ಸಂತೋಷವಾಗಿರದ ಮನುಷ್ಯರ ಸಹಜ ಸ್ವಭಾವಗಳು
Team Udayavani, Dec 12, 2017, 9:10 AM IST
ಸಂತೋಷವಾಗಿರದವರು ಹೆಚ್ಚು ಕಾಲಹರಣ ಮಾಡುವುದು ಸಾಮಾಜಿಕ ಜಾಲ ತಾಣಗಳಲ್ಲಿ. ಅದೇ ಇವರ ಟೈಂಪಾಸ್ ಕಾರ್ಯಕ್ರಮ. ಗೊತ್ತುಗುರಿ ಇಲ್ಲದೆಯೇ ಸಮಯ ವ್ಯಯ ಮಾಡುತ್ತ ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಹರಟೆ ಹೊಡೆಯುತ್ತಾ ಕುಳಿತುಬಿಡುತ್ತಾರೆ. ವಾಸ್ತವಕ್ಕೆ ಅತಿ ದೂರದಲ್ಲಿರುವವರ ಬಗ್ಗೆ ಚಿಂತಿಸುತ್ತಾ, ಅವರಿವರ ಜೊತೆ ಜಗಳವಾಡಿ, ಮನಸ್ತಾಪ ಮಾಡುತ್ತಾರೆ. ಬೇಡವಾದ ಆಂಶಗಳನ್ನೇ ಓದಿ, ಅದರ ಬಗ್ಗೆ ಕಮೆಂಟ್ ಮಾಡಿ ನಿದ್ದೆಯೂ ಸರಿಯಾಗಿಲ್ಲದೇ ನೆಮ್ಮದಿಯನ್ನು ತಮ್ಮ ಕೈಯ್ನಾರೆ ಹಾಳು ಮಾಡಿಕೊಳ್ಳುತ್ತಾರೆ.
ಹಿಂದೆ ನಡೆದು ಹೋಗಿದ್ದು, ಮುಂದೆ ನಡೆಯುವುದನ್ನು ನಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲ. ಮುಂದೆ ನಡೆಯುವುದರ ಬಗ್ಗೆ ಮುಂದಾಲೋಚನೆಯಿಂದ ನಮ್ಮ ಬುದ್ಧಿಯನ್ನು ಹಿಡಿತ ದಲ್ಲಿಟ್ಟುಕೊಳ್ಳಬಹುದೇ ಹೊರತು, ಪ್ರಕೃತಿ ಚಟುವಟಿಕೆಗಳನ್ನ ಬದಲಾಯಿಸುವ ಶಕ್ತಿಯನ್ನು ಸಾಮಾನ್ಯ ಮನುಷ್ಯನಿಗೆ ದೇವರು ಕೊಟ್ಟಿಲ್ಲ ಎಂಬ ಸತ್ಯ ಅರ್ಥ ಮಾಡಿಕೊಂಡಾಗ ಚಿಂತೆಗಳಿಂದ ಮುಕ್ತರಾಗುತ್ತೇವೆ. ಹಿಂದಿನದನ್ನು ಯೋಚಿಸುತ್ತಾ ನಾನು ಹಾಗೆ ಮಾಡಬೇಕಿತ್ತು, ಹೀಗೆ ಮಾಡಿದ್ದರೆ ಆಗಬಹುದಿತ್ತು ಎಂದು ಕಳೆದು ಹೋದ ದಿನಗಳ ಕುರಿತು ಚಿಂತಿಸಿ ತಲೆ ಕೆಡಿಸಿಕೊಳ್ಳಬಾರದು. ನಮ್ಮ ತಪ್ಪುಗಳನ್ನು ಅರಿತು ಮುಂದಕ್ಕೆ ಸಾಗಬೇಕು.
ಹಿಡಿದ ಕೆಲಸ ಕಷ್ಟವಾದಾಗ ವಿಮುಖರಾಗುವುದು
ಸಂತೋಷವಾಗಿರದ ವ್ಯಕ್ತಿಗೆ ಯಾವ ಕೆಲಸವೂ ಸುಲಭ ಅನ್ನಿಸುವುದಿಲ್ಲ. ಎಲ್ಲಾ ಕೆಲಸದಲ್ಲೂ ಏನಾದರೂ ತಪ್ಪನ್ನು ಹುಡುಕಿ ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಎಂದು ಅದರಿಂದ ಹೊರಬರುತ್ತಾನೆ. ಸವಾಲಾಗಿ ಯಾವುದನ್ನೂ ಸ್ವೀಕರಿಸುವುದಿಲ್ಲ. ನಾವ್ಯಾಕೆ ಕಷ್ಟಪಡ ಬೇಕು? ಸಾಧಿಸಿ ಏನು ಪ್ರಯೋಜನ? ಇವತ್ತಲ್ಲಾ ನಾಳೆ ಸಾಯಲೇ ಬೇಕು, ಹಾಗಾಗಿ ನಾನು ಸುಮ್ಮನಿರುವುದೇ ಉತ್ತಮ ಎಂದು ಕೊಳ್ಳುತ್ತಾರೆ. ಆಗಾಗ ಬೇರೆಯವರ ಒತ್ತಾಯದಿಂದ ಬೇಡದಿರುವ ಕೆಲಸಗಳಿಗೆ ಕೈ ಹಾಕಿ, ಅರ್ಧ ಕೆಲಸದಲ್ಲೇ ಜಗಳವಾಡಿಕೊಂಡು ಹೊರಬರುತ್ತಾರೆ. ಯಾವುದನ್ನೂ ಪೂರ್ಣವಾಗಿ ಮಾಡುವ ಮನಸ್ಥಿತಿಯೂ ಇವರಲ್ಲಿರುವುದಿಲ್ಲ.
ಹಾಸ್ಯ ಪ್ರಜ್ಞೆ ಇರುವುದಿಲ್ಲ
ತಾವು ತುಂಬಾ ಸೀರಿಯಸ್ ಎಂದುಕೊಳ್ಳುತ್ತಾರೆ. ತಾನು ನಕ್ಕರೆ ಜನ ಏನಂದುಕೊಂಡಾರೋ, ನಾನು ಜೋಕ್ ಮಾಡಿದ್ರೆ ಜನಕ್ಕೆ ನಗು ಬರುತ್ತೋ ಇಲ್ವೋ… ಹೀಗೆ ತಾವು ಸಂತೋಷವಾಗಿರುವು ದನ್ನು ಮರೆತು ಬೇರೆಯವರ ಬಗ್ಗೆ ಚಿಂತಿತರಾಗುತ್ತಾರೆ. ಮನುಷ್ಯ ನಿಗೆ ಹಾಸ್ಯ ಪ್ರಜ್ಞೆ ಬಹಳ ಅವಶ್ಯ. ಮನುಷ್ಯ ಮುಂದೊಂದು ದಿನ ಸಿಗುವ ಸಂತೋಷಕ್ಕೆ ಕಾಯವುದಕ್ಕಿಂತ, ಜೀವನದಲ್ಲಿ ಏನೇ ಕಷ್ಟವಿದ್ದರೂ ಪ್ರತಿಕ್ಷಣ ತಾನೂ ನಗುತ್ತಾ ಬೇರೆಯವರನ್ನೂ ನಗಿಸುತ್ತಾ ಬದುಕುವುದರಿಂದ ನಮ್ಮ ಶಕ್ತಿ ವೃದ್ಧಿಯಾಗುತ್ತದೆ. ನಾವು ಅಂದುಕೊಂಡಿರುವುಕ್ಕಿಂತ ಹೆಚ್ಚು ಕೆಲಸ ಮಾಡಲು ನಮಗೆ ನಾವೇ ಚೈತನ್ಯ ಸಂಚಯನ ಮಾಡಿಕೊಳ್ಳಲು ಹಾಸ್ಯ ಒಳ್ಳೆಯ ಟಾನಿಕ್.
ದೈಹಿಕ-ಮಾನಸಿಕ ಯೋಗವಿಲ್ಲ
ಸಂತೋಷವಿಲ್ಲದವನಿಗೆ ದೇಹಾಲಸ್ಯ ಹೆಚು.c ಮಾನಸಿಕವಾಗಿ ಕುಗ್ಗಿರುತ್ತಾನೆ. ದೇಹ ಮತ್ತು ಮನಸ್ಸಿನ ಸಮತೋಲನ ಹೇಗೆ ಸರಿಪಡಿಸಿಕೊಳ್ಳಬೇಕೆಂಬುದು ಕಣ್ಮುಂದೆ ಇದ್ದರೂ, ಬೇರೆಯವರು ಸಲಹೆ ನೀಡಿದರೂ, ಹಿರಿಯರು ಬುದ್ಧಿಮಾತು ಹೇಳಿದರೂ ಯಾವುದನ್ನೂ ಅನುಸರಿಸುವುದಿಲ್ಲ. ಯೋಗ ಮತ್ತು ಧ್ಯಾನದಿಂದ ಎಲ್ಲವೂ ಸರಿಹೋಗುತ್ತದೆ ಎಂದು ಗೊತ್ತಿದ್ದರೂ, ಅದರ ಅಭ್ಯಾಸ ಮಾಡಲು ಮುಂದಾಗುವುದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲೆ ಕಾಲಹರಣ
ಸಂತೋಷವಾಗಿರದವರು ಹೆಚ್ಚು ಕಾಲಹರಣ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ. ಅದೇ ಇವರ ಟೈಂಪಾಸ್ ಕಾರ್ಯಕ್ರಮ. ಗೊತ್ತುಗುರಿ ಇಲ್ಲದೆ, ಸಮಯ ವ್ಯಯ ಮಾಡುತ್ತ ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಹರಟೆ ಹೊಡೆಯುತ್ತಿರುತ್ತಾರೆ. ವಾಸ್ತವಕ್ಕೆ ಅತಿ ದೂರದಲ್ಲಿರುವವರ ಬಗ್ಗೆ ಚಿಂತಿಸುತ್ತಾ, ಅವರಿವರ ಜೊತೆ ಜಗಳವಾಡಿ, ಮನಸ್ತಾಪ ಮಾಡುತ್ತಾರೆ. ಬೇಡವಾದ ಆಂಶಗಳನ್ನೇ ಓದಿ, ಅದರ ಬಗ್ಗೆ ಕಮೆಂಟ್ ಮಾಡಿ ನಿದ್ದೆಯೂ ಸರಿಯಾಗಿಲ್ಲದೇ ನೆಮ್ಮದಿಯನ್ನು ತಮ್ಮ ಕೈಯ್ನಾರೆ ಹಾಳು ಮಾಡಿಕೊಳ್ಳುತ್ತಾರೆ.
ನಂಬಿಕೆ ಶೂನ್ಯ ವ್ಯಕ್ತಿತ್ವ
ಸಂತೋಷವಾಗಿರದವರಿಗೆ ಯಾವುದರಲ್ಲೂ ನಂಬಿಕೆಯೇ ಇರುವುದಿಲ್ಲ, ಎಲ್ಲವನ್ನೂ ಅನುಮಾನಿಸುವುದೇ ಹೆಚ್ಚು. ಜೀವನ ದಲ್ಲಿ ಎಲ್ಲವೂ ಸತ್ಯ, ಯಾವುದನ್ನೂ ನಾನು ಸೃಷ್ಟಿ ಮಾಡಿದ್ದಲ್ಲ. ಈ ಲೋಕದಿಂದ ಹೋಗುವಾಗ ಯಾವುದನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ದೇವರ ಸೃಷ್ಟಿಯಲ್ಲಿ ನಾನೂ ಒಬ್ಬ, ಆತನ ನಿಯಮ ಮೀರಿ ಯಾವುದೂ ನಡೆಯದು ಎಂಬ ಸಾಮಾನ್ಯ ಸತ್ಯ ತಿಳಿದುಕೊಂಡಾಗ ಮಾತ್ರ ನಾವು ಸಂತೋಷದಿಂದ ಇರಬಹುದು. ಇಲ್ಲಸಲ್ಲದ್ದಕ್ಕೆ ಲೆಕ್ಕಕ್ಕಿಂತ ಹೆಚ್ಚು ದುಃಖ ಪಟ್ಟುಕೊಂಡರೆ ಏನೂ ಪ್ರಯೋಜನವಾಗಲಾರದು. ನನಗೆ ಜೀವ-ಜೀವನ ಕೊಟ್ಟು ಕಣ್ಮುಂದೆ ಯಥೇತ್ಛ ಆಯ್ಕೆ ಗಳನ್ನು ನೀಡಿ ಇಷ್ಟದಂತೆ ಬದುಕುವ ಸಾಮರ್ಥ್ಯ ನೀಡಿದವಗೆ ನಾನೇನು ಕೊಟ್ಟಿದ್ದೇನೆ ಎಂಬುದನ್ನು ನಾವು ಪ್ರಶ್ನಿಸಬೇಕು. ಹಾಗೇ ಒಂದು ಬಾರಿ ಇಂತಹ ಪ್ರಶ್ನೆಯನ್ನು ನಮ್ಮಲ್ಲೇ ಮಾಡಿಕೊಂಡಾಗ ಜಗತ್ತಿನ ಅಗಾಧ ಶಕ್ತಿಯ ಮುಂದೆ ನಾವೇನು ಅಲ್ಲ ಅನ್ನೋ ಸತ್ಯದ ಅರಿವಾಗುತ್ತದೆ.
ತಮ್ಮೊಳಗಿನ ಶಕ್ತಿಯ ಬಗ್ಗೆಯೇ ನಂಬಿಕೆಯಿಲ್ಲ
ನಾನು ತುಂಬಾ ವೀಕ್ ಮೈಂಡು, ಸಖತ್ ಎಮೋಷನಲ್ ಅದಕ್ಕೇ ಈ ಕೆಟ್ಟ ಜನ ಸಮಾಜದಲ್ಲಿ ಬದುಕುವುದಕ್ಕೇ ಬಿಡಲ್ಲ ಅನ್ನೋದು ಅಸಂತೋಷಿಗಳ ಸಮಜಾಯಿಸಿ. ಅಂತಹವರಿಗೆ ತಮ್ಮ ಆಂತರಿಕ ಶಕ್ತಿಯ ಬಗ್ಗೆ ಗೊತ್ತೇ ಇರುವುದಿಲ್ಲ. ಕೆಲವು ಸಲ ಗೊತ್ತಾದರೂ ಅದಕ್ಕೆ ಗಮನ ಕೊಡದೆ, ತಮ್ಮ ದೌರ್ಬಲ್ಯಗಳನ್ನೇ ಎತ್ತಿ ಹೇಳುತ್ತಿರುತ್ತಾರೆ. ಅದಕ್ಕೇ ಅವರಲ್ಲಿ ನಾಯಕತ್ವದ ಲಕ್ಷಣಗಳು ಕಾಣಿಸುವುದಿಲ್ಲ. ಎಲ್ಲದಕ್ಕೂ ಒಂದಲ್ಲಾ ಒಂದು ಕಾರಣ ನೀಡಿ ಹಿಂಜರಿಯುತ್ತಾರೆ. ನಮ್ಮ ಅಸಹಾಯಕತೆಯನ್ನು ಮರೆತು, ನಮ್ಮೊಳಗಿರುವ ಶಕ್ತಿಯ ಜೊತೆ ಕೈಜೋಡಿಸಿದಾಗಲೇ ನಾವು ನಾಯಕರಾಗಲು ಸಾಧ್ಯ ಹಾಗೂ ಸಂತೋಷವಾಗಿರಲು ಸಾಧ್ಯ.
ಎಲ್ಲರ, ಎಲ್ಲದರ ಬಗ್ಗೆ ನೆಗೆಟಿವ್ ಕಾಮೆಂಟ್
ಸಂತೋಷವಾಗಿರದವರು ಬೇರೆಯವರೂ ಸಂತೋಷ ದಿಂದಿರಲು ಇಷ್ಟ ಪಡುವುದಿಲ್ಲ. ತಮ್ಮ ಮುಂದೆ ಬೇರೆಯವರು ನಗುತ್ತಿದ್ದರೆ, ತಾವು ಒಳಗೊಳಗೇ ಕೆಟ್ಟದನ್ನು ಬಯಸುತ್ತಾ ಹೊಟ್ಟೆ ಉರಿದುಕೊಳ್ಳುತ್ತಾರೆ. ಯಾರು ಏನೇ ಮಾತನಾಡಿದರೂ ಅದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳದೆ ತಕ್ಷಣ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಾರೆ. ಅವರ ಮನಸ್ಸಿನಲ್ಲಿ ಯಾರೂ ಸರಿಯಾಗಿಲ್ಲವೆಂಬ ಭಾವನೆಯಿರುತ್ತದೆ. ಜಗತ್ತಿನಲ್ಲಿ ಯಾರೂ ಬುದ್ಧಿವಂತರಿಲ್ಲ, ಯಾರೂ ಸತ್ಯವಂತರಿಲ್ಲ, ಎಲ್ಲರೂ ಕೆಟ್ಟವರೇ, ಎಲ್ಲರೂ ಕೆಟ್ಟದಾರಿ ಯಿಂದಲೇ ಹಣ ಸಂಪಾದಿಸುತ್ತಾರೆ. ಈ ಸಮಾಜದ ನಿಯಮಗಳೇ ಸರಿಯಿಲ್ಲ, ನಾನೇನಾದ್ರು ಅಧಿಕಾರಕ್ಕೆ ಬಂದ್ರೆ ಇದನ್ನೆಲ್ಲ ಬದಲಾ ಯಸ್ತೀನಿ, ನಾನೇನಾದ್ರು ಶ್ರೀಮಂತನಾದ್ರೆ ಎಲ್ಲರನ್ನೂ ಕಾಪಾಡು ತ್ತೇನೆ ಎಂದು ಆಗದಿರುವ ವಿಚಾರಗಳ ಬಗ್ಗೆ ಬಡಬಡಾಯಿಸುತ್ತಾರೆ. ಸಕಾರಾತ್ಮಕವಾಗಿ ಬದುಕದ ಒಬ್ಬ ಇತರರಿಗೆ ಸಂತೋಷ ಹಂಚಲು ಸಾಧ್ಯವೇ ಎಂಬುದನ್ನು ಅವರು ಪ್ರಶ್ನಿಸಿಕೊಳ್ಳುವುದಿಲ್ಲ . ಸಂತೋಷ ವಾಗಿರುವವನು ಮತ್ತೂಬ್ಬರ ಬಗ್ಗೆ ಏನೂ ಹೇಳುವುದಿಲ್ಲ,ಅವರ ಯಾವುದೇ ಸಾಧನೆ ವೈಫಲ್ಯಗಳ ಬಗ್ಗೆ ಮಾತನಾಡುವುದೂ ಇಲ್ಲ. ಮತ್ತೂಬ್ಬರು ಯಾವುದೋ ವಿಷಯವನ್ನು ತಲೆಗೆ ತುಂಬಲು ನೋಡಿದರೂ ಅದನ್ನು ಸ್ವೀಕರಿಸುವುದೂ ಇಲ್ಲ. ಸಂತೋಷಿ ಯೊಳಗೊಬ್ಬ ಸ್ಥಿತ ಪ್ರಜ್ಞ ಇದ್ದೇ ಇರುತ್ತಾನೆ.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.