ಬಿಜೆಪಿಯವ್ರು ಹಿಂದೂಗಳನ್ನು ದತ್ತು ತೆಗೆದುಕೊಂಡಿದ್ದಾರಾ?


Team Udayavani, Dec 14, 2017, 12:55 PM IST

reddy-201714.jpg

ಪರೇಶ್‌ ಮೇಸ್ತ ಹತ್ಯೆ ಪ್ರಕರಣ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಆತಂಕದ ವಾತಾವರಣ ಮೂಡಿಸಿದ್ದು, ಕರಾವಳಿ ಭಾಗವಷ್ಟೇ ಅಲ್ಲದೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಸರಣಿ ಮುಂದುವರಿದಿದ್ದು ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷ ಬಿಜೆಪಿ ಬೀದಿಗಿಳಿದಿದೆ. ಬಿಜೆಪಿಯವರು ರಾಜಕೀಯ ಲಾಭಕ್ಕೆ ಪ್ರಕರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್‌ ತಿರುಗೇಟು ನೀಡಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಡೆದಿರುವ ಈ ವಿದ್ಯಮಾನಗಳು ಸಹಜವಾಗಿಯೇ ನಾನಾ ಅನುಮಾನಗಳಿಗೂ ಕಾರಣವಾಗಿವೆ. ಈ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ “ನೇರಾ-ನೇರ’ ಮಾತಿಗಿಳಿದಾಗ.

ರಾಜ್ಯದಲ್ಲಿ ಏನಾಗುತ್ತಿದೆ?
         ನೀವು ಯಾವ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದೀರಿ ಎಂಬುದು ಗೊತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಕೇಳುತ್ತಿದ್ದೀರಿ. ರಾಜ್ಯದ ಗೃಹ ಸಚಿವನಾಗಿ ಹೇಳುತ್ತಿ ದ್ದೇನೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಹೊನ್ನಾ ವರ ಘಟನೆ ಸಣ್ಣ ವಿಚಾರ. ಆದರೆ, ಅದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ  ಲೇಪಿಸಿ ರಾದ್ಧಾಂತ ಸೃಷ್ಟಿಸುತ್ತಿದ್ದಾರೆ.

ಹಿಂದೆ ಕಲ್ಲಡ್ಕ ಪ್ರಕರಣದಲ್ಲೂ ಇದೇ ರೀತಿ ನೀವು ಆರೋಪಿಸಿದ್ದೀರಿ?
         ಹೌದು, ಅದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಬಿಜೆಪಿಯವರು ಹಾಗೂ ಅದರ ಅಂಗ ಸಂಸ್ಥೆಗಳಾದ ವಿಎಚ್‌ಪಿ, ಆರ್‌ಎಸ್‌ಎಸ್‌, ಭಜರಂಗದಳದ ಪ್ರಚೋದನಕಾರಿ ಹೇಳಿಕೆಗಳಿಂದಲೇ ಇಂದು ಕರಾವಳಿ ಭಾಗದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾ ಗುತ್ತಿದೆ. ಅಭಿವೃದ್ಧಿ, ರೈತಾಪಿ ವರ್ಗ ಸೇರಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ.  

ಬಿಜೆಪಿ-ಕಾಂಗ್ರೆಸ್‌ ಜಗಳದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರಲ್ಲಾ?
        ಅದನ್ನೇ ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಸಾವು ಯಾವುದೇ ಕಾರಣಕ್ಕೂ ಎಂತಹದೇ ಪರಿಸ್ಥಿತಿಯಲ್ಲೂ ಒಪ್ಪತಕ್ಕದ್ದಲ್ಲ. ಅಮಾಯಕರ ಜೀವದ ಜತೆ ಚೆಲ್ಲಾಟವಾಡ ಬೇಡಿ ಎಂದು ಹೇಳುತ್ತಲೇ ಇದ್ದೇವೆ. ಸರ್ಕಾರ ನಡೆಸುವ ನಮಗೆ ಜವಾಬ್ದಾರಿ ಇರುವುದಿಲ್ಲವೇ? ಇವರು ಕೇಳಿದ್ದಕ್ಕೆಲ್ಲಾ, ಮಾಡಿದ್ದಕ್ಕೆಲ್ಲಾ ಒಪ್ಪಿಗೆ ಕೊಡಲು ಸಾಧ್ಯವಾ?

ನಿಮ್ಮ ಮಾತಿನ ಅರ್ಥ?
        ಹಿಂದೆ ಕಲ್ಲಡ್ಕ ಪ್ರಕರಣದಲ್ಲೂ ಬೇಕಂತಲೇ ಪ್ರಚೋದನೆ ಮಾಡಿದರು. ಆ ನಂತರ ಬೈಕ್‌ ರ್ಯಾಲಿ ಎಂದು ಕಿರಿಕಿರಿ ಮಾಡಲು ಹೊರಟರು. ಯಾರು ಎಲ್ಲಿ ಹೋಗುತ್ತಾರೆ ಎಂಬ ಮಾಹಿತಿಯೇ ಕೊಡಲಿಲ್ಲ. ಹೀಗಾಗಿ, ಅದಕ್ಕೆ ಅವಕಾಶ ಕೊಡಲಿಲ್ಲ. ಅದನ್ನೇ ದೊಡ್ಡದು ಮಾಡಿ ಸರ್ಕಾರದ ವಿರುದ್ಧ ಬಿಜೆಪಿ ಪರ ಸಂಘಟನೆ ಗಳನ್ನು ಎತ್ತಿ ಕಟ್ಟಿದರು. ವಿಧಾನಸಭೆ ಚುನಾವಣೆ ಹತ್ತಿರವಾ ಗುತ್ತಿದ್ದಂತೆ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಹೀಗಾಗಿ, ಅವರ ಮೇಲೆ ಅನುಮಾನ ಮೂಡುವುದು ಸಹಜವಲ್ಲವೇ?

ರಾಜ್ಯ ಸರ್ಕಾರ ಹಿಂದೂಪರ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆಯಲ್ಲಾ?
          ನೋಡಿ, ಬಿಜೆಪಿಯವರದ್ದು ಗೊಬೆಲ್ಸ್‌ ಥಿಯೆರಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಿಸುವ ಸಂಸ್ಕೃತಿ. ಯಾವುದೇ ಘಟನೆ ತನಿಖೆ ನಡೆದು ಸತ್ಯಾಂಶ ಹೊರಗೆ ಬಂದು ಆರೋಪಿಗಳಿಗೆ ಶಿಕ್ಷೆಯಾಗುವುದು ಅವರಿಗೆ ಖಂಡಿತ ಬೇಕಿಲ್ಲ. ತತ್‌ಕ್ಷಣಕ್ಕೆ ರಾಜಕೀಯ ಲಾಭ ಅವರಿಗೆ ಬೇಕಿದೆ. ಅದಕ್ಕಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಅವರು ಎಕ್ಸ್‌ ಪರ್ಟ್‌ ಸಹ. ಸಂವಿಧಾನ, ನ್ಯಾಯಾಂಗ, ಪೊಲೀಸ್‌ ವ್ಯವಸ್ಥೆ ಬಗ್ಗೆಯೇ ನಂಬಿಕೆ ಇಲ್ಲದಂತೆ ವರ್ತಿಸಿದರೆ ಏನು ಹೇಳಬೇಕು.

ಬಿಜೆಪಿಯತ್ತ ಕೈ ತೋರಿಸಿ ರಾಜ್ಯ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆಯಾ?
         ಇಲ್ಲ, ನಾವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿಲ್ಲ. ಒಂದು ಸರ್ಕಾರವಾಗಿ ರಾಜ್ಯದ ಎಲ್ಲ ಜನರ ಶಾಂತಿ-ಸುವ್ಯವಸ್ಥೆ, ಭದ್ರತೆ ಕಾಪಾಡುವುದು ನಮ್ಮ ಕರ್ತವ್ಯ. ಆ ಕೆಲಸವನ್ನೇ ನಾವು ಮಾಡುತ್ತಿದ್ದೇವೆ. ಆದರೆ, ಬಿಜೆಪಿಯವರಿಗೆ ಇದು ಬೇಕಿಲ್ಲ, ಒಂದು ಸಣ್ಣ ಘಟನೆ ನಡೆದರೂ ಅದಕ್ಕೆ ಬೇರೆ ಸ್ವರೂಪ ಕೊಡ್ತಾರೆ. ಯಾರೇ ಕೊಲೆಯಾದರೂ ಹಿಂದೂ ಕಾರ್ಯಕರ್ತ ಎಂದು ಬೊಬ್ಬೆ ಹಾಕುತ್ತಾರೆ. ಬಿಜೆಪಿಯವರೇನು ಹಿಂದೂಗ ಳನ್ನು ದತ್ತು ತೆಗೆದುಕೊಂಡಿದ್ದಾರಾ? ನಾವೆಲ್ಲರೂ ಹಿಂದೂ ಗಳಲ್ಲವಾ? ಹಿಂದೂಪರ ಸಂಘಟನೆ ಅಂತ ಹೇಳುವುದು ಬೇಡ, ಬಿಜೆಪಿ ಪರ ಸಂಘಟನೆ ಅಂತ ಕರೆದುಕೊಳ್ಳಲಿ.

ಆಯ್ತು, ಬಿಜೆಪಿ ಅಥವಾ ಬಿಜೆಪಿ ಪರ ಸಂಘಟನೆಗಳೇ ಅಶಾಂತಿ ಮೂಡಿಸುತ್ತಿವೆ ಎಂಬುದಕ್ಕೆ ನಿಮ್ಮಲ್ಲಿ ಏನಿದೆ ಪುರಾವೆ?
         ಸಂಸದ ಪ್ರತಾಪ ಸಿಂಹ ಅವರ ವಿಡಿಯೋ ನೋಡಿದ್ದೀರಾ? ಅವರು ಒಬ್ಬ ಆರ್ಡಿನರಿ ವ್ಯಕ್ತಿಯಲ್ಲ. ಒಂದು ಕ್ಷೇತ್ರದ ಸಂಸದ. ಅವರ ವಿಡಿಯೋದಲ್ಲೇನಿದೆ. ಕೇಂದ್ರದ ಬಿಜೆಪಿ ನಾಯಕರೇ ಫ‌ರ್ಮಾನು ಹೊರಡಿಸಿ ಮಾಡಿಸಿದಂತಿಲ್ಲವೇ? ಸಂಸದರಾದ ನಳಿನ್‌ಕುಮಾರ್‌ ಕಟೀಲು, ಶೋಭ ಕರಂದ್ಲಾಜೆ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಹೇಳಿಕೆ, ನಡವಳಿಕೆ ಗಮನಿಸಿದರೆ ಬಿಜೆಪಿಯವರ ಉದ್ದೇಶ ಏನು ಎಂಬುದು ಸಾಮಾನ್ಯ ವ್ಯಕ್ತಿಗೂ ಗೊತ್ತಾಗುತ್ತದೆ.

ನಿಮ್ಮ ವೈಫ‌ಲ್ಯ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ ಎಂಬ ಮಾತಿದೆಯಲ್ಲಾ?
          ನಮ್ಮ ವೈಫ‌ಲ್ಯ ಎಲ್ಲಿದೆ ಹೇಳಿ? ಯಾವುದೇ ಪ್ರಕರಣ ನಡೆದಾಗ ಎಫ್ಐಆರ್‌ ಹಾಕಿಲ್ಲವಾ? ತನಿಖೆ ನಡೆಸಿಲ್ಲವಾ? ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿಲ್ಲವಾ? ಇವೆಲ್ಲವೂ ಬಿಜೆಪಿಯವರಿಗೆ ಬೇಡವಾಗಿದೆ. ರಾಜ್ಯದ ಜನತೆ ಸೂಕ್ಷ್ಮ ಹಾಗೂ ಸಂವೇದನೆ ಉಳ್ಳವರು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲೇ ಇಂತಹ ಕೃತ್ಯಗಳು ನಡೆಯುತ್ತಿರುವುದರ ಹಿಂದೆ ಯಾರ ಪ್ರಚೋದನೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲರು. ಬಿಜೆಪಿ ನಾಯಕರು ಬೇಕಂತಲೇ ಆ ಭಾಗದ ಸಂಸದರು, ಶಾಸಕರನ್ನು ಹಿಂದುತ್ವ ಹೆಸರಿನಲ್ಲಿ ಬೆಂಕಿ ಹಚ್ಚಲು ಬಿಟ್ಟಿದ್ದಾರೆ. ಪರೇಶ್‌ ಮೇಸ್ತ ಹತ್ಯೆ ಪ್ರಕರಣ ನೆಪವಷ್ಟೇ.

ಪರೇಶ್‌ ಮೇಸ್ತ  ಮುಖಕ್ಕೆ ಕಾದ ಎಣ್ಣೆ ಹಾಕಿ ವಿಕಾರಗೊಳಿಸಲಾಗಿದೆ. ಕೈ ಮೇಲಿದ್ದ ಜೈ ಶ್ರೀರಾಮ್‌ ಹಚ್ಚೆ ಕೆತ್ತಿ ವಿರೂಪಗೊಳಿಸಲಾಗಿದೆ ಎಂಬ ಆರೋಪ ಇದೆಯಲ್ಲಾ?
         ಪ್ರಕರಣದಲ್ಲಿ ಯಾರದೇ ಕೈವಾಡ ಇದ್ದರೂ ಯಾರೇ ಭಾಗಿ ಯಾಗಿದ್ದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವ ರೀತಿಯ ತನಿಖೆ ನಡೆಸಲೂ ಸಿದ್ಧ. ಆದರೆ, ಎಲ್ಲವೂ ತಾವೇ ನೋಡಿದಂತೆ ಬಿಂಬಿಸಿ ಜನರಲ್ಲಿ ಸುಳ್ಳು ವದಂತಿ ಹಬ್ಬಿಸುವುದು ಸರಿಯಲ್ಲ. ಬಿಜೆಪಿಯವರು ಆರೋಪಿಗಳ ಬಂಧನಕ್ಕೆ ಒತ್ತಾಯಿಸುವ ಬದಲು ಬೇರೆ ಏನೇನೋ ಕೆದಕುತ್ತಿದ್ದಾರೆ. ಕಿತಾಪತಿ ಮಾಡೋದೆ ಇವರ ಕೆಲಸ, ಬಿಜೆಪಿಯವರಿಗೆ ಕನಿಷ್ಠ ಕಾಮನ್‌ಸೆನ್ಸ್‌ ಸಹ ಇಲ್ಲ.

ಬಿಜೆಪಿಯವರನ್ನು ನೀವು ಐಸಿಸ್‌ ಉಗ್ರರಿಗೆ ಹೋಲಿಕೆ ಮಾಡಿದ್ದು ಎಷ್ಟು ಸರಿ?
         ಬಿಜೆಪಿಯವರು ಐದು ವರ್ಷ ಅಧಿಕಾರ ನಡೆಸಿದವರು. ಸೂಕ್ಷ್ಮ ವಿಚಾರಗಳಲ್ಲಿ ಒಂದೊಂದು ಹೇಳಿಕೆಯೂ ಯಾವ್ಯಾವ ಸ್ವರೂಪ ಪಡೆಯಬಲ್ಲದು ಎಂಬುದು ಅವರಿಗೂ ಗೊತ್ತಿದೆ. ಆದರೆ, ಇತ್ತೀಚೆಗೆ ಹತಾಶರಾಗಿರುವ ಬಿಜೆಪಿಯವರ ವರ್ತನೆ ನೋಡಿ ಬೇಸರಗೊಂಡು ಆ ಮಾತು ಹೇಳಿದ್ದೇನೆ. ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ನಾವೆಲ್ಲರೂ ಕುಟುಂಬ, ಬಳಗ ಹೊಂದಿದ್ದೇವೆ. ಮೊದಲು ರಾಜ್ಯದ ಜನರ ಹಿತದೃಷ್ಟಿ ನಮಗೆ ಮುಖ್ಯವಾಗಬೇಕು, ರಾಜಕಾರಣ ಆ ನಂತರ. ಸಮಾಧಿ ಮೇಲೆ ರಾಜಕಾರಣ ಮಾಡುವವರ ಬಗ್ಗೆ ಏನಂತ ಹೇಳಬೇಕು. 

ಬಿಜೆಪಿ ವಿರುದ್ಧ ಆರೋಪ ಮಾಡುವ ಮೂಲಕ ನೀವೂ ರಾಜಕೀಯ ಲಾಭಕ್ಕೆ ಮುಂದಾಗಿದ್ದೀರಿ ಎಂಬ ಆರೋಪವಿದೆಯಲ್ಲಾ?
         ಖಂಡಿತ ಇಲ್ಲ. ಸಾವಿನಲ್ಲಿ ರಾಜಕಾರಣ ಕಾಂಗ್ರೆಸ್‌ ಸಂಸ್ಕೃತಿ ಯಲ್ಲವೇ ಅಲ್ಲ. ಬಿಜೆಪಿಯವರು ರಾಜ್ಯದ ಜನರ ಹಿತಾಸಕ್ತಿ ವಿಚಾರದಲ್ಲಿ ಇಂತಹ ಹೋರಾಟ ಮಾಡಿದ್ದಾರಾ? ಕಾವೇರಿ, ಮಹದಾಯಿ, ರೈತರ ಸಾಲ ಮನ್ನಾ ಬಗ್ಗೆ ಧ್ವನಿ ಎತ್ತಿದ್ದಾರಾ? ಒಂದು ಕೊಲೆಯಾದ ತಕ್ಷಣ ಹಿಂದೂ ಕಾರ್ಯಕರ್ತ ಎಂದು ಲೇಬಲ್‌ ಅಂಟಿಸಿ ಹೋರಾಟಕ್ಕಿಳಿಯುತ್ತಾರೆ. ಅದನ್ನು ಜನರಿಗೆ ನಾವು ತಿಳಿಸಬೇಕಲ್ಲ, ಇಲ್ಲದಿದ್ದರೆ ಅವರ ಗೋಸುಂಬೆತನ ಗೊತ್ತಾಗುವುದು ಹೇಗೆ.

ನೀವು ಗೃಹ ಸಚಿವರಾದ ನಂತರ ಸವಾಲುಗಳೇ ಎದುರಾಗುತ್ತಿವೆಯಲ್ಲಾ?
       ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದೇನೆ. ಗೃಹ ಸಚಿವ ಸ್ಥಾನ ಎಂದರೇನೇ ಸವಾಲು. ಸಿಎಂ ಸಿದ್ದರಾಮಯ್ಯ ನವರು ನಂಬಿಕೆಯಿಂದ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತಿದ್ದೇನೆ. ಟಿಪ್ಪು ಜಯಂತಿ, ದತ್ತ ಜಯಂತಿ ಸಂದರ್ಭದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಯಿತು. ಅದೆಲ್ಲವನ್ನೂ ಹತ್ತಿಕ್ಕಲಾಯಿತು.

ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯೇ ಆಗಿಲ್ಲವಲ್ಲಾ?
       ಆ ಪ್ರಕರಣದ ತನಿಖೆ ನಡೆಯುತ್ತಿದೆ. ಸಾಕಷ್ಟು ಸಾಕ್ಷಿ ಪುರಾವೆ ಸಿಕ್ಕಿದೆ. ಆದಷ್ಟೂ ಶೀಘ್ರ ಹಂತಕರನ್ನು ಬಂಧಿಸುತ್ತೇವೆ. ಎಲ್ಲದರ ಮಾಹಿತಿ ಕೊಡಲಾಗದು.

ಗೃಹ ಇಲಾಖೆ ಕೆಂಪಯ್ಯ ನಿಯಂತ್ರಣದಲ್ಲಿದೆ. ರಾಮಲಿಂಗಾರೆಡ್ಡಿ ನಾಮ್‌ಕಾವಾಸ್ತೆ ಸಚಿವರು ಅಂತಾರಲ್ಲಾ?
       ಅದೆಲ್ಲವೂ ಸುಳ್ಳು. ಅವರು ಸಲಹೆಗಾರರಾಗಿ ಸಲಹೆ ಕೊಡ್ತಾರೆ ಅಷ್ಟೇ. ನಾನು ರಾಜಕಾರಣಕ್ಕೆ ಹೊಸಬನಲ್ಲ, ಹಲವು ಮುಖ್ಯಮಂತ್ರಿಗಳ ಜತೆ ನಾನಾ ಖಾತೆಗಳಲ್ಲಿ ಕೆಲಸ ಮಾಡಿದ್ದೇನೆ. ಗೃಹ ಇಲಾಖೆ ನಿಭಾಯಿಸುವ ಸಾಮರ್ಥ್ಯವೂ ನನ್ನಲ್ಲಿದೆ. ನಾನು ನೋಡಲು ಮೃದು, ಆದರೆ, ಹೊಣೆಗಾರಿಕೆ ವಿಚಾರದಲ್ಲಿ ನನ್ನ ನಿರ್ಧಾರ ಕಠಿಣವಾಗಿರುತ್ತದೆ. ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿವೆಯಷ್ಟೇ.

ಆಯ್ತು, ರಾಜಕಾರಣ ವಿಚಾರಕ್ಕೆ ಬಂದರೆ ನೀವು ಸಿದ್ದರಾಮಯ್ಯ ಅವರ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೀರೋ, ಪರಮೇಶ್ವರ್‌ ಯಾತ್ರೆಯಲ್ಲೋ?
     ಎರಡರಲ್ಲೂ ಪಾಲ್ಗೊಳ್ಳುವುದಿಲ್ಲ. ನಮ್ಮ ಇಲಾಖೆಯ ಯೋಜನೆ-ಕಾರ್ಯಕ್ರಮ ಇದ್ದರೆ ಹೋಗ್ತೀನೆ. ನನ್ನದೇನಿದ್ದರೂ ಬೆಂಗಳೂರು ಹಾಗೂ ನನಗೆ ಉಸ್ತುವಾರಿ ವಹಿಸಿರುವ ಚಿಕ್ಕಬಳ್ಳಾಪುರದ ಬಗ್ಗೆ ಹೆಚ್ಚು ಆದ್ಯತೆ.

ಬೆಂಗಳೂರಿನಲ್ಲಿ ಕಾಂಗ್ರೆಸ್‌ ಈಗಿರುವ ಸ್ಥಾನ ಉಳಿಸಿಕೊಳ್ಳುತ್ತಾ?
     ಜಯನಗರ, ಚಾಮರಾಜಪೇಟೆ, ಪುಲಿಕೇಶಿನಗರ, ಹೆಬ್ಟಾಳ ಸೇರಿ ಇನ್ನೂ ನಾಲ್ಕರಿಂದ ಐದು ಸೀಟು ಹೆಚ್ಚಾಗುತ್ತದೆ. ನೋಡ್ತಾ ಇರಿ.

ನಿಮ್ಮ ಮಗಳು ಸೌಮ್ಯ ರೆಡ್ಡಿ ಜಯನಗರದಲ್ಲಿ ಸ್ಪರ್ಧೆ ಮಾಡ್ತಾರಾ?
     ಹೌದು. ಟಿಕೆಟ್‌ ಆಕಾಂಕ್ಷಿಯಾಗಿದ್ದು, ಪಕ್ಷದ ನಾಯಕರು ಪೂರ ಕವಾಗಿ ಸ್ಪಂದಿಸಿದ್ದಾರೆ. ಟಿಕೆಟ್‌ ದೊರೆಯುವ ವಿಶ್ವಾಸವಿದೆ.

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಪ್ರತ್ಯೇಕ ಯಾತ್ರೆ ಬೇಕಿತ್ತಾ?
     ಅದರಲ್ಲಿ ತಪ್ಪೇನು? ಸರ್ಕಾರದ ಸಾಧನೆ ಮುಖ್ಯಮಂತ್ರಿ ಹೇಳ್ತಾರೆ, ಪಕ್ಷದ ಕಾರ್ಯಕ್ರಮಗಳನ್ನು ಅಧ್ಯಕ್ಷರು ಜನರ ಮುಂದಿಡ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸದೃಢವಾಗಿದೆ. ನಮ್ಮ ಐದು ವರ್ಷದ ಕಾರ್ಯಕ್ರಮಗಳನ್ನು ಒಪ್ಪಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ, ಇದೆಲ್ಲವೂ ಬಿಜೆಪಿ ಹೊಟ್ಟೆ ಉರಿಗೆ ಕಾರಣವಾಗಿದೆ. ಸರ್ಕಾರದ ಬಗ್ಗೆ ಮಾತನಾಡಲು ಏನೂ ಸಿಕ್ಕಿಲ್ಲ ಎಂದು ಸಣ್ಣಪುಟ್ಟ ವಿಚಾರದಲ್ಲಿ ಗಲಭೆ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ.

ಟೆನ್ಶನ್‌ ಶುರುವಾಗಿದೆ
ಕೇಂದ್ರ ಗುಪ್ತಚರ ವರದಿ ಪ್ರಕಾರವೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 65-70 ಸೀಟು ಗೆಲ್ಲುವುದು ಅನುಮಾನ ಎಂಬ ವರದಿ ಬಂದಿದೆ. ಜತೆಗೆ ಇತ್ತೀಚೆಗೆ ಮುಖ್ಯಮಂತ್ರಿಯವರು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಂಡಿದ್ದಾಗ ಸೇರಿದ್ದ ಜನಸ್ತೋಮ ನೋಡಿ ಬಿಜೆಪಿಯವರಿಗೆ ಟೆನ್ಶನ್‌ ಶುರುವಾಗಿದೆ. ಹೀಗಾಗಿ, ಏನಾದರೂ ಮಾಡಿ ಹಿಂದೂ-ಮುಸ್ಲಿಂ ಎಂದು ಕೋಮು ಪ್ರಚೋದನೆ ಮಾಡಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ವ್ಯವಸ್ಥಿತ ತಂತ್ರ ರೂಪಿಸಿ ಹೊರಟಿದ್ದಾರೆ. ಆದರೆ, ಅದು ಅವರ ಭ್ರಮೆ. ಜನರಿಗೆ ಇವರ ದೊಂಬರಾಟ ಅರ್ಥವಾಗುತ್ತದೆ.  

ಬಿಜೆಪಿಯವರದ್ದು ಗೊಬೆಲ್ಸ್‌ ಥಿಯೆರಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಿಸುವ ಸಂಸ್ಕೃತಿ. ಯಾವುದೇ ಘಟನೆ ತನಿಖೆ ನಡೆದು ಸತ್ಯಾಂಶ ಹೊರಗೆ ಬಂದು ಆರೋಪಿಗಳಿಗೆ ಶಿಕ್ಷೆಯಾಗುವುದು ಅವರಿಗೆ ಖಂಡಿತ ಬೇಕಿಲ್ಲ. ತತ್‌ಕ್ಷಣಕ್ಕೆ ರಾಜಕೀಯ ಲಾಭ ಅವರಿಗೆ ಬೇಕಿದೆ.
– ರಾಮಲಿಂಗಾರೆಡ್ಡಿ 
ಗೃಹ ಸಚಿವರು

– ಸಂದರ್ಶನ ಎಸ್‌.ಲಕ್ಷ್ಮಿನಾರಾಯಣ 

ಟಾಪ್ ನ್ಯೂಸ್

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.