ಶಾ ಮಾತನ್ನೇ ಕೇಳ್ತಾ ಇಲ್ಲ ಯಡಿಯೂರಪ್ಪ


Team Udayavani, May 4, 2017, 10:43 AM IST

KS-Eshwarappa–900.jpg

ಏಕಪಕ್ಷೀಯ ತೀರ್ಮಾನಗಳಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ
ಯಡಿಯೂರಪ್ಪ ಮತ್ತು ಈಶ್ವರಪ್ಪ ಮುಖ ಕೊಟ್ಟು ಮಾತನಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ. ರಾಯಣ್ಣ ಬ್ರಿಗೇಡ್‌ ಸ್ಥಾಪನೆಯೊಂದಿಗೆ ಪ್ರಾರಂಭವಾದ ಕಲಹ, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳ ನೇಮಕಾತಿ ವೇಳೆ ಸ್ಫೋಟಗೊಂಡು ಇದೀಗ  ಪಕ್ಷದ ಭಿನ್ನಮತ ಎರಡು ಗುಂಪುಗಳನ್ನು ಹುಟ್ಟುಹಾಕಿದೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ  ಈಶ್ವರಪ್ಪ ಅವರೊಂದಿಗೆ ಉದಯವಾಣಿ ನೇರಾ ನೇರ ಮಾತಿಗಿಳಿದಾಗ…

“ಯಡಿಯೂರಪ್ಪ ಇಲ್ಲದೆ ಈಶ್ವರಪ್ಪ ಇಲ್ಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು ಎನ್ನುತ್ತಾರೆ ಕೆಲವರು. ಆದರೆ, ಶಿವಮೊಗ್ಗದಲ್ಲಿ ಬಿಎಸ್‌ವೈ ನೇತೃತ್ವದ ಕೆಜೆಪಿಯೂ ಗೆಲ್ಲಲಿಲ್ಲ. ಅದಕ್ಕೆ ಬಂದಿದ್ದು ಆರೇ ಸ್ಥಾನ. ಸಂಘಟನೆ ಮತ್ತು ನಾಯಕತ್ವ ಒಂದಾಗಿದ್ದರೆ ಮಾತ್ರ ಗೆಲುವು ಸಾಧ್ಯ. 

ಬಿಜೆಪಿ ಇನ್ನೇನು ಅಧಿಕಾರಕ್ಕೆ ಬಂದೇ ಬಿಡು¤ ಎಂದು ಕಾರ್ಯಕರ್ತರು ಉತ್ಸಾಹದಲ್ಲಿರುವಾಗ ಭಿನ್ನಾಭಿಪ್ರಾಯ ಶುರುವಾಗಿದ್ದು ಯಾಕೆ ?
        ಇದು ಭಿನ್ನಮತ ಅಲ್ಲ. ಮುಂದಿನ ಐದು ವರ್ಷ ಅವಧಿಗೆ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ಆಗ ಗೊಂದಲಗಳಾಗಬಾರದು, ಯಾರ್ಯಾರೋ ಶಾಸಕರು, ಮಂತ್ರಿಗಳಾಗಿ ಮತ್ತೆ ರೆಸಾರ್ಟ್‌ ಸಂಸ್ಕೃತಿ ಬರಬಾರದು. ಸಂಘಟನೆಯಲ್ಲಿರುವ ಕಾರ್ಯಕರ್ತರು ಶಾಸಕರಾಗಿ, ಮಂತ್ರಿಗಳಾದರೆ ಮುಂದಿನ ಐದು ವರ್ಷ ಒಳ್ಳೇ ಸರ್ಕಾರ ಇರುತ್ತದೆ. ನಮ್ಮ ಆಸೆ ಮತ್ತೆ ಆ ಲೋಪ ಆಗಬಾರದು ಎಂಬುದಷ್ಟೆ.  ಸಂಘಟನೆ ಜತೆ ಕಾರ್ಯಕರ್ತರನ್ನು ಜೋಡಿಸಿಕೊಳ್ಳುತ್ತಿಲ್ಲ. ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆಯಲ್ಲಿ ಕಾರ್ಯಕರ್ತರನ್ನು ಪರಿಗಣಿಸುತ್ತಿಲ್ಲ. ಆದ್ದರಿಂದ ಸಂಘಟನೆಯ ಸರ್ಕಾರ ಬರಬೇಕು ಎಂಬ ಒಂದೇ ಕಾರಣಕ್ಕೆ ಸಂಘಟನೆಗೆ ಒತ್ತು ಕೊಡಬೇಕು ಎಂಬ ನಿಟ್ಟಿನಲ್ಲಿ ಈಗ ಚರ್ಚೆಯಾಗುತ್ತಿದೆ ಅಷ್ಟೆ.

ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವ ಬದಲು ಬೀದಿಯಲ್ಲಿ ನಿಂತು ಮಾತನಾಡುವ ಅಗತ್ಯವೇನಿತ್ತು?
         ಇದೇ ವಿಚಾರಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನನ್ನನ್ನು ಮತ್ತು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿದರು. ಮುರಳೀಧರರಾವ್‌, ಬಿ.ಎಲ್‌.ಸಂತೋಷ್‌, ಯಡಿಯೂರಪ್ಪ ಮತ್ತು ಅರುಣ್‌ ಕುಮಾರ್‌ ಅವರನ್ನೊಳಗೊಂಡ ನಾಲ್ಕು ಜನರ ಸಮಿತಿ ಮಾಡಿ ಫೆ. 10ರೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಆದರೆ, ಮೂರು ತಿಂಗಳು ಕಳೆದರೂ ಸಮಿತಿಯವರಾರೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಥವಾ ಜಿಲ್ಲಾ ಮುಖಂಡರನ್ನು ಕರೆದು ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಯಡಿಯೂರಪ್ಪ ಮತ್ತು ಮುರಳೀಧರರಾವ್‌ ಅವರು ಅಮಿತ್‌ ಶಾ ಸೂಚನೆ ಮೀರಿದ್ದರಿಂದ ಈ ಕಾರ್ಯಕ್ರಮ ಮಾಡಬೇಕಾಯಿತು. ಪ್ರವಾಸ ಮಾಡಿ ಸಮಸ್ಯೆ ಪರಿಹಾರವಾಗಿದ್ದರೆ ಗೊಂದಲ ಆಗುತ್ತಿರಲಿಲ್ಲ. ಹೀಗಾಗಿ ಸಮಸ್ಯೆಯನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕು ಎಂಬ ಕಾರಣಕ್ಕೆ ಸಂಘಟನೆ ಉಳಿಸಿ ಎಂದು 24 ಮುಖಂಡರು ಸೇರಿ ಸಭೆ ಕರೆದಿದ್ದರು.

ಇದೆಲ್ಲವನ್ನೂ ಕೋರ್‌ ಕಮಿಟಿ ಸಭೆಯಲ್ಲಿ ಅಥವಾ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತಲ್ಲಾ?
        ಹತ್ತಾರು ವರ್ಷ ಪಕ್ಷಕ್ಕೆ ಕೆಲಸ ಮಾಡಿದವರು ಒಟ್ಟಿಗೆ ಸೇರಿಕೊಂಡು ಸಂಘಟನೆ ಉಳಿಸಿ ಅಂದಾಗ ಅವರಿಗೆ ಸಿಟ್ಟು ಬರುತ್ತದೆ. ಇನ್ನು ನಾಲ್ಕು ಗೋಡೆ ಮಧ್ಯೆ ಅವರ ಮಾತು ಕೇಳುತ್ತಾರಾ? ನಾಲ್ಕು ಗೋಡೆಗಳ ಮಧ್ಯೆ ಅಮಿತ್‌ ಶಾ ಹೇಳಿದ ಮಾತನ್ನೇ ಅವರು ಕೇಳುತ್ತಿಲ್ಲ. ಆರ್‌ಎಸ್‌ಎಸ್‌ನಿಂದ ಬಂದ ಬಿ.ಎಲ್‌.ಸಂತೋಷ್‌ ಅವರ ಬಗ್ಗೆ ನೇರವಾಗಿ ಮಾಧ್ಯಮಗಳ ಮುಂದೆ ಆಪಾದನೆ ಮಾಡುತ್ತಾರೆ. ಸಂತೋಷ್‌ ಅವರು ಇಡೀ ಜೀವನವನ್ನೇ ದೇಶಕ್ಕೆ ಸಮರ್ಪಿಸಿದವರು. ಅಂಥವರ ಬಗ್ಗೆ ಬಹಿರಂಗವಾಗಿ ಮಾತಾಡಿದ್ದು ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಅದೇ ರೀತಿ ತಮ್ಮ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕೆ ಸಂಘಟನೆಯಿಂದ ಬಂದ ಭಾನುಪ್ರಕಾಶ್‌, ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪಕ್ಷದ ಜವಾಬ್ದಾರಿಯಿಂದ ಕೈಬಿಟ್ಟರು. ಅಂಥವರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳಿದರೆ ಕೇಳುತ್ತಾರಾ? ನಾವೆಲ್ಲರೂ ಸಂಘಟನೆಯಿಂದ ಬಂದವರು. ನಮ್ಮ ಮೇಲೆ ಏನೇ ಆಪಾದನೆ ಮಾಡಿದರೂ ಸಂಘಟನೆ ಉಳಿಸುವವರು. ಇದರಲ್ಲಿ ಯಾವ ಅನುಮಾನವೂ ಇಲ್ಲ.

ಈಶ್ವರಪ್ಪ ಬ್ರಿಗೇಡ್‌ ಮುಂದುವರಿಸಿರು ವುದೇ ಸಮಸ್ಯೆಗೆ ಕಾರಣ. ಅವರು ಬ್ರಿಗೇಡ್‌ ಕೈಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆಂದು ಮುರಳೀಧರರಾವ್‌ ಅವರು ಶಾ ಅವರಿಗೆ ವರದಿ ಸಲ್ಲಿಸಿದ್ದಾರಂತಲ್ಲಾ?
        ಪಕ್ಷದ ಗೊಂದಲಕ್ಕೆ ಸಂಬಂಧಿಸಿದಂತೆ ಅಮಿತ್‌ ಶಾ ಅವರು ಜ. 27ರಂದು ಸಭೆ ನಡೆಸಿದ ಬಳಿಕ ಹೊರಗೆ ಬಂದು ಮುರಳೀಧರರಾವ್‌ ಹೇಳಿದ್ದೇನು? ಹಿಂದುಳಿದ ವರ್ಗಗಳನ್ನು ಸಂಘಟಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅನ್ನು ಈಶ್ವರಪ್ಪ ಮುಂದುವರಿಸಬೇಕು. ಆದರೆ, ಅದು ರಾಜಕೀಯ ಚಟುವಟಿಕೆ ಆಗಬಾರದು. ರಾಜಕೀಯವಾಗಿ ಆ ಸಮುದಾಯವನ್ನು ಸಂಘಟಿಸಲು ಈಶ್ವರಪ್ಪ ಅವರು ಹಿಂದುಳಿದ ವರ್ಗಗಳ ಮೋರ್ಚಾದ ಪ್ರಭಾರಿ ಆಗಬೇಕು ಎಂದು ಅಮಿತ್‌ ಶಾ ಹೇಳಿರುವುದಾಗಿ ಮುರಳೀಧರರಾವ್‌ ಹೇಳಿದ್ದರು. ಅದರಂತೆ ನಾನು ಅಮಿತ್‌ ಶಾ ಸೂಚನೆ ಪರಿಪಾಲಿಸಿದ್ದೇನೆಯೇ ಹೊರತು ಮೀರಿಲ್ಲ. ಆದರೆ, ಶಾ ಅವರ ಸೂಚನೆ ಮೀರಿರುವುದು ಯಡಿಯೂರಪ್ಪನವರು. ಸಂಘಟನೆ ಪ್ರಮುಖರ ಕರೆದು ಸಮಸ್ಯೆ ಬಗೆಹರಿಸಿ ಎಂದು ಹೇಳಿದರೂ ಸಭೆ ಕರೆಯಲಿಲ್ಲ, ಸಮಸ್ಯೆ ಬಗೆಹರಿಸಲಿಲ್ಲ.

ಹಾಗಿದ್ದಾಗ ಬ್ರಿಗೇಡ್‌ನ‌ಲ್ಲಿ ಪಕ್ಷದವರ್ಯಾರೂ ಭಾಗವಹಿಸಬಾರದೆಂದು ಮುರಳೀಧರರಾವ್‌ ಏಕೆ ಹೇಳಿದರು?
        ರಾಜಕೀಯೇತರ ಸಂಘಟನೆಯಾಗಿ ಬ್ರಿಗೇಡ್‌ ಮುಂದುವರಿಸುವಂತೆ ಈಶ್ವರಪ್ಪ ಅವರಿಗೆ ಅಮಿತ್‌ ಶಾ ಸೂಚಿಸಿದ್ದಾರೆ ಎಂದು ಕಳೆದ ಜನವರಿಯಲ್ಲಿ ಹೇಳಿದ್ದವರೇ ಮುರಳೀಧರರಾವ್‌. ಈಗ ಮತ್ತೆ ಈ ರೀತಿ ಏಕೆ ಹೇಳಿದರೋ ಗೊತ್ತಿಲ್ಲ. ಈಗ ಶಾ ಹೇಳಿದಂತೆ ನಡೆಯಬೇಡಿ ಎಂದರೆ? ನಾನು ರಾಷ್ಟ್ರೀಯ ಅಧ್ಯಕ್ಷರ ಮಾತು ಕೇಳಲೇಬೇಕು. 

ಹೊಂದಾಣಿಕೆ ಮಾಡಿಕೊಳ್ಳಿ, ಬ್ರಿಗೇಡ್‌ನಿಂದ ದೂರವಿರಿ ಎಂದು ಮತ್ತೆ ಅಮಿತ್‌ ಶಾ ಸೂಚಿಸಿದರೆ ಒಪ್ಪುತ್ತೀರಾ?
        ಹೊಂದಾಣಿಕೆಯೆಂದರೇನು? ರಾಷ್ಟ್ರೀಯ ಅಧ್ಯಕ್ಷರ ಮಾತು ಮೀರುವುದೇ? ಬ್ರಿಗೇಡ್‌ ಆರಂಭಿಸಿ ಒಂದು ವರ್ಷ ಕೂಡ ಆಗಲಿಲ್ಲ. ಆಗಲೇ ಕಳೆದ ಜನವರಿಯಲ್ಲಿ ಬ್ರಿಗೇಡ್‌ನಿಂದ ಹಿಂದುಳಿದ ವರ್ಗಗಳ ಸಮಾವೇಶ ಮಾಡಿದಾಗ ಲಕ್ಷಾಂತರ ಜನ ಬಂದಿದ್ದರು. ಸಿದ್ದರಾಮಯ್ಯ ಸರ್ಕಾರ ನಮಗೆ ಅನ್ಯಾಯ ಮಾಡಿತು. ಬ್ರಿಗೇಡ್‌ನಿಂದ ನಮಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಿಂದ ಅವರೆಲ್ಲಾ ಬಂದಿದ್ದರು. ಇದನ್ನು ಅರಿತ ಶಾ ಅವರು ದೂರಾಲೋಚನೆ ಇಟ್ಟುಕೊಂಡೇ ಬ್ರಿಗೇಡ್‌ ಮುಂದುವರಿಸಲು ಹೇಳಿರುವುದು. ಹೀಗಾಗಿ ಬ್ರಿಗೇಡ್‌ನಿಂದ ಹಿಂದೆ ಸರಿಯುವಂತೆ ಅವರು ಹೇಳುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

ಯಡಿಯೂರಪ್ಪ ಮತ್ತು ಈಶ್ವರಪ್ಪ ಎಂದರೆ ಹಕ್ಕ-ಬುಕ್ಕರಂತೆ ಎನ್ನುತ್ತಿದ್ದರು. ಈಗೇನಾಗಿದೆ?
        ಈಗಲೂ ನಾವು ಅಣ್ಣ ತಮ್ಮಂದಿರಿದ್ದಂತೆ ಇದ್ದೇವೆ. ಇಬ್ಬರೂ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಸರ್ಕಾರ ಬರಬೇಕು, ಸಂಘಟನೆಯೂ ಉಳಿಯಬೇಕು. ನಮಗೆ ಬೇಕಾಗಿರುವುದು ರೆಸಾರ್ಟ್‌ ಸಂಸ್ಕೃತಿ ಸರ್ಕಾರ ಅಲ್ಲ. ಮಧ್ಯೆ ಕೆಲವು ಗೊಂದಲಗಳಿವೆ. ಎಲ್ಲವೂ ಬಗೆಹರಿಯುತ್ತದೆ.

ಹಾಗಿದ್ದರೆ ನಿಮ್ಮ ಮಧ್ಯೆ ಗೊಂದಲ ಮೂಡಿಸಲು ಹುಳಿ ಹಿಂಡುವವರು ಯಾರು?
        ಯಾರೂ ಇಲ್ಲ. ಕೆಲವು ಮಾಹಿತಿಗಳನ್ನು ಕೊಡುವವರು ಅವರ ಜತೆಗೆ ಇದ್ದಾರೆ. ಸಂಘಟನೆ ಕೆಲಸ ಮಾಡುವವರು ನನ್ನ ಜತೆ ಇದ್ದಾರೆ. ಎರಡೂ ಕಡೆಯವರು ಪ್ರತ್ಯೇಕವಾಗಿ ಕುಳಿತು ಚರ್ಚೆ ಮಾಡುತ್ತಿದ್ದೇವೆ ಅಷ್ಟೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಲು ಹೋದಾಗ ಬೇಡ ಅಂದೆ. ಆದರೆ, ಯಾರ್ಯಾರೋ ಅವರ ದಾರಿ ತಪ್ಪಿಸಿದರು. ಫ‌ಲಿತಾಂಶ ಏನಾ ಯಿತು? ಸಂಘಟನೆ ಮತ್ತು ನಾಯಕತ್ವ ಎರಡೂ ಒಟ್ಟಾಗಿದ್ದರೆ ಮಾತ್ರ ಅನುಕೂಲ ಎಂಬುದಕ್ಕೆ ಯಡಿಯೂರಪ್ಪ ಅವರೇ ಸಾಕ್ಷಿ. ವೈಯಕ್ತಿಕವಾಗಿ ಸರ್ಕಾರ ಮಾಡಬೇಕೆಂದು ಕೆಜೆಪಿ ಕಟ್ಟಿದಾಗ ಸರ್ಕಾರ ಬಂತಾ? ಅವರಲ್ಲಿ ನಾಯಕತ್ವ ಇತ್ತು, ಸಮಾಜವೂ ಅವರೊಂದಿಗೆ ಇತ್ತು. ಆದರೂ ಗೆದ್ದಿದ್ದು ಆರು ಸೀಟು ಮಾತ್ರ. ಸಮಾಜವೂ ಇಲ್ಲ, ನಾಯಕತ್ವವೂ ಇಲ್ಲದ ಬಿಜೆಪಿ 40 ಸೀಟು ಗೆದ್ದಿತ್ತು. ಮತ್ತೆ ಸಂಘಟನೆ ಮತ್ತು ನಾಯಕತ್ವ ಒಂದಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದರೂ ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 17 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಹೀಗಾಗಿ ನಾಯಕತ್ವ ಮತ್ತು ಸಂಘಟನೆ ಒಟ್ಟಿಗಿರಬೇಕು ಎಂಬುದು ನಮ್ಮ ಆಸೆ. 

ಯಡಿಯೂರಪ್ಪ ಮುಂದಿನ ಸಿಎಂ ಎಂದು ಘೋಷಿಸಿದ್ದನ್ನುನೀವುಸಹಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
        ಪಕ್ಷದ ರಾಜ್ಯಾಧ್ಯಕ್ಷರನ್ನು ತೀರ್ಮಾನ ಮಾಡುವವರು ರಾಷ್ಟ್ರೀಯ ಅಧ್ಯಕ್ಷರು. ಅವರು ಯಡಿಯೂರಪ್ಪ ಅವರ ಹೆಸರು ಘೋಷಣೆ ಮಾಡಿದ ಮೇಲೆ ಸಿಎಂ ಸ್ಥಾನದ ಬಗ್ಗೆ ಯಾರೇ ಯೋಚನೆ ಮಾಡಿದ್ರೂ ಅದು ಪಕ್ಷ ದ್ರೋಹವಾಗುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ.

ಈ ರೀತಿ ಜಗಳ ಆಡಿಕೊಂಡು, ಅವರನ್ನು ಸಿಎಂ ಮಾಡುತ್ತೇವೆ ಎಂದರೆ ನಂಬಲು ಸಾಧ್ಯವೇ?
       ಜ. 27ರಂದು ಅಮಿತ್‌ ಶಾ ಅವರು ಕೊಟ್ಟ ಸೂಚನೆಯನ್ನು ಯಡಿಯೂರಪ್ಪ ಅವರು ಪಾಲಿಸದ ಕಾರಣ ಗೊಂದಲ ಮೂಡಿದೆ. ಈ ವಿಚಾರದಲ್ಲಿ ಕೇಂದ್ರದ ನಾಯಕರು ನಮ್ಮನ್ನು ಕರೆದು, ಕೂರಿಸಿ ಸಮಸ್ಯೆ ಪರಿಹಾರ ಮಾಡುತ್ತಾರೆ. ಎಲ್ಲರೂ ಒಟ್ಟಾಗಿ ಸಂಘಟನೆ ಮೂಲಕ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಪ್ರಧಾನಿ ಮೋದಿ ಮತ್ತು ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. 

ಯಡಿಯೂರಪ್ಪ ಅವರ ಬಗ್ಗೆ ವಿಶ್ವಾಸ ಇದೆ ಎಂದು ಹೇಳುತ್ತಿರುವ ನೀವು ಮತ್ತೇಕೆ ಅಪಸ್ವರ ಎತ್ತುತ್ತೀರಿ?
       ಯಡಿಯೂರಪ್ಪ ಅವರ ನಡವಳಿಕೆ ಬಗ್ಗೆ ಆಕ್ಷೇಪವೇ ಹೊರತು ಅವರ ಬಗ್ಗೆ ಅಲ್ಲ. ಏಕಪಕ್ಷೀಯ ನಿರ್ಧಾರ ಕೈಗೊಂಡು ಪದಾಧಿಕಾರಿಗಳನ್ನು ನೇಮಕ ಮಾಡಿದಾಗ ಎಲ್ಲಾ ಕಾರ್ಯಕರ್ತರಿಗೆ ಬೇಸರವಾಗಿತ್ತು. ಸಂಘಟನೆ ಕೆಲಸ ಮಾಡಿದವರನ್ನು ಬಿಟ್ಟು ತಮ್ಮ ಸುತ್ತಮುತ್ತ ಇರುವವರನ್ನೇ ಯಡಿಯೂರಪ್ಪ ಪದಾಧಿಕಾರಿಗಳನ್ನಾಗಿ ಮಾಡಿದ್ದಾರೆ. ಮುಂದೆ ಅವರೇ ಶಾಸಕರಾಗಿ ಮಂತ್ರಿಗಳಾಗಬಹುದು. ಆಗ ಮತ್ತೆ 5 ವರ್ಷ ಬಿಜೆಪಿ ಸರ್ಕಾರ ತೊಂದರೆ ಅನುಭವಿಸುತ್ತದೆ. ಅದಕ್ಕಾಗಿ ಸರಿಯಾದ ವ್ಯಕ್ತಿಗಳು ಪದಾಧಿಕಾರಿಗಳಾಗಬೇಕು, ಶಾಸಕರಾಗಬೇಕು ಮತ್ತು ಸರಿಯಾದ ವ್ಯಕ್ತಿಗಳ ಸರ್ಕಾರ ಬರಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಯಡಿಯೂರಪ್ಪ ಅವರ ನಡವಳಿಕೆ ಬಗ್ಗೆ ಆಕ್ಷೇಪಿಸಿದ್ದೇನೆಯೇ ಹೊರತು ಪಕ್ಷ/ಬಿಎಸ್‌ವೈ ವಿರುದ್ಧ ವಲ್ಲ.

ಯಡಿಯೂರಪ್ಪ ಬಿಜೆಪಿಯನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರಾ? ಅಥವಾ ಕೆಲವರು ಕಿವಿಯೂದಿ ಹಾಗೆ ಮಾಡಿಸುತ್ತಿದ್ದಾರಾ ?
       ಅದು ಅವರ ಸ್ವಭಾವವೇ ಅಥವಾ ಕಿವಿಯೂದುವವರ ಮಾತು ಕೇಳಿ ಈ ರೀತಿ ವರ್ತಿಸುತ್ತಿದ್ದಾರೆಯೇ ಎಂಬುದು ಮುಖ್ಯವಲ್ಲ. ಸ್ವಭಾವವೂ ಇರಬಹುದು/ದಾರಿ ತಪ್ಪಿಸುವವರೂ ಇರಬಹುದು. ಅದರಿಂದಾಗಿ ಸರ್ವಾಧಿಕಾರಿ ಧೋರಣೆ ಅನುಸರಿಸುವುದು, ಸಂಘಟನೆ ಹಾಳು ಮಾಡುವುದು ಬಿಜೆಪಿಯಲ್ಲಿ ನಡೆಯುವುದಿಲ್ಲ. ಏಕಪಕ್ಷೀಯ ತೀರ್ಮಾನಗಳಿಗೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ಎಲ್ಲಾ ಕಾರ್ಯಕರ್ತರು ಸೇರಿ ಪಕ್ಷ ಕಟ್ಟುತ್ತೇವೆ , ಸರ್ಕಾರ ತರುತ್ತೇವೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಹತ್ತಾರು ವರ್ಷ ಪಕ್ಷಕ್ಕೆ ಕೆಲಸ ಮಾಡಿದವರು ಸಂಘಟನೆ ಉಳಿಸಿ ಅಂದಾಗ ಅವರಿಗೆ ಸಿಟ್ಟು ಬರುತ್ತದೆ. ಇನ್ನು ನಾಲ್ಕು ಗೋಡೆ ಮಧ್ಯೆ ಅವರ ಮಾತು ಕೇಳುತ್ತಾರಾ? ಅಮಿತ್‌ ಶಾ ಹೇಳಿದ ಮಾತನ್ನೇ ಅವರು ಕೇಳುತ್ತಿಲ್ಲ.ಆರ್‌ಎಸ್‌ಎಸ್‌ನಿಂದ ಬಂದ ಬಿ.ಎಲ್‌.ಸಂತೋಷ್‌ ಅವರ ಬಗ್ಗೆ ನೇರವಾಗಿ ಮಾಧ್ಯಮಗಳ ಮುಂದೆ ಆಪಾದನೆ ಮಾಡುತ್ತಾರೆ. ಸಂತೋಷ್‌ ಅವರು ಇಡೀ ಜೀವನವನ್ನೇ ದೇಶಕ್ಕೆ ಸಮರ್ಪಿಸಿದವರು. ಅಂಥವರ ಬಗ್ಗೆ ಮಾತಾಡಿದ್ದರಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. 
 – ಕೆ.ಎಸ್‌.ಈಶ್ವರಪ್ಪ  ವಿಧಾನ ಪರಿಷತ್‌ ವಿಪಕ್ಷ ನಾಯಕ‌

– ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ  ಭವ್ಯಾ, ಮೋಕ್ಷಿತಾ ಟಾರ್ಗೆಟ್

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

895

Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

216

Bengaluru: ಟ್ರಕ್‌ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.