ಉಗಿಸಿಕೊಂಡ ಮಾಜಿ ಕ್ರಿಕೆಟ್‌ ಧಣಿ: ಇದು ಯಾರ ವಿಜಯ?


Team Udayavani, Jun 14, 2017, 4:51 PM IST

mallya.jpg

ಮೋದಿ ಸರಕಾರ ಜುಲೈ 10ರೊಳಗೆ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಿ ಸುಪ್ರೀಂ ಕೋರ್ಟಿಗೆ ಹಾಜರು ಪಡಿಸುವಲ್ಲಿ ವಿಫ‌ಲವಾದರೆ, ಅಪರಾಧಿಗಳನ್ನು ಎಷ್ಟು ಮಾತ್ರಕ್ಕೂ ಸಹಿಸಲಾರೆವು ಎಂಬ ಅದರ ಘೋಷಣೆಯನ್ನು ದೇಶ ಪ್ರಶ್ನಿಸಬೇಕಾಗುತ್ತದೆ.

ನಮ್ಮ ಇಂಗ್ಲಿಷ್‌ ದಿನ ಪತ್ರಿಕೆಗಳಲ್ಲಿ, ಇಂಗ್ಲಿಷ್‌ ಟಿ.ವಿ. ಚಾನೆಲ್‌ಗ‌ಳಲ್ಲಿ, ಅಷ್ಟೇ ಅಲ್ಲ, ಸಾಮಾಜಿಕ ಜಾಲಗಳಲ್ಲಿ ಕೂಡ ನಿರಂತರ ಮೆರೆದಾಡುತ್ತಿರುವ ವ್ಯಕ್ತಿಯೊಬ್ಬ ಎಷ್ಟೊಂದು ದಯನೀಯ ರೀತಿಯಲ್ಲಿ ಪತನ ಕಾಣುವಂತಾಯಿತು! ಹೌದು, ಇದು ಭಾರತದಿಂದ ಓಡಿಹೋಗಿ ಲಂಡನ್‌ ಸೇರಿಕೊಂಡ ಉದ್ಯಮಿ ವಿಜಯ ಮಲ್ಯ ಎಂಬಾತನ ಇಂದಿನ ಅವಸ್ಥೆ. ಲಂಡನಿನ ಓವಲ್‌ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯ ನಡುವಿನ ಪಂದ್ಯವನ್ನು ವೀಕ್ಷಿಸಲು ನೆರೆದಿದ್ದ ಕ್ರಿಕೆಟ್‌ ಅಭಿಮಾನಿಗಳ ಒಂದು ಗುಂಪು, ಮೊನೆ ಮೊನ್ನೆಯ ತನಕ ಕ್ರಿಕೆಟ್‌ ಸಾಮ್ರಾಜ್ಯದ ದೊರೆಗಳಲ್ಲಿ ಒಬ್ಬರೆನಿಸಿಕೊಂಡಿದ್ದ ವಿಜಯ ಮಲ್ಯರತ್ತ ಅಣುಕು ಕೇಕೆಗಳನ್ನು ತೂರಿ “ಚೋರ್‌’ “ಚೋರ್‌’ ಎಂದು ಬೊಬ್ಬಿಟ್ಟು ಅವಮಾನಿಸಿದ ಘಟನೆ ಇದು. ಮಲ್ಯ ತನ್ನತ್ತ ತೂರಿಬರುತ್ತಿದ್ದ ಕೊಂಕು ಕೂಗುಗಳನ್ನು ಕೇಳಿ ಅಲ್ಲಿಂದ ಓಟಕಿತ್ತದ್ದನ್ನು ತೋರಿಸುವ ದೃಶ್ಯವನ್ನು ಕೂಡ ಟಿ.ವಿ. ಚಾನೆಲ್‌ಗ‌ಳು ಪ್ರಸಾರ ಮಾಡಿವೆ.

ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯರು ಮಲ್ಯ ಅವರಿಗೆ ನೀಡಿರುವ ಈ “ಉಪಚಾರ’ ಭಾರತದ ಜನತೆಯ ಸಮಷ್ಟಿ ಅಭಿಪ್ರಾಯದ ಪ್ರತಿಬಿಂಬವಲ್ಲದೆ ಬೇರೇನಲ್ಲ. ಅವರ ಪ್ರಕಾರ, ಆತ ಕಂಬಿಗಳ ಹಿಂದೆ ಇರಬೇಕಾಗಿದ್ದ ಇನ್ನೊಬ್ಬ ಚೋರ ಅಷ್ಟೆ. ಒಂದು ರೀತಿಯಲ್ಲಿ ಅಲ್ಲಿನ ಭಾರತೀಯರು ಮಲ್ಯ ಎಂಬ ಮಾಜಿ ಕ್ರಿಕೆಟ್‌ ಪೋಷಕನ ಬಗ್ಗೆ ತೋರಿದ ವರ್ತನೆ, ನಮ್ಮ ದೇಶದ ಸುದ್ದಿ ಮಾಧ್ಯಮಗಳು, ರಾಜಕಿಯ ಪಕ್ಷಗಳು ಹಾಗೂ ಭಾರತ ಸರಕಾರ ಆತನನ್ನು ಪ್ರತಿಷ್ಠಿತ ಸ್ಥಾನದಲ್ಲಿರಿಸಿರುವುದನ್ನು ಖಂಡಿಸುವ, ಪ್ರತಿಭಟಿಸುವ ಉದ್ದೇಶದಿಂದ ತೋರಿರುವ ನಡವಳಿಕೆಯಾಗಿದೆ. ಈ ಹಿಂದೆ ಇದೇ ವ್ಯಕ್ತಿ ರೇಸ್‌ಕೋರ್ಸ್‌ಗೋ ಗಣ್ಯಾತಿಗಣ್ಯರ ಡಿನ್ನರ್‌ಗಳಿಗೋ ಹಾಜರಾದ ಸಂದರ್ಭಗಳಲ್ಲಿ ಅಥವಾ ಯಾವುದೋ ಸಾರ್ವಜನಿಕ ವಿದ್ಯಮಾನಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗ‌ಳು ಹೇಗೆ ವರದಿ ಮಾಡುತ್ತಿದ್ದವೆಂಬುದನ್ನು ಅನೇಕರು ಮರೆತಿಲ್ಲ.

ಬೆಂಗಳೂರಿನ ಇಂಗ್ಲಿಷ್‌ ಪತ್ರಿಕೆಯೊಂದು ಆತನನ್ನು ಒಬ್ಬ “ಧಣಿ’ ಎಂಬ ರೀತಿಯಲ್ಲಿ ಚಿತ್ರಿಸಿದ್ದನ್ನು; ಆತ ಧರಿಸುತ್ತಿದ್ದ ವರ್ಣರಂಜಿತ ಉಡುಪುಗಳ ಬಗ್ಗೆ, ವಜ್ರ ಖಚಿತ ಕಿವಿಯ ಆಭರಣಗಳ ಬಗ್ಗೆ, ಆತನ ಮುಖದಲ್ಲಿ ಮೆರೆಯುತ್ತಿದ್ದ ತೆಳುಗಡ್ಡದ ಬಗ್ಗೆ ಆಸ್ಥೆಯಿಂದ ಉಲ್ಲೇಖೀಸುತ್ತಿದ್ದುದನ್ನು ಕೂಡ ಹೆಚ್ಚಿನವರು ಮರೆತಿಲ್ಲ. ಫ್ಯಾಶನ್‌ ಜಗತ್ತು ಹಾಗೂ “ಹೈಸೊಸೈಟಿ’ಯ ಬಗ್ಗೆ ಬರೆಯುವ ಪ್ರಭೃತಿಗಳು ಆತನನ್ನು ಅತ್ಯಂತ “ಮಾದರಿ ವ್ಯಕ್ತಿ’ ಎಂದೂ ಪರಿಗಣಿಸಿದ್ದಿತ್ತು.

ಇಂಗ್ಲೆಂಡ್‌ನ‌ಲ್ಲಿ ಚಾಂಪಿಯನ್ಸ್‌ ಕ್ರಿಕೆಟ್‌ ಟ್ರೋಫಿ ಪಂದ್ಯದಲ್ಲಿ ಆಡಲು ಹೋಗಿರುವ ವಿರಾಟ್‌ ಕೊಹ್ಲಿ ನೇತೃತ್ವದ ತಂಡಕ್ಕೂ ನಮ್ಮ ಅಭಿನಂದನೆ ಸಲ್ಲಬೇಕು. ಆಟಗಾರರಿಗಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ಹಾಜರಾದ ಒಂದು ಕಾಲದ ಕ್ರಿಕೆಟ್‌ ದೊರೆ ಯನ್ನು ನಮ್ಮ ಭಾರತೀಯ ತಂಡದ ಸದಸ್ಯರು ಅಸ್ಪೃಶ್ಯನಂತೆ ಕಂಡರೆಂಬುದು ನಿಜಕ್ಕೂ ಶ್ಲಾಘನೀಯ. ಈ ಭೋಜನ ಕೂಟದಲ್ಲಿ ಮಲ್ಯ ಪ್ರತ್ಯಕ್ಷರಾದುದು ಹೇಗೆ, ಅವರಿಗೆ ಆಹ್ವಾನವಿತ್ತೆ ಅಥವಾ ಇದಕ್ಕೆಂದೇ ಟಿಕೆಟ್‌ ಖರೀದಿಸಿ ಬಂದಿದ್ದರೆ ಈ ಬಗ್ಗೆ ಯಾವುದೇ ಖಚಿತ ವಿರಗಳು ಲಭ್ಯವಾಗಿಲ್ಲ. ಬಹುಶಃ ಈ ಮದ್ಯದ ದೊರೆ ಈ ಕ್ರಿಕೆಟಿಗರೊಂದಿಗೆ “ಚಿಯರ್’ ಹೇಳ್ಳೋಣವೆಂದು ಲೆಕ್ಕ ಹಾಕಿದ್ದರೋ ಏನೋ.

ಹಲವು ಮಕ್ಕಳ ತಂದೆ
ಕರ್ನಾಟಕದ ಮೂಲಕ ರಾಜ್ಯ ಸಭೆಯ ಸದಸ್ಯತ್ವವನ್ನು ದಕ್ಕಿಸಿಕೊಂಡಿದ್ದ ಈ ಮಾಜಿ ರಾಜಕಾರಣಿ ಭಾರತದಲ್ಲಿ ತಾನು ನಡೆಸಿರುವ ಘೋಟಾಳೆಗಳ ಹೊರತಾಗಿಯೂ ಪ್ರಚಾರದ ಅಬ್ಬರಕ್ಕಾಗಿ ಹಾತೊರೆಯುವ ಗುಣವನ್ನು ಚೆನ್ನಾಗಿಯೇ ಪ್ರದರ್ಶಿಸಿದ್ದಾರೆ. ನಮ್ಮ ಸುಪ್ರೀಂಕೋರ್ಟು ಈ ವರ್ಷದ ಮೇ 9ರಂದು ನ್ಯಾಯಾಲಯನಿಂದನೆ ಪ್ರಕರಣದಲ್ಲಿ ಆತನನ್ನು ದೋಷಿಯೆಂದು ಘೋಷಿಸಿ ಈ ಪ್ರಕರಣದಲ್ಲಿ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಜುಲೈ 10ರಂದು ಕೋರ್ಟಿಗೆ ಹಾಜರಾಗುವಂತೆ ಆದೇಶಿಸಿತ್ತು. ಸಿಬಿಐಯ ವಿನಂತಿಯ ಮೇರೆಗೆ ಸ್ಕಾಟ್ಲೆಂಡ್‌ಯಾರ್ಡ್‌ (ಲಂಡನ್‌ ಪೊಲೀಸ್‌) ಆತನನ್ನು ಏಪ್ರಿಲ್‌ನಲ್ಲಿ ಬಂಧಿಸಿತ್ತು; ಆತನ 5.4 ಕೋ. ರೂ.ಗಳ ಬಾಂಡ್‌ ಮೊತ್ತ ತೆತ್ತ ಬಳಿಕ ಮ್ಯಾಜಿಸ್ಟ್ರೇಟ್‌ ಕೋರ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಡಯಾಜಿಯೋ ಎಂಬ ವಿದೇಶಿ ಕಂಪೆನಿಯೊಂದರಿಂದ ಆತ ಪಡೆದುಕೊಂಡಿದ್ದ 4 ಕೋಟಿ ಡಾಲರ್‌ ಮೊತ್ತವನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಆತ ಪಾಲಿಸಲಿಲ್ಲವೆಂಬ ಕಾರಣಕ್ಕಾಗಿ ದಾಖಲಾಗಿದ್ದ ನ್ಯಾಯಾಲಯ ನಿಂದನೆ ಪ್ರಕರಣವಿದು. ವಿಜಯ ಮಲ್ಯರಿಗೆ ಮೊದಲ ಹೆಂಡತಿಯ ಒಬ್ಬ ಮಗ, ಎರಡನೆಯ ಹೆಂಡತಿಯ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡನೆಯ ಪತ್ನಿಗೆ ಈ ಹಿಂದೆ ಎರಡು ಮದುವೆಗಳಾಗಿದ್ದು, ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾಳೆ. ಅವರು ಕೂಡ ಮಲ್ಯ ಕುಟುಂಬದ ಸದಸ್ಯರೆಂದೇ ಪರಿಗಣಿತರಾಗಿದ್ದಾರೆ.

ಇತ್ತ ಭಾರತದಲ್ಲಿ ತನ್ನ ಕಿಂಗ್‌ಫಿಶರ್‌ ವಿಮಾನ ಸಂಸ್ಥೆಗಾಗಿ ಆತ ಇಲ್ಲಿನ ಬ್ಯಾಂಕ್‌ಗಳ ಒಕ್ಕೂಟವೊಂದರಿಂದ 9 ಸಾವಿರ ಕೋಟಿ ರೂ. ವರೆಗಿನ ಸಾಲ ಪಡೆದುಕೊಂಡಿದ್ದು, ಇದನ್ನು ಮರುಪಾವತಿಸದ ಕಾರಣಕ್ಕಾಗಿ ಈತನ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿರುವುದು ತಿಳಿದೇ ಇದೆ. ಬ್ಯಾಂಕುಗಳಿಗೆ ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಪ್ರವೀಣನಾಗಿರುವ ಈತ ಭಾರತೀಯ ಅಧಿಕಾರಿಗಳೊಂದಿಗೆ ಕಣ್ಣುಮುಚ್ಚಾಲೆಯಾಡಿ 2016ರ ಮಾರ್ಚ್‌ 2ರಂದು ಇಂಗ್ಲೆಂಡ್‌ಗೆ ಹಾರಿ ಹೋದುದು ಈಗ ಹಳೆಯ ಕಥೆ. ಮಕ್ಕಳ ಹತ್ತಿರ ಇರಬೇಕೆನ್ನಿಸಿದ್ದರಿಂದ ಹೀಗೆ ಮಾಡಿದೆ – ಎನ್ನುವುದು ತನ್ನೀ ಕೃತ್ಯಕ್ಕೆ ಈತ ನೀಡಿದ್ದ ವಿವರಣೆ. ಆದರೆ ಮಲ್ಯ ಮಹಾಶಯರು ಸಾರ್ವಜನಿಕವಾಗಿ ಮಕ್ಕಳೊಂದಿಗೆ ಕಾಣಿಸಿಕೊಂಡುದು ಬಹಳ ಅಪರೂಪ. ಮಲ್ಯರ ಕುರಿತು ಹಿಂದಿನ ಯುಪಿಎ ಸರಕಾರ ಮೃದು ಧೋರಣೆ ತಾಳಿತ್ತು ಎಂದು ಆಪಾದಿಸುತ್ತಿರುವ ನರೇಂದ್ರ ಮೋದಿಯವರ ಎನ್‌ಡಿಎ ಸರಕಾರ, ಮಲ್ಯ ಪ್ರಕರಣದಲ್ಲಿ ತಾನು ಎಸಗಿರುವ ಪ್ರಮಾದಗಳಿಗೆ ಕಾರಣವೇನೆಂಬುದನ್ನು ದೇಶಕ್ಕೆ ತಿಳಿಸಬೇಕಾಗಿದೆ. ಯುಪಿಎ ಸರಕಾರ ಮಲ್ಯ ಅವರನ್ನು ಪಾರಾಗಿಸಲು ಯೋಜನೆಯೊಂದನ್ನು ರೂಪಿಸಿತ್ತು. ಹಿಂದೆ ಆಗಿರುವ ಪ್ರಮಾದವನ್ನು ಸರಿಪಡಿಸುವ ಉದ್ದೇಶದಿಂದೆಂಬಂತೆ ಮೋದಿ ಸರಕಾರ ಆತನ ಗಡೀಪಾರಿಗೆ ವ್ಯವಸ್ಥೆ ಮಾಡುವಂತೆ ಬ್ರಿಟಿಷ್‌ ಸರಕಾರದ ಮೇಲೆ ಒತ್ತಡ ಹಾಕಿತು. ಈಗ ಗಡೀಪಾರು ಪ್ರಕ್ರಿಯೆಗಳು ಆರಂಭವಾಗಿದ್ದು ಇದೇ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದರು. ಇದಕ್ಕೂ ಮುನ್ನ ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ಸಾಧ್ಯವಿಲ್ಲವೆಂದು ಬ್ರಿಟಿಷ್‌ ಸರಕಾರ ಹೇಳಿತ್ತು.

ರಾಜ್ಯಸಭಾ ಸದಸ್ಯತ್ವ ರದ್ದಾಗುವ ಸಾಧ್ಯತೆಯನ್ನು ನಿವಾರಿಸಿಕೊಳ್ಳ ಲೆಂದೇ ಮಲ್ಯ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ರಾಜ್ಯಸಭೆಯ ನೀತಿ ಸಮಿತಿ ಸಭೆ ಸೇರಿ ಆತನ ಸದಸ್ಯತ್ವವನ್ನು ರದ್ದು ಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿತ್ತು. ಆದರೆ ಈ ಸಭೆ ನಡೆಯಲಿದ್ದ ಹಿಂದಿನ ದಿನವೇ ಮಲ್ಯ ರಾಜೀನಾಮೆ ಸಲ್ಲಿಸಿದ್ದರು.

ಸಂಸತ್ತಿನಲ್ಲಿ ಮಲ್ಯ ಮಾಡಿದ್ದೇನು?
ಹಾಗೂ ನೋಡಿದರೆ ಕರ್ನಾಟಕದ 2002ರ ಹಾಗೂ 2010ರ ವಿಧಾನಸಭೆಗಳು ಈ ಪ್ಲೇಬಾಯ್‌ ವ್ಯಕ್ತಿತ್ವದ ಐಷಾರಾಮೀ ಉದ್ಯಮಿಯನ್ನು ಸಂಸತ್ತಿನ ಮೇಲ್ಮನೆಗೆ ಕಳಿಸಿದ್ದೇ ತಪ್ಪು. ಇದಕ್ಕಾಗಿ ನಾವು ನಿಂದಿಸಬೇಕಾದುದು ರಾಜ್ಯದ ಮೂರೂ ಮುಖ್ಯ ರಾಜಕೀಯ ಪಕ್ಷಗಳನ್ನು. 2002ರಲ್ಲಿ ಮಲ್ಯರನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ನೊಂದಿಗೆ ಕೈ ಜೋಡಿಸಿತ್ತು. ಮತ್ತೆ ಅವರ ಆಯ್ಕೆಗಾಗಿ ಒಗ್ಗಟ್ಟು ಪ್ರದರ್ಶಿಸಿದ್ದು ಬಿಜೆಪಿ ಹಾಗೂ ಜೆಡಿಎಸ್‌ಗಳು. ಮಲ್ಯ ಎಂಬ ರಾಜಕಾರಣಿ ಸಂಸತ್ತಿನಲ್ಲಿ ರಾಜ್ಯಕ್ಕಾಗಿ ಬಿಡಿ, ದೇಶಕ್ಕಾಗಿಯಾದರೂ ಒಂದೇ ಒಂದು ಸಲವೂ ದನಿಯೆತ್ತಲಿಲ್ಲ ಎಂಬುದನ್ನು ಹೇಳಬೇಕಾಗಿಯೇ ಇಲ್ಲ. ಸಂಸತ್ತಿನಲ್ಲಿ ಅವರ ಪಾತ್ರವೇನಿತ್ತು ಎನ್ನುವಾಗ ನನಗೆ ನೆನಪಾಗುವ ಪ್ರಸಂಗವೆಂದರೆ, ಅವರು ದಕ್ಷಿಣಾಫ್ರಿಕದಲ್ಲಿನ ತನ್ನ ರಜಾ ವಿಹಾರದ ತಾಣಕ್ಕೆ ಎಂ.ಪಿ.ಗಳ ಗುಂಪೊಂದನ್ನು ಜಾಲಿ ಟ್ರಿಪ್‌ಗೆಂದು ಕರೆದೊಯ್ದ ಘಟನೆ. ಅಲ್ಲದೆ ಭಾರತದ ಮಾಜಿ ಪ್ರಧಾನಿಯೊಬ್ಬರು ಅವರ ಒಡೆತನದ ಖಾಸಗಿ ವಿಮಾನವೊಂದರಲ್ಲಿ ಬೆಂಗಳೂರಿಗೆ ಬಂದಿದ್ದೂ ನೆನಪಾಗುತ್ತದೆ. ರಾಜಕೀಯ ಪ್ರಭಾವವಿದ್ದ ಯಾರೊಂದಿಗೂ ಒಡನಾಟ ಸಾಧಿಸಿ ಮಲ್ಯ ಖುಷಿ ಪಡುತ್ತಿದ್ದುದು ಹೀಗೆ. ಹೀಗಿತ್ತು ಅವರ ವಶೀಲಿಬಾಜಿಯ ಮೆರೆದಾಟ.

ಅದೃಷ್ಟವಶಾತ್‌ ಮಲ್ಯ ಮಹಾಶಯರ ಹಾಗೂ ಅವರು ಒಡೆತನ ಸಾಧಿಸಿದ್ದ ಪಕ್ಷವಾದ ಜನತಾಪಕ್ಷದ ದುರಾಡಳಿತದ ಸಾಧ್ಯತೆಯಿಂದ ರಾಜ್ಯದ ಜನತೆ ಬಚಾವಾದರೆಂದೇ ಹೇಳಬೇಕು. ಮೂಲ ಜನತಾಪಕ್ಷದ ನಾಯಕತ್ವ ತನ್ನದೇ ಎಂದು ಹಕ್ಕು ಸಾಧಿಸುತ್ತಿದ್ದ ಡಾ| ಸುಬ್ರಹ್ಮಣ್ಯ ಸ್ವಾಮಿ, ಆ ಪಕ್ಷವನ್ನು ಮಲ್ಯರಿಗೆ ಮಾರಾಟ ಮಾಡಿದ್ದರು! ಆ ಪಕ್ಷ 2004ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿತ್ತು; ಆದರೆ ರಾಜ್ಯದ ಜನತೆ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಹಾಗಿದ್ದರೂ ಅದು ರಾಯಚೂರು ಜಿಲ್ಲೆಯಲ್ಲಿ ಒಂದು ಸ್ಥಾನ ಗೆದ್ದುಕೊಂಡಿತ್ತು; ಬಳಿಕ ಆ ಜನತಾ ಶಾಸಕ ಮುಂದೆ ಕಾಂಗ್ರೆಸ್‌ ಅಭ್ಯರ್ಥಿಯಿಂದ ಸೋಲುಂಡರು. ಮಲ್ಯ ಎಂಬ ಈ ವ್ಯಕ್ತಿಯ ಧೋರಣೆ ಎಂಥದೆಂದರೆ, ತನ್ನಲ್ಲಿರುವ ಹಣಚೆಲ್ಲಿ ದೇಶದ ಪ್ರತಿಯೊಬ್ಬನನ್ನೂ, ಪ್ರತಿಯೊಂದು ಸಂಸ್ಥೆಯನ್ನೂ ಖರೀದಿಸುವುದು ತನಗೆ ಸಾಧ್ಯ. ದೇಶದಲ್ಲಿ ಈ ಹಿಂದೆ ಎಷ್ಟೋ ಉತ್ತಮ ವ್ಯಕ್ತಿತ್ವದ ಅನೇಕ ವ್ಯಾಪಾರೋದ್ಯಮಿಗಳು, ಕೈಗಾರಿಕೋದ್ಯಮಿಗಳು ಆಗಿ ಹೋಗಿದ್ದಾರೆ. ಆದರೆ ಯಾರಿಗೂ ಸಂಪತ್ತಿನ ಪ್ರದರ್ಶನದ ಖಯಾರಿ ಇರಲಿಲ್ಲ. ಈ ಹಿಂದೆ ಜನರ ದುಡ್ಡಿನಲ್ಲಿ ಯುರೋಪಿಗೆ       Öಮಜಾ ಉಡಾಯಿಸುತ್ತಿದ್ದ ಡೌಲು ದೌಲತ್ತಿನ ಕೆಲ ಮಹಾರಾಜರುಗಳು ಹಾಗೂ ಯುವರಾಜರುಗಳ ಸಾಲಿಗೆ ಸೇರುತ್ತಾರೆ ವಿಜಯ ಮಲ್ಯ. ಪ್ರಜಾಪ್ರಭುತ್ವವಾದಿ ರಾಷ್ಟ್ರವಾಗಿರುವ ಅಮೆರಿಕ ಅಂಥ ಖರ್ಚುಕೋರ ಸುಖಪುರುಷರಿಗೆ ಎಂದೂ ಸ್ವಾಗತ ಹೇಳಲಿಲ್ಲ. ಈಗ ಮೋದಿ ಸರಕಾರ ಜುಲೈ 10ರೊಳಗೆ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಿ ಸುಪ್ರೀಂ ಕೋರ್ಟಿಗೆ ಹಾಜರು ಪಡಿಸುವಲ್ಲಿ ವಿಫ‌ಲವಾದರೆ, ಅಪರಾಧಿಗಳನ್ನು ಎಷ್ಟು ಮಾತ್ರಕ್ಕೂ ಸಹಿಸಲಾರೆವು ಎಂಬ ಅದರ ಘೋಷಣೆಯನ್ನು ದೇಶ ಪ್ರಶ್ನಿಸಬೇಕಾಗುತ್ತದೆ.

ಅಮಿತ್‌ ಶಾಗೆ ಇದು ಬೇಕಿರಲಿಲ್ಲ
ಈ ನಡುವೆ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು “ಚತುರ ಬನಿಯಾ’ ಎಂದು ಕರೆಯುವ ದುಸ್ಸಾಹಸ ಮೆರೆದಿದ್ದಾರೆ. ಅವರು ಇಂಥದೊಂದು ಹೇಳಿಕೆ ನೀಡುವ ಅಗತ್ಯವೇ ಇರಲಿಲ್ಲ. ಇದೇ ರೀತಿ ರಾಷ್ಟ್ರ ಮನ್ನಣೆ ಪಡೆದಿರುವ ಇನ್ನೊಬ್ಬ ನಾಯಕನನ್ನು ಇದೇ ರೀತಿ ಜಾತಿಯ ಹೆಸರೆತ್ತಿ ಕರೆಯುವ ಧೈರ್ಯ ಅಮಿತ್‌ ಶಾಗೆ ಇದೆಯೇ? ಬಹುಶಃ ದೇಶದಲ್ಲಿ ಮಹಾತ್ಮಾ ಗಾಂಧಿಯವರಿಗೆ ಅನುಯಾಯಿಗಳೆಂಬವರು ಯಾರೂ ಇಲ್ಲ ಎಂದು ಅವರು ಭಾವಿಸಿರಬೇಕು. 

ಗಾಂಧೀಜಿಯ ಇಬ್ಬರು ಮೊಮ್ಮಕ್ಕಳು – ಗೋಪಾಲಕೃಷ್ಣ ಗಾಂಧಿ ಹಾಗೂ ರಾಜ್‌ ಮೋಹನ್‌ ಗಾಂಧಿ (ಇವರು ರಾಜಾಜಿಯವರ ಮೊಮ್ಮಕ್ಕಳೂ ಹೌದು) – ಅಮಿತ್‌ ಶಾ ಅವರ ಹೇಳಿಕೆಗೆ ಪ್ರತಿಭಟನೆ ವ್ಯಕ್ತಪಡಿಸಿರುವುದು ನ್ಯಾಯವಾಗಿಯೇ ಇದೆ. ಹಿಂದೆ ಗಾಂಧೀಜಿಯನ್ನು ಅಪಹಾಸ್ಯ ಮಾಡುತ್ತಿದ್ದ ಮಹಮ್ಮದಾಲಿ ಜಿನ್ನಾ ಮತ್ತವರ ನೇತೃತ್ವದ ಮುಸ್ಲಿಂಲೀಗ್‌ನ ನಾಯಕರ ಶೈಲಿಯಲ್ಲಿ ಮಾತಾಡಿದ್ದಾರೆ ಅಮಿತ್‌ಶಾ. ನಿಜ, ಗಾಂಧೀಜಿ ಚತುರ ರಾಜಕಾರಣಿಯೇನೂ ಆಗಿರಲಿಲ್ಲ. ಆದರೆ ಅವರು ಒಬ್ಬ ಬನಿಯಾ ಆಗಿಯೂ ನಡೆದುಕೊಳ್ಳಲಿಲ್ಲ; ತಮ್ಮ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಸಂಪತ್ತನ್ನು ಸೂರೆಗೊಳ್ಳಲಿಲ್ಲ. ವಾಸ್ತವವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲೂ “ಸ್ವಯಂ ರೂಪಿತ ಬನಿಯಾ’ಗಳಿದ್ದಾರೆ ಎಂಬ ಸತ್ಯ ಅಮಿತ್‌ಶಾಗೆ ನೆನಪಾಗುತ್ತಿರಲಿ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.