ಟಿಪ್ಪು ಜಯಂತಿ ಕಾಂಗ್ರೆಸ್‌ ಆಫೀಸಲ್ಲಿ ಮಾಡಿಕೊಳ್ಳಲಿ


Team Udayavani, Oct 26, 2017, 9:53 AM IST

26-15.jpg

ಮತ್ತೂಂದು ಟಿಪ್ಪು ಜಯಂತಿ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಅದಕ್ಕೆ ವಿರೋಧವೂ ಹೆಚ್ಚಾಗುತ್ತಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಬಿಜೆಪಿ ಈ ವಿಚಾರವನ್ನೇ ಪ್ರಮುಖ ಅಜೆಂಡಾ ಆಗಿ ಬಳಸಿಕೊಂಡು ಹಿಂದೂಗಳ ಮತಗಳನ್ನು ಕ್ರೋಡೀಕರಿಸುವ ಪ್ರಯತ್ನ ಮಾಡುತ್ತಿದೆ. ಈ ವರ್ಷ ಟಿಪ್ಪು ಜಯಂತಿ ವಿರೋಧಿಸುವಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ನಾಯಕರು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸರಕಾರವನ್ನು ಮನವಿ ಮಾಡಿದ್ದಾರೆ. ಇದರೊಂದಿಗೆ ವಿವಾದವೀಗ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರಮುಖ ವಿಪಕ್ಷ ಬಿಜೆಪಿಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಉದಯವಾಣಿ “ನೇರಾನೇರ ‘ ಮಾತಿಗಿಳಿದಾಗ…

ನಿಮ್ಮ ವೋಟ್‌ ಬ್ಯಾಂಕ್‌ ಅಜೆಂಡಾ ಮುಂದಿಟ್ಟುಕೊಂಡು ಟಿಪ್ಪು ಜಯಂತಿಯನ್ನು ವಿರೋಧಿಸುವುದು ಎಷ್ಟು ಸರಿ?
ಟಿಪ್ಪು ಜಯಂತಿಯನ್ನು ನಾವು ಈಗ ವಿರೋಧಿಸುತ್ತಿಲ್ಲ. ಮೊದಲ ವರ್ಷದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ. ಟಿಪ್ಪು ಜಯಂತಿಯನ್ನು ಸರಕಾರದಿಂದ ಆಚರಿಸುವುದು ಬೇಡ ಎಂಬುದೊಂದೇ ನಮ್ಮ ಆಗ್ರಹ. ಅದಕ್ಕಾಗಿ ಯಾರು ಮನವಿ ಮಾಡಿದ್ದಾರೆ? ಅಷ್ಟಕ್ಕೂ ನಮ್ಮ ವಿರೋಧ ಜನಾಭಿಪ್ರಾಯವನ್ನು ಆಧರಿಸಿರುವಂತಹದ್ದು. ರಾಜ್ಯದ ಬಹುಸಂಖ್ಯಾಕ ಜನರು ಟಿಪ್ಪು ಜಯಂತಿ ಬೇಡ ಎನ್ನುತ್ತಾರೆ. ಅವರಿಗೆ ಬೆಂಬಲವಾಗಿ ನಾವು ನಿಂತಿದ್ದೇವೆ. ಈ ವಿಚಾರದಲ್ಲಿ ವೋಟ್‌ ಬ್ಯಾಂಕ್‌ ಅಜೆಂಡಾ ನಮ್ಮದಲ್ಲ, ಕಾಂಗ್ರೆಸ್‌
ನವರದ್ದು. ರಾಜ್ಯದ ಎಲ್ಲ ಮುಸ್ಲಿಮರ ಮತಗಳೂ  ಕಾಂಗ್ರೆಸ್‌ಗೆ ಬರಬೇಕು ಎಂಬ ಕಾರಣಕ್ಕಾಗಿ ಟಿಪ್ಪು ಜಯಂತಿ ರಾಜಕೀಯ ಮಾಡುತ್ತಿದೆ.

ನೀವೇ ಆಯ್ಕೆ ಮಾಡಿದ ರಾಷ್ಟ್ರಪತಿಗಳೇ ವಿಧಾನಸೌಧ ವಜ್ರಮಹೋತ್ಸವದ ವೇಳೆ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವಾಗ ಟಿಪ್ಪು ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರಲ್ಲಾ?
ಟಿಪ್ಪು ಬ್ರಿಟಿಷರೊಂದಿಗೆ ಹೋರಾಡುತ್ತಾ ವೀರ ಮರಣವನ್ನಪ್ಪಿದ್ದ. ಮೈಸೂರು ರಾಕೆಟ್‌ ಅಭಿವೃದ್ಧಿಪಡಿಸಿ ಅದನ್ನು ಯುದ್ಧಭೂಮಿಯಲ್ಲಿ ಬಳಸಿದ. ನಂತರದಲ್ಲಿ ಈ ತಂತ್ರಜ್ಞಾನವನ್ನು ಯುರೋಪಿಯನ್ನರು ಬಳಸಿಕೊಂಡರು ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆತ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ಇದನ್ನು ಮಾಡಿದ್ದಾನೆ. ಆದರೂ ಈ ಯಾವ ಅಂಶಗಳ ಬಗ್ಗೆಯೂ ನಮ್ಮ ತಕರಾರಿಲ್ಲ. ನಾವು ಪ್ರಸ್ತಾಪಿಸುತ್ತಿರುವುದು ಹಿಂದೂಗಳು, ಕ್ರೈಸ್ತರನ್ನು ಕೊಲೆ ಮಾಡಿರುವ, ದೇವಸ್ಥಾನಗಳನ್ನು ನಾಶ ಮಾಡಿರುವ, ಮತಾಂತರ ಮಾಡಿರುವ ಆತನ ಮತಾಂಧತೆ ಬಗ್ಗೆ. ಅಂಥವನ ಜಯಂತಿ ಸರಕಾರದಿಂದ ಆಚರಿಸಬೇಕೇ ಎಂದು ಪ್ರಶ್ನಿಸುತ್ತಿದ್ದೇವೆ.

ಅನೇಕ ಮಹಾಪುರುಷರು, ದಾರ್ಶನಿಕರ ಜಯಂತಿ ಗಳನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ, ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಜಯಂತಿ ಮಾಡಿದರೆ ತಪ್ಪೇನು?
ಯಾರನ್ನಾದರೂ ಮಹಾಪುರುಷ ಎಂದು ಹೇಳಬೇಕಾದರೆ ಆತನನ್ನು ನೆನಪಿಸಿಕೊಂಡಾಗ ನಮಗೆ ಪ್ರೇರಣೆ ಸಿಗಬೇಕು, ಹೆಮ್ಮೆಯಾಗಬೇಕು. ಹಿಂದೆ ಮಹಾಪುರುಷರ ಜಯಂತಿ ಆಚರಣೆ ಮಾಡಿದಾಗ ರಾಜ್ಯದಲ್ಲಿ ಜನ ಖುಷಿ ಪಟ್ಟು, ಪಟಾಕಿ ಸಿಡಿಸಿದ್ದಾರೆ. ಆದರೆ ಟಿಪ್ಪುವನ್ನು ನೆನಪಿಸಿಕೊಂಡಾಗ ಆತನ ಬರ್ಬರ ಕೃತ್ಯಗಳು ನೆನಪಾಗುತ್ತವೆ. ಆತ ಕೋಮುವಾದಿ,  ದೇವಸ್ಥಾನಗಳನ್ನು ಒಡೆದವನು, ಹಿಂದೂಗಳ ಮಾರಣ ಹೋಮ ಮಾಡಿದವನು, ಏಸುಕ್ರಿಸ್ತನನ್ನು ಪೂಜೆ ಮಾಡು 
ತ್ತಾರೆ ಎಂಬ ಕಾರಣಕ್ಕೆ ಕ್ರೈಸ್ತರನ್ನು ಕೊಂದವನು, ಕನ್ನಡಕ್ಕೆ ಅವಮಾನ ಮಾಡಿ ಪರ್ಷಿಯನ್‌ ಭಾಷೆ ಜಾರಿಗೆ ತಂದವನು ಮುಂತಾದ ವಿಕೃತಿಗಳೇ ಕಣ್ಣೆದುರು ಬರುತ್ತವೆ. ಮದಕರಿ ನಾಯಕನನ್ನು ಕೋಲಾರದ ಬಳಿ ಯಾವುದೋ ಗುಹೆಯಲ್ಲಿಟ್ಟು ಕುಡಿಯಲು ನೀರೂ ಕೊಡದೆ ಸಾಯಿಸಿದ ವನು ಎಂದು ನೋವಾಗುತ್ತದೆ.

ಇವೆಲ್ಲಾ ಬಿಜೆಪಿ, ಸಂಘ ಪರಿವಾರದ ಸುಳ್ಳು ಆರೋಪ. ಟಿಪ್ಪು ಕೋಮುವಾದಿಯಲ್ಲ. ಆತ ಎಲ್ಲರನ್ನೂ ಸಮನಾಗಿ ಕಂಡಿದ್ದಾನೆ ಎಂದು ಹೇಳುತ್ತಾರಲ್ಲಾ?
ಆ ರೀತಿ ಹೇಳುವವರು ಟಿಪ್ಪುವಿನ ಇತಿಹಾಸವನ್ನು ಒಮ್ಮೆ ಸರಿಯಾಗಿ ಓದಲಿ. ಆತ ಏನೆಂದು ಗೊತ್ತಾಗುತ್ತದೆ. ಟಿಪ್ಪು ಬಗ್ಗೆ ಅಪಪ್ರಚಾರ ಬಿಜೆಪಿ, ಸಂಘ ಪರಿವಾರದ ಅಜೆಂಡಾ ಎಂದಾದರೆ ಕಾಂಗ್ರೆಸ್‌ ಅಜೆಂಡಾ ಏನು? ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂಗಳನ್ನು ವಿರೋಧಿಸುವುದು, ಟಿಪ್ಪು ಓಲೈಕೆ ಮಾಡಿ ಹಿಂದೂಗಳನ್ನು ಅವಮಾನ ಮಾಡುವುದು ಕಾಂಗ್ರೆಸ್‌ ಅಜೆಂಡಾನಾ? ಅಷ್ಟಕ್ಕೂ ಟಿಪ್ಪು ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವವರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ಮೂಲಭೂತವಾದಿ ಸಂಘಟನೆಗಳಾದ ಪಿಎಫ್ಐ ಮತ್ತು ಕೆಎಫ್ಡಿ ಕಾರ್ಯಕರ್ತರು. ಅಂಥವರನ್ನು ಓಲೈಸಲು ಕಾಂಗ್ರೆಸ್‌ ಟಿಪ್ಪು ಜಯಂತಿ ಮಾಡಿ ಬಿಜೆಪಿ, ಸಂಘ ಪರಿವಾರದ ಮೇಲೆ ಆರೋಪ ಮಾಡುತ್ತಿದ್ದಾರೆ.

ನಿಮ್ಮ ರಾಜ್ಯಾಧ್ಯಕ್ಷರಾದ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಟಿಪ್ಪು ಪೇಟಾ ತೊಟ್ಟು, ಖಡ್ಗ ಹಿಡಿದು ಪ್ರದರ್ಶನ ಮಾಡಿದಾಗ ಅದು ಸರಿ. ಸರಕಾರ ಟಿಪ್ಪು ಜಯಂತಿ ಆಚರಿಸಿದರೆ ಅದು ತಪ್ಪು. ಏಕೀ ದ್ವಂದ್ವ?
ದ್ವಂದ್ವ ನಮ್ಮಲ್ಲಿಲ್ಲ. ಬಿಜೆಪಿಗೆ ಟಿಪ್ಪು ಜಯಂತಿ ಆಚರಿಸಬೇಕು ಎಂಬ ಕಲ್ಪನೆಯೂ ಇರಲಿಲ್ಲ, ಯೋಚನೆಯೂ ಬರಲಿಲ್ಲ. ಮುಸ್ಲಿಂ ಸಮುದಾಯದ ಯಾವುದೋ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಟಿಪ್ಪು ಪೇಟಾ ಮತ್ತು ಗೌನ್‌ ಹಾಕಿಸಿ ಕೈಗೆ ಖಡ್ಗ ಕೊಟ್ಟಿದ್ದರು. ಅದೇನೂ ಸರಕಾರಿ ಕಾರ್ಯಕ್ರಮ ಆಗಿರಲಿಲ್ಲ ಮತ್ತು ಸರಕಾರದ ಹಣವನ್ನು ಖರ್ಚು ಮಾಡಿಲ್ಲ. ಅವರೂ (ಕಾಂಗ್ರೆಸ್‌) ಯಾವುದೋ ವೇದಿಕೆಯಲ್ಲಿ ಹೋಗಿ ಟಿಪ್ಪು ಅಲ್ಲ, ಇನ್ಯಾರದ್ದಾದರೂ ಜಯಂತಿ ಮಾಡಿಕೊಳ್ಳಲಿ, ವೇಷ ಹಾಕಲಿ. ನಮ್ಮ ಅಭ್ಯಂತರ ಇಲ್ಲ.

    ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಹಿಂದೂ ಮತಗಳನ್ನು ಕ್ರೋಡೀಕರಿಸಲು ಈ ವರ್ಷ ಟಿಪ್ಪು³ ಜಯಂತಿ ವಿವಾದ ದೊಡ್ಡದು ಮಾಡುತ್ತಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ?
ಈ ಬಾರಿ ಇಷ್ಟು ಬಲವಾಗಿ ವಿರೋಧ ಮಾಡಲು ಕಾರಣವಿದೆ. 2015ರಲ್ಲಿ ಟಿಪ್ಪು ಜಯಂತಿ ನಡೆದಾಗ ಮಡಿಕೇರಿಯಲ್ಲಿ ಕುಟ್ಟಪ್ಪ ಎಂಬುವರನ್ನು ಕೊಡಗು ಜಿಲ್ಲೆಯ, ಕರಾವಳಿ ಮತ್ತು ಹೊರಭಾಗದಿಂದ ಬಂದಿದ್ದ ಪಿಎಫ್ಐ, ಕೆಎಫ್ಡಿ ಕಾರ್ಯಕರ್ತರು ಮಡಿಕೇರಿಯಲ್ಲಿ ಕಲ್ಲು ಹೊಡೆದು ಕೊಂದರು. ರಾಜ್ಯದ ಹಲವಾರು ಕಡೆ ಅಹಿತಕರ ಘಟನೆಗಳು ನಡೆದವು. ಅನೇಕ ಗಲಭೆಗಳಾದವು. ಸಾವಿರಾರು ಜನರ ಮೇಲೆ ಪ್ರಕರಣ ದಾಖಲಿಸಿ ಈಗಲೂ ಅವರು ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ. ಮತ್ತೆ ಅಂತಹ ಘಟನೆಗಳು ಮರುಕಳಿಸಬಾರದು. ಹಾಗಾಗಿ ಸರಕಾರದಿಂದ ಟಿಪ್ಪು ಜಯಂತಿ ಬೇಡ ಎಂದು ಗಟ್ಟಿ ಧ್ವನಿಯಲ್ಲಿ ಒತ್ತಾಯಿಸುತ್ತಿದ್ದೇವೆ.

ಹಾಗಿದ್ದರೆ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಹಾಕದಂತೆ ಸರಕಾರಕ್ಕೆ ಮನವಿ ಸಲ್ಲಿಸುವ ಮಟ್ಟಕ್ಕೆ ಹಿಂದೆಂದೂ ಇಲ್ಲದ ರೀತಿಯಲ್ಲಿ 
ವಿವಾದ ಸೃಷ್ಟಿಸಿದ್ದೇಕೆ?

ಈ ವಿಚಾರ ಶುರುವಾಗಿದ್ದು ಪ್ರಕಾಶ್‌ ರೈ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವ ವಿಚಾರದಲ್ಲಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಪ್ರಕಾಶ್‌ ರೈ ಅವರಿಗೆ ಪ್ರಶಸ್ತಿ ನೀಡಬಾರದು ಎಂಬುದು ಬಿಜೆಪಿ ಒತ್ತಾಯವಾಗಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಮತದಾರರು ನನಗೆ ಕರೆ ಮಾಡಿ ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರಿದೆ. ನೀವು ಪಾಲ್ಗೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದರು. ಅನಂತರ ಟಿಪ್ಪು ಜಯಂತಿ ವಿಚಾರ ಬಂದಾಗಲೂ ಇದೇ ರೀತಿಯ ಒತ್ತಾಯ ಮಾಡಿದ್ದರು. ಅದಕ್ಕಾಗಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಟಿಪ್ಪು ಜಯಂತಿ ವಿಚಾರದಲ್ಲಿ ಇದೇರೀತಿಯ ಒತ್ತಾಯ ಪಕ್ಷದ ಇತರ ನಾಯಕರ ಮೇಲೂ ಬಂದಿದ್ದರಿಂದ ಅವರು ಕೂಡ ತಮ್ಮ ಹೆಸರು ಹಾಕದಂತೆ ಸೂಚಿಸಿರಬಹುದು.

    ಟಿಪ್ಪು ಜಯಂತಿ ವಿರೋಧ ನೆಪದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಸಹಿಸುವುದಿಲ್ಲ ಎಂದು ಸರಕಾರ ಎಚ್ಚರಿಕೆ ನೀಡಿದೆ. ಬಿಜೆಪಿಯಿಂದ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ಮಾಡುತ್ತೀರಾ?
ಬಹುಸಂಖ್ಯಾಕ ಸಮುದಾಯಕ್ಕೆ ವಿರೋಧವಾಗಿ ಸರಕಾರ ನಡೆದುಕೊಂಡಾಗ ಅದರ ವಿರುದ್ಧ ಜನ ಪ್ರತಿಭಟನೆ ಮಾಡುವುದು ಸಂವಿಧಾನದಲ್ಲಿ ನೀಡಿರುವ ಹಕ್ಕು. ಜನಿ ವಿರೋಧಿಸಿದರೂ ಟಿಪ್ಪು ಜಯಂತಿ ಆಚರಿಸಿಯೇ ತೀರುತ್ತೇವೆ ಎಂದು ಸರಕಾರ ಪಟ್ಟು ಹಿಡಿದರೆ ವಿರೋಧಿಸು ವವರು ಪ್ರತಿಭಟನೆ ನಡೆಸುವುದು ಸಹಜ. ಸಂಘ ಪರಿವಾರದವರು ಪ್ರತಿಭಟನೆ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಪಕ್ಷ ಇನ್ನೂ ತೀರ್ಮಾನಿಸಿಲ್ಲ. ನಾನು ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿರುತ್ತೇನೆ. ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ ನೋಡೋಣ. ಅಷ್ಟಕ್ಕೂ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎನ್ನುವುದು ಸರಿಯಲ್ಲ. ಹಾಗೇನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ.

ಅಂತೂ ಟಿಪ್ಪು ಜಯಂತಿ ವಿವಾದವನ್ನು ನೀವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೀರಿ?
ಪ್ರತಿಷ್ಠೆಯಾಗಿ ಪರಿಗಣಿಸಿದ್ದು ನಾವಲ್ಲ, ಕಾಂಗ್ರೆಸ್‌ ಸರಕಾರ. ಜನಾಭಿಪ್ರಾಯವೇನು ಎಂಬುದನ್ನು ತಿಳಿದುಕೊಳ್ಳದೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಂದು ಜನ ಆಯ್ಕೆ ಮಾಡಿ ಕಳುಹಿಸಿದರೆ ಅಭಿವೃದ್ಧಿ ಕೆಲಸ ಮಾಡಲು ಯೋಗ್ಯತೆ ಇಲ್ಲ ಇವರಿಗೆ. ಅದನ್ನು ಮುಚ್ಚಿಡಲು ಏನಾದರೂ ವಿವಾದ ಸೃಷ್ಟಿಸುತ್ತಾರೆ. ಆ ಮೂಲಕ ವಿಷಯಾಂತರ ಮಾಡುತ್ತಾರೆ. ಹಿಂದೂಗಳಿಗೆ ನೋವಾದರೂ ಪರವಾಗಿಲ್ಲ, ಮುಸ್ಲಿಮರ ಮತಗಳು ಶೇಕಡಾ ನೂರರಷ್ಟು ನಮಗೇ ಬರಬೇಕು ಎಂಬುದು ಕಾಂಗ್ರೆಸ್‌ನವರ ಯೋಚನೆ. ಮುಸ್ಲಿಮರ ಮತಕ್ಕಾಗಿ ಅವರು ಕಾಂಗ್ರೆಸ್‌ ವತಿಯಿಂದಲೇ ಟಿಪ್ಪು ಜಯಂತಿ ಆಚರಿಸಿಕೊಳ್ಳಲಿ. ಸರ್ಕಾರದ ಹಣ, ವ್ಯವಸ್ಥೆ ಪೋಲು ಮಾಡುವುದು ಬೇಡ.

ಒಪ್ಪಿಕೊಳ್ಳಲು ಸಾಧ್ಯವೇ?
ಮೈಸೂರು ಮಹಾರಾಜರನ್ನು ನೆನಪು ಮಾಡಿಕೊಂಡರೆ ಹೆಮ್ಮೆಯಾಗುತ್ತದೆ. ಅವರ ಹೆಸರಿನ ಕಾಲೇಜುಗಳು, ಕನ್ನಂಬಾಡಿ ಕಟ್ಟೆ, ಜಲವಿದ್ಯುತ್‌ ಯೋಜನೆ… ಹೀಗೆ ಜನಪರ ಕೆಲಸ ಮಾಡಿದರು. ಆ ಕಾರಣಗಳಿಗಾಗಿ ಮೈಸೂರಿನ ಜನ ಇವತ್ತಿಗೂ ರಾಜವಂಶಸ್ಥರನ್ನು ಕಂಡಾಗ ನೆಲ ಮುಟ್ಟಿ ನಮಸ್ಕಾರ ಮಾಡುತ್ತಾರೆ. ಅಂಥವರ ಆಸ್ತಿಯನ್ನು ದುಷ್ಟ ಸರಕಾರಗಳು ಕಿತ್ತುಕೊಂಡವು. ಆ ರಾಜಮನೆತನಕ್ಕೆ ಅವಮಾನ ಮಾಡಿದ, ಅವರ ವಂಶವನ್ನೇ ನಿರ್ವಂಶಗೊಳಿಸುವ ದುರಾಲೋಚನೆ ಮಾಡಿದ್ದ ಟಿಪ್ಪುವಿನ ಜಯಂತಿಯನ್ನು ಸರಕಾರದಿಂದ ಮಾಡುತ್ತೇವೆ ಎಂದರೆ ಒಪ್ಪಿಕೊಳ್ಳಲು ಸಾಧ್ಯವೇ?

ಸಂದರ್ಶನ ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.