ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು
ಕುಟುಂಬ ನೋಡಿ ಅಲ್ಲ, ಸಾಧನೆ ನೋಡಿ ಬಿಜೆಪಿ ಟಿಕೆಟ್ ಕೊಟ್ಟಿದೆ
Team Udayavani, Mar 20, 2024, 7:00 AM IST
ನಾನು ರಾಜಕೀಯ ಕ್ಷೇತ್ರವನ್ನು ಹುಡುಕಿಕೊಂಡು ಹೋದವನಲ್ಲ. ರಾಜಕೀಯ ಕ್ಷೇತ್ರವೇ ನನ್ನನ್ನು ಹುಡು ಕಿ ಕೊಂಡು ಬಂದಿದೆ. ನನ್ನ ಸೇವೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲು ಸಾಮಾನ್ಯ ಜನರಿಂದ ಹಿಡಿದು ಹಿತೈಷಿಗಳು, ಕುಟುಂಬದವರ ಸಲಹೆ ಮೇರೆಗೆ ರಾಜಕಾರಣವನ್ನು ಒಪ್ಪಿಕೊಂಡಿದ್ದೇನೆ. ನನ್ನ ಅರ್ಹತೆ ಗುರುತಿಸಿ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ನೀಡಿದೆ. ಈಗಷ್ಟೇ ಪ್ರಚಾರಕ್ಕಿಳಿದಿದ್ದೇನೆ. ಪರಿಸ್ಥಿತಿಗಳು ಹೇಗೆ ಬರುತ್ತವೋ ಹಾಗೆ ಎದುರಿಸಲು ಸಿದ್ಧನಿದ್ದೇನೆ.
ಇವಿಷ್ಟೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ| ಸಿ.ಎನ್. ಮಂಜುನಾಥ್ ಅವರ ಮಾತುಗಳು.
ಸತತ 40 ವರ್ಷಗಳ ವೈದ್ಯಕೀಯ ವೃತ್ತಿಜೀ ವನ ದಿಂದ ರಾಜಕಾರಣದತ್ತ ಹೆಜ್ಜೆ ಇಟ್ಟಿರುವ ಡಾ| ಸಿ.ಎನ್. ಮಂಜುನಾಥ್, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನ ಕೇಂದ್ರದ ನಿರ್ದೇಶಕರಾಗಿ 18 ವರ್ಷ ಸೇವೆ ಸಲ್ಲಿಸಿದ ಅನುಭವವನ್ನೂ ಹೊಂದಿದ್ದಾರೆ. ಬಡರೋ ಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿದ್ದಷ್ಟೇ ಅಲ್ಲದೆ, ನಿರ್ದೇಶಕರಾಗಿ ಆಸ್ಪತ್ರೆ ಯಲ್ಲೂ ಅನೇಕ ಸುಧಾರಣೆಗಳನ್ನು ತಂದ ಚಿಕಿತ್ಸಕ ಗುಣ ಹೊಂದಿದವರು. ನಿವೃತ್ತಿಯ ಅನಂತರ ರಾಜಕೀಯ ಕ್ಷೇತ್ರವನ್ನು ಆಯ್ದು ಕೊಂಡಿದ್ದು, ತಮ್ಮ ಮುಂದಿನ ದಾರಿಯ ಬಗ್ಗೆ “ನೇರಾನೇರ’ ಮಾತನಾಡಿದ್ದಾರೆ.
– ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಅನಂತರ ಈಗ ರಾಜಕೀಯ ರಂಗವನ್ನು ಪ್ರವೇಶಿಸಿದ್ದೀರಿ, ಹೇಗನ್ನಿಸುತ್ತಿದೆ?
ರಾಜಕೀಯ ಕ್ಷೇತ್ರವು ವೈದ್ಯಕೀಯ ಕ್ಷೇತ್ರಕ್ಕಿಂತ ಇದು ಖಂಡಿತವಾಗಿಯೂ ವಿಭಿನ್ನ ಕ್ಷೇತ್ರ. ವೈದ್ಯಕೀಯ ಕ್ಷೇತ್ರದಲ್ಲಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿದ್ದೇನೆ. ಅದೂ ಒಂದು ರೀತಿಯ ಸಾಮಾಜಿಕ ಸೇವೆಯೇ. ಆಗಿನಿಂದಲೇ ನಾನು ಸಾಮಾಜಿಕ ಸೇವೆಯಲ್ಲಿದ್ದೇನೆ. ಜಯದೇವ ಆಸ್ಪತ್ರೆಯಲ್ಲಿ ನನ್ನ ಸೇವಾ ಅವಧಿ ಪೂರ್ಣ ಗೊಂಡ ಬಳಿಕ ನನ್ನ ಹಿತೈಷಿಗಳನೇಕರು ರಾಜಕೀ ಯ ಪ್ರವೇಶಿಸುವ ಮೂಲಕ ನಿಮ್ಮ ಸೇವೆಯನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸಿ ಎನ್ನುವ ಒತ್ತಾಸೆ ಯನ್ನಿಟ್ಟರು.
– ವೃತ್ತಿಪರರಾಗಿದ್ದ ತಮಗೆ ರಾಜಕೀಯ ಕ್ಷೇತ್ರಕ್ಕೆ ಸೇರುವ ಬಗ್ಗೆ ನಿರ್ಧಾರಕ್ಕೆ ಬರುವುದು ಸುಲಭ ಎನ್ನಿಸಿತೇ?
ರಾಜಕೀಯಕ್ಕೆ ಬರಬೇಕೇ ಬೇಡವೇ ಎಂಬ ನಿರ್ಣಯ ತೆಗೆದುಕೊಳ್ಳಲು ಸುಮಾರು ಒಂದು ವಾರ ತೆಗೆದುಕೊಂಡೆ. ಸಾಕಷ್ಟು ಗೊಂದಲವನ್ನು ಅನುಭವಿಸಿದೆ. ಎಲ್ಲಕ್ಕೂ ಮಿಗಿಲಾಗಿ, ನಾನು ರಾಜಕೀಯ ಕ್ಷೇತ್ರವನ್ನು ಹುಡುಕಿಕೊಂಡು ಹೋದವನಲ್ಲ. ಬಹುಶಃ ರಾಜಕೀಯ ಕ್ಷೇತ್ರವೇ ನನ್ನನ್ನು ಹುಡುಕಿ ಕೊಂಡು ಬಂದಿದೆ. ನನ್ನ ಸೇವಾನುಭವ ಬಳಸಿಕೊಳ್ಳಬೇಕೆಂದು ಇಲ್ಲಿಗೆ ಬಂದಿ ದ್ದೇನೆ.
– ಈಗ ಚುನಾವಣ ಕಣಕ್ಕೆ ಇಳಿದಿದ್ದೀರಿ. ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿದೆ?
ನಾನು ಪ್ರಚಾರಕ್ಕೆ ಹೋದಲ್ಲೆಲ್ಲ ಜನರು ಉತ್ಸುಕರಾಗಿರುವುದನ್ನು ಗಮನಿಸಿದ್ದೇನೆ. ರಾಜಕೀಯಕ್ಕೆ ಬಂದಿದ್ದನ್ನು ಸ್ವಾಗತಿಸುತ್ತಿದ್ದಾರೆ. ಮತ ಹಾಕಲು ಖುಷಿಯಾಗುತ್ತಿದೆ ಎನ್ನುತ್ತಾರೆ. ನಮ್ಮ ಆತ್ಮವಿಶ್ವಾಸ ಹೆಚ್ಚಿದೆ. ಗೆಲ್ಲುವ ವಿಶ್ವಾಸವಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ನಿಸ್ವಾರ್ಥ ಸೇವೆ ಮಾಡಿದ್ದೀರಿ, ನಿಮ್ಮ ಋಣ ತೀರಿಸಲು ಇದೊಂದು ಅವಕಾಶ ಎಂದು ಅನೇಕರು ನನಗೆ ಹೇಳಿದ್ದಾರೆ.
– ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ದರೆ ಇಡೀ ರಾಷ್ಟ್ರಕ್ಕೆ ಸೇವೆ ವಿಸ್ತರಿಸಲು ಹೇಗೆ ಸಾಧ್ಯ?
ಸರಕಾರಿ ಸ್ವಾಯತ್ತ ಆಸ್ಪತ್ರೆಯೊಂದನ್ನು ಅಂತಾ ರಾಷ್ಟ್ರೀಯ ಮಾನ್ಯತೆಯ ಪಂಚತಾರಾ ಖಾಸಗಿ ಆಸ್ಪತ್ರೆ ದರ್ಜೆಗೆ ಕೊಂಡೊಯ್ದಿದ್ದೇನೆ. ಕೈಗೆಟಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸೆ ಕೊಡಲು ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದೇನೆ. ಇಂಥ ಕೆಲಸಕ್ಕೆ ಅವಕಾಶ ಕೊಟ್ಟರೆ ರಾಷ್ಟ್ರೀಯ ಮಟ್ಟದಲ್ಲೂ ಮಾಡಿ ತೋರಿಸಬಹುದು ಎನ್ನುವುದು ನನ್ನ ಆಸೆ.
– ಪಕ್ಷ ಅಥವಾ ರಾಜಕೀಯ ಸೇರುವಾಗ ಯಾವುದಾದರೂ ಷರತ್ತು ಹಾಕಿದ್ದೀರಾ?
ಯಾವುದೇ ಹುದ್ದೆಯ ಗುರಿ ಇಟ್ಟುಕೊಂಡು ಬಂದಿಲ್ಲ. ಹಾಗಾಗಿ ಯಾವುದೇ ಷರತ್ತುಗಳನ್ನು ಹಾಕುವ ಪ್ರಮೇಯವೇ ಇಲ್ಲ. ಮುಂದೆ ನನ್ನ ಸೇವೆಯನ್ನು ಯಾವ ರೀತಿಯಲ್ಲಿ ಬಳಸಿ ಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟಿದ್ದು.
– ರಾಜಕೀಯವಾಗಿ ನಿಮ್ಮ ಶಕ್ತಿ ಸಾಮರ್ಥ್ಯಗಳೇನು? ಸವಾಲುಗಳೇನು?
ಸವಾಲುಗಳ ಬಗ್ಗೆ ಈ ತನಕ ಯಾವುದೇ ಯೋಚನೆಯನ್ನೂ ಮಾಡಿಲ್ಲ. ಪ್ರಚಾರದ ಕ್ಷೇತ್ರಕಾರ್ಯಕ್ಕೆ ಈಗಷ್ಟೇ ಇಳಿದಿದ್ದೇನೆ. ಪರಿಸ್ಥಿತಿಗಳು ಹೇಗೆ ಬರುತ್ತವೋ ಹಾಗೆಯೇ ಎದುರಿಸಿಕೊಂಡು ಹೋಗಲು ಸಿದ್ಧನಿದ್ದೇನೆ.
– ಚುನಾವಣೆಗೆ ಕಾರ್ಯಕರ್ತರ ದೊಡ್ಡ ಪಡೆಯೇ ಬೇಕಾಗುತ್ತದೆ. ಹೇಗೆ ಹೊಂದಿಸಿಕೊಳ್ಳುತ್ತೀರಿ?
ನನಗೆ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಪಕ್ಷದ ಸಂಘಟನೆಯ ವ್ಯವಸ್ಥೆ ಇದೆ. ಕಾರ್ಯಕರ್ತರ ದೊಡ್ಡ ಕಾರ್ಯಪಡೆ ಇದೆ. ನನ್ನದೇ ಆದ ಸಂಪರ್ಕ ಜಾಲವಿದೆ. ಸಾಮಾನ್ಯ ಜನರು, ಹಿತೈಷಿ ಜನರ ಒತ್ತಡದಿಂದಲೇ ಸ್ಪರ್ಧಿಸಿದ್ದೇನೆ. ಪ್ರತೀ ಊರಿನಲ್ಲಿ 10-20 ಕುಟುಂಬಗಳು ನಮ್ಮಿಂದ ಅನುಕೂಲ ಪಡೆದ ವರಿದ್ದಾರೆ. ಚಿಕಿತ್ಸೆ ಪಡೆದು ಗುಣಮುಖರಾದ ಹೃದ್ರೋಗಿಗಳು, ಅವರ ಕುಟುಂಬದವರು ಕೂಡ ಬೇರೆ ಬೇರೆ ಭಾಗಗಳಿಂದ ಬಂದು ಸ್ವಯಂಪ್ರೇರಣೆಯಿಂದ ಪ್ರಚಾರ ಮಾಡುವ ಉತ್ಸಾಹ ತೋರುತ್ತಿರುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ನನಗೆ ಎರಡು ಪಕ್ಷಗಳ ಬಲ ಇರುವುದರಿಂದ ಉತ್ಸಾಹಿತನಾಗಿ ಕಣಕ್ಕಿಳಿ ದಿದ್ದೇನೆ. ವಿಶ್ವಾಸ ಮತ್ತು ಬದ್ಧತೆ ಇದ್ದರೆ ಯಾವುದೂ ಸಮಸ್ಯೆ ಆಗಲಾರದು.
– ನೀವೂ ಕೂಡ ದೇವೇಗೌಡರ ಅಳಿಯ. ಹಾಗಾಗಿ ನಿಮ್ಮ ಸ್ಪರ್ಧೆ ಕುಟುಂಬ ರಾಜಕಾರಣದ ಒಂದು ಭಾಗ ಎಂದು ವಿಪಕ್ಷಗಳು ಹೇಳುತ್ತಿವೆಯಲ್ಲವೇ?
ನನ್ನ ಸಾಧನೆ, ಅರ್ಹತೆಗಳನ್ನು ಗುರುತಿಸಿ ಬಿಜೆಪಿ ನನಗೆ ಟಿಕೆಟ್ ಕೊಟ್ಟಿದೆ. ದೇವೇಗೌಡರ ಕುಟುಂಬ ದಿಂದ ಬಂದವನಾದರೂ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಟ್ಟಿಲ್ಲ. ನಾನು ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಪರ್ಧಿ ಸುತ್ತಿದ್ದೇನೆ. ನಾನು ಸ್ಪರ್ಧಿಸಿರುವ ಪಕ್ಷ ಬೇರೆ, ನನ್ನ ಕುಟುಂಬದ ಹಿರಿಯರ ಪಕ್ಷವೇ ಬೇರೆ. ಇದಕ್ಕೆ ಸಂಬಂಧ ಕಲ್ಪಿಸುವುದು ಬೇಡ. ಎಷ್ಟೋ ಮಂದಿ ರಾಜಕೀಯ ಕ್ಷೇತ್ರದಲ್ಲಿ ಇಲ್ಲದಿದ್ದರೂ ಅವರವರ ಕ್ಷೇತ್ರದಲ್ಲಿನ ತಜ್ಞತೆ, ವಿಶೇಷ ವ್ಯಕ್ತಿತ್ವ, ಕೊಡುಗೆ ಗುರುತಿಸಿ ಕೊಟ್ಟಿ ರುವ ಉದಾಹರಣೆಗಳಿವೆ. ಅದೇ ರೀತಿ ನನ್ನ ಅರ್ಹತೆಯನ್ನೂ ಗುರುತಿಸಿ ಬಿಜೆಪಿ ಟಿಕೆಟ್ ಕೊಟ್ಟಿದೆ. ಟಿಕೆಟ್ ಘೋಷಣೆ ಬಳಿಕ ನಾನು ಬಿಜೆಪಿಯ ಯಾವುದೇ ನಾಯಕರನ್ನೂ ಭೇಟಿ ಮಾಡಿರಲಿಲ್ಲ. ಇತ್ತೀಚೆಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದೆ. ಮೊನ್ನೆ ಶಿವಮೊಗ್ಗದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ಅವರು, “ಹೇಗಿದ್ದೀರಿ’ ಎಂದು ಮಾತನಾ ಡಿಸಿದರು. ನನ್ನ ಗೆಲುವಿಗೆ ಅವರು ಶುಭ ಕೋರಿದ್ದಾರೆ.
– ಪ್ರಚಾರದ ವೇಳೆ ಜನರ ಮುಂದೆ ಯಾವ ವಿಷಯ ಪ್ರಸ್ತಾವಿಸುತ್ತೀರಿ?
ಜೆಡಿಎಸ್ ಹಾಗೂ ಬಿಜೆಪಿ ವರ್ಚಸ್ಸು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವ್ಯಕ್ತಿತ್ವ, ಮಾಜಿ ಸಿಎಂ ಯಡಿಯೂರಪ್ಪರ ಜನಪರ ಕೆಲಸ, ಎಚ್.ಡಿ. ಕುಮಾರಸ್ವಾಮಿ ಅವರ ಕೆಲಸಗಳು ಸೇರಿದಂತೆ ಅನೇಕರು ಮಾಡಿರುವ ಅಭಿವೃದ್ಧಿ ಕೆಲಸಗಳು, ಅವರ ಜನಪ್ರಿಯತೆ ನನಗೆ ಅನುಕೂಲ ವಾಗುತ್ತದೆ. ಎರಡೂ ಪಕ್ಷಗಳ ಕಾರ್ಯಕರ್ತರ ಬಲ ಇದೆ. ಇವೆಲ್ಲವೂ ಗಣನೆಗೆ ಬರಲಿದೆ. ಇವೆಲ್ಲವೂ ಒಟ್ಟಿಗೆ ಕೇಂದ್ರೀಕೃತವಾಗು ವುದರಿಂದ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ.
– ವೃತ್ತಿರಂಗದ ಅನುಭವಗಳು ರಾಜಕಾರಣದಲ್ಲಿ ಉಪಯೋಗಕ್ಕೆ ಬರಲಿವೆಯೇ?
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ನಾನು ವಿದೇಶಕ್ಕೆ ಹೋಗಿ ಹಣ ಸಂಪಾದಿಸಬಹುದಿತ್ತು. ಆದರೆ ಭಾರತದಲ್ಲೇ ಉಳಿದು ಬಡರೋಗಿಗಳಿಗೆ ಸ್ಪಂದಿಸಿದ್ದೇನೆ. ನಾನೊಬ್ಬ ವೈದ್ಯನಾಗಿ ಚಿಕಿತ್ಸೆ ನೀಡಿದ್ದೇನೆ, ಶಸ್ತ್ರಚಿಕಿತ್ಸೆ ಮಾಡಿದ್ದೇನೆ, ಬೋಧಕನ ಕೆಲಸ ಮಾಡಿದ್ದೇನೆ. ಜನರನ್ನು ಆಕರ್ಷಿಸುವ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಶೇಷ ಗುಣ ನನ್ನಲ್ಲಿದೆ. ಅದನ್ನು ನಾನು 40 ವರ್ಷಗಳ ನನ್ನ ವೈದ್ಯಕೀಯ ವೃತ್ತಿರಂಗದಲ್ಲಿ ಸಾಬೀತುಪಡಿ ಸಿದ್ದೇನೆ. ರಾಜಕಾರಣ ಕೂಡ ಸಾರ್ವಜನಿಕ ಸಮಾಜಸೇವೆಯ ಮತ್ತೂಂದು ರೂಪವಾಗಿರುವು ದರಿಂದ ಇಲ್ಲಿನ ಅನುಭವಗಳು ರಾಜಕಾರಣ ದಲ್ಲೂ ಉಪಯೋಗಕ್ಕೆ ಬರಲಿವೆ. ವಿಮಾನ ಚಾಲಕರಾಗಿದ್ದ ರಾಜೀವ್‌ಗಾಂಧಿ ಅವರು ದೇಶದ ಪ್ರಧಾನಿ ಆಗಿಲ್ಲವೇ? ವೈದ್ಯರಾಗಿದ್ದ ಬಿ.ಸಿ. ರಾಯ್ ಅವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿಲ್ಲವೇ? ಮೊದ-ಮೊದಲು ರಾಜಕಾರಣಕ್ಕೆ ಬಂದ ಯಾರಿಗೂ ರಾಜಕೀಯದ ಅನುಭವ ಇರುವುದಿಲ್ಲ.
ಸಂದರ್ಶನ : ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
Congress ಪಕ್ಷದಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.