ಮುನ್ನೆಲೆಗೆ ಬರುತ್ತಿರುವ ದೇಶ ವಿಭಜನೆ ಹೊತ್ತಿನ ವಲಸಿಗರ ಆಸ್ತಿಗಳು


Team Udayavani, Jan 2, 2019, 2:46 AM IST

x-27.jpg

ಬೆಂಗಳೂರಿನಲ್ಲಿದ್ದ ಮೊಹಮ್ಮದ್‌ ಅಲಿ ಜಿನ್ನಾ ಅವರ ಆಸ್ತಿ ಏನಾಗಿದೆ ಮತ್ತು ಅದು ಕಟ್ಟಡವೋ ಅಥವಾ ಖಾಲಿ ಜಾಗವೋ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ. ಇದು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿಯೇ ಇದ್ದಿರಬೇಕು. ಇದನ್ನು ಅಂದು ಮೈಸೂರು ಸರಕಾರವು ಸ್ಥಳಾಂತರ ಹೊಂದಿದ ಆಸ್ತಿ ಎಂದು ಘೋಷಿಸಿರಬಹುದು. 

ದೇಶ ವಿಭಜನೆಯಾಗುವ ಕೆಲವು ತಿಂಗಳ ಮೊದಲು ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ ಅವರು ಬೆಂಗಳೂರಿನಲ್ಲಿ ಆಸ್ತಿ ಖರೀದಿಸಿದ್ದರು ಎಂಬ  ತುಂಬಾ ಆಸಕ್ತಿಯ ಮತ್ತು ಆಶ್ಚರ್ಯಕರವಾದ ಸುದ್ದಿಯನ್ನು ತಿಳಿದುಕೊಂಡೆ.  ಈ ಸುದ್ದಿಯು ದೇಶದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಶಾಂಕ್‌ ಅವರಿಂದಲೇ ಬಂದಿರುವುದರಿಂದ ಅದನ್ನು ತಿರಸ್ಕರಿಸುವಂತಿರಲಿಲ್ಲ. ಅವರು ಆಂಗ್ಲಪತ್ರಿಕೆಗೆ ಬರೆದಿದ್ದ ಒಂದು ಲೇಖನದಲ್ಲಿ ಈ ವಿಷಯವನ್ನು ತಿಳಿಸಿದ್ದರು. ಅಮೆರಿಕ ಮತ್ತು ಕೆನಡಾದ ನಡುವಿನ ಸಂಬಂಧದಂತೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಇರಬಹುದಾದ ಸಾಧ್ಯತೆಯಿದ್ದುದರಿಂದ ಜಿನ್ನಾ ಅವರು ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದರು ಎಂದು ಶಶಾಂಕ್‌ ಆ ಲೇಖನದಲ್ಲಿ ತಿಳಿಸಿದ್ದರು. ಪಾಕಿಸ್ತಾನದಲ್ಲಿರುವ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾಕರನ್ನು ನೋಡಿಕೊಳ್ಳುವ ಪ್ರಕಾರ, ಪಾಕಿಸ್ತಾನೀಯರು ಭಾರತದಲ್ಲಿ ಆಸ್ತಿ ಹೊಂದಬಹುದು ಎಂದು ಜಿನ್ನಾ ಭಾವಿಸಿದ್ದುದು ತಪ್ಪೆಂದು ಸಾಬೀತಾಗಿದೆ. 

ಬೆಂಗಳೂರಿನಲ್ಲಿದ್ದ ಜಿನ್ನಾ ಅವರ ಆಸ್ತಿ ಏನಾಗಿದೆ ಮತ್ತು ಅದು ಕಟ್ಟಡವೋ ಅಥವಾ ಖಾಲಿ ಜಾಗವೋ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ. ಇದು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿಯೇ ಇದ್ದಿರಬೇಕು. ಇದನ್ನು 1950ರ ಯುದ್ಧ ಅಥವಾ ಅಶಾಂತಿಯಿಂದ ಸ್ಥಳಾಂತರ ಹೊಂದಿದ ಆಸ್ತಿ ಕಾಯಿದೆ ಅಡಿಯಲ್ಲಿ ಮೈಸೂರು ಸರಕಾರವು ಸ್ಥಳಾಂತರ ಹೊಂದಿದ ಆಸ್ತಿ ಎಂದು ಘೋಷಿಸಿರಬಹುದು. ಈ ಕಾನೂನಿನ ಅಡಿಯಲ್ಲಿ ದೇಶ ವಿಭ‌ಜನೆಯ ಸಂದರ್ಭದಲ್ಲಿ ಯಾರು ಪಾಕಿಸ್ತಾನದಲ್ಲಿ ವಾಸಿಸಲು ಬೇಕಾಗಿ ಭಾರತವನ್ನು ತೊರೆದಿದ್ದಾರೋ ಅಂಥವರ ಆಸ್ತಿಯ ಹಕ್ಕನ್ನು ಸರಕಾರ ಹಿಂಪಡೆಯುತ್ತಿತ್ತು. ಈ ಕಾಯಿದೆಯ ಪ್ರಕಾರ, ಯಾರು ಪಾಕಿಸ್ತಾನಕ್ಕೆ ಹೋಗಿದ್ದಾರೋ ಅಂಥವರಿಗೆ ಭಾರತದಲ್ಲಿರುವ ಆಸ್ತಿಯ ಕುರಿತು ಆಸಕ್ತಿಯಿಲ್ಲ ಎಂದು ಪರಿಗಣಿಸಲಾಗುತ್ತಿತ್ತು. ದೇಶ ವಿಭ‌ಜನೆ ಕಾಲದಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದವರ ಹೆಚ್ಚಿನ ಆಸ್ತಿಯನ್ನು ಇಲ್ಲಿನವರು ತುತ್ಛ ಬೆಲೆಗೆ ಖರೀದಿಸಿದ್ದರು ಮತ್ತು ಅದು ಈಗ ಭಾರೀ ಬೆಲೆಬಾಳುವ ರಿಯಲ್‌ ಎಸ್ಟೇಟ್‌ ಆಸ್ತಿಗಳಾಗಿ ಕಂಡು ಬರುತ್ತಿವೆ. ಇದೇ ಸ್ಥಿತಿಯು ಪಾಕಿಸ್ತಾನದಲ್ಲೂ ಇದೆ. ಅಲ್ಲಿಂದ ಬಲವಂತವಾಗಿ ಹೊರಬೀಳಬೇಕಾದ ಹಿಂದೂಗಳು ಮತ್ತು ಇತರರ ಆಸ್ತಿಗೆ ಅಲ್ಲೂ ಈ ಪರಿಸ್ಥಿತಿಯೇ ಒದಗಿದೆ.  ಇದಕ್ಕೊಂದು ಉದಾಹರಣೆಯಾಗಿ ಹೇಳುವುದಾದರೆ, ನಮ್ಮ ಮಾಜಿ ಉಪ ಪ್ರಧಾನಿ ಎಲ್‌.ಕೆ. ಆಡ್ವಾಣಿ ಅವರ ಹಿರಿಯರಿದ್ದ ಕರಾಚಿಯ ಮನೆಯನ್ನೂ ಮಾರಾಟ ಮಾಡಲಾಗಿದೆ. ಆ ಮನೆಯೊಂದಿಗಿನ ಒಂದು ಭಾವನಾತ್ಮಕ ಸಂಬಂಧ‌ದಿಂದ ಅಲ್ಲಿಗೆ ಭೇಟಿ ನೀಡಿದ್ದ ಆಡ್ವಾಣಿಯವರಿಗೆ ಅಲ್ಲಿ ಅವರ ಕುಟುಂಬದವರು ಬಿಟ್ಟು ಬಂದಿರುವ  ಪೀಠೊಪಕರಣಗಳು ಕಂಡು ಬಂದವು ಮತ್ತು ಸ್ವತಃ ಆಡ್ವಾಣಿ ನಿದ್ರಿಸುತ್ತಿದ್ದ ಮಂಚವನ್ನು ಆ ಮನೆಯ ಈಗಿನ ಮಾಲಕ ಬಳಸುತ್ತಿದ್ದುದು ಕಂಡುಬಂತು. ಪಾಕಿಸ್ತಾನದಲ್ಲಿದ್ದು, ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಸ್ಥಳಾಂತರವಾದವರು ತೊರೆದು ಬಂದಿದ್ದ ಆಸ್ತಿಯು, ಇಲ್ಲಿಂದ ಪಾಕಿಸ್ತಾನಕ್ಕೆ ಹೋಗಿದ್ದ ಮುಸ್ಲಿಮರು ಬಿಟ್ಟು ಹೋಗಿದ್ದ ಆಸ್ತಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಉನ್ನತ ಮಟ್ಟದಲ್ಲಿರಲಿಲ್ಲ. ಪಾಕಿಸ್ತಾನಕ್ಕೆ ಹೋದವರ ಸಾಲಿನಲ್ಲಿ ಅಘಾ ಹಿಲಾಲಿ ಮತ್ತು ಅಘಾ ಶಾಹಿ ಎಂಬಿಬ್ಬರು ಐಸಿಎಸ್‌ ಅಧಿಕಾರಿ ಸಹೋದರರು, ಆಗಿನ ಮೈಸೂರು ವಿಶ್ವವಿದ್ಯಾಲಯದ ವೈಸ್‌ ಚಾನ್ಸೆಲರ್‌ ಸುಲ್ತಾನ್‌ ಮೊಹಿಯುದ್ದೀನ್‌ ಮುಂತಾದ ಪ್ರತಿಷ್ಠಿತ ಮೈಸೂರಿಗರೂ ಸೇರಿದ್ದರು. ಅಘಾ ಸಹೋದರರು ಮೈಸೂರಿನ ಮಾಜಿ ದಿವಾನ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಅಳಿಯಂದಿರಾಗಿದ್ದರು. ಮೈಸೂರಿನ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿಯ ಕುಟುಂಬ ಸದಸ್ಯರೂ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.  ಅಘಾ ಸಹೋದರರು ಬೆಂಗಳೂರು ಕಂಟೋನ್ಮೆಂಟಿನ ನಿಜವಾದ ಭೂಮಾಲಕರಿದ್ದರು ಹಾಗೂ ಅವರು ಸುಮಾರು 29 ಬಂಗಲೆಗಳನ್ನು ತೊರೆದು ಹೋಗಿದ್ದರು! ಈಗಲೂ ಅಲಸೂರಿನ ರಸ್ತೆಯೊಂದು ಅಘಾ ಸಹೋದರರ ಅಜ್ಜ ಅಘಾ ಅಲಿ ಹೆಸರನ್ನು ಹೊಂದಿದೆ.

ಜಿನ್ನಾ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಿದುದಕ್ಕೂ ಒಂದು ಕಾರಣವಿದೆ. ಬ್ಯಾರಿಸ್ಟರ್‌ ಆಗಿ ಹಾಗೂ ರಾಜಕಾರಣಿಯಾಗಿ ಹೆಚ್ಚಿನ ಕಾಲ ಬಾಂಬೆಯಲ್ಲಿದ್ದರೂ ಅವರು ರಜಾಕಾಲವನ್ನು ಬೆಂಗಳೂರಿನಲ್ಲಿ ಕಳೆದಿದ್ದರು ಮತ್ತು ಮೈಸೂರಿನ ಮಹಾರಾಜರ ಅತಿಥಿಯಾಗಿ 1941ರಲ್ಲಿ ನಂದಿ ಹಿಲ್ಸ್‌ನಲ್ಲಿದ್ದರು. ಮದ್ರಾಸಿಗೆ ಹೋಗಿದ್ದಾಗ ಅವರು ಅಸೌಖ್ಯಕ್ಕೆ ತುತ್ತಾಗಿದ್ದರು ಮತ್ತು ಅವರಿಗೆ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು. ಆಗ ಅವರು ಬೆಂಗಳೂರಿನಲ್ಲಿಯೇ ವಿಶ್ರಾಂತಿ ಪಡೆಯಲು ಬಯಸಿದ್ದರು. ನಂದಿ ಬೆಟ್ಟದ ತುದಿಯಲ್ಲಿರುವ ಕಬ್ಬನ್‌ ಹೌಸ್‌ನಲ್ಲಿ ಸ್ವಲ್ಪ ಕಾಲ ತಂಗಿದ್ದರು. ಆಗ ಅವರು ನಂದಿಬೆಟ್ಟದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದುದನ್ನು ಆಗಿನ ಪತ್ರಕರ್ತರಾಗಿದ್ದ ಕೆ.ಎಸ್‌. ರಾಮಸ್ವಾಮಿ ಮತ್ತು ಸಿ. ಸೇತುರಾಮ್‌ ಅವರು ನೆನಪಿಸಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಈಗಲೂ ಶಿಥಿಲಾವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಆಗಿನ ಕುಮಾರಕೃಪಾ ಸರಕಾರಿ ಅತಿಥಿಗೃಹದಲ್ಲಿ ಅವರು ತಂಗಿದ್ದರು. ಕುಮಾರಕೃಪವು ಮೂಲತಃ ದಿವಾನ್‌ ಸರ್‌ ಕೆ. ಶೇಷಾದ್ರಿ ಅಯ್ಯರ್‌ ಅವರ ಸ್ವಂತ ಮನೆಯಾಗಿತ್ತು. ಇಲ್ಲಿ ಅಯ್ಯರ್‌ ವಾಸ್ತವ್ಯವಿದ್ದಾಗ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧಿ ಅವರು ಇದೇ ಬಂಗಲೆಯಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಇತಿಹಾಸದ ಬಗೆಗಿನ ಯಾರಾದರೂ ಸಾಹಸಿಗರು ಬೆಂಗಳೂರಿನಲ್ಲಿದ್ದ ಜಿನ್ನಾನ ಆಸ್ತಿಯನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಬೇಕಿದೆ.

ಮುಂಬಯಿಯಲ್ಲಿರುವ ಜಿನ್ನಾ ಅವರ ಬಂಗಲೆ ಮೇಲಿನ ಪಾಕಿಸ್ತಾನದ ಹಕ್ಕನ್ನು ಭಾರತ ಸರಕಾರ ಇತ್ತೀಚೆಗೆ ತಳ್ಳಿ ಹಾಕಿರುವುದರಿಂದ ಬೆಂಗಳೂರಿನಲ್ಲಿರುವ ಜಿನ್ನಾ ಆಸ್ತಿಯು ಪ್ರಸ್ತುತ ಹೆಚ್ಚು ಮಹತ್ವ ಪಡೆಯುತ್ತದೆ. ಮುಂಬಯಿಯ ಮೌಂಟ್‌ ಫೆಸೆಂಟ್‌ ರಸ್ತೆಯಲ್ಲಿರುವ ಮಲಬಾರ್‌ ಹಿಲ್ಸ್‌ನಲ್ಲಿರುವ ಜಿನ್ನಾ ಅವರ “ಸೌತ್‌ ಕೋರ್ಟ್‌’ ಬಂಗಲೆಯು ಈಗ ವಿವಾದದಲ್ಲಿದೆ. ಇದರಲ್ಲಿ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ಮುಂಬಯಿಯಲ್ಲಿ ನಮ್ಮ ಕಾನ್ಸುಲೇಟ್‌ ಕಚೇರಿಯನ್ನು ಈ ಬಂಗಲೆಯಲ್ಲಿ ತೆರೆಯಲು ಬಯಸಿರುವುದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಭಾರತ ಸರಕಾರವು ದಿಲ್ಲಿಯಲ್ಲಿರುವ ಹೈದ್ರಾಬಾದ್‌ ಹೌಸ್‌ ಅನ್ನು ವಿದೇಶಿ ಗಣ್ಯರ ಜತೆಗಿನ ಸಭೆಗೆ ಬಳಸುವಂತೆ ಜಿನ್ನಾ ಬಂಗಲೆಯನ್ನು ಬಳಸಿಕೊಳ್ಳಲಾಗುವುದು ಎಂದು ಹೇಳುತ್ತಿದೆ. ಹೈದ್ರಾಬಾದ್‌ ಹೌಸ್‌ ಹೈದ್ರಾಬಾದಿನ ಮಾಜಿ ನಿಜಾಮನ ಬಂಗಲೆಯಾಗಿದೆ.

ಬಂಗಲೆಯ ಮೇಲೆ ತನ್ನ ಹಕ್ಕು ಸಾಧಿಸಲು ಎಂ.ಎ. ಜಿನ್ನಾ ಅವರ ಏಕೈಕ ಪುತ್ರಿ ದಿನಾ ಜಿನ್ನಾ ಅವರು 2007ರಲ್ಲಿ ಬಾಂಬೆ ಹೈಕೋರ್ಟಿನ ಮೆಟ್ಟಿಲೇರಿದ್ದರು. ಇವರು ಕಳೆದ ವರ್ಷ ತನ್ನ 98ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿನ ಬಳಿಕ ಆಕೆಯ ಪುತ್ರ ನುಸ್ಲಿ ವಾಡಿಯಾ (ಬಾಂಬೆ ಡೈಯಿಂಗ್‌ ಜವುಳಿ ಉದ್ಯಮದ ಮಾಲಕ) ಅವರು ಬಾಂಬೆ ಹೈಕೋರ್ಟಿಗೆ ಒಂದು ಮನವಿ ಮಾಡಿದ್ದು,  ಬಂಗಲೆಯ ಸ್ವಾಧೀನಕ್ಕಾಗಿ ತಾಯಿ ನೀಡಿದ್ದ ಮನವಿಯಲ್ಲಿ ದೂರುದಾರರಾಗಿ ಅವರ ಬದಲಿಗೆ ತನ್ನ ಹೆಸರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಮೂರು ತಿಂಗಳ ಹಿಂದೆ ನ್ಯಾ. ಮೂ. ರಂಜಿತ್‌ ಮೋರೆ ಮತ್ತು ನ್ಯಾ. ಮೂ. ಅನುಜಾ ಪ್ರಭಾ ದೇಸಾಯಿ ಅವರು ನುಸ್ಲಿ ವಾಡಿಯಾ ಅವರ ಮನವಿಯನ್ನು ಒಪ್ಪಿದ್ದು, ಪ್ರಸ್ತುತ ಅವರು ದೂರುದಾರರಾಗಿದ್ದಾರೆ. ಜಿನ್ನಾ ಬಂಗಲೆಯನ್ನು ಯುದ್ಧ ಕಾಲದಲ್ಲಿ ಸ್ಥಳಾಂತರ ಹೊಂದಿದವರ ಆಸ್ತಿ ಎಂಬ ಡಿಕ್ಲರೇಶನ್‌ ಅನ್ನು ದಿನಾ ಜಿನ್ನಾ ಅವರು ಪ್ರಶ್ನಿಸಿದ್ದು, ತಂದೆ ಅವರ ಆಸ್ತಿಯನ್ನು ಸಹೋದರಿ ಡಾ. ಫಾತಿಮಾ ಜಿನ್ನಾ ಅವರಿಗೆ ಉಯಿಲು ಬರೆದು ಬಿಟ್ಟು ಹೋಗಿದ್ದಾರೆ ಎಂದು ವಾದಿಸಿದ್ದರು. ಜತೆಗೆ ದಿನಾ ಜಿನ್ನಾ ಅವರು ಈ ಉಯಿನಿನ ಅಸ್ತಿತ್ವವನ್ನು ಕೂಡ ಪ್ರಶ್ನಿಸಿದ್ದರು. ಹಿಂದೂ ಉತ್ತರಾಧಿಕಾರ ಕಾನೂನು (ಖೋಜಾ ಮುಸಿಮರಿಗೂ ಅನ್ವಯವಾಗುವ 1947ರ ಹಿಂದಿನ ಶಿಯಾ ಸೆಕ್ಷನ್‌) ಹಾಗೂ ಶಿಯಾ ಮುಸ್ಲಿಂ ಕಾನೂನೂ ಪ್ರಕಾರವೂ ತಂದೆ ಆಸ್ತಿಗೆ ತಾನೊಬ್ಬಳೇ ಹಕ್ಕುದಾರಳು ಎಂದು ದಿನಾ ಜಿನ್ನಾ ಅವರು ವಾದಿಸಿದ್ದರು. ಜಿನ್ನಾ ಕುಟುಂಬವು ಮೂಲತಃ ಹಿಂದೂಗಳಾಗಿದ್ದರು ಮತ್ತು ಅವರು ಎಂ. ಎ. ಜಿನ್ನಾ ಅವರ ಅಜ್ಜ ಪೇಮ್‌ಜಿ ಮೆ j ಠಕ್ಕರ್‌ ಅವರ ಕಾಲದಲ್ಲಿ ಇಸ್ಲಾಂಗೆ ಮತಾಂತರ ಹೊಂದಿದವರಾಗಿದ್ದರು ಎಂಬುದನ್ನು ಕೂಡ ದಿನಾ ಜಿನ್ನಾ ಅವರು ಉಲ್ಲೇಖೀಸಿದ್ದರು.

ಈ ನಡುವೆ ಜಿನ್ನಾ ಅವರ ಮುಂಬಯಿಯಲ್ಲಿರುವ ಮರಿ ಅಳಿಯ ಮೊಹಮ್ಮದ್‌ ಇಬ್ರಾಹಿಂ ಅವರು, ಪಾಕಿಸ್ತಾನದ ಸ್ಥಾಪಕರ ಆಸ್ತಿ ಹಕ್ಕಿಗೆ ವೀಲನಾಮೆ ಹೊಂದಿದ್ದ ಫಾತಿಮಾ ಜಿನ್ನಾ ಅವರ ಕಾನೂನೂ ಉತ್ತರಾಧಿಕಾರಿ ತಾನಾಗಿದ್ದೇನೆಂದು ಹೇಳಿ ಜಿನ್ನಾ ಮಾನÒನ್‌ಗೆ ಹಕ್ಕು ಮಂಡಿಸಿದರು. ದೇಶ ವಿಭಜನೆ ಸಂದರ್ಭ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಭಾರತದ ಮಾಜಿ ಟೆಸ್ಟ್‌ ಕ್ರಿಕೆಟಿಗ ಕೆ. ಸಿ. ಇಬ್ರಾಹಿಂ ಅವರು ಎಂ.ಎ. ಜಿನ್ನಾ ಅವರ ಸಂಬಂಧಿಯೂ ಆಗಿದ್ದರು ಎಂದು ಹೇಳಲೂಬಹುದು.

ಆದಾಗ್ಯೂ 1965ರ ಭಾರತ – ಪಾಕಿಸ್ತಾನ ಯುದ್ಧದ ಬಳಿಕ ಭಾರತ ಸರಕಾರವು ಎನಿಮಿ ಪ್ರಾಪರ್ಟಿ ಆ್ಯಕ್ಟ್ 1968 (ಇದಕ್ಕೆ 2016ರಲ್ಲಿ ತಿದ್ದಪಡಿ ಮಾಡಲಾಗಿದೆ) ಅನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ ಉತ್ತರದಾಯಿತ್ವ ಕಾನೂನು ಪಾಕಿಸ್ತಾನಕ್ಕೆ ಹೋದವರಿಗೆ ಕುಟುಂಬದವರಿಗೆ ಅನ್ವಯವಾಗುವುದಿಲ್ಲ. ದಿನಾ ಜಿನ್ನಾನ ಹಕ್ಕು ಹೊರತುಪಡಿಸಿ, ಉತ್ತರಪ್ರದೇಶದಲ್ಲಿ ಅಪಾರ ಆಸ್ತಿ ಹೊಂದಿದ್ದು, ಅವುಗಳನ್ನು ತೊರೆದು ಪಾಕಿಸ್ತಾನಕ್ಕೆ  ಹೋಗಿದ್ದ ಮೊಹಮ್ಮದಾಬಾದ್‌ನ ರಾಜನ ಪ್ರಕರಣವೂ ಇದೆ.

ಜಿನ್ನಾ ಮಾನನ್‌ (ಜಿನ್ನಾ ಬಂಗಲೆ) ಅನ್ನು ಪಾಕಿಸ್ತಾನಕ್ಕೆ ಒಪ್ಪಿಸಬೇಕು ಎಂದು ಆಗ್ರಾ ಶೃಂಗಸಭೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್‌ ಮುಷರಫ್ ಅವರು ಆಗಿನ ಪ್ರಧಾನಿ ಎ.ಬಿ. ವಾಜಪೇಯಿ ಅವರಿಗೆ ಬಲವಾದ ಮನವಿ ಮಾಡಿದ್ದರು. ಪಾಕಿಸ್ತಾನಕ್ಕೆ ಬಾರದೆ ಭಾರತದಲ್ಲೇ ಉಳಿದಿರುವ ದಿನಾ ಜಿನ್ನಾ ಅವರ ಕುಟುಂಬಕ್ಕೆ ಜಿನ್ನಾ ಬಂಗಲೆಯ ಹಕ್ಕನ್ನು ನೀಡಬೇಕು ಎಂದು ಬಲವಾಗಿ ಆಗ್ರಹಿಸಲಾಯಿತು. ಆಕೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಕೇವಲ ಎರಡು ಬಾರಿ ಮಾತ್ರ. 1947 ಆ. 14ರಂದು ಪಾಕಿಸ್ತಾನ ಉದಯವಾದ ಕಾರ್ಯಕ್ರಮದಲ್ಲಿ ಆಕೆಯ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆಕೆ ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು 1948ರ ಸೆಪ್ಟಂಬರ್‌ನಲ್ಲಿ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು!

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.