Lok Sabha Elections; 11 ಪಕ್ಷಗಳು, 91 ಸಂಸದರ ನಿರ್ಲಿಪ್ತ ರಣನೀತಿ
Team Udayavani, Jul 24, 2023, 6:10 AM IST
2024ರ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ವಿದೆ. ಈಗಲೇ 65 ಪಕ್ಷಗಳು ತಂತಮ್ಮ ನೆಲೆಗಳನ್ನು ಘೋಷಿಸಿ ಕೊಂಡಿವೆ. ಲೋಕಸಭಾ ಚುನಾವಣೆಗೆ ಮೊದಲು ಕಹಳೆಯೂದಿದ್ದು ಕಾಂಗ್ರೆಸ್. ರಾಹುಲ್ ಗಾಂಧಿ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ 150 ದಿನಗಳ ಭಾರತ್ ಜೋಡೋ ಪಾದಯಾತ್ರೆ ನಡೆಸಿದರು.
ಸಂಪೂರ್ಣ ಮುಳುಗಿಯೇ ಹೋಯಿತು ಎಂಬಂತಿದ್ದ ಕಾಂಗ್ರೆಸ್ ಮತ್ತೊಮ್ಮೆ ಜೀವಕಳೆ ಪಡೆಯಿತು. ಅನಂತರ ನಡೆದ ಕರ್ನಾಟಕದ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿತು. ಈ ಹಂತದಲ್ಲೇ ಕಾಂಗ್ರೆಸ್‌ಗೆ ಮತಗಳನ್ನು
ಸೆಳೆಯಬೇಕಾದರೆ ಯಾವ ಗ್ಯಾರಂಟಿ ನೀಡಬೇಕೆಂದು ಹೊಳೆದಿರಬಹುದು!
ಕರ್ನಾಟಕದ ಗೆಲುವಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಪರಿಣಾಮ ಎಷ್ಟಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರನ್ನು ಒಗ್ಗೂಡಿ ನಡೆಯುವಂತೆ ಮಾಡಲು ಯಶಸ್ವಿಯಾದರು. ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿದ್ದು ಇದೇ ಸಂಗತಿ. ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಪರ ಶಾಸಕರು ನಿಂತರು. ಹಾಗಾಗಿ ಶಿವಕುಮಾರ್ ಕಾಯಬೇಕಾಗಿ ಬಂದಿದೆ.
ಈ ಸಂಗತಿಗಳನ್ನೆಲ್ಲ ಬದಿಗಿಟ್ಟು ಒಂದು ಕುತೂಹಲಕಾರಿ ಸಂಗತಿಯತ್ತ ನಾವೆಲ್ಲ ಗಮನ ಹರಿಸಬೇಕಾಗಿದೆ. ಇದು ಭಾರತೀಯ ರಾಜಕಾರಣದ ಅತ್ಯಂತ ಸಂಕೀರ್ಣ ಸಂದಿಗ್ಧತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ. ಜು.18ಕ್ಕೆ ಬೆಂಗಳೂರಿನಲ್ಲಿ ನಡೆದ ಸಭೆಯ ಮೂಲಕ ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಿವೆ. ಇದಕ್ಕೆ ಐಎನ್‌ಡಿಐಎ ಅಥವಾ ಇಂಡಿಯಾ ಎಂದು ಕರೆಯಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ 39 ಪಕ್ಷಗಳ ಎನ್‌ಡಿಎ ಮೈತ್ರಿಯನ್ನು ಜನರ ಮುಂದಿಟ್ಟಿತು. ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಅದಕ್ಕಾಗಿ ಯಾವುದೇ ಹಂತಕ್ಕೂ ಹೋಗಬಲ್ಲೆ ಎನ್ನುವುದನ್ನೂ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಅನಂತರ, ಬಿಜೆಪಿ ವಿರೋಧಿ ಪಕ್ಷಗಳಿಗೆ ಬಲವಾದ ಆತ್ಮವಿಶ್ವಾಸ ಹುಟ್ಟಿದೆ.
ಬಿಜೆಪಿ-ಕಾಂಗ್ರೆಸ್ ಬಣಗಳು ತಂತಮ್ಮ ಮೈತ್ರಿಯನ್ನು ಗಟ್ಟಿ ಮಾಡುವುದರಲ್ಲಿ ಮಗ್ನವಾಗಿದ್ದರೂ ಅವರೊಂದಿಗೆ ಸೇರದ 11 ಪ್ರಬಲ ಪಕ್ಷಗಳಿವೆ, ಅವುಗಳ ಬಳಿ ಒಟ್ಟು 91 ಲೋಕ ಸಭಾ ಸ್ಥಾನಗಳಿವೆ ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ. ಅದನ್ನೇ ನಾವಿಲ್ಲಿ ಯೋಚಿಸಬೇಕಾಗಿರುವುದು. ಈ 11 ಪಕ್ಷ ಗಳು ತಮ್ಮ ಆಯ್ಕೆಯನ್ನು ಮುಕ್ತವಾಗಿಟ್ಟು ಕೊಂಡಿ ವೆ. ತಮ್ಮ ಶಕ್ತಿ ಏನೆಂದು ಅವಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಯಾವುದೇ ಬಣಕ್ಕೆ ಸೇರದೆಯೂ ತಮ್ಮದೇ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು, ತಮ್ಮ ಹಿತವನ್ನೂ ಸಾಧಿಸಿಕೊಳ್ಳುವ ಶಕ್ತಿ ಅವಕ್ಕಿವೆ.
ಇಲ್ಲಿ ಆ ಪಕ್ಷಗಳ ಪ್ರತೀ ಹೆಜ್ಜೆಯನ್ನೂ ನಿಕಟವಾಗಿ ಗಮನಿ ಸು ವುದು ಅಗತ್ಯ. ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ಬಿಜೆಪಿಯೊಂದಿಗೆ ಆತ್ಮೀಯ ಸಂಬಂಧವನ್ನೇ ಹೊಂದಿವೆ. ಇತ್ತೀಚೆಗೆ ನೂತನ ಸಂಸತ್ ಉದ್ಘಾ ಟನೆ ಯಾದಾಗ ಈ ಪಕ್ಷಗಳು ಕಾರ್ಯಕ್ರಮಕ್ಕೆ ಹಾಜ ರಾಗಿದ್ದವು. ಇತ್ತೀಚೆಗಷ್ಟೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಧಾನಿ ಮೋದಿಯನ್ನು ಭೇಟಿ ಯಾಗಿದ್ದಾರೆ. ಟಿಡಿಪಿ ಹಿಂದೆ ಎನ್‌ಡಿಎ ಜತೆಗೆ ನಿಂತಿತ್ತು. ಆದರೂ ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಸೇರದೆ ಎರಡೂ ತಟಸ್ಥವಾಗಿದ್ದೇಕೆ? ಬಹುಶಃ ಬಿಜೆಪಿಗೆ ಇಬ್ಬರಲ್ಲೊಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಅಪಾಯಕಾರಿ ಎನಿಸಿರುತ್ತದೆ. ಇಬ್ಬರಲ್ಲಿ ಯಾರನ್ನು ಅಪ್ಪಿಕೊಂಡರೂ ಮತ್ತೂಬ್ಬರನ್ನು ಎದುರು ಹಾಕಿಕೊಳ್ಳಬೇಕಾ ಗುತ್ತದೆ. ಲೋಕಸಭೆಯಲ್ಲಿ ಫಲಿತಾಂಶ ನೋಡಿಕೊಂಡು ಯಾರನ್ನು ಸೆಳೆದುಕೊಳ್ಳಬೇಕು ಎಂದು ಇತ್ಯರ್ಥ ಮಾಡ ಬಹುದು. ತೆಲುಗುದೇಶಂಗೆ ಕಾದು ನೋಡುವುದೇ ಸರಿ ಅನಿಸಿರುತ್ತದೆ. ಅದಕ್ಕೆ ಬಿಜೆಪಿ-ಕಾಂಗ್ರೆಸ್ ಜತೆಗೆ ಹೋಗು ವುದು ತನ್ನದೇ ಆದ ಕಾರಣಗಳಿಂದ ಸಮ್ಮತವಿಲ್ಲ. ಇನ್ನು ವೈಸ್ಸಾರ್ ಕಾಂಗ್ರೆಸ್, ಮೂಲ ಕಾಂಗ್ರೆಸನ್ನು ಒಡೆದು ಹುಟ್ಟಿ ರುವುದು. ಅವರೆಡು ಬದ್ಧವಿರೋಧಿಗಳು. ಒಗ್ಗೂಡಲು ಸಾಧ್ಯವೇ ಇಲ್ಲ. ಆಂಧ್ರದಲ್ಲಿನ ಮತಗಳನ್ನು ಗಮನಿಸಿದರೆ ಬಿಜೆಪಿಯೊಂದಿಗೆ ನೇರಾನೇರ ಗುರುತಿಸಿ ಕೊಳ್ಳುವುದೂ ಇಕ್ಕಟ್ಟು ಅನ್ನಿಸಿರುತ್ತದೆ. ಸದ್ಯಕ್ಕೆ ಇಲ್ಲಿ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ ಎನ್ ಡಿಎ ಜತೆ ಇದೆ.
ತೆಲಂಗಾಣದಲ್ಲಿ ಗಟ್ಟಿಯಾಗಿರುವ ಕೆ.ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ತಾನೇ ಒಂದು ಮೈತ್ರಿಕೂಟವನ್ನು ರಚಿಸಲು ಮುಂದಾಗಿತ್ತು. ಇದಕ್ಕೆ ಯಾರೂ ಜತೆಗೂಡಲಿಲ್ಲ. ಹಾಗಾಗಿ ಅದು ತಟಸ್ಥವಾಗು ಳಿದಿದೆ. ಬಿಆರ್‌ಎಸ್ ವಿರುದ್ಧ ತೆಲಂಗಾಣದಲ್ಲಿ ಬಿಜೆಪಿ ಬಲವಾದ ಸಂಘರ್ಷ ನಡೆಸುತ್ತಿದೆ. ಹಾಗಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಕೊಳ್ಳುವುದು ಸಾಧ್ಯವೇ ಇಲ್ಲದ ಮಾತು. ಆಂಧ್ರವನ್ನು ಒಡೆದುಕೊಂಡು ತೆಲಂಗಾಣ ಹುಟ್ಟುವಾಗ ಕಾಂಗ್ರೆಸ್‌ನೊಂದಿಗೆ ಬಿಆರ್‌ಎಸ್ ಸಂಘರ್ಷ ನಡೆಸಿತ್ತು. ಆ ಕಹಿಭಾವಗಳಿನ್ನೂ ಮಾಸಿಲ್ಲ. ಇಲ್ಲೂ ಒಟ್ಟಾಗಿ ನಡೆಯುವುದು ಕಷ್ಟ. ಒಂದುವೇಳೆ ಲೋಕಸಭಾ ಚುನಾವಣೆ ಫಲಿತಾಂಶ ಅತಂತ್ರವಾದರೆ ಬಿಆರ್‌ಎಸ್ ಯಾವುದಾದರೂ ಒಂದು ಬಣವನ್ನು ಕೂಡಿಕೊಳ್ಳಬಹುದು.
ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜೆಡಿಯದ್ದು ಇನ್ನೊಂದು ಲೆಕ್ಕಾಚಾರ. ಕೇಂದ್ರದಿಂದ ಒಡಿಶಾಕ್ಕೆ ಅಗತ್ಯ ನೆರವು ಸಿಕ್ಕಿಲ್ಲ ಎಂಬ ಸಿಟ್ಟು ಅದರದ್ದು. ಈ ಬಾರಿ ಸಂಸತ್ ಅಧಿವೇಶನದಲ್ಲಿ ಅದರ ವಿರುದ್ಧ ಧ್ವನಿಯೆತ್ತಬೇಕು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂದೆಯೇ ಸೂಚನೆ ನೀಡಿದ್ದಾರೆ. ಇಷ್ಟೆಲ್ಲ ವಿರೋಧದ ನಡುವೆಯೂ ಬಿಜೆಡಿ ಮೇ 28ರಂದು ನಡೆದ ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡಿತ್ತು. ಕೇಂದ್ರ ಸರಕಾರ ಮುಂದೆ ಹೇಗೆ ಸ್ಪಂದಿಸುತ್ತದೆ ಎಂದು ನೋಡಿಕೊಂಡು ಯಾರ ಕಡೆ ಸೇರಬೇಕು, ಸೇರಬಾರದು ಎನ್ನುವುದನ್ನು ಅದು ತೀರ್ಮಾನಿಸುವ ಸಾಧ್ಯತೆಯೇ ಹೆಚ್ಚು. ಆದರೆ ಬಹ ಳಷ್ಟು ಬಾರಿ ಬಿಜೆಡಿ ಯಾವುದೇ ಬಣ ಸೇರದೇ ಸ್ವತಂತ್ರ ವಾಗಿ ಇದ್ದುಕೊಂಡೇ ಬಂದಿದ್ದು, ಈಗಲೂ ಅದೇ ನಿರ್ಧಾರದ ಮೊರೆ ಹೋಗಬಹುದು.
ಸಂಸತ್ ಭವನ ಉದ್ಘಾಟನ ಸಮಾರಂಭಕ್ಕೆ ಹಲವು ಪಕ್ಷಗಳು ಬಹಿಷ್ಕಾರ ಹಾಕಿದ್ದರೂ ಬಿಎಸ್‌ಪಿ ನಾಯಕಿ ಮಾಯಾವತಿ ವಿಚಿತ್ರವಾದ ನಿಲು ವೊಂದನ್ನು ಪ್ರಕಟಿಸಿದರು. ನೂತನ ಸಂಸತ್ ಭವನಕ್ಕೆ ನಮ್ಮ ಬೆಂಬಲವಿದೆ, ಅದಕ್ಕೆ ಬಹಿಷ್ಕಾರ ಹಾಕುವುದು ತಪ್ಪು. ಆದರೆ ಪೂರ್ವನಿಯೋಜಿತ ಕಾರ್ಯಕ್ರಮ ವಿರು ವುದರಿಂದ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು. ಒಂದು ಕಡೆ ಅವರು ಕಾರ್ಯಕ್ರಮಕ್ಕೂ ಗೈರಾದರು, ಮತ್ತೂಂದು ಕಡೆ ಬಿಜೆಪಿಯ ಕೋಪದಿಂದಲೂ ತಪ್ಪಿಸಿಕೊಂಡರು! ಈಗ ಮೈತ್ರಿಯಿಂದ ಹೊರಕ್ಕುಳಿದಿರುವ ಅವರು ಇನ್ನೊಂದು ವಿಚಿತ್ರ ನಿಲುವನ್ನು ಪ್ರಕಟಿಸಿದ್ದಾರೆ. “ಕೇಂದ್ರದಲ್ಲಿ ಪ್ರಬಲ ಸರಕಾರವಿಲ್ಲ, ಒಂದು ಅಶಕ್ತ ಸರಕಾರ ವಿದೆ. ಬಿಎಸ್‌ಪಿ ಅಧಿಕಾರಕ್ಕೆ ಬರದಿದ್ದರೂ ದಲಿತರು, ಬಡವರು, ಆದಿವಾಸಿಗಳು, ತುಳಿತಕ್ಕೊಳಗಾದವರು, ಅಲ್ಪ ಸಂಖ್ಯಾಕರ ಹಿತರಕ್ಷಣೆಯಾಗುತ್ತದೆ ಎಂಬ ಭರವಸೆ ಯನ್ನುಂಟು ಮಾಡಬೇಕಿದೆ’ ಎಂದು ಮಾಯಾವತಿ ಹೇಳು ತ್ತಾರೆ. 9 ಸಂಸದರನ್ನು ಹೊಂದಿರುವ ಅವರು ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ? ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಆಂಧ್ರಪ್ರದೇಶ, ಹೈದರಾಬಾದ್, ತೆಲಂಗಾಣಗಳಲ್ಲಿ ಬಲಿಷ್ಠವಾಗಿರುವ ಎಐಎಂಐಎಂಗೆ ಅಸಾದುದ್ದೀನ್ ಓವೈಸಿ ನಾಯಕ. ನಮ್ಮ ಪಕ್ಷವನ್ನು ರಾಜಕೀಯವಾಗಿ ಅಸ್ಪೃಶ್ಯರನ್ನಾಗಿ ನೋಡಲಾಗುತ್ತಿದೆ. ಅದಕ್ಕೆ ವಿಪಕ್ಷಗಳ ಮೈತ್ರಿಕೂಟದಿಂದ ಹೊರಗಿಡಲಾಗಿದೆ ಎಂದಿದ್ದಾರೆ. ಓವೈಸಿ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕಗಳಲ್ಲಿ ಮುಸ್ಲಿಮರನ್ನು ಒಗ್ಗೂಡಿಸಿ ಚಿಗುರೊಡೆಯಲು ಹೊರಟಿದ್ದಾರೆ. ಇವರು ಬಿಜೆಪಿ ಜತೆಗಂತೂ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್ ಅವರನ್ನು ಸೇರಿಸಿಕೊಂಡಿಲ್ಲ. ಪ್ರತ್ಯೇಕವಾಗಿ ಸ್ಪರ್ಧಿಸಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಮುಸ್ಲಿಮ್ ಮತಗಳು ಪೂರ್ಣವಾಗಿ ಹೋಗದಂತೆ ತಡೆಯಬಲ್ಲರು. ಅದರಿಂದ ಯಾರಿಗೆ ಲಾಭವಾಗುತ್ತದೆ ಎನ್ನುವುದನ್ನೂ ಯಾರೂ ಊಹಿಸಬಲ್ಲರು!
ಮುಂದಿನ ಲೋಕಸಭಾ ಚುನಾವಣೆ ಬಿಜೆಪಿ ಪಾಲಿಗೆ ಹಿಂದಿನೆರಡು ಚುನಾವಣೆಗಳಂತೆ ಸುಲಭದ ತುತ್ತಾಗುವ ಸಾಧ್ಯತೆಯಿಲ್ಲ. ಬೆಲೆಯೇರಿಕೆ ದೇಶಾದ್ಯಂತ ಜನರಿಗೆ ಆಕ್ರೋಶ ಭರಿಸಿದೆ. ಇದರ ಲಾಭ ಪಡೆಯುವ ಲೆಕ್ಕಾ ಚಾರದಲ್ಲಿ ವಿರೋಧ ಪಕ್ಷಗಳಿವೆ. ಹಾಗೆಯೇ ಯಾವುದೇ ಬೆಲೆ ತೆತ್ತಾದರೂ ಬಿಜೆಪಿಯನ್ನು ಸೋಲಿಸಲೇ ಬೇಕು, ಹಾಗಾಗದಿದ್ದರೆ ಮುಂದೆ ನಮ್ಮ ಅಸ್ತಿತ್ವಕ್ಕೇ ಆಪತ್ತಿದೆ ಎಂದು ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಹೇಳುತ್ತಾರೆ. ಇವರೆಲ್ಲ ಒಟ್ಟಾಗಿ ಅಭ್ಯರ್ಥಿಯನ್ನು ಹಾಕಿದರೆ ಮತಗಳು ಒಗ್ಗೂಡುತ್ತವೆ. ಜಾತಿ ಸಮೀಕರಣವೂ ಸಾಧ್ಯವಾಗುತ್ತದೆ. ಇದರಿಂದ ಸದ್ಯ ಬಿಜೆಪಿಗಿರುವ 303 ಸ್ಥಾನಗಳು, ಮುಂದಿನ ಚುನಾವಣೆಯಲ್ಲಿ ಕರಗಬಹುದು. ಎಷ್ಟು ಕರಗಿದರೂ ಅಷ್ಟು ವಿಪಕ್ಷಗಳಿಗೇ ಲಾಭ. ಇದರ ಅರಿವು ಎರಡೂ ಮೈತ್ರಿ ಕೂಟಗಳಿಗಿದೆ. ಒಂದು ವೇಳೆ ಬಿಜೆಪಿಗೆ ಬಹುಮತ ಬರ ದಿದ್ದರೆ ಈ 11 ಪಕ್ಷಗಳ ಸಂಸದರಿಗೆ ಭಾರೀ ಬೇಡಿಕೆ ಬರುತ್ತದೆ. ಆಗಿನ ಜಗ್ಗಾಟ-ಕಿತ್ತಾಟ-ರಂಪಾಟವನ್ನು ನೀವೇ ಊಹಿಸಿ.
-ಕೆ.ಪೃಥ್ವಿಜಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.