ರಾಜ್ಯದಲ್ಲಿ ಹೆಚ್ಚುತ್ತಿರುವ ಜಾತಿ ರಾಜಕೀಯ
Team Udayavani, Feb 7, 2018, 3:00 PM IST
ಪತ್ರಕರ್ತರು ತಮ್ಮ ಬಗ್ಗೆ ಮತ್ತು ತಮ್ಮ ಕೆಲಸದ ಬಗ್ಗೆ ಅಷ್ಟಾಗಿ ಬರೆದುಕೊಳ್ಳದಿದ್ದರೂ, ಬೊಟ್ಟು ಮಾಡಬೇಕಾದ ಸಂಗತಿಯೆಂದರೆ, ರಾಜಕಾರಣಿಗಳೊಂದಿಗೆ ಅತಿಯಾದ ಸಂಪರ್ಕದಿಂದಾಗಿ ರಾಜ್ಯದ ಮಾಧ್ಯಮಗಳ ನೈತಿಕತೆ ಕುಂದುತ್ತಿದೆ. ಜಾತಿ ವಾದ ರಾಜ್ಯ ರಾಜಕೀಯವನ್ನು ಮಾತ್ರವಲ್ಲದೆ ಮಾಧ್ಯಮವನ್ನೂ ಆವರಿಸಿದೆ.
ರಾಜಾಂಗಣ ಅಂಕಣ 10 ವರ್ಷವನ್ನು ಯಶಸ್ವಿಯಾಗಿ ಪೂರೈಸಿ 11ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಕಳೆದೊಂದು ದಶಕದಲ್ಲಿ ನಾನು ವಿವಿಧ ವಿಚಾರಗಳಿಗೆ ಸಂಬಂಧಿಸಿ ಸುಮಾರು 500ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದೇನೆ. ಪತ್ರಕರ್ತರಿಗೆ ಅಪ್ಯಾಯಮಾನವಾದ ಐಹಿಕ ಆಮಿಷಗಳಿಗೆ ಸೀಮಿತಗೊಳ್ಳದೆ ಬರೆದಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ.
ಅಂಕಣ ಬ್ರಹ್ಮರು
ನನ್ನ ರಾಜಾಂಗಣ ಅಂಕಣಕ್ಕಿಂತಲೂ ಬಹು ಸುದೀರ್ಘವಾಗಿ ಪ್ರಕಟವಾದ ಅಂಕಣಗಳು ಹಲವಾರಿವೆ. ವೃತ್ತಿಪರ ಪತ್ರಕರ್ತರಲ್ಲದಿದ್ದರೂ ವಿದ್ವಾಂಸರಾದ ಇಬ್ಬರು ಎರಡು ದಶಕಕ್ಕೂ ಹೆಚ್ಚು ಕಾಲ ಯಶಸ್ವಿಯಾಗಿ ಅಂಕಣ ಬರೆದರು. ಅವರೇ ನಿಘಂಟು ತಜ್ಞ, ಭಾಷಾ ತಜ್ಞ ಜಿ.ವಿ.ವೆಂಕಟಸುಬ್ಬಯ್ಯ ಮತ್ತು ದಿ| ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್. ಅಯ್ಯಂಗಾರ್ ಮೈಸೂರಿನ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದವರು. ಕನ್ನಡ ಪತ್ರಿಕೋದ್ಯಮದಲ್ಲಿ ಹೆಸರಿಸಲೇ ಬೇಕಾದವರೆಂದರೆ ಇ.ಆರ್.ಸೇತುರಾಮ್, ಪಾಟೀಲ್ ಪುಟ್ಟಪ್ಪ ಮತ್ತು ಕೆ.ಎಸ್. ಸತ್ಯನಾರಾಯಣ ಅವರು. ಪತ್ರಿಕೋದ್ಯಮದ ಮತ್ತೂಬ್ಬರು ಹಿರಿಯರೆಂದರೆ ಸಿ.ಎಂ.ರಾಮಚಂದ್ರ. 90ರ ಹರೆಯದ ಇವರು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್‌ನಲ್ಲಿ ಅತಿ ಪ್ರಬುದ್ಧವಾಗಿ ಬರೆಯುತ್ತಿದ್ದವರೆಂದರೆ ಎ.ಜಿ.ನೂರಾನಿ, ವಕೀಲ ವೃತ್ತಿಯಲ್ಲಿದ್ದ ಕುಲದೀಪ್ ನಯ್ಯರ್. ಇವರೊಂದಿಗೆ ಕರ್ನಾಟಕ ಮೂಲದವರಾಗಿದ್ದು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದವರೆಂದರೆ, ಬೆನಗಲ್ ಶಿವ ರಾವ್, ಎಂ.ವಿ.ಕಾಮತ್ ಮತ್ತು ಎಚ್. ವಿ.ವೆಂಕಟಸುಬ್ಬಯ್ಯ. ಶಿವ ರಾವ್ ಅವರು ವಿಶೇಷವಾಗಿ ಆರ್ಥಿಕ ವಿಚಾರಗಳ ಬಗ್ಗೆ ಬರೆಯುತ್ತಿದ್ದು, ಅವರು ಆರ್ಥಿಕ ತಜ್ಞರೂ ಆಗಿದ್ದವರು. 1920ರಿಂದ ಸುಮಾರು 40 ವರ್ಷ ಶಿವ ರಾವ್ ಎಂಬ ಹೆಸರು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರತಿಷ್ಠೆಯಾಗಿ ಬಳಕೆಯಾಗುತ್ತಿತ್ತು. ಅವರು ವಿಧಾನ ಸಭೆಯ ಸದಸ್ಯರಾಗಿದ್ದು, ಬಳಿಕ ಸಂಸತ್ತಿನ ಎರಡೂ ಮನೆಗಳ ಸದಸ್ಯರೂ ಆಗಿದ್ದರು. ಬೆನಗಲ್ ಅವರ ಕಿರಿಯ ಸಹೋದರ ಬೆನಗಲ್ ನರಸಿಂಗ ರಾವ್ ಅವರು ಭಾರತದ ಸಂವಿಧಾನ ಶಿಲ್ಪಿಗಳಲ್ಲಿ ಒಬ್ಬರು. ಅದೇನಿದ್ದರೂ ಶಿವ ರಾವ್ ಅವರನ್ನು ನೆನೆಸಿಕೊಳ್ಳಲೇ ಬೇಕಾದ್ದು ಸಂವಿಧಾನದ ಚೌಕಟ್ಟು ರಚನೆಯಲ್ಲಿ ಅವರ ನೀಡಿದ ಕೊಡುಗೆಗಾಗಿ. ನಮ್ಮ ಈಗಿನ ಪತ್ರಕರ್ತರಲ್ಲಿ ಎಷ್ಟು ಮಂದಿಗೆ ಇಂತಹ ಕಾರ್ಯ ಸಾಧ್ಯವಾದೀತು ಎನ್ನುವುದು ಪ್ರಶ್ನೆ. ಇನ್ನು ಖುಷÌಂತ್ ಸಿಂಗ್ ಅವರು ಬರಹಗಾರರಾಗಿದ್ದಕ್ಕಿಂತಲೂ ಹೆಚ್ಚು ಅಂಕಣಕಾರರಾಗಿಯೇ ಪ್ರಸಿದ್ಧರಾದವರು. ನಿರ್ಭೀತ ಬರಹಕ್ಕೆ, ಅಂಕಣಕ್ಕೆ ಹೆಸರಾಗಿದ್ದ ಮತ್ತೂಬ್ಬರೆಂದರೆ ಲಾಹೋರ್ ಮತ್ತು ಮುಂಬಯಿಯಲ್ಲಿ ವಕೀಲರಾಗಿದ್ದು ಬರಹಗಾರರಾಗಿದ್ದ ಕೆ.ಎಲ್. ಗೂಬಾ ಅವರು.
ಹಿರಿಯ ಪತ್ರಕರ್ತರೆಂದರೆ ರಾಜಕೀಯ, ರಾಜಕಾರಣಿಗಳ ಬಗ್ಗೆಯೇ ಬರೆಯಬೇಕೆಂದು ಟೀವಿ ಸೇರಿದಂತೆ ದೇಶದ ಮಾಧ್ಯಮಗಳು ಬಯಸುತ್ತವೆ ಎನ್ನುವುದೇ ಅಚ್ಚರಿಯ ಸಂಗತಿ. ನಿಜಕ್ಕೂ ಹೇಳಬೇಕೆಂದರೆ ಹಲವು ವಿಚಾರಗಳಲ್ಲಿ ಪತ್ರಕರ್ತರಿಗೆ ಅತ್ಯಂತ ಸುಲಭದ್ದೆಂದರೆ ರಾಜಕೀಯದ ಬಗ್ಗೆ ಬರೆಯುವುದೇ ಆಗಿದೆ. ಇಂದಿನ ದಿನಗಳಲ್ಲಿ ಮಾಧ್ಯಮಗಳ ರಾಜಕೀಯ ವರದಿಗಾರಿಕೆ ಮಟ್ಟ ಇಳಿಕೆಯಾಗಿದ್ದು ಅದೂ ವಿಪಕ್ಷಗಳ ರಾಜಕಾರಣಿ ರೀತಿಯೇ ಆಗಿವೆ. ಅರ್ಥಾತ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬಿಜೆಪಿಯನ್ನು ದೂಷಿಸುವುದು, ಬಿಜೆಪಿ ಕಾಂಗ್ರೆಸ್ಸನ್ನು ದೂಷಿಸುವಂತೆ ಆಗಿದೆ.
ಮೂರನೇ ಪಕ್ಷ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಸಮ ಪ್ರಮಾಣದಲ್ಲಿ ಟೀಕಿಸುತ್ತಿದೆ. ನಾವು ಈ ಎರಡೂ ಪಕ್ಷಗಳಿಂದ ದೂರದಲ್ಲಿದ್ದೇವೆ ಎಂದು ಜೆಡಿಎಸ್ ಏನೋ ಹೇಳಿಕೊಳ್ಳುತ್ತಿದೆ. ಆದರೆ, ಜೆಡಿಎಸ್ ರಾಜ್ಯದ ಮಹತ್ವದ ನಗರಪಾಲಿಕೆಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನೊಂದಿಗೆ ಸಖ್ಯ ಹೊಂದಿದೆ. ದೇಶದ ರಾಜಕಾರಣದಲ್ಲಿ ಇಂಥದ್ದಕ್ಕೆಲ್ಲ ಕಾರಣವೇನೆಂದರೆ, ಸೈದ್ಧಾಂತಿಕ ಬದ್ಧತೆಯ ಕೊರತೆ ಮತ್ತು ಬೂಟಾಟಿಕೆಯ ಪ್ರವೃತ್ತಿ ಇರುವುದು.
ಕೆಲವೊಮ್ಮೆ ಸರ್ಕಾರದಲ್ಲಿರುವವರಿಗೆ ಅತ್ಯಂತ ಆಪ್ತರು ವಿಪಕ್ಷದಲ್ಲೂ ಇರುತ್ತಾರೆ. ಸಿದ್ಧಾಂತಕ್ಕೂ ಹೆಚ್ಚಾಗಿ ಜಾತಿ, ಧರ್ಮ, ಪ್ರಾದೇಶಿಕವಾರು, ಕುಟುಂಬ ಸಂಬಂಧಗಳು ಈ ಆಪ್ತತೆ ಬೆಳೆಯಲು ಕಾರಣವಾಗಿರುತ್ತದೆ. ಪತ್ರಕರ್ತರು ಕಲಿತುಕೊಳ್ಳಬೇಕಾದ ಪಾಠವೆಂದರೆ ರಾಜಕಾರಣಿಗಳು ಬಹಿರಂಗವಾಗಿ ಹೇಳಿದ್ದನ್ನು ಯಾವತ್ತೂ ನಂಬಬಾರದು.
ರಾಜಕೀಯ ಚರ್ಚೆಗಳಲ್ಲಿ ಮ್ಯಾಚ್‌ಫಿಕ್ಸಿಂಗ್‌ನ ಡೀಲ್‌ಗಳು ನಡೆಯುತ್ತವೆ ಎನ್ನುವುದನ್ನು ಪತ್ರಕರ್ತರಾದವರು ತಿಳಿದಿರಬೇಕು.
ಕಲಾಪಕ್ಕೆ ಮಹತ್ವವೆಲ್ಲಿ?
ಇಷ್ಟಕ್ಕೂ ನಮ್ಮ ಜನರು ಮಾತ್ರವಲ್ಲದೆ ಜನಪ್ರತಿನಿಧಿಗಳು ಕೂಡಾ ಶಾಸನ ಸಭೆಯ ಚರ್ಚೆಗಳಿಗೆ ಅಷ್ಟಾಗಿ ಮಹತ್ವವನ್ನೇ ನೀಡುವುದಿಲ್ಲ. ನಮ್ಮ ವಿಧಾನಸಭೆ ಮತ್ತು ಸಂಸತ್ತಿನ ಎರಡೂ ಮನೆಗಳು ಹೆಚ್ಚೆಂದರೆ 50 ದಿನ ಸಭೆ ಸೇರಿದ್ದು, ಅವುಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನೇ ಕಳೆದುಕೊಂಡಿವೆ. ಇತ್ತೀಚೆಗೆ ನಮ್ಮ ವಿಧಾನಪರಿಷತ್‌ನ ಅಧ್ಯಕ್ಷರಾದ ಡಿ.ಎಚ್.ಶಂಕರಮೂರ್ತಿಯವರು ವಿಧಾನಪರಿಷತ್ 2017ರಲ್ಲಿ ಕೇವಲ 40 ಬೈಠಕ್ ನಡೆಸಿತ್ತು ಎಂದು ಹೇಳಿದ್ದರು. ನಿಜಕ್ಕೂ ವರ್ಷಕ್ಕೆ 60 ಬೈಠಕ್ ಆದರೂ ಇರಬೇಕು. ಕರ್ನಾಟಕ ವಿಧಾನಸಭೆ 5 ವರ್ಷಗಳ ಅವಧಿಯನ್ನು ಪೂರೈಸುತ್ತಿದೆ. ಆದರೆ ಕಳೆದ ನಾಲ್ಕು ವರ್ಷ 9 ತಿಂಗಳಲ್ಲಿ ಯಾವುದೇ ಶಾಸಕ ಅಥವಾ ಸಚಿವರು ಶಾಸನ ಸಭೆಯಲ್ಲಿ ವಿಷಯ ಮಂಡನೆ, ಚರ್ಚೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳುವುದೇ ಕಷ್ಟ. ಮೇಲ್ಮನೆಯನ್ನು ಹೊಂದಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ ಅನೇಕ ಅಗ್ರಗಣ್ಯ ಸದಸ್ಯರನ್ನು ಹೊಂದಿದ್ದ ರಾಜ್ಯ ವಿಧಾನ ಪರಿಷತ್ ಈಗ ಹಿಂದಿನಂತೆ ಇಲ್ಲ ಎಂಬುದನ್ನು ಹೇಳಲೇ ಬೇಕಾಗಿದೆ. ಪತ್ರಕರ್ತರು ತಮ್ಮ ಬಗ್ಗೆ ಮತ್ತು ತಮ್ಮ ಕೆಲಸದ ಬಗ್ಗೆ ಅಷ್ಟಾಗಿ ಬರೆದುಕೊಳ್ಳದಿದ್ದರೂ, ಬೊಟ್ಟು ಮಾಡಬೇಕಾದ ಸಂಗತಿಯೆಂದರೆ, ರಾಜಕಾರಣಿಗಳೊಂದಿಗೆ ಅತಿಯಾದ ಸಂಪರ್ಕದಿಂದಾಗಿ ರಾಜ್ಯದ ಮಾಧ್ಯಮಗಳ ನೈತಿಕತೆ ಕುಂದುತ್ತಿದೆ. ಜಾತಿ ವಾದ ರಾಜ್ಯ ರಾಜಕೀಯವನ್ನು ಮಾತ್ರವಲ್ಲದೆ ಮಾಧ್ಯಮವನ್ನೂ ಆವರಿಸಿದೆ. ಆದರೆ ರಾಜ್ಯದ ಪತ್ರಕರ್ತರ ವರ್ಗದಲ್ಲಿರುವ “ಅಹಿಂದ’ ಮನೋಭಾವನೆ ದೂರಾಗ ಕೂಡದು. ಹಿಂದೆಲ್ಲ ಕನ್ನಡ ಮತ್ತು ಇಂಗ್ಲಿಷ್ ಪತ್ರಕರ್ತರಲ್ಲಿ “ಸೀನಿಯರ್’, “ಜೂನಿಯರ್’ ಎಂಬ ವರ್ಗೀಕರಣ ಮಾತ್ರವೇ ಇತ್ತು. ನಮ್ಮಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪ್ರಸ್‌ಕ್ಲಬ್ ಆಫ್ ಬೆಂಗಳೂರು, ರಿಪೋರ್ಟರ್ ಗಿಲ್ಡ್ ಮುಂತಾದ ಪತ್ರಕರ್ತರ ಸಂಘಟನೆಗಳಿವೆ. ಇತ್ತೀಚೆಗೆ ಜಾತಿ ಸಂಬಂಧಗಳು ಮುಂಚೂಣಿಗೆ ಬಂದಿವೆ. ಉದಾಹರಣೆಗೆ ಹೇಳುವುದಾದರೆ “ಹಿಂದುಳಿದ ವರ್ಗದ ಪತ್ರಕರ್ತರ ವೇದಿಕೆ’ ಎಂಬುದೊಂದು ಹೊಸದಾಗಿ ರಚನೆಯಾಗಿದೆ. ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು ಇದಕ್ಕೆ ಸ್ಫೂರ್ತಿಯಾಗಿರಬಹುದು. ಕೆಲವೊಂದು ಪ್ರದೇಶಗಳನ್ನು ಬಿಟ್ಟರೆ ಪತ್ರಕರ್ತರು ನಿರ್ದಿಷ್ಟ ರಾಜಕೀಯ ಪಕ್ಷಗಳು, ಸಿದ್ಧಾಂತಗಳ ಹಿಂದೆ ಬಿದ್ದಿರುವುದು ತೀರಾ ವಿರಳ. ತಮಿಳುನಾಡು, ಕೇರಳ, ಪಶ್ಚಿಮಬಂಗಾಳ, ಮಹಾರಾಷ್ಟ್ರದಲ್ಲಿ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ನಿರ್ದಿಷ್ಟ ಪಕ್ಷ ಅಥವಾ ಸಿದ್ಧಾಂತಕ್ಕೆ ಬದ್ಧರಾಗಿರುವ ಪತ್ರಕರ್ತನ್ನು ಕಾಣಬಹುದು. ತಾವು ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ರಾಜಕೀಯ ಸಂಪರ್ಕದಿಂದಾಗಿಯೇ ಪರ್ತಕರ್ತರು ಕೆಲವೊಮ್ಮೆ ಅನಿವಾರ್ಯ ವಾಗಿ ಸಿದ್ಧಾಂತ ಅಥವಾ ಪಕ್ಷಗಳಿಗೆ ಬದ್ಧರಾಗಿರ ಬೇಕಾಗುತ್ತದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶ್ರೀಮಂತ ರಾಜಕಾರಣಿಗಳು ಟಿವಿ ಚಾನೆಲ್‌ಗಳನ್ನು ಹೊಂದಿದ್ದು, ಅದರಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೂ, ಆಯಾ ರಾಜಕೀಯ ಪಕ್ಷಕ್ಕೇ ಸೀಮಿತರಾಗಿರುತ್ತಾರೆ.
ಪಂಚತಾರಾ ಆಕರ್ಷಣೆ
ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿದ್ದರಾಜು ಅವರು ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಪಂಗಡ/ಜಾತಿಗೆ ಸೇರಿದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಮತ್ತು ಪತ್ರಕರ್ತರನ್ನು ಹುರಿದುಂಬಿಸಿ ಮಾತನಾಡಿದರು ಎಂಬುದನ್ನು ನಾನು ಕೇಳಿದ್ದೇನೆ.ಅವರ ಪ್ರಯತ್ನವನ್ನು ಮೆಚ್ಚಿಕೊಳ್ಳಬೇಕು. ಪತ್ರಿಕೋದ್ಯಮ ಸಮಾಜದ ಯಾವುದೋ ಒಂದು ಸೀಮಿತ ವರ್ಗದಿಂದ ನಿಯಂತ್ರಿಸುವಂತಿರಬಾರದು. ಈ ನಿಟ್ಟಿನಲ್ಲಿ ಸಿದ್ದರಾಜು ಅವರ ಪ್ರೇರಣೆಯ ಮಾತುಗಳನ್ನು ನಾನು ಶ್ಲಾ ಸುತ್ತೇನೆ. ವಿವಿಧ ಸಮುದಾಯದ ವ್ಯಕ್ತಿಗಳು ಈ ಕ್ಷೇತ್ರಕ್ಕೆ ಅಗತ್ಯವಾಗಿ ಬರಬೇಕು. ಆದರೆ ಒಂದು ಬಾರಿ ಅವರು ಕಾರ್ಯಕ್ಷೇತ್ರಕ್ಕೆ ಬಂದ ಬಳಿಕ ನಿಷ್ಪಕ್ಷಪಾತವಾಗಿ ವರ್ತಿಸಬೇಕು ಮತ್ತು ತಮ್ಮ ವೃತ್ತಿಗೆ ಮಾತ್ರ ಬದ್ಧರಾಗಿರಬೇಕು. ಟೀವಿ ಅಥವಾ ಪತ್ರಿಕೆ ಸಮಾಜದ ವಿವಿಧ ವರ್ಗಗಳನ್ನು ತಲಪುತ್ತದೆ.
ಮಾಧ್ಯಮ ಇಂದು ಬಹಳ ಬದಲಾಗಿದೆ ಮತ್ತು ಕೆಲ ಮಾಧ್ಯಮಗಳು ತಮ್ಮ ಪರಮ ಧ್ಯೇಯದೊಂದಿಗೆ ರಾಜಿ ಮಾಡಿಕೊಂಡಿವೆ. ಬೆಂಗಳೂರಿನ ಪತ್ರಿಕೋದ್ಯಮದ ಪಡಸಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಕುರಿತು ಕೇಳಿ ಬರುವ ಲೇವಡಿಯೆಂದರೆ ಅವುಗಳು “ಎಂ.ಜಿ.ರೋಡ್’ (ಮಹಾತ್ಮಾ ಗಾಂಧಿ ರಸ್ತೆ) ಕೇಂದ್ರಿತವಾಗಿಯೇ ಇದ್ದು ಸೆಲೆಬ್ರಿಟಿಗಳ ಕುರಿತಾಗಿಯೇ ಹೆಚ್ಚು ಬರೆಯುತ್ತಿವೆ. ನಗರದ ಹಳೆ ಬಡಾವಣೆಗಳ ಬಗ್ಗೆ ಅವುಗಳಿಗೆ ಗೊತ್ತಿಲ್ಲ ಮತ್ತು ಸಾಮಾನ್ಯವರ್ಗದವರ ಕುರಿತು ಬಹಳ ಕಡಿಮೆ ಬರೆಯುತ್ತವೆ ಎಂಬುದು. ಅರ್ಥಾತ್ ಇವುಗಳು ಪಂಚ ತಾರಾ ಸಂಸ್ಕೃತಿಯನ್ನೇ ಬೆಂಬಲಿಸುತ್ತಿವೆ ಎನ್ನುವುದಾಗಿದೆ. ಬ್ಯುಸಿನೆಸ್ ಸುದ್ದಿ ಪತ್ರಿಕೆಗಳೂ ಅತ್ಯುನ್ನತ ಸಂಬಳದ ಕಾರ್ಪೊರೆಟ್ ವಲಯದ ಸುದ್ದಿಗಳಿಷ್ಟೇ ಸೀಮಿತವಾಗುತ್ತಿವೆ. ಪಂಚತಾರಾ ಸಂಸ್ಕೃತಿ ಯನ್ನು ಪ್ರೋತ್ಸಾಹಿತ್ತಿರುವುದಕ್ಕೆ ಮಾಧ್ಯಮಗಳನ್ನು ಹೀಗಳೆಯಲು ಸಾಧ್ಯವಿಲ್ಲ. ನಮ್ಮ ಹೆಚ್ಚಿನ ಸಚಿವರುಗಳು ಸರಕಾರಿ ಅತಿಥಿಗೃಹಗಳ ಬದಲಿಗೆ ಪಂಚತಾರಾ ಹೋಟೆಲುಗಳಲ್ಲಿ ತಂಗಲು ಬಯಸುತ್ತಾರೆ. ಹಲವು ವರ್ಷಗಳ ಹಿಂದೆ ಎಡಪಕ್ಷದರು ಕಾರ್ಮಿ ಕರ ವೇದಿಕೆಗಳಲ್ಲಿ ಅತ್ಯಮೋಘ ಭಾಷಣಗಳನ್ನು ಮಾಡಿ ಬಳಿಕ ತಾರಾ ಹೋಟೆಲುಗಳಲ್ಲಿ ಊಟಕ್ಕೆ ತೆರಳಿರುವುದನ್ನು ಗಮನಿಸಿದ್ದೇನೆ!
– ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.