ಮುಸ್ಲಿಂ ಉಗ್ರವಾದ ಹತ್ತಿಕ್ಕಲು ಜೆರುಸಲೇಂ ದಾಳ
Team Udayavani, Dec 11, 2017, 7:58 AM IST
ಇಸ್ರೇಲ್ ನಡೆ ಬದಲಿಸದಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇಸ್ರೇಲ್ ಅಧ್ಯಕ್ಷ ಹಾಗೂ ಜೋರ್ಡಾನ್ ದೊರೆ, ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೀತು ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದರ ನಡುವೆಯೇ ಟ್ರಂಪ್ ತಮ್ಮ ನಿರ್ಧಾರಕ್ಕೆ ಸಹಿ ಹಾಕಿರುವುದು ರಾಜಕೀಯ ವಿಪ್ಲವಕ್ಕೆ ಕಾರಣವಾಗಿದೆ.
ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಬಿಕ್ಕಟ್ಟು ಇನ್ನೇನು ಸಮರಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವಷ್ಟರಲ್ಲಿಯೇ ಮತ್ತೂಂದು ಪ್ರಮುಖ ನಿರ್ಧಾರ ಘೋಷಣೆ ಮಾಡಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇಸ್ರೇಲ್‌ನ ಟೆಲ್ ಅವೀವ್‌ನ ಬದಲಾಗಿ ಜೆರುಸಲೇಂ ಅನ್ನು ರಾಜಧಾನಿಯನ್ನಾಗಿ ಮಾನ್ಯತೆ ನೀಡಿದ್ದಾರೆ. ಇದರಿಂದಾಗಿ ಅರಬ್ ಜಗತ್ತು ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಕ್ರಮದ ಬಗ್ಗೆ ಭಾರಿ ಪ್ರತಿಭಟನೆಯೇ ವ್ಯಕ್ತವಾಗಿದೆ. ಇತಿಹಾಸದ ಪುಟಗಳನ್ನು ಗಮನಿಸಿದಾಗ ಇದೊಂದು ಹೊಸತನದ ನಿರ್ಣಯವೇನೂ ಅಲ್ಲ. 1995ರಲ್ಲಿ ಟೆಲ್ ಅವೀವ್‌ನಿಂದ ಅಮೆರಿಕದ ಘೋಷಣೆ ಮಾಡಿದ ಸ್ಥಳಕ್ಕೆ ರಾಯಭಾರ ಕಚೇರಿಯನ್ನು ಸ್ಥಳಾಂತರಕ್ಕೆ ನಿರ್ಣಯ ಕೈಗೊಂಡಿತ್ತು. ಆರು ತಿಂಗಳ ಅವಧಿಯ ಈ ನಿರ್ಣಯವನ್ನು ಪ್ರತಿಯೊಬ್ಬ ಅಧ್ಯಕ್ಷರೂ ಅದನ್ನು ಅನುಮೋದಿಸುತ್ತಾ ಬರುತ್ತಿದ್ದಾರೆ. ಶುಕ್ರವಾರ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್ಸನ್ ಹೇಳಿದ ಪ್ರಕಾರ ಈಗ ಅಂಥ ನಿರ್ಣಯ ಕೈಗೊಂಡರೂ ಟೆಲ್ ಅವೀವ್‌ನಿಂದ ಜೆರುಸಲೇಂಗೆ ವರ್ಗಾಯಿಸಲು ಎರಡು ವರ್ಷ ಬೇಕಾಗುತ್ತದೆ ಎಂದಿದ್ದಾರೆ.
ಈ ಘೋಷಣೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹಿಂಸಾಚಾರ ಜೋರಾಗಿಯೇ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇಸ್ರೇಲ್-ಪ್ಯಾಲೆಸ್ತೀನ್ ಜಗಳ ಮತ್ತೆ ಆರಂಭವಾಗಿದೆ. ರಾಜತಾಂತ್ರಿಕವಾಗಿ ಕೂಡ ನಿರ್ಣಯ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿದ್ದು, ಪ್ಯಾಲೆಸ್ತೀನ್ ಅಧ್ಯಕ್ಷ ಮೆಹಮೂಬ್ ಅಬ್ಟಾಸ್ ತಮ್ಮ ದೇಶಕ್ಕೆ ಬರಲಿರುವ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಭೇಟಿ ಮಾಡದೇ ಇರುವ ಘೋಷಣೆ ಮಾಡಿದ್ದಾರೆ. ಇನ್ನು ಹಮಾಸ್ ಉಗ್ರಗಾಮಿ ಸಂಘಟನೆ ಪ್ರತೀಕಾರದ ದಿನ ಎಂದು ಘೋಷಣೆಯನ್ನು ಮಾಡಿದೆ. ಜೋರ್ಡಾನ್, ಟರ್ಕಿ, ಮಲೇಷ್ಯಾ ಸೇರಿದಂತೆ ಮಧ್ಯ ಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಪ್ರತಿಭಟನೆ ಬಿರುಸಾಗಿಯೇ ಇದೆ.
ತಮ್ಮ ವಿರುದ್ಧದ ಟೀಕೆಗೆ ತಿರುಗೇಟು ನೀಡಿರುವ ಟ್ರಂಪ್ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲೂé ಬುಷ್ ಮತ್ತು ಬರಾಕ್ ಒಬಾಮ ಕೂಡ ತಮ್ಮ ಭಾಷಣಗಳಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸ್ವತಃ ಅವರೇ ಚುನಾವಣಾ ಪ್ರಣಾಳಿಕೆಯಲ್ಲಿ ರಾಜಧಾನಿ ಪ್ರಸ್ತಾಪವನ್ನು ಘೋಷಿಸಿದ್ದರು.
ಇಲ್ಲಿ ಹೊಸತೇನು ಎಂದರೆ ಇದುವರೆಗಿನ ಅಮೆರಿಕ ಅಧ್ಯಕ್ಷರು ಈ ಬಗ್ಗೆ ಘೋಷಣೆ ಮಾತ್ರ ಮಾಡಿದ್ದರು. ಆದೇಶಕ್ಕೆ ಸಹಿ ಮಾಡಿರಲಿಲ್ಲ. ಟ್ರಂಪ್ ಅದನ್ನು ಮಾಡಿದ್ದಾರೆ. ಎಪ್ಪತ್ತು ವರ್ಷಗಳ ಕಾಲ ಅಮೆರಿಕ ಸರ್ಕಾರ ಹೊಂದಿರುವ ವಿದೇಶಾಂಗ ನೀತಿಯಲ್ಲಿ ಬದಲು ಮಾಡುವ ಬಗ್ಗೆ ಮಂಗಳವಾರ (ಡಿ.5)ಪ್ಯಾಲೇಸ್ತೀನ್ ಅಧ್ಯಕ್ಷ ಮೆಹಮೂದ್ ಅಬ್ಟಾಸ್‌ಗೆ ಫೋನ್ ಮಾಡಿದ ಸಂದರ್ಭದಲ್ಲಿ ಮೌಖೀಕವಾಗಿ ತಿಳಿಸಿದ್ದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಸದ್ಯ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿರುವ ಅಮೆರಿಕ ದೂತವಾಸವನ್ನು ಜೆರುಸಲೇಂಗೆ ವರ್ಗಾಯಿಸುವ ಬಗ್ಗೆ ಹೇಳಿದ್ದರು. ಜೋರ್ಡಾನ್ ದೊರೆ ಅಬ್ದುಲ್ಲಾಗೂ ಟ್ರಂಪ್ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಇಬ್ಬರು ನಾಯಕರೂ ಇಂಥ ಕ್ರಮ ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೊಡ್ಡೀತು, ಜತೆಗೆ ಜಗತ್ತಿನ ರಾಜಕೀಯ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರೀತು ಎಂದು ಎಚ್ಚರಿಕೆ ನೀಡಿದ್ದರು. ಟರ್ಕಿ ಅಧ್ಯಕ್ಷ ರೀಪ್ ತಯ್ಯಪ್ ಎಡೋìಗನ್ ಜತೆಗಿನ ಮಾತುಕತೆ ವೇಳೆ ಕೂಡ ಅಂಥ ನಿರ್ಧಾರ ಸೂಕ್ತ ಬವಲ್ಲವೆಂದು ಹೇಳಿದ್ದರು.
ಇನ್ನು ಈ ಹಕೀಕತ್ತಿನ ಒಳಸುಳಿಯ ಬಗ್ಗೆ ಹೇಳುವುದಾದರೆ ವಿಶ್ವದಾದ್ಯಂತ ವ್ಯಾಪಿಸಿರುವ ಇಸ್ಲಾಮಿಕ್ ಉಗ್ರಗಾಮಿತ್ವವನ್ನು ಮಟ್ಟ ಹಾಕುವುದು. ಅದಕ್ಕೆ ಪೂರಕವಾಗಿ ಇಸ್ಲಾಮಿಕ್ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವ ಪ್ರಯಾಣಿಕರ ಮೇಲೆ ಸಂಪೂರ್ಣ ನಿಗಾ ಮತ್ತು ತಪಾಸಣೆ ಮಾಡುವ ಆದೇಶ ಈಗಾಗಲೇ ಜಾರಿಯಲ್ಲಿದೆ. ಅದು ಅಲ್ಲಿನ ಸುಪ್ರೀಂಕೋರ್ಟಲ್ಲಿ ಪ್ರಶ್ನೆ ಮಾಡಲ್ಪಟ್ಟು, ತಿರಸ್ಕೃತವೂ ಆಗಿದೆ ಎನ್ನುವುದು ಗಮನಾರ್ಹ. ಹೇಳಿ ಕೇಳಿ ಮೊದಲಿನಿಂದಲೂ ಅಮೆರಿಕ ಸರ್ಕಾರ ಯಾವತ್ತಿದ್ದರೂ ಇಸ್ರೇಲ್ ಸರ್ಕಾರದ ಪರವೇ. ಈ ನಿರ್ಣಯ ಕೂಡ ಇಸ್ರೇಲ್ ತುಷ್ಟೀಕರಣವೂ ಆಗಿದೆ. ಅದಕ್ಕೂ ಒಂದು ಕಾರಣವಿದೆ.
ಅಮೆರಿಕ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಇಸ್ರೇಲ್ ಮೂಲದ ಅಧಿಕಾರಿಗಳು ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಅವರ ಪ್ರಭಾವಳಿ ಹೆಚ್ಚಾಗಿದೆ. ಹೀಗಾಗಿ ಪರಮಾಪ್ತ ಮಿತ್ರ ದೇಶದ ಒಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗಿದೆ ಎನ್ನುವುದು ಗಮನಾರ್ಹ.
ಇನ್ನು ಸದ್ಯ ಚರ್ಚಾರ್ಹವಾಗಿರುವ ನಗರದ ಬಗ್ಗೆ ವಿವರಿಸುವುದಿದ್ದರೆ, 8,50,000 ಮಂದಿ ಜೀವಿಸುತ್ತಿದ್ದಾರೆ. ಅದರಲ್ಲಿ ಶೇ.37 ಮಂದಿ ಅರಬ್, ಶೇ.61 ಮಂದಿ ಜ್ಯೂಯಿಷ್ ಸಮುದಾಯದವರು. ಈ ಪೈಕಿ ಧರ್ಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡುವವರ ಸಂಖ್ಯೆಯೇ 2 ಲಕ್ಷ ಮಂದಿ ಇದ್ದಾರೆ. ಇನ್ನು ಅರಬ್ ಜನಸಂಖ್ಯೆಯ ಪೈಕಿ ಶೇ.96 ಮಂದಿ ಮುಸ್ಲಿಮರು. ಶೇ.4ರಷ್ಟು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಇನ್ನು ಪ್ಯಾಲೆಸ್ತೀನ್‌ಗೆ ಸೇರಿದವರೆಲ್ಲ, ಪೂರ್ವ ಜೆರುಸಲೇಂನಲ್ಲಿ ನೆಲೆಸಿದ್ದಾರೆ.
ಬಿಕ್ಕಟ್ಟಿನ ಬಗ್ಗೆ ಹೇಳುವುದಾದರೆ ಜೆರುಸಲೇಂ ನಗರ ತಮಗೆ ಸೇರಿದ್ದೆಂದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹೇಳಿಕೊಳ್ಳುತ್ತಿವೆ. ಅದಕ್ಕೆ ಮೂಲ ಕಾರಣ ಎರಡನೇ ವಿಶ್ವ ಮಹಾಯುದ್ಧದ ಬಳಿಕ ಇಸ್ರೇಲ್ ರಚನೆಯಾಯಿತು. ಬಳಿಕ ಜಗತ್ತಿನ ಒಂದೊಂದೇ ರಾಷ್ಟ್ರಗಳು ಅದಕ್ಕೆ ಮಾನ್ಯತೆ ನೀಡುತ್ತಾ ಬಂದವು. 1948ರಲ್ಲಿ ಅರಬ್- ಇಸ್ರೇಲ್ ಯುದ್ಧದಲ್ಲಿ ಜೆರುಸಲೇಂನ ಪೂರ್ವಭಾಗವನ್ನು ವಶಪಡಿಸಿಕೊಂಡಿತು. ಇದರಿಂದಾಗಿ ಸಂಪೂರ್ಣ ಜೆರುಸಲೇಂ ಇಸ್ರೇಲ್‌ನ ವಶವಾಯಿತು. ಬಿಕ್ಕಟ್ಟು ಪರಿಹಾರಕ್ಕಾಗಿ ವಿಶ್ವಸಂಸ್ಥೆ ಸೂತ್ರವೊಂದನ್ನು ರೂಪಿಸಿತು. ಅದರ ಪ್ರಕಾರ ಅರಬ್ ಮತ್ತು ಪ್ಯಾಲೆಸ್ತೀನಿಯರಿಗೆ ವಿವಾದತ್ಮಕ ನಗರದ ಹಂಚಿಕೆ ಬಗ್ಗೆ ನಿರ್ಧಾರವಾಗಿತ್ತು. ಅದರ ಪ್ರಕಾರ ಶೇ.55ರಷ್ಟು ಭಾಗವನ್ನು ಇಸ್ರೇಲ್‌ಗೆ ನೀಡಲು ಸಲಹೆ ಮಾಡಲಾಗಿತ್ತು. ಅದಕ್ಕೆ ಇಸ್ರೇಲಿಗರು ಒಪ್ಪಿದ್ದರೆ, ಅರಬರು ಒಪ್ಪಿರಲಿಲ್ಲ.
ವಿವಾದಿತ ಗಾಜಾ ಪಟ್ಟಿ ಮತ್ತು ಪೂರ್ವ ಜೆರುಸಲೇಂ ಅನ್ನು ಒಳಗೊಂಡಿರುವ ಪಶ್ಚಿಮ ದಂಡೆ (ವೆಸ್ಟ್ ಬ್ಯಾಂಕ್) ಈಜಿಪ್ಟ್ ಮತ್ತು ಜೋರ್ಡಾನ್‌ನ ನಿಯಂತ್ರಣದಲ್ಲಿದೆ. 1967ರಲ್ಲಿ ನಡೆದ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್, ಪಶ್ಚಿಮ ದಂಡೆ, ಪೂರ್ವ ಜೆರುಸಲೇಂ ಮತ್ತು ಗಾಝಾವನ್ನು ವಶಪಡಿಸಿಕೊಂಡಿತು. ಇದಾದ ಬಳಿಕ ಪೂರ್ವ ಜೆರುಸಲೇಂ, ಪಶ್ಚಿಮ ದಂಡೆ ಪ್ರದೇಶದ ನಗರ ಮತ್ತು ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟೂ ನಗರದ ಗಡಿಯನ್ನು ಪುನರ್ ವಿಂಗಡಿಸಿತು. ಮಾತ್ರವಲ್ಲದೆ ಇಡೀ ನಗರವನ್ನು ತನ್ನ ರಾಜಧಾನಿ ಎಂದು ಘೋಷಿಸಿಕೊಂಡಿತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಮಾನ್ಯತೆ ಸಿಗಲಿಲ್ಲ. ಇನ್ನು ಪ್ಯಾಲೆಸ್ತೀನಿಯರ ವಾದವೇನೆಂದರೆ ಮುಂದೊಂದು ದಿನ ರಚನೆಯಾಗಲಿರುವ ಪ್ರತ್ಯೇಕ ಪ್ಯಾಲೆಸ್ತೀನ್ ಎಂಬ ದೇಶಕ್ಕೆ ಸದ್ಯ ಸುದ್ದಿಗೆ ಗ್ರಾಸವಾಗಿರುವ ನಗರವೇ ರಾಜಧಾನಿ ಎಂದು ಹೇಳಿಕೊಂಡಿದೆ. ಈ ವಿಚಾರವೇ ಆ ಎರಡೂ ರಾಷ್ಟ್ರಗಳ ನಡುವೆ ಆಗಾಗ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ವಿಶ್ವಸಂಸ್ಥೆ ವಿವಾದಿತ ನಗರವನ್ನು ಅಂತಾರಾಷ್ಟ್ರೀಯ ನಗರ ಎಂದು ನಿಗದಿಮಾಡಿತು.
1980ರಲ್ಲಿ ಆ ದೇಶದ ಸಂಸತ್‌ನಲ್ಲಿ ಮಸೂದೆಯೊಂದನ್ನು ಮಂಡಿಸಿ “ಜೆರೂಸಲೇಂ ಎನ್ನುವುದು ಸಂಪೂರ್ಣ ಮತ್ತು ಏಕೀಕರಣಗೊಂಡದ್ದಾಗಿದೆ. ಅದು ಇಸ್ರೇಲ್ ರಾಜಧಾನಿ’ ಎಂದು ಅನುಮೋದನೆ ಪಡೆದುಕೊಂಡಿತ್ತು. ಆದರೆ ವಿಶ್ವಸಂಸ್ಥೆಯು ನಿರ್ಣಯವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಇಸ್ರೇಲ್ ವಶದಲ್ಲಿರುವ ನಗರದಲ್ಲಿ ವಾಸಿಸುತ್ತಿರುವ ಪ್ಯಾಲೆಸ್ತೀನಿಯರಿಗೆ ಆ ದೇಶದ ಪೌರತ್ವವನ್ನು ಇನ್ನೂ ನೀಡಲಾಗಿಲ್ಲ. ವಿವಾದಿತ ನಗರದ ಹಳೆಯ ಭಾಗದಲ್ಲಿ ಅಮೆರಿಕನ್ ಕ್ವಾರ್ಟರ್‌ನಲ್ಲಿ ಸಂತ ಜೇಮ್ಸ್ ಚರ್ಚ್, ಕ್ರಿಶ್ಚಿಯನ್ ಕ್ವಾರ್ಟರ್‌ನಲ್ಲಿ ಚರ್ಚ್ ಆಫ್ ಹೋಲಿ ಸೆಪಲ್ಶರ್ ಮತ್ತು ಯೆಹೂದಿಗಳು ಇರುವ ಸ್ಥಳವಿದೆ. ಹೀಗಾಗಿ, ಮೂರು ಧರ್ಮಗಳಿಗೂ ಹಳೆಯ ನಗರ ಪ್ರಾಮುಖ್ಯತೆ ಪಡೆದಿದೆ.
ಇನ್ನು ಭಾರತದ ದೃಷ್ಟಿಯಿಂದ ನೋಡುವುದಾದರೆ ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ನೀಡಿದ ಹೇಳಿಕೆ ಪ್ರಕಾರ ಅಮೆರಿಕದ ನಿರ್ಧಾರ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಪ್ರಭಾವ ಬೀರಲಾರದು. ತೃತೀಯ ದೇಶದ ನಿರ್ಧಾರದಂತೆ ಪ್ಯಾಲೆಸ್ತೀನ್‌ನ ನಿರ್ಣಯವನ್ನು ನಮ್ಮ ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಪ್ರತ್ಯೇಕ ಪ್ಯಾಲೆಸ್ತೀನ್ ರಾಷ್ಟ್ರ ನಿರ್ಮಾಣ ಮಾಡುವ ಬಗ್ಗೆ ಹಿಂದಿನಿಂದಲೂ ಸ್ಪಷ್ಟ ನಿಲುವು ಹೊಂದಿರುವ ಹೆಗ್ಗಳಿಕೆ ನಮ್ಮದು. ಇನ್ನು ರಾಯಭಾರ ಕಚೇರಿಗಳ ಬಗ್ಗೆ ನೋಡುವುದಾದರೆ ಅಮೆರಿಕ ಘೋಷಣೆ ಮಾಡಿದ ನಗರದಲ್ಲಿ ಆ ದೇಶದ ದೂತಾವಾಸ ಕಚೇರಿ ಇದೆ. 1980ರಲ್ಲಿ ಜೆರೂಸಲೇಂ ದೇಶದ ರಾಜಧಾನಿ ಎಂಬ ಇಸ್ರೇಲ್ ನಿರ್ಣಯವನ್ನು ವಿಶ್ವಸಂಸ್ಥೆ ತಿರಸ್ಕರಿಸುವ ವರೆಗೆ ನೆದರ್‌ಲ್ಯಾಂಡ್ ಮತ್ತು ಕೋಸ್ಟಾ ರಿಕಾ ದೇಶಗಳ ರಾಯಭಾರ ಕಚೇರಿಗಳು ಆ ನಗರದಲ್ಲಿದ್ದವು. ಸದ್ಯ ಟೆಲ್ ಅವೀವ್‌ನಲ್ಲಿ ವಿಶ್ವದ 86 ರಾಷ್ಟ್ರಗಳ ರಾಯಭಾರ ಕಚೇರಿಗಳು ಇವೆ. ಆದರೆ ಬ್ರಿಟನ್ ಮತ್ತು ಫ್ರಾನ್ಸ್‌ನ ದೂತಾವಾಸದ ಕಚೇರಿಗಳು ಪೂರ್ವ ಭಾಗದಲ್ಲಿವೆ. ಅದೇನೇ ಇರಲಿ, ಭಾರತ, ತನ್ನಿಬ್ಬರೂ ಮಿತ್ರ ರಾಷ್ಟ್ರಗಳ (ಇಸ್ರೇಲ್, ಅಮೆರಿಕ) ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ.
ಅಮೆರಿಕದ ಅಧ್ಯಕ್ಷ ರ ನಡೆಯಿಂದ ಜಾಗತಿಕ ರಾಜಕೀಯದ ಮೇಲೆ ಪರಿಣಾಮ ಸಂಭವ ಮುಸ್ಲಿಂ ಉಗ್ರವಾದ ಹತ್ತಿಕ್ಕಲು ಜೆರುಸಲೇಂ ದಾಳ ಇಸ್ರೇಲ್ ನಡೆ ಬದಲಿಸದಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇಸ್ರೇಲ್ ಅಧ್ಯಕ್ಷ ಹಾಗೂ ಜೋರ್ಡಾನ್ ದೊರೆ, ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೀತು ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದರ ನಡುವೆಯೇ ಟ್ರಂಪ್ ತಮ್ಮ ನಿರ್ಧಾರಕ್ಕೆ ಸಹಿ ಹಾಕಿರುವುದು ರಾಜಕೀಯ ವಿಪ್ಲವಕ್ಕೆ ಕಾರಣವಾಗಿದೆ.
ಅ ಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಬಿಕ್ಕಟ್ಟು ಇನ್ನೇನು ಸಮರಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವಷ್ಟರಲ್ಲಿಯೇ ಮತ್ತೂಂದು ಪ್ರಮುಖ ನಿರ್ಧಾರ ಘೋಷಣೆ ಮಾಡಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇಸ್ರೇಲ್‌ನ ಟೆಲ್ ಅವೀವ್‌ನ ಬದಲಾಗಿ ಜೆರುಸಲೇಂ ಅನ್ನು ರಾಜಧಾನಿಯನ್ನಾಗಿ ಮಾನ್ಯತೆ ನೀಡಿದ್ದಾರೆ. ಇದರಿಂದಾಗಿ ಅರಬ್ ಜಗತ್ತು ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಕ್ರಮದ ಬಗ್ಗೆ ಭಾರಿ ಪ್ರತಿಭಟನೆಯೇ ವ್ಯಕ್ತವಾಗಿದೆ. ಇತಿಹಾಸದ ಪುಟಗಳನ್ನು ಗಮನಿಸಿದಾಗ ಇದೊಂದು ಹೊಸತನದ ನಿರ್ಣಯವೇನೂ ಅಲ್ಲ. 1995ರಲ್ಲಿ ಟೆಲ್ ಅವೀವ್‌ನಿಂದ ಅಮೆರಿಕದ ಘೋಷಣೆ ಮಾಡಿದ ಸ್ಥಳಕ್ಕೆ ರಾಯಭಾರ ಕಚೇರಿಯನ್ನು ಸ್ಥಳಾಂತರಕ್ಕೆ ನಿರ್ಣಯ ಕೈಗೊಂಡಿತ್ತು. ಆರು ತಿಂಗಳ ಅವಧಿಯ ಈ ನಿರ್ಣಯವನ್ನು ಪ್ರತಿಯೊಬ್ಬ ಅಧ್ಯಕ್ಷರೂ ಅದನ್ನು ಅನುಮೋದಿಸುತ್ತಾ ಬರುತ್ತಿದ್ದಾರೆ. ಶುಕ್ರವಾರ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್ಸನ್ ಹೇಳಿದ ಪ್ರಕಾರ ಈಗ ಅಂಥ ನಿರ್ಣಯ ಕೈಗೊಂಡರೂ ಟೆಲ್ ಅವೀವ್‌ನಿಂದ ಜೆರುಸಲೇಂಗೆ ವರ್ಗಾಯಿಸಲು ಎರಡು ವರ್ಷ ಬೇಕಾಗುತ್ತದೆ ಎಂದಿದ್ದಾರೆ.
ಈ ಘೋಷಣೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹಿಂಸಾಚಾರ ಜೋರಾಗಿಯೇ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇಸ್ರೇಲ್-ಪ್ಯಾಲೆಸ್ತೀನ್ ಜಗಳ ಮತ್ತೆ ಆರಂಭವಾಗಿದೆ. ರಾಜತಾಂತ್ರಿಕವಾಗಿ ಕೂಡ ನಿರ್ಣಯ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿದ್ದು, ಪ್ಯಾಲೆಸ್ತೀನ್ ಅಧ್ಯಕ್ಷ ಮೆಹಮೂಬ್ ಅಬ್ಟಾಸ್ ತಮ್ಮ ದೇಶಕ್ಕೆ ಬರಲಿರುವ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಭೇಟಿ ಮಾಡದೇ ಇರುವ ಘೋಷಣೆ ಮಾಡಿದ್ದಾರೆ. ಇನ್ನು ಹಮಾಸ್ ಉಗ್ರಗಾಮಿ ಸಂಘಟನೆ ಪ್ರತೀಕಾರದ ದಿನ ಎಂದು ಘೋಷಣೆಯನ್ನು ಮಾಡಿದೆ. ಜೋರ್ಡಾನ್, ಟರ್ಕಿ, ಮಲೇಷ್ಯಾ ಸೇರಿದಂತೆ ಮಧ್ಯ ಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಪ್ರತಿಭಟನೆ ಬಿರುಸಾಗಿಯೇ ಇದೆ.
ತಮ್ಮ ವಿರುದ್ಧದ ಟೀಕೆಗೆ ತಿರುಗೇಟು ನೀಡಿರುವ ಟ್ರಂಪ್ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲೂé ಬುಷ್ ಮತ್ತು ಬರಾಕ್ ಒಬಾಮ ಕೂಡ ತಮ್ಮ ಭಾಷಣಗಳಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸ್ವತಃ ಅವರೇ ಚುನಾವಣಾ ಪ್ರಣಾಳಿಕೆಯಲ್ಲಿ ರಾಜಧಾನಿ ಪ್ರಸ್ತಾಪವನ್ನು ಘೋಷಿಸಿದ್ದರು.
ಇಲ್ಲಿ ಹೊಸತೇನು ಎಂದರೆ ಇದುವರೆಗಿನ ಅಮೆರಿಕ ಅಧ್ಯಕ್ಷರು ಈ ಬಗ್ಗೆ ಘೋಷಣೆ ಮಾತ್ರ ಮಾಡಿದ್ದರು. ಆದೇಶಕ್ಕೆ ಸಹಿ ಮಾಡಿರಲಿಲ್ಲ. ಟ್ರಂಪ್ ಅದನ್ನು ಮಾಡಿದ್ದಾರೆ. ಎಪ್ಪತ್ತು ವರ್ಷಗಳ ಕಾಲ ಅಮೆರಿಕ ಸರ್ಕಾರ ಹೊಂದಿರುವ ವಿದೇಶಾಂಗ ನೀತಿಯಲ್ಲಿ ಬದಲು ಮಾಡುವ ಬಗ್ಗೆ ಮಂಗಳವಾರ (ಡಿ.5)ಪ್ಯಾಲೇಸ್ತೀನ್ ಅಧ್ಯಕ್ಷ ಮೆಹಮೂದ್ ಅಬ್ಟಾಸ್‌ಗೆ ಫೋನ್ ಮಾಡಿದ ಸಂದರ್ಭದಲ್ಲಿ ಮೌಖೀಕವಾಗಿ ತಿಳಿಸಿದ್ದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಸದ್ಯ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿರುವ ಅಮೆರಿಕ ದೂತವಾಸವನ್ನು ಜೆರುಸಲೇಂಗೆ ವರ್ಗಾಯಿಸುವ ಬಗ್ಗೆ ಹೇಳಿದ್ದರು. ಜೋರ್ಡಾನ್ ದೊರೆ ಅಬ್ದುಲ್ಲಾಗೂ ಟ್ರಂಪ್ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಇಬ್ಬರು ನಾಯಕರೂ ಇಂಥ ಕ್ರಮ ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೊಡ್ಡೀತು, ಜತೆಗೆ ಜಗತ್ತಿನ ರಾಜಕೀಯ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರೀತು ಎಂದು ಎಚ್ಚರಿಕೆ ನೀಡಿದ್ದರು. ಟರ್ಕಿ ಅಧ್ಯಕ್ಷ ರೀಪ್ ತಯ್ಯಪ್ ಎಡೋìಗನ್ ಜತೆಗಿನ ಮಾತುಕತೆ ವೇಳೆ ಕೂಡ ಅಂಥ ನಿರ್ಧಾರ ಸೂಕ್ತ ಬವಲ್ಲವೆಂದು ಹೇಳಿದ್ದರು.
ಇನ್ನು ಈ ಹಕೀಕತ್ತಿನ ಒಳಸುಳಿಯ ಬಗ್ಗೆ ಹೇಳುವುದಾದರೆ ವಿಶ್ವದಾದ್ಯಂತ ವ್ಯಾಪಿಸಿರುವ ಇಸ್ಲಾಮಿಕ್ ಉಗ್ರಗಾಮಿತ್ವವನ್ನು ಮಟ್ಟ ಹಾಕುವುದು. ಅದಕ್ಕೆ ಪೂರಕವಾಗಿ ಇಸ್ಲಾಮಿಕ್ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವ ಪ್ರಯಾಣಿಕರ ಮೇಲೆ ಸಂಪೂರ್ಣ ನಿಗಾ ಮತ್ತು ತಪಾಸಣೆ ಮಾಡುವ ಆದೇಶ ಈಗಾಗಲೇ ಜಾರಿಯಲ್ಲಿದೆ. ಅದು ಅಲ್ಲಿನ ಸುಪ್ರೀಂಕೋರ್ಟಲ್ಲಿ ಪ್ರಶ್ನೆ ಮಾಡಲ್ಪಟ್ಟು, ತಿರಸ್ಕೃತವೂ ಆಗಿದೆ ಎನ್ನುವುದು ಗಮನಾರ್ಹ. ಹೇಳಿ ಕೇಳಿ ಮೊದಲಿನಿಂದಲೂ ಅಮೆರಿಕ ಸರ್ಕಾರ ಯಾವತ್ತಿದ್ದರೂ ಇಸ್ರೇಲ್ ಸರ್ಕಾರದ ಪರವೇ. ಈ ನಿರ್ಣಯ ಕೂಡ ಇಸ್ರೇಲ್ ತುಷ್ಟೀಕರಣವೂ ಆಗಿದೆ. ಅದಕ್ಕೂ ಒಂದು ಕಾರಣವಿದೆ.
ಅಮೆರಿಕ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಇಸ್ರೇಲ್ ಮೂಲದ ಅಧಿಕಾರಿಗಳು ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಅವರ ಪ್ರಭಾವಳಿ ಹೆಚ್ಚಾಗಿದೆ. ಹೀಗಾಗಿ ಪರಮಾಪ್ತ ಮಿತ್ರ ದೇಶದ ಒಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗಿದೆ ಎನ್ನುವುದು ಗಮನಾರ್ಹ.
ಇನ್ನು ಸದ್ಯ ಚರ್ಚಾರ್ಹವಾಗಿರುವ ನಗರದ ಬಗ್ಗೆ ವಿವರಿಸುವುದಿದ್ದರೆ, 8,50,000 ಮಂದಿ ಜೀವಿಸುತ್ತಿದ್ದಾರೆ. ಅದರಲ್ಲಿ ಶೇ.37 ಮಂದಿ ಅರಬ್, ಶೇ.61 ಮಂದಿ ಜ್ಯೂಯಿಷ್ ಸಮುದಾಯದವರು. ಈ ಪೈಕಿ ಧರ್ಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡುವವರ ಸಂಖ್ಯೆಯೇ 2 ಲಕ್ಷ ಮಂದಿ ಇದ್ದಾರೆ. ಇನ್ನು ಅರಬ್ ಜನಸಂಖ್ಯೆಯ ಪೈಕಿ ಶೇ.96 ಮಂದಿ ಮುಸ್ಲಿಮರು. ಶೇ.4ರಷ್ಟು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಇನ್ನು ಪ್ಯಾಲೆಸ್ತೀನ್‌ಗೆ ಸೇರಿದವರೆಲ್ಲ, ಪೂರ್ವ ಜೆರುಸಲೇಂನಲ್ಲಿ ನೆಲೆಸಿದ್ದಾರೆ.
ಬಿಕ್ಕಟ್ಟಿನ ಬಗ್ಗೆ ಹೇಳುವುದಾದರೆ ಜೆರುಸಲೇಂ ನಗರ ತಮಗೆ ಸೇರಿದ್ದೆಂದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹೇಳಿಕೊಳ್ಳುತ್ತಿವೆ. ಅದಕ್ಕೆ ಮೂಲ ಕಾರಣ ಎರಡನೇ ವಿಶ್ವ ಮಹಾಯುದ್ಧದ ಬಳಿಕ ಇಸ್ರೇಲ್ ರಚನೆಯಾಯಿತು. ಬಳಿಕ ಜಗತ್ತಿನ ಒಂದೊಂದೇ ರಾಷ್ಟ್ರಗಳು ಅದಕ್ಕೆ ಮಾನ್ಯತೆ ನೀಡುತ್ತಾ ಬಂದವು. 1948ರಲ್ಲಿ ಅರಬ್- ಇಸ್ರೇಲ್ ಯುದ್ಧದಲ್ಲಿ ಜೆರುಸಲೇಂನ ಪೂರ್ವಭಾಗವನ್ನು ವಶಪಡಿಸಿಕೊಂಡಿತು. ಇದರಿಂದಾಗಿ ಸಂಪೂರ್ಣ ಜೆರುಸಲೇಂ ಇಸ್ರೇಲ್‌ನ ವಶವಾಯಿತು. ಬಿಕ್ಕಟ್ಟು ಪರಿಹಾರಕ್ಕಾಗಿ ವಿಶ್ವಸಂಸ್ಥೆ ಸೂತ್ರವೊಂದನ್ನು ರೂಪಿಸಿತು. ಅದರ ಪ್ರಕಾರ ಅರಬ್ ಮತ್ತು ಪ್ಯಾಲೆಸ್ತೀನಿಯರಿಗೆ ವಿವಾದತ್ಮಕ ನಗರದ ಹಂಚಿಕೆ ಬಗ್ಗೆ ನಿರ್ಧಾರವಾಗಿತ್ತು. ಅದರ ಪ್ರಕಾರ ಶೇ.55ರಷ್ಟು ಭಾಗವನ್ನು ಇಸ್ರೇಲ್‌ಗೆ ನೀಡಲು ಸಲಹೆ ಮಾಡಲಾಗಿತ್ತು. ಅದಕ್ಕೆ ಇಸ್ರೇಲಿಗರು ಒಪ್ಪಿದ್ದರೆ, ಅರಬರು ಒಪ್ಪಿರಲಿಲ್ಲ.
ವಿವಾದಿತ ಗಾಜಾ ಪಟ್ಟಿ ಮತ್ತು ಪೂರ್ವ ಜೆರುಸಲೇಂ ಅನ್ನು ಒಳಗೊಂಡಿರುವ ಪಶ್ಚಿಮ ದಂಡೆ (ವೆಸ್ಟ್ ಬ್ಯಾಂಕ್) ಈಜಿಪ್ಟ್ ಮತ್ತು ಜೋರ್ಡಾನ್‌ನ ನಿಯಂತ್ರಣದಲ್ಲಿದೆ. 1967ರಲ್ಲಿ ನಡೆದ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್, ಪಶ್ಚಿಮ ದಂಡೆ, ಪೂರ್ವ ಜೆರುಸಲೇಂ ಮತ್ತು ಗಾಝಾವನ್ನು ವಶಪಡಿಸಿಕೊಂಡಿತು. ಇದಾದ ಬಳಿಕ ಪೂರ್ವ ಜೆರುಸಲೇಂ, ಪಶ್ಚಿಮ ದಂಡೆ ಪ್ರದೇಶದ ನಗರ ಮತ್ತು ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟೂ ನಗರದ ಗಡಿಯನ್ನು ಪುನರ್ ವಿಂಗಡಿಸಿತು. ಮಾತ್ರವಲ್ಲದೆ ಇಡೀ ನಗರವನ್ನು ತನ್ನ ರಾಜಧಾನಿ ಎಂದು ಘೋಷಿಸಿಕೊಂಡಿತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಮಾನ್ಯತೆ ಸಿಗಲಿಲ್ಲ. ಇನ್ನು ಪ್ಯಾಲೆಸ್ತೀನಿಯರ ವಾದವೇನೆಂದರೆ ಮುಂದೊಂದು ದಿನ ರಚನೆಯಾಗಲಿರುವ ಪ್ರತ್ಯೇಕ ಪ್ಯಾಲೆಸ್ತೀನ್ ಎಂಬ ದೇಶಕ್ಕೆ ಸದ್ಯ ಸುದ್ದಿಗೆ ಗ್ರಾಸವಾಗಿರುವ ನಗರವೇ ರಾಜಧಾನಿ ಎಂದು ಹೇಳಿಕೊಂಡಿದೆ. ಈ ವಿಚಾರವೇ ಆ ಎರಡೂ ರಾಷ್ಟ್ರಗಳ ನಡುವೆ ಆಗಾಗ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ವಿಶ್ವಸಂಸ್ಥೆ ವಿವಾದಿತ ನಗರವನ್ನು ಅಂತಾರಾಷ್ಟ್ರೀಯ ನಗರ ಎಂದು ನಿಗದಿಮಾಡಿತು.
1980ರಲ್ಲಿ ಆ ದೇಶದ ಸಂಸತ್‌ನಲ್ಲಿ ಮಸೂದೆಯೊಂದನ್ನು ಮಂಡಿಸಿ “ಜೆರೂಸಲೇಂ ಎನ್ನುವುದು ಸಂಪೂರ್ಣ ಮತ್ತು ಏಕೀಕರಣಗೊಂಡದ್ದಾಗಿದೆ. ಅದು ಇಸ್ರೇಲ್ ರಾಜಧಾನಿ’ ಎಂದು ಅನುಮೋದನೆ ಪಡೆದುಕೊಂಡಿತ್ತು. ಆದರೆ ವಿಶ್ವಸಂಸ್ಥೆಯು ನಿರ್ಣಯವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಇಸ್ರೇಲ್ ವಶದಲ್ಲಿರುವ ನಗರದಲ್ಲಿ ವಾಸಿಸುತ್ತಿರುವ ಪ್ಯಾಲೆಸ್ತೀನಿಯರಿಗೆ ಆ ದೇಶದ ಪೌರತ್ವವನ್ನು ಇನ್ನೂ ನೀಡಲಾಗಿಲ್ಲ. ವಿವಾದಿತ ನಗರದ ಹಳೆಯ ಭಾಗದಲ್ಲಿ ಅಮೆರಿಕನ್ ಕ್ವಾರ್ಟರ್‌ನಲ್ಲಿ ಸಂತ ಜೇಮ್ಸ್ ಚರ್ಚ್, ಕ್ರಿಶ್ಚಿಯನ್ ಕ್ವಾರ್ಟರ್‌ನಲ್ಲಿ ಚರ್ಚ್ ಆಫ್ ಹೋಲಿ ಸೆಪಲ್ಶರ್ ಮತ್ತು ಯೆಹೂದಿಗಳು ಇರುವ ಸ್ಥಳವಿದೆ. ಹೀಗಾಗಿ, ಮೂರು ಧರ್ಮಗಳಿಗೂ ಹಳೆಯ ನಗರ ಪ್ರಾಮುಖ್ಯತೆ ಪಡೆದಿದೆ.
ಇನ್ನು ಭಾರತದ ದೃಷ್ಟಿಯಿಂದ ನೋಡುವುದಾದರೆ ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ನೀಡಿದ ಹೇಳಿಕೆ ಪ್ರಕಾರ ಅಮೆರಿಕದ ನಿರ್ಧಾರ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಪ್ರಭಾವ ಬೀರಲಾರದು. ತೃತೀಯ ದೇಶದ ನಿರ್ಧಾರದಂತೆ ಪ್ಯಾಲೆಸ್ತೀನ್‌ನ ನಿರ್ಣಯವನ್ನು ನಮ್ಮ ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಪ್ರತ್ಯೇಕ ಪ್ಯಾಲೆಸ್ತೀನ್ ರಾಷ್ಟ್ರ ನಿರ್ಮಾಣ ಮಾಡುವ ಬಗ್ಗೆ ಹಿಂದಿನಿಂದಲೂ ಸ್ಪಷ್ಟ ನಿಲುವು ಹೊಂದಿರುವ ಹೆಗ್ಗಳಿಕೆ ನಮ್ಮದು. ಇನ್ನು ರಾಯಭಾರ ಕಚೇರಿಗಳ ಬಗ್ಗೆ ನೋಡುವುದಾದರೆ ಅಮೆರಿಕ ಘೋಷಣೆ ಮಾಡಿದ ನಗರದಲ್ಲಿ ಆ ದೇಶದ ದೂತಾವಾಸ ಕಚೇರಿ ಇದೆ. 1980ರಲ್ಲಿ ಜೆರೂಸಲೇಂ ದೇಶದ ರಾಜಧಾನಿ ಎಂಬ ಇಸ್ರೇಲ್ ನಿರ್ಣಯವನ್ನು ವಿಶ್ವಸಂಸ್ಥೆ ತಿರಸ್ಕರಿಸುವ ವರೆಗೆ ನೆದರ್‌ಲ್ಯಾಂಡ್ ಮತ್ತು ಕೋಸ್ಟಾ ರಿಕಾ ದೇಶಗಳ ರಾಯಭಾರ ಕಚೇರಿಗಳು ಆ ನಗರದಲ್ಲಿದ್ದವು. ಸದ್ಯ ಟೆಲ್ ಅವೀವ್‌ನಲ್ಲಿ ವಿಶ್ವದ 86 ರಾಷ್ಟ್ರಗಳ ರಾಯಭಾರ ಕಚೇರಿಗಳು ಇವೆ. ಆದರೆ ಬ್ರಿಟನ್ ಮತ್ತು ಫ್ರಾನ್ಸ್‌ನ ದೂತಾವಾಸದ ಕಚೇರಿಗಳು ಪೂರ್ವ ಭಾಗದಲ್ಲಿವೆ. ಅದೇನೇ ಇರಲಿ, ಭಾರತ, ತನ್ನಿಬ್ಬರೂ ಮಿತ್ರ ರಾಷ್ಟ್ರಗಳ (ಇಸ್ರೇಲ್, ಅಮೆರಿಕ) ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ.
ಸದಾಶಿವ ಖಂಡಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.