ಆಡಳಿತ ವಿರೋಧಿ ಅಲೆ ಮೀರಿ ಗೆಲ್ಲುವ ಕಲೆ


Team Udayavani, Mar 14, 2022, 6:10 AM IST

ಆಡಳಿತ ವಿರೋಧಿ ಅಲೆ ಮೀರಿ ಗೆಲ್ಲುವ ಕಲೆ

ಆಡಳಿತ ವಿರೋಧಿ ಅಲೆ ವರ್ಸಸ್‌ ಆಡಳಿತ ಪರ ಅಲೆ… ಸದ್ಯ ಭಾರತದಲ್ಲಿ ಹೆಚ್ಚು ಸದ್ದಾಗುತ್ತಿರುವ ಎರಡು ವಿಚಾರಗಳು. ಇದಕ್ಕೆ ಕಾರಣ, ಈಗಷ್ಟೇ ಮುಗಿದ ಪಂಚರಾಜ್ಯ ಚುನಾವಣೆಗಳ ಫ‌ಲಿತಾಂಶ. ಈ ಐದು ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳು ಹಿಂದೆ ಆಡಳಿತ ನಡೆಸುತ್ತಿದ್ದ ಪಕ್ಷಗಳ ಮಡಿಲಿಗೆ ಹೋಗಿವೆ. ಅಂದರೆ, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿಯೂ ಆಡಳಿತ ಪರ ಅಲೆ ಬೀಸಿದೆ. ಇದರಿಂದಾಗಿ ಮತ್ತೆ ಸರಕಾರಗಳಿಗೇ ಮತದಾರ ಆಶೀರ್ವಾದ ಮಾಡಿದ್ದಾನೆ. ಆದರೆ, ಉಳಿದೊಂದು ರಾಜ್ಯ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಇದೇ ಆಡಳಿತ ವಿರೋಧಿ ಅಲೆಯಿಂ ದಾಗಿ ಸೋತಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಸಾಮಾನ್ಯವಾಗಿ ಆಡಳಿತ ಪರ ಅಲೆ ಎಂಬುದು ಭಾರತಕ್ಕಿಂತ ಹೆಚ್ಚಾಗಿ ನಾವು ಅಧ್ಯಕ್ಷೀಯ ಚುನಾವಣ ವ್ಯವಸ್ಥೆ ಇರುವ ಅಮೆರಿಕದಲ್ಲಿ ಕಾಣುತ್ತೇವೆ. ರಿಪಬ್ಲಿಕ್‌ ಅಥವಾ ಡೆಮಾಕ್ರೆಟ್‌ ಪಕ್ಷದಿಂದ ಆರಿಸಿ ಬಂದ ಅಧ್ಯಕ್ಷರು ಮತ್ತೂಂದು ಅವಧಿಗೆ ಪುನರಾಯ್ಕೆಯಾಗುವುದು ಮಾಮೂಲು. ಅಂದರೆ ಈ ಎರಡು ಪಕ್ಷದ ಯಾರೇ ಅಧ್ಯಕ್ಷರಾದರೂ ಅವರ ನಾಲ್ಕು ವರ್ಷದ ಅಧಿಕಾರಾವಧಿ ಮುಗಿದ ಮೇಲೆ ಮತ್ತೂಮ್ಮೆ ಮತದಾರ ಚಾನ್ಸ್‌ ನೀಡುತ್ತಾನೆ. ವಿಚಿತ್ರವೆಂದರೆ, ಇಲ್ಲಿ ಎರಡು ಬಾರಿ ಅಧ್ಯಕ್ಷರಾದ ಮೇಲೆ ಮೂರನೇ ಬಾರಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ. ಹೀಗಾಗಿ ಮೂರನೇ ಬಾರಿಗೆ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧೆ ಮಾಡುವ ವಿಷಯವೇ ಬರುವುದಿಲ್ಲ. ಆದರೂ, ಆಡಳಿತ ಪರ ಅಲೆ ಹೆಚ್ಚಾಗಿ ಇರುವ ಅಮೆರಿಕದಲ್ಲಿಯೂ ಕಳೆದ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಕಾಣಸಿ, ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋತರು.

ಆದರೆ ಭಾರತದ ಲೆಕ್ಕಾಚಾರಕ್ಕೆ ಬಂದರೆ ಈ ಆಡಳಿತ ವಿರೋಧಿ ಅಥವಾ ಆಡಳಿತ ಪರ ಅಲೆಯ ವಿಶ್ಲೇಷಣೆಯೇ ಬದಲಾಗುತ್ತದೆ. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಇಲ್ಲಿ ಒಮ್ಮೆ ಗೆದ್ದ ಪಕ್ಷ, ಮುಂದಿನ ಬಾರಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರುವುದು ಭಾರೀ ಅಪರೂಪ. ಹೀಗಾಗಿಯೇ ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 37 ವರ್ಷಗಳ ದಾಖಲೆ ಮುರಿದು, ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಮತ್ತೆ ಆರಿಸಿ ಬಂದಿದೆ.

ಇನ್ನು ಪಶ್ಚಿಮ ಬಂಗಾಲ, ಒಡಿಶಾ, ತ್ರಿಪುರ, ದಿಲ್ಲಿ, ಗುಜರಾತ್‌ನಂಥ ರಾಜ್ಯಗಳಲ್ಲಿ ಆಡಳಿತ ಪರ ಅಲೆ ಹೆಚ್ಚಾಗಿರುವುದು ಕಾಣಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ವಿದ್ಯಮಾನ ಟ್ರೆಂಡ್‌ ಆಗಿ ಬದಲಾಗಿದೆ ಎಂದು ಹೇಳಬಹುದು.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ಮೆಟ್ಟಿ ನಿಂತರು. ಸರಕಾರದ ವಿರುದ್ಧ ಪ್ರತಿಪಕ್ಷಗಳು ನಾನಾ ಆರೋಪ ಮಾಡಿ, ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಹೋದರೂ ಜನ ಇವರ ಮಾತುಗಳನ್ನು ನಂಬಲಿಲ್ಲ. 2014ರಂತೆಯೇ 2019ರಲ್ಲಿಯೂ ಮೋದಿ ಸಲೀಸಾಗಿ ಆರಿಸಿಬಂದರು.

ಇದೇ ಬೆಳವಣಿಗೆ 2004 ಮತ್ತು 2009ರಲ್ಲಿಯೂ ಆಗಿತ್ತು. 2004ರಲ್ಲಿ ವಾಜಪೇಯಿ ಅವರ ಆಡಳಿತ ಪರ ಅಲೆಯ ಹೊರತಾಗಿಯೂ ಬಿಜೆಪಿ ಗೆಲ್ಲುವಲ್ಲಿ ವಿಫ‌ಲವಾಯಿತು. ಆಗ ಕಾಂಗ್ರೆಸ್‌ ನೇತೃತ್ವದ ಯುಪಿಎ ಆರಿಸಿ ಬಂದು ಡಾ| ಮನಮೋಹನ್‌ ಸಿಂಗ್‌ ಪ್ರಧಾನಿಯಾದರು. ಇವರ ಅಧಿಕಾರಾವಧಿಯಲ್ಲಿ ನಾನಾ ಹಗರಣಗಳ ಆರೋಪದ ಹೊರತಾಗಿಯೂ 2009ರಲ್ಲಿಯೂ ಮತ್ತೆ ಡಾ| ಮನಮೋಹನ್‌ ಸಿಂಗ್‌ ಅವರ ಸರಕಾರವೇ ಆರಿಸಿ ಬಂತು. ಆದರೆ, ಇದಕ್ಕೂ ಮುನ್ನ ಇದ್ದ, 1999ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ, 2004ರಲ್ಲಿ ಆಡಳಿತ ವಿರೋಧಿ ಅಲೆ ಹಿಮ್ಮೆಟ್ಟಿಸುವಲ್ಲಿ ವಿಫ‌ಲವಾಯಿತು.

ರಾಜ್ಯಗಳ ಲೆಕ್ಕಾಚಾರಕ್ಕೆ ಬಂದರೆ ಆಡಳಿತ ವಿರೋಧಿ ಅಲೆ ಮೆಟ್ಟಿನಿಂತ ಹಲವಾರು ಮುಖ್ಯಮಂತ್ರಿಗಳು ಕಾಣಸಿಗುತ್ತಾರೆ. ಅವರಲ್ಲಿ ಮೊದಲಿಗರು ಸಿಕ್ಕಿಂನಲ್ಲಿ ಸತತವಾಗಿ 24 ವರ್ಷಗಳಿಗೂ ಹೆಚ್ಚು ಅಧಿಕಾರ ನಡೆಸಿದ ಪವನ್‌ ಕುಮಾರ್‌ ಚಾಮ್ಲಿಂಗ್‌. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು. ಇವರು 23 ವರ್ಷ 137 ದಿನ ಆಡಳಿತ ನಡೆಸಿದ್ದರು. ಮೂರನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದಲ್ಲಿ ಆಡಳಿತ ನಡೆಸಿದ್ದ ಗೀಗಾಂಗ್‌ ಅಪಾಂಗ್‌. ಇವರು 22 ವರ್ಷ, 250 ದಿನ ಅಧಿಕಾರದಲ್ಲಿ ಇದ್ದರು. ಬಹುಮುಖ್ಯ, ಅಂದರೆ ನಾಲ್ಕನೇ ಸ್ಥಾನದಲ್ಲಿ ಇರುವವರು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌. ಸದ್ಯದಲ್ಲೇ ಇವರು ಎರಡನೇ ಸ್ಥಾನದಲ್ಲಿರುವ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿಯಲಿದ್ದಾರೆ.

ನವೀನ್‌ ಕುಮಾರ್‌ ಪಾಟ್ನಾಯಕ್‌ ಬಿಟ್ಟರೆ, ಈಗ ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತವರು ನರೇಂದ್ರ ಮೋದಿ. ಇವರು 2002ರಿಂದ 2014ರ ವರೆಗೆ ಗುಜರಾತ್‌ ಸಿಎಂ ಆಗಿದ್ದರು. ಸತತ ಮೂರು ಬಾರಿ ಗೆದ್ದು ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತಿದ್ದರು. ಈಗ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರೂ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದಾರೆ. ತೆಲಂಗಾಣದಲ್ಲಿ ಕೆ.ಸಿ.ಚಂದ್ರಶೇಖರ ರಾವ್‌, ಕೇರಳದಲ್ಲಿ ಎಡರಂಗದ ಪಿಣರಾಯಿ ವಿಜಯನ್‌ ಅವರೂ ಸತತವಾಗಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಈಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆಗಳೂ ಇವೆ. ಕೆಲವು ನಾಯಕರು ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಗೆಲ್ಲುತ್ತಿರುವುದು ಹೇಗೆ? ಇದಕ್ಕೆ ಮೊದಲ ಉದಾಹರಣೆ, ಆಯಾ ನಾಯಕರು ಘೋಷಿಸುತ್ತಿರುವ ಯೋಜನೆಗಳು, ಆಡಳಿತ ನಡೆಸುವ ವೈಖರಿ ಮತ್ತು ಜನರ ನಡುವೆ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವುದು. ಸದ್ಯ ಬಿಜೆಪಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಮೋದಿ ಎಂಬ ಹೆಸರು ಬ್ರ್ಯಾಂಡ್‌ ರೀತಿ ಆಗಿದೆ. ಇವರ ಹೆಸರು ಲೋಕಸಭೆ ಚುನಾವಣೆ ಜತೆಗೆ, ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆಯಲ್ಲೂ ಕೆಲಸ ಮಾಡುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಈಗಷ್ಟೇ ಮುಗಿದ ಪಂಚರಾಜ್ಯ ಚುನಾವಣೆಗಳು. 5ರಲ್ಲಿ ನಾಲ್ಕನ್ನು ಗೆದ್ದ ಬಿಜೆಪಿ, ಮೋದಿ ಅವರ ಹೆಸರನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಹಾಗೆಯೇ ಉತ್ತರ ಪ್ರದೇಶದಲ್ಲಿ ಬ್ರ್ಯಾಂಡ್‌ ಮೋದಿ ಜತೆಗೆ, ಫೈರ್‌ಬ್ರ್ಯಾಂಡ್‌ ಯೋಗಿ ಆದಿತ್ಯನಾಥ್‌ ಅವರ ಹೆಸರೂ ಕೆಲಸ ಮಾಡಿದೆ.

ಈ ಚುನಾವಣೆಗೂ ಮುನ್ನ, ಬೆಲೆ ಏರಿಕೆ, ತೈಲೋತ್ಪನ್ನಗಳ ಮೇಲಿನ ಬೆಲೆ ಹೆಚ್ಚಳ, ಕೊರೊನಾ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳು ಸವಾಲಿನ ರೀತಿಯಲ್ಲಿ ನಿಂತಿದ್ದವು. ಬಹುತೇಕ ರಾಜಕೀಯ ಪಂಡಿತರು, ಈ ಸಮಸ್ಯೆಗಳಿಂದಾಗಿಯೇ ಆಡಳಿತದಲ್ಲಿರುವ ಪಕ್ಷಗಳು ಸೋತರೂ ಸೋಲಬಹುದು ಎಂದೂ ಭವಿಷ್ಯ ನುಡಿದಿದ್ದರು. ಆದರೆ, ಅವರ ವಿಶ್ಲೇಷಣೆಗಳು ಸತ್ಯವಾಗಲಿಲ್ಲ. ಸ್ಥಿರವಾದ ಆಡಳಿತ ಮತ್ತು ಅಭಿವೃದ್ಧಿ ಕೇಂದ್ರಿತ ಆಡಳಿತ ಕೊಟ್ಟರೆ ಜನ ಕೈ ಹಿಡಿಯುತ್ತಾರೆ ಎಂಬುದಕ್ಕೆ ಈಗಿನ ಚುನಾವಣ ಫ‌ಲಿತಾಂಶಗಳು ಉತ್ತಮ ಉದಾಹರಣೆ ಎಂಬುದು ರಾಜಕೀಯ ಪಂಡಿತರ ಮಾತು. ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬುದು ಮತ್ತು ಮಹಿಳಾ ಕೈಹಿಡಿದರೆ ಎಂಥ ಒತ್ತಡವಿದ್ದರೂ, ಗೆಲ್ಲಬಹುದು ಎಂಬುದನ್ನೂ ಈ ರಾಜ್ಯಗಳ ಫ‌ಲಿತಾಂಶಗಳು ತೋರಿಸಿವೆ.

ಅಂದರೆ, ಸರಕಾರಗಳು ಮಾಡುವ ಕೆಲಸಗಳು ಕೇವಲ ರಸ್ತೆ, ಆಸ್ಪತ್ರೆ, ಸಮುದಾಯ ಭವನಗಳ ನಿರ್ಮಾಣ, ಕೆರೆ ಕಟ್ಟೆಗಳು, ನೀರಾವರಿಗೆ ಸಹಾಯ, ಕೃಷಿಗೆ ನೆರವು ನೀಡಿದರೆ ಮಾತ್ರ ಸಾಲದು. ಮನೆಯೊಳಗಿನ ಸಮಸ್ಯೆಗಳ ಮೇಲೆ ಗಮನ ನೀಡಬೇಕು ಎಂಬುದನ್ನು ಈ ಫ‌ಲಿತಾಂಶಗಳು ತೋರಿಸಿವೆ. ಅಂದರೆ ಮನೆಯಲ್ಲಿ ಅತ್ಯಗತ್ಯವಾಗಿ ಬೇಕಾಗಿದ್ದ ಶೌಚಾಲಯ ನಿರ್ಮಾಣ, ಸಿಲಿಂಡರ್‌ ವ್ಯವಸ್ಥೆ, ಉಚಿತ ಪಡಿತರದಂಥ ಯೋಜನೆಗಳು ಕೂಡ ಸರಕಾರಗಳಿಗೆ ಆಡಳಿತ ಪರ ಅಲೆ ರೂಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕೇಂದ್ರದಲ್ಲಿ ಮೋದಿ ಸರಕಾರ ಮತ್ತೆ ಮಹಿಳೆಯರು ಹೆಚ್ಚಾಗಿ ಬಿಜೆಪಿಗೆ ಮತ ಹಾಕಿದ್ದು ಕಾರಣ ಎಂಬ ಮಾತುಗಳೂ ಇವೆ. ಅಲ್ಲದೆ, ಸರಕಾರಗಳು ಜನರ ಪ್ರಗತಿಗಾಗಿ ಘೋಷಣೆ ಮಾಡುವ ಯೋಜನೆಗಳ ಮುಂದುವರಿಕೆಗಾಗಿಯೂ ಕೆಲವೊಮ್ಮೆ ಜನ ಮತ್ತೆ ಹಿಂದಿನ ಸರಕಾರವನ್ನೇ ಆರಿಸುತ್ತದೆ ಎಂಬುದೂ ಅಧ್ಯಯನಗಳಲ್ಲಿ ಬಹಿರಂಗವಾಗಿದೆ.

ಇದರ ಜತೆಗೆ ಸ್ಥಿರವಾದ ನಾಯಕತ್ವ, ಫೈರ್‌ಬ್ರ್ಯಾಂಡ್‌ ವರ್ತನೆ ಅಥವಾ ಸಂಪೂರ್ಣವಾಗಿ ತಮ್ಮ ರಾಜ್ಯದ ಜನರ ಕಲ್ಯಾಣದತ್ತ ನೀಡುವ ಗಮನಗಳೂ ಮತ್ತೆ ಮತ್ತೆ ಆರಿಸಿ ಬರಲು ಕಾರಣವಾಗಿವೆ. ಉದಾಹರಣೆಗೆ ನವೀನ್‌ ಪಾಟ್ನಾಯಕ್‌, ಮಮತಾ ಬ್ಯಾನರ್ಜಿ ಅವರಿಗೆ ಅಂಶಗಳು ಪೂರಕವಾಗಿವೆ. ಇದುವರೆಗೆ ನವೀನ್‌ ಪಾಟ್ನಾಯಕ್‌ ಅವರು, ತಮ್ಮ ರಾಜ್ಯದ ಅಭಿವೃದ್ಧಿ ಬಿಟ್ಟು ಹೊರಗಿನ ಬಗ್ಗೆ ಮಾತನಾಡಲ್ಲ. ಚುನಾವಣೆ ವೇಳೆಯಷ್ಟೇ ಅವರು ರಾಜಕಾರಣ ಮಾಡುತ್ತಾರೆ ಎಂಬುದೂ ಅವರಿಗೆ ಸಹಕಾರಿಯಾಗಿದೆ. ಮಮತಾ ಅವರೂ ತಮ್ಮ ರಾಜ್ಯದಲ್ಲಿ ಖಡಕ್‌ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಅವರದ್ದೇ ಆದ ಅಭಿಮಾನಿ ವರ್ಗ ರೂಪಿಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್‌ಗೂ ಇದೇ ಸಹಾಯ ಮಾಡಿದರೆ, ಕೇರಳದಲ್ಲಿ ಪಿಣರಾಯಿ ವಿಜಯನ್‌ ಅವರ ಅಭಿವೃದ್ಧಿ ಕೆಲಸಗಳು ಕೈ ಹಿಡಿದಿವೆ.

-ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.