ನಿಮ್ಮ ಪ್ರೀತಿ ಸೂರ್ಯ-ಚಂದ್ರ ಇರುವವರೆಗೆ ಉಳಿಯಬೇಕಿಲ್ಲ


Team Udayavani, Jul 3, 2018, 8:17 AM IST

soorya.jpg

ಸೂರ್ಯ ಚಂದ್ರರಿಗೆ ಆಯಸ್ಸು ಇದ್ದರೂ, ಅವರಿಗಿಂತ ಮುಂದೆ ನಮ್ಮ ಜನ್ಮದ ಆಯಸ್ಸು ಮುಗಿದಿರುತ್ತದೆ. ಹಿಂದಿನ ಕಾಲದಲ್ಲಿ ಮದುವೆಯಾಗುವ ಸಂದರ್ಭದಲ್ಲಿ ಗಂಡು-ಹೆಣ್ಣು ಸಪ್ತಪದಿ ತುಳಿಯುವಾಗ, ಏಳೇಳು ಜನ್ಮಕ್ಕೂ ನೀನೇ ನನ್ನ ಬಾಳ ಸಂಗಾತಿಯಾಗಿರಬೇಕು ಅಂತ ಒಬ್ಬರಿಗೊಬ್ಬರು ಆಶ್ವಾಸನೆ ಕೊಟ್ಟುಕೊಳ್ಳುತ್ತಿದ್ದರು. ಈಗ ಮದುವೆ ಆಗುವ ದಿನ ಕೂಡ ಗಂಡು ಹೆಣ್ಣು ಜಗಳ ಆಡುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ತಿಂಗಳಿಗೇ ಈ ಜನ್ಮದಲ್ಲೇ ನಿನ್ನ ಜೊತೆ ಬಾಳ್ಳೋ ಕರ್ಮ ಮುಗಿದರೆ ಸಾಕು ಎನ್ನುತ್ತಾರೆ. 

ಸಾಮಾನ್ಯವಾಗಿ ಜನರು ಪ್ರೀತಿಸಿದಾಗ, ಮದುವೆಯಾದಾಗ ಸೂರ್ಯ ಚಂದ್ರರು ಇರುವವರೆಗೂ ನಾನು ನಿನ್ನನ್ನ ಪ್ರೀತಿಸ್ತೀನಿ ಅಂತ ಮಾತು ಕೊಡುತ್ತಾರೆ. ಅಂದರೆ ಅದರ ಅರ್ಥ ಸೂರ್ಯ ಚಂದ್ರರಿಗೆ ಸಾವೇ ಇಲ್ಲ. ಈ ಜಗತ್ತು ಇರುವ ತನಕ ಅವರೂ ಇರುತ್ತಾರೆ. ಹಾಗೇ ನಮ್ಮ ಪ್ರೀತಿಗೆ ಸಹ ಸಾವಿಲ್ಲ ಎಂದುಕೊಳ್ಳುತ್ತಾರೆ. ನಾವು ಅನೇಕ ಚಲನಚಿತ್ರಗಳಲ್ಲಿ ಈ ರೀತಿಯ ಸಾಂದರ್ಭಿಕ ಸಂಭಾಷಣೆಯನ್ನು ಕೇಳಿದ್ದೇವೆ. ಸೂರ್ಯ ಚಂದ್ರರಿಗೆ ಆಯಸ್ಸು ಇದ್ದರೂ, ಅವರಿಗಿಂತ ಮುಂದೆ ನಮ್ಮ ಜನ್ಮದ ಆಯಸ್ಸು ಮುಗಿದಿರುತ್ತದೆ.

ಹಿಂದಿನ ಕಾಲದಲ್ಲಿ ಮದುವೆಯಾಗುವ ಸಂದರ್ಭದಲ್ಲಿ ಗಂಡು-ಹೆಣ್ಣು ಸಪ್ತಪದಿ ತುಳಿಯುವಾಗ, ಏಳೇಳು ಜನ್ಮಕ್ಕೂ ನೀನೇ ನನ್ನ ಬಾಳ ಸಂಗಾತಿಯಾಗಿರಬೇಕು ಅಂತ ಒಬ್ಬರಿಗೊಬ್ಬರು ಆಶ್ವಾಸನೆ ಕೊಟ್ಟುಕೊಳ್ಳುತ್ತಿದ್ದರು. ಈಗ ಮದುವೆ ಆಗುವ ದಿನ ಕೂಡ ಗಂಡು ಹೆಣ್ಣು ಜಗಳ ಆಡುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ತಿಂಗಳಿಗೇ ಈ ಜನ್ಮದಲ್ಲೇ ನಿನ್ನ ಜೊತೆ ಬಾಳ್ಳೋ ಕರ್ಮ ಮುಗಿದರೆ ಸಾಕು ಎನ್ನುತ್ತಾರೆ. ಇನ್ನು ಇವರು ಸೂರ್ಯ ಚಂದ್ರ ಇರುವವರೆಗೂ ಪ್ರೀತಿಸುತ್ತಾರಾ?

ದೇವತೆಗಳಿಗೂ ಆಯಸ್ಸಿದೆ
ನಾವೆಲ್ಲ ನವಗ್ರಹಗಳನ್ನು ಪೂಜಿಸುತ್ತೇವೆ. ಏಕೆಂದರೆ ಗ್ರಹಗಳೆಲ್ಲ ನಮ್ಮ ಕಾರ್ಮಿಕ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಅವುಗಳನ್ನು ಪೂಜಿಸಿದರೆ ನಮ್ಮ ಜೀವನದ ಏರುಪೇರುಗಳು ಸರಾಗವಾಗಿಬಿಡುತ್ತವೆ ಎಂದು ಅವರಿಗೆ ಶಾಂತಿ ಹೋಮವನ್ನೂ ಮಾಡುತ್ತೇವೆ. ಕೆಲವರು ನಂಬುತ್ತಾರೆ. ಕೆಲವರು ನಂಬುವುದಿಲ್ಲ. ನಂಬಲು, ಬಿಡಲು ನಾವ್ಯಾರು? ಸಾಮಾನ್ಯ ಮುನಷ್ಯರು. ಗ್ರಹಗ ಳನ್ನು ಸೃಷ್ಟಿಸಿದವರಂತೂ ಅಲ್ಲ. ನವಗ್ರಹಗಳು ಇರುವುದು ಎಷ್ಟು ಸತ್ಯವೋ ಅವು ನಮ್ಮ ಮೇಲೆ ಪ್ರಭಾವ ಬೀರುವುದೂ ಅಷ್ಟೇ ಸತ್ಯ.

ದೇವಾನುದೇವತೆಗಳಿಗೂ ಆಯಸ್ಸು ಇದೆ. ಜಗತ್ತು ಸೃಷ್ಟಿಯಾದಾಗ ದೇವತೆಗಳು ಸೃಷ್ಟಿಯಾಗಿರಲಿಲ್ಲ. ಹಾಗಾದರೆ ಜಗತ್ತು ಯಾವಾಗ ಸೃಷ್ಟಿಯಾಯಿತೆಂದರೆ ದೇವತೆಗಳಿಗೂ ಗೊತ್ತಿಲ್ಲ. ಆ ಪರಬ್ರಹ್ಮ ನಾರಾಯಣನಿಗೆ ಮಾತ್ರ ಗೊತ್ತು ಈ ಜಗತ್ತು ಹಿರಣ್ಯಗರ್ಭದಿಂದ ಸೃಷ್ಟಿಯಾಗಿದ್ದು ಯಾವಾಗ ಅಂತ. ಆತ ಜಗತ್ತನ್ನು ಸೃಷ್ಟಿ ಮಾಡಿದ ನಂತರವೇ ದೇವತೆಗಳನ್ನು ಸೃಷ್ಟಿ ಮಾಡಿದ್ದು. ವೈಜ್ಞಾನಿಕವಾಗಿ ಸಹ 1300 ಕೋಟಿ ವರ್ಷಗಳ ಹಿಂದೆ ಒಂದು ಅಣುವಿನಿಂದ ಜಗತ್ತು ಸೃಷ್ಟಿಯಾಯಿತು ಅಂತ ಹೇಳುತ್ತಾರೆ. ಆದರೆ ಅದಕ್ಕೂ ಹಿಂದೆ ಏನಿತ್ತು? ಏನಿದ್ದಿರಬಹುದು ಎಂದು ಯಾರೂ ಕಂಡುಹಿಡಿದಿಲ್ಲ. ಹಾಗೆ ಜಗತ್ತು ಯಾಕೆ ಸೃಷ್ಟಿ ಆಯಿತು ಅನ್ನುವುದು ಸಹ ಯಾರಿಗೂ ತಿಳಿದಿಲ್ಲ. ವಿಶ್ವ ಪ್ರಾರಂಭವಾದಾಗ ಸೂರ್ಯನೇ ಇರಲಿಲ್ಲ. ಅವನು ಹುಟ್ಟಿದ್ದು 454 ಕೋಟಿ ವರ್ಷಗಳ ಹಿಂದೆ. ಸೂರ್ಯನ ಆಯಸ್ಸು ಭೌತಶಾಸ್ತ್ರದ ಪ್ರಕಾರ ಸುಮಾರು 100 ಕೋಟಿ ವರ್ಷಗಳು. ಹಾಗಾದರೆ ಸೂರ್ಯ ಈಗ ಮಧ್ಯವಯಸ್ಕನಾಗಿದ್ದಾನೆ. ಖಗೋಳ ಶಾಸ್ತ್ರದ ಪ್ರಕಾರ ನಾವು ತಿಳಿದುಕೊಂಡಿರುವ 9 ಗ್ರಹಗಳು ವೈಜ್ಞಾನಿಕವಾಗಿ ಗ್ರಹಗಳಲ್ಲ, ಏಕೆಂದರೆ ಅವರ ಪ್ರಕಾರ ಗ್ರಹಗಳು ನಕ್ಷತ್ರಗಳಾಗಿರಬಹುದು, ಛಾಯಾಗ್ರಹಗಳಾಗಿರಬಹುದು, ನಾವು ತಿಳಿದಿರುವ ರಾಹು-ಕೇತು ಗ್ರಹಗಳು ಅವರ ಪ್ರಕಾರ ಬಿಂದುಗಳು. ವೈಜ್ಞಾನಿಕವಾಗಿ ಸೂರ್ಯ ಸಹ ಒಂದು ನಕ್ಷತ್ರ, ಚಂದ್ರ ಉಪಗ್ರಹ, ಮಂಗಳ, ಬುಧ, ಗುರು, ಶುಕ್ರ, ಶನಿ ಈ ಐವರು ಗ್ರಹಗಳು. ರಾಹು, ಕೇತು: ಸೂರ್ಯ ಚಂದ್ರರ ರೇಖೆಗಳು ಸಂಧಿಸುವ ಬಿಂದುಗಳಲ್ಲಿ ಉತ್ತರ ಬಿಂದು ರಾಹು-ದಕ್ಷಿಣ ಬಿಂದು ಕೇತು. ಈ ರೇಖೆಗಳು ಸಂಧಿಸುವ ಬಿಂದುಗಳಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ-ಗ್ರಹಣವಾಗುತ್ತದೆಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ವೈಜ್ಞಾನಿಕವಾಗಿ ಭೂಮಿ ಛಾಯೆ ಚಂದ್ರನ ಮೇಲೆ ಬಿದ್ದಾಗ ಚಂದ್ರ ಗ್ರಹಣವಾಗುತ್ತದೆ; ಹಾಗೆ ಚಂದ್ರನ ಛಾಯೆಯಿಂದ ಸೂರ್ಯ ಗ್ರಹಣವಾಗುವುದು ನಿಮಗೆಲ್ಲ ತಿಳಿದಿರುವ ವಿಷಯವೇ.

ರಾಹು – ಕೇತುವಿನ ಪುರಾಣ ಕತೆ 
ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣಗಳು ಇದೇ ರಾಹು ಕೇತುಗಳ ಬಗ್ಗೆ ಹೇಳುವ ಕಥೆ ಸ್ವಾರಸ್ಯಕರವಾಗಿದೆ. ಕ್ಷೀರಸಾಗರ ಮಂಥನದ ಸಮಯದಲ್ಲಿ ವಿಷ್ಣು ಮೋಹಿನಿಯ ಅವತಾರದಲ್ಲಿ ದೇವತೆಗಳಿಗೆಲ್ಲ ಅಮೃತ ನೀಡುತ್ತಿದ್ದಾಗ ಅದೇ ಸಾಲಿನಲ್ಲಿ ಅಸುರ ಸ್ವರಭಾನು ಸಹ ದೇವತೆಯ ವೇಷ ಧರಿಸಿ ಕುಳಿತಿರುತ್ತಾನೆ. ವಿಷ್ಣುವಿನ ಕೈಯಿಂದ ಅಮೃತ ಪಡೆದು ಕುಡಿದೂ ಬಿಡುತ್ತಾನೆ. ಈ ವಿಷಯ ತಕ್ಷಣ ಸೂರ್ಯ ಚಂದ್ರರಿಗೆ ತಿಳಿದು ವಿಷ್ಣುವಿಗೆ ತಿಳಿಸುತ್ತಾರೆ. ವಿಷ್ಣು ಕೋಪಗೊಂಡು ತಕ್ಷಣ ಆ ಅಸುರ ಸ್ವರಭಾನುವಿನ ತಲೆಯನ್ನು ಛೇದಿಸುತ್ತಾನೆ. ಅಂದಿನಿಂದ ಅಸುರ ಕೋಪಗೊಂಡು ಸೂರ್ಯ ಚಂದ್ರರನ್ನು ನುಂಗುತ್ತಲೇ ಇರುತ್ತಾನೆ. ಹಾಗಾಗಿ ಸೂರ್ಯ, ಚಂದ್ರ ಗ್ರಹಣಗಳಾಗುತ್ತವೆ. ಅವನ ಕೋಪಕ್ಕೆ ಕೊನೆಯೇ ಇಲ್ಲ. ಗ್ರಹಣಗಳು ಸಂಭವಿಸುವುದು ರಾಹು ಕೇತುಗಳಿಂದ, ಹಾಗಾಗಿ ಗ್ರಹಣ ನಮಗೆಲ್ಲ ಕೆಟ್ಟದ್ದು ಮಾಡುತ್ತದೆಂಬ ನಂಬಿಕೆಯಿದೆ. ಆದ್ದರಿಂದ ಗ್ರಹಣದಲ್ಲಿ ಯಾವ ಶುಭ ಕಾರ್ಯ ಗಳನ್ನೂ ಮಾಡುವುದಿಲ್ಲ.

ಪಂಚ ಗ್ರಹಗಳಾದ ಮಂಗಳ, ಬುಧ, ಗುರು, ಶುಕ್ರ, ಶನಿಗಳಿಗೆ ಸೂರ್ಯನಷ್ಟೆ ವಯಸ್ಸು. ಆದರೆ ಚಂದ್ರ ಇವರೆಲ್ಲರಿಗಿಂತ ಸ್ವಲ್ಪ ಚಿಕ್ಕವನು. ವೈಜ್ಞಾನಿಕವಾಗಿ ಚಂದ್ರನು ಹುಟ್ಟಿ 316 ಕೋಟಿಯಿಂದ 450 ಕೋಟಿ ವರ್ಷಗಳಾಗಿರಬಹುದು. ಹಾಗೆ ರಾಹು-ಕೇತುಗಳ ವಯಸ್ಸು ಚಂದ್ರನಷ್ಟೆ. 

ಸೂರ್ಯ, ಚಂದ್ರರಿಗೂ ಸಾವಿದೆ 
ನೀವು ಗಮನಿಸಿರಬಹುದು, ನಾವು ಆಕಾಶ ನೋಡಿದಾಗ ಸೂರ್ಯ, ಪೂರ್ಣಚಂದ್ರರಿಬ್ಬರೂ ಒಂದೇ ಗಾತ್ರದಲ್ಲಿ ಕಾಣಿಸುತ್ತಾರೆ. ಚಂದ್ರನಿಗಿಂತ ವೈಜ್ಞಾನಿಕವಾಗಿ ಸೂರ್ಯನ ಅಡ್ಡಗಲ 400 ಪಟ್ಟು ದೊಡ್ಡದು. ಆದರೂ ಏಕೆ ನಮ್ಮ ಕಣ್ಣಿಗೆ ಒಂದೇ ಗಾತ್ರ ಕಾಣಿಸುತ್ತಾರೆಂದರೆ, ಸೂರ್ಯ ಚಂದ್ರನಿಗಿಂತ 400 ಪಟ್ಟು ದೂರದಲ್ಲಿದ್ದಾನೆ. ಚಂದ್ರ ಭೂಮಿಗೆ ಹತ್ತಿರವಾಗಿದ್ದಾನೆ.

ಸೂರ್ಯನಲ್ಲಿ ಸಣ್ಣ ಅಣುಗಳೆಲ್ಲ ಒಂದಕ್ಕೊಂದು ಸೇರಿ ದೊಡ್ಡ ಅಣುಗಳಾಗುತ್ತಿವೆ. ಆದ್ದರಿಂದ ಶಕ್ತಿ ಜಾಸ್ತಿಯಾಗಿರುತ್ತದೆ. ಸೂರ್ಯನಿಗೆ ಆಯಸ್ಸು ಮುಗಿಯುತ್ತಿದ್ದಂತೆ ಸಣ್ಣ ಅಣುಗಳು ಕಡಿಮೆಯಾಗುತ್ತಾ ಬರುತ್ತವೆ. ಸಣ್ಣ ಅಣುಗಳು ಕಡಿಮೆಯಾಗುತ್ತಿದ್ದಂತೆ ಅಣುಗಳ ಜೋಡಣೆ ಮತ್ತು ಅದರಿಂದ ಉತ್ಪತ್ತಿಯಾಗುವ ಶಕ್ತಿ ಇಂಗುತ್ತಾ ಹೋಗುತ್ತದೆ. ಕೊನೆಗೆ ಸೂರ್ಯ ಸ್ಫೋಟಗೊಳ್ಳುತ್ತಾನೆ. ಸೂರ್ಯನೇ ಸ್ಫೋಟಗೊಂಡ ನಂತರ ಬೇರೆ ಗ್ರಹಗಳು ನಶಿಸಿ ಹೋಗುತ್ತವೆ. ಗ್ರಹಗಳೆ ಹೋದ ಮೇಲೆ ರಾಹು-ಕೇತುಗಳಿಗೆ ಅರ್ಥವೇ ಇಲ್ಲ. ಏಕೆಂದರೆ ಅವು ಕೇವಲ ಬಿಂದುಗಳು. ಭೌತಶಾಸ್ತ್ರದಲ್ಲಿ ಎಲ್ಲಾ ಗ್ರಹಗಳ ಆಯಸ್ಸು ಅವು ಯಾವ ರೀತಿ ಹುಟ್ಟಿದವು, ಯಾವ ರೀತಿ ನಶಿಸುತ್ತಾರೆ ಅಂತೆಲ್ಲ ತಿಳಿದುಕೊಳ್ಳಬಹುದು. ಆದರೆ ವಿಶ್ವ ನಿರ್ಮಾಣವಾದ ಕ್ಷಣ ಮತ್ತು ಕಾರಣ ಮಾತ್ರ ತಿಳಿದುಕೊಳ್ಳಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಮಾತ್ರವಲ್ಲ. ನಮ್ಮ ವೇದಗಳ ಪ್ರಕಾರವೂ ತಿಳಿದುಕೊಳ್ಳಲು ಸಾಧ್ಯವಿಲ್ಲ.

ನಾಸದೀಯ ಸೂಕ್ತ ಇವೆಲ್ಲವನ್ನೂ ಹೇಳುತ್ತದೆ. ವಿಶ್ವ ಸೃಷ್ಟಿಯಾದ ಮೇಲೆ ದೇವತೆಗಳು ಸೃಷ್ಟಿಯಾದರು ಎಂದೂ ಹೇಳುತ್ತದೆ.

ಈ ಜನ್ಮದಲ್ಲಿ ಪ್ರೀತಿಸಿ, ಸಾಕು
ಇವೆಲ್ಲ ಕೋಟಿ ವರ್ಷಗಳ ಕತೆಯಾಯಿತು. ಹೆಚ್ಚೆಂದರೆ ನೂರು ವರ್ಷ ಬದುಕಿ-ಹೋಗುವ ಮನುಷ್ಯ ಆ ಸೂರ್ಯ ಚಂದ್ರ ಇರುವವರೆಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ತರ್ಕಬದ್ಧವಾಗಿ ಯೋಚಿಸುವವರಿಗೆಲ್ಲ ನಗು ಬರದೇ ಇರದು. ಪ್ರೀತಿಯಲ್ಲಿ ಮನಸ್ಸು ಕುರುಡಾಗಿರುವುದರಿಂದ ಪ್ರಿಯಕರ ಹೀಗೆ ಹೇಳಿದಾಗ ಪ್ರೇಯಸಿ ನಂಬಬಹುದಷ್ಟೆ!

ಯಾರೂ ಸೂರ್ಯ ಚಂದ್ರ ಇರುವವರೆಗೆ ಸಂಗಾತಿಯನ್ನು ಪ್ರೀತಿಸಬೇಕಿಲ್ಲ. ಅವರ ಪ್ರೀತಿ ಸೂರ್ಯ ಚಂದ್ರರಷ್ಟು ಕಾಲ ಬದುಕಿರುವ ಅಗತ್ಯವೂ ಇಲ್ಲ. ಪ್ರೀತಿಸುವವರು ಬದುಕಿರುವವರೆಗೆ ಅವರ ಪ್ರೀತಿ ಬದುಕಿದ್ದರೆ ಸಾಕು. ತಾವು ಬದುಕಿರುವವರೆಗೆ ಇವರಿಬ್ಬರೂ ಪರಸ್ಪರ ಪ್ರೀತಿಸಿದರೆ ಸಾಕು. ಒಂದೊಂದು ರಾತ್ರಿಗೆ ಪ್ರೀತಿ ಮುಗಿದುಹೋಗುತ್ತಿರುವ ಈ ದಿನಗಳಲ್ಲಿ ಇದಕ್ಕಿಂತ ಹೆಚ್ಚನ್ನು ಹೇಗೆ ತಾನೇ ನಿರೀಕ್ಷಿಸುವುದು?

ಪ್ರೀತಿಗೆ ಯಾರ ಸಾಕ್ಷಿಯೂ ಬೇಡ. ಸೂರ್ಯನೂ ಚಂದ್ರನೂ ಅದಕ್ಕೆ ವಿಟ್‌ನೆಸ್‌ ಆಗಬೇಕಿಲ್ಲ. ಸಾಕ್ಷ್ಯ ಕೇಳುವುದು ಪ್ರೀತಿಯಾಗುವುದಿಲ್ಲ. ಪ್ರೀತಿಯ ನಡುವೆ ಸಾಕ್ಷ್ಯದ ಪ್ರಶ್ನೆ ಬರುವುದು ಡೈವೊರ್ಸ್‌ಗೆ ಅರ್ಜಿ ಹಾಕಿದಾಗ ಮಾತ್ರ!
ಬೇಷರತ್ತಾಗಿ ಪ್ರೀತಿಸೋಣ. ಪ್ರೀತಿಯಲ್ಲಿ ಕಂಡೀಶನ್‌ಗಳು ಬಂದರೆ ಅದೊಂದು ಕೊಡು-ಕೊಳ್ಳುವ ವ್ಯವಹಾರವಷ್ಟೇ ಆಗುತ್ತದೆ ಮತ್ತು ಬಿಸಿನೆಸ್‌ನಲ್ಲಿ ಪ್ರೀತಿಗೆ ಜಾಗವಿಲ್ಲ.

– ರೂಪಾ ಅಯ್ಯರ್‌

ಟಾಪ್ ನ್ಯೂಸ್

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

Social Media: In this country, people under the age of 16 cannot use Instagram, Facebook!

Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.