ಪರಿಸರದಲ್ಲಿ ಒಬ್ಬಂಟಿಯಾದ ಅಮೆರಿಕ


Team Udayavani, Jun 5, 2017, 11:11 AM IST

warming.jpg

ದೂರದೃಷ್ಟಿ ಇಲ್ಲದ ಯಾವುದೇ ನಿರ್ಧಾರಗಳು ಒಂದು ದೇಶದ ಅವನತಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು
ಇತಿಹಾಸ ಹಲವಾರು ಪ್ರಸಂಗಗಳಲ್ಲಿ ತೋರಿಸಿ ಕೊಟ್ಟಿದ್ದಿದೆ. ಇದು ಜರ್ಮನಿಯ ಅಡಾಲ್ಫ್ ಹಿಟ್ಲರ್‌ ವಿಚಾರದಲ್ಲಂತೂ ಬಹಿರಂಗವಾಗಿಯೇ ಜಗತ್ತಿಗೆ ತೋರಿಸಿಕೊಟ್ಟಿದೆ. ಆದರೂ, ಈಗಿನ ಕೆಲವು ರಾಷ್ಟ್ರ ನಾಯಕರು ಇಂಥ ಅವಸರದ, ಅಸೂಯೆಯ ಹೆಜ್ಜೆ ಇರಿಸಲು ಹೋಗಿ ಇಂಗು ತಿಂದ ಮಂಗನ ರೀತಿ ಆಗುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

ಏಕೆಂದರೆ ಇಂದು ಜಗತ್ತನ್ನು ನಾಶ ಮಾಡಬೇಕಾದರೆ ಯುದ್ಧವನ್ನೇ ಮಾಡಬೇಕಾಗಿಲ್ಲ. ಇದರ ಬದಲಾಗಿ ಇಂಥ ತಪ್ಪು
ಹೆಜ್ಜೆಗಳನ್ನು ಇಟ್ಟರೆ ಸಾಕು. ಇಂಥ ಮಹಾ ತಪ್ಪು ಮಾಡಿರುವುದು ಡೊನಾಲ್ಡ್‌ ಟ್ರಂಪ್‌. ಸ್ವತಃ ಅಮೆರಿಕದವರೇ ಇನ್ನೂ ಒಪ್ಪಿಕೊಳ್ಳದ ಇವರು, ಉದ್ಯೋಗ ಉದ್ಯೋಗ ಎಂದು ಹೇಳುತ್ತಾ, ಅಮೆರಿಕ ವನ್ನು ಆರ್ಥಿಕವಾಗಿ ಇನ್ನಷ್ಟು ಮೇಲಕ್ಕೆ ಎತ್ತಬೇಕು ಎಂಬ ದುರಾಸೆಯಿಂದ ಇಂಥ ನಡೆ ಇಟ್ಟಿದ್ದಾರೆ. ಇವರ ಈ ನಡೆಯಿಂದ ಅಮೆರಿಕದ ಕಲ್ಲಿದ್ದಲು ಗಣಿಗಳಿಗೆ ಲಾಭವಾಗಬಹುದು. ಆದರೆ ಮಾರಿಷಸ್‌ನಂಥ ದೇಶ ಮುಳುಗಿಯೇ ಹೋಗಬಹುದು ಎಂಬ ಕಲ್ಪನೆಯೂ ಅವರಿಗಿಲ್ಲ.

ಹವಾಮಾನ ಬದಲಾವಣೆ ವಿಚಾರದಲ್ಲಿ ಅಮೆರಿಕ ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರ್ರಿ ಅವರ ಪ್ರಯತ್ನವನ್ನು ಮರೆಯುವಂತಿಲ್ಲ. ಒಂದರ್ಥದಲ್ಲಿ ಹವಾಮಾನ ಬದಲಾವಣೆ ಕುರಿತಂತೆ ಪ್ಯಾರಿಸ್‌ನಲ್ಲಾದ ಒಪ್ಪಂದಕ್ಕೆ ಜಗತ್ತಿನ 195 ದೇಶಗಳು ಸಹಿ ಮಾಡಲು ಇವರಿಬ್ಬರೇ ಕಾರಣ. ಕೆರ್ರಿ ಅಂತೂ, ಜಗತ್ತಿನೆಲ್ಲೆಡೆ ಸುತ್ತಾಡಿ ರಾಷ್ಟ್ರನಾಯಕರ ಮನವೊಲಿಕೆ ಮಾಡು ವಲ್ಲಿ ಸಫ‌ಲರಾಗಿದ್ದರು. ಆದರೆ ಸಿರಿಯಾ ಮತ್ತು ನಿಕಾರುಗ್ವಾ ಮಾತ್ರ ಈ ಒಪ್ಪಂದದಿಂದ ದೂರವೇ ಉಳಿದಿದ್ದವು.

ಅದರಲ್ಲೂ ಗ್ಲೋಬಲ್‌ ವಾರ್ಮಿಂಗ್‌ಗೆ ಭಾರಿ ಮಟ್ಟದಲ್ಲೇ ಕಾರಣವಾಗುತ್ತಿರುವ ಚೀನಾ ಮತ್ತು ಭಾರತವನ್ನು ಒಪ್ಪಿಸುವುದರಲ್ಲಿ ಒಬಾಮ ಅವರ ಪಾತ್ರ ದೊಡ್ಡದಿತ್ತು. ಇದಕ್ಕೆ ಕಾರಣವೂ ಇದೆ. ಅಮೆರಿಕ ಹೇಳಿದ ತಕ್ಷಣ ಜಾಗತಿಕ ಹವಾಮಾನ ಕುರಿತ ಒಪ್ಪಂದಕ್ಕೆ ಭಾರತವಾಗಲಿ, ಚೀನಾವಾಗಲಿ ಕಣ್ಣು ಮುಚ್ಚಿ ಸಹಿ ಹಾಕುವ ಸ್ಥಿತಿಯಲ್ಲಿ ಇಲ್ಲ. ಇವು ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು. ಇಲ್ಲಿ ಕಲ್ಲಿದ್ದಲು ಸೇರಿದಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಮಾಲಿನ್ಯಕಾರಕ ವಸ್ತುಗಳನ್ನು ಬಳಸುವು ದರಲ್ಲಿಯೂ ಮುಂಚೂಣಿಯಲ್ಲಿವೆ. ಚೀನಾದಲ್ಲಂತೂ ಶೇ.62
ರಷ್ಟು ಕೈಗಾರಿಕೆಗಳು, ವಿದ್ಯುತ್‌ ಉತ್ಪಾದನೆ ಕಲ್ಲಿದ್ದಲು ಆಧರಿತವಾಗಿಯೇ ನಡೆಯುತ್ತಿದೆ. ಭಾರತ ಕೂಡ ವಿದ್ಯುತ್‌ ಉತ್ಪಾದನೆ ಸೇರಿದಂತೆ ಕೈಗಾರಿಕೆಗಳಲ್ಲಿ ಇಂದಿಗೂ ಕಲ್ಲಿದ್ದಲನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತಲೇ ಇದೆ. ಹೀಗಾಗಿ ಸಹಿ ಮಾಡಿದಾಕ್ಷಣ, ನಾವು ಈ ಕೈಗಾರಿಕೆಗಳನ್ನು ನಿಲ್ಲಿಸಿಬಿಡುತ್ತೇವೆ, ಕಲ್ಲಿದ್ದಲು ಬಳಕೆ ಸ್ಥಗಿತಗೊಳಿಸುತ್ತೇವೆ ಎಂದು ಹೇಳಲು ಸಾಧ್ಯವೇ ಇಲ್ಲ. 

ಇದನ್ನು ಅರಿತೇ ಬರಾಕ್‌ ಒಬಾಮ ಮತ್ತು ಜಾನ್‌ ಕೆರ್ರಿ, ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಧನಸಹಾಯ ಮಾಡುವ ಕುರಿತಂತೆ ಮುಂದುವರಿದ ದೇಶಗಳನ್ನು ಒಪ್ಪಿಸಿದ್ದರು. ಇದರನ್ವಯವೇ ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಲಕ್ಷಾಂತರ ಕೋಟಿ ಹಣವನ್ನು ಕೊಡಬೇಕು ಎಂಬ ಒಪ್ಪಂದವೂ ಆಗಿತ್ತು.

ಅಭಿವೃದ್ಧಿ ಹೊಂದಿದ ದೇಶಗಳು, ಅಭಿವೃದ್ದಿಶೀಲ ದೇಶಗಳಿಗೆ ಧನ ಸಹಾಯ ಮಾಡಬೇಕು ಎಂಬ ಪ್ಯಾರಿಸ್‌ ಒಪ್ಪಂದದ ಆಶಯ ದಲ್ಲಿ ವಿಶಾಲ ದೃಷ್ಟಿಕೋನವೂ ಇತ್ತು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ದಿಢೀರನೇ ಕಾರ್ಖಾನೆಗಳನ್ನು ನಿಲ್ಲಿಸಿ, ಕಲ್ಲಿದ್ದಲು ಬಳಸಬೇಡಿ, ಮಾಲಿನ್ಯಕ್ಕೆ ಕಾರಣವಾಗುವ ಯಾವುದೇ ಅಂಶ ಗಳಿದ್ದರೂ ಅದಕ್ಕೆ ತಡೆ ನೀಡಿ ಎಂದು ಹೇಳುವುದು ಅಸಾಧ್ಯದ ಮಾತು.

ಆದರೆ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಇಂಥ ಸಂದರ್ಭಗಳಲ್ಲಿ, ಅಭಿವೃದ್ಧಿಶೀಲ ಅಥವಾ ಹಿಂದುಳಿದ ದೇಶಗಳಿಗೆ ಧನ ಸಹಾಯ ಅತ್ಯಗತ್ಯ. ಈ ದೇಶಗಳು, ಕಲ್ಲಿದ್ದಲು ಉರಿಸುವುದರಿಂದ ವಿದ್ಯುತ್‌ ತಯಾರಿಕೆ ಮಾಡುವುದನ್ನು ಬಿಡಬೇಕಾದರೆ, ಪರ್ಯಾಯ ಶಕ್ತಿಗಳ ಬಳಕೆಗೆ ಆಸ್ಪದ ನೀಡಬೇಕು. ಆದರೆ ಪರ್ಯಾಯ ಮಾರ್ಗಗಳಿಗೆ ಹಣ ಹೂಡಿಕೆ ಈ ದೇಶಗಳ ಕೈಯಲ್ಲಿ ಅಸಾಧ್ಯದ ವಿಚಾರ. ಅಂದರೆ, ಸೋಲಾರ್‌, ವಿಂಡ್‌ ಪವರ್‌ ಸೇರಿದಂತೆ ಪರಿಸರವನ್ನು ಹಾಳು ಮಾಡದೇ ಇರುವ ವಿದ್ಯುತ್‌ ತಯಾರಿಕ ಘಟಕಗಳನ್ನು ಸ್ಥಾಪಿಸಬೇಕು. ಇದಕ್ಕೆ ಬೇಕಾಗುವ ವಸ್ತುಗಳು ತೀರಾ ದುಬಾರಿ. ಆದರೆ ಇವುಗಳನ್ನು ಸಬ್ಸಿಡಿ ದರದಲ್ಲಿಯೋ ಅಥವಾ ಕಡಿಮೆ ದರದಲ್ಲಿಯೋ ನೀಡಿದರೆ ಇಂಥ ದೇಶಗಳಿಗೆ ಅನುಕೂಲವಾಗುತ್ತದೆ ಎಂಬ ಆಶಯವಿತ್ತು. ಅಲ್ಲದೆ ಇದಕ್ಕೆ ಅತಿ ಹೆಚ್ಚು ಹಣ ಕೊಡುವುದಾಗಿ ಒಬಾಮ ಕೂಡ ಒಪ್ಪಿಕೊಂಡಿದ್ದರು.

ಇನ್ನೊಂದು ವಿಚಾರವೇನೆಂದರೆ ಮುಂದುವರಿದ ದೇಶಗಳ ಸಾಲಿನಲ್ಲಿಯೇ ಒಂದಷ್ಟು ಅಭಿವೃದ್ಧಿ ಹೊಂದಿರುವ ಚೀನಾ, ಹಣ ಕೇಳಿಲ್ಲ. ಬದಲಾಗಿ ಕೆಲವೊಂದು ರಿಯಾಯಿತಿ ಕೇಳಿತ್ತು. 2030ರ ಹೊತ್ತಿಗೆ ನಾವು ಕ್ಲೀನ್‌ ಎನರ್ಜಿಯನ್ನು ಸಂಪೂರ್ಣವಾಗಿ ಬಳಕೆ ಮಾಡುತ್ತೇವೆ. ಅಲ್ಲಿವರೆಗೆ, ಭಾಗಶಃ ನಾವು ಕಲ್ಲಿದ್ದಲು ಬಳಕೆ ಕಡಿಮೆ ಮಾಡುತ್ತಾ ಹೋಗುತ್ತೇವೆ ಎಂದು ಹೇಳಿತ್ತು. 

ಟ್ರಂಪ್‌ ಹೊಟ್ಟೆಕಿಚ್ಚು: ಅದೇಕೋ ಈ ವಿಚಾರದಲ್ಲಿಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹೊಟ್ಟೆಕಿಚ್ಚು ಆಗಿದೆ
ಎಂಬುದು ಈಗಿಗ ಎಲ್ಲರಿಗೂ ಅರ್ಥವಾಗುತ್ತಿದೆ. ಮೊನ್ನೆ ಅವರು ಪ್ಯಾರಿಸ್‌ ಒಪ್ಪಂದದಿಂದ ಹಿಂದಡಿ ಇಟ್ಟಾಗಲಂತೂ,
ಸಿಟ್ಟು, ಅಸೂಯೆಯಿಂದಲೇ ಚೀನಾ ಮತ್ತು ಭಾರತದ ಹೆಸರು ಪ್ರಸ್ತಾಪಿಸಿದ್ದರು. ಅಮೆರಿಕದ ಅಭಿವೃದ್ಧಿಗೆ ತಡೆ ಹಾಕಿ, ಚೀನಾ ಮತ್ತು ಭಾರತದ ಅಭಿವೃದ್ಧಿಗೆ ಈ ಒಪ್ಪಂದ ಅವಕಾಶ ಮಾಡಿಕೊಟ್ಟಿದೆ ಎಂದು ನೇರವಾಗಿಯೇ ದೂರಿದರು. ಇಲ್ಲೊಂದು ವಿಚಾರ ಗೊತ್ತಿರಲಿ, ಟ್ರಂಪ್‌ ಅವರ ಈ ಈರ್ಷ್ಯೇ ಈಗಿನದ್ದೇನಲ್ಲ.

ಅಧ್ಯಕ್ಷೀಯ ಚುನಾವಣೆಗಾಗಿ ಸ್ಪರ್ಧೆಯಲ್ಲಿದ್ದಾಗಲೇ, ಅವರು ಭಾರತಕ್ಕಿಂತ ಹೆಚ್ಚಾಗಿ ಚೀನಾವನ್ನು ಹಳಿದಿದ್ದರು. ಅಲ್ಲದೆ ಇವರ ಪ್ರಕಾರ, ಜಾಗತಿಕ ತಾಪಮಾನ ಬಿಸಿ ಎಂಬುದೇ ಒಂದು ಕಲ್ಪನೆಯ ವಿಚಾರವಾಗಿತ್ತು. ಏಕೆಂದರೆ, ಅಮೆರಿಕವನ್ನು ಹಿಂದೆ ಹಾಕುವ ಸಲುವಾಗಿ ಚೀನಾವೇ ಈ ಗ್ಲೋಬಲ್‌ ವಾರ್ಮಿಂಗ್‌ ಎಂಬ ಕಲ್ಪನೆಯ ಕಥೆ ಕಟ್ಟಿಕೊಟ್ಟಿತ್ತು ಎಂದೆಲ್ಲಾ ಹೇಳಿದ್ದರು.

ಆದರೆ, ಇದುವರೆಗೂ ಟ್ರಂಪ್‌ ಅವರ ಈ ಮಾತುಗಳನ್ನು ಯಾರೂ ಒಪ್ಪಿಲ್ಲ. ಗ್ಲೋಬಲ್‌ ವಾರ್ಮಿಂಗ್‌ ಎಂಬ ಆತಂಕ
ಶುರುವಿನ ಸಮಯದಲ್ಲಿ ಇಡೀ ವಿಶ್ವಕ್ಕೇ ಮಾಲಿನ್ಯಕಾರದ ದೇಶಗಳ ಸಾಲಿನಲ್ಲಿ ಅಮೆರಿಕದ ಹೆಸರೇ ಮೊದಲಿತ್ತು. ನಂತರ ದಲ್ಲಿ ಐರೋಪ್ಯ ಒಕ್ಕೂಟ, ಚೀನಾ ಮತ್ತು ಭಾರತಗಳಿದ್ದವು. ಇದನ್ನು ಮನಗಂಡೇ 1995ರಲ್ಲಿ ಕ್ಯೂಟೋ ಒಪ್ಪಂದ ಮಾಡಿ, ಮಾಲಿನ್ಯ ಸುಧಾರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ವಿಶೇಷವೆಂದರೆ ಆಗಲೂ ಅಮೆರಿಕದಲ್ಲಿ ಅಧಿಕಾರದಲ್ಲಿದ್ದ ಡೆಮಾಕ್ರಾಟ್‌ ಪಕ್ಷದ ಬಿಲ್‌ ಕ್ಲಿಂಟನ್‌ ನೇತೃತ್ವದಲ್ಲೇ ಈ ಕ್ಯೂಟೋ ಒಪ್ಪಂದವಾಗಿತ್ತು.

ಆದರೆ, 1998ರಲ್ಲಿ ರಿಪಬ್ಲಿಕನ್‌ ಪಕ್ಷದಿಂದ ಆಯ್ಕೆಯಾಗಿದ್ದ ಜಾರ್ಜ್‌ ಬುಷ್‌ ಈ ಒಪ್ಪಂದವನ್ನು ಕಸದ ಬುಟ್ಟಿಗೆ ಹಾಕಿದ್ದರು.
ಈಗ ಅದೇ ರೀತಿ ಆಗುತ್ತಿದೆ. ಮತ್ತೆ ರಿಪಬ್ಲಿಕನ್‌ ಪಕ್ಷದಿಂದ ಆಯ್ಕೆಯಾಗಿರುವ ಟ್ರಂಪ್‌ ಇಂಥ ಕೆಟ್ಟ ನಿರ್ಧಾರಕ್ಕೆ ಕೈ ಹಾಕಿ
ದ್ದಾರೆ. ಈಗ ಇವರ ನಡೆಯಲ್ಲಿ ಕಾಣುತ್ತಿರುವುದು ಹವಾಮಾನ ಸಂಬಂಧಿತ ವಿಚಾರಕ್ಕಿಂತ, ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಅಂಶವೇ. ಸದ್ಯ ಜಗತ್ತಿನಲ್ಲಿ ಭಾರತ ಮತ್ತು ಚೀನಾ ಆರ್ಥಿಕತೆ ಗಳು ವೇಗವಾಗಿ ಬೆಳೆಯುತ್ತಿವೆ. ಅಮೆರಿಕದ ಆರ್ಥಿಕತೆಯ ಬೆಳವಣಿಗೆ ನಿಂತು ಅದೆಷ್ಟೋ ವರ್ಷಗಳೇ ಆಗಿವೆ. 

ಚೀನಾವಂತೂ ಸದ್ಯಕ್ಕೆ ಜಗತ್ತಿನ ಎರಡನೇ ಸೂಪರ್‌ ಪವರ್‌ ಎನ್ನಿಸಿಕೊಂಡಿದೆ. ಅಲ್ಲದೆ 2050ರ ವೇಳೆಗೆ ಭಾರತ ಈ ಸ್ಥಾನಕ್ಕೆ ಬಂದು ನಿಲ್ಲಲಿದೆ. ಈ ಎಲ್ಲಾ ಸಾಧ್ಯತೆಗಳು, ಟ್ರಂಪ್‌ರ ಹೊಟ್ಟೆ ಉರಿಸಿರಬೇಕು. ಬುಷ್‌ ಅವರ ಕಾಲದಲ್ಲಿ ಬಂದ ಪ್ರೊಟೆಕ್ಷನಲಿಸಮ್‌ ನೀತಿ ಮತ್ತೆ ಟ್ರಂಪ್‌ ಕಾಲದಲ್ಲೂ ಕಾಣುತ್ತಿದೆ. ಮೊದಲು ಅಮೆರಿಕ ಉದ್ಧಾರವಾಗಬೇಕು ಎಂಬ ಅದರ ನೀತಿ, ಆ ದೇಶದ ಅವನತಿಗೇ ಕಾರಣವಾಗುತ್ತಿದೆ.

ಮುಂದಿನ ದೊಡ್ಡಣ್ಣ ಯಾರು?: ಅತ್ತ ಟ್ರಂಪ್‌ ಒಪ್ಪಂದದಿಂದ ಹೊರನಡೆದರೆ, ಇತ್ತ ಗ್ಲೋಬಲ್‌ ನಾಯಕರು ಗಟ್ಟಿಯಾಗಿ
ಒಪ್ಪಂದದ ಜತೆಗೆ ನಿಂತಿದ್ದಾರೆ. ಭಾರತ, ಜರ್ಮನಿ, ಚೀನಾ, ರಷ್ಯಾ, ಬ್ರಿಟನ್‌, ಫ್ರಾನ್ಸ್‌ ಸೇರಿದಂತೆ ಪ್ರಮುಖ ದೇಶಗಳೆ
ಲ್ಲವೂ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿವೆ. ಸದ್ಯಕ್ಕೆ ಐರೋಪ್ಯ ಒಕ್ಕೂಟಕ್ಕೆ ಜರ್ಮನಿಯ
ಚಾನ್ಸೆಲರ್‌ ಏಂಜೆಲಾ ಮಾರ್ಕೆಲ್‌ ಅವರೇ ಸರ್ವಶ್ರೇಷ್ಠ ನಾಯಕಿ. ಈ ಐರೋಪ್ಯ ಒಕ್ಕೂಟದಲ್ಲೇ ಜಗತ್ತಿನ ಅತಿ ಹೆಚ್ಚು
ಶ್ರೀಮಂತ ದೇಶಗಳು ಇವೆ. ಹೀಗಾಗಿ ಅಭಿವೃದ್ಧಿಶೀಲ ದೇಶ ಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ತೆಗೆದು ಕೊಳ್ಳುವ ಮೂಲಕ ಮಾರ್ಕೆಲ್‌ ಅವರೇ ಜಗತ್ತಿನ ದೊಡ್ಡ ನಾಯಕಿಯಾಗಿ ಬಿಂಬಿತವಾಗಬಹುದು.

ಇನ್ನು ಜಗತ್ತಿನ ಎರಡನೇ ಸೂಪರ್‌ ಪವರ್‌ ಎನ್ನಿಸಿಕೊಂಡಿರುವ ಇದು ಚೀನಾ ಕೂಡ, ದೊಡ್ಡಣ್ಣನಾಗುವ ಕನಸು ಕಾಣುತ್ತಿದೆ. ಹಿಂದುಳಿದ ದೇಶಗಳಿಗೆ ಸಹಾಯ ಮಾಡುವ ಮೂಲಕ ದೊಡ್ಡಣ್ಣ ನಾಗಿ ಮೆರೆದಿದ್ದ ಅಮೆರಿಕ ಈಗ  ಯಾರಿಗೂ ಬೇಡವಾಗಿದೆ. ಹೀಗಾಗಿ ಚೀನಾ ಆರ್ಥಿಕ ವಿಚಾರದಲ್ಲಿ ಸಹಾಯ ಮಾಡುತ್ತಾ ದೊಡ್ಡಣ್ಣನಾಗಿ ಮೆರೆಯಬಹುದು ಎಂಬ ಆಸೆ ಇದೆ. ಆದರೆ ಇದಕ್ಕೆ ಇರುವ ಒಂದೇ ಒಂದು ಅಡ್ಡಿ ಎಂದರೆ, ತನ್ನ ದೇಶದೊಳಗಿನ ಕೈಗಾರಿಕೆಗಳು ಮತ್ತು ಕಲ್ಲಿದ್ದಲ ಬಳಕೆ. ಮೊದಲೇ ಹೇಳಿದ ಹಾಗೆ, ಚೀನಾ ಕಲ್ಲಿದ್ದಲನ್ನು ಹೆಚ್ಚಾಗಿ ಬಳಸುವ ಮೂಲಕ ಜಗತ್ತಿನ ನಂ.1 ಮಾಲಿನ್ಯಕಾರಕ ದೇಶವಾಗಿದೆ. ಇದನ್ನು ಕಡಿಮೆ ಮಾಡಿಕೊಂಡರಷ್ಟೇ ಅದಕ್ಕೆ ಲೀಡರ್‌ ಆಗಲು ಸಾಧ್ಯ. ಆದರೆ, ಈಗ ದಿಢೀರ್‌ ಎಂದು ಕಡಿಮೆ ಮಾಡಿದರೆ ಆರ್ಥಿಕತೆ ಕುಸಿದು ಹೋಗುವ ಅಪಾಯವೇ ಹೆಚ್ಚಿದೆ. ಹೀಗಾಗಿ ಇನ್ನೊಂದು ದೇಶಕ್ಕೆ ಮಾಲಿನ್ಯ ನಿಯಂತ್ರಿಸಿ ಎಂದೂ ಹೇಳುವ ಸಾಧ್ಯತೆಯೂ ಚೀನಾಕ್ಕಿಲ್ಲ. 

ಈ ಎಲ್ಲ ಬೆಳವಣಿಗೆಗಳ ನೋಡಿದರೆ, ಯಾರು ಹೆಚ್ಚು ಹಣ ಕೊಡುತ್ತಾರೋ ಅವರೇ ಜಾಗತಿಕ ನಾಯಕರಾಗಲು ಸಾಧ್ಯವಿದೆ. ಈಗಾಗಲೇ ಬ್ರಿಟನ್‌ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ತನಗೆ 2.5 ಶತಕೋಟಿ ಡಾಲರ್‌ ಹಣದ ಹೊರೆ ಬೀಳಬಹುದು ಎಂಬ ಅಂದಾಜಲ್ಲಿ ಇದೆ. ಜರ್ಮನಿ, ಫ್ರಾನ್ಸ್‌ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಿವೆ. ಈಗಾಗಲೇ ಭಾರತ, ತನಗಿಂತ ಹಿಂದುಳಿದ ದೇಶಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಮಾಲಿನ್ಯ ತಡೆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದೆ.

 *ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.