ಬಾದಾಮಿಯಿಂದ ಸ್ಪರ್ಧೆ: ಸಿದ್ದರಾಮಯ್ಯನವರ “ದಿಟ್ಟ’ ನಡೆ


Team Udayavani, May 2, 2018, 8:50 AM IST

siddu1.jpg

ಹೆಗಡೆ ಅವರನ್ನು ಹೊರತುಪಡಿಸಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರೂ ತಮ್ಮ ತವರಿಗೆ ಹೊರತಾದ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ನಿಜಲಿಂಗಪ್ಪ ಹಳೆ ಮೈಸೂರು ಭಾಗದ ಮುಖಂಡರಾದರೂ ಲಿಂಗಾಯತ ಪ್ರಾಬಲ್ಯವಿರುವ ಮುಂಬೈ ಕರ್ನಾಟಕದಲ್ಲಿ ನೆಲೆ ಕಂಡು ಕೊಂಡವರು. 

ಒಬ್ಬ ಪತ್ರಕರ್ತನಾಗಿ ನಾನು ಕರ್ನಾಟಕದ ಹಲವು ಮುಖ್ಯ ಮಂತ್ರಿಗಳ ಕುರಿತಾಗಿ ಬರೆದಿದ್ದೇನೆ. ಕೆಲವರು ಜನಪ್ರಿಯ ನಾಯಕರು, ಇನ್ನೂ ಕೆಲವರು ಹಾಗೆಂದು ಭಾವಿಸಿಕೊಂಡವರು. ಕೆಲವರು “ಜನನಾಯಕ’ರೆಂದು, “ಮಣ್ಣಿನ ಮಗ’ ಎಂದು ಕರೆಸಿಕೊಂಡವರು.

ಜನರ ಪ್ರೀತಿಯನ್ನು ಗಳಿಸಿದ ಈ ಎಲ್ಲ ಮುಖ್ಯಮಂತ್ರಿಗಳು ಒಂದಿಷ್ಟು ಪ್ರಸಿದ್ಧಿಯನ್ನು ಹೊಂದಿರಬೇಕು. ದೇಶದ ಕೆಲವು ಕಡೆಗಳಲ್ಲಾದರೂ ತಮ್ಮ ನೆಲೆಯನ್ನು ಹೊಂದಿರಬೇಕು ಎಂಬುದು ಅಪೇಕ್ಷಣೀಯ. ಕನಿಷ್ಠ ಪಕ್ಷ ತಮ್ಮ ರಾಜ್ಯದ ಜನರ ಸದಭಿಪ್ರಾಯ ಹಾಗೂ ಪ್ರೀತಿಯನ್ನಾದರೂ ಸಂಪಾದಿಸಿರಬೇಕು. ಚುಟುಕಾಗಿ ಹೇಳಬೇಕೆಂದರೆ, ಅಖಂಡ ಕರ್ನಾಟಕಕ್ಕಾದರೂ ಅವರು ನಾಯಕ ರಾಗಿರಬೇಕು. ಆದರೆ ನಮ್ಮ ಬಹುತೇಕ ಮುಖ್ಯಮಂತ್ರಿಗಳು, ಮಂತ್ರಿಗಳು ಸ್ಥಳೀಯ ಮಟ್ಟದ ರಾಜಕಾರಣಿಗಳು ಅಥವಾ ನಿರ್ದಿಷ್ಟ ಜಾತಿ ಹಾಗೂ ಸಮುದಾಯವನ್ನು ಪ್ರತಿನಿಧಿಸುವ ನಾಯ ಕರು. ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರ ಚಾಮುಂಡೇಶ್ವರಿಯ ಜತೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಪ್ರಸ್ತುತವೆನಿಸಿದೆ.

ಚಾಮುಂಡೇಶ್ವರಿಯಲ್ಲಿ ಗೆಲ್ಲುವ ಖಾತ್ರಿ ಇಲ್ಲದಿರುವುದ ರಿಂದಲೇ ಸಿದ್ದರಾಮಯ್ಯ ಪರ್ಯಾಯವಾಗಿ ಬಾದಾಮಿಯಲ್ಲಿ ಸ್ಪರ್ಧಿಸಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿದ್ದರೂ ಮುಂಬೈ ಕರ್ನಾಟಕದ ಕ್ಷೇತ್ರವೊಂದರಲ್ಲಿ ಸ್ಪರ್ಧಿಸುವ ಎದೆಗಾರಿಕೆಯನ್ನು ಸಿದ್ದರಾಮಯ್ಯ ತೋರಿದ್ದಾರೆ ಎಂಬುದಂತೂ ಸತ್ಯ. ರಾಜ್ಯ ರಾಜಕೀಯದಲ್ಲಿ ಸುದೀರ್ಘ‌ ಅನು ಭವ ಹೊಂದಿರುವ ಹಾಗೂ ಸದ್ಯ ಮುಖ್ಯಮಂತ್ರಿಯಾಗಿರುವ ಅವರು ಬಾದಾಮಿಯ ಜನರಿಗೆ ಪರಿಚಿತರೇ ಆಗಿದ್ದಾರೆ. ಕುರುಬ ರಾಗಿರುವ ಸಿದ್ದರಾಮಯ್ಯ, ಚಾಮುಂಡೇಶ್ವರಿಯಂತೆಯೇ ಕುರುಬ ಸಮುದಾಯದ ಪ್ರಾಬಲ್ಯವಿರುವ ಮತ್ತೂಂದು ಕ್ಷೇತ್ರದಲ್ಲಿ ಕಣಕ್ಕಿಳಿದು ರಕ್ಷಣಾತ್ಮಕ ಆಟಕ್ಕಿಳಿದಿದ್ದಾರೆ ಎಂದು ಟೀಕೆಗಳೂ ಇವೆ. ಹಾಗೆ ನೋಡಿದರೆ, ಹಳೆ ಮೈಸೂರು ಪ್ರಾಂತದಲ್ಲೇ ಮತ್ತೂಂದು ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳಬಹುದಿತ್ತು.

ಉತ್ತರ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲಿನ ಕಹಿ ಉಂಡಿರುವ ಸಿದ್ದರಾಮಯ್ಯ ಈ ಸಲ ಬಾದಾಮಿಯಲ್ಲಿ ಸ್ಪರ್ಧಿಸುವ ಧೈರ್ಯ ತೋರಿದ್ದಾರೆ ಎಂಬುದು ನನ್ನ ಅನಿಸಿಕೆ. 1991ರ ಲೋಕ ಸಭಾ ಚುನಾವಣೆಯಲ್ಲಿ ಆಗ ಜನತಾದಳದಲ್ಲಿದ್ದ ಸಿದ್ದರಾಮಯ್ಯ ಕೊಪ್ಪಳದಲ್ಲಿ ಸ್ಪರ್ಧಿಸಿ ಕಾಂಗ್ರೆಸಿನ ಬಸವರಾಜ ಪಾಟೀಲ ಅನ್ವರಿ ವಿರುದ್ಧ ಸೋಲುಂಡಿದ್ದರು. ಈ ವಿಧಾನಸಭಾ ಚುನಾವಣೆಯಲ್ಲಿ ಅವರು ಬಾದಾಮಿಯನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿ ಕೊಂಡಿದ್ದಾರೆ. ಬಾದಾಮಿಯಿಂದ ಗೆದ್ದು ರಾಜ್ಯಾದ್ಯಂತ ಜನಪ್ರಿಯತೆ ಹೊಂದಿರುವ ರಾಜಕಾರಣಿ ಎಂಬು ದನ್ನು ಸಾಬೀತು ಮಾಡುವುದು ಅವರ ಉದ್ದೇಶವಿದ್ದೀತು.

ವಾರಾಣಸಿಯಲ್ಲಿ ಮೋದಿ ಗೆಲವು
ಇದೇ ನೆಲೆಯಲ್ಲಿ ಬಿಜೆಪಿಯ ಸಂಭಾವ್ಯ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯಿಂದ ತಮ್ಮ ಅದೃಷ್ಟ ಪರೀಕ್ಷೆ ಮಾಡಬಹುದಿತ್ತು. ಹುಟ್ಟೂರಾದರೂ ಅವರ ದುರದೃಷ್ಟಕ್ಕೆ ಕೃಷ್ಣರಾಜಪೇಟೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ನಿರ್ಣಾಯಕವಾಗಿರುವ ಕಾರಣ, ಮಳವಳ್ಳಿ ಹೊರತು ಪಡಿಸಿ ಇಲ್ಲಿ ಬೇರೆ ಜಾತಿ ಅಥವಾ ಸಮುದಾಯದ ಅಭ್ಯರ್ಥಿ
ಗಳು ಗೆಲ್ಲುವ ಸಾಧ್ಯತೆ ಕಮ್ಮಿ. ಆದರೆ ಮಳವಳ್ಳಿ ದೀರ್ಘ‌ ಕಾಲದಿಂದ ಎಸ್‌.ಸಿ. ಸಮುದಾಯಕ್ಕೆ ಮೀಸಲಾದ ಕ್ಷೇತ್ರ. 1978ರಲ್ಲಿ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಮಂಡ್ಯದಲ್ಲಿ ಕಣಕ್ಕಿಳಿಸಿ ನೋಡಿತ್ತು. ಆದರೆ ಜನತಾದಳ ಅಭ್ಯರ್ಥಿ ಎದುರು ಅವರು ಪರಾ ಜಯ ಅನುಭವಿಸಬೇಕಾಯಿತು. ಮೇಲುಕೋಟೆ (ಮೊದಲು ಪಾಂಡವಪುರ ಆಗಿತ್ತು) ಕ್ಷೇತ್ರದಿಂದ ಗೆದ್ದ ಕೆ.ಎಸ್‌. ಪುಟ್ಟಣ್ಣಯ್ಯ ಅವರಂಥ ಕೆಲವರು ಮಾತ್ರ ಇದಕ್ಕೆ ಅಪವಾದ. ರೈತ ಹೋರಾಟದ ಹಿನ್ನೆಲೆ ಪುಟ್ಟಣ್ಣಯ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಹಿಂದೆ ಕುರುಬ ಸಮುದಾಯದವ ಚಿಗರಿ ಗೌಡರು ನಾಗಮಂಗಲ ಕ್ಷೇತ್ರದಿಂದ ಜಯಿಸಿದ್ದರು.

ಅದೇ ರೀತಿ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರೂ ಹೊಸ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡು ತಮ್ಮ ಜನಪ್ರಿಯತೆಯನ್ನು ಸಾಬೀತು ಮಾಡಲು ಅವಕಾಶವಿತ್ತು.
ದಶಕಗಳಿಂದಲೂ ರಾಜ್ಯ ಹಾಗೂ ದೇಶದ ಜನರು ಸ್ಥಳೀಯ ಅಭ್ಯರ್ಥಿಗಳಿಗೆ, ಪ್ರಬಲ ಜಾತಿ ಅಥವಾ ಸಮುದಾಯದ ನಾಯಕ ರಿಗೆ ಹಾಗೂ ಪ್ರಮುಖ ಪಕ್ಷಗಳ ಉಮೇದುವಾರರಿಗೆ ಆದ್ಯತೆ ನೀಡುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತಿನಿಂದ ದೂರದಲ್ಲಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದು ಶ್ಲಾಘನೀಯ ಸಾಧನೆ. ಇಂದಿರಾ ಗಾಂಧಿ ಅವರನ್ನು ಹೊರತುಪಡಿಸಿ ಯಾವುದೇ ಪ್ರಧಾನಿ ಅಥವಾ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯೊಬ್ಬರು ತಮ್ಮ ರಾಜ್ಯದ ಹೊರಗೆ ಸ್ಪರ್ಧಿಸುವ ಧೈರ್ಯ ತೋರಿಸಿಲ್ಲ. ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ 1978ರ ಸೆಪ್ಟಂಬರ್‌ ತಿಂಗಳಲ್ಲಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಅನಿವಾರ್ಯತೆ ಇಂದಿರಾ ಗಾಂಧಿ ಅವರಿಗೆ ಎದುರಾಗಿತ್ತು. 1977ರ ಜನತಾ ಅಲೆಯಿಂದ ಪಾರಾದ ಕಾಂಗ್ರೆಸ್‌ ಕೋಟೆ ಎಂಬ ಕಾರಣಕ್ಕಾಗಿ ಕರ್ನಾಟಕದ ಕ್ಷೇತ್ರವನ್ನು ಇಂದಿರಾ ಆಯ್ದುಕೊಂಡರು. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರೂ 1984ರ ಸಾರ್ವತ್ರಿಕ ಚುನಾವಣೆಯಲ್ಲಿ ತವರು ಕ್ಷೇತ್ರ ವಾರಂಗಲ್ಲಿನಲ್ಲಿ ಬಿಜೆಪಿಯ ಜಂಗಿ ರೆಡ್ಡಿ ಅವರ ಕೈಯಲ್ಲಿ ಸೋಲುಂಡ ಮೇಲೆ ಉಪಚುನಾವಣೆಯಲ್ಲಿ ಮಹಾರಾಷ್ಟ್ರ ರಾಜ್ಯದ ರಾಮ್‌ಟೇಕ್‌ ಕ್ಷೇತ್ರಕ್ಕೆ ವಲಸೆ ಹೋಗಿ ಗೆಲ್ಲಬೇಕಾಯಿತು. ನರಸಿಂಹರಾಯರನ್ನು ಸೋಲಿಸಿದ ಜಂಗಿ ರೆಡ್ಡಿ ಹಾಗೂ ಗುಜರಾತಿನಿಂದ ಲೋಕಸಭೆಗೆ ಆಯ್ಕೆಯಾದ ಆರ್‌.ಕೆ. ಪಟೇಲ್‌ ಬಿಜೆಪಿಯಿಂದ ಗೆದ್ದವರು. ಎಂಟನೇ ಲೋಕಸಭೆಯಲ್ಲಿ ಆದ್ದ ಬಿಜೆಪಿ ಸಂಸದರು ಇವರಿಬ್ಬರೇ. ಅವರನ್ನು ಬಿಜೆಪಿಯ ಎಷ್ಟು ನಾಯಕರು ಈಗಲೂ ನೆನಪಿಟ್ಟುಕೊಂಡಿದ್ದಾರೆ?

ಕರ್ನಾಟಕದ ಮುಖ್ಯಮಂತ್ರಿಗಳ ಪೈಕಿ ತವರು ಕ್ಷೇತ್ರದಿಂದ ಹೊರಗಡೆ ಸ್ಪರ್ಧಿಸಿ ಗೆದ್ದಿರುವ ಹಾಗೂ ಸೋತಿರುವ ದಾಖಲೆ ಹೊಂದಿರುವುದು ರಾಮಕೃಷ್ಣ ಹೆಗಡೆ ಅವರು ಮಾತ್ರ. 1957 ಹಾಗೂ 1962ರಲ್ಲಿ ಅವರನ್ನು ಆರಿಸಿ ಕಳುಹಿಸಿದ ಶಿರಸಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. 1967ರಲ್ಲಿ ನಡೆದ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದವರಾದ ಎಂ.ಎಚ್‌. ಜಯಪ್ರಕಾಶ ನಾರಾಯಣ ಶಿರಸಿ ಕ್ಷೇತ್ರದಲ್ಲಿ ಜನಪ್ರಿಯರಲ್ಲ ದಿದ್ದರೂ ಆಯ್ಕೆಯಾದರು. ದಾಖಲೆಗಳಲ್ಲಿ ರಾಮಕೃಷ್ಣ ಮಹಾಬಲೇಶ್ವರ ದೊಡ್ಡಮನೆ ಎಂದಿರುವ ರಾಮಕೃಷ್ಣ ಹೆಗಡೆಯವರು ಹೊಸ ಕ್ಷೇತ್ರವನ್ನು ಕಂಡುಕೊಳ್ಳಬೇಕಾಯಿತು. ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಅವರು 1983ರಲ್ಲಿ ಕನಕಪುರ ಹಾಗೂ ಆಮೇಲೆ ಬೆಂಗಳೂರಿನ ಬಸವನಗುಡಿಯಿಂದ ಶಾಸಕರಾಗಿ ಆಯ್ಕೆಯಾದರು.
ರಾಮಕೃಷ್ಣ ಹೆಗಡೆಯವರ ರಾಜಕೀಯ ಬದುಕಿಗೆ ದೊಡ್ಡ ಹೊಡೆತ ನೀಡಿದ್ದು, 1991ರ ಲೋಕಸಭಾ ಚುನಾವಣೆ.

ತಾವು ರಾಷ್ಟ್ರೀಯ ನಾಯಕರು, ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾದವರು ಎಂಬ ಭ್ರಮೆಯಲ್ಲಿ ಅವರು ಉತ್ತರ ಕರ್ನಾಟಕದ ಬಾಗಲಕೋಟೆಯಿಂದ ಕಣಕ್ಕಿಳಿದರು. ಆದರೆ, ಲಿಂಗಾಯತ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸಿನ ಸಿದ್ದು ನ್ಯಾಮಗೌಡರ ವಿರುದ್ಧ ಹೀನಾಯವಾಗಿ ಸೋತರು. ಅಲ್ಲಿಯವರೆಗೂ ಹೆಗಡೆಯವರು ಲಿಂಗಾಯತರು ತಮ್ಮ ಬೆಂಬಲಕ್ಕಿದ್ದಾರೆಂದು ನಂಬಿದ್ದರು. ಬಹುಶಃ ಇದೇ ಕಾರಣಕ್ಕಾಗಿ ಅವರು ಮುಂದಿನ ಮುಖ್ಯಮಂತ್ರಿಯಾಗಿ ದೇವೇಗೌಡರ ಬದಲು ಎಸ್‌.ಆರ್‌. ಬೊಮ್ಮಾಯಿ ಅವರನ್ನು ಪರಿಗಣಿಸಿದ್ದರು.

ಬಾಗಲಕೋಟೆಯ ಆಘಾತದ ಬಳಿಕ ರಾಮಕೃಷ್ಣ ಹೆಗಡೆಯವರು ರಾಜಕೀಯವಾಗಿ ಚೇತರಿಸಿಕೊಳ್ಳಲೇ ಇಲ್ಲ.
ಹೆಗಡೆ ಅವರನ್ನು ಹೊರತುಪಡಿಸಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರೂ ತಮ್ಮ ತವರಿಗೆ ಹೊರತಾದ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ನಿಜಲಿಂಗಪ್ಪ ಹಳೆ ಮೈಸೂರು ಭಾಗದ ಮುಖಂಡರಾದರೂ ಲಿಂಗಾಯತ ಪ್ರಾಬಲ್ಯವಿರುವ ಮುಂಬೈ ಕರ್ನಾಟಕದಲ್ಲಿ ತಮ್ಮ ರಾಜಕೀಯ ನೆಲೆ ಕಂಡು ಕೊಂಡವರು. ತಮ್ಮ ತವರು ಕ್ಷೇತ್ರವಾದ ಹೊಸದುರ್ಗದಲ್ಲಿ ನಿಜಲಿಂಗಪ್ಪ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಸ್‌ಪಿ ಅಭ್ಯರ್ಥಿ ರಂಗಪ್ಪ ಅವರ ಎದುರು ಹೀನಾಯವಾಗಿ ಸೋತರು. ಉಪ ಚುನಾವಣೆಯಲ್ಲಿ ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿದ್ದು ಇದೇ ಬಾಗಲಕೋಟೆ ಕ್ಷೇತ್ರ.

ಎಚ್‌.ಡಿ. ದೇವೇಗೌಡರೂ ಹಾಸನ ಜಿಲ್ಲೆ ಹೊಳೆ ನರಸೀಪುರ ದಿಂದ ಬೆಂಗಳೂರು ಗ್ರಾಮಾಂತರದ ರಾಮನಗರ ವಿಧಾನ ಸಭಾ ಕ್ಷೇತ್ರಕ್ಕೆ ತಮ್ಮ ನೆಲೆ ಬದಲಾಯಿಸಿಕೊಂಡರು ಎಂಬುದೇನೋ ನಿಜ. ಆದರೆ, ಎರಡೂ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳು ಎಂಬುದು ಗಮನಾರ್ಹ.

ಸುಚೇತಾ ಕೃಪಲಾನಿ ದಾಖಲೆ
ರಾಷ್ಟ್ರೀಯ ಮಟ್ಟದಲ್ಲೂ ತಮ್ಮದಲ್ಲದ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದ ಕೆಲವು ಮುಖ್ಯಮಂತ್ರಿಗಳಿದ್ದಾರೆ. ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿಯ ಸುಚೇತಾ ಕೃಪಲಾನಿ ಅವರದು ಉತ್ಕೃಷ್ಟ ನಿದರ್ಶನ. ಅವರು 1963-67ರ ಅವಧಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಸುಚೇತಾ ಅವರು ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಕಾಂಗ್ರೆಸಿಗ ಹಾಗೂ ಸಂಸದ ಆಚಾರ್ಯ ಜೆ.ಬಿ. ಕೃಪಲಾನಿ ಅವರ ಪತ್ನಿ. ಸುಚೇತಾ ಕೃಪಲಾನಿ ಮೂಲತಃ ಬಂಗಾಳಿ (ಬ್ರಹ್ಮೋ ಸಮಾಜದಲ್ಲಿ ಹುಟ್ಟಿದ ಅವರ ಮೂಲ ಹೆಸರು ಸುಚೇತಾ ಮುಜುಂದಾರ್‌). ಅವರ ಕುಟುಂಬ ಉತ್ತರ ಭಾರತದಲ್ಲೇ ನೆಲೆಸಿತು. ದಿಲ್ಲಿಯ ಇಂದ್ರಪ್ರಸ್ಥ ಕಾಲೇಜಿನಿಂದ ಪದವಿ ಪಡೆದ ಸುಚೇತಾ, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದರು. ಜೆ.ಬಿ. ಕೃಪಲಾನಿ ಅವರು ಸಿಂಧಿ ಭಾಷಾ ಸಮುದಾಯದವರು. ದೇಶ ವಿಭಜನೆಯ ಸಂದರ್ಭದಲ್ಲಿ ತಾವು ಹುಟ್ಟಿ ಬೆಳೆದ ಪ್ರದೇಶ ಪಾಕಿಸ್ಥಾನದ ಪಾಲಾದ ಮೇಲೆ ಅವರಿಗೆ ರಾಜ್ಯವೇ ಇಲ್ಲದಂತಾಯಿತು. ಎಲ್‌.ಕೆ. ಆಡ್ವಾಣಿ ಸಹಿತ ಕೆಲವು ಸಿಂಧಿ ರಾಜಕಾರಣಿಗಳಂತೆ ಕೃಪಲಾನಿಯವರೂ ತವರು ಕ್ಷೇತ್ರವಿಲ್ಲದವ ರಾದರು. ದೇಶ ವಿಭಜನೆಯ ವೇಳೆ ರಾಜಕೀಯವಾಗಿ ಹೆಚ್ಚು ಘಾಸಿಗೊಂಡವರೆಂದರೆ, ಸಿಂಧಿಗಳೇ. ಜೆ.ಬಿ. ಕೃಪಲಾನಿ ಅವರು ಮುಂದೆ ಕಾಂಗ್ರೆಸೇತರ ವಿಪಕ್ಷದ ನೇತಾರರಾದರು ಹಾಗೂ ಪ್ರಧಾನಿ ನೆಹರು ಅವರ ವಿರೋಧವನ್ನೂ ಕಟ್ಟಿಕೊಂಡರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ “ತಾಂತ್ರಿಕವಾಗಿ’ ಉತ್ತರಪ್ರದೇಶದ ರಾಜಕಾರಣಿಯಲ್ಲ. ಏಕೆಂದರೆ, ಅಜಯ್‌ ಮೋಹನ ಬಿಷ್ಟ್ (ಯೋಗಿ ಆದಿತ್ಯನಾಥರ ಪೂರ್ವಾಶ್ರಮದ ಹೆಸರು) ಅವರು (ಉತ್ತರ ಪ್ರದೇಶದಿಂದಲೇ ಪ್ರತ್ಯೇಕಗೊಂಡು ರಚನೆಯಾದ) ಉತ್ತರಾಖಂಡದ ಪೌರಿ ಗಡ್ವಾಲ್‌ ಎಂಬಲ್ಲಿ ಜನಿಸಿದವರು.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.