ಲವ್‌ ಮಾಡೋವಾಗ್ಲೂ ಲಾಭ-ನಷ್ಟ ಲೆಕ್ಕ ಹಾಕ್ತಾರೆ ಜನರು!


Team Udayavani, May 8, 2018, 6:00 AM IST

2.jpg

ಮನುಷ್ಯ ಶ್ರೀಮಂತರ ಬಳಿ ಮಾತ್ರ ಅವಕಾಶವಾದಿಯಾಗಿರುವುದಿಲ್ಲ. ಎಲ್ಲಾ ಸಂದರ್ಭಗಳಲ್ಲೂ ತನಗೆ ಏನು ಸಿಗುತ್ತದೆ ಎಂದು ತಲೆಯಲ್ಲಿ ಗುಣಿಸುತ್ತಲೇ ಇರುತ್ತಾನೆ. ಆದರೆ ಕೆಲವರು ಯಾರ ಹಣವನ್ನೂ, ಸಹಾಯವನ್ನೂ ಬಳಸಿಕೊಳ್ಳದೆ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ.

ಯಾವ ಮನುಷ್ಯ ತಾನೇ ಆರಾಮವಾಗಿ ಜೀವನ ನಡೆಸಲು ಇಷ್ಟ ಪಡುವುದಿಲ್ಲ ಹೇಳಿ? ಎಲ್ಲರಿಗೂ ಕಷ್ಟವೇ ಬರದೆ ಇರುವಂತಹ ಜೀವನ ಸಿಕ್ಕಿದರೆ ಚೆನ್ನಾಗಿರುತ್ತದೆ. ಆದರೆ, ಅದು ಸಾಧ್ಯವೇ? ಹುಟ್ಟಿನಿಂದ ಸಾವಿನ ತನಕ ಪ್ರತಿಯೊಂದನ್ನೂ ಕಷ್ಟಪಟ್ಟೇ ಪಡೆದು ಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ನಮ್ಮ ತಾಯಿ ನಮಗೆ ಜನ್ಮ ಕೊಡುವಾಗಲೂ ಕಷ್ಟಪಟ್ಟಿರುತ್ತಾಳೆ. ನಾವು ಬೆಳೆಯುವಾಗಲೂ, ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಲು, ಕೆಲಸಕ್ಕೆ ಸೇರಿಕೊಳ್ಳಲು, ಪ್ರೀತಿಸುವಾಗಲೂ, ಸಂಸಾರ ಸರಿದೂಗಿಸುವಾಗಲೂ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟಗಳ ಜೊತೆ ಜೊತೆಗೇ ಸಾಗುತ್ತಿರುತ್ತೇವೆ.

ನಾವೇ ಕಂಡಂತೆ ಈ ಸಮಾಜದಲ್ಲಿ ಬಹಳಷ್ಟು ಜನ ಅವಕಾಶ ವಾದಿಗಳಾಗಿದ್ದಾರೆ. ತಮಗೆ ಬೇಕಾದಂತೆ ತಮ್ಮ ಸುತ್ತಮುತ್ತಲಿನ ಜನರನ್ನು ಉಪಯೋಗಿಸಿಕೊಳ್ಳುತ್ತಾರೆ. ತನಗೆ ಒಂದು ಜಾಗದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದ ತಕ್ಷಣ ತಮ್ಮ ನೋಟ ಬದಲಾ ಯಿಸಿಕೊಳ್ಳುತ್ತಾರೆ. ಮತ್ತೂಂದು ಜಾಗದಲ್ಲಿ ತಮಗೆ ಬೇಕಾಗಿ ರುವುದು ಸಿಗುತ್ತದೆ ಎಂದು ತಿಳಿದ ತಕ್ಷಣ ಆ ಜಾಗಕ್ಕೆ ನೆಗೆಯುತ್ತಾರೆ. ಎಷ್ಟೋ ಜನ ತಮ್ಮ ಕೆಲಸವಾಗಲೆಂದು ತಮಗೆ ಹತ್ತಿರವಾದವರನ್ನೇ ಬಳಸಿಕೊಂಡು ಕೆಲಸವಾದ ನಂತರ ದೂರ ಮಾಡುತ್ತಾರೆ. ಅವಕಾಶವಾದಿಗಳು ಸ್ವಾರ್ಥಿಗಳಾಗಿರುತ್ತಾರೆ.

ಯಾರ ಬಳಿ ದುಡ್ಡಿದೆಯೋ ಅವರನ್ನು ಜನರು ಸಿಹಿಗೆ ನೊಣ ಮುತ್ತುವಂತೆ ಮುತ್ತುತ್ತಾರೆ. ಸ್ವಾಭಿಮಾನ ಬಿಟ್ಟು ಅವರು ಹೇಳಿ
ದಂತೆ ನಡೆದುಕೊಳ್ಳುತ್ತಾರೆ. ಒಬ್ಬ ಮನುಷ್ಯ ಗುಣದಲ್ಲಿ ಬುದ್ಧಿಯಲ್ಲಿ ಶ್ರೀಮಂತನೇ ಎಂದು ತುಲನೆ ಮಾಡುವುದಕ್ಕಿಂತ ಹಣ 
ಚೆಲ್ಲಿ ಶ್ರೀಮಂತನೇ ಎಂದು ತಿಳಿದುಕೊಳ್ಳಲು ಜನ ಕಾತುರರಾಗಿರುತ್ತಾರೆ. ದುಡ್ಡಿರುವವರ ಮನೆಯ ನಾಯಿಗೆ ಕಜ್ಜಿ ಬಂದಿದ್ದರೂ ಓಹ್‌ ಸೋ ಸ್ವೀಟ್‌ ಎಂದು ಮನೆಯ ಮಾಲೀಕನ ಎದುರು ಮುದ್ದು ಮಾಡಿ ನಾಟಕ ಆಡುತ್ತಾರೆ. ಏಕೆಂದರೆ ತಮ್ಮ ಕೆಲಸ ಆಗಬೇಕಲ್ಲ. ದುಡ್ಡಿರುವವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಅವರ ಹಿಂದೆ ಹಿಂದೆಯೇ ಅಲೆದಾಡುತ್ತಿರುತ್ತಾರೆ. ಶ್ರೀಮಂತ ಹೇಗಿದ್ದರೂ…””ಸಾರ್‌ ನೀವೇ ಯಾಕೆ ಹೀರೋ ಅಗ್ಬಾರ್ಧು? ದುಡ್ಡಿದ್ರೆ ಏನು ಬೇಕಾದ್ರೂ ಮಾಡಬಹುದು”  ಎಂದು ಸಿನಿಮಾದ ವರು ತಲೆ ಕೆಡಿಸುತ್ತಾರೆ. ಶ್ರೀಮಂತ ಬುದ್ಧಿವಂತನಾದರೆ ಹೊಗಳಿ ಹೊನ್ನ ಶೂಲಕ್ಕೇರಿಸುವರಯ್ನಾ ಸರ್ವಜ್ಞ ಎಂದು ತನಗೆ ತಾನೇ ಹೇಳಿಕೊಂಡು ಸುಮ್ಮನಾಗುತ್ತಾನೆ ಇಲ್ಲವಾದರೆ ಬೇರೆಯವರ ಮಾತಿಗೆ ಓಗೊಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.

ಇನ್ನೊಂದನ್ನು ಗಮನಿಸಿ, ಈ ಹಣ ಇರುವವರು ಏನೇ ಮಾತಾಡಿದರೂ ಕೆಲ ಜನರು ಕೈಕಟ್ಟಿಕೊಂಡು ಕೇಳುತ್ತಾರೆ. ಅದೇ ಬಡವ ಸತ್ಯದ ಹೋರಾಟ ಮಾಡುತ್ತಿದ್ದರೂ ಅವನ ಮಾತಿಗೆ ಬೆಲೆ ಕೊಡದೆ ಹೀಯಾಳಿಸಿ ಅವಮಾನಿಸುತ್ತಾರೆ. ನಾನು ಕೆಲ ಶ್ರೀಮಂತರನ್ನು ಭೇಟಿ ಮಾಡಿದಾಗ ಇದೇ ರೀತಿ ಪ್ರಶ್ನೆಗಳನ್ನು ಕೇಳಿದ್ದೆ…””ಸಾರ್‌ ಅವರೆಲ್ಲ ಅವಕಾಶವಾದಿಗಳು ಅಂತ ನಿಮಗೆ ಅನ್ನಿಸಲ್ವಾ?”
ಕೆಲವರು ತುಂಬಾ ಚೆನ್ನಾಗಿ ಉತ್ತರಿಸಿದ್ದರು “”ಮೇಡಂ ಇವತ್ತು ನನ್ನ ಹತ್ರ ದುಡ್ಡಿದೆ ಅಂತ ಎಲ್ಲರಿಗೂ ನಾನು ಬೇಕು. 10 ವರ್ಷಗಳ ಕೆಳಗೆ ನನಗೆ ಸಹಾಯ ಮಾಡಕ್ಕೆ ಯಾರೂ ಮುಂದೆ ಬರ್ಲಿಲ್ಲ. ನನ್ನ ಸಂಬಂಧಿಕರಾಗಲಿ, ಹೆಂಡತಿಯಾಗಲಿ ನನಗೆ ಗೌರವ ಕೊಡ್ತಿರ್ಲಿಲ್ಲ. ಈಗ ನಾನು ಎಲ್ಲರ ಕಣ್ಣಿಗೆ ಚೆನ್ನಾಗಿ ಕಾಣಿಸ್ತಿದ್ದೀನಿ. ಎಲ್ಲರಿಗೂ ನಾನೂ ಬೇಕೂ ಅಂದ್ರೆ ಅದು ನಾನಲ್ಲ ನನ್ನ ಹಣ. ಅವರೆಲ್ಲ ಇಷ್ಟ ಪಡ್ತಿರೋದು ನನ್ನ ಹತ್ರ ಇರೋ ಹಣವನ್ನ, ನನ್ನನ್ನಲ್ಲ. ನಾಳೆ ನಾನು ಎಲ್ಲಾ ದುಡ್ಡನ್ನು ದಾನ ಮಾಡಿ ಅಥವಾ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡರೆ ಈಗ ನನ್ನ ಹೊಗಳುತ್ತಿರುವವರೆಲ್ಲಾ ಅವಹೇಳನ ಮಾಡಕ್ಕೆ ಶುರು ಮಾಡ್ತಾರೆ. ಹೆಂಡತಿ ಮಕ್ಕಳು ನನ್ನನ್ನು ಕೀಳಾಗಿ ಕಂಡು ಬೈತಾನೇ ಇರ್ತಾರೆ.”

ಮನುಷ್ಯ ಶ್ರೀಮಂತರ ಬಳಿ ಮಾತ್ರ ಅವಕಾಶವಾದಿಯಾಗಿರು ವುದಿಲ್ಲ. ಎಲ್ಲಾ ಸಂದರ್ಭಗಳಲ್ಲೂ ತನಗೆ ಏನು ಸಿಗುತ್ತದೆ ಎಂದು ತಲೆಯಲ್ಲಿ ಗುಣಿಸುತ್ತಲೇ ಇರುತ್ತಾನೆ. ಆದರೆ ಕೆಲವರು ಯಾರ ಹಣವನ್ನೂ, ಸಹಾಯವನ್ನೂ ಬಳಸಿಕೊಳ್ಳದೆ ಸ್ವಯಂಪ್ರೇರಿತರಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ.

ಸಂಬಂಧಗಳನ್ನು ಬೆಳೆಸಿಕೊಳ್ಳುವಾಗಲೂ ಕೆಲ ಮನುಷ್ಯರು ಅವಕಾಶ ವಾದಿಗಳಾಗಿರುತ್ತಾರೆ. ಅವಳಿಂದ ನನಗೆ ಇದು ಸಿಗುತ್ತೆ, ನಾನು ಇದು ಪಡ್ಕೊಂಡು ಅದು ಆಗಬಹುದು. ಅದಕ್ಕೆ ನಾನು ಅವಳನ್ನ ಹೀಗೆ ಸಿಕ್ಕಿಸಿ ಹಾಕಿ ನಿಸ್ಸಹಾಯಕಳನ್ನಾಗಿ ಮಾಡಿದರೆ ಅವಳು ನನ್ನನ್ನೇ ಬೇಡಿಕೊಂಡು ನನ್ನ ಹಿಂದೆ ಬರ್ತಾಳೆ, ಆಗ ನಾನು ಅವಳನ್ನ ಹೀಗೆ ಆಟ ಆಡಿಸಬಹುದು… ಹೀಗೆ ಏನೇನೋ ಊಹಿಸಿ ಕೊಂಡು ಸ್ನೇಹವನ್ನು ಪ್ರಾರಂಭಿಸಿರುತ್ತಾರೆ. ಅವಕಾಶವಾದಿ ಗಳಿಂದ ಮೋಸಹೋದವರು ಎಷ್ಟೋ ಜನ ದಿನನಿತ್ಯ ತಮ್ಮ ಕಥೆಗಳನ್ನು ನಮ್ಮೆಲ್ಲರ ಬಳಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮನೆಯ ಹೊರಗಿನ ಜನರು ಮಾತ್ರವಲ್ಲ, ನಮ್ಮ ನಮ್ಮ ಮನೆಯವರು, ನಾವು ಪ್ರೀತಿಸುವವರು ಸಹ ಎಷ್ಟೋ ಜನ ಅವಕಾಶವಾದಿಗಳೇ. ಅದು ನಮಗೆ ಅರಿವಾದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ಅದು ಕಹಿಯಾದ ಸತ್ಯ, ಅವರನ್ನು ದೂರ ಮಾಡಲೂ ಆಗದೆ. ಅವರಿಂದ ದೂರ ಇರಲೂ ಆಗದೆ ಜೊತೆಯಲ್ಲೇ ಇದ್ದು ಅನುಭವಿಸುವುದು ಎಷ್ಟು ಕಷ್ಟ ಅಲ್ವಾ? ಅವಕಾಶವಾದಿತನ ಎಂಬುದು ಸಂಪೂರ್ಣ ಕೆಟ್ಟ ಗುಣವೇನೂ ಅಲ್ಲ. ಅದನ್ನೇ ಒಳ್ಳೆಯದಕ್ಕೆ ಬಳಸಿಕೊಳ್ಳುವವರೂ ಇರುತ್ತಾರೆ. ಒಂದು ಉದಾಹರಣೆ ನೋಡಿ.

ಥಾಮಸ್‌ ಅಲ್ವಾ ಎಡಿಸನ್‌ ಗೊತ್ತಲ್ಲ? ವಿದ್ಯುತ್‌ ಬಲ್ಬ್ ಕಂಡುಹಿಡಿದ ವಿಜ್ಞಾನಿ. ಫೋನೋಗ್ರಫಿಯನ್ನು ಕಂಡುಹಿಡಿದಿದ್ದೂ ಅವರೇ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅಮೆರಿಕದ ಓಹಾಯೋ ಮೂಲದವರಾದ ಎಡಿಸನ್‌ ಅವರ ಪ್ರಯೋಗಾಲಯ ನ್ಯೂಜೆರ್ಸಿಯ ವೆಸ್ಟ್‌ ಅರೇಂಜ್‌ನಲ್ಲಿತ್ತು. 1914ರಲ್ಲಿ ಅದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿತ್ತು. 20 ಲಕ್ಷ ಡಾಲರ್‌ಗೂ ಹೆಚ್ಚಿನ ಮೌಲ್ಯದ ವಸ್ತುಗಳು ನಷ್ಟವಾದರೂ ಅದಕ್ಕೆ ಕೇವಲ 2.5 ಲಕ್ಷ ಡಾಲರ್‌ ಮಾತ್ರ ವಿಮೆ ಮಾಡಿಸಲಾಗಿತ್ತು. ಕಲ್ಲಿನಲ್ಲಿ ಕಟ್ಟಿದ ಆ ಪ್ರಯೋಗಾಲಯ ಬೆಂಕಿಯಲ್ಲಿ ಭಸ್ಮವಾಗುವುದಿಲ್ಲ ಎಂಬ ನಂಬಿಕೆಯಿಂದ ಎಡಿಸನ್‌ ಅದಕ್ಕೆ ಬಹಳ ಕಡಿಮೆ ಮೊತ್ತದ ವಿಮೆ ಮಾಡಿಸಿದ್ದರು. ಆದರೆ ಅವರ ಲೆಕ್ಕಾಚಾರ ಸುಳ್ಳಾಗಿತ್ತು. ಡಿಸೆಂಬರ್‌ ತಿಂಗಳ ಒಂದು ರಾತ್ರಿ ಎಡಿಸನ್‌ರ ಜೀವಮಾನದ ಬಹುತೇಕ ಸಂಶೋಧನೆಗಳೆಲ್ಲ ಬೆಂಕಿಯಲ್ಲಿ ಉರಿದು ಬೂದಿ ಯಾದವು. ಪ್ರಯೋಗಾಲಯ ಹೊತ್ತಿ ಉರಿಯುವಾಗ ಎಡಿಸನ್‌ ಎಲ್ಲೂ ಕಾಣಿಸುತ್ತಿರಲಿಲ್ಲ. 24 ವರ್ಷದ ಮಗ ಚಾರ್ಲ್ಸ್‌ ಅಪ್ಪನನ್ನು ಗಾಬರಿಯಿಂದ ಹುಡುಕತೊಡಗಿದ. ಕೊನೆಗೂ ಎಡಿಸನ್‌ ಸಿಕ್ಕಿದರು. ಹೊತ್ತಿ ಉರಿಯುತ್ತಿರುವ ಪ್ರಯೋ ಗಾಲಯದ ಮುಂದೆ ಅವರು ಪ್ರಶಾಂತವಾಗಿ ನಿಂತು ನೋಡುತ್ತಿದ್ದರು. ಬೆಂಕಿಯ ಬೆಳಕಿನಲ್ಲಿ ಅವರ ಮುಖ ಹೊಳೆ ಯುತ್ತಿತ್ತು. ಗಾಳಿಯಲ್ಲಿ ಬಿಳಿಯ ಕೂದಲು ಹಾರಾಡುತ್ತಿತ್ತು. ಚಾರ್ಲ್ಸ್‌ ಹೇಳುತ್ತಾರೆ, “”ನನ್ನ ಎದೆಯಲ್ಲೇ ಬೆಂಕಿ ಇಟ್ಟಂತಾಗಿತ್ತು. ಅಪ್ಪನಿಗಾಗ 67 ವರ್ಷ. ಅದೇನೂ ಸಣ್ಣ ವಯಸ್ಸಲ್ಲ. ಜೀವಮಾನ ವಿಡೀ ಪ್ರಯೋಗ ಮಾಡಿ ದಣಿದಿದ್ದಾರೆ. ಈಗ ಅವರ ಸಂಶೋಧನೆ ಯೆಲ್ಲ ಸುಟ್ಟು ಭಸ್ಮವಾಗಿದೆ. ಆದರೆ ನನ್ನನ್ನು ನೋಡಿದ್ದೇ ಅವರು ಕೂಗಿದರು “ಅಮ್ಮ ಎಲ್ಲಿ, ಅಮ್ಮ ಎಲ್ಲಿ?’  ನನಗೆ ಗೊತ್ತಿಲ್ಲ ಎಂದೆ. ಬೇಗೆ ಅವಳನ್ನು ಹುಡುಕಿಕೊಂಡು ಬಾ. ಅವಳಿಗೆ ಜೀವಮಾನ ದಲ್ಲೇ ಇಂತಹ ದೃಶ್ಯ ನೋಡಲು ಸಿಗುವುದಿಲ್ಲ ಅಂದರು.”

ಮರುದಿನ ಬೂದಿಯನ್ನು ನೋಡುತ್ತ ಎಡಿಸನ್‌ ಹೇಳಿದ್ದರಂತೆ, “”ದುರಂತದಲ್ಲೂ ಒಂದು ಸಂತೋಷವಿದೆ. ದುರಂತಕ್ಕೆ ಬಹಳ ದೊಡ್ಡ ಬೆಲೆಯಿದೆ. ನಮ್ಮೆಲ್ಲಾ ತಪ್ಪುಗಳೂ ಅದರಲ್ಲಿ ಸುಟ್ಟುಹೋಗು ತ್ತವೆ. ದೇವರೇ, ನಿನಗೆ ಥ್ಯಾಂಕ್ಸ್‌, ನಾನೀಗ ಎಲ್ಲವನ್ನೂ ಮತ್ತೆ ಹೊಸತಾಗಿ ಶುರುಮಾಡಬಹುದು.” ಪ್ರಯೋಗಾಲಯಕ್ಕೆ ಬೆಂಕಿ ಬಿದ್ದು ಮೂರು ವಾರಗಳ ನಂತರ ಎಡಿಸನ್‌ ಪೋನೋಗ್ರಫಿಯನ್ನು ಕಂಡುಹಿಡಿದರು.

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.