗತಿಗಳನ್ನು ನಾವು ಧೈರ್ಯದಿಂದ ಎದುರಿಸಿ, ಆದ ತಪ್ಪುಗಳನ್ನು ಸರಿಪಡಿಸಲಾರಂಭಿಸುತ್ತೇವೆ.

ಸತ್ಯ ಹೇಳುವುದು ಸುಲಭದ ಕೆಲಸವಲ್ಲ, ಅದರಿಂದ ಅಸೌಖ್ಯವಂತೂ ಎದುರಾಗುತ್ತದೆ. ಆದರೆ ಆ ಅಸೌಖ್ಯ ತಾತ್ಕಾಲಿಕವಷ್ಟೇ. ಸತ್ಯವು ಅನಂತ ಅವಕಾಶಗಳ ದ್ವಾರವನ್ನು ತೆರೆಯುತ್ತದೆ. ನನಗೇನೂ ಗೊತ್ತಿಲ್ಲ ಎಂದು ಸತ್ಯ ಒಪ್ಪಿಕೊಂಡವನಿಗೆ ಹೊಸತನ್ನು ಕಲಿಯುವ ಉತ್ಸಾಹ ಬರುತ್ತದೆ. ನಮ್ಮ ಜೀವನದಲ್ಲಿ ನಿಜಕ್ಕೂ ಇರುವ ಕೊರತೆಗಳೇನು, ನಾವು ಎಡವುತ್ತಿರುವುದೆಲ್ಲಿ, ಅದನ್ನೆಲ್ಲ ನಾವು ಹೇಗೆ ಮರೆಮಾಚುತ್ತಿದ್ದೇವೆ ಎನ್ನುವ ಸುಳ್ಳಿನ ಪರದೆಯನ್ನು ಸರಿಸಿದಾಗ ಬದುಕು ಬದಲಾವಣೆಯ ತಿರುವಿಗೆ ಬಂದು ನಿಲ್ಲುತ್ತದೆ. ಹೀಗೇ ನಮ್ಮನ್ನು ನಾವು ಅವಲೋಕಿಸಲು ಆತ್ಮಾವಲೋಕನವೆಂಬ ಪ್ರಾಮಾಣಿಕ ಪ್ರಯತ್ನ ಬೇಕು. ವರ್ಷಗಳಿಂದ ಸುಳ್ಳಿನ ಸಂಗ ಮಾಡುತ್ತಾ ಬದುಕಿರುವ ನಮಗೆ ಸತ್ಯದೊಂದಿಗೆ ಬದುಕುವುದು, ಸುಳ್ಳಿನ ಸಾಂಗತ್ಯ ತೊರೆಯುವುದು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ. ಆದರೆ, ಕಷ್ಟವಾದರೂ ಸರಿಯೇ, ಸತ್ಯವಂತರಾಗಿ ಬದುಕಿ. ಇದು ನಿಮ್ಮ ನಿತ್ಯದ ಮಂತ್ರವಾಗಲಿ.

ನೆನಪಿರಲಿ, ಎಲ್ಲಿಯವರೆಗೆ ನಿಮಗೆ ನೀವು ಸುಳ್ಳು ಹೇಳಿಕೊಳ್ಳುತ್ತಾ ಬದುಕುತ್ತೀರೋ ಅಲ್ಲಿಯವರೆಗೂ ಇನ್ನೊಬ್ಬರಿಗೂ ಸುಳ್ಳು ಹೇಳುತ್ತೀರಿ. ಎಲ್ಲಾ ಗುಣಗಳಂತೆಯೇ ಸತ್ಯಕ್ಕೂ ಅದರದ್ದೇ ಆದ ನೆಗೆಟಿವ್‌ ಫ‌ಲಿತಾಂಶಗಳು ಇರುತ್ತವೆ. ಆದರೆ ನನ್ನ ಮಾತು ನಂಬಿ, ಸುಳ್ಳಿನ ಕತ್ತಲು ಕೋಣೆ ನಿಮಗೆ ಬೆಚ್ಚನೆಯ ಅನುಭೂತಿ ಕೊಡಬಹುದು, ಆದರೆ ಅದರಿಂದ ನಿಮಗೆ ಸುಖ ಸಿಗುವುದಿಲ್ಲ. ಸತ್ಯವೆಂಬ ಬಯಲು ಕೊಡುವ ಆಹ್ಲಾದವಿದೆಯಲ್ಲ… ಅದು ಸತ್ಯವಂತರಾಗಿ ಬದುಕುವವರಿಗೇ ಗೊತ್ತು.

ಲೇಖಕರ ಕುರಿತು
ಜೆನ್‌ ಕೆಲ್ಸಂಗ್‌ ರಿಗ್ಪಾ ಅಮೆರಿಕದ ಬೌದ್ಧ ಭಿಕ್ಕುವಾಗಿದ್ದು, ಪ್ರಸಕ್ತ ಲಾಸ್‌ ಏಂಜಲೀಸ್‌ನ ಹಾಲಿವುಡ್‌ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಹಾಲಿವುಡ್‌ ನಗರಿಯಲ್ಲಿ “ಕದಂಪಾ ಮೆಡಿಟೇಷನ್‌ ಸೆಂಟರ್‌’ ಸ್ಥಾಪಿಸಿರುವ ರಿಗ್ಪಾ, ಜಗತ್ತಿನಾದ್ಯಂತ ತಮ್ಮ ಪ್ರೇರಣಾದಾಯಕ ಪ್ರವಚನಗಳಿಂದ, ಹಾಸ್ಯಮಿಶ್ರಿತ ಭಾಷಣ ಶೈಲಿಯಿಂದ ಪ್ರಖ್ಯಾತರಾದ್ದಾರೆ.

 ಜೆನ್‌ ಕೆಲ್ಸಂಗ್‌ ರಿಗ್ಪಾ

ಟಾಪ್ ನ್ಯೂಸ್

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.