ಬದಲಾಗುತ್ತಿರುವ ರಾಹುಲ್‌ ರಾಜ”ತಾಂತ್ರಿಕ’ ನಡೆ


Team Udayavani, Oct 16, 2017, 11:53 AM IST

rahul-gandhi.jpg

“Rahul was still not mature and should be given (more) time”’ “ರಾಹುಲ್‌ ಇನ್ನೂ ಪ್ರೌಢರಾಗಿಲ್ಲ ಹಾಗೂ ಅವರಿಗೆ ಇನ್ನಷ್ಟು ಕಾಲಾವಕಾಶ ಬೇಕು”! ಕಾಂಗ್ರೆಸ್‌ನ ಹಿರಿಯ ನಾಯಕಿ, ಒಂದು ಕಾಲದಲ್ಲಿ ಸೋನಿಯಾ ಆಪೆ¤ಯಾಗಿಯೂ ಗುರುತಿಸಿಕೊಂಡಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಹೀಗೊಂದು ಬಾಂಬ್‌ ಸಿಡಿಸಿದ್ದು ಬಹಳ ದಿನಗಳ ಹಿಂದೇನಲ್ಲ. ಕಳೆದ ಫೆಬ್ರವರಿಯಲ್ಲಿ ಇಂಥದ್ದೊಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಇದಕ್ಕೆ ಪರ-ವಿರೋಧ ಎರಡೂ ಅಭಿಪ್ರಾಯಗಳೂ ವ್ಯಕ್ತವಾಗಿತ್ತು ನಿಜ.

ಆದರೆ ಶೀಲಾ ಅವರಂಥ ರಾಜಕಾರಣಿ ಏಕಾಏಕಿ ರಾಹುಲ್‌ ಬಗ್ಗೆ ಋಣಾತ್ಮಕವಾದ ಮಾತುಗಳನ್ನಾಡಿದ್ದು ರಾಜಕೀಯವಾಗಿ ಅಥವಾ ಪಕ್ಷದೊಳಗಿನ ಅಸ್ತಿತ್ವಕ್ಕಾಗಿ ಎಂದೇ ಭಾವಿಸೋಣ. ಹಾಗಿದ್ದರೂ ಮಾಜಿ ಸಿಎಂ ಹೇಳಿಕೆಗೆ ಸಾರ್ವಜನಿಕವಾಗಿ, ಪಕ್ಷದ ಆಂತರಿಕ ವಲಯದಲ್ಲಿ ಧನಾತ್ಮಕವಾದ ಅಭಿಪ್ರಾಯವೂ ವ್ಯಕ್ತಗೊಂಡಿತ್ತು. ಅನುಭವಿ ರಾಜಕಾರಣಿ ಬಾಯಿಗೆ ಬಂದಂತೆ ಮಾತನಾಡಲಾರರು. ಹೇಳಿದ್ದರಲ್ಲಿ ವಾಸ್ತವಾಂಶ ಇದೆಯಲ್ಲ ಎಂದು ಆಡಿಕೊಂಡಿದ್ದುಂಟು. ಒಂದಂತೂ ಖರೆ, ಶೀಲಾ ದೀಕ್ಷಿತ್‌ ಅಂದು ಹೇಳಿದ ಮಾತನ್ನು ರಾಹುಲ್‌ ಸ್ವಲ್ಪ ಮಟ್ಟಿಗೆ ಸೀರಿಯಸ್‌ ಆಗಿಯೇ ತೆಗೆದು ಕೊಂಡಿರಬಹುದು. ಯಾಕೆಂದರೆ ಎಐಸಿಸಿ ಉಪಾಧ್ಯಕ್ಷರಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆ ಕಂಡುಬಂದಿದೆ. ರಾಜಕಾರಣದಲ್ಲಿ ಉಳಿದುಕೊಳ್ಳಬೇಕಾದರೆ ಅದರದೇ ಆದ ಒಂದಿಷ್ಟು ಬಾಡಿ ಲಾಂಗ್ವೇಜ್‌ ಅನಿವಾರ್ಯವಾಗಿರುತ್ತದೆ. “body language
is more powerful than words’ ಎನ್ನುವಂತೆ ರಾಹುಲ್‌ ಈಗ ಅನೇಕ ಸಂಗತಿಗಳಲ್ಲಿ ಬದಲಾದ ನೆಲೆಯಲ್ಲೇ ವಿಚಾರ ಮಂಡಿಸುತ್ತಿದ್ದಾರೆ. ಗಮನಾರ್ಹ ಹೆಜ್ಜೆ ಇಡುತ್ತಿದ್ದಾರೆ. ಪ್ರಸ್ತುತ ರಾಜಕಾರಣಕ್ಕೆ ಅಗತ್ಯವಾದ ಒಂದಿಷ್ಟು ಶೋಕೇಸ್‌ ಸಂಸ್ಕೃತಿಯನ್ನೂ ಅಳವಡಿಸಿಕೊಳ್ಳುವತ್ತ ಆಸಕ್ತಿ ತೋರುತ್ತಿದ್ದಾರೆ.

ಇನ್ನೂ ನೇರವಾಗಿ ಹೇಳಬಹುದಾದರೆ ಮೋದಿ ನಡೆಯನ್ನು ಸೂಕ್ಷ್ಮವಾಗಿ ಹಿಂಬಾಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ನಡುವೆ ಅಷ್ಟೇ ಪ್ರಬಲ ನಾಯಕನಾಗಿ ಗುರುತಿಸಿಕೊಳ್ಳುವ ಹಂಬಲ ರಾಹುಲ್‌ ಅವರದ್ದಾದರೆ, ಕಾಂಗ್ರೆಸ್‌ ಪಕ್ಷಕ್ಕೂ ಆ ಮಟ್ಟಿಗಿನ
ಜನಪ್ರಿಯತೆ ಗಿಟ್ಟಿಸಿಕೊಡುವುದೂ ಕಷ್ಟವಾಗಲಿಕ್ಕಿಲ್ಲ. ಆದರೆ ಇದಕ್ಕೆ ಅಗತ್ಯವಾದ ಒಂದಿಷ್ಟು ಬದಲಾವಣೆ, ಚಾಕಚಕ್ಯತೆ, ಜಾಣತನ, ಬುದ್ಧಿವಂತಿಕೆಗಳನ್ನು ರಾಹುಲ್‌ ಪ್ರದರ್ಶಿಸಬೇಕಾಗುತ್ತದೆ. ದೈನಂದಿನ ಚಟುವಟಿಕೆಗಳಲ್ಲೇ ಅವೆಲ್ಲವನ್ನೂ ಪ್ರದರ್ಶಿಸುತ್ತಾ ಹೋದಾಗ ಸಹಜವಾಗಿ ನಾಯಕ ಮಾಸ್‌ ಆಗುವುದರಲ್ಲಿ ಅನು ಮಾನ ಇರುವುದಿಲ್ಲ. ಜತೆಗೆ ಆ ನಿಟ್ಟಿನಲ್ಲಿ ಬದ್ಧತೆ, ಹಿತಾಸಕ್ತಿಯೂ ಬೇಕೇ ಬೇಕು. ಅಂಥ ಕೆಲವೊಂದು ಬದಲಾವಣೆ ಈಗ ರಾಹುಲ್‌ ಗಾಂಧಿ ಅವರಲ್ಲಿ ಗಮನಿಸಬಹುದಾಗಿದೆ. ಅಂದಹಾಗೆ ಬದಲಾಯಿಸಿಕೊಳ್ಳಬೇಕಾದ್ದು ಬೆಟ್ಟದಷ್ಟಿರಬಹುದು.

ಚುನಾವಣೆಗೆ ರಾಹುಲ್‌ ನಡೆ ಯಾಕೆ ಈ ಮಾತನ್ನು ಹೇಳಬೇಕೆನಿಸುತ್ತಿದೆ ಎಂದರೆ, 2019ರ ಚುನಾವಣೆ ಬಹಳ ದೂರವೇನಿಲ್ಲ. ಇದಕ್ಕೆ ನಿರೀಕ್ಷೆಯ ತಯಾರಿ ವಿಪಕ್ಷ ಕಾಂಗ್ರೆಸ್‌ನಿಂದ ತೀಕ್ಷ್ಣವಾಗಿಯೇನೂ ಕಂಡುಬರುತ್ತಿಲ್ಲ. ಆಡಳಿತಾರೂಢ ಬಿಜೆಪಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್‌ ದಿಢೀರನೆ ತನ್ನ ರಣತಂತ್ರ ಬದಲಾಯಿಸಿರುವ ಮುನ್ಸೂಚನೆ ನೀಡಿತ್ತು. ಕಳೆದ ಜುಲೈನಲ್ಲಷ್ಟೇ
ರಾಹುಲ್‌ಗೆ ಸಾರಥ್ಯ ನೀಡುವ ಪ್ರಸ್ತಾಪದ ನಡುವೆಯೂ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸು ತ್ತಾರೆನ್ನುವ ಸಂದೇಶ ಕಾಂಗ್ರೆಸ್‌ ವಲಯದಿಂದಲೇ ಕೇಳಿಬಂತು.  ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಾರೆಂದು ವಿಶ್ಲೇಷಿಸಲಾಗುತ್ತಿದ್ದ ಆ ಕ್ಷಣದಲ್ಲಿ ಕಾಂಗ್ರೆಸ್‌ನ ಈ ನಡೆ ಸ್ವಲ್ಪಮಟ್ಟಿಗೆ ಅಚ್ಚರಿಯನ್ನೂ ಉಂಟುಮಾಡಿತ್ತು.

2014ರ ಚುನಾವಣೆ ಹಾಗೂ 2019ರ ಚುನಾವಣೆ ನಡುವಿನ ಅವಧಿಯಲ್ಲಿ ಬದಲಾದ ಪರಿಸ್ಥಿತಿಗೆ ಸೋನಿಯಾ ಸಾರಥ್ಯ ಎಷ್ಟು ಸೂಕ್ತ ಎನ್ನುವುದು ಚರ್ಚಾಸ್ಪದ ಒಂದು ಅಂಶವಾದರೆ, ರಾಹುಲ್‌ ರಾಜಕೀಯ ಜೀವನದ ಮಹತ್ವದ ತಿರುವಿಗೆ 2019ರ ಲೋಕಸಭೆ ಚುನಾವಣೆ ಅತೀ ಮಹತ್ವದ್ದು ಎನ್ನುವುದನ್ನೂ ಕಾಂಗ್ರೆಸ್‌ ಒಪ್ಪಿಕೊಳ್ಳಬೇಕಾಗುತ್ತದೆ. ಒಪ್ಪದೇ ಇದ್ದಲ್ಲಿ ಮತ್ತೊಂದು ಆಘಾತವನ್ನೂ ಎದುರಿಸುವ ಮನೋಬಲ ಹೆಚ್ಚಿಸಿಕೊಂಡಿರ ಬೇಕಾಗುತ್ತದೆ. ಮೋದಿ ಸಂಪಾದಿಸುತ್ತಿರುವ ವರ್ಚಸ್ಸಿನ ನಡುವೆ ಬಲಿಷ್ಠ ನಾಯಕನಾಗಿ ಕಾಣಿಸಿಕೊಳ್ಳಲು ರಾಹುಲ್‌ ಗಾಂಧಿ ಪಕ್ವತೆಯ ರಾಜಕಾರಣದೊಂದಿಗೆ ಗುರುತಿಸಿಕೊಳ್ಳಬೇಕಾಗುತ್ತದೆ ಕೂಡ. 2014ರಲ್ಲಿ ಮೋದಿ ಹವಾ ಈ ಮಟ್ಟದಲ್ಲಿ ಇರಲಿಲ್ಲ.ಕಾಂಗ್ರೆಸ್‌ ಪ್ರಬಲವಾಗಿಯೇ ಇತ್ತು. ನಂತರದ ದಿನಗಳಲ್ಲಿ ಅದೇ ಪ್ರಾಬಲ್ಯ ಉಳಿಸಿಕೊಂಡು ಬರುವಲ್ಲಿ ಕಾಂಗ್ರೆಸ್‌ ಎಡವಿತು. ವಿಪಕ್ಷವಾಗಿಯೂ ಜನ ನೀರೀಕ್ಷಿಸಿದ ರೀತಿಯಲ್ಲಿ ಕೆಲಸ ಮಾಡಲಿಲ್ಲ. 

ಪರಿಣಾಮ ರಾಹುಲ್‌ ಇಂದು ಹತ್ತಾರು ಸವಾಲುಗಳನ್ನು ಎದುರಿಸಬೇಕಾಗಿ ಬಂದೊದಗಿದೆ. ಇದಕ್ಕೊಂದು ಉತ್ತಮ ಉದಾಹರಣೆ ಕೊಡಬಹುದಾದರೆ, ರಾಹುಲ್‌ ಕಳೆದ ಚುನಾವಣೆ ವೇಳೆ ಯುವಕರ ಜತೆಗಿನ ಇಂಟ್ರಾಕ್ಷನ್‌ ಕಾರ್ಯಕ್ರಮವನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡಿದ್ದರು. ಚುನಾವಣೆ ಬಳಿಕ ಅದು ವೇಗ ಕಳೆದುಕೊಂಡಿತು. ಅವರೂ ಯುವಕರಿಂದ ದೂರವಾಗುತ್ತಾ ಹೋದರು.

ಶೀಘ್ರದಲ್ಲೇ ಪಟ್ಟಾಭಿಷೇಕ
ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ಗೆ ಪಟ್ಟ ಕಟ್ಟುವ ಬಗ್ಗೆ ಸೋನಿಯಾ ಗಾಂಧಿ ಅವರೇ ಬಾಯಿಬಿಟ್ಟಿದ್ದಾರೆ. ಶೀಘ್ರದಲ್ಲೇ ರಾಹುಲ್‌ಗೆ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಪಟ್ಟಾಭಿಷೇಕ ಮಾಡುವ ಮಾತುಗಳನ್ನಾಡಿದ್ದಾರೆ. ಕಳೆದೊಂದು ವರ್ಷದಿಂದ ಗೊಂದಲದಲ್ಲೇ ಇರಿಸಿಕೊಂಡು ಬಂದ ಕಾಂಗ್ರೆಸ್‌ ವರಿಷ್ಠೆ, ತಾಯಿ ಸೋನಿಯಾ ಈಗ ದಿಢೀರಾಗಿ ಮತ್ತೆ ಈ  ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಆ ಕೆಲಸ ಅದೆಷ್ಟು ಬೇಗ ಮಾಡುತ್ತಾರೆನ್ನುವುದು ಪಕ್ಷದ ಮಟ್ಟಿಗಂತೂ ಕುತೂಹಲ, ತುರ್ತು ಎರಡೂ ಹೌದು. ಇಷ್ಟು ದಿನ ಅಧ್ಯಕ್ಷಗಾದಿಗೇರಲು ರಾಹುಲ್‌ ಸಿದ್ಧವಿದ್ದರೂ ಸೋನಿಯಾ ಇದಕ್ಕೆ ಬ್ರೇಕ್‌ ಹಾಕಿಕೊಂಡಿದ್ದರು. ಇವೆಲ್ಲದರ ಜತೆ ಜೊತೆಗೇ ಸೋನಿಯಾ ಈ ಭಾರಿಯ ಚುನಾವಣೆಗೆ ಬೇರೆಯದೇ ಆದ ತಂತ್ರಗಾರಿಕೆ ನಡೆಸಬೇಕಾಗುತ್ತದೆ. ಏಕಾಂಗಿಯಾಗಿ ಕಣಕ್ಕಿಳಿದು ಗೆಲ್ಲುತ್ತೇವೆನ್ನುವ ವಿಶ್ವಾಸ ಕ್ಷೀಣಿಸಿದ್ದರಿಂದ ಸಹಜವಾಗಿ ಮಾಯಾವತಿ, ಮುಲಾಯಂ ಸಿಂಗ್‌ ಯಾದವ್‌, ಮಮತಾ ಬ್ಯಾನರ್ಜಿ, ಜೆಡಿಯು ಸೇರಿ ಕೆಲ ಮಿತ್ರಪಕ್ಷಗಳ ಜತೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗುವ
ಸಾಧ್ಯತೆಗಳು ದಟ್ಟವಾಗಿವೆ. ಇಷ್ಟು ದಿನ ಜೊತೆಗಿದ್ದ ಶರದ್‌ ಪವಾರ್‌ ಕೈಕೊಟ್ಟರೂ ಅಚ್ಚರಿಯಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪಕ್ಷ ಮುನ್ನಡೆಸುವ ಮಹತ್ತರ ಜವಾಬ್ದಾರಿ ಎದುರು ನೋಡುತ್ತಿರುವ ರಾಹುಲ್‌ ಗಾಂಧಿಗೆ ಮಿತ್ರಪಕ್ಷಗಳನ್ನು ಒಂದುಗೂಡಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಸೋಶಿಯಲ್‌ ಮೀಡಿಯಾ ವಾರ್‌
ರಾಹುಲ್‌ ಹೇಗೆ ಬದಲಾಗುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಡಿಜಿಟಲ್‌ ಇಂಡಿಯಾ ಹೆಸರಲ್ಲಿ ಅಬ್ಬರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸಡ್ಡು ಹೊಡೆಯಲು ಪಣ ತೊಟ್ಟವರಂತೆ ಕಾಂಗ್ರೆಸ್‌ ತಯಾರಿ ನಡೆಸಿದೆ. ಬಿಜೆಪಿಯ ಉತ್ಸಾಹವನ್ನೂ ಮೀರಿಸುವ ರೀತಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಯುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಗಮನಾರ್ಹ ಅಭಿಯಾನಕ್ಕೆ ಚಾಲನೆ ನೀಡಿದೆ.

ಕರ್ನಾಟಕದ ಮಾಜಿ ಸಂಸದೆ ದಿವ್ಯಾ ಸ್ಪಂದನ ಅಲಿಯಾಸ್‌ ರಮ್ಯಾ ಸದ್ಯಕ್ಕೆ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಆರೇಳು ತಿಂಗಳ ಅವಧಿಯಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಒಂದು ಹಂತದಲ್ಲಿ ಕಾಂಗ್ರೆಸ್‌ ಯಶಸ್ಸು ಕಂಡಿದೆ ಎನ್ನಲಡ್ಡಿಯಿಲ್ಲ.  ಪೂರಕವಾಗಿ ರಾಹುಲ್‌ ಗಾಂಧಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸುಕಂಡ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಜತೆ ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಇತ್ತೀಚೆಗಷ್ಟೆ ಸುದ್ದಿಯಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆಲುವಿನಲ್ಲಿ ಹಾಗೂ ಬ್ರಿಟನ್‌ನಲ್ಲಿ ಭಾರಿ ಸುದ್ದಿಯಾಗಿದ್ದ ಬ್ರೆಕ್ಸಿಟ್‌ ಅಭಿಯಾನದ ಯಶಸ್ಸಿನಲ್ಲಿ ದತ್ತಾಂಶಗಳ ಆಧಾರದ ಮೇಲೆ ಫೇಸ್‌ ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಪ್ರಚಾರಕ್ಕೆ ರಣನೀತಿ ಹೆಣೆದು ಸಹಕರಿಸಿ ಪ್ರಮುಖ ಪಾತ್ರವಹಿಸಿದ ಈ ಸಂಸ್ಥೆ ರಾಹುಲ್‌ಗೆಷ್ಟು ಸಹಕಾರಿ ಆಗಲಿದೆ ಅನ್ನೋದನ್ನು ಕಾದುನೋಡಬೇಕಷ್ಟೆ. 

ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ಬದಲಾವಣೆ ಸಾಧ್ಯ ಅನ್ನೋದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಎಲೆಕ್ಟ್ರಾನಿಕ್‌ ಯುಗದಲ್ಲೂ ಸೋಶಿಯಲ್‌ ಮೀಡಿಯಾಗಳು ಪವರ್‌ಫ‌ುಲ್‌ ಅನ್ನೋದು ಪ್ರಧಾನಿ ಮೋದಿ ಅವರ ವಾದಗಳಲ್ಲಿ ಒಂದು ಕೂಡ. ರಾಹುಲ್‌ ಗಾಂಧಿಯೂ ಇದರಿಂದ ಹೊರತಾಗಿಲ್ಲ ಅಷ್ಟೇ ಗಂಭೀರವಾಗಿಯೇ ಪ್ರಚಾರಕ್ಕಿಳಿದಿದ್ದಾರೆ.  ಅಷ್ಟಕ್ಕೂ ಈ ಸಂಸ್ಥೆ ಜನರ ಆಶೋತ್ತರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್‌ ಆಯೋಜಿಸುವ ಮೂಲಕ ಮಾಹಿತಿ ಸಂಗ್ರಹಿಸಿ ಕೊಡುತ್ತದೆ. ಇದರ ಆಧಾರದ ಮೇಲೆ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವುದು ರಾಹುಲ್‌ ಪೂರ್ವ ಯೋಜನೆಯಾಗಿದೆ. ಯುವ ಜನಾಂಗವನ್ನು ಸೋಶಿಯಲ್‌ ಮೀಡಿಯಾಗಳ
ಮೂಲಕವೇ ಆಕರ್ಷಿಸಬೇಕೆನ್ನುವ ಮೋದಿ  ಲೆಕ್ಕಾಚಾರಕ್ಕಿಂತಲೂ ಒಂದೆಜ್ಜೆ ಮುಂದೆ ಇಟ್ಟಿರುವ ರಾಹುಲ್‌ ಗಾಂಧಿ ಈಗಾಗಲೇ ಪಕ್ಷದ ಯುವ ನಾಯಕರಿಗೆಲ್ಲ ಪಕ್ಷ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು, ಕರ್ನಾಟಕದಲ್ಲಿಯೂ ಬಿಜೆಪಿಗಿಂಥ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದೆ. ಇತ್ತೀಚೆಗೆ ರಾಹುಲ್‌ ಗಾಂಧಿ ಅಮೆರಿಕ ಭೇಟಿ ವೇಳೆ ಅವರ ಹೇಳಿಕೆಗಳನ್ನು ಲೈವ್‌ ಮಾದರಿಯಲ್ಲಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡಿಸಲಾಯಿತು. ಇಂಥ ಪ್ರಚಾರವನ್ನು ಕಾಂಗ್ರೆಸ್‌ ಈತನಕ ಮಾಡಿರಲಿಲ್ಲ.

ಕಡೇ ಮಾತು…
ಗಮನಿಸಬೇಕಾದ ಇನ್ನೊಂದು ಅಂಶವೇನು ಗೊತ್ತಾ..? ರಾಹುಲ್‌ ಇತ್ತೀ ಚೆಗೆ ದೇವಾಲಯಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ!

*ಜಿಎಸ್‌ಬಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.