ಮಾತು, ಊಟ ನಿಮ್ಮ ಹಕ್ಕು; ಧಾರ್ಮಿಕ ನಂಬಿಕೆ ಎಲ್ಲರ ಹಕ್ಕು


Team Udayavani, Feb 27, 2018, 7:45 AM IST

mathu.jpg

ಬೇರೆಯವರ ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರತಿಭಟಿಸುವ ಹಕ್ಕು ಯಾರಿಗೂ ಇಲ್ಲ. ಬೆಂಗಳೂರಿನ ನಟ್ಟನಡುವಿನ ಬೀದಿಯಲ್ಲಿ ನಿಂತು ಗೋಮಾಂಸ ಚಪ್ಪರಿಸಿ ಟೀವಿ ಚಾನಲ್ಲುಗಳಿಗೆ ಪೋಸು ನೀಡುವ ಜನರು ತಮ್ಮನ್ನು ತಾವು ಬುದ್ಧಿಜೀವಿಗಳೆಂದು ಕರೆಸಿಕೊಳ್ಳಲು ನಿಜಕ್ಕೂ ಯೋಗ್ಯರಲ್ಲ.

ನೀವು ರಾಮಾಯಣ, ಮಹಾಭಾರತವನ್ನು ನಂಬುವುದಿಲ್ಲ, ನಿಮಗೆ ದೇವರಲ್ಲಿ ನಂಬಿಕೆಯಿಲ್ಲ. ನಿಮ್ಮ ದೃಷ್ಟಿಯಲ್ಲಿ ಪುರಾಣ, ಉಪನಿಷತ್ತುಗಳು ಹಾಗೂ ವೇದಗಳು ಕಟ್ಟುಕತೆ. ನಿಮ್ಮ ಪ್ರಕಾರ ಮಾಂಸಾಹಾರ ಸೇವನೆ ತಪ್ಪಲ್ಲ. ಗೋಮಾಂಸವೂ ಸೇರಿದಂತೆ ಯಾವುದೇ ಪ್ರಾಣಿಯ ಮಾಂಸವನ್ನು ಸೇವಿಸುವುದು ಬೇರೆ ಬೇರೆ ಜಾತಿ ಹಾಗೂ ಧರ್ಮಗಳ ಆಹಾರ ಸಂಸ್ಕೃತಿ ಎಂದು ನೀವು ನಂಬಿದ್ದೀರಿ. ಸಂವಿಧಾನ ಕೂಡ ನಮಗೆ ಅಭಿವ್ಯಕ್ತಿ ಸ್ವಾತಂತ್ರÂ, ಧಾರ್ಮಿಕ ಸ್ವಾತಂತ್ರÂ, ನಮಗೆ ಬೇಕಾದ್ದನ್ನು ಸೇವಿಸುವ
ಸ್ವಾತಂತ್ರÂ ಹಾಗೂ ನಮಗಿಷ್ಟವಾದ ಸಂಸ್ಕೃತಿಯನ್ನು ಅನುಸರಿಸುವ ಸ್ವಾತಂತ್ರÂ ನೀಡಿದೆ ಎಂಬುದು ನಿಮಗೆ ಗೊತ್ತು. ಹಾಗಾಗಿ
ನಿಮಗೆ ಯಾವುದು ಸರಿಯೋ ಅದನ್ನು ಅನುಸರಿಸಲು ನೀವು ಸ್ವತಂತ್ರರು ಎಂದುಕೊಂಡಿದ್ದೀರಿ.

ವೆರಿ ಫೈನ್‌, ಇವೆಲ್ಲವೂ ನಿಜ. ಆದರೆ ಸಂವಿಧಾನದಲ್ಲಿರುವ ಹಕ್ಕುಗಳು ನಿಮಗಷ್ಟೇ ಅಲ್ಲ ಈ ದೇಶದ ಎಲ್ಲರಿಗೂ ಅವರವರ ನಂಬಿಕೆಗಳನ್ನು ಉಳಿಸಿಕೊಳ್ಳುವ, ಅವರಿಗಿಷ್ಟವಾದ ಧಾರ್ಮಿಕತೆ ಯನ್ನು ಪಾಲಿಸುವ ಹಕ್ಕು ಇದೆ. ಅದಕ್ಕೆ ಧಕ್ಕೆ ತರುವ ಹಕ್ಕನ್ನು ನಿಮಗೆ ನೀಡಿದವರು ಯಾರು?

ನಾನು ಭಗವದ್ಗೀತೆ ಸುಡುತ್ತೇನೆ ಎಂದು ಅಬ್ಬರಿಸುವುದು, ಶ್ರೀರಾಮ ಹೆಂಡ ಕುಡಿಯುತ್ತಿದ್ದ ಎಂದು ಟೀಕಿಸುವುದು, ಸಾವಿರಾರು ಜನರ ಮುಂದೆ ನಿಂತು ದನದ ಮಾಂಸ ತಿಂದು ಚಪ್ಪರಿಸುವುದು ಇವೆಲ್ಲ ಬೇರೆಯವರ ನಂಬಿಕೆಗೆ ಘಾಸಿ ಉಂಟು ಮಾಡುವ ಕೀಳು ನಡೆಗಳು. ನನಗೆ ನನ್ನಿಷ್ಟದ ಆಹಾರ ಸಂಸ್ಕೃತಿ ರೂಪಿಸಿಕೊಳ್ಳುವ ಹಕ್ಕಿದೆ ಎಂದು ಹೇಳುವವರು, ನನಗೆ ನನ್ನಿಷ್ಟದ ಧಾರ್ಮಿಕ ದೃಷ್ಟಿಕೋನ ಹೊಂದಿರುವ ಹಕ್ಕಿದೆ ಎಂದು ಪ್ರತಿ ಪಾದಿಸುವವರು ಏಕೆ ಬೇರೆಯವರ ನಂಬಿಕೆಯನ್ನು ಗೌರವಿಸುವು ದಿಲ್ಲ? ಭಗವದ್ಗೀತೆ ಧರ್ಮಗ್ರಂಥ ಎಂದು ಪೂಜಿಸುವವರು, ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ ಎಂದು ನಂಬಿ ಆರಾಧಿಸುವವರು, ಗೋವು ಮಾತೃ ಸ್ವರೂಪಿ ದೇವತೆ ಎಂದು ಪೂಜಿಸುವವರು ಕೂಡ ಈ ಸಮಾಜದಲ್ಲಿ ಅವರವರ ನಂಬಿಕೆ ಗಳನ್ನು ಆಚರಿಸುವ ಹಕ್ಕು ಹೊಂದಿದ್ದಾರೆ. ಅದನ್ನು ಕಲಕುವ ಹಕ್ಕನ್ನು ಯಾವ ಸಂವಿಧಾನವೂ ಯಾರಿಗೂ ನೀಡಿಲ್ಲ.

ಗೋಮಾಂಸ ತಿನ್ನೋದು ಸಾಧನೆಯಾ?
ಮಾತು ಮತ್ತು ಊಟ ನಮ್ಮ ವೈಯಕ್ತಿಕ ಹಕ್ಕುಗಳು. ಬೇರೆ ಯವರ ನಂಬಿಕೆಯನ್ನು ಸೌಮ್ಯವಾಗಿ ಪ್ರಶ್ನಿಸುವ ಅಥವಾ ಅವರ ನಂಬಿಕೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ಹಕ್ಕು ನಮಗಿದೆ. ಆದರೆ ನನ್ನದು ಮಾತ್ರ ಸರಿ, ಬೇರೆಯವರದ್ದೆಲ್ಲ ತಪ್ಪು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರÂ ನೀಡಿದ ಸಂವಿಧಾನವೇ ನಮಗೆ ಅದನ್ನು ಎಲ್ಲಿಯವರೆಗೆ ಬಳಸಬಹುದು ಎಂಬ ಮಿತಿಯನ್ನೂ ಹಾಕಿದೆ.

ಅದೇ ರೀತಿ, ಊಟ ಕೂಡ ನಮ್ಮ ವೈಯಕ್ತಿಕ ವಿಚಾರ. ಯಾವ ರೀತಿಯ ಆಹಾರ ಯಾರಿಗೆ ಇಷ್ಟವೋ ಅವರು ಅದನ್ನು ತಿನ್ನ ಬಹುದು. ಇದಕ್ಕೆ ಸರಕಾರವಾಗಲೀ ಅಥವಾ ಜನ ಸಮುದಾಯ ವಾಗಲೀ ಅಡ್ಡಿಪಡಿಸಿದರೆ ಅದಕ್ಕೆ ಪ್ರತಿಭಟನೆ ವ್ಯಕ್ತಪಡಿಸಲು ಸಾತ್ವಿಕ ಮಾರ್ಗಗಳು ಸಾಕಷ್ಟಿವೆ. ಆದರೆ ಬೇರೆಯವರ ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರತಿಭಟಿಸುವ ಹಕ್ಕು ಯಾರಿಗೂ ಇಲ್ಲ. ಬೆಂಗಳೂರಿನ ನಟ್ಟನಡುವಿನ ಬೀದಿಯಲ್ಲಿ ನಿಂತು ಗೋಮಾಂಸ ಚಪ್ಪರಿಸಿ ಟೀವಿ ಚಾನಲ್ಲುಗಳಿಗೆ ಪೋಸು ನೀಡುವ ಜನರು ತಮ್ಮನ್ನು ತಾವು ಬುದ್ಧಿಜೀವಿಗಳೆಂದು ಕರೆಸಿಕೊಳ್ಳಲು ನಿಜಕ್ಕೂ ಯೋಗ್ಯರಲ್ಲ.

ಮಾತು ಹಾಗೂ ಆಹಾರವೆಂಬ ವೈಯಕ್ತಿಕ ಹಕ್ಕುಗಳ ವಿಚಾರಕ್ಕೆ ಧಾರ್ಮಿಕ ನಂಬಿಕೆಯೆಂಬ ಸಾರ್ವತ್ರಿಕ ಹಕ್ಕನ್ನು ಬಲಿ ಕೊಡುವುದು ತಪ್ಪು. ಧಾರ್ಮಿಕ ನಂಬಿಕೆ ಬಹಳ ಸೂಕ್ಷ್ಮ ವಿಚಾರ. ಧರ್ಮಕ್ಕಾಗಿ ಯುದ್ಧಗಳೇ ನಡೆದಿವೆ. ಧರ್ಮದ ಹೆಸರಿನಲ್ಲಿ ಈಗಲೂ ಅದೆಷ್ಟೋ ದೇಶಗಳಲ್ಲಿ ಯುದ್ಧ ಅಥವಾ ಹಿಂಸಾಚಾರಗಳು ನಡೆಯುತ್ತಿವೆ. ಪುಣ್ಯಕ್ಕೆ ನಮ್ಮ ದೇಶದಲ್ಲಿ ಪರಿಸ್ಥಿತಿ ಇಷ್ಟು ಹದಗೆಟ್ಟಿಲ್ಲ. ಬೇರೆ ಬೇರೆ ಧರ್ಮಗಳ ನಡುವೆ ಗುಪ್ತಗಾಮಿನಿ ಯಾಗಿ ಕೆಲವೆಡೆ ದ್ವೇಷ ಇದೆಯಾದರೂ ಬಹಿರಂಗವಾಗಿ ಎಲ್ಲರೂ ಸಾಮರಸ್ಯದಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಇದನ್ನು ಕದಡಲು ರಾಜಕೀಯ ಶಕ್ತಿಗಳು ಹಾಗೂ ಬಾಹ್ಯ ದುಷ್ಟ ಶಕ್ತಿಗಳು ಆಗಾಗ ಪ್ರಯತ್ನಿಸಿದರೂ ಪ್ರಬುದ್ಧ ಸಮಾಜವೇ ಅದನ್ನೆಲ್ಲ ಅರಗಿಸಿಕೊಂಡು ಶಾಂತಿ ಕಾಪಾಡಿಕೊಳ್ಳುತ್ತ ಬಂದಿದೆ. ಹಾಗಿರುವಾಗ ಬೇಕಂತಲೇ ಧಾರ್ಮಿಕ ಸಾಮರಸ್ಯ ಕದಡುವಂತಹ ಹಾಗೂ ಹಿಂದುಗಳ ಧಾರ್ಮಿಕ ನಂಬಿಕೆಗಳನ್ನು ಟೀಕಿಸಿದರೆ ಏನೂ ಆಗುವುದಿಲ್ಲ ಎಂಬ ಕಾರಣಕ್ಕೆ ಭಂಡ ಮಾತುಗಳನ್ನಾಡಿ ಪ್ರಸಿದ್ಧಿ ಪಡೆಯುವುದು ಹೇಯ ಮನಸ್ಥಿತಿ.

ಧರ್ಮವನ್ನು ಅದರ ಪಾಡಿಗೆ ಬಿಡಿ
ದೇವರು ಇದ್ದಾನೆ ಎಂದು ನಂಬುವವರಿಗೆ ಇದ್ದಾನೆ, ಇಲ್ಲ ಎಂದು ನಂಬುವವರಿಗೆ ಇಲ್ಲ. ನನ್ನನ್ನು ನಂಬಿ ಎಂದು ಯಾವ ದೇವರೂ ಯಾರನ್ನೂ ಪೀಡಿಸುವುದಿಲ್ಲ. ಅದೇ ರೀತಿ ಹಿಂದುಗಳು ತಮ್ಮ ಧರ್ಮಗ್ರಂಥ ಹಾಗೂ ಆಚರಣೆಗಳನ್ನು ಯಾರ ಮೇಲೂ ಹೇರಲು ಹೋಗುವುದಿಲ್ಲ. ಇತಿಹಾಸದುದ್ದಕ್ಕೂ ಅತಿ ಹೆಚ್ಚು ಟೀಕೆ ಹಾಗೂ ದೌರ್ಜನ್ಯಗಳನ್ನು ಎದುರಿಸಿ ಹಿಂದೆಂದಿಗಿಂತ ಪ್ರಬಲವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಹೆಗ್ಗಳಿಕೆ ಈ ಧರ್ಮಕ್ಕಿದೆ. ಹಾಗಿರುವಾಗ ತನ್ನ ಪಾಡಿಗೆ ತಾನಿರುವ ಧರ್ಮವನ್ನು ಏಕೆ ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತೀರಿ? ಈ ಧರ್ಮದಲ್ಲೂ ಮೌಡ್ಯಗಳಿವೆ, ನಿಜ. ಬೇಕಾದರೆ ಅವುಗಳ ಬಗ್ಗೆ ಜಾಗೃತಿ ಮೂಡಿಸಿ ಅಥವಾ ನಿಮಗೆ ನಂಬಿಕೆಯಿಲ್ಲ ಎಂದರೆ ಧರ್ಮದ ಗೊಡವೆಯನ್ನೇ ಬಿಟ್ಟುಬಿಡಿ. ಅದರ ಬದಲಿಗೆ ನಿಮಗನ್ನಿಸಿದ್ದೇ ಪರಮಸತ್ಯ ಎಂಬ ಭ್ರಮೆಗೆ ಬಲಿಯಾಗಬೇಡಿ. ಅದು ನಿಮಗೂ ಅಪಾಯ, ಬೇರೆಯವರಿಗೂ ಅಪಾಯ ತಂದೊಡ್ಡಬಲ್ಲದು.

ಮಾಡಲು ನೂರಾರು ಕೆಲಸಗಳಿವೆ
ನಾವು 21ನೇ ಶತಮಾನದಲ್ಲಿದ್ದೇವೆ. ವೈಯಕ್ತಿಕವಾಗಿ ಏನನ್ನಾ ದರೂ ಸಾಧಿಸಲು ನಮ್ಮ ಮುಂದೆ ನೂರೆಂಟು ಅವಕಾಶಗಳಿವೆ. ಜನರಿಗೆ ಒಳ್ಳೆಯದು ಮಾಡಬೇಕು ಅನ್ನಿಸಿದರೆ ಅಥವಾ ನಾನು ಬೆಳೆಯಬೇಕು ಅನ್ನಿಸಿದರೆ ದಿನವಿಡೀ ಮಾಡಲು ಕೈ ತುಂಬಾ ಕೆಲಸಗಳಿವೆ. ಈಗಲೂ ಜಾತಿ, ಧರ್ಮ, ದೇವರು, ಧರ್ಮಗ್ರಂಥ ಗಳು, ದೇವಸ್ಥಾನಕ್ಕೆ ಹೋಗಬೇಕೋ ಬೇಡವೋ ಎಂಬ ಬಗ್ಗೆ
ಯೆಲ್ಲ ಮನಸ್ಸಿಗೆ ತೋಚಿದ ಹೇಳಿಕೆ ನೀಡಿ ಅನವಶ್ಯಕ ಚರ್ಚೆ ಮಾಡುತ್ತ ಕುಳಿತುಕೊಳ್ಳಬೇಕಿಲ್ಲ. ನಂಬಿಕೆಗಳು ನಂಬಿಕೆಯ ಮಟ್ಟ ದಲ್ಲೇ ಇರಬೇಕು. ದೇವರನ್ನು ನಂಬುತ್ತೀರಾ? ಕೈಮುಗಿಯಿರಿ. ಧರ್ಮವನ್ನು ನಂಬುತ್ತೀರಾ? ಅದರಲ್ಲಿರುವ ಒಳ್ಳೆಯ ಚಿಂತನೆ ಗಳನ್ನು ಅಳವಡಿಸಿಕೊಳ್ಳಿ. ಇಡೀ ದಿನ ಧಾರ್ಮಿಕ ಚಿಂತನೆಯಲ್ಲೇ ಮುಳುಗಿರಬೇಕು ಅನ್ನಿಸುವಷ್ಟು ಧಾರ್ಮಿಕ ವ್ಯಕ್ತಿ ನೀವಾಗಿದ್ದರೆ ಹಾಗೇ ಮಾಡಿ. ಕಷ್ಟ ಬಂದಾಗ ದೇವರನ್ನು ನೆನೆದರೆ ಮನಸ್ಸು ಹಗುರವಾಗುತ್ತದೆಯಾ? ನಿಮ್ಮಿಷ್ಟದ ದೇವರನ್ನು ನೆನೆಯಿರಿ. ಇವ್ಯಾವುದರಲ್ಲೂ ತಪ್ಪಿಲ್ಲ. ಆದರೆ ನಮ್ಮ ನಮ್ಮ ನಂಬಿಕೆಗಳನ್ನೇ ಊರೆಲ್ಲ ಸಾರಿ ಡಂಗೂರ ಹೊಡೆಯುವ ಅವಶ್ಯಕತೆಯಿಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೇನು ಬೇಕೋ ಅದನ್ನು ಅನುಸರಿಸು ತ್ತಾರೆ. ನಮ್ಮ ಮನಸ್ಸಿಗೆ ಬರುವ ಅಪದ್ಧಗಳನ್ನೆಲ್ಲ ಹೇಳಿ ಸಮಾಜದಲ್ಲಿ ರಾಡಿ ಎಬ್ಬಿಸುವ ಅಗತ್ಯವಾಗಲೀ, ಪುರಾಣ ಪುರುಷರನ್ನು ಬೇಕಾಬಿಟ್ಟಿ ವಿಮರ್ಶೆ ಮಾಡಿ ಅತೀ ಬುದ್ಧಿವಂತಿಕೆ ತೋರಿಸುವ ಅಗತ್ಯವಾಗಲೀ ಇಲ್ಲ.

ಬುದ್ಧಿವಂತ ವರ್ಸಸ್‌ ಬುದ್ಧಿಜೀವಿ
ಇನ್ನೊಂದು ವಿಷಯ ಏನು ಗೊತ್ತೆ? ಭಗವದ್ಗೀತೆ ಪುರಾಣ, ಉಪನಿಷತ್ತುಗಳೂ ಹಾಗೂ ವೇದಗಳಲ್ಲಿರುವ ಸಂಗತಿಗಳನ್ನು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಶಂಬೂಕನನ್ನು ರಾಮ ಏಕೆ ಕೊಂದ? ಅವನಿಗೆ ಮುಕ್ತಿ ನೀಡಲು ಕೊಂದ ಎಂದು ಕೆಲವರು ಹೇಳಬಹುದು. ಅವನು ಕೀಳು ಜಾತಿಯವನಾಗಿದ್ದರಿಂದ ಕೊಂದ ಎಂದು ಇನ್ನೂ ಕೆಲವರು ಹೇಳಬಹುದು. ಇಂತಹ ವಿಷಯಗಳಲ್ಲಿ ಯಾವುದು ಸರಿ ಎಂದು ತೀರ್ಪು ನೀಡುವ ಜಡ್ಜ್ ಭೂಮಿಯ ಮೇಲೆ ಇಲ್ಲ. ಯಾರ ಮನಸ್ಥಿತಿ ಹೇಗಿರುತ್ತದೆಯೋ ಅವರು ಆ ಮನಸ್ಥಿತಿಗೆ ತಕ್ಕಂತೆ ಪುರಾತನ ನಂಬಿಕೆಗಳಿಂದ ಒಳ್ಳೆಯದು ಅಥವಾ ಕೆಟ್ಟದ್ದನ್ನು ಸ್ವೀಕರಿಸುತ್ತಾರೆ. ರಾಮಾಯಣ ಹಾಗೂ ಮಹಾಭಾರತದಲ್ಲಿರು ವುದೆಲ್ಲ ಒಳ್ಳೆಯದೇ ಅಲ್ಲ. ಮನುಷ್ಯ ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಎರಡೂ ವಿಚಾರಗಳು ಅವುಗಳಲ್ಲಿವೆ. ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ಎಚ್ಚರಿಕೆಯೆಂದು ಪರಿಗಣಿಸು ವವನು ಬುದ್ಧಿವಂತ. ಕೆಟ್ಟದ್ದನ್ನೇ ಎತ್ತಿ ತೋರಿಸಿ ದೊಡ್ಡವನಾಗಲೂ ಪ್ರಯತ್ನಿಸುವವನು ಬುದ್ಧಿಜೀವಿ.

– ರೂಪಾ ಅಯ್ಯರ್‌

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.