ನೇರಾ-ನೇರ : ಹೊಸಬರು ಬಂದರೆ ಪಕ್ಷಕ್ಕೆ ಹೆಚ್ಚು ಲಾಭ!


Team Udayavani, Mar 2, 2017, 11:15 AM IST

Ashok-R-600.jpg

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ‘ಅಖಾಡ’ ಸಿದ್ಧಗೊಂಡಂತಿದ್ದು, ಭ್ರಷ್ಟಾಚಾರ-ಹಗರಣಗಳ ಬಗ್ಗೆ ಆರೋಪ-ಪ್ರತ್ಯಾರೋಪಗಳ ವಾಕ್ಸಮರ ಪ್ರಾರಂಭವಾಗಿದೆ. ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ‘ಡೈರಿ’ ಪ್ರಕರಣ ದೊಡ್ಡ ಸದ್ದು ಮಾಡುತ್ತಿದೆ. ಡೈರಿ ಅಸಲಿಯೋ ನಕಲಿಯೋ ಎಂಬುದು ಬೇರೆ ಮಾತು, ಆದರೆ, ಡೈರಿ ವಿಚಾರದಲ್ಲಿ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ಬಹುಚರ್ಚಿತ ವಿಷಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವೆ ‘ಸಮರ’ವೇ ನಡೆಯುತ್ತಿದೆ. ಮತ್ತೂಂದೆಡೆ ಅನ್ಯ ಪಕ್ಷಗಳ ಮುಖಂಡರು ಬಿಜೆಪಿಯತ್ತ ಬರುತ್ತಿರುವುದು, ಪಕ್ಷಕ್ಕೆ ಬರುವ ಹೊಸಬರಿಂದ  ಈಗಾಗಲೇ ಪಕ್ಷದಲ್ಲಿರುವ ಹಳೆಯ ಮುಖಂಡರು ಕಾರ್ಯಕರ್ತರಲ್ಲಿ ಅಸಮಾಧಾನ ಆತಂಕವೂ ಕಾಣಿಸಿಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರೊಂದಿಗೆ ಉದಯವಾಣಿ ‘ನೇರಾನೇರ’ ಮಾತಿಗಿಳಿದಾಗ.

ಏನ್ಸಾರ್‌, ಡೈರಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆಯಲ್ಲಾ?
ಇದು ಕಾಂಗ್ರೆಸ್‌ಗೆ ಸಂಬಂಧಿಸಿದ್ದು, ಹೀಗಾಗಿ, ಉತ್ತರಿಸಬೇಕಾದವರು ಆ ಪಕ್ಷದ ನಾಯಕರೇ.

ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ಬರೆದಿದ್ದಾರೆ ಎನ್ನಲಾದ ಡೈರಿಯೂ ಬಿಡುಗಡೆಯಾಗಿದೆಯಲ್ಲಾ?
ಇಲ್ಲ, ಸುಳ್ಳು. ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ಕೊಟ್ಟಿರುವ ಡೈರಿ ಇರುವುದು ನಿಜ. ಬಿಜೆಪಿಯ ಡೈರಿ ಸೃಷ್ಟಿ ಮಾಡಿರುವುದು.

ಕಾಂಗ್ರೆಸ್‌ನವರು ನಮ್ಮದೂ ಸೃಷ್ಟಿಯಾಗಿರುವ ಡೈರಿ ಅಂತಾರಲ್ಲಾ?
ಆದಾಯ ತೆರಿಗೆ ಇಲಾಖೆ ದಾಳಿ ಸಂದರ್ಭದಲ್ಲಿ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಮನೆಯಲ್ಲಿ ಡೈರಿ ಸಿಕ್ಕಿರುವುದು ನಿಜ. ಇದೀಗ ಇಲ್ಲ ಎಂದರೆ ಹೇಗೆ.

ಕಾಂಗ್ರೆಸ್‌ನವರು ಲೆಹರ್‌ಸಿಂಗ್‌ ಡೈರಿ ಇದೆ ಎಂದು ಖಚಿತವಾಗಿಯೇ ಹೇಳ್ತಾರಲ್ಲಾ?
ಆಯ್ತು ಹಾಗಿದ್ದರೆ ಎರಡೂ ಡೈರಿಗಳ ಬಗ್ಗೆ ಸಿಬಿಐ ಅಥವಾ ಬೇರೆ ಯಾವುದೇ ತನಿಖೆಗೆ ವಹಿಸಿಕೊಡಲಿ. ಸತ್ಯಾಂಶ ಗೊತ್ತಾಗುತ್ತದೆ.

ಡೈರಿ ಬಿಡಿ, ಪಕ್ಷದ ಬಗ್ಗೆ ಹೇಳಿ. ಅನ್ಯ ಪಕ್ಷಗಳಿಂದ ಬರುವವರಿಗೆ ರೆಡ್‌ ಕಾರ್ಪೆಟ್‌ ಸ್ವಾಗತ ನೀಡುತ್ತಿದ್ದೀರಿ,ಮೊದಲಿನಿಂದಲೂ. ಹಾಗಾಗಿ, ನಿಮ್ಮ ಪಕ್ಷದಲ್ಲಿರುವವರ ಗತಿ?
 ಯಾರ್ಯಾರು ಪಕ್ಷಕ್ಕೆ ಬರುತ್ತಿದ್ದಾರೋ ಅವರ್ಯಾರೂ ಪಕ್ಷಕ್ಕೆ ತೊಂದರೆ ಕೊಡುವವರು ಅಲ್ಲ. ಎಲ್ಲಿ ಪಕ್ಷದ ಶಕ್ತಿ ಕಡಿಮೆ ಇದೆಯೋ ಅಲ್ಲಿ ಹೊಸಬರನ್ನು ತೆಗೆದುಕೊಳ್ಳುವುದರಿಂದ ಪಕ್ಷಕ್ಕೆ ಲಾಭವಾಗುತ್ತದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂತಿಮವಾಗಿ ಯಾರನ್ನೇ ಸೇರಿಸಿಕೊಳ್ಳುವುದಿದ್ದರೂ ಸ್ಥಳೀಯವಾಗಿ ಅಭಿಪ್ರಾಯ ಪಡೆಯಲಾಗುತ್ತದೆ ಮತ್ತು ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ.

ಆದರೂ ಇತ್ತೀಚೆಗೆ ಪಕ್ಷ ಸೇರುತ್ತಿರುವ ಬಹುತೇಕರು ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು. ಚುನಾವಣೆ ವೇಳೆ ಟಿಕೆಟ್‌ ಕೊಡುವಾಗ ತೊಂದರೆಯಾಗುವುದಿಲ್ಲವೇ?
ಪಕ್ಷ ಸೇರಿರುವ ಯಾರೂ ಸ್ಥಾನಮಾನ ಅಥವಾ ಟಿಕೆಟ್‌ ಬೇಡಿಕೆ ಮುಂದಿಟ್ಟಿಲ್ಲ. ಪಕ್ಷವೂ ಅವರಿಗೆ ಆ ಭರವಸೆ ಕೊಟ್ಟಿಲ್ಲ. ಚುನಾವಣೆ ಸಮೀಪಿಸಿದಾಗ, ಅಭ್ಯರ್ಥಿಗಳ ಆಯ್ಕೆ ನಡೆದಾಗ ಸ್ಥಳೀಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಚುನಾವಣಾ ಟಿಕೆಟ್‌ ಸಿಗದಿದ್ದವರಿಗೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬೇರೆ ಸ್ಥಾನಮಾನ ಕೊಡಲು ಅವಕಾಶವಿದೆ. ಹೀಗಾಗಿ ತೊಂದರೆ ಪ್ರಶ್ನೆಯೇ ಇಲ್ಲ.

ಬಿಜೆಪಿಯಲ್ಲಿ ಹಿರಿಯರಿಗೆ ಸ್ಥಾನಮಾನವಿಲ್ಲ ಎಂಬುದು ಆಡ್ವಾಣಿ, ಜೋಶಿ ಪ್ರಕರಣದಲ್ಲಿ ಸಾಬೀತಾಗಿದೆ. ಇನ್ನು  ಕೃಷ್ಣ ಬಂದರೆ ಅವರಿಗೇನು ಸ್ಥಾನಮಾನ ಕೊಡ್ತೀರಿ?
ಕೃಷ್ಣ ಅವರು ಯಾವುದೇ ಸ್ಥಾನಮಾನ ಬಯಸಿದವರಲ್ಲ. ಗೌರವ ಸಿಗಬೇಕು ಎಂಬುದಷ್ಟೇ ಅವರ ಅಭಿಪ್ರಾಯ. ಕೃಷ್ಣ ಅವರು ರಾಷ್ಟ್ರೀಯ ಮಟ್ಟದ ನಾಯಕರಾಗಿರುವುದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಈ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ಯೋಚಿಸಲು ಅವರಿನ್ನೂ ಪಕ್ಷ ಸೇರಿಲ್ಲ.

ಎಸ್‌.ಎಂ.ಕೃಷ್ಣ, ಅಂಬರೀಷ್‌ ಇನ್ನೇನು ಬಿಜೆಪಿ ಸೇರಿಯೇ ಬಿಟ್ಟರು ಎಂದು ಹೇಳುತ್ತಿದ್ದ ನೀವು ಈಗ ತಣ್ಣಗಾಗಿದ್ದೀರಿ?
ಎಸ್‌.ಎಂ.ಕೃಷ್ಣ ಅವರು ರಾಜ್ಯ ಕಂಡ ಅತ್ಯಂತ ಸಜ್ಜನ ಮುಖ್ಯಮಂತ್ರಿ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಮಾತುಕತೆಗೆ ಸಮಯ ಕೇಳಿದಾಗ ಕೂಡಲೇ ಸಮಯ ಕೊಟ್ಟರು. ಅವರ ಕುಟುಂಬದೊಂದಿಗೆ 45 ನಿಮಿಷ ಮಾತನಾಡಿದ್ದೇನೆ. ಅದೇ ರೀತಿ ಅಂಬರೀಷ್‌ ಅವರೊಂದಿಗೂ ಮೂರ್ನಾಲ್ಕು ಬಾರಿ ಮಾತನಾಡಿದ್ದೇನೆ. ಕಾಂಗ್ರೆಸ್‌ನಿಂದ ನನಗೆ ಅನ್ಯಾಯವಾಗಿದೆ, ಅವಮಾನವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇಬ್ಬರೂ ಬಿಜೆಪಿಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ನಮ್ಮ ನಾಯಕರು ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆಯಲ್ಲಿ ಮುಳುಗಿದ್ದಾರೆ. ಹೀಗಾಗಿ ಈ ಚುನಾವಣಾ ಫ‌ಲಿತಾಂಶಗಳು ಹೊರಬಿದ್ದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. 

ಹಾಗಿದ್ದರೆ ಎಸ್‌.ಎಂ.ಕೃಷ್ಣ ಬಿಜೆಪಿ ಸೇರುವುದು ಅನುಮಾನವೇ?
ಮತ್ತೆ ಕಾಂಗ್ರೆಸ್‌ನತ್ತ ಹೋಗುವುದಿಲ್ಲ ಎಂದು ಕೃಷ್ಣ ಅವರು ಈಗಾಗಲೇ ಸ್ಪಷ್ಟಪಡಿಸಿದ್ದು, ಬಿಜೆಪಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರು ಯೋಚಿಸಿ ನಿರ್ಧಾರ ಕೈಗೊಳ್ಳುವವರು.

ಅಶೋಕ್‌ ಪಕ್ಷದಲ್ಲಿ ಅಗ್ರೆಸ್ಸಿವ್‌ ಆಗಿದ್ದಾರಾ?
ಹೊಸ ಸರಕಾರ ಬಂದಾಗ ಅದಕ್ಕೆ ಸಾಧನೆ ಮಾಡಲು ಎರಡು – ಮೂರು ವರ್ಷ ಕಾಲಾವಕಾಶ ಕೊಡಬೇಕು ಎಂಬುದು ಜನ ಮನಸ್ಸಿನಲ್ಲಿರುತ್ತದೆ. ಅದೇ ರೀತಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಸಮಯ ಕೊಟ್ಟೆವು. ಆದರೆ, ಸರಕಾರ ಅದನ್ನು ವ್ಯರ್ಥ ಮಾಡಿಕೊಂಡಿತು. ಇನ್ನೊಂದೆಡೆ ಈಗ ಚುನಾವಣೆ ಹತ್ತಿರ ಬರುತ್ತಿದೆ. ನಾನು ಕಳೆದ 40 ವರ್ಷ ಬಿಜೆಪಿ ಮತ್ತು ಸಂಘಟನೆಯಲ್ಲಿದ್ದವನು. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಆ ನಿಟ್ಟಿನಲ್ಲಿ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಸಾಧನೆಗೆ ಸರಿಯಾದ ಸಂದರ್ಭ ಎಂದು ಹೆಚ್ಚು ಹುರುಪಿನಿಂದ ಕೆಲಸ ಮಾಡುತ್ತಿದ್ದೇನೆ.

ನೀವು ಪ್ರತಿಪಕ್ಷದ ಉಪನಾಯಕನಾಗಿದ್ದರೂ ಸದನದಲ್ಲಿ ಆ ಅಗ್ರೆಸಿವ್‌ನೆಸ್‌ ಕಾಣಿಸುತ್ತಿಲ್ಲವಲ್ಲ? 
ಒಬ್ಬೊಬ್ಬರಿಗೆ ಒಂದೊಂದು ವಿಭಾಗ ಆದ್ಯತೆಯ ಕ್ಷೇತ್ರವಾಗಿರುತ್ತದೆ. ನಾನು ಪಕ್ಷದ ಸಂಘಟನೆ, ಹೋರಾಟ, ಚುನಾವಣೆ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದವನು. ಹೀಗಾಗಿ ವಿಧಾನಸಭೆಗಿಂತ ಹೊರಗೆ ಹೆಚ್ಚು ಹೋರಾಟ ಮಾಡುತ್ತೇನೆ. ಆದರೆ, ಬೆಂಗಳೂರು ವಿಚಾರ ಬಂದಾಗ ವಿಧಾನಸಭೆಯಲ್ಲೂ ಸಾಕಷ್ಟು ಹೋರಾಟ ಮಾಡಿದ್ದೇನೆ.

ಅಂದರೆ, ಚುನಾವಣೆ ನೇತೃತ್ವ ವಹಿಸಿ, ಅಧಿಕಾರಕ್ಕೆ ಬಂದು ಉತ್ತಮ ಸ್ಥಾನಮಾನ ಹೊಂದುವತ್ತ ನಿಮ್ಮ ಆಸಕ್ತಿ ಹೆಚ್ಚು?
ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಉಪಮುಖ್ಯ, ಮಂತ್ರಿ ಆಗಿದ್ದೇನೆ, ಈಗ ವಿಧಾನಸಭೆ ಉಪನಾಯಕನಾಗಿದ್ದೇನೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಯತ್ನದಲ್ಲಿದ್ದೇವೆ. ಹೀಗಾಗಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಅಧಿಕಾರ, ಉತ್ತಮ ಸ್ಥಾನಮಾನಕ್ಕಾಗಿ ಅಲ್ಲ. ನನ್ನ ಈ ಕೆಲಸ ನೋಡಿಯೇ ಪಕ್ಷ ಜವಾಬ್ದಾರಿ, ಸ್ಥಾನಮಾನ ಕೊಟ್ಟಿದೆ. 

ಪ್ರತಿಪಕ್ಷ ಉಪನಾಯಕರಾಗಿದ್ದರೂ ವಿಧಾನಸಭೆಯಲ್ಲಿ ಸದಸ್ಯರಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ?
ಇತ್ತೀಚೆಗೆ ನಡೆದ ಅಧಿವೇಶನದ ಅವಧಿ ತುಂಬಾ ಕಡಿಮೆ ಇತ್ತು. ಅಲ್ಲದೆ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಶಾಸಕರು ಕ್ಷೇತ್ರಗಳ ಬಗ್ಗೆ ಗಮನಹರಿಸಿ ಅಧಿವೇಶನದ ಬಗ್ಗೆ ಯೋಚಿಸಲು ಸಮಯ ಇರಲಿಲ್ಲ. ಆದರೆ, ಬಜೆಟ್‌ ಅಧಿವೇಶನದ ವೇಳೆ ಎಲ್ಲರೂ ಒಟ್ಟಾಗಿ ಸೇರಿ ಕಾರ್ಯತಂತ್ರ ರೂಪಿಸುತ್ತೇವೆ. ಯಡಿಯೂರಪ್ಪ ಅವರು ಶೀಘ್ರದಲ್ಲೇ ಒಂದು ಸಭೆ ಕರೆಯಲಿದ್ದಾರೆ. ಅಲ್ಲಿ ನಮ್ಮ ರಾಜಕೀಯ ಚಾಣಾಕ್ಷತನ ಬಳಸಿ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಸರಕಾರದ ಮೇಲೆ ಬಿಡುತ್ತೇವೆ.

ಬೆಂಗಳೂರು ವಿಚಾರ ಬಂದಾಗ ಹೋರಾಟ ಮಾಡುತ್ತೇನೆ ಎನ್ನುತ್ತೀರಿ. ಆದರೆ, ಬಿಬಿಎಂಪಿಯಲ್ಲಿ ತೆರಿಗೆ ಹಣ ದುರುಪಯೋಗ ಕುರಿತು ಹೋರಾಟಕ್ಕೆ ಯಡಿಯೂರಪ್ಪ ಅವರೇ ಕರೆ ಕೊಡಬೇಕಿತ್ತೇ?
ಎಂಟು ತಿಂಗಳ ಹಿಂದೆಯೇ ನಮ್ಮ ಪಕ್ಷದವರೇ ಆದ ಎನ್‌.ಆರ್‌.ರಮೇಶ್‌ ಅವರು ಈ ವಿಚಾರ ಬಹಿರಂಗ ಮಾಡಿದ್ದರು. ಅದನ್ನು ಆಧರಿಸಿ 10-12 ಮಂದಿ ಅಧಿಕಾರಿಗಳು ಅಮಾನತಾಗಿದ್ದಾರೆ. ಯಡಿಯೂರಪ್ಪ ಅವರಿಗೆ ಈ ಪ್ರಕರಣದ ಕುರಿತು ಇನ್ನಷ್ಟು ದಾಖಲೆಗಳು ಸಿಕ್ಕಿರಬಹುದು. ಹೀಗಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಈಗ ಎಲ್ಲರೂ ಸೇರಿ ಈ ವಿಚಾರ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ.

ಬಿಬಿಎಂಪಿ ಅಕ್ರಮ ಗೊತ್ತಿದ್ದರೂ ಮೌನವಾಗಿದ್ದು ಈಗ ಯಡಿಯೂರಪ್ಪ ಅವರೊಂದಿಗೆ ಸೇರಿ ಹೋರಾಟ ಮಾಡುತ್ತೇನೆ ಎನ್ನುತ್ತೀರಿ. ನಿಮ್ಮ ಉದ್ದೇಶ ಯಡಿಯೂರಪ್ಪ ಅವರಿಗೆ ಇದರ ಕ್ರೆಡಿಟ್‌ ನೀಡುವುದೇ?
ನಾನು ಅಧಿಕಾರದಲ್ಲಿದ್ದಾಗ ಬೆಂಗಳೂರಿಗೆ ಕೆಲಸ ಮಾಡಿದ್ದೇನೆ, ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಹೋರಾಟ ಮಾಡಿದ್ದೇನೆ. ಇಲ್ಲಿ ಮೌನ, ಕ್ರೆಡಿಟ್‌ ಪ್ರಶ್ನೆ ಉದ್ಭವವಾಗುವುದಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ಸ್ಪರ್ಧೆ ಇಲ್ಲ. ನನಗೆ ಜನಪ್ರಿಯತೆ ಜಾಸ್ತಿಯಾದರೆ ಅದು ಯಡಿಯೂರಪ್ಪ ಅವರಿಗೂ ಬರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಯಡಿಯೂರಪ್ಪ ಜನಪ್ರಿಯರಾದರೆ ಅದರ ಲಾಭ ನನಗೆ ಸಿಗುತ್ತದೆ. ಒಟ್ಟಿನಲ್ಲಿ ಅದರಿಂದ ಅನುಕೂಲ ಪಕ್ಷಕ್ಕೆ.  

ಅಶೋಕ್‌ ಒಮ್ಮೆ ಯಡಿಯೂರಪ್ಪ ಅವರ ಆಪ್ತ ವಲಯ, ಇನ್ನೊಮ್ಮೆ ಅನಂತಕುಮಾರ್‌ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂಬ ಆರೋಪ ಇದೆಯಲ್ಲಾ?
ನಾನು ಯಾವತ್ತೂ ವ್ಯಕ್ತಿಪರ ಹೋಗಿಲ್ಲ. ಯಡಿಯೂರಪ್ಪ, ಅನಂತಕುಮಾರ್‌ ಅವರಿಗಿಂತ ನನಗೆ ಪಕ್ಷ ಮುಖ್ಯ. ಈಗ ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಈ ದೃಷ್ಟಿಯಿಂದ ಒಬ್ಬ ಕಾರ್ಯಕರ್ತನಾಗಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ.

ಬ್ರಿಗೇಡ್‌ ಗೊಂದಲ ನಿವಾರಣೆಯಾದರೂ ಪಕ್ಷದಲ್ಲಿ ಗೊಂದಲ ಮುಂದುವರಿದಿದೆಯಲ್ಲಾ?
ರಾಜಕೀಯ ಪಕ್ಷ ಎಂದ ಮೇಲೆ ಗೊಂದಲ ಇದ್ದೇ ಇರುತ್ತದೆ. ಸಂತೋಷವೂ ಇರುತ್ತದೆ. ಈಗಿರುವುದು ಸಣ್ಣ ಪುಟ್ಟ ಗೊಂದಲಗಳಷ್ಟೆ. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ. ಅದರಂತೆ ಆ ಗೊಂದಲ ನಿವಾರಣೆಯಾಗುತ್ತದೆ.

ಮತ್ತೇಕೆ ಅನಂತ್‌ಕುಮಾರ್‌ ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ?
ಅನಂತ್‌ಕುಮಾರ್‌ ಅವರು ಕೇಂದ್ರದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ರಾಸಾಯನಿಕ ಗೊಬ್ಬರ ಸಚಿವರಾಗಿ ಆ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಅವರಿಗೆ ಸಮಯ ಸಿಗುತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುತ್ತಾರೆ.

ರಾಜ್ಯ ಸರಕಾರ ಅಭಿವೃದ್ಧಿ ಕೆಲಸದಲ್ಲಿ ವಿಫ‌ಲವಾಗಿದೆ ಎಂದು ನೀವು ಟೀಕಿಸಿದರೆ, ಕೇಂದ್ರದ್ದು ಮಲತಾಯಿ ಧೋರಣೆ ಅಂತ ಕಾಂಗ್ರೆಸ್ಸಿಗರು ಹೇಳ್ತಿದ್ದಾರಲ್ಲ?
ಕಾಂಗ್ರೆಸ್‌ನವರಿಗೆ ನಿಜವಾದ ಆತ್ಮಸಾಕ್ಷಿ ಇದ್ದರೆ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ್ಯಾವ ಇಲಾಖೆಗಳಿಗೆ ಕೇಂದ್ರದಿಂದ ಎಷ್ಟು ಹಣ ಬಂದಿದೆ? ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಬರ ಪರಿಹಾರಕ್ಕಾಗಿ ರಾಜ್ಯಕ್ಕೆ ಕೇಂದ್ರದಿಂದ 1782 ಕೋಟಿ ರೂ. ಮಂಜೂರಾಗಿದೆ. ಇತಿಹಾಸದಲ್ಲೇ ಇಷ್ಟೊಂದು ಮೊತ್ತ ಬರ ಪರಿಹಾರಕ್ಕೆ ಬಂದ ಉದಾಹರಣೆ ಇದೆಯೇ?

ಏನೇ ಹೇಳಿದರೂ ಮಹದಾಯಿ ವಿವಾದ ಬಗೆಹರಿಸಲು ಸಾಧ್ಯವಾಗಲಿಲ್ಲ ಏಕೆ?
ಗೋವಾ ವಿಧಾನಸಭೆ ಚುನಾವಣೆ ಕಾರಣದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಚುನಾವಣಾ ಫ‌ಲಿತಾಂಶ ಹೊರಬಿದ್ದ ಮೇಲೆ ಕುಡಿಯುವ ನೀರಿನ ಹಕ್ಕನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹದಾಯಿ ವಿಚಾರದಲ್ಲಿ ನ್ಯಾಯ ಕೊಡಿಸಲು ನಾವೇ ಮುಂದೆ ಹೋಗುತ್ತೇವೆ. ಅದರಲ್ಲಿ ಯಶಸ್ವಿಯೂ ಆಗುತ್ತೇವೆ.

– ಆರ್‌.ಅಶೋಕ್‌ ; ಮಾಜಿ ಉಪ ಮುಖ್ಯಮಂತ್ರಿ

— ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ

BBK-11

BBK11: ಇಂದು ರಾತ್ರಿ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ… ಆಯುಕ್ತರ ಪಿಎ ಸೇರಿ ಐವರ ಬಂಧನ

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ

7-ks-eshwarappa

State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ

police

Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು

1-baba

Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kenchappa-Gowda

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

9(1

Manipal: ಮಣ್ಣಪಳ್ಳ ಕೆರೆಯಲ್ಲಿ ನಡೆದಿತ್ತು ಕಂಬಳ!

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ

8-

Madikeri: ಕಾಡಾನೆ ದಾಳಿ-ವ್ಯಕ್ತಿ ಸಾವು : ಶಾಸಕರ ಭೇಟಿ

BBK-11

BBK11: ಇಂದು ರಾತ್ರಿ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.