ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ
Team Udayavani, Oct 30, 2020, 6:25 AM IST
ಇತರರ ನಷ್ಟದಿಂದ ನಾವು ಲಾಭಮಾಡಿಕೊಳ್ಳಬೇಕು ಎಂದು ಭಾರತ ಭಾವಿಸುವುದಿಲ್ಲ. ಸ್ವಂತ ಶಕ್ತಿಯ ಮೇಲೆಯೇ ನಮ್ಮ ದೇಶ ಜಾಗತಿಕ ಉತ್ಪಾದನಾ ಹಬ್ ಆಗುತ್ತದೆ. ಯಾವುದೋ ರಾಷ್ಟ್ರಕ್ಕೆ ಪರ್ಯಾಯವಾಗಬೇಕು ಎನ್ನುವುದು ನಮ್ಮ ಪ್ರಯತ್ನವಲ್ಲ, ಬದಲಾಗಿ, ಭಾರತವನ್ನು ಅನನ್ಯ ಅವಕಾಶಗಳನ್ನು ಒದಗಿಸುವ ರಾಷ್ಟ್ರವಾಗಿಸುವುದು ನಮ್ಮ ಪ್ರಯತ್ನ.
ಲಾಕ್‌ಡೌನ್ ಮೂಲಕ ಭಾರತವು ಕೋವಿಡ್ ವಿರುದ್ಧ ಸಮರ ಸಾರಿ 7 ತಿಂಗಳಾಗಿವೆ. ನಾವು ಸಾಗಿ ಬಂದ ದಾರಿಯ ಬಗ್ಗೆ ನಿಮ್ಮ ಮೌಲ್ಯಮಾಪನ ಹೇಗಿದೆ?
ಇದೊಂದು ಅಪರಿಚಿತ ವೈರಸ್ ಹಾಗೂ ಈ ರೀತಿ ಹಿಂದೆಂದೂ ಆಗಿರಲಿಲ್ಲ ಎನ್ನುವುದನ್ನು ನಾವೆಲ್ಲ ಒಪ್ಪುತ್ತೇವೆ ಎಂದು ಭಾವಿಸಿದ್ದೇನೆ. ಆದ್ದರಿಂದ, ಇಂಥ ನವ ಅಪರಿಚಿತ ಶತ್ರುವನ್ನು ಎದುರಿಸುವಾಗ, ನಮ್ಮ ಪ್ರತಿಕ್ರಿಯೆಯ ರೀತಿಯೂ ವಿಕಸನಗೊಳ್ಳುತ್ತಾ ಹೋಗುತ್ತದೆ. ನಾನೇನೂ ಆರೋಗ್ಯ ಪರಿಣತನಲ್ಲ. ಆದರೆ ನನ್ನ ಮೌಲ್ಯಮಾಪನವು ಅಂಕಿಸಂಖ್ಯೆಗಳನ್ನು ಆಧರಿಸಿದೆ. ಎಷ್ಟು ಜೀವಗಳನ್ನು ಉಳಿಸಲು ನಮಗೆ ಸಾಧ್ಯವಾಗಿದೆ ಎನ್ನುವುದರ ಮೇಲೆ ಕೋವಿಡ್ ವಿರುದ್ಧದ ಹೋರಾಟವನ್ನು ನಾವು ಮೌಲ್ಯ ಮಾಪನ ಮಾಡಬೇಕು. ಈ ವೈರಸ್ ಬಹಳ ಚಂಚಲ ಸ್ವಭಾವ ಹೊಂದಿದೆ ಎಂದು ಸಾಬೀತಾಗುತ್ತಿದೆ. ಒಂದು ಸಮಯದಲ್ಲಿ ಗುಜರಾತ್‌ನ ಕೆಲವು ಪ್ರದೇಶಗಳು ಹಾಟ್‌ಸ್ಪಾಟ್ ಆಗಿ ಬದಲಾಗಿದ್ದರೆ, ಕರ್ನಾಟಕ ಮತ್ತು ಕೇರಳದಂಥ ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ದ್ದಂತೆ ಗೋಚರಿಸಿತು. ಆದರೆ ಕೆಲವು ತಿಂಗಳ ನಂತರ ಗುಜರಾತ್‌ನಲ್ಲಿ ಸ್ಥಿತಿ ಸುಧಾರಿಸಿದರೆ, ಕೇರಳದಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಹೀಗಾಗಿ ನಾವು ನಿರಾತಂಕವಾಗಿ ಇರುವುದಕ್ಕೆ ಅವ ಕಾಶವೇ ಇಲ್ಲ. ದೇಶವನ್ನುದ್ದೇಶಿಸಿ ಅಕ್ಟೋಬರ್ 20 ರಂದು ಮಾಡಿದ ಭಾಷಣದಲ್ಲೂ ನಾನು ಈ ವಿಚಾರಕ್ಕೇ ಒತ್ತುಕೊಟ್ಟಿದ್ದೇನೆ. ಎಲ್ಲಿಯವರೆಗೂ ಔಷಧ ಸಿಗುವುದಿ ಲ್ಲವೋ, ಅಲ್ಲಿಯವರೆಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪರಿ ಪಾಲನೆಯೇ ನಮ್ಮ ಮುಂದಿರುವ ಏಕೈಕ ದಾರಿ ಎಂದು.
ಭಾರತದಲ್ಲಿ ಕೋವಿಡ್-19 ಪ್ರಸರಣದ ವಿಚಾರದಲ್ಲಿ ನಿಮ್ಮ ಅವಲೋಕನವೇನು?
ವೈರಸ್‌ನ ಆರಂಭಿಕ ಹಂತದಲ್ಲಿ ತೆಗೆದುಕೊಂಡ ಸಕ್ರಿಯ ಕ್ರಮಗಳಿಂದಾಗಿ, ಸಾಂಕ್ರಾಮಿಕದ ವಿರುದ್ಧದ ರಕ್ಷಣೆಗೆ ತಯಾರಿ ಮಾಡಿಕೊಳ್ಳಲು ಸಹಾಯವಾಗಿದೆ. ಆದಾಗ್ಯೂ, ಒಂದು ಸಾವೂ ಕೂಡ ಅತ್ಯಂತ ನೋವು ಕೊಡುವಂಥ ಸಂಗತಿಯಾದರೂ, ಭಾರತದಂಥ ಬೃಹತ್ ಹಾಗೂ ಮುಕ್ತ ಸಂಪರ್ಕ ಹೊಂದಿರುವ ರಾಷ್ಟ್ರದಲ್ಲಿ ಕೋವಿಡ್-19 ಮರಣ ಪ್ರಮಾಣ ಜಾಗತಿಕ ಸ್ತರದಲ್ಲಿ ಅತ್ಯಂತ ಕಡಿಮೆ ಇದೆ. ನಮ್ಮಲ್ಲಿ ಗುಣಮುಖರಾಗುತ್ತಿ ರುವವರ ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳು ಗಮನಾರ್ಹವಾಗಿ ಕುಸಿ ಯುತ್ತಿವೆ. ಸೆಪ್ಟೆಂಬರ್ ಮಧ್ಯಭಾಗಕ್ಕೆ ನಿತ್ಯ ಪ್ರಕರಣಗಳ ಸಂಖ್ಯೆ 97,894ರಷ್ಟು ಉತ್ತುಂಗ ತಲುಪಿತ್ತು, ಅಕ್ಟೋಬರ್ ಕೊನೆಯ ಭಾಗದಲ್ಲಿ ನಿತ್ಯ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೆ ಇಳಿದಿದೆ. ಇಡೀ ದೇಶವೇ “ಟೀಂ ಇಂಡಿಯಾ’ ಆಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ.
ನಿಮ್ಮ ಸರಕಾರ ಕೃಷಿ, ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತಂದಿದೆ. ದೇಶದಲ್ಲಿನ ಒಟ್ಟಾರೆ ಆರ್ಥಿಕ ಕುಸಿತ, ರಾಜಕೀಯ ವಿರೋಧಗಳ ಬೆಳಕಿನಲ್ಲಿ ನೋಡಿದಾಗ, ಈ ಉಪಕ್ರಮಗಳು ನಿರೀಕ್ಷಿತ ಆರ್ಥಿಕ ಲಾಭವನ್ನು ತಂದುಕೊಡ ಬಹುದು ಎಂಬ ಆಶಾವಾದವಿದೆಯೇ?
ಬಹಳ ಸಮಯದಿಂದಲೇ ಪರಿಣತರು ಈ ಆರ್ಥಿಕ ಸುಧಾರಣೆಗಳನ್ನು ತರಬೇಕೆಂದು ಪ್ರತಿಪಾದಿಸುತ್ತಾ ಬಂದಿ ದ್ದರು. ಎಲ್ಲರೂ ಇಂಥ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದರು. ರಾಜಕೀಯ ಪಕ್ಷಗಳೂ ಸಹ ಈ ಸುಧಾರಣೆಗಳ ಹೆಸರು ಹೇಳಿ ಮತ ಯಾಚಿಸುತ್ತಿದ್ದವು. ವಿರೋಧ ಪಕ್ಷಗಳ ಸಮಸ್ಯೆ ಯೆಂದರೆ, ಎಲ್ಲಿ ಈ ಸುಧಾರಣೆ ಗಳ ಶ್ರೇಯಸ್ಸು ನಮಗೆ ಸಲ್ಲಿಬಿಡುತ್ತದೋ ಎನ್ನುವುದು. ನಮಗೂ ಶ್ರೇಯಸ್ಸು ಬೇಕಿಲ್ಲ. ರೈತರು ಮತ್ತು ಉದ್ಯೋಗಿಗಳ ಹಿತದೃಷ್ಟಿಯಿಂದಾಗಿ ನಾವು ಈ ಸುಧಾರಣೆ ಗಳನ್ನು ತಂದಿದ್ದೇವೆ. ನಮ್ಮ ಟ್ರ್ಯಾಕ್ ರೆಕಾರ್ಡ್‌ನ ಪರಿಚಯ ವಿರುವ ಈ ವರ್ಗ, ನಮ್ಮ ಉದ್ದೇಶಗಳನ್ನು ಅರ್ಥ ಮಾಡಿಕೊಂಡಿದೆ. ನಾವು ಕಳೆದ ಆರು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಹಂತಹಂತವಾಗಿ ಸುಧಾರಿಸುತ್ತಾ ಬಂದಿದ್ದೇವೆ. ಈಗಿನ ನಮ್ಮ ಉಪಕ್ರಮ, ಈ ಸರಪಳಿಯ ಒಂದು ಭಾಗ.
ಅನೇಕ ಕಂಪೆನಿಗಳು ಚೀನಾದಿಂದ ನೆಲೆ ಬದಲಿಸಲು ಯೋಚಿಸುತ್ತಿವೆ. ಈ ಹೊತ್ತಿನಲ್ಲಿ ಭಾರತವು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿ ಜಗತ್ತಿನ ಪ್ರಮುಖ ಉತ್ಪಾದನಾ ಹಬ್ ಆಗಿ ಹೊರಹೊಮ್ಮಬಲ್ಲದು ಎಂದು ನೀವು ಭಾವಿಸುತ್ತಿರುವಂತಿದೆ? ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ವಿಶ್ವಾಸಾರ್ಹ ಪರ್ಯಾಯವಾಗಬಲ್ಲದೇ?
ಭಾರತ ಉತ್ಪಾದನಾ ಹಬ್ ಆಗಬೇಕು ಎನ್ನುವ ಮಾತು, ಸಾಂಕ್ರಾಮಿಕದ ನಂತರ ಆರಂಭವಾದದ್ದಲ್ಲ. ನಾವು ಕೆಲ ಸಮಯದಿಂದ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಏನೇ ಇದ್ದರೂ, ಭಾರತ ಕೌಶಲ್ಯಯುತ ವೃತ್ತಿಪರರನ್ನು ಹೊಂದಿರುವ ಯುವ ರಾಷ್ಟ್ರ. ಆದರೆ, ಇತರರ ನಷ್ಟದಿಂದ ನಾವು ಲಾಭಮಾಡಿಕೊಳ್ಳಬೇಕು ಎಂದು ಭಾರತ ಭಾವಿಸುವುದಿಲ್ಲ. ಸ್ವಂತ ಶಕ್ತಿಯ ಮೇಲೆಯೇ ನಮ್ಮ ದೇಶ ಜಾಗತಿಕ ಉತ್ಪಾದನಾ ಹಬ್ ಆಗುತ್ತದೆ. ಯಾವುದೋ ರಾಷ್ಟ್ರಕ್ಕೆ ಪರ್ಯಾಯವಾಗಬೇಕು ಎನ್ನುವುದು ನಮ್ಮ ಪ್ರಯತ್ನವಲ್ಲ, ಬದಲಾಗಿ, ಭಾರತವನ್ನು ಅನನ್ಯ ಅವಕಾಶಗಳನ್ನು ಒದಗಿಸುವ ರಾಷ್ಟ್ರವಾಗಿಸುವುದು ನಮ್ಮ ಪ್ರಯತ್ನ. ಎಲ್ಲರ ಪ್ರಗತಿಯನ್ನೂ ನಾವು ನೋಡಲು ಬಯಸುತ್ತೇವೆ. ಭಾರತದ ಪ್ರಗತಿಯಾದರೆ 1/6ನೇ ಭಾಗದಷ್ಟು ಮಾನವೀಯತೆಯ ಪ್ರಗತಿಯಾಗುತ್ತದೆ.
ಮುಂದಿನ ವರ್ಷಕ್ಕೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಅದರ ವಿತರಣೆ, ಯಾರಿಗೆ ವಿತರಣೆಯಾಗಬೇಕು ಎನ್ನುವ ಆದ್ಯತೆಗಳ ವಿಚಾರದಲ್ಲಿ ಚಿಂತನೆ ನಡೆದಿದೆಯೇ?
ಮೊದಲನೆಯದಾಗಿ ಹಾಗೂ ಮುಖ್ಯವಾಗಿ ಒಂದು ವಿಷಯದಲ್ಲಿ ನಾನು ದೇಶಕ್ಕೆ ಆಶ್ವಾಸನೆ ನೀಡುತ್ತೇನೆ. ಲಸಿಕೆ ಸಿದ್ಧವಾದಾಗ, ಅದು ಎಲ್ಲರಿಗೂ ಲಭ್ಯವಾಗಲಿದೆ. ಈ ವಿಚಾರದಲ್ಲಿ ಯಾರೂ ಹಿಂದೆ ಬೀಳುವುದಿಲ್ಲ. ಅಫ್ಕೋರ್ಸ್, ಆರಂಭಿಕ ಹಂತದಲ್ಲಿ ನಾವು ರೋಗ ತೀವ್ರತೆಯ ಅಪಾಯ ಅಧಿಕವಿರುವ ವರಿಗೆ ಮತ್ತು ಮುಂಚೂಣಿ ಕಾರ್ಯಪಡೆಯತ್ತ ಗಮನಹರಿಸಬೇಕಾಗ ಬಹುದು. ಕೋವಿಡ್ ಲಸಿಕೆಯ ವಿಚಾರದಲ್ಲಿ ಮಂದಿನ ಮಾರ್ಗದ ಬಗ್ಗೆ ನಿರ್ಧರಿಸಲು ರಾಷ್ಟ್ರೀಯ ಪರಿಣತರ ಗುಂಪೊಂದನ್ನು ನಾವು ರಚಿಸಿದ್ದೇವೆ. ಒಂದು ವಿಷಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಲಸಿಕೆಯ ಅಭಿವೃದ್ಧಿ ಕಾರ್ಯವು ಈಗಲೂ ಪ್ರಗತಿಯ ಹಂತದಲ್ಲಿ ಇದೆ. ಪ್ರಯೋಗಗಳು ನಡೆಯುತ್ತಿವೆ. ಲಸಿಕೆ ಯಾವುದಾಗಿರಲಿದೆ, ಒಬ್ಬ ವ್ಯಕ್ತಿಗೆ ಎಷ್ಟು ಡೊಸೇಜ್ ಬೇಕಾಗಬಹುದು, ಅದು ಎಷ್ಟು ದಿನ ರೋಗನಿರೋಧಕ ಶಕ್ತಿ ಒದಗಿಸುತ್ತದೆ, ಅದನ್ನು ಹೇಗೆ ನೀಡಬೇಕಾಗುತ್ತದೆ ಇತ್ತಾದಿ ವಿಚಾರಗಳ ಬಗ್ಗೆ ಪರಿಣತರು ಈಗಲೇ ಹೇಳಲಾರರು. ಒಮ್ಮೆ ಪರಿಣತರು ಫೈನಲೈಸ್ ಮಾಡಿದರೆಂದರೆ, ಮುಂದಿನ ಹೆಜ್ಜೆಯ ಬಗ್ಗೆ ನಮಗೂ ಮಾರ್ಗದರ್ಶನ ಮಾಡಲಿದ್ದಾರೆ.
ಇನ್ನು ಲಾಜಿಸ್ಟಿಕ್ಸ್‌ನ ವಿಚಾರಕ್ಕೆ ಬಂದರೆ, ದೇಶಾದ್ಯಂತ 28,000 ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಲಸಿಕೆಯನ್ನು ಸಂಗ್ರಹಿಸಿ, ವಿತರಿಸಲಾಗುತ್ತದೆ. ತನ್ಮೂಲಕ ದೇಶದ ಮೂಲೆಮೂಲೆಗೆ ಲಸಿಕೆ ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿಯೇ ರಚಿತವಾದ ತಂಡಗಳು ಇರಲಿದ್ದು, ಇವು ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ಲಸಿಕೆಯ ವಿತರಣೆ ಮತ್ತು ನೀಡುವಿಕೆ ವ್ಯವಸ್ಥಿತವಾಗಿ, ಉತ್ತರದಾಯಿಯಾಗಿ ನಡೆಯುವುದನ್ನು ಖಾತ್ರಿಪಡಿಸಲಿವೆ. ಇನ್ನು ಫಲಾನುಭವಿಗಳನ್ನು ನೋಂದಾವಣೆ, ಟ್ರ್ಯಾಕಿಂಗ್ ಹಾಗೂ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಈಗ ಡಿಜಿಟಲ್ ವೇದಿಕೆಯನ್ನೂ ಸಿದ್ಧಪಡಿಸಲಾಗುತ್ತಿದೆ.
(ಕೃಪೆ: ಎಕನಾಮಿಕ್ ಟೈಮ್ಸ್)
ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.