ಕೆನಡಾ ಪ್ರಧಾನಿಗೇಕೆ ಸಿಗಲಿಲ್ಲ “ಮೋದಿ ಅಪ್ಪುಗೆ’ಯ ಸ್ವಾಗತ?


Team Udayavani, Feb 28, 2018, 7:55 AM IST

modi.jpg

ಇದು 1939ರಲ್ಲಿ ನಡೆದ ಪ್ರಸಂಗ : ಜರ್ಮನ್‌ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಜೆಕೊಸ್ಲೋವಾಕಿಯಾವನ್ನು ತನ್ನ ಮೂರನೆಯ ಜರ್ಮನ್‌ ರಾಷ್ಟ್ರೀಯ ಕಕ್ಷೆಗೆ ಸೇರ್ಪಡೆಗೊಳಿಸಿದ. ಇದು ದ್ವಿತೀಯ ಮಹಾಯುದ್ಧಕ್ಕೆ ಹಾದಿ ಮಾಡಿಕೊಟ್ಟಿತು. ವಾಸ್ತವವಾಗಿ, ಅಂದಿನ ಜೆಕ್‌ ಅಧ್ಯಕ್ಷ ಎಮಿಲ್‌ ಹಚಾ ಅವರನ್ನು ಬರ್ಲಿನ್‌ಗೆ ಬರುವಂತೆ ಹಿಟ್ಲರ್‌ ಸರಕಾರ ತಾಕೀತು ಮಾಡಿತ್ತು; ಬಳಿಕ ಅವರ ರಾಷ್ಟ್ರವನ್ನು ನಾಝಿಗಳಿಗೆ ಶರಣಾಗುವಂತೆ ಒತ್ತಡ ಹೇರಿತ್ತು.

ಹಿಟ್ಲರ್‌ ಹಾಗೂ ಆತನ ವಿದೇಶ ಸಚಿವ ರಿಬ್ಬನ್‌ಟ್ರಾಪ್‌ ಇವರಿ ಬ್ಬರೂ ಸೇರಿ ಆಡಿದ ಈ ಪೈಶಾಚಿಕ ಆಟದಲ್ಲಿ ನಾವು ಗಮನಿಸ ಬೇಕಾದ ಅಂಶವೊಂದಿದೆ. ಅದೆಂದರೆ ಈ ಚಾಣಾಕ್ಷದ್ವಯರ ಸರ ಕಾರ ಅನುಸರಿಸಿದ್ದ ರಾಜಕೀಯ ಶಿಷ್ಟಾಚಾರ ನಿಜಕ್ಕೂ ಅಚ್ಚು
ಕಟ್ಟಾ ಗಿತ್ತು. ಅಂದು ಜೆಕ್‌ ಅಧ್ಯಕ್ಷರನ್ನು ಔಪಚಾರಿಕ ಗೌರವ ರಕ್ಷೆಯೊಂದಿಗೆ ಬರಮಾಡಿಕೊಳ್ಳಲಾಗಿತ್ತು. ಅವರನ್ನು ಬರ್ಲಿನ್‌ನ ಅತ್ಯುತ್ತಮ ಹೊಟೇಲ್‌ ಒಂದರಲ್ಲಿ ಇಳಿಸಿಕೊಳ್ಳಲಾಗಿತ್ತು. ಅಷ್ಟೇ ಏಕೆ ತನ್ನ ತಂದೆಯೊಂದಿಗೆ ಬಂದಿದ್ದ ಹಚಾ ಪುತ್ರಿಗೆ ಹಿಟ್ಲರ್‌ ಹೂ ಗುತ್ಛವನ್ನೂ, ಚಾಕಲೇಟ್‌ ಪೊಟ್ಟಣವನ್ನೂ ಕಳುಹಿಸಿ ಉಪಚರಿಸಿದ್ದ. ಎಷ್ಟೆಂದರೂ ಹಿಟ್ಲರ್‌ಗೆ ಸಿಹಿ ತಿನಿಸುಗಳೆಂದರೆ ಪ್ರಾಣ; ಬಹುಶಃ ಆತ ಉಳಿದೆಲ್ಲರಿಗೂ ಸಿಹಿ ಇಷ್ಟವೆಂದು, ಅದೇ ರೀತಿ ತನ್ನಂತೆಯೇ ಇತರರಿಗೂ ಯುದ್ಧಗಳೆಂದರೆ ಇಷ್ಟವೆಂದು ನಂಬಿದ್ದಿರಬೇಕು.

ನಾನಿಲ್ಲಿ ಹಿಟ್ಲರ್‌ನ ವೃತ್ತಾಂತವನ್ನು ಪ್ರಸ್ತಾವಿಸುತ್ತಿರುವುದಕ್ಕೆ ಕಾರಣವಿದೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಅವರಿಗೆ ತೋರಬೇಕಿದ್ದ ರಾಜತಾಂತ್ರಿಕ ಶಿಷ್ಟಾಚಾರವನ್ನು ನಾವು ತೋರಿಸಲಿಲ್ಲ. ಅವರನ್ನು ಅತ್ಯಂತ ಸಪ್ಪೆ ರೀತಿಯಲ್ಲಿ ದೇಶ ಬರಮಾಡಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ, ಟ್ರಾಡ್ನೂ ಅವರನ್ನು ರಾಷ್ಟ್ರಪತಿ ಭವನದ ಪಡಸಾಲೆಯಲ್ಲಿ ಸ್ವಾಗತಿಸಲಿಲ್ಲ. ಅಷ್ಟೇ ಏಕೆ, ಟ್ರಾಡ್ನೂ ಅವರು ಆಗ್ರಾ, ಚಂಡಿಗಢ ಹಾಗೂ ಅಹಮದಾಬಾದ್‌ಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಉತ್ತರಪ್ರದೇಶ, ಪಂಜಾಬ್‌ ಹಾಗೂ ಗುಜರಾತ್‌ ಮುಖ್ಯಮಂತ್ರಿ ಗಳು ಅಧಿಕೃತವಾಗಿ ಬರಮಾಡಿಕೊಳ್ಳಲಿಲ್ಲ. ಕಾರಣ, ಕೆನಡಾ ಕುರಿತಂತೆ ಭಾರತಕ್ಕೊಂದು ಅಸಮಾಧಾನವಿದೆ. ಈಗ ಬಹುತೇಕ ತಣ್ಣಗಾಗಿರುವ ಖಾಲಿಸ್ಥಾನ್‌ ಚಳವಳಿ ಅಥವಾ ಪ್ರತ್ಯೇಕ ಸಿಕ್ಖ್ ರಾಷ್ಟ್ರ ಅಸ್ತಿತ್ವಕ್ಕೆ ಬರಬೇಕೆಂಬ ಆಗ್ರಹವನ್ನೊಳಗೊಂಡ ಆಂದೋಲನಕ್ಕೆ ಕೆನಡಾದ ಬೆಂಬಲವಿದೆಯೆಂಬುದು ಭಾರತದ ಆಕ್ಷೇಪ. ಕೆನಡಾದಲ್ಲಿ ಸಿಕ್ಖ್ ನಾಗರಿಕರು ಬಹು ಸಂಖ್ಯೆಯಲ್ಲಿದ್ದಾರೆ; ಅವರಲ್ಲಿ ಕೆಲವರು ಖಾಲಿಸ್ಥಾನ್‌ ಆಂದೋಲನದ ಬೆಂಬಲಿಗರು. ಟ್ರಾಡ್ನೂ ಅವರ ಲಿಬರಲ್‌ ಪಾರ್ಟಿಯೂ ಸರಕಾರದಲ್ಲಿ ರಕ್ಷಣಾ ಸಚಿವ ಹರ್‌ಜೀತ್‌ ಸಿಂಗ್‌ ಅವರನ್ನೊಳಗೊಂಡಂತೆ ನಾಲ್ವರು ಸಿಕ್ಖ್ ಸಚಿವರುಗಳಿದ್ದಾರೆ.

ಆದರೆ ಟ್ರಾಡ್ನೂ ಅವರನ್ನು ಬರಮಾಡಿಕೊಳ್ಳುವ ವಿಷಯದಲ್ಲಿ ನಾವು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲವಷ್ಟೆ; ಇಲ್ಲಿ ಯಾವುದೇ ರೀತಿಯ ಶಿಷ್ಟಾಚಾರ ಭಂಗದ ಪ್ರಶ್ನೆಯೇ ಉದ್ಭವಿಸು ವುದಿಲ್ಲ ಎಂಬ ನಿಲುವನ್ನು ಭಾರತ ಸರಕಾರ ಸ್ಪಷ್ಟಪಡಿಸಿದೆ. ಹಾಗೆ ನೋಡಿದರೆ, ದೇಶಕ್ಕೆ ಭೇಟಿ ನೀಡುವ ಪ್ರತಿಯೋರ್ವ ವಿದೇಶಿ ಪ್ರಧಾನಿಯನ್ನು ಅಥವಾ ವಿದೇಶವೊಂದರ ನಾಯಕನನ್ನು
ರಾಷ್ಟ್ರದ ಪ್ರಧಾನಿ ಖುದ್ದಾಗಿ ಎದ್ದು ಹೋಗಿ ಬರಮಾಡಿಕೊಳ್ಳುವ ಅಗತ್ಯವಿಲ್ಲ. ಶಿಷ್ಟಾಚಾರದ ಪ್ರಕಾರ, ದೇಶದ ಕ್ಯಾಬಿನೆಟ್‌ ಸಚಿವ ರೊಬ್ಬರು ಸ್ವಾಗತಿಸಿದರೆ ಸಾಕು. ಅಲ್ಲದೆ ದೇಶದ ಪ್ರಧಾನಿ ಹೀಗೆ ಭಾರತಕ್ಕೆ ಭೇಟಿ ನೀಡುವ ಹೊರದೇಶಗಳ ನಾಯಕರನ್ನು ಸ್ವಾಗತಿ ಸಿದರೆ, ಇದು ಶಿಷ್ಟಾಚಾರದ ಉಲ್ಲಂಘನೆಯೇ ಆಗುತ್ತದೆ ಎಂಬ ಅಭಿಪ್ರಾಯವನ್ನು ಕೆಲ ವಿದೇಶಾಂಗ ಕಾರ್ಯದರ್ಶಿಗಳು ವ್ಯಕ್ತಪಡಿಸಿದ್ದಾರೆ. ಟ್ರಾಡ್ನೂ ಅವರು ತನ್ನ ಭಾರತ ಭೇಟಿಯ ವೇಳೆ ಪ್ರಖ್ಯಾತ “ಮೋದಿ ಅಪ್ಪುಗೆ’ಯಿಂದ ವಂಚಿತರಾದ ಪ್ರಸಂಗ ಇದು. ಏನಿದ್ದರೂ ದಿಲ್ಲಿಯಲ್ಲಿ ಇನ್ನೊಂದು ಸಂದರ್ಭದಲ್ಲಿ ಮೋದಿಯ ವರು ಭೇಟಿಯಾದರೆನ್ನಿ.

ವಿದೇಶಾಂಗ ಸಂಬಂಧಗಳಲ್ಲಿ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ತುಂಬಾ ಮಹತ್ವವಿದೆ. ಶಿಷ್ಟಾಚಾರವೆನ್ನುವುದು ರಾಜಕಾರಣಕ್ಕೆ ಮಾತ್ರ ಸೀಮಿತವಲ್ಲ. ವಿವಾಹ ಸಮಾರಂಭದಂಥ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸ್ವಾಗತದಂಥ ಶಿಷ್ಟಾಚಾರಕ್ಕೆ ಪ್ರಾಮುಖ್ಯ ನೀಡಬೇಕಾಗುತ್ತದೆ. ನಮ್ಮ “ಜನಪ್ರಿಯ ರಾಜಕಾರಣಿ’ಗಳು ಏರ್ಪಡಿಸುವ ವಿವಾಹ ಸಮಾರಂಭಗಳಲ್ಲಿ ಭಾಗವಹಿಸುವ ಪ್ರಮೇಯ ಒದಗಿ ಬಂದುದಕ್ಕೆ ಆಮೇಲೆ ಪಶ್ಚಾತ್ತಾಪ ಪಟ್ಟ ಅನೇಕರ ಉದಾಹರಣೆಗಳು ನನಗೆ ಗೊತ್ತಿದೆ. ಕಾರಣ, ಇಂಥ ಸಮಾರಂಭ ಗಳಲ್ಲಿ ನಿಮ್ಮನ್ನು ಸ್ವಾಗತಿಸುವುದಕ್ಕೆ ಯಾರೂ ಇರುವುದಿಲ್ಲ. ಇಂಥ ಅದ್ಧೂರಿ ಸಮಾರಂಭಗಳನ್ನು ಮಂತ್ರಿಗಳ ಹಿತೈಷಿಗಳ್ಳೋ, ಇತರ ರಾಜಕಾರಣಿಗಳ್ಳೋ ಏರ್ಪಡಿಸಿರುತ್ತಾರೆ; ಇಂಥ ಮದುವೆಗಳಿಗೆ ಸಾವಿರಾರು ಜನರು ಬಂದು ಹೋಗುತ್ತಾರೆ ಇಂಥ ಮದುವೆ ಯೊಂದರಲ್ಲಿ ಉಂಟಾದ ಗದ್ದಲ, ಗೊಂದಲ, ನೂಕುನುಗ್ಗಲು ಇತ್ಯಾದಿಗಳನ್ನು ಸಹಿಸಲಾರದೆ ಮಾಜಿ ಸಚಿವರೊಬ್ಬರ ಮಗಳು ಕಲ್ಯಾಣ ಮಂಟಪದಲ್ಲೇ ತಲೆಸುತ್ತಿ ಬಿದ್ದ ಘಟನೆಯೂ ನಡೆದಿ ರುವುದುಂಟು. ಬ್ರಿಟಿಷರ ಕಾಲದಲ್ಲಿ “ರೆಸಿಡೆಂಟ’ರಂಥ ಅಧಿಕಾರಿ ಗಳನ್ನು ಬರಮಾಡಿಕೊಳ್ಳುವ ವಿಷಯದಲ್ಲಿ ಆಗಿನ ಸರಕಾರ, ನಮ್ಮ ಮಹಾರಾಜರುಗಳ ಮೇಲೆ ಕಟ್ಟುನಿಟ್ಟಿನ ಶಿಷ್ಟಾಚಾರ ಕ್ರಮಗಳನ್ನು ಹೇರಿದ್ದಿತ್ತು. ಅವರು ಬ್ರಿಟಿಷ್‌ ಅಧಿಕಾರಿಗಳಿಗೆ ಬೆನ್ನು ತೋರಿಸು ವಂತಿರಲಿಲ್ಲ. 1911ರಲ್ಲಿ ನಡೆದ ಪ್ರಖ್ಯಾತ ದಿಲ್ಲಿ ದರ್ಬಾರಿನ ಸಂದರ್ಭದಲ್ಲಿ ಐದನೆಯ ಜಾರ್ಜ್‌ ದೊರೆ ಹಾಗೂ ಅವರ ರಾಣಿಯೆದುರು ಅಸಭ್ಯವಾಗಿ ನಡೆದುಕೊಂಡದಕ್ಕಾಗಿ ಬರೋಡ ಸಂಸ್ಥಾನದ ಮಹಾರಾಜ, ಸಯ್ನಾಜಿ ರಾವ್‌ ಗಾಯಕ್ವಾಡ್‌ ಅವರನ್ನು ಪಟ್ಟದಿಂದ ಕೆಳಗಿಳಿಸುವುದಾಗಿ ಆಗಿನ ಬ್ರಿಟಿಷ್‌ ಆಡಳಿತ ಎಚ್ಚರಿಕೆ ನೀಡಿತ್ತು.
ಟ್ರಾಡ್ನೂ ಅವರ ಭೇಟಿಯ ಸಂಭ್ರಮವನ್ನು ಕುಗ್ಗಿಸಿದ ಇನ್ನೊಂದು ಅಂಶವೆಂದರೆ, ಮುಂಬಯಿಗೆ ಭೇಟಿಯಿತ್ತ ಕೆನಡಾ ಸರಕಾರದ ನಿಯೋಗದಲ್ಲಿ ಖಾಲಿಸ್ಥಾನ್‌ ಆಂದೋಲನಕಾರರ ಲ್ಲೊಬ್ಬರಾದ ಜಸ್ವಾಲ್‌ ಅತ್ವಾಲ್‌ ಅವರಿದ್ದುದು.

ಈ ನಡುವೆ ಕೇಳಬೇಕಾದ ಪ್ರಶ್ನೆಯೊಂದಿದೆ, ಖಾಲಿಸ್ಥಾನಿ ಹೋರಾಟದ ಬೆಂಬಲಿಗರಿಗೆ ಆಶ್ರಯವಿತ್ತ ರಾಷ್ಟ್ರವೆಂಬ ಅಸಮಾ ಧಾನ ಭಾರತಕ್ಕೆ ಇರುವಾಗ ಆ ರಾಷ್ಟ್ರದ ಪ್ರಧಾನಿಯ ಭಾರತ ಭೇಟಿಗೆ ನಮ್ಮ ಸರಕಾರ ಒಪ್ಪಿಗೆ ನೀಡಿದ್ದೇಕೆ? ನೀವು ಭಾರತಕ್ಕೆ ಬರಬೇಕಿಲ್ಲ, ನಮಗದು ಇಷ್ಟವಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಹೇಳಬಹುದಿತ್ತಲ್ಲ? ಜಸ್ಪಾಲ್‌ ಅತ್ವಾಲ್‌ಗೆ ವೀಸಾ ನೀಡುವ ಮೂಲಕ ನಮ್ಮ ವಿದೇಶಾಂಗ ವ್ಯವಹಾರ ಸಚಿವಾಲಯ ತಪ್ಪೆಸಗಿದೆಯೆಂದು ಹೇಳಬೇಕಾಗುತ್ತದೆ.

ಟ್ರಾಡ್ನೂ ಅವರ ಭೇಟಿ ನಿರರ್ಥಕವಾಗಿದೆಯೆನ್ನುವುದಾದರೆ, ಹೀಗಾಗುವುದಕ್ಕೆ ಕೆನಡಾ ಕೂಡ ಕಾರಣ. ಇದರ ಹೊಣೆಯನ್ನು ಅಲ್ಲಿನ ಸರಕಾರ ತಪ್ಪಿಸಿಕೊಳ್ಳುವಂತಿಲ್ಲ. ಟ್ರಾಡ್ನೂ ನೇತೃತ್ವದ ಲಿಬರಲ್‌ ಪಾರ್ಟಿ ಭಾರತದ ಭಾವನೆಗೆ ಬೆಲೆಕೊಡದೆ 2015ರ ರಾಷ್ಟ್ರೀಯ ಚುನಾವಣೆಯಲ್ಲಿ ಖಾಲಿಸ್ಥಾನ್‌ ಪರ ಸಿಕ್ಖರ ಮತಗಳಿಗೆ ಪ್ರಾಮುಖ್ಯ ನೀಡಿತು. 1984ರಲ್ಲಿ ಪಂಜಾಬಿನಲ್ಲಿ ಉಗ್ರವಾದ ಅತ್ಯಂತ ತೀವ್ರ ಸ್ವರೂಪದಲ್ಲಿದ್ದಾಗ ಆ ರಾಜ್ಯದಲ್ಲಿ ಸಂಭವಿಸುತ್ತಿದ್ದ ಸಿಕ್ಖರ ಹತ್ಯೆಯನ್ನು ಕೆನಡಾದ ಒಂಟಾರಿಯೋ ಪ್ರಾಂತ್ಯದ ವಿಧಾನ ಮಂಡಲ, “ಒಂದು ಜನಾಂಗದ ಸಮೂಹ ಹತ್ಯೆ’ ಎಂದು ಬಣ್ಣಿಸುವ ನಿರ್ಣಯವೊಂದನ್ನು ಅಂಗೀಕರಿಸಿತ್ತು.

ಆದರೆ 46ರ ಹರೆಯದ ಟ್ರೂಡ್ನೂ ಹಾಗೂ ಅವರ ಪತ್ನಿಯ ಭಾರತ ಭೇಟಿಯಲ್ಲಿನ ಒಂದು ಸ್ವಾರಸ್ಯಕರ ಅಂಶವನ್ನು ಗಮನಿ
ಸದೆ ಇರಲಾರೆವು. ಈ ದಂಪತಿ ತಮ್ಮ ಮೂವರು ಮಕ್ಕಳನ್ನೂ ಇಲ್ಲಿಗೆ ಕರೆ ತಂದಿದ್ದರು. ಆ ಮಕ್ಕಳು ಆಗ್ರಾದ ತಾಜಮಹಲ್‌, ಅಮೃತಸರದ ಸ್ವರ್ಣಮಂದಿರದ ಭೇಟಿಯಿಂದ ಹಾಗೂ ಕ್ರಿಕೆಟ್‌ ಆಟದಿಂದ ತುಂಬಾ ಖುಷಿಪಟ್ಟಂತೆ ಕಂಡುಬಂತು. ರಾಷ್ಟ್ರ ನಾಯಕನೊಬ್ಬ ತನ್ನ ಅಧಿಕೃತ ಭೇಟಿಯ ವೇಳೆ ಮಕ್ಕಳನ್ನೂ ಕರೆತರುವುದು; ಆತನಿಗೆ ಅಷ್ಟು ಚಿಕ್ಕ ವಯಸ್ಸಿನ ಮಕ್ಕಳಿರುವುದು ತೀರಾ ಅಪರೂಪದ ಸಂಗತಿ. “12 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ’ ಎಂಬಂಥ ಒಕ್ಕಣೆಯ ಆಮಂತ್ರಣ ಪತ್ರಿಕೆ ಗಳಿರುವುದಿಲ್ಲವೆ? ಹೆಚ್ಚಿನ ಆಮಂತ್ರಣ ಪತ್ರಿಕೆಗಳಲ್ಲಿ “ಡ್ರೆಸ್‌ ಕೋಡ್‌’ ಅನ್ನು ಕೂಡ ಸೂಚಿಸಿರುವುದುಂಟು. ಇದೇ ಕಾರಣಕ್ಕಾಗಿ ಎಷ್ಟೋ ಸಂದರ್ಭಗಳಲ್ಲಿ (ವರದಿಗಾರಿಗೆಗೆಂದು ಹೋಗುವ) ಪತ್ರಕರ್ತರು ಜಗಳಕ್ಕಿಳಿ ಯುವುದೂ ಉಂಟು. “ಪಾರ್ಟಿ’ಗಳಲ್ಲಿ,

ಸಾಮಾಜಿಕ ಸೌಹಾರ್ದ ಕೂಟಗಳಲ್ಲಿ ಚಿಕ್ಕಮಕ್ಕಳಿಗೆ ನಿಷೇಧ ಹೇರುವ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಟ್ರಾಡ್ನೂ ದಂಪತಿಗೆ ನಂಬಿಕೆಯಿಲ್ಲ ಎನ್ನೋಣವೇ?

ಆದರೆ ಭಾರತೀಯ ಸಂಸ್ಕೃತಿ ಭಿನ್ನವಾದುದು. ಇಲ್ಲಿ ಮಕ್ಕಳು ಪಾಲ್ಗೊಳ್ಳದ ಮದುವೆಗಳನ್ನು, ಮಕ್ಕಳ ಸುತ್ತಮುತ್ತ ಬೆಲೂನು ಮಾರುವವರ ಓಡಾಟವಿಲ್ಲದ ಮದುವೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ವಿದ್ಯುಕ್ತ/ಔಪಚಾರಿಕ ಸ್ವಾಗತದ ಶಿಷ್ಟಾಚಾರವನ್ನು ಇನ್ನೊಂದು ಮಗ್ಗುಲಿನಿಂದ ನೋಡುವುದಾದರೆ, ಭಾರತ ಕಳೆದ ಹಲವು ವರ್ಷಗಳಿಂದ ಗಡಿ ತಕರಾರು ತೆಗೆಯುತ್ತ ಬಂದಿರುವ ಪಾಕಿಸ್ಥಾನ ಹಾಗೂ ಚೀನಾದ ನಾಯಕರನ್ನು ಕೂಡ ಆದರದಿಂದಲೇ ಬರ ಮಾಡಿಕೊಂಡಿದೆ ಎಂಬುದನ್ನು ಅಗತ್ಯವಾಗಿ ಹೇಳಲೇಬೇಕಾಗು ತ್ತದೆ. ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರ ಬದಿಗೊತ್ತಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಖುದ್ದಾಗಿ ಬರಮಾಡಿಕೊಂಡಿ ದ್ದರು. ಚೀನಾ ದೇಶದ ಭಾವನೆಗಳಿಗೆ ನಾವು ಎಷ್ಟೊಂದು ಸೂಕ್ಷ್ಮವಾಗಿ ಪ್ರತಿಸ್ಪಂದಿಸುತ್ತೇವೆ ಎಂಬುದಕ್ಕೆ ಕ್ಸಿ ಜಿನ್‌ಪಿಂಗ್‌ ಅವರ ಹೆಸರನ್ನು ರೋಮನ್‌ ಸಂಖ್ಯೆಯೆಂದು ಭಾವಿಸಿ ಇಲೆವೆನ್‌ ಎಂದು ಉಚ್ಚರಿಸಿದ್ದ ದೂರದರ್ಶನದ ವಾರ್ತಾ ವಾಚಕಿಯೊಬ್ಬರನ್ನು ಸೇವೆ ಯಿಂದ ವಜಾಗೊಳಿಸಿದ್ದೇ ಸಾಕ್ಷಿ. ಭಾರತ ಮತ್ತು ಪಾಕಿಸ್ಥಾನದ ಪ್ರಧಾನಿಗಳು ಕೂಡ ವಿಶ್ವಸಂಸ್ಥೆಯ ಮಹಾಧಿವೇಶನದ (ನ್ಯೂಯಾರ್ಕ್‌) ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿದ್ದರು. ಹಾಗೆ ನೋಡಿದರೆ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿರುವುದು ಕೆನಡಾ ಮಾತ್ರವಷ್ಟೇ ಅಲ್ಲ; ನೇಪಾಲ ಕೂಡ, (ಇಂಗ್ಲಿಷ್‌ನಲ್ಲಿ ಇದನ್ನು ಭಾರತದ “ನೋ-ಪಾಲ್‌’ ಅರ್ಥಾತ್‌, “ಗೆಳೆಯನಲ್ಲ’ ಎಂದೇ ಲೇವಡಿ ಮಾಡಲಾಗುತ್ತಿದೆ), ಅಲ್ಲಿನ ರಾಜ ವಂಶಾಡಳಿತ ರದ್ದಾಗಿ ಕಮ್ಯೂನಿಸ್ಟರ ಆಳ್ವಿಕೆ ಶುರು ವಾದ ಬಳಿಕದ ದಿನಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತ ಬಂದಿದೆ. ಪುಟಾಣಿ ರಾಷ್ಟ್ರವಾದ ಮಾಲ್ದೀವ್ಸ್‌ ಕೂಡ ನಮ್ಮ ವಿರುದ್ಧ ತೆÌàಷಮಯ ಚಟುವಟಿಕೆಗಳಲ್ಲಿ ನಿರತವಾ ಗಿದೆ. ಇತ್ತೀಚಿನ ದಶಕಗಳಲ್ಲಿ ಆ ರಾಷ್ಟ್ರವನ್ನು ಸಾಮ್ರಾಜ್ಯಶಾಹಿ ಕಪಿಮುಷ್ಟಿಯಿಂದ ರಕ್ಷಿಸಲು ನಾವು ನಮ್ಮ ಮಿಲಿಟರಿ ಪಡೆಗಳನ್ನು ರವಾನಿಸಿ ಸ್ವತಂತ್ರಗೊಳಿಸಿದ್ದೆವು.

ಖಾಲಿಸ್ಥಾನಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸರಕಾರಕ್ಕಿರುವ ಅಸಂತೋಷವನ್ನು ಪಂಜಾಬಿನ ಮುಖ್ಯಮಂತ್ರಿ ಕ್ಯಾ| ಅಮರೀಂದರ್‌ ಸಿಂಗ್‌ ಅವರು ಟ್ರಾಡ್ನೂ ಮತ್ತವರ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲೇ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಾಡ್ನೂ ಅವರು, ತಮ್ಮ ರಾಷ್ಟ್ರ ಅಖಂಡ ಭಾರತ ತಣ್ತೀದ ಮೇಲೆ ನಂಬಿಕೆಯಿರಿಸಿದೆ ಎಂದೂ, ಯಾವುದೇ ಪ್ರತ್ಯೇಕ ತಾವಾದಿ ಆಂದೋಲನಕ್ಕೆ ತಮ್ಮ ಬೆಂಬಲವಿಲ್ಲವೆಂದೂ ಸ್ಪಷ್ಟ ಪಡಿಸಿದ್ದಾರೆ. ಕನಿಷ್ಠ ಪಕ್ಷ, ಟ್ರಾಡ್ನೂ ಅವರ ಈ ಭೇಟಿಯ ಗುಣಾತ್ಮಕ ಫ‌ಲಿತ ಇದು ಎನ್ನಬಹುದೇನೋ. ಕೆನಡಾ ದೇಶದ ಜತೆಗಿನ ನಮ್ಮ ದೀರ್ಘ‌ಕಾಲದ ಬಾಂಧವ್ಯವನ್ನು ಖಾಲಿಸ್ಥಾನ್‌ ವಿವಾದದ ನೆಪದಲ್ಲಿ ಹತ್ತಿಕ್ಕುವುದು ಸರಿಯಲ್ಲ. ಅಲ್ಲದೆ ಈಗ ಪಂಜಾಬಿನಲ್ಲಿ ಉಗ್ರವಾದದ ಮೂಲೋತ್ಪಾಟನೆಯಾಗಿದೆ. ಖಾಲಿಸ್ಥಾನಿ ಆಂದೋಲನ ಸ್ಥಗಿತಗೊಂಡಿದೆ; ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಕೆನಡಾದಲ್ಲಿ ಸುಮಾರು 14 ಲಕ್ಷ ಭಾರತೀಯರಿದ್ದಾರೆ; ಅಂದರೆ ಅಲ್ಲಿನ ಜನಸಂಖ್ಯೆಯ ಪೈಕಿ ಶೇಕಡಾ ನಾಲ್ಕರಷ್ಟು ಜನರು ಭಾರತೀಯರು. ಆ ರಾಷ್ಟ್ರದೊಂದಿಗಿನ ಭಾರತದ ಸಂಬಂಧ, ನಮ್ಮ ಸ್ವಾತಂತ್ರಾé ನಂತರದ ಮೊದ ಮೊದಲ ವರ್ಷಗಳಿಂದಲೇ ಬೆಳೆದು ಬಂದಿದೆ. ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಆ ಕಾಲದ ಕೆನಡಾದ ಪ್ರಧಾನಿಗಳಾದ ಲೂಯಿ ಸೈಂಟ್‌ ಲಾರೆನ್‌ ಹಾಗೂ ಲೆಸ್ಟರ್‌ ಪಿಯರ್‌ಸನ್‌ ಇವರುಗಳೊಂದಿಗೆ ಅತ್ಯುತ್ತಮ ಸ್ನೇಹ ಸಂಬಂಧವಿತ್ತು. ಕೊಲಂಬೊ ಯೋಜನೆಯಡಿ ಯಲ್ಲಿ ನಮ್ಮ ದೇಶಕ್ಕೆ ಕೊಡುಗೈದಾನಿಯಾಗಿ ಸಹಕರಿಸಿದ ದೇಶ ಕೆನಡಾ. ಕೆನಡಾ – ಭಾರತ ನಡುವಿನ ಸಂಬಂಧದಲ್ಲಿ ಈ ಹಿಂದೆಯೂ ಬಿರುಕು ಮೂಡಿದ್ದಿದೆ; ಅದು 1974ರಲ್ಲಿ ರಾಜಸ್ಥಾನ ದಲ್ಲಿ ನಡೆದ ಪರಮಾಣು ಪರೀಕ್ಷಾ ಪ್ರಯೋಗದ ಬಳಿಕ. ಅಂದು ಸೈರಸ್‌ ಪರಮಾಣು ಸಂಶೋಧನಾ ರಿಯಾಕ್ಟರ್‌ನಿಂದ ತಾನು ಭಾರತಕ್ಕೆ ಪೂರೈಕೆ ಮಾಡುತ್ತಿದ್ದ ಇಂಧನವನ್ನು ಭಾರತ ದುರುಪಯೋಗ ಪಡಿಸಿಕೊಂಡಿದೆಯೆಂದು ಕೆನಡಾ ಶಂಕಿಸಿತ್ತು. ಆದರೂ 2015ರಲ್ಲಿ ನಮಗೆ ಯುರೇನಿಯಂ ಪೂರೈಸಲು ಅದು ಒಪ್ಪಿಕೊಂಡಿತ್ತು.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.