ನಿಮ್ಮನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆಯೇ?


Team Udayavani, Nov 30, 2017, 8:23 AM IST

30-4.jpg

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್‌ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್‌ ಗೌಡರ ಹತ್ಯೆ ಪ್ರಕರಣ ಇದೀಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ವರ್ಷದ ಹಿಂದೆ ನಡೆದ ಈ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಯೋಗೀಶ್‌ ಗೌಡ ಕುಟುಂಬದ ಸದಸ್ಯರ ನಡುವೆ ಸಚಿವ ವಿನಯ ಕುಲಕರ್ಣಿ ರಾಜಿ ಸಂಧಾನಕ್ಕೆ ಯತ್ನಿಸಿದ್ದಾರೆ, ಹೀಗಾಗಿ ಕೃತ್ಯದಲ್ಲಿ ಅವರ ಕೈವಾಡವೂ ಇದೆ ಎಂಬುದು ವಿಪಕ್ಷಗಳ ಆರೋಪ. ಬೆಳಗಾವಿ ಅಧಿವೇಶನದಲ್ಲಂತೂ ಕಡೇ ದಿನದ ಕಲಾಪ ಇದೇ ವಿಚಾರದ ಗದ್ದಲ-ಕೋಲಾಹಲಕ್ಕೆ ಬಲಿಯಾಯಿತು. ವಿಪಕ್ಷ ಬಿಜೆಪಿಯಂತೂ ಸಚಿವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ವಿನಯ ಕುಲಕರ್ಣಿ ಜತೆ ನೇರಾ-ನೇರ ಮಾತುಕತೆಗಿಳಿದಾಗ..

ಯೋಗೀಶ್‌ ಗೌಡ ಹತ್ಯೆ ಪ್ರಕರಣ ನಿಮಗೆ ಉರುಳಾಗಿ ಸುತ್ತಿಕೊಂಡಿದ್ದು ಯಾಕೆ?  
ಉತ್ತರ ಎಲ್ಲರಿಗೂ ಗೊತ್ತಿದೆ. ನನ್ನ ಬೆಳವಣಿಗೆ ಕೆಲವರಿಗೆ ಸಹಿಸ ಲಾಗುತ್ತಿಲ್ಲ, ಅದರಲ್ಲೂ ಬಿಜೆಪಿ ಮುಖಂಡರಿಗೆ ನಾನು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯ ನಾಯಕನಾಗಿ ಬೆಳೆಯುತ್ತಿ ರುವುದನ್ನು ಸಹಿಸಲಾಗುತ್ತಿಲ್ಲ. ಬಿಜೆಪಿಯ ಭದ್ರಕೋಟೆ ಧಾರ ವಾಡ ಜಿಲ್ಲೆಯಲ್ಲಿಯೇ ಕಾಂಗ್ರೆಸ್‌ ಗಟ್ಟಿಯಾಗಿ ನೆಲೆಯೂರು ತ್ತಿರುವುದು ಆ ಪಕ್ಷದ ಮುಖಂಡರಿಗೆ ಅರಗಿಸಿ ಕೊಳ್ಳುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ನನ್ನ ವಿರುದ್ಧ ದಿನಕ್ಕೊಂದು ಹೋರಾಟ ಮಾಡುತ್ತಿದ್ದಾರೆ.

ಆ ಪ್ರಕರಣದಲ್ಲಿ ನಿಮ್ಮ ಹೆಸರು ಯಾಕೆ ಕೇಳಿಬರುತ್ತಿದೆ? 
ಬಿಜೆಪಿಯವರಿಗೆ ಕಾಂಗ್ರೆಸ್‌ ವಿರುದ್ಧ ಮಾತನಾಡಲು ವಿಷಯ ಗಳೇ ಇಲ್ಲ. ಯಾವ ನೈತಿಕತೆಯೂ ಇಲ್ಲ. ಹೀಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆ ಕೊಲೆ ಯಾಕಾ ಗಿದೆ, ಅದನ್ನು ಯಾರು ಮಾಡಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇಷ್ಟಾದರೂ ಬಿಜೆಪಿಯವರು ಅನಗತ್ಯ ವಾಗಿ ನನ್ನ ಹೆಸರು ಎಳೆದು ತರುತ್ತಿದ್ದಾರೆ. ಬಿಜೆಪಿಯವರಿಗೂ ಇದರ ಮೂಲ ಸತ್ಯ ಚೆನ್ನಾಗಿ ಗೊತ್ತು. ರಾಜಕಾರಣಕ್ಕಾಗಿ ಇದೆಲ್ಲಾ ಮಾಡುತ್ತಿದ್ದಾರೆ.

ಕೊಲೆ ಆರೋಪಿಗಳು ನಿಮ್ಮೊಂದಿಗೆ ಫೋಟೋದಲ್ಲಿ ಇದ್ದಾರಂತಲ್ಲ? 
ನೋಡ್ರಿ ನಾನೊಬ್ಬ ರಾಜಕಾರಣಿ. ನಿತ್ಯ ನೂರಾರು ಜನರನ್ನ ಭೇಟಿಯಾಗುತ್ತೇನೆ. ಎಷ್ಟೋ ಜನರು ನನ್ನೊಂದಿಗೆ ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಹಾಗಂತ ಮುಂದೆ ಅವರು ಮಾಡುವ ಎಲ್ಲ ಕೃತ್ಯಗಳಿಗೂ ನನ್ನ ಹೆಸರು ತಂದರೆ ಈ ಬಿಜೆಪಿಯವರಿಗೆ ಏನು ಹೇಳುವುದು? ಪ್ರಹ್ಲಾದ ಜೋಶಿ ಅವರೊಂದಿಗೆ ಫೋಟೋ ತೆಗೆಸಿಕೊಂಡವರು ನಾಳೆ ಯಾರನ್ನೋ ಯಾವುದೋ ಕಾರಣಕ್ಕೆ ಕೊಲೆ ಮಾಡಿದರೆ, ಅದಕ್ಕೆ ಪ್ರಹ್ಲಾದ ಜೋಶಿ ಅವರೇ ಹೊಣೆಯಾಗುತ್ತಾರಾ? ಈಗ ರಾಜಕೀಯಕ್ಕಾಗಿ ನನ್ನ ಹೆಸರು ಇದರೊಂದಿಗೆ ಥಳಕು ಹಾಕಿದ್ದು ಬಿಜೆಪಿಯ ಷಡ್ಯಂತ್ರ ಅಷ್ಟೇ. 

ಕೊಲೆ ಆರೋಪಿಗಳು-ಯೋಗೀಶ್‌ ಗೌಡ ಕುಟುಂಬ ಸದಸ್ಯರ ಜತೆ ರಾಜಿ ಸಂಧಾನ ಮಾಡಿಸಿದ್ದು ನಿಜವೇ?
ಇದು ಶುದ್ಧ ಸುಳ್ಳು. ಯಾರೋ ಯಾರನ್ನೋ ಭೇಟಿಯಾದರೆ, ಅದನ್ನು ತಂದು ಇನ್ಯಾವುದೋ ಪ್ರಕರಣದ ಮೂಲಕ ನನಗೆ ಸುತ್ತುವುದು ಸರಿಯಲ್ಲ. ನನ್ನ ಬೆಳವಣಿಗೆಗೆ ಬ್ರೇಕ್‌ ಹಾಕುವುದು ಬಿಜೆಪಿಯವರ  ಸದ್ಯದ ಅಜೆಂಡಾ. ಹೀಗಾಗಿಯೇ ಅವರು ಈ ರೀತಿಯಾಗಿ ಮಾಡುತ್ತಿದ್ದಾರೆ. ಮಾಧ್ಯಮ ಹಾಗೂ ಸಾರ್ವಜ ನಿಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಅಷ್ಟೇ. 

ಹಾಗಾದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ಧ್ವನಿ ಯಾರದ್ದು?  
ಹೌದು. ಆ ಧ್ವನಿ ನನ್ನದೇ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟನೆ ನೀಡಿದ್ದೇನೆ. ನನ್ನ ಮಡದಿ, ಕುಟುಂಬ ಸದಸ್ಯರ ಹೆಸರಿನ ಮೇಲೆ ಅಶ್ಲೀಲ ಪತ್ರಗಳನ್ನು ಬರೆದು ಮಾಧ್ಯಮ ಸಂಸ್ಥೆಗಳಿಗೆ, ನನ್ನ ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯತ್‌ ಹಾಗೂ ಎಲ್ಲ ಹಳ್ಳಿಗಳಿಗೂ ಕಳುಹಿಸುತ್ತಿದ್ದಾರೆ. ನೈತಿಕತೆಯೇ ಇಲ್ಲದ ವಿಕೃತ ಮನಸ್ಸುಗಳ ಕೆಲಸ ಇದು. ಹೀಗಾಗಿ ನಾನು ಸ್ವಲ್ಪ ಸಿಟ್ಟಿನಲ್ಲಿಯೇ ಅಲ್ಲಿದ್ದ ಒಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದೆ. ಆದರೆ ಮಾಧ್ಯ ಮಗಳಲ್ಲಿ ಈ ಸಂಭಾಷಣೆಯ ಅರ್ಧಭಾಗ ಮಾತ್ರ ಪ್ರಸಾರವಾ ಯಿತು. ಪೂರ್ಣ ಧ್ವನಿ ಸಂಭಾಷಣೆ ವಾಟ್ಸ್‌ಪ್‌, ಫೇಸ್‌ಬುಕ್‌ನಲ್ಲಿ ಎಲ್ಲರೂ ಕೇಳಿ ಪೂರ್ಣಸತ್ಯ ತಿಳಿದುಕೊಂಡಿದ್ದಾರೆ. 

ಲಿಂಗಾಯತ ಧರ್ಮ ಹೋರಾಟಕ್ಕೂ ಬಿಜೆಪಿ ಪ್ರತಿಭಟನೆಗೂ ಸಂಬಂಧವಿದೆ ಎಂದೇಕೆ ಹೇಳಿದಿರಿ? 
ಖಂಡಿತವಾಗಿಯೂ ಸಂಬಂಧವಿದೆ. ನಾನು ಲಿಂಗಾಯತ. ಸ್ವತಂತ್ರ ಧರ್ಮದ ಹೋರಾಟವನ್ನು ಗಟ್ಟಿಯಾಗಿ ಕಟ್ಟುತ್ತಿರು ವುದು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಕಾರಣ, ಲಿಂಗಾಯ ತರು ಎಲ್ಲಿ ಬಿಜೆಪಿ ಬಿಟ್ಟು ಹೋಗಿ ಬಿಡುತ್ತಾರೋ ಎನ್ನುವ ಭಯ ಅವರನ್ನು  ಕಾಡುತ್ತಿದೆ. ಆದರೆ ಲಿಂಗಾಯತರನ್ನು ಸಂಘಟನೆ ಮಾಡುತ್ತಿರುವುದು ರಾಜಕೀಯ ಉದ್ದೇಶಕ್ಕಾಗಿ ಅಲ್ಲವೇ ಅಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ, ಈ ಸಮುದಾಯದ ಬಡ ವರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶ ನಮ್ಮೆಲ್ಲರದು.

ಪ್ರಹ್ಲಾದ ಜೋಶಿ ಜತೆಗಿನ ಸಂಘರ್ಷಕೆನು ಕಾರಣ? 
ಸಂಸದ ಪ್ರಹ್ಲಾದ ಜೋಶಿ ಅವರು ಮೂರು ಬಾರಿ ಜಯಗಳಿ ಸಿದ್ದು, ತಮ್ಮ ಸ್ವಂತ ಶಕ್ತಿಯಿಂದ ಅಲ್ಲವೇ ಅಲ್ಲ. ಮೊದಲ ಬಾರಿ ವಾಜಪೇಯಿ ಅವರ ಅಲೆ ಇತ್ತು. 2ನೇ ಬಾರಿ ಯಡಿಯೂರಪ್ಪ ಅವರ ಅಲೆ ಇತ್ತು. 2014ರಲ್ಲಿ ಪ್ರಧಾನಿ ಮೋದಿ ಅವರ ಅಲೆಯಲ್ಲಿ ಅವರು ಆಯ್ಕೆಯಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಗಟ್ಟಿಯಾಗಿ ಬೇರೂರುತ್ತಿದೆ. ಇದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಸಹಜವಾಗಿಯೇ ಇಲ್ಲ ಸಲ್ಲದ ಕಾರಣಗಳೊಂದಿಗೆ ನಮ್ಮೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. 

ನೀವು ಕ್ಷೇತ್ರದಲ್ಲಿ ಅಭಿವೃದ್ಧಿಯನ್ನೇ ಮಾಡಿಲ್ಲ ಎಂದು ಬಿಜೆಪಿಯವರು ಟೀಕೆ ಮಾಡ್ತಾರಲ್ಲಾ? 
ಸಂಸದ ಪ್ರಹ್ಲಾದ ಜೋಶಿ ಒಬ್ಬರೇ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಅಭಿವೃದ್ಧಿ ಮಾಡಿಲ್ಲ ಎಂದರೆ, ಅಂಕಿ-ಅಂಶ ಸಮೇತ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಕೊಲೆ, ಸುಲಿಗೆ ಪ್ರಕರಣಗಳನ್ನು ಎತ್ತಿಕಟ್ಟಿ ಜನರಲ್ಲಿ ಭಾವನಾತ್ಮಕ ಪ್ರಚೋದನೆ ಹುಟ್ಟು ಹಾಕುವುದನ್ನು ಬಿಡಲಿ. ನಾವು ಅಭಿವೃದ್ಧಿ ಮಾಡಿದ್ದಕ್ಕೆ ಗ್ರಾಪಂ, ತಾಪಂ ಹಾಗೂ ಜಿಪಂ ಸೇರಿ ಎಲ್ಲಾ ಚುನಾವಣೆಗಳಲ್ಲೂ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಜನ ನಮ್ಮ ಕೈ ಹಿಡಿಯುತ್ತಾರೆ. ಇದನ್ನೇ ಜೋಶಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. 

ಆರ್‌ಎಸ್‌ಎಸ್‌ ವಿರುದ್ಧವೂ ನೀವು ಟೀಕೆ ಮಾಡಿದ್ದೀರಲ್ಲ? 
ನಾನು ನೇರವಾಗಿ ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಎಲ್ಲಿಯೂ ಮಾತನಾಡಿಲ್ಲ. ಆದರೆ ಲಿಂಗಾಯತ ಯುವಕರು ಬಸವ ಸೇನೆಯ ಭಾಗವಾಗಿ ಕೆಲಸ ಮಾಡಿದರೆ ಲಿಂಗಾಯತ ಸಮಾಜವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಲು ಸಾಧ್ಯ. ಹೀಗಾಗಿ ನಾನು ಲಿಂಗಾಯತ ಮತ್ತು ಇತರ ಸಮುದಾಯದ ಯುವಕರಿಗೆ ಬಸವ ಸೇನೆ ಸೇರಲು ಆಹ್ವಾನ ನೀಡಿದ್ದೇನೆ ಅಷ್ಟೇ. ಆದರೆ ಬಿಜೆಪಿಯವರು ಇದರಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ. 

ನಿಮ್ಮ ಪಕ್ಷದವರೇ ನಿಮ್ಮ ವಿರುದ್ಧ ಪಿತೂರಿ ಮಾಡ್ತಾರೆ ಎಂಬ ಮಾತೂ ಇದೆಯಲ್ಲಾ? 
ಇಲ್ಲವೇ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎಲ್ಲ ನಾಯ ಕರು ನನಗೆ ಸಾಥ್‌ ಕೊಟ್ಟಿದ್ದಾರೆ. ಪಕ್ಷ ಕಟ್ಟಲು ಎಲ್ಲ ಜಾತಿ- ಧರ್ಮಗಳ ಮುಖಂಡರು ನನ್ನೊಂದಿಗೆ ಕೈ ಜೋಡಿಸಿದ್ದಾರೆ. ಬಿಜೆಪಿಗಿದು ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ಸಂಬಂಧ ಇಲ್ಲದ ಪ್ರಕರಣಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ. 

ನಿಮ್ಮ ನಾಯಕತ್ವದ ಬಸವ ಸೇನೆ ಮುಂದೇನು? 
ಬಸವ ಸೇನೆ ಬರೀ ಲಿಂಗಾಯತರನ್ನೊಳಗೊಂಡ ಸಂಘಟನೆ ಅಲ್ಲವೇ ಅಲ್ಲ. ಇದರಲ್ಲಿ ಶೋಷಿತರು, ದಮನಿತರು ಎಲ್ಲರೂ ಇರಲಿದ್ದಾರೆ. ಇದು ಬಸವಣ್ಣನವರ ಸಾಮಾಜಿಕ ಸಮಾನತೆ, ಕಾಯಕ, ದಾಸೋಹ ತಣ್ತೀಗಳಡಿ ಕೆಲಸ ಮಾಡಲಿದೆ. ಇದರ ರೂಪುರೇಷೆ ಸಿದ್ಧಗೊಂಡಿದ್ದು, ಕೆಲವೇ ತಿಂಗಳಲ್ಲಿ ಬಸವ ಸೇನೆ ಎಲ್ಲ ಜಿಲ್ಲೆಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. 

    ಲಿಂಗಾಯತರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಸಿಎಂ ಸಿದ್ದರಾಮಯ್ಯ ನಿಮಗೆ ಹೊಣೆಗಾರಿಕೆ ನೀಡಿದ್ದಾರಂತೆ? 
ಇದು ಶುದ್ಧ ಸುಳ್ಳು. ನಾನು ಆಣೆ ಮಾಡಿ ಹೇಳುತ್ತೇನೆ. ಲಿಂಗಾ ಯತ ಸ್ವತಂತ್ರ ಧರ್ಮ ಹೋರಾಟ ಮಾಡುವಂತೆ ಎಂದೂ ನನಗೆ ಸಿದ್ದರಾಮಯ್ಯ ಅವರು ಹೇಳಿಯೇ ಇಲ್ಲ. ಇದು ಬಿಜೆಪಿಯವರ ಪಿತೂರಿ. ನಾನು ಹುಟ್ಟಿನಿಂದಿಲೂ ಲಿಂಗಾಯತ ಧರ್ಮದ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದನ್ನು ನೀವು ನಮ್ಮ ಜಿಲ್ಲೆಯಲ್ಲಿ ಕೇಳಬಹುದು. ಬಸವಾದಿ ಶರಣರಿಗೆ ಯಾರೇ ಅಪ ಚಾರ ಮಾಡಿದರೂ, ನನಗೆ ಸಹಿಸಲು ಆಗುವುದಿಲ್ಲ. ಕಾಲೇಜು ದಿನಗಳಲ್ಲಿಯೇ ನಾನು ಈ ಬಗ್ಗೆ ಹೋರಾಟ ಮಾಡಿದ್ದೇನೆ. ಈಗ ಬಸವ ಸೇನೆ ಕಟ್ಟಿ ಹೋರಾಟ ಮುಂದುವರಿಸಿದ್ದೇನೆ. 

ಇತ್ತೀಚಿನ ವಿದ್ಯಮಾನಗಳಿಂದ ನಿಮ್ಮ ಹೋರಾಟಕ್ಕೆ ಹಿನ್ನಡೆಯಾಯ್ತು ಅನಿಸಲ್ವಾ? 
ನಾನು ಹೆದರಿ ಕೂಡೋ ಜಾಯಮಾನದವನಲ್ಲ. ನೇರಾ-ನೇರ ಹೋರಾಟ, ರಾಜಕೀಯ ಮಾಡೋನು. ಇಂತಹ ನೂರು ಆರೋಪ ಬಂದರೂ ಲಿಂಗಾಯತ ಧರ್ಮ ಹೋರಾಟದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಜಿ.ಪಂ. ಸದಸ್ಯ ನಾಗಿ ರಾಜಕೀಯ ಆರಂಭಿಸಿ, ಇಂದು ಕ್ಯಾಬಿನೆಟ್‌ ದರ್ಜೆ ಮಂತ್ರಿಯಾಗಿದ್ದೇನೆ. ಆರೋಪ, ಬೆದರಿಕೆ ಕರೆಗಳಿಗೆ ಯಾವ ಶರಣರೂ ಹೆದರೋದಿಲ್ಲ. ನಾನು ಕ್ರಾಂತಿಪುರುಷ ಬಸವಣ್ಣನ ಕಟ್ಟಾ ಅನುಯಾಯಿ, ಬಡವರಿಗಾಗಿ ನನ್ನ ಹೋರಾಟ. 

    ಪ್ರಸ್ತುತ ಆರಂಭವಾಗಿರುವ ನಿಮ್ಮ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆಯಲಿದೆಯಂತೆ? 
ನಾನು ಲಿಂಗಾಯತ ಹೋರಾಟದಲ್ಲಿದ್ದೇನೆ. ಅದಕ್ಕಾಗಿಯೇ ಇದೆಲ್ಲ ಆರೋಪ, ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭ ದಲ್ಲಿ ನನಗೆ “ಹುಲಿಯ ಮೀಸೆಯ ಹಿಡಿದು ಉಯ್ನಾಲೆ ಆಡಿದಂತೆ… ನಾಗರ ಹೆಡೆಯ ಹಿಡಿದು ಕೆನ್ನೆ ಸವರಿಕೊಂಡಂತೆ, ಶರಣರನ್ನ ಕೆಣಕುವುದು ಎಂದರೆ ಸುಣ್ಣದ ಕಲ್ಲನ್ನು ಉಡಿಯಲ್ಲಿ ಕಟ್ಟಿಕೊಂಡು ಬಿಸಿನೀರ ಮಡುವ ಜಿಗಿದಂತೆ’ ಎಂಬ ವಚನ ನೆನೆಪಿಗೆ ಬರುತ್ತದೆ. ಶರಣರನ್ನು ಸುಮ್ಮನೆ ಕೆಣಕಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ.

ಬೇರೆ ಬೇರೆ ರೀತಿಯ ದಾಳಿ ಮೂಲಕ ನಿಮ್ಮನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆಯಂತೆ?
ನೋಡಿ ನಾನು ಯಾವ ದಾಳಿಗೂ ಹೆದರೋದಿಲ್ಲ. ನಾನು ಕೃಷಿ ಕುಟುಂಬದಿಂದ ಬಂದ ರೈತನ ಮಗ. 500 ಎಕರೆಗೂ ಹೆಚ್ಚು ಜಮೀನು ಹೊಂದಿದ್ದ ನನ್ನ ಮನೆತನದಲ್ಲಿ ಇಂದಿಗೂ ಕೃಷಿಯೇ ಪ್ರಧಾನ ಉದ್ಯೋಗ. ಅದರೊಂದಿಗೆ ನಾನು 25 ವರ್ಷಗಳ ಹಿಂದೆ ಆರು ಆಕಳುಗಳಿಂದ ಆರಂಭಿಸಿದ ಹೈನುಗಾರಿಕೆಯಡಿ ಇಂದು 1,800 ಆಕಳುಗಳು, 250 ಎಮ್ಮೆ, ಎರಡು ಸಾವಿರ ಕುರಿಗಳ ಸಾಕಾಣಿಕೆ ಮಾಡುತ್ತಿದ್ದೇನೆ. ಪಶು ಸಂಗೋಪನೆಯಲ್ಲೂ ತೊಡಗಿದ್ದೇನೆ. 85 ಎಕರೆ ಕಬ್ಬು ಬೆಳೆದಿದ್ದೇನೆ. 35 ಎಕರೆ ಹನಿ ನೀರಾವರಿ ಆಧಾರಿತ ಮೆಣಸಿನಕಾಯಿ ಬೆಳೆದಿದ್ದೇನೆ. ಕೃಷಿಯ ಲ್ಲಿಯೇ ನಾನು ಲಕ್ಷ ಲಕ್ಷ ಉತ್ಪನ್ನ ತೆಗೆಯುತ್ತೇನೆ. ರೈತರಿಗೆ ಮಾದರಿಯಾಗಿ ಬೆಳೆದು ನಿಲ್ಲುವ ಕೆಲಸ ಮಾಡಿದ್ದೇನೆ. ಅದನ್ನೇ ಎಲ್ಲರಿಗೂ ಸಲಹೆ ಮಾಡುತ್ತಿದ್ದೇನೆ.

ನೀವು ತುಂಬಾ “ಹಾರ್ಶ್‌ ನೇಚರ್‌’ ಅಂತಾರಲ್ಲಾ? 
ಹೌದು…ನಾನು ಯಾವಾಗಲೂ ನ್ಯಾಯದ ಪರವಾಗಿ ಇರುತ್ತೇನೆ. ಹೀಗಾಗಿ ಕೆಟ್ಟವನಾಗಿ ಕಾಣುತ್ತೇನೆ. ನಾನು ಕೆಟ್ಟವರಿಗೆ ಮಾತ್ರ ಕೆಟ್ಟವನು. ಬಡವರಿಗೆ ಕಷ್ಟ ಕೊಡುವವರನ್ನ, ರೈತರ ಭೂಮಿ ಕಬಳಿಸುವವರನ್ನ ನೋಡಿದರೆ ನನ್ನ ಮೈ ಉರಿಯುತ್ತದೆ. ಹೀಗಾಗಿ ನಾನು ನೇರವಾಗಿ ಅವರ ಕೆನ್ನೆಗೆ ಹೊಡೆದು ಬುದ್ಧಿ ಹೇಳುತ್ತೇನೆ. ಹೈಕೋರ್ಟ್‌ ಮೆಟ್ಟಿಲೇರಿದ ವ್ಯಾಜ್ಯಗಳನ್ನು ಕೂಡ ನಾನು ಬುದ್ಧಿ ಹೇಳಿ ಬಗೆಹರಿಸಿದ್ದೇನೆ. ಇವತ್ತು ಅವರೆಲ್ಲ ಆನಂದದಿಂದ ಇದ್ದಾರೆ. ಕುತಂತ್ರಿಗಳನ್ನು ನಾನು ನೇರವಾಗಿಯೇ ಎದುರಿಸುತ್ತೇನೆ. ಹೀಗಾಗಿ ಅವರಿಗೆ ಕೆಟ್ಟವನಾಗಿ ಕಾಣುತ್ತೇನೆ ಅಷ್ಟೇ.

ಕಾಂಗ್ರೆಸ್‌ ಲಿಂಗಾಯತ ವಿರೋಧಿ ಎಂಬ ಆರೋಪವಿದೆ.. 
ಹಾಗಾದರೆ ಕೇಂದ್ರದ ಬಿಜೆಪಿ ಸರಕಾರ ಲಿಂಗಾಯತರ ಪರವಾಗಿ ದೆಯೇ? ಲೋಕಸಭೆ ಚುನಾವಣೆ ಮುಂಚೆ ಯಡಿಯೂರಪ್ಪರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇನೆ ಎಂದಿದ್ದರು. ಮಾಡಿದರಾ? ಹೋಗಲಿ, ಇರೋ ಒಬ್ಬ ಲಿಂಗಾಯತ ಕೇಂದ್ರ ಮಂತ್ರಿಯನ್ನು ಸಂಪುಟದಿಂದ ಕೈಬಿಟ್ಟರು. ಆದರೆ ಕಾಂಗ್ರೆಸ್‌ನಲ್ಲಿ ಏಳೆಂಟು ಜನ ಲಿಂಗಾಯತ ಸಚಿವರಿದ್ದೇವೆ. ಸ್ವತಃ ಮುಖ್ಯ ಮಂತ್ರಿಗಳೇ ಬಸವಣ್ಣನ ಅಭಿಮಾನಿ. ಹೀಗಾಗಿ ಅವರು ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯಗೊಳಿಸಿದರು.

ಭಾವಚಿತ್ರ ಸರಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದಕ್ಕೆ ರಾಜಕೀಯ ಲಾಭ ಪಡೆಯುವುದು ಎಷ್ಟು ಸರಿ?
ರಾಜಕೀಯ ಲಾಭಕ್ಕಾಗಿ ಅದನ್ನು ಮಾಡಿಲ್ಲ. ಸಿದ್ದರಾಮಯ್ಯ ಅವರು ಬಸವಣ್ಣನವರ ನೈಜ ಅಭಿಮಾನಿಯಾಗಿ ಗೌರವ ಸಲ್ಲಿಸಿ ದ್ದಾರೆ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದು ಬಸವ ಜಯಂತಿಯಂದೇ. ಬಿಜೆಪಿ ಸರಕಾರದಲ್ಲಿ ಯಾಕೆ ಬಸವಣ್ಣನವರ ಚಿತ್ರ ಕಡ್ಡಾಯ ಮಾಡಲಿಲ್ಲ. ಮಾಡಿದ್ದನ್ನು ಹೇಳಿಕೊಂಡರೆ ತಪ್ಪೇನು?

 ಬಿಜೆಪಿಯವರಿಗೆ ಆತಂಕ
ಈ ವಿನಯ ಕುಲಕರ್ಣಿ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವುದರಿಂದ ಬಿಜೆಪಿಯವರಿಗೆ ಆತಂಕ. ಹೀಗಾಗಿಯೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸತ್ಯ ಏನು ಎಂಬುದು ನನ್ನ ಕ್ಷೇತ್ರ, ನಮ್ಮ ಭಾಗದ ಜನತೆಗೆ ಗೊತ್ತಿದೆ. ಹೀಗಾಗಿ, ನನಗೆ ಯಾವ ಭಯವೂ ಇಲ್ಲ. ಜನರ ಮಧ್ಯೆ ಇರುವವನು ನಾನು, ಜನರ ಸೇವೆ ನನ್ನ ಆದ್ಯತೆ. ಜನರ ಆರ್ಶೀವಾದ ಇರುವವರೆಗೂ ನಾನು ಯಾವುದಕ್ಕೂ ಹೆದರುವ ಅಗತ್ಯವೇ ಇಲ್ಲ.

ಸಂದರ್ಶನ: ಸವರಾಜ ಹೊಂಗಲ್‌ 

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.