ಸ್ವಾಭಿಮಾನಕ್ಕೆ ಲಿಂಗಭೇದವಿಲ್ಲ, ಜಾತಿಯಿಲ್ಲ, ಅದು ಸರ್ವನಾಮಪದ


Team Udayavani, Sep 5, 2017, 7:36 AM IST

05-ANA-1.jpg

ಸ್ವಾಭಿಮಾನದಿಂದ ಅಹಂಕಾರವನ್ನು ಬೇರ್ಪಡಿಸಿ, ಇವರು ಅಹಂಕಾರಿಗಳು ಎಂದು ಗುರುತಿಸುವುದು ಹೇಗೆ? ಅಹಂಕಾರಿಗೆ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಭಾವನೆ ಇರುತ್ತದೆ. ಅದನ್ನು ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಎನ್ನಬಹುದು. ಇನ್ನೊಬ್ಬರನ್ನು ಹೊಗಳಿದರೆ ಸಹಿಸಿಕೊಳ್ಳುವುದಿಲ್ಲ. 

ಸ್ವಾಭಿಮಾನ, ಧಾರಾವಾಹಿ ಹೆಸರಲ್ಲ, ಮನಸ್ಸಿನ ಮೌಲ್ಯದ ಹೆಸರು. ಎಲ್ಲರೂ ತಾವು ಹಾಗೆಂದೂ, ತಮ್ಮನ್ನು ಜನ ಆ ಗುಣ ದಿಂದಲೇ ಗುರುತಿಸಬೇಕೆಂದೂ ಇಷ್ಟಪಡುವ ಮೌಲ್ಯ ಅದು. ಹಾಗಂತ ಸ್ವಾಭಿಮಾನ ತೀರ ಸ್ವಾಭಾವಿಕವಾಗಿ, ಚಿಕ್ಕವಯಸ್ಸಿ ನಿಂದಲೇ ನಮಗೇ ಗೊತ್ತಿಲ್ಲದ ಹಾಗೆ ಬಂದುಬಿಟ್ಟಿರುತ್ತದಾ?  ಇಲ್ಲ. ಸಣ್ಣವರಾಗಿದ್ದ ಕೆಲವು ಗುಣಗಳು ನಮ್ಮ ಬುದ್ಧಿ ಬೆಳೆಯುತ್ತಿದ್ದಂತೆ ಇನ್ನಷ್ಟು ಪಕ್ವವಾಗಿ, ಸರಿ-ತಪ್ಪುಗಳ ತುಲನೆ ಮಾಡಿ ಪುಟವಿಟ್ಟ ಚಿನ್ನದ ರೀತಿ ಸ್ವಾಭಿಮಾನ ಎಂದು ಕರೆಸಿ ಕೊಳ್ಳುತ್ತವೆ. ಹಾಗಿದ್ದರೆ ಚಿಕ್ಕವರಾಗಿದ್ದಾಗ ಸ್ವಾಭಿಮಾನ ಅಂತ ಕರೆಸಿಕೊಂಡು ನೀವು ಬೀಗುತ್ತಾ ಅನುಭವಿಸುತ್ತಾ ಹೋಗಿದ್ದು ಯಾವ ಗುಣವನ್ನು?

ಹೌದು, ಸ್ವಾಭಿಮಾನ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ನಮಗೆ ನಾವೇ ಸಂಪಾದಿಸಿಕೊಳ್ಳುವ ಅಥವಾ ದುಡಿದುಕೊಳ್ಳುವ ಮೇಲರಿಮೆ. ನಿಮ್ಮ ಒಳ್ಳೆಯ ಗುಣಗಳೆಲ್ಲ ಮುಪ್ಪುರಿಗೊಂಡು ಆಗುವ ಸ್ವಾಭಿಮಾನ ಕೆಟ್ಟದಲ್ಲ. ಆದರೆ ಚಿಕ್ಕಂದಿನಿಂದ ತಮ್ಮನ್ನು ತಾವು ಸ್ವಾಭಿಮಾನಿ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳುವು ದೆಲ್ಲ ಸ್ವಾಭಿಮಾನವಲ್ಲ. ಅದು ಅಹಂಕಾರ.

ಈಗೊಂದು ಉದಾಹರಣೆ ತೆಗೆದುಕೊಳ್ಳೋಣ. ಕೆಲವರು ದುಡ್ಡಿನ ವಿಚಾರ ಬಂದಾಗ ಹೇಗೆ ನಡೆದುಕೊಳ್ಳುತ್ತಾರೆಂದು ನೋಡೋಣ. ತ‌ನ್ನ ಮನೆಯವರಿಗೋ ಅಥವಾ ಗೆಳೆಯರಿಗೋ ಪಾರ್ಟಿ ಕೊಡಿಸಿದ್ದಾರೆ ಎಂದುಕೊಳ್ಳಿ. ಸಣ್ಣ ಪುಟ್ಟ ವಸ್ತುಗಳನ್ನು ಖರೀದಿಸುವ ಸಂದರ್ಭ ಅಂದುಕೊಳ್ಳಿ. ಆಗೆಲ್ಲ ಬೇರೆಯವರು ದುಡ್ಡು ಕೊಡದಂತೆ ತಡೆದು ತಾವೇ ಮುಂದಾಗಿ ದುಡ್ಡು ಕೊಡುತ್ತಾರೆ. ಮತ್ತು ತಾನು ಸ್ವಾಭಿಮಾನಿ ಅಂತ ಹೇಳುತ್ತಾರೆ. ಆದರೆ ಇದು ಸ್ವಾಭಿಮಾನದ ಲಕ್ಷಣವೇ? ಇನ್ನೊಬ್ಬರ ಎದುರು ತನ್ನ ಹಣ ಖರ್ಚು ಮಾಡುವುದು, ಇನ್ನೊಬ್ಬರ ಎದುರು ತನ್ನ ಪ್ರತಿಷ್ಠೆ ಮೆರೆಯುವುದು ಸ್ವಾಭಿಮಾನವೇ? ಸ್ವಾಭಿಮಾನಿಯಾದವನಿಗೆ ಎಲ್ಲದರಲ್ಲೂ ಸ್ವಾಭಿಮಾನ ಇರಬೇಕು. ಸಣ್ಣಪುಟ್ಟ ವಿಷಯಗಳಲ್ಲಿ ಮಾತ್ರವಲ್ಲ. ಸ್ವಾಭಿಮಾನ ನಿಮ್ಮ ಒಟ್ಟು ಮೌಲ್ಯ, ನೈತಿಕತೆಗಳೆಲ್ಲ ಸೇರಿ ಆಗಿರುವ ಘನತೆ, ಶ್ರೇಷ್ಠತೆ.

ಸ್ನೇಹಿತರ ಬಳಿ ಚರ್ಚೆ ಮಾಡಿದರೆ ಕೆಲವರು ಸ್ವಾಭಿಮಾನಿ ಗಳನ್ನು ಇಷ್ಟಪಡುತ್ತಾರೆ, ಕೆಲವರು ಬಾಯಿಗೆ ಬಂದಂತೆ ಬೈಯುತ್ತಾರೆ. ಯಾಕೆಂದರೆ ಎಷ್ಟೋ ಜನರನ್ನು ದಿನನಿತ್ಯ ನೀವೂ ಭೇಟಿ ಮಾಡಿರುತ್ತೀರಿ. ಕೆಲವರ ನಡವಳಿಕೆಯಲ್ಲಿ ಸ್ವಾಭಿಮಾನ ಕ್ಕಿಂತ ಹೆಚ್ಚಾಗಿ ದುರಹಂಕಾರವೇ ತುಂಬಿರುತ್ತದೆ. ಅದೊಂದು ಪ್ರತಿಷ್ಠೆಯ ತೋರಿಕೆಯಾಗಿರುತ್ತದೆ. ಯಾರೊಡನೆಯೂ ಬೆರೆ ಯುವುದಿಲ್ಲ, ಹೊಂದಿಕೊಳ್ಳುವುದಿಲ್ಲ, ಗೌರವಿಸುವುದಿಲ್ಲ, ಇನ್ನೊಬ್ಬರ ಅಭಿಪ್ರಾಯಕ್ಕೆ ಮನ್ನಣೆಯಿಲ್ಲ, ಪ್ರಾಮಾಣಿಕತೆ ಇಲ್ಲ. ತೋರಿಸಿಕೊಳ್ಳುವುದು ಮಾತ್ರ ಸ್ವಾಭಿಮಾನ ಎಂಬ ಮುಖವಾಡ ವನ್ನು. ಸ್ವ-ಅಭಿಮಾನಿಯಾದವನಿಗೆ ಸ್ವ-ಗೌರವವೂ ಇರುತ್ತದೆ. ಅದಕ್ಕೂ ಅಹಂಕಾರಕ್ಕೂ ಕಿಂಚಿತ್ತೂ ಸಂಬಂಧವೇ ಇಲ್ಲ. ಆದರೆ ಯಾಕೋ ಗೊತ್ತಿಲ್ಲ, ಇಂಥ ಅಹಂಕಾರಿಗಳೆಲ್ಲ ತಮ್ಮನ್ನು ತಾವು ಸ್ವಾಭಿಮಾನಿಗಳೆಂದೇ ಹೇಳಿಕೊಂಡು ಅಡ್ಡಾಡುತ್ತಾರೆ.

ಸ್ವಾಭಿಮಾನದಿಂದ ಅಹಂಕಾರವನ್ನು ಬೇರ್ಪಡಿಸಿ, ಇವರು ಅಹಂಕಾರಿಗಳು ಎಂದು ಗುರುತಿಸುವುದು ಹೇಗೆ? ಅಹಂಕಾರಿಗೆ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಭಾವನೆ ಇರುತ್ತದೆ. ಅದನ್ನು ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಎನ್ನಬಹುದು. ಇನ್ನೊಬ್ಬರನ್ನು ಹೊಗಳಿದರೆ ಸಹಿಸಿಕೊಳ್ಳುವುದಿಲ್ಲ. ಮನಸ್ಸಿನಲ್ಲೇ ಇವರಿಗೆ ಏನು ಕೆಟ್ಟದ್ದು ಮಾಡಲಿ ಎಂಬ ಸಂಚು ಬೆಳೆಯುತ್ತಿರುತ್ತದೆ. ತನ್ನ ಮುಂದೆ ಅವರು ಬೆಳೆಯಬಾರದು ಎಂಬ ಕಿಚ್ಚು ಜ್ವಲಿಸುತ್ತಿರುತ್ತದೆ. ದುರಭಿಮಾನ ಕಿತ್ತು ತಿನ್ನುತ್ತಿರುತ್ತದೆ. ಅವರು ಸ್ವಾಭಿಮಾನದ ಯಾವ ಗುಣವನ್ನೂ ಲಕ್ಷಣವನ್ನೂ ತೋರಗೊಡುವುದಿಲ್ಲ. ಶಾಂತ ಸರೋವರವನ್ನು ಕಲಕಿದ ಕಲ್ಲಿನಂತೆ ಅವರು ಇದ್ದಲ್ಲೆಲ್ಲ, ಬಿದ್ದಲ್ಲೆಲ್ಲ ಅಲೆ, ಅಲ್ಲೋಲಕಲ್ಲೋಲ. ಆದರೆ ನಿಜವಾದ ಸ್ವಾಭಿಮಾನಿ ಹಾಗಲ್ಲ. ಕಲ್ಲು ಕಲಕಿದ ಸರೋವರದಲ್ಲೂ ಅವನೊಂದು ತಣ್ಣನೆಯ ಗಾಳಿ ತರುವ ಚೆಂದದ ಅಲೆ. ಅದು ನಿಂತ ನೀರಿಗೊಂದು ನವಿರಾದ ಕಂಪನವನ್ನು ಕೊಡುತ್ತದೆ, ಮನಸ್ಸನ್ನು ಸಂತೋಷಗೊಳಿಸುತ್ತದೆ. ಹರಿವ ತೊರೆಯ ಪಕ್ಕದ ಶಾಂತ ಕಲ್ಲಿನಂತೆ ಅಚಲವಾಗಿ ತನ್ನ ಪಾಡಿಗೆ ತಾನಿರುತ್ತಾನೆ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ. ಹಾಗಂತ ಅವನ ಶಾಂತಿ, ಸೌಜನ್ಯ ದೌರ್ಬಲ್ಯವಲ್ಲ. ಬೇಕೆಂದಾಗ ದಿಟ್ಟ, ಬೇಡವೆನಿಸಿದಾಗ ಕಟು. ತನ್ನಾವರಣದೊಳಗೆ ಹಾಗೆಲ್ಲ ಯಾರಾರಿಗೋ ಜಾಗವಿಲ್ಲ. ಬಹಳ ಬೇಗ ಯಾರೆಡೆಗೂ ಸ್ನೇಹದ ಹಸ್ತ ಚಾಚುವುದಿಲ್ಲ. 

ಸ್ವಾಭಿಮಾನ ಎಲ್ಲರ ಬದುಕಿನ ಮಾನಧನ. ಅದು ಪ್ರತಿಯೊ ಬ್ಬರಿಗೂ ಇರಬೇಕು. ಅದೂ ವೈಯಕ್ತಿಕ ಜೀವನಕ್ಕಷ್ಟೇ ಅಲ್ಲ, ನಮ್ಮ ಭಾಷೆ, ನಮ್ಮ ನಾಡು, ನಮ್ಮ ದೇಶ, ನಮ್ಮ ಜನ ಎಂಬಿತ್ಯಾದಿ ವಿಚಾರವಾಗಿಯೂ ಇರಬೇಕು. ಹಾಗೆ ನೋಡಿದರೆ ಸ್ವಾಭಿಮಾನ ಎನ್ನುವುದು ಒಬ್ಬ ವ್ಯಕ್ತಿಯ ತನ್ನತನದ ಪ್ರತೀಕ. ಕೆಲವರನ್ನು ಗಮನಿಸಿ ನೋಡಿ. ಅವರು ಮಹಾ ಸ್ವಾಭಿಮಾನಿಗಳಂತೆ ವರ್ತಿಸುತ್ತಾರೆ, ಪೋಸು ಕೊಡುತ್ತಾರೆ. ಆದರೆ ಅವರಲ್ಲಿ ಎದ್ದು ಕಾಣುವುದು ಒಣಜಂಭ (ಫಾಲ್ಸ್‌ ಪ್ರಸ್ಟೀಜ್‌). ಯಾವಾಗಲೂ ಸುಳ್ಳು ಹೇಳಿಕೊಂಡೇ ಓಡಾಡುತ್ತಾರೆ. ತನ್ನ ಹತ್ತಿರ ಇಂತಿಷ್ಟು ಕೋಟಿ ದುಡ್ಡಿದೆ, ಆ ಊರಲ್ಲಿ ಇಷ್ಟು ಎಕರೆ ಜಮೀನಿದೆ, ಇಷ್ಟು ಕೆ.ಜಿ. ಚಿನ್ನವಿದೆ, ತಾನು ರಾಜಕಾರಣಿಗಳ ಸಂಬಂಧಿ… ಹೀಗೆ ಸುಳ್ಳುಗಳ ಸರಪಳಿ. ಬೆಳಗೆದ್ದರೆ ತೊಟ್ಟುಕೊಳ್ಳುವುದರಿಂದ ಹಿಡಿದು ರಾತ್ರಿ ಮಲಗುವಾಗ ಹೊದ್ದುಕೊಳ್ಳುವವರೆಗೆ ಎಲ್ಲವೂ ಸುಳ್ಳುಮಯ. ಆದರೆ ಅದಕ್ಕೆ ತೊಡಿಸುವ ಮುಖವಾಡಕ್ಕೆ ಮಾತ್ರ ಸ್ವಾಭಿಮಾನ. ಹಾಗೆಲ್ಲ ಸುಳ್ಳು ಹೇಳಿ ಏನನ್ನು ಸಾಧಿಸುತ್ತಾರೋ ಗೊತ್ತಿಲ್ಲ. ಇವರಿಗೆಲ್ಲ ಸ್ವಾಭಿಮಾನದ ಯಾವುದೇ ಒಂದು ಲಕ್ಷಣವೂ ಇರುವುದಿಲ್ಲ.

ಸ್ವಂತ ದುಡಿಮೆಯಿಂದ ಜೀವನ ನಡೆಸುತ್ತ; ಯಾರ ಹಂಗೂ ಇಲ್ಲದೇ, ಯಾರಿಗೂ ಮೋಸ ಮಾಡದೇ, ಯಾರನ್ನೂ ನಿಂದಿಸಿ ಕೆಳಗೆ ತಳ್ಳಿ ತಾನು ಮೇಲೆ ಬರುವ ಪ್ರಯತ್ನ ಪಡದೇ, ಸ್ವಗೌರವದಿಂದ ಸಾಧಿಸುವವನೇ ಸ್ವಾಭಿಮಾನಿ. ಕೆಲ ರಾಜಕಾರಣಿಗಳ ಮಕ್ಕಳು ತಮ್ಮ ತಂದೆಯ ಕಪ್ಪು ಹಣದಿಂದ ಆಟ ಆಡುತ್ತ, ತಾವೇ ಕಷ್ಟಪಟ್ಟು ದುಡಿದವರಂತೆ ಎಗರಾಡುತ್ತಾ, ನಮ್ಮ ದೇಶ ಹಾಳು ಮಾಡಿದ್ದು ಸಾಲದು ಅಂತ ಬೇರೆ ದೇಶಗಳಿಗೂ ಹೋಗಿ ಅಸಭ್ಯರಂತೆ ವರ್ತಿಸಿ, ದುಡ್ಡಿಗೆ ಬೆಲೆಯೇ ಇಲ್ಲದಂತೆ ಶೋಕಿ ಮಾಡುತ್ತಾರೆ. ಇವರೆಲ್ಲ ದುರಹಂಕಾರದ ಪರಮಾವಧಿಗಳು, ಇವರು ಸ್ವಾಭಿಮಾನಿಗಳಾಗಲು ಸಾಧ್ಯವೇ ಇಲ್ಲ! ಸ್ವಾಭಿಮಾನಿಗೆ ಒಂದು ಗತ್ತು- ಗಾಂಭೀರ್ಯ ಎದ್ದು ಕಾಣುತ್ತದೆ. ಕಂಡವರ ದುಡ್ಡಿನಲ್ಲಿ ಜೀವನ ನಡೆಸುವವರನ್ನು ಸೋಂಬೇರಿ ಅನ್ನಬೇಕೇ ಹೊರತು ಗೌರವಿಸಿ, ಸ್ವಾಭಿಮಾನಿ ಎನ್ನುವುದಲ್ಲ. 

ಯುವಕರಲ್ಲಿ ನಿಜವಾಗಿಯೂ ಸ್ವಾಭಿಮಾನ ಇದೆಯೇ ಅಥವಾ ಇಲ್ಲವೇ? ಯುವಕರು ಜಾಣರು. ತಮಗೆ ಬೇಕಾದಾಗ ಸ್ವಾಭಿಮಾನಿಗಳಂತೆ ವರ್ತಿಸುತ್ತಾರೆ, ಬೇಡದೇ ಇದ್ದಾಗ ಜಾಣ ಪೆದ್ದರಂತೆ ಸುಮ್ಮನಾಗುತ್ತಾರೆ. ಅವರು ಸ್ವಾಭಿಮಾನಿಗಳಂತೆ ವರ್ತಿಸುವ ಆವಶ್ಯಕತೆ ಇಲ್ಲ, ಏಕೆಂದರೆ ಒಬ್ಬ ಮನುಷ್ಯ ಸ್ವಾವಲಂಬಿಯಾಗಿ ತನಗೆ ಮತ್ತು ತನ್ನವರಿಗೆ ಬೇಕಾದ್ದನ್ನು ಒಂದು ಮಟ್ಟಕ್ಕಷ್ಟೇ ತನ್ನದಾಗಿಸಿಕೊಂಡು; ವಿಧ್ಯಾಭ್ಯಾಸವಾಗಿರಲಿ, ಹಣವಾಗಿರಲಿ, ಸಾಧನೆಯಾಗಿರಲಿ, ವ್ಯವಹಾರವಾಗಿರಲಿ ತನ್ನ ಜೀವನಕ್ಕೆ ಬೇಕಾಗಿದ್ದಷ್ಟನ್ನೇ ಅರ್ಜಿಸಿಕೊಂಡು, ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತಾರೆ. ಇದನ್ನೆಲ್ಲ ಬೇರೆಯವರಿಗೆ ಮೋಸಮಾಡಿ ಪಡೆದುಕೊಳ್ಳದೇ, ತನಗೆ ತಾನೇ ದುಡಿದುಕೊಳ್ಳುತ್ತಾರೆ. ಅಂಥ ಸ್ಥಿತಿ ಹೊಂದಿದಾಗ ನಿಮಗೆ ನೀವೇ “ನಾನು ಸ್ವಾಭಿಮಾನಿ’ ಎಂದು ಕೊಳ್ಳಬಹುದು. ಬೇರೆಯವರು ನಿಮ್ಮನ್ನು ಸ್ವಾಭಿಮಾನಿ ಅಂತ ಕರೆಯುತ್ತಾರೋ ಬಿಡುತ್ತಾರೆಯೋ – ಆ ಬಗ್ಗೆ ಚಿಂತಿಸಬೇಡಿ. ನೀವು ಕಷ್ಟಪಟ್ಟು ದುಡಿದು, ನಿಮ್ಮದಾಗಿಸಿಕೊಂಡಂಥ ಎಲ್ಲ ಸಣ್ಣ ಪುಟ್ಟ ಸಾಧನೆಗಳೂ ನಿಮ್ಮ ಸ್ವಾಭಿಮಾನಕ್ಕೆ ಚಿನ್ನದ ಮೆರುಗು ನೀಡುತ್ತವೆ. 

ಹೌದಲ್ಲವಾ, ಸುಮ್ಮನೆ ಯೋಚಿಸಿ, ಎಲ್ಲರೂ ಸ್ವಾಭಿಮಾನಿ ಗಳಾದರೆ ಎಷ್ಟು ಚೆನ್ನಾಗಿರುತ್ತದೆ! ಆಗ ಒಬ್ಬರು ಇನ್ನೊಬ್ಬರ ಸಂತೋಷವನ್ನು ನೋಡಿ ಹೊಟ್ಟೆಕಿಚ್ಚು ಪಡುವುದಿಲ್ಲ. ಇನ್ನೊಬ್ಬರ ದುಡ್ಡಿಗೆ ಆಸೆ ಪಡುವುದಿಲ್ಲ, ಬೇಗ ಶ್ರೀಮಂತರಾಗಬೇಕು ಅಂತ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ. ಯಾಕೆಂದರೆ ಸ್ವಾಭಿಮಾನಿ ಶ್ರೀಮಂತನೇ ಆಗಿರಬೇಕು ಅಂತೇನೂ ಇಲ್ಲ, ಬಡವನೂ ಸ್ವಾಭಿಮಾನಿಯೇ.  ಸ್ವಾಭಿಮಾನಕ್ಕೆ ಲಿಂಗಭೇದವಿಲ್ಲ, ಜಾತಿಭೇದವಿಲ್ಲ, ತಾರತಮ್ಯ ವಿಲ್ಲ, ಮೇಲು ಕೀಳಿಲ್ಲ. ಅದೊಂದು ಸರ್ವನಾಮಪದ!

ರೂಪಾ ಅಯ್ಯರ್‌

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.