ನಮಗೆ ಸವಾಲೊಡ್ಡುವ ಮಹಾಮೈತಿ‹ಕೂಟ ಅದೆಲ್ಲಿದೆ?
Team Udayavani, Jul 31, 2018, 6:00 AM IST
ರಾಹುಲ್ ಗಾಂಧಿ ಬಗ್ಗೆ ತಲೆಕೆಡಿಸಿಕೊಂಡಿರುವವರು ನಾವಲ್ಲ, ನೀವು(ಮಾಧ್ಯಮಗಳು). ನಾವು ನಮ್ಮ ಗುಣಾತ್ಮಕ ಅಜೆಂಡಾವನ್ನು ತೋರಿಸುವಲ್ಲಿ ಬ್ಯುಸಿ ಮತ್ತು ಖುಷಿಯಾಗಿದ್ದೇವೆ. ಆದರೆ ನೀವು ಮಾಧ್ಯಮದವರು ಮಾತ್ರ ಇನ್ನೂ ರಾಹುಲ್, ಧ್ರುವೀ ಕರಣ…ಇತ್ಯಾದಿಗಳ ಗುಂಗಿನಲ್ಲೇ ಇದ್ದೀರಿ. ನಾವು ಇಂಥ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲಾರದಷ್ಟು ಬೆಳೆದಿದ್ದೇವೆ.
ನೀವು ದೇಶಾದ್ಯಂತ ಬಹಳ ತಿರುಗಾಡುತ್ತೀರಿ. ಮೋದಿ ಸರ್ಕಾರದ ಪರವಿದ್ದ ಗಾಳಿ ಈಗ ಬದಲಾಗಿದೆ ಎಂದು ಅನ್ನಿಸುತ್ತಿದಾ?
ಖಂಡಿತ ಇಲ್ಲ. ಆ ಗಾಳಿ ಈಗ ಇನ್ನೂ ಬಲಿಷ್ಠವಾಗಿದೆ ಮತ್ತು ರಭಸವಾಗಿದೆ.
ಹಾಗೆ ಭಾವಿಸಲು ಕಾರಣವೇನು?
ವಸ್ತುಸ್ಥಿತಿಯ ಅವಲೋಕನ ಕಾರಣ. ಅಲ್ಲದೇ ನಮ್ಮ ಪರಿಶ್ರಮದ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ. ನಾನು ಇದುವರೆಗೂ 7 ಲಕ್ಷ ಕಿಲೋಮೀಟರ್‌ಗೂ ಹೆಚ್ಚು ರಸ್ತೆ ಸಂಚಾರ ಮಾಡಿದ್ದೇನೆ. ಅಲೆ ನಮ್ಮ ಪರವಾಗಿಯೇ ಇದೆ ಎನ್ನುವುದನ್ನು ಅರಿತಿದ್ದೇನೆ.
ಪ್ರತಿಪಕ್ಷಗಳು ನಿಮ್ಮ ವಿರುದ್ಧ ಏಕಶಕ್ತಿಯಾಗಿ ಹೋರಾಡಲು ನಿರ್ಧರಿಸಿವೆಯಲ್ಲ?
ಇವರೆಲ್ಲ ಯಾವ ರಾಜ್ಯದಲ್ಲಿ ನಮಗೆ ಸವಾಲೊಡ್ಡಬಲ್ಲರು? ನಾವು ನಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಉತ್ತರ ಪ್ರದೇಶದಲ್ಲಾ? ಅಥವಾ ಕಾಂಗ್ರೆಸ್ ನಿರ್ಮೂಲನೆಯಾಗಿರುವ ಮಹಾರಾಷ್ಟ್ರದಲ್ಲಾ? ತಮಿಳುನಾಡು, ಮಧ್ಯಪ್ರದೇಶ ಅಥವಾ ಪಶ್ಚಿಮ ಬಂಗಳಾದಲ್ಲಾ? ಇಲ್ಲೆಲ್ಲ ನಾವು 42 ಸ್ಥಾನದಲ್ಲಿ ಅರ್ಧಕ್ಕರ್ಧ ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದ್ದೀವಿ. ಅಥವಾ ಬಿಹಾರದಲ್ಲಾ? ಬಿಹಾರದಲ್ಲಿ ನಾವು ಸೋತಿರಬಹುದು, ಆದರೆ ಅಲ್ಲಿ ನಮ್ಮ ಪರ ಮತದಾರರ ಪ್ರಮಾಣ ಹೆಚ್ಚಾಗಿದೆ. ಅಲ್ಲಿರುವ ನಮ್ಮ ಮೈತ್ರಿಯೂ ಬಲಿಷ್ಠವಾಗಿದೆ. ಹಾಗಿದ್ದರೆ ಬಿಜೆಪಿಯನ್ನು ಹಿಂದಿಕ್ಕುವ ಈ ಮಹಾಗಠಬಂಧನ್ ಎಲ್ಲಿದೆ? ಬಿಜೆಪಿಗೆ ಸವಾಲೊಡ್ಡುವವರು ದೂರ ದೂರಕ್ಕೂ ಒಬ್ಬರೂ ಕಾಣಿಸುತ್ತಿಲ್ಲ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಿಜೆಪಿಯ ಜೊತೆ ಕೈಜೋಡಿಸುವ ಸಾಧ್ಯತೆ ಇದೆಯೇ?
(ನಕ್ಕು) ಸದ್ಯಕ್ಕಂತೂ ಶಿವಸೇನೆಯೇ ನಮ್ಮ ಮಿತ್ರ ಪಕ್ಷ
ಟಿಡಿಪಿಯ ಬಳಿ ಮತ್ತೆ ಹೋಗುತ್ತೀರಾ?
ಸಾಧ್ಯವೇ ಇಲ್ಲ. ಅವರು ನಮ್ಮಿಂದ ದೂರವಾಗಿದ್ದಾರೆ. ನಾವು ಮತ್ತೆ ಅವರ ಬಳಿ ಹೋಗಲಾರೆವು.
ಜಮ್ಮು ಕಾಶ್ಮೀರದ ವಿಷಯದಲ್ಲಿ ನಿಮ್ಮ ಪಕ್ಷದ ನಿಲುವನ್ನು ಟೀಕಾಕಾರರು ಪ್ರಶ್ನಿಸುತ್ತಾರೆ. ಬಿಜೆಪಿ ಕೇವಲ ಹಿಂದೂ ನೀತಿ ಅನುಸರಿಸಿತು, ಮುಸ್ಲಿಂ ಬಾಹುಳ್ಯದ ಕಾಶ್ಮೀರಕ್ಕಿಂತ ಜಮ್ಮು ಮತ್ತು ಲದಾಖ್ ಬಗ್ಗೆಯೇ ಹೆಚ್ಚು ಕಾಳಜಿವಹಿಸಿತ್ತು ಎನ್ನುವ ಟೀಕೆಯಿದೆ..
ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ಉತ್ತಮ ಸರ್ಕಾರದ ಗುಣ. ನಾವು ಜಮ್ಮು ಭಾಗಕ್ಕಾಗಿ ಹೆಚ್ಚು ಕೆಲಸ ಮಾಡಿದ್ದಕ್ಕೆ ಕಾರಣವೇನೆಂದರೆ ಆ ಭಾಗ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸ್ವಾತಂತ್ರಾÂ ನಂತರದಿಂದ ಜಮ್ಮು ಮತ್ತು ಲದಾಖ್ ಅನ್ನು ಹಿನ್ನೆಲೆಗೆ ತಳ್ಳಲಾಗಿದೆ. ಇತಿಹಾಸದಲ್ಲಾದ ಈ ತಪ್ಪುಗಳನ್ನು ನಾವು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿ ಪಕ್ಷಪಾತದ ಬಗ್ಗೆ ನೀವು ಆರೋಪಿಸುತ್ತೀರಿ ಎಂದರೆ, ನೀವು ಬೆರಳು ತೋರಿಸಬೇಕಿರುವುದು ಕಾಂಗ್ರೆಸ್‌ನತ್ತ. ಅಲ್ಲಿನ ಅಸಮಾನತೆಗೆ ಆ ಪಕ್ಷವೇ ಕಾರಣ. ಇದೆಲ್ಲ ನೆಹರೂರವರ ಬಳುವಳಿ.
ಬಿಜೆಪಿ ಮೇಲಿರುವ ಅತಿದೊಡ್ಡ ಟೀಕೆಯೆಂದರೆ, ಅದು ದೇಶದಲ್ಲಿ ಹೆಚ್ಚಾಗುತ್ತಿರುವ ಲಿಂಚಿಂಗ್ ಮತ್ತು ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ತಡೆಯಲು ವಿಫಲವಾಗುತ್ತಿದೆ ಎನ್ನುವುದು.
ಇದೆಲ್ಲ ಕೇವಲ ಈಗಷ್ಟೇ ನಡೆಯುತ್ತಿರುವುದಲ್ಲ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇಂಥ ಘಟನೆಗಳು ಯುಪಿಎ ಸಮಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಾಗುತ್ತಿದ್ದವು. ಲಿಂಚಿಂಗ್ ಪ್ರಕರಣಗಳು ಅಥವಾ ಕೋಮು ಅಪರಾಧಗಳು ಈಗ ಹೆಚ್ಚಾಗಿಲ್ಲ, ಬದಲಾಗಿ, ಅವುಗಳ ಬಗ್ಗೆ ವರದಿಗಳು ಹೆಚ್ಚಾಗುತ್ತಿವೆ. ಟೀಕೆಗಳೇನೇ ಇದ್ದರೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂಥ ಅಪರಾಧ ಪ್ರಕರಣಗಳಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾದವರು ಕಾನೂನಿನ ಕೈಯಿಂದ ತಪ್ಪಿಸಿಕೊಂಡ ಒಂದೇ ಉದಾಹರಣೆಯೂ ಇಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಎಫ್ಐಆರ್ ದಾಖಲಿಸಲಾಗಿದೆ. ಸಮಸ್ಯೆಯಿರುವುದು ಮಾಧ್ಯಮಗಳು ಸೃಷ್ಟಿಸುತ್ತಿರುವ ಪರಿಕಲ್ಪನೆಯಲ್ಲಿ.
ಇದರರ್ಥ?
ಇದರರ್ಥವೇನೆಂದರೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಇಂಥ ಘಟನೆಗಳ ಬಗ್ಗೆ ಆಗ ಯಾವ ಮಾಧ್ಯಮದವರೂ ಮಾತನಾಡಲಿಲ್ಲ. ನೀವೆಲ್ಲ (ಪತ್ರಕರ್ತರು) ಸಂಶೋಧನೆ ಮಾಡಿದರೆ ಸತ್ಯವೇನೆಂದು ತಿಳಿಯುತ್ತದೆ. ಆ ಸಮಯದಲ್ಲಿ ಇಂಥ ಘಟನೆಗಳ ಸಂಖ್ಯೆ ಇನ್ನೂ ಹೆಚ್ಚಿತ್ತು. ಸತ್ಯವನ್ನು ಹೇಳುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ.
ಹಾಗಿದ್ದರೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ನಿಮ್ಮ ಪಕ್ಷದವರನ್ನೇಕೆ ನೀವು ತಡೆಯುವುದಿಲ್ಲ?
ಹೇಗೆ ತಡೆಯಲಿ ನಾನು? ನಾನು ಎಲ್ಲರ ಬಾಯಿಗೆ ಬೀಗ ಹಾಕಬಲ್ಲೆನಾ? ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವವಿದೆ. ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನೀವ್ಯಾಕೆ ಅಂಥ ಹೇಳಿಕೆಗಳಿಗೆ ಪಬ್ಲಿಸಿಟಿ ಕೊಡುತ್ತೀರಿ? ನೀವು ಇಂಥ ಶಕ್ತಿಗಳಿಗೆ ಅನವಶ್ಯಕ ಪಬ್ಲಿಸಿಟಿ ಕೊಟ್ಟು, ನಂತರ ನಮ್ಮನ್ನು ಅಸಮರ್ಥರೆಂದು ಟೀಕಿಸುತ್ತೀರಿ. ರಾಜಕೀಯ ಲಾಭಕ್ಕಾಗಿ ಜನರನ್ನು ಧರ್ಮದ ಹೆಸರಲ್ಲಿ ಧ್ರುವೀಕರಿಸುವುದು ಬಿಜೆಪಿಯ ಅಜೆಂಡಾ ಅಲ್ಲ. ನಮ್ಮದು ಅಭಿವೃದ್ಧಿಪರ ಅಜೆಂಡಾ.
ಬಿಜೆಪಿ ಎನ್ನುವುದೀಗ ಇಬ್ಬರು ನಾಯಕರ ಪಾರ್ಟಿ ಆಗಿದೆ ಎನ್ನುವ ಆರೋಪವಿದೆ.
ಯಾರು ಹೇಳ್ಳೋದು ಇದೆಲ್ಲ? ಬರೀ ಪ್ರತಿಪಕ್ಷವಷ್ಟೆ.
ಬಿಜೆಪಿಯಲ್ಲಿರುವ ಅನೇಕರು ಇದೇ ಮಾತನ್ನು ನಮಗೆ ಆಫ್ದಿ ರೆಕಾರ್ಡ್ ಹೇಳುತ್ತಾರೆ.
ಅವರ ಹೆಸರು ಕೊಡಿ
ನಿಮಗೆ ಗೊತ್ತಿದೆ. ನಿಮ್ಮೆದುರು ಯಾರೂ ಇದನ್ನೆಲ್ಲ ಹೇಳುವುದಿಲ್ಲ. ಅವರೆಲ್ಲ ಹೆದರಿದ್ದಾರೆ.
ನನ್ನ ಬೆನ್ನ ಹಿಂದೆ ಕೂಡ ಯಾರೂ ಇಂಥ ಮಾತುಗಳನ್ನಾಡು ವುದಿಲ್ಲ. ಹಾಗೇನೂ ಆಗುತ್ತಿಲ್ಲ. ಸುಮ್ಮನೇ ಈ ರೀತಿಯ ವದಂತಿಗಳನ್ನ ಸೃಷ್ಟಿಸಲಾಗುತ್ತಿದೆಯಷೆc.
ಹಾಗಿದ್ದರೆ “ಕಾಂಗ್ರೆಸ್ ಮುಕ್ತ ಭಾರತ’ ಅಥವಾ “ತೃಣಮೂಲ ಮುಕ್ತ ಪಶ್ಚಿಮ ಬಂಗಾಳ’ ಎಂಬ ನಿಮ್ಮ ಘೋಷಣೆಗಳೆಲ್ಲ ಪ್ರಜಾಪ್ರಭುತ್ವ ವಿರೋಧಿಯಲ್ಲವೇ?
ಯಾಕೆ? ನನ್ನ ಪಕ್ಷವನ್ನು ಬಲಿಷ್ಠಪಡಿಸುವುದಕ್ಕೆ, ವಿಸ್ತರಿಸುವುದಕ್ಕೆ ನನಗೆ ಹಕ್ಕಿಲ್ಲವೇ? ನನಗೆ ಆ ಹಕ್ಕು ಇದೆ ಎಂದಾದರೆ ಅದನ್ನು ಹೇಗೆ ಅನುಷ್ಠಾನಕ್ಕೆ ತರಲಿ? ಹಾಗೆಂದು ನಾನು “ಆ ಪಕ್ಷವೂ ಇರಲಿ’ ಎಂಬ ಘೋಷಣೆ ಕೂಗಬೇಕೇ? ನಾನು ಬಿಜೆಪಿಯನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೇ ನಮ್ಮ ಪಕ್ಷವನ್ನು ಹಿಂಬಾಲಿಸಿ ಎಂದು ಹೇಳುತ್ತೇನೆ. ನೀವು ಪತ್ರಿಕೆಯವರಲ್ಲವೇ? ಹಾಗಿದ್ದರೆ ಓದುಗರಿಗೆ ನೀವು ನಿಮ್ಮದೇ ಪತ್ರಿಕೆ ಓದಲು ಹೇಳುತ್ತೀರೋ ಅಥವಾ ಬೇರೆ ಪತ್ರಿಕೆಗಳನ್ನು ಓದಿ ಅನ್ನುತ್ತೀರೋ? ಅಥವಾ ನ್ಯೂಸ್ ಚಾನೆಗಳು “ಬೇರೆ ಚಾನೆಲ್ ಕೂಡ ನೋಡಿ’ ಅನ್ನುತ್ತವಾ? ನಿಮಗೆಲ್ಲ ಇರುವ ಹಕ್ಕು ನನಗೇಕೆ ಇರಬಾರದು? ಈ ಘೋಷಣೆಗಳಲ್ಲಿ ಪ್ರಜಾಪ್ರಭುತ್ವ ವಿರೋಧಿ ಅಂಶಗಳೇನೂ ಇಲ್ಲ. ನನ್ನ ಪಕ್ಷ ಎಲ್ಲಾ ಬೂತ್‌ಗಳಲ್ಲೂ ಇರಬೇಕು ಎಂಬ ಮಹತ್ವಾಕಾಂಕ್ಷೆ ನನಗಿದೆ. ಇದನ್ನು ಸಾಧಿಸಲು ನಾನು ಶ್ರಮಿಸುತ್ತಿದ್ದೇನೆ. ಯಾವೊಂದು ಪಕ್ಷದ ಅಧ್ಯಕ್ಷರೂ ಕೂಡ ನನ್ನಷ್ಟು ಪರಿಶ್ರಮ ಪಡುತ್ತಿಲ್ಲ. ನಾನು ನನ್ನ ದೈಹಿಕ ಸದೃಢತೆಗಾಗಿ ನನ್ನ ಮನೆಯ ಮೇಲೆ ವ್ಯಾಯಾಮ ಮಾಡುತ್ತೇನೆ ಎಂದುಕೊಳ್ಳಿ. ಇದನ್ನು ನೋಡಿ ಪಕ್ಕದ ಮನೆಯವನು “ಅಯ್ಯೋ ಇವನು ನನಗಿಂತ ಬಲಿಷ್ಠನಾಗಿಬಿಡುತ್ತಾನೆ’ ಎಂದು ಹೆದರಿ “ವ್ಯಾಯಾಮ ಮಾಡಬೇಡ’ ಎಂದು ಹೇಳಿದರೆ ನಾನು ಒಪ್ಪಿಕೊಳ್ಳಬೇಕಾ?
ಅದು ಒಂದು ಮಜಲಾಯಿತು. ಇನ್ನೊಂದೆಡೆ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಾಲ್‌ಗಳನ್ನು ಪ್ರಚೋದಿಸುತ್ತಿದೆ ಎನ್ನುವ ಆರೋಪವಿದೆ. ನಿಮ್ಮ ಪಕ್ಷವನ್ನು ಯಾರೇ ಟೀಕಿಸಿದರೂ ಅವರು “ದೇಶ ವಿರೋಧಿ'(ಆ್ಯಂಟಿ ನ್ಯಾಷನಲ್) ಆಗಿಬಿಡುತ್ತಾರೆ…
ನಾವು ಇದನ್ನೆಲ್ಲ ಮಾಡುತ್ತಿಲ್ಲ. ಸಾಮಾಜಿಕ ಮಾಧ್ಯಮಗಳನ್ನು ಯಾರಿಗೂ ಕಂಟ್ರೋಲ್ ಮಾಡಲಾಗುವುದಿಲ್ಲ. ಮಾಡುವ ಉದ್ದೇಶವೂ ನಮಗಿಲ್ಲ. ನಾವು ಯಾವುದೇ ಟ್ರಾಲ್‌ಗಳನ್ನು ಬೆಂಬಲಿಸಿಯೂ ಇಲ್ಲ. ಹಲವು ಬಾರಿ ನಾವೂ ಕೂಡ ಸಾಮಾಜಿಕ ಮಾಧ್ಯಮಕ್ಕೆ ಬಲಿಪಶುಗಳಾಗುತ್ತೇವೆ. ಆದರೆ ನಾವು ದೂರುತ್ತಾ ಕೂರುವುದಿಲ್ಲ. ದೂರುವವರೆಲ್ಲ ತಮ್ಮ ಸಹಿಷ್ಣುತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು.
ಅನೇಕ ಸಾಮಾಜಿಕ ಗುಂಪುಗಳೀಗ ತಮಗೆ ಮೀಸಲಾತಿ ಲಾಭ ಬೇಕು ಎಂದು ಪ್ರತಿಭಟನೆ ನಡೆಸುತ್ತಿವೆ. ಈ ವಿಷಯದಲ್ಲಿ ಬಿಜೆಪಿ ಮೌನ ವಹಿಸಿದೆ. ಏನಾಯ್ತು?
ಈಗ ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಗಳಲ್ಲಿ ಏನು ಬದಲಾವಣೆ ಮಾಡಬೇಕು-ಬಾರದು ಎನ್ನುವ ವಿಚಾರದಲ್ಲಿ ಸಾಂವಿಧಾನಿಕ ಮಿತಿಗಳಿವೆ. ಕಾನೂನಿನ ಪ್ರಕಾರ, ಮೀಸಲಾತಿ 50 ಪ್ರತಿಶತಕ್ಕೆ ಕ್ಯಾಪ್ ಆಗಿರುತ್ತದೆ. ಆದಾಗ್ಯೂ ಮೀಸಲಾತಿ ವಲಯದಲ್ಲಿ ತಮ್ಮನ್ನು ತರಬೇಕು ಎಂಬ ಬೇಡಿಕೆಗಳನ್ನೂ ಕಡೆಗಣಿಸಲಾಗುವುದಿಲ್ಲ. ಹೀಗಾಗಿ ಮೀಸಲಾತಿಯ ಸಾಧ್ಯತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳೂ ಸೇರಿ ಚರ್ಚೆ ಮಾಡುವ ಅಗತ್ಯವಿದೆ.
ಅಂಥದ್ದೊಂದು ಚರ್ಚೆಯನ್ನು ಬಿಜೆಪಿ ಆರಂಭಿಸಬಲ್ಲದಾ?
ಮೊದಲೇ ಒಂದು ಅಂಶವನ್ನು ಸ್ಪಷ್ಟಪಡಿಸಿಬಿಡುತ್ತೇನೆ ಕೇಳಿ… ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವರ್ಗಗಳಿಗೆ ಈಗ ಇರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಅವು ಯಥಾ ಪ್ರಕಾರ ಮುಂದುವರಿಯಲಿವೆ. ಆದರೆ ಇನ್ನಿತರ ವರ್ಗಗಳೂ ತಮಗೆ ಮೀಸಲಾತಿ ಸೌಲಭ್ಯ ಬೇಕು ಎಂದು ಹೇಳುತ್ತಿವೆಯಲ್ಲ, ಆ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು. ಈ ಚರ್ಚೆ ನಮ್ಮಿಂದಲೇ ಏಕೆ ಬರಬೇಕು? ಕೇವಲ ಆಡಳಿತ ಪಕ್ಷದಿಂದ ಇಂಥ ಉಪಕ್ರಮಗಳನ್ನು ನಿರೀಕ್ಷಿಸುವ ಅಗತ್ಯವಿಲ್ಲ. ಯಾರೇ ಈ ಚರ್ಚೆಯನ್ನು ಆರಂಭಿಸಲಿ ನಾವದನ್ನು ಬೆಂಬಲಿಸುತ್ತೇವೆ. ಒಂದು ವೇಳೆ ನೀವೇ(ಮಾಧ್ಯಮಗಳು) ಚರ್ಚೆ ಆರಂಭಿಸಿದರೂ ನಮ್ಮ ಬೆಂಬಲವಿರುತ್ತದೆ.
ಮೋದಿ ಸರ್ಕಾರ ಆರ್ಥಿಕ ವಲಯದಲ್ಲಿ ಒಂದು ಸ್ಥಿರತೆ ಇಲ್ಲ. ಪಕ್ಷದ ಅಧ್ಯಕ್ಷರಾಗಿ ಇದರ ಬಗ್ಗೆ ನಿಮಗೇನನ್ನಿಸುತ್ತದೆ? ಉದಾಹರಣೆಗೆ, ನೋಟ್‌ಬಂದಿಯಿಂದ ಆರ್ಥಿಕತೆಗೆ ಬಲವಾದ ಪೆಟ್ಟು ಬಿತ್ತಲ್ಲ?
ಹೌದು, ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ ದೇಶದ ಅಥವಾ ಸಾಮಾನ್ಯ ಜನರ ಆರ್ಥಿಕತೆಗಲ್ಲ. ಬಲವಾದ ಪೆಟ್ಟು ಬಿದ್ದಿರುವುದು ಕಾಂಗ್ರೆಸ್‌ನ ಆರ್ಥಿಕತೆಗೆ. ದೇಶದ ಆರ್ಥಿಕತೆಗೇನು ತೊಂದರೆಯಾಗಿದೆ? ಪ್ರತಿಯೊಂದು ರಂಗದಲ್ಲೂ ಅದು ಮೇಲೇರುತ್ತಿದೆ. ಜಿಡಿಪಿ, ವಿದೇಶಿ ವಿನಿಮಯ ಮೀಸಲು, ಮತ್ತು ಸೆನ್ಸೆಕ್ಸ್‌ನಲ್ಲಿ ದೇಶದ ಆರ್ಥಿಕತೆ ಅತ್ಯುತ್ತಮವಾಗಿ ಸಾಗಿದೆ. ಇದನ್ನು ಯುಪಿಎ ಆಡಳಿತಾವಧಿಗೆ ಹೋಲಿಸಿ ನೋಡಿ. ಆಗ ದೇಶದ ಆರ್ಥಿಕತೆ ಹೇಗೆ ಇನ್ನಷ್ಟು ಎತ್ತರಕ್ಕೇರಲಿದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ. ಭಾರತ ಪ್ರಪಂಚದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ನಮ್ಮ ದೇಶ ಶೀಘ್ರದಲ್ಲೇ ಮೊದಲೈದು ಸ್ಥಾನದಲ್ಲಿ ಬರಲಿದೆ.
ಆದರೆ ದೇಶ ನಿರುದ್ಯೋಗಿಯಾಗಿದೆ…
ಯಾರು ಹೇಳಿದ್ದು ಹಾಗಂತ? ವಾಸ್ತವವನ್ನು ಕಣಿºಟ್ಟು ನೋಡಿ. ಮುದ್ರಾ ಯೋಜನೆಯಡಿಯಲ್ಲಿ ಸರ್ಕಾರ 12 ಕೋಟಿಗೂ ಹೆಚ್ಚು ಜನರಿಗೆ ಸಾಲ ನೀಡಿದೆ. ಆ ಹಣವೆಲ್ಲ ಪಕೋಡಾ ವಾಲಾಗಳಿಗೆ(ಕೆಲವರು ಆರೋಪಿಸುತ್ತಿರುವಂತೆ) ಅಲ್ಲ. ಈ ಯೋಜನೆಯಡಿಯಲ್ಲಿ ಎಂಬಿಬಿಎಸ್ ಪದವೀಧರರು ಮತ್ತು ಇತರೆ ವೃತ್ತಿಪರರೂ ಇದ್ದಾರೆ. ಹಾಗಿದ್ದರೆ ಇದನ್ನು ನೀವು ಉದ್ಯೋಗ ಸೃಷ್ಟಿ ಎಂದು ಪರಿಗಣಿಸುವುದಿಲ್ಲವೇ? ಆರ್ಥಿಕತೆಯ ಜೊತೆಗೆ ಇತರೆ ರಂಗಗಳಲ್ಲಿಯೂ ಮೋದಿ ಸರ್ಕಾರ ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಪಂಚದಲ್ಲಿ ಭಾರತದ ಬ್ರಾಂಡ್ ಇಮೇಜ್ ಉತ್ತಮವಾಗುತ್ತಿದೆ. ಸರ್ಜಿಕಲ್ ದಾಳಿ(ಕಾಂಗ್ರೆಸ್‌ಗೆ ಈ ಬಗ್ಗೆ ಯೋಚಿಸಲೂ ಧೈರ್ಯವಿರಲಿಲ್ಲ), ಡೋಕ್ಲಾಂ, ಚಬಹಾರ್ ಬಂದರು…ನೀವೇ ಯೋಚನೆ ಮಾಡಿ, ಮೋದಿ ಸರ್ಕಾರದ ಪ್ರದರ್ಶನ ಎಷ್ಟು ಉತ್ತಮವಾಗಿದೆ ಅಂತ.
ನಿಮ್ಮ ಪ್ರೊಗ್ರೆಸ್ ಕಾರ್ಡ್‌ನಲ್ಲಿ ಇಷ್ಟೆಲ್ಲ ಅಂಶಗಳಿದ್ದರೂ, ಈಗಲೂ ಕೂಡ ಅದೇಕೆ ಬಿಜೆಪಿ ರಾಹುಲ್ ಬಗ್ಗೆ ತಲೆಕೆಡಿಸಿಕೊಂಡಿದೆ?
ತಲೆಕೆಡಿಸಿಕೊಂಡಿರುವವರು ನಾವಲ್ಲ, ನೀವು(ಮಾಧ್ಯಮಗಳು). ನಾವು ನಮ್ಮ ಗುಣಾತ್ಮಕ ಅಜೆಂಡಾವನ್ನು ತೋರಿಸುವಲ್ಲಿ ಬ್ಯುಸಿ ಮತ್ತು ಖುಷಿಯಾಗಿದ್ದೇವೆ. ಆದರೆ ನೀವು ಮಾಧ್ಯಮದವರು ಮಾತ್ರ ಇನ್ನೂ ರಾಹುಲ್, ಧ್ರುವೀ ಕರಣ…ಇತ್ಯಾದಿಗಳ ಗುಂಗಿನಲ್ಲೇ ಇದ್ದೀರಿ. ನಾವು ಇಂಥ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲಾರದಷ್ಟು ಬೆಳೆದಿದ್ದೇವೆ.
ಒಪ್ಪುತ್ತೇನೆ. ನೀವು ತುಂಬಾ ಬೆಳೆದಿದ್ದೀರಿ. ಆದರೆ ಈಗ ಬಿಜೆಪಿ ಕಾಂಗ್ರೆಸ್‌ನಂತಾಗಿಬಿಟ್ಟಿದೆ ಎನ್ನುವ ಮಾತಿನಲ್ಲಿ ಎಷ್ಟು ಸತ್ಯವಿದೆ?
ಈಗ ನನ್ನ ನಂತರ ಯಾರು ಬಿಜೆಪಿಯ ಅಧ್ಯಕ್ಷರಾಗುತ್ತಾರೆ ಹೇಳಿ ನೋಡೋಣ? ರಾಜನಾಥ್ ಸಿಂಗ್ ಅಥವಾ ನಿತಿನ್ ಗಡ್ಕರಿ ಅವರ ಜಾಗಕ್ಕೆ ಮುಂದೆ ಯಾರು ಬರಬಹುದೆಂದು ಊಹಿಸಲು ನಿಮಗೆ ಸಾಧ್ಯವೇ? ಸಾಧ್ಯ ಎನ್ನುವುದಾದರೆ ನಿಮ್ಮ ಮಾತನ್ನು ಸತ್ಯ ಎನ್ನಬಹುದಿತ್ತು. ಆದರೆ ರಾಹುಲ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷರು ಯಾರಾಗುತ್ತಾರೆ ಎಂದು ನಾನು ಹೇಳಬಲ್ಲೆ! ಇಂಥ ಸನ್ನಿವೇಶ ಬಿಜೆಪಿಯಲ್ಲಿ ಎಂದಿಗೂ ಬರುವುದಿಲ್ಲ. ನಮ್ಮದು ನಿಜಕ್ಕೂ ಪ್ರಜಾಪ್ರಭುತ್ವದ ಪಕ್ಷ, ಕಾಂಗ್ರೆಸ್‌ದೇನಿದ್ದರೂ ಬಾಯಿಮಾತಷ್ಟೆ.
(ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್)
ಸಂದರ್ಶನ
ಗಿರೀಶ್ ಕುಬೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.