ಕಲ್ಲಡ್ಕ ಘಟನೆ ನಿಮ್ಮ ಸುತ್ತಲೇ ಕೇಂದ್ರೀಕೃತ ಯಾಕೆ?


Team Udayavani, Jun 22, 2017, 11:14 AM IST

kalladka.jpg

ಒಬ್ಬ ವ್ಯಕ್ತಿ ಮಂತ್ರಿಯಾದ ಮೇಲೆ ಇಡೀ ಜಿಲ್ಲೆಗೆ ಮಂತ್ರಿ. ಆದರೆ ರಮಾನಾಥ ರೈ ಅವರು ಒಂದು ವರ್ಗದವರನ್ನು ಬೆಂಬಲಿಸಿ ಕೋಮು ಗಲಭೆಗೆ ಪ್ರಚೋದ‌ನೆ ನೀಡುವ ಕೆಲಸ ಮಾಡುತ್ತಿದ್ದಾರೆ. ನಾವು ಯಾವುದೇ ರೀತಿಯ ಪ್ರಚೋದನೆ ಮಾಡುತ್ತಿಲ್ಲ.

– ಕಲ್ಲಡ್ಕ ಘಟನೆ ನಿಮ್ಮ ಸುತ್ತಲೇ ಸುತ್ತುತ್ತಿದೆಯಲ್ಲಾ?
ಮೊದಲಿಗೆ ಹೇಳಿ ಬಿಡ್ತೇನೆ. ಕಲ್ಲಡ್ಕ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಕಲ್ಲಡ್ಕದಲ್ಲಿ ಇತ್ತಿ¤àಚೆಗೆ ಆಗಿರುವ ಎರಡೂ ಘಟನೆ ಕೋಮು ಸಂಘರ್ಷದ ಘಟನೆಯಲ್ಲ. ಅದು ಎರಡು ಕೋಮಿನ ವ್ಯಕ್ತಿಗಳ ನಡುವೆ ವೈಯಕ್ತಿಕ ವಿಚಾರವಾಗಿ ನಡೆದ ಘಟನೆಗಳು. ಅದನ್ನು ಕೋಮು ಗಲಭೆ ಎಂಬುದಾಗಿ ಬಿಂಬಿಸುತ್ತಿರುವುದು ಹಾಗೂ ಅದಕ್ಕೆ ಪ್ರಚೋದನೆ ಕೊಟ್ಟು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಸರಿಯಲ್ಲ. ಆದರೆ, ಈ ಎರಡೂ ಘಟನೆಗಳಲ್ಲೂ ಅಮಾಯಕರನ್ನು ಬಂಧಿಸಲಾಗಿದೆ. 

–  ಬಿಜೆಪಿಯವರು ಕೂಡ ಇದನ್ನೇ ದೊಡ್ಡ ವಿಚಾರ ಮಾಡಿ ಸರಕಾರದ ಮೇಲೆ ಮುಗಿ ಬಿದ್ದಿದ್ದಾರಲ್ಲಾ?
ನೋಡಿ, ಇದೇ ರಾಜಕೀಯ. ಇದನ್ನು ನನ್ನ ಹತ್ತಿರ ಪ್ರಶ್ನಿಸಬೇಡಿ. ಬಿಜೆಪಿ ಪ್ರತಿಭಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಬಳಿ ಈ ಬಗ್ಗೆ ಯಾವ ಬಿಜೆಪಿ ನಾಯಕರು ಕೇಳಿಯೂ ಇಲ್ಲ, ನಾನೂ ಯಾರಲ್ಲಿಯೂ ಹೇಳಿಯೂ ಇಲ್ಲ. 

– ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ಬಂಧಿಸುವುದಕ್ಕೆ ಬಿಜೆಪಿ ಮುಖಂಡರೇ ಕಾಯುತ್ತಿದ್ದಾರಂತೆ?
ಇದು ನನಗೆ ಹೊಸ ಸುದ್ದಿ. ನೋಡಿ, ಇದು ಹಾಗಲ್ಲ, ಬಿಜೆಪಿಯವರು ಹೇಳುತ್ತಿರುವುದು ನಿಮಗೆ ತಾಕತ್ತು ಇದ್ದರೆ ನನ್ನನ್ನು ಬಂಧಿಸಿ ಎನ್ನುತ್ತಿದ್ದಾರೆ. ಇಲ್ಲಿ ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ, ನಮಗೂ ಇಲ್ಲಿ ದೊಡ್ಡ ಶಕ್ತಿಯಿದೆ. ಇದರರ್ಥ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎನ್ನುವುದೇ ಹೊರತು ಬಂಧಿಸುವುದಕ್ಕೆ ಒತ್ತಾಯಿಸುತ್ತಿಲ್ಲ. ಒಂದೊಮ್ಮೆ ನನ್ನ ಬಂಧನವಾದರೆ ಅನುಕಂಪ ಸೃಷ್ಟಿಯಾಗಿ ಅದರಿಂದ ಬಿಜೆಪಿಗೆ ಲಾಭವೂ ಆಗಬಹುದು.

– ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಪೊಲೀಸ್‌ ವರಿಷ್ಠಾಧಿಕಾರಿಗೆ ನರ ಸತ್ತ ಪೊಲೀಸ್‌ ಅಧಿಕಾರಿ ಎಂದು ಹೇಳಿದರಂತೆ? 
ನಾನು ಆ ರೀತಿ ಮಾತನಾಡಿಲ್ಲ. ದ.ಕ. ಜಿಲ್ಲೆಗೆ ಅಂಥ ಎಸ್‌ಪಿ ಇದ್ದರೆ ಏನು ಮಾಡಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಹೇಳಿರುವುದು. ನಮ್ಮ ಜಿಲ್ಲೆಗೆ ಬಹಳ ಪ್ರಭಾವಶಾಲಿ ದಿಟ್ಟ ಎಸ್‌ಪಿ ಅಗತ್ಯವಿದೆ.

– ನಿಮ್ಮ ಮಾತಿನ ಅರ್ಥ?
ಅಣ್ಣಾಮಲೈ ಅಂಥವರೇ ನಮ್ಮ ಜಿಲ್ಲೆಗೆ ಎಸ್‌ಪಿಯಾಗಿ ಬರಬೇಕು. ಅವರನ್ನು ಸರಕಾರ ಜಿಲ್ಲೆಗೆ ವರ್ಗಾಯಿಸಿದರೆ, ಖಂಡಿತಾ ಸ್ವಾಗತ ಮಾಡುತ್ತೇನೆ.

– ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ನಿಮ್ಮನ್ನು ಏಕೆ ಬಂಧಿಸಬೇಕು ಎಂದು ಹೇಳುತ್ತಿದ್ದಾರೆ?
ನನ್ನನ್ನು ಬಂಧಿಸುವುದಕ್ಕೆ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಬಂಧಿಸುವುದಕ್ಕೆ ಹೇಳುವುದಾದರೆ ಇದನ್ನು ಅವರು ಈ ಮೊದಲೇ ಮಾಡಬೇಕಿತ್ತು. ಇಲ್ಲಿ ಅದಲ್ಲ ಪ್ರಶ್ನೆ. ನನ್ನನ್ನು ತಮ್ಮ ರಾಜಕೀಯ ಲಾಭಕ್ಕೆ ದಾಳವನ್ನಾಗಿ ಬಳಸಿಕೊಳ್ಳುವುದಕ್ಕೆ ಈ ರೀತಿ ಬಂಧಿಸುವ ನಾಟಕವಾಡುತ್ತಿದ್ದಾರೆ. 

– ರಮಾನಾಥ ರೈ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಡುವಿನ ಸಂಭಾಷಣೆ ವೀಡಿಯೋ ವೈರಲ್‌ ಹಿಂದೆ ತಂತ್ರವಿತ್ತಾ?
ಅದು ನನಗೆ ಗೊತ್ತಿಲ್ಲ. ಆದರೆ, ಅಲ್ಲಿ ಏನು ಮಾತನಾಡಲಾಗಿದೆ. ಅದೇ ವೀಡಿಯೋ ಅಲ್ಲವೇ.  ವೀಡಿಯೋ ಹೊರಬಂದ ಬಳಿಕ ಜಿಲ್ಲೆಯಲ್ಲಿ ಅವರು ಯೋಚನೆ ಮಾಡದ ರೀತಿಯಲ್ಲಿ ಅದು ಉಲ್ಟಾ ಹೊಡೆಯುತ್ತಿದೆ. ಇಲ್ಲಿನ ಜನರು ಭಾವನೆಗಳಿಗೆ ಬೆಲೆ ಕಟ್ಟುವವರು. ಇಲ್ಲಿ ಯಾರ ಬಗ್ಗೆಯೂ ಮತ್ತೂಬ್ಬರು ಏಕ ವಚನದಲ್ಲಿ ಮಾತನಾಡುವುದಿಲ್ಲ. ಅಷ್ಟೇ ಅಲ್ಲ, ಯಾವುದೇ ಆಪಾದನೆಗಳಿಲ್ಲದೆ ಬಂಧಿಸಿ ಒಳಗೆ ಹಾಕಿ ಎಂದು ಹೇಳುವ ಅನಾಗರಿಕರೂ ದಕ್ಷಿಣ ಕನ್ನಡದವರಲ್ಲ. 

– ರಮಾನಾಥ ರೈ ಹಾಗೆ ಹೇಳಲು ಕಾರಣ  ಏನು?
ಖಂಡಿತಾ, ಈ ವಿಚಾರದಲ್ಲಿ ರೈ ಅವರು ಮೂರ್ಖರಾಗಿರಬ ಹುದು. ಈ ರಾಜಕೀಯ ಎನ್ನುವುದು ಚದುರಂಗದ ಆಟವಿದ್ದಂತೆ. ಸ್ವಲ್ಪ ಹೆಚ್ಚು-ಕಮ್ಮಿ ಆದರೂ ಸೋತು ಬಿಡುತ್ತೇವೆ. ಹೀಗಾಗಿ, ಇದರ ಅಡ್ಡ ಪರಿಣಾಮಗಳನ್ನು ಅವರು ಮಾತ್ರವಲ್ಲ ಅವರ ಜತೆಯಲ್ಲಿರುವ ಬೆಂಬಲಿಗರು ಕೂಡ ಯೋಚಿಸಿರಲಿಕ್ಕಿಲ್ಲ. ಅವರ ಮಾತಿನಿಂದ ತುಂಬಾ ಜನರಿಗೆ ನೋವು ಆಗಿದೆ.

– ನಾನು ಹಾಗೆ ಹೇಳಿಯೇ ಇಲ್ಲ , ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಹೇಳಿದ್ದೇನೆ ಅಷ್ಟೇ ಎನ್ನುತ್ತಾರಲ್ಲಾ ರೈ?
ನೋಡಿ ರಮಾನಾಥ ರೈ ಅವರ ಸ್ವಭಾವ ಹಾಗೆಯೇ. ಆವೇಶದಲ್ಲಿ ಎಷ್ಟೋ ಬಾರಿ ಏನೇನೋ ಹೇಳಿಬಿಡುತ್ತಾರೆ. ನನ್ನ ವಿಚಾರದಲ್ಲಿ ರೈ ಈಗ ಕ್ಷಮೆ ಕೇಳಬೇಕು ಎಂದು ಹೇಳುವುದಿಲ್ಲ. “ನೀವು ಅದನ್ನು ಬಿಟ್ಟುಬಿಡಿ ಏನೋ ಹೇಳಿಬಿಟ್ಟೆ’ ಎಂದು ಹೇಳಿದರೆ ಸಾಕಿತ್ತು; ಇದು ಮುಗಿದು ಹೋಗುತ್ತಿತ್ತು. ಅವರ ಈಗಿನ ಸ್ಥಿತಿ ನೋಡಿ ನಿಜಕ್ಕೂ ಅಯ್ಯೋ ಪಾಪ ಅನ್ನಿಸುತ್ತಿದೆ. ರಮಾನಾಥ ರೈ ಮಾತುಗಳಿಂದ ನನಗೇನು ವೈಯಕ್ತಿಕವಾಗಿ ನೋವು ಆಗಿಲ್ಲ. ಆದರೆ, ನನ್ನನ್ನು ಗೌರವದಿಂದ ನೋಡುವವರಿಗೆ ನೋವಾಗಿರಬಹುದು. ಹೀಗಾಗಿ, ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಟ್ಟಿದ್ದೇನೆ. ನಾನು ದೇವರಲ್ಲಿ ಕೇಳುವುದು ರಮಾನಾಥ ರೈಗೆ ಒಳ್ಳೆಯ ಬುದ್ಧಿ ಕೊಡು ಅಂತ. ಅವರು ಸರಿಯಾಗಿ ಮಾತನಾಡುವ, ನಡೆದುಕೊಳ್ಳುವಂತೆ ಆಗಲಿ.

– ಹಾಗಿದ್ದರೆ, ನೀವೇ ಅವರಿಗೆ ಕರೆ ಮಾಡಿ ವಿವಾದಕ್ಕೆ ತೆರೆ ಎಳೆಯಬಹುದು, ತಾನೇ?
ನಾನೇ ಫೋನು ಮಾಡುತ್ತಿದ್ದೆ. ಆದರೆ, ಅವರಲ್ಲಿ ಅದನ್ನು ಸ್ವೀಕರಿಸುವ ಮನೋಭಾವವಿಲ್ಲ ಅಥವಾ ದೊಡ್ಡ ಮನಸ್ಸು ಇಲ್ಲ. ಘಟನೆ ನಡೆದು ಮೂರ್‍ನಾಲ್ಕು ದಿನ ಕಳೆದರೂ ಮತ್ತೆ ಮತ್ತೆ ಅದನ್ನೇ ಸಮರ್ಥಿಸಿಕೊಂಡು ಮುಂದುವರಿಯುತ್ತಿದ್ದಾರೆ. ಅದುಬಿಟ್ಟು, ಬಾಯಿತಪ್ಪಿ ಈ ರೀತಿ ಹೇಳಿದ್ದೆ ಎಂದು ಹೇಳುತ್ತಿದ್ದರೆ ಖಂಡಿತಾ ನಾನು ಕೂಡ ಅವರನ್ನು ಸಂಪರ್ಕಿಸಿ “ಪರವಾಗಿಲ್ಲ; ಹೋಗಲಿ ಬಿಡಿ ರೈಗಳೇ’ ಎಂದು ಹೇಳುತ್ತಿದ್ದೆ. 

– ನಿಜಕ್ಕೂ ನಿಮ್ಮ ಹಾಗೂ ಸಚಿವ ರಮಾನಾಥ ರೈ ನಡುವಿನ ಜಗಳಕ್ಕೆ ಕಾರಣವೇನು?
ನೋಡಿ, ನನಗೆ ವೈಯಕ್ತಿಕವಾಗಿ ಸಚಿವ ರಮಾನಾಥ ರೈ ಬಗ್ಗೆ ಯಾವುದೇ ದ್ವೇಷವಿಲ್ಲ. ಜಿಲ್ಲೆಯಲ್ಲಿ ನಾನು, ಅವರನ್ನು ಎಲ್ಲಿ ಸಿಕ್ಕಿದರೂ ಏನು ರೈಗಳೇ ಎಂದೇ ನಮಸ್ಕಾರ ಮಾಡುತ್ತೇನೆ. ಅವರು ಕೂಡ ಎಷ್ಟೇ ಜನರ ನಡುವೆ ಇದ್ದರೂ ಒಂದು ಸಣ್ಣ ನಗುವನ್ನಾದರೂ ಬೀರುತ್ತಾರೆ. ನಾನು ಯಾರನ್ನೂ ದ್ವೇಷಿಸುವವನಲ್ಲ. ನಾನು ಅವರು ಸಿಕ್ಕಿದಾಗ ಯಾವತ್ತಿಗೂ ಅಗೌರವ ತೋರಿಸುವ ಕೆಲಸವನ್ನು ಮಾಡಿಲ್ಲ. ಅವರೊಬ್ಬರು ಮಂತ್ರಿಯೂ ಹೌದು. ಜಿಲ್ಲೆಯಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿ ಕೂಡ. ರಮಾನಾಥ ರೈ ಸುಮಾರು 25 ವರ್ಷಗಳಿಂದ ರಾಜಕೀಯದಲ್ಲಿ ಸೋಲಿಲ್ಲದ ಸರದಾರನಂತೆ ಇರುವ ವ್ಯಕ್ತಿ. ಅವರು ಒಂದು ರೀತಿಯಲ್ಲಿ ಇಡೀ ಬಂಟ್ವಾಳದ ರಾಜ. ಅವರ ಮೇಲೆ ಅಪಾರ ಗೌರವವಿದೆ.

– ಹೀಗಿದ್ದಾಗ ನಿಮ್ಮನ್ನು ಬಂಧಿಸಿ ಎಂದು ಹೇಳುವ ಕೋಪ ಯಾಕೆ ಅವರಿಗೆ?
ಅದೇ ನನಗೆ ಅನ್ನಿಸುತ್ತಿರುವುದು; ಹತ್ತಾರು ವರ್ಷಗಳಿಂದ ರಾಜಕೀಯದಲ್ಲಿದ್ದು, ಸಾಕಷ್ಟು ಸಲ ಮಂತ್ರಿಯಾಗಿದ್ದವರು ಇಷ್ಟೊಂದು ಸಣ್ಣ ವ್ಯಕ್ತಿ ಆಗಿಬಿಟ್ಟರೇ? ನನ್ನನ್ನು ಅವಮಾನಿಸುವ ವೀಡಿಯೋ ನೋಡಿದ ಬಳಿಕವೂ ನನಗೆ ಅವರ ಮೇಲೆ ಸಿಟ್ಟು ಅಥವಾ ದ್ವೇಷ ಬಂದಿಲ್ಲ. ಆದರೆ, ಉಸ್ತುವಾರಿ ಮಂತ್ರಿಯಾಗಿದ್ದವರು ಒಬ್ಬ ವ್ಯಕ್ತಿಯನ್ನು ಏಕವಚನದಲ್ಲಿ ಮಾತನಾಡುವುದು, ಎಸ್‌ಪಿಗೆ ನನ್ನನ್ನು ಬಂಧಿಸುವಂತೆ ಆದೇಶ ನೀಡುವುದು ಒಳ್ಳೆಯ ಲಕ್ಷಣವಲ್ಲ. ಆದರೂ, ನಾನೇನು ವೈಯಕ್ತಿಕ ದ್ವೇಷ ಅಥವಾ ಸೇಡು ತೀರಿಸಲು ಹೋಗುವುದಿಲ್ಲ.

– ವೀಡಿಯೋ ಚಿತ್ರೀಕರಣ ಆಗಿದ್ದಾದರೂ ಹೇಗೆ ?
ಎಸ್‌ಪಿಯನ್ನು ಐಬಿಗೆ ಕರೆಯಿಸಿಕೊಂಡು ಈ ರೀತಿ ವಿವಾದಿತ ವೀಡಿಯೋ ಮಾಡಬೇಕಾದರೆ, ರಮಾನಾಥ ರೈ ಅವರಿಗೆ ಅದರ ಸ್ಪಷ್ಟ ಅರಿವು ಇತ್ತು. ಎಲ್ಲವೂ ಗೊತ್ತಿದ್ದೇ ಇಷ್ಟೆಲ್ಲ ಅವಾಂತರ ಸೃಷ್ಟಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ  ಈ ರೀತಿ ಮಾಡಿ ತಾನು ಸೀಮಿತ ಒಂದು ಸಮುದಾಯದ ಪರವಾಗಿ ಇದ್ದೇನೆ ಎಂಬುದನ್ನು ತೋರಿಸುವುದಕ್ಕೆ ಈ ವೀಡಿಯೋ ಮಾಡಿದ್ದಾರೆ.

– ಉಸ್ತುವಾರಿ ಸಚಿವರಾಗಿ ಎಸ್‌ಪಿಯನ್ನು ಮಾತನಾಡಿಸುವ ಅಧಿಕಾರ ಇಲ್ಲವೇ?
ಜಿಲ್ಲೆಯಲ್ಲಿನ ಕಾನೂನು-ಸುವ್ಯವಸ್ಥೆ ಬಗ್ಗೆ ಎಸ್‌ಪಿ ಜತೆ ಮಾತನಾಡಬೇಕಾದರೆ ಅದನ್ನು ಬಹಳ ಗೌಪ್ಯವಾಗಿ ಮಾಡಬೇಕಿತ್ತು. ಅದು ಬಿಟ್ಟು, ಪಕ್ಷದ ಕಾರ್ಯಕರ್ತರನ್ನು ಕೂರಿಸಿಕೊಂಡು ಈ ರೀತಿ ಒಬ್ಬ ವ್ಯಕ್ತಿ ಬಗ್ಗೆ ಏಕವಚನದಲ್ಲಿ ಮಾತನಾಡಿ ಕೇವಲ ನನಗೆ ಮಾತ್ರವಲ್ಲ ಒಬ್ಬ ಉನ್ನತ ಪೊಲೀಸ್‌ ಅಧಿಕಾರಿಗೂ ಸಾರ್ವಜನಿಕವಾಗಿ ಮಾಡಿದ ಅವಮಾನವದು. ಇದು ರಮಾನಾಥ ರೈ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದಲ್ಲ.

– ನಿಮ್ಮ ವಿರುದ್ಧ ರಮಾನಾಥ ರೈಗೆ ಯಾಕೆ ಕೋಪ?
ಜಿಲ್ಲೆಯಲ್ಲಿ ರಮಾನಾಥ ರೈಗೆ ಯಾವ ರೀತಿಯ ಸ್ಥಾನ-ಮಾನವಿದೆಯೋ ನನಗೂ ಅದೇ ರೀತಿಯ ಗೌರವವಿದೆ. ಅವರಿಗೆ ಕೇವಲ ರಾಜಕೀಯದಲ್ಲಿ ಮಾತ್ರ ಮೂರ್‍ನಾಲ್ಕು ದಶಕಗಳ ರಾಜಕೀಯ ಅನುಭವಿರಬಹುದು. ಆದರೆ, ನನಗೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು 50 ವರ್ಷ ಕೆಲಸ ಮಾಡಿದ ಅನುಭವವಿದೆ. ನನಗೂ ಅವರಷ್ಟೇ ಗೌರವಯುತ ಸ್ಥಾನವಿದೆ.

– ನಿಮ್ಮ ಮೇಲೆಯೂ ಕೊಲೆ ಪ್ರಕರಣದ ಆರೋಪ ಇತ್ತಂತಲ್ಲಾ ?
ರಮಾನಾಥ ರೈ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ. ಈ ಹಿಂದೊಮ್ಮೆ ಇಸ್ಮಾಯಿಲ್‌ ಕೊಲೆ ಪ್ರಕರಣವಾಗಿತ್ತು. ಆಗ ನಾನು ಬಹಳ ಚಿಕ್ಕವನಾಗಿದ್ದೆ. ಅ ಪ್ರಕರಣದಲ್ಲಿಯೂ ಪ್ರಭಾಕರ ಭಟ್‌ ಹೆಸರು ಇದೆ ಎನ್ನುತ್ತಿದ್ದಾರೆ. ಅಂದರೆ, ಈ ರೀತಿ ಒಬ್ಬ ಅಜ್ಞಾನಿ ಯಂತೆ ಮಾತನಾಡಬಾರದು. ಈಗ ಜಲೀಲ್‌ ಕರೋಪಾಡಿ ಕೊಲೆ ಪ್ರಕರಣದಲ್ಲಿಯೂ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ.

– ನಿಮಗೆ ನಿಜಕ್ಕೂ ರಮಾನಾಥ ರೈ ಕಂಡರೆ ಭಯನಾ?
ಖಂಡಿತವಾಗಿಯೂ ಭಯವಿಲ್ಲ. ನಾನು ಕಾಲೇಜಿಗೆ ಹೋಗುತ್ತಿರುವಾಗ ಬಿ.ಸಿ.ರೋಡ್‌ನ‌ಲ್ಲಿ ಓಡಿಸಿದ್ದೆ ಎಂದು ಅವರು ಹೇಳಿದ್ದಾರೆ. ಇದು ನೂರಕ್ಕೆ ನೂರು ಸುಳ್ಳು. ಅಷ್ಟೇ ಅಲ್ಲ, ಆಗ ನಾನು ಈ ರೀತಿ ಅಲ್ಲ ಬೇರೆಯೇ ರೀತಿ ಇದ್ದೆ ಎಂದೆಲ್ಲ ಹೇಳಿಕೊಂಡಿದ್ದಾರೆ. ಒಂದು ವೇಳೆ ಅವರು ನನ್ನನ್ನು ಓಡಿಸಿದ್ದರೆ ಅದು ರೌಡಿಗಳಾಗಿರಬಹುದು. ಬಹುಶಃ ಆಗ ಅವರು ಕೂಡ ಆ ರೀತಿ ಇದ್ದಿರಬೇಕು. ನನ್ನ ಜೀವಮಾನದಲ್ಲಿ ಇಲ್ಲಿವರೆಗೆ ನಾನು ಯಾರನ್ನು ಓಡಿಸಿಯೂ ಇಲ್ಲ, ಬೇರೆಯವರಿಗೆ ಹೆದರಿ ಓಡಿದವನೂ ಅಲ್ಲ.

– ಈ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಶಾಂತಿಗೆ ಭಂಗವುಂಟಾಗಿಲ್ಲವೇ ?
ನೂರಕ್ಕೆ ನೂರು ಇದು ಸತ್ಯ. ಒಬ್ಬ ವ್ಯಕ್ತಿ ಶಾಸಕನಾಗಿ ಆಯ್ಕೆಯಾದ ಮೇಲೆ ಆತ ಎಲ್ಲರ ವ್ಯಕ್ತಿ. ಮಂತ್ರಿಯಾದ ಮೇಲೆ ಇಡೀ ಜಿಲ್ಲೆಗೆ ಮಂತ್ರಿ. ಆದರೆ, ರಮಾನಾಥ ರೈ ಒಂದು ವರ್ಗದವರನ್ನು ಬೆಂಬಲಿಸಿ ಕೋಮು ಗಲಭೆಗೆ ಪ್ರಚೋದ‌ನೆ ನೀಡುವ ಕೆಲಸ ಮಾಡುತ್ತಿದ್ದಾರೆ. ನಾವು ಯಾವುದೇ ರೀತಿಯ ಪ್ರಚೋದನೆ ಮಾಡುತ್ತಿಲ್ಲ.

– ಸಂದರ್ಶನ: ಸುರೇಶ್‌ ಪುದುವೆಟ್ಟು 

ಟಾಪ್ ನ್ಯೂಸ್

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.