ಹೈಫಾ ಸಂದರ್ಭದಲ್ಲಿ ನೆನಪಾದ ಮೈಸೂರು ಯೋಧರ ಶೌರ್ಯಗಾಥೆ 


Team Udayavani, Sep 26, 2018, 6:00 AM IST

e-27.jpg

ಹೈಫಾ ಯುದ್ಧವ ಸಂಭ್ರಮಿಸುತ್ತಿರುವಾಗಲೇ ಬೆಂಗಳೂರಿನಲ್ಲಿ ಇರುವ ಕರ್ನಲ್‌ ದೇಸರಾಜ್‌ ಅರಸ್‌ ರಸ್ತೆಯ ಯುದ್ಧ ಸ್ಮಾರಕ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ. ಒಂದು ಬಾರಿ ಸೇನೆಯು ಈ ಸ್ಮಾರಕವನ್ನು ಅಭಿವೃದ್ಧಿಪಡಿಸಿತ್ತು. ಮತ್ತೆ ಅದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ರಕ್ಷಣಾ ವಿಭಾಗದ ಮಂತ್ರಾಲಯವಾಗಿರುವ ಸಿಐಎಲ್‌ ಪ್ರವೇಶದ್ವಾರದ ಮುಂಭಾಗದಲ್ಲೇ ಇದ್ದರೂ ಅದರ ರಕ್ಷಣೆಗೆ ಲಕ್ಷ್ಯ ಕೊಡದಿರುವುದು ಅಚ್ಚರಿಯ ಸಂಗತಿ.

ಮೊದಲ ವಿಶ್ವ ಮಹಾಯುದ್ಧ ಸಂಭವಿಸಿ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹೈಫಾ ಯುದ್ಧದ ಸ್ಮರಣ ಕಾರ್ಯಕ್ರಮದಲ್ಲಿ ವಿಸ್ಮತಿಗೆ ಸರಿದಿರುವ ಬೆಂಗಳೂರಿನ ಎರಡು ಪ್ರಮುಖ ಸೈನ್ಯ ದಳಗಳ ಕುರಿತು ಗಮನ ಹರಿಸುವಂತೆ ಮಾಡಿತು. ಅವೆಂದರೆ, ಮೈಸೂರು ಲ್ಯಾನ್ಸರ್ಸ್‌ ಹಾಗೂ ಮೈಸೂರು ಇನೆಟ್ರಿ. ಭೂಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಜೈಪುರದಲ್ಲಿ ಕಳೆದ ಶನಿವಾರ ನಡೆದ ಶತಮಾನೋತ್ಸವ ಸ್ಮರಣೆಯ ಪರೇಡ್‌ನ‌ಲ್ಲಿ ಧ್ವಜವಂದನೆ ಸ್ವೀಕರಿಸಿರುವುದು ಮೈಸೂರು ಹಾಗೂ ಇತರ ರಾಜ್ಯಗಳ ಸೈನ್ಯ ಶಕ್ತಿಗೆ ಬಹಳ ತಡವಾಗಿಯಾದರೂ ಸಂದ ಗೌರವ ಎಂದು ಹೇಳಲು ಅಡ್ಡಿಯಿಲ್ಲ. ಈ ಪರೇಡ್‌ ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆದಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು. ಏಕೆಂದರೆ, ಈಗಿನ ಇಸ್ರೇಲ್‌ನಲ್ಲಿ ನಡೆದಿದ್ದ ಆ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್‌ ಪ್ರಧಾನ ಪಾತ್ರ ವಹಿಸಿತ್ತು. ಹೈಫಾ ಯುದ್ಧ ಸೆಪ್ಟಂಬರ್‌ 23, 1918ರ ಸಂದರ್ಭದಲ್ಲಿ ನಡೆದಿತ್ತು. ಕ್ಷಿಪ್ರ ಹಾಗೂ ಪೂರ್ಣ ನಾಶಕ್ಕೆ ಹೆಸರಾದ ಒಟ್ಟೊಮನ್‌ ಫೋರ್ಸ್‌ ತುರ್ಕರ ಸೈನ್ಯದಿಂದ ಇಸ್ರೇಲಿ ಪಟ್ಟಣವನ್ನು ಸ್ವತಂತ್ರಗೊಳಿಸುವುದು ಈ ಸಮರದ ಉದ್ದೇಶವಾಗಿತ್ತು. ಮೊದಲ ವಿಶ್ವ ಮಹಾಯುದ್ಧದಲ್ಲಿ ಟರ್ಕಿ ದೇಶವು ಕೈಸರನ ಜರ್ಮನಿ ಹಾಗೂ ಆಸ್ಟ್ರೋ – ಹಂಗರಿಯನ್‌ ಸಾಮ್ರಾಜ್ಯದ ಪರವಾಗಿ ಬ್ರಿಟಿಷ್‌ ಹಾಗೂ ಇತರರ ಸೈನ್ಯದ ವಿರುದ್ಧ ಸೆಣಸಿತ್ತು. ಈ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್‌ (ಸೈನಿಕರು ಕುದುರೆಗಳ ಮೇಲೆ ಕುಳಿತು ಉದ್ದನೆಯ ಈಟಿ ಅಥವಾ ಭರ್ಚಿಗಳನ್ನು ಹಿಡಿದಿರುತ್ತಿದ್ದ ಕಾರಣ ಈ ಹೆಸರು ಬಂತು) ದಳವು ಫೀಲ್ಡ್‌ ಮಾರ್ಷಲ್‌ ಆರ್ಕಿಬಾಲ್ಡ್‌ ವಾವೆಲ್‌ ಅವರ ಮಾರ್ಗದರ್ಶನದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿತ್ತು. ಆ ಬಳಿಕ ವಾವೆಲ್‌ ಭಾರತದ ವೈಸರಾಯ್‌ ಕೂಡ ಆದರು. 

ಹೈಫಾ ಯುದ್ಧದಲ್ಲಿ ಶತ್ರುಗಳನ್ನು ಸದೆಬಡಿದ ಕನ್ನಡಿಗ ಯೋಧರ ಸಾಹಸ ಈಗಿನ ಯುವಕರಿಗೆ ಸ್ಫೂರ್ತಿಯಾಗುವಂತಿದೆ. ಆದರೆ ಕನ್ನಡಿಗರ ಯುದ್ಧಕೌಶಲದ ಕುರಿತು ಉಲ್ಲೇಖಗಳು ತೀರಾ ಕಡಿಮೆ ಇವೆ. ಸಿಖ್ಬರು, ಜಾಟರು, ರಜಪೂತರು ಹಾಗೂ ಮರಾಠರ ಸಮುದಾಯಗಳ ಸಮರ ಕಲೆ ಶ್ರೇಷ್ಠ ಎಂದು ಹೇಳುವುದಿದೆ. ಈ ಪಟ್ಟಿಯಿಂದ ಬ್ರಿಟಿಷರು ಕನ್ನಡಿಗರು ಕೈಬಿಡಲು ಕಾರಣ ಹೈದರ್‌ ಆಲಿ ಹಾಗೂ ಟಿಪ್ಪು ಸುಲ್ತಾನರು ತಮಗಿಂತ ಹೆಚ್ಚು ಸಮರ್ಥ ಎಂದು ಭಾವಿಸಿದ್ದ ಬ್ರಿಟಿಷ್‌ ಸೈನ್ಯವನ್ನು ಸೋಲಿಸಿದ್ದೇ ಇರಬೇಕು. ಸೇನೆಗೆ ಕರ್ನಾಟಕದ ಕೊಡುಗೆ ಎಷ್ಟೆಂಬುದರ ಅರಿವು ನಮಗಿಲ್ಲ. ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ, ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರಲ್ಲದೆ, ದೇಶದ ಮೂರನೇ ಭೂಸೇನಾ ಮುಖ್ಯಸ್ಥ ಜನರಲ್‌ ಗೋಪಾಲ ಗುರುನಾಥ ಬೇವೂರು ಅವರೂ ಕನ್ನಡಿಗರೇ ಎಂಬುದು ಉಲ್ಲೇಖನೀಯ. ಜನರಲ್‌ ಬೇವೂರು ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿಯವರು. 

ಹೊಸದಿಲ್ಲಿಯ ತೀನ್‌ ಹೌಸ್‌ (ನೆಹರೂ ಸ್ಮಾರಕ) ಮುಂಭಾಗದಲ್ಲಿ ನಿಲ್ಲಿಸಿರುವ ಮೂವರು ಕುದುರೆ ಸವಾರರ ಪ್ರತಿಮೆಗಳಲ್ಲಿ ಮೈಸೂರು ಲ್ಯಾನ್ಸರ್‌ ಕೊಡುಗೆಯ ಸ್ಮರಣೆ, ಶ್ಲಾಘನೆಯಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮೈಸೂರು, ಹೈದರಾಬಾದ್‌ ಹಾಗೂ ಜೋಧಪುರದ ಅಶ್ವಪಡೆಯನ್ನೇ ಈ ಮೂರು ಪ್ರತಿಮೆಗಳು ಪ್ರತಿನಿಧಿಸುತ್ತವೆ. 1947ರ ವರೆಗೂ ಭಾರತದ ಕಮಾಂಡರ್‌ ಇನ್‌ ಚೀಫ್ ನಿವಾಸವಾಗಿ ತೀನ್‌ ಮೂರ್ತಿ ಹೌಸ್‌ ಬಳಕೆಯಾಗುತ್ತಿತ್ತು. 

ಬ್ರಿಟಿಷ್‌ ಸೈನ್ಯದ ಇತಿಹಾಸ ಬರೆದ ಫೀಲ್ಡ್‌ ಮಾರ್ಷಲ್‌ ವಾವೆಲ್‌ ಹಾಗೂ ಇತರ ಲೇಖಕರು ಮೈಸೂರು ಲ್ಯಾನ್ಸರ್ಸ್‌ ಬ್ರಿಟಿಷ್‌ ಸೈನ್ಯದ ಅಶ್ವಾರೋಹಿ ದಳದ ಸಹಯೋಗದಲ್ಲಿ ಒಟೊಮನ್‌ ಸೈನ್ಯದ ರಕ್ಷಣಾ ವ್ಯೂಹವನ್ನು ಭೇದಿಸಿ, ಜರ್ಮನ್‌ ಯೋಧರ ಬಂದೂಕುಗಳಿಗೆ ಎದೆಯೊಡ್ಡಿ ಹೈಫಾ ಪಟ್ಟಣವನ್ನು ಹೇಗೆ ತನ್ನ ಸುಪರ್ದಿಗೆ ಪಡೆಯಿತೆಂದು ವಿವರಿಸಿದ್ದಾರೆ. ಈ ಯುದ್ಧದಲ್ಲಿ ಜೈಪುರ ಹಾಗೂ ಹೈದರಾಬಾದ್‌ ಅಶ್ವಾರೋಹಿ ಪಡೆಗಳೂ ಪಾಲ್ಗೊಂಡಿದ್ದವು. ಆ ದಿನಗಳಲ್ಲಿ ಮೈಸೂರು ಹಾಗೂ ಜೋಧಪುರ ಅಶ್ವಪಡೆಗಳು ಅಕ್ಟೋಬರ್‌ 25, 1918ರಂದು ಸಿರಿಯಾದ ಪಟ್ಟಣ ಅಲೆಪ್ಪೊವನ್ನು ವಶಪಡಿಸಿಕೊಂಡ ಬಗೆಯೂ ಶ್ಲಾಘನೆಗೆ ಪಾತ್ರವಾಗಿದೆ. ಯುದ್ಧ ಗೆದ್ದು ಮರಳುತ್ತಿರುವ ಮೈಸೂರಿನ ಅಶ್ವಾರೋಹಿಗಳ ಮಸುಕಾದ ಒಂದು ಭಾವಚಿತ್ರ ರಾಜ್ಯದ ಜನರಿಗೆ ಹೆಮ್ಮೆಯ ಸಂಗತಿ.

ಶತಮಾನದಷ್ಟು ಹಿಂದಿನ ಹೈಫಾ ಯುದ್ಧವನ್ನು ಸಂಭ್ರಮಿಸುತ್ತಿರುವಾಗಲೇ ಬೆಂಗಳೂರಿನ ದೂರದರ್ಶನ ಟವರ್‌ ಸಮೀಪವೇ ಇರುವ ಕರ್ನಲ್‌ ದೇಸರಾಜ್‌ ಅರಸ್‌ ರಸ್ತೆಯ ಯುದ್ಧ ಸ್ಮಾರಕ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ. ಒಂದು ಬಾರಿ ಸೇನೆಯು ಈ ಸ್ಮಾರಕವನ್ನು ಅಭಿವೃದ್ಧಿಪಡಿಸಿತ್ತು. ಮತ್ತೆ ಅದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ರಕ್ಷಣಾ ವಿಭಾಗದ ಮಂತ್ರಾಲಯವಾಗಿರುವ ಕಂಟ್ರೋಲರ್‌ ಆಫ್ ಇನ್‌ ಸ್ಪೆಕ್ಷನ್‌ ಎಲೆಕ್ಟ್ರಾನಿಕ್ಸ್‌ (ಸಿಐಎಲ್‌) ಪ್ರವೇಶದ್ವಾರದ ಮುಂಭಾಗದಲ್ಲೇ ಇದ್ದರೂ ಅದರ ರಕ್ಷಣೆಗೆ ಲಕ್ಷ್ಯ ಕೊಡದಿರುವುದು ಅಚ್ಚರಿಯ ಸಂಗತಿ. ಮೊದಲ ಮಹಾಯುದ್ಧದಲ್ಲಿ ಮಡಿದ ಕನ್ನಡಿಗರ ಸ್ಮಾರಕ ಅದು. ಮೈಸೂರು ಲ್ಯಾನ್ಸರ್‌ ಪಾಲ್ಗೊಂಡಿದ್ದ ಯುದ್ಧದ ಹಲವು ವಿಭಾಗಗಳಲ್ಲಿ ಶೌರ್ಯ ಮೆರೆದು ಹುತಾತ್ಮರಾದ ಸೈನಿಕರ ಹೆಸರುಗಳನ್ನು ಕೆತ್ತಲಾಗಿದ್ದು, ಅವುಗಳನ್ನು ಓದುತ್ತ ಕಣ್ಣುಗಳೇ ದಣಿಯುವಷ್ಟು ದೊಡ್ಡ ಪಟ್ಟಿ ಅದರಲ್ಲಿದೆ. 

ಆದರೆ, ಹೈಫಾ ಯುದ್ಧದ ಉಲ್ಲೇಖ ಈ ಸ್ಮಾರಕದಲ್ಲಿ ಇಲ್ಲದಿರುವುದು ಆಶ್ಚರ್ಯಕರ. ಹಾಗಿದ್ದರೂ ಮೈಸೂರು ಲ್ಯಾನ್ಸರ್ಸ್‌ ಸುಯೆಜ್‌ ಕಾಲುವೆ – ಈಜಿಪ್ಟ್ (1915-17), ಗಾಝಾ- ಮೆಗಿಡ್ಡೊ – ಶರೊನ್‌ – ಡಮಾಸ್ಕಸ್‌ – ಪ್ಯಾಲೆಸ್ತೀನ್‌ (1917-18) ಯುದ್ಧಗಳಲ್ಲಿ ಪಾಲ್ಗೊಂಡಿರುವುದನ್ನು ಹಾಗೂ ಮೈಸೂರು ಟ್ರಾನ್ಸ್‌ಪೊàರ್ಟ್‌ ಕಾರ್ಪ್‌ ಪಡೆಯು ಟೈಗ್ರಿಸ್‌ (1918), ಕುತ್‌-ಅಲ್‌-ಅಮಾರಾ (1917) ಹಾಗೂ ಬಾಗ್ಧಾದ್‌ – ಮೆಸಪಟೋಮಿಯಾ (1916-18) ಯುದ್ಧಗಳಲ್ಲಿ ಭಾಗಿಯಾಗಿದ್ದನ್ನು ಉಲ್ಲೇಖೀಸಲಾಗಿದೆ.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜೀವನ ಚರಿತ್ರೆಯನ್ನು ಬರೆದಿರುವ ಖ್ಯಾತ ಕನ್ನಡ ಲೇಖಕ ಸಿ.ಕೆ. ವೆಂಕಟರಮಣಯ್ಯ ಅವರು ಮೈಸೂರು ಲ್ಯಾನ್ಸರ್ಸ್‌ ಹಾಗೂ ಮೊದಲ ಮಹಾಯುದ್ಧದ ಕುರಿತು ವಿಸ್ತಾರವಾಗಿ ವಿವರಿಸಿದ್ದಾರೆ. ಅದು 1914ರ ಸೆಪ್ಟಂಬರ್‌ ತಿಂಗಳು. ಮೈಸೂರು ಇಂಪೆರಿಯಲ್‌ ಸರ್ವಿಸ್‌ ಲ್ಯಾನ್ಯರ್ಸ್‌ ಈಜಿಪ್ಟಿನಿಂದ ಸೇವೆಯ ಆದೇಶವನ್ನು ಪಡೆಯಿತು. ಲೆಫ್ಟಿನೆಂಟ್‌ ಕರ್ನಲ್‌ ಬಿ. ಚಾಮರಾಜ ಅರಸ್‌ ಬಹಾದ್ದೂರ್‌ ಅವರ ನೇತೃತ್ವದಲ್ಲಿ ಅಶ್ವಸೇನೆ ಅಕ್ಟೋಬರ್‌ 13, 1914ರಂದು ಬೆಂಗಳೂರಿನಿಂದ ತೆರಳಿತು. ದರ್ಬಾರಿನ ಪ್ರತಿನಿಧಿಯಾಗಿ ಮಹಾರಾಜರ ಭಾವ ಕರ್ನಲ್‌ ಕೆ. ದೇಸರಾಜ ಅವರೂ ಅಶ್ವದಳದೊಂದಿಗೆ ತೆರಳಿದ್ದರು. ಆದರೆ, ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಈ ಹಿಂದೆ ಬ್ರಿಟಿಷರ ಖಾಸಗಿ ಸೈನ್ಯ ಹಡ್ಸನ್ಸ್‌ ಹಾರ್ಸ್‌ನಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಲ್‌ ಚಾಮರಾಜ ಅರಸ್‌ ಅವರ ಅಳಿಯ ಲಿಂಗರಾಜ ಅರಸ್‌ ಅವರು ಯುದ್ಧಭೂಮಿಯಲ್ಲಿ ಹತರಾದರು. ಯುದ್ಧ ಸ್ಮಾರಕದಲ್ಲಿ ಕೆತ್ತಿರುವ ಮೊದಲ ಹೆಸರು ಅವರದೇ ಆಗಿದೆ. ತಮ್ಮ ಸೈನ್ಯವನ್ನು ಮುನ್ನಡೆಸುವಲ್ಲಿ ಚಾಮರಾಜ ಅರಸರು ಭಾರೀ ಧೈರ್ಯ ತೋರಿದ್ದರು. ಯುದ್ಧದಿಂದ ಮರಳಿದ ಬಳಿಕ ಅವರನ್ನು ಮೈಸೂರು ರಾಜ್ಯದ ಸೇನೆಯ ಮುಖ್ಯಸ್ಥರಾಗಿ ನೇಮಿಸಲಾಯಿತು. 

ಆ ಯುದ್ಧದಲ್ಲಿ ಲ್ಯಾನ್ಸರ್‌ ಅಧಿಕಾರಿಯಾಗಿ ಅತ್ಯದ್ಭುತ ಸಾಧನೆ ಮಾಡಿದವರು ಲೆಫ್ಟಿನೆಂಟ್‌ ಕರ್ನಲ್‌ ಬಿ.ಪಿ. ಕೃಷ್ಣೇ ಅರಸರು. ಅವರು ಯುವರಾಜ ಕಂಠೀರವ ನರಸರಾಜ ಒಡೆಯರ್‌ ಅವರ ಷಡ್ಕ. ಮೀರ್‌ ತುರಬ್‌ ಆಲಿ ಹಾಗೂ ರಿಸಲ್ದಾರ್‌ ಸುಬ್ಬರಾಜ ಅರಸರ ಹೆಸರುಗಳೂ ಉಲ್ಲೇಖನೀಯ. ಸುಯೆಜ್‌ ಕಾಲುವೆ ಪ್ರದೇಶದಲ್ಲಿ 1918ರಲ್ಲಿ ನಡೆದ ಯುದ್ಧದಲ್ಲಿ ಕೃಷ್ಣೇ ಅರಸ್‌ ತೀವ್ರವಾಗಿ ಗಾಯಗೊಂಡಿದ್ದರು. ಆದರೂ ಬಳಲಿಕೆಯಿಂದ ಕುಸಿಯುವ ವರೆಗೂ ಯುದ್ಧದಲ್ಲಿ ತನ್ನ ಪಡೆಯನ್ನು ಮುನ್ನಡೆಸಿದರು. ಅವರ ಅಸಾಮಾನ್ಯ ಶೌರ್ಯಕ್ಕೆ ಅರ್ಹವಾಗಿಯೇ ಬ್ರಿಟಿಷ್‌ ಆಧಿಪತ್ಯ ಮಿಲಿಟರಿ ಕ್ರಾಸ್‌ ಪ್ರದಾನ ಮಾಡಿತು. ಮಹಾರಾಜರೂ ಕ್ಯಾಪ್ಟರ್‌ ಎಂಬ ಬಿರುದು ನೀಡಿದರು. ತುರಬ್‌ ಆಲಿ ಈಜಿಪ್ಟ್ ಕಾರ್ಯಾಚರಣೆ ವೇಳೆ ಮೆಷಿನ್‌ ಗನ್‌ ವಿಭಾಗದ ಉಸ್ತುವಾರಿಯಾಗಿದ್ದರು. ಅವರಿಗೂ ಇಂಡಿಯನ್‌ ಆರ್ಡರ್‌ ಆಫ್ ಮೆರಿಟ್‌ ಗೌರವ ಲಭಿಸಿತು. ಸುಬ್ಬರಾಜ ಅರಸ್‌ ಅವರೂ ಬ್ರಿಟಿಷ್‌ ಸರಕಾರದಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸಿದರು. 

1953ರಲ್ಲಿ ಭಾರತೀಯ ಸೇನೆಯ 61ನೇ ಅಶ್ವದಳದಲ್ಲಿ ವಿಲೀನವಾಗುವ ಮೂಲಕ ಮೈಸೂರು ಲ್ಯಾನ್ಸರ್ಸ್‌ ಇತಿಹಾಸದ ಪುಟಗಳನ್ನು ಸೇರಿತು. ಇತರ ಸಂಸ್ಥಾನಗಳ ಅಶ್ವದಳಗಳೂ ಸೇನೆಯಲ್ಲಿ ವಿಲೀನವಾದವು. ಕರ್ನಲ್‌ ಎ.ಆರ್‌. ಬಿಜಲಿ ಮೈಸೂರು ಲ್ಯಾನ್ಸರ್ಸ್‌ ನ ಕೊನೆಯ ಕಮಾಂಡರ್‌ ಆಗಿದ್ದರು (ಬಳಿಕ ಅವರು ಕೇಂದ್ರೀಯ ಮುಸ್ಲಿಂ ಸಂಘದ ಅಧ್ಯಕ್ಷರೂ ಆದರು). ಅದಕ್ಕೂ ಮೊದಲು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಅವರ ಸಂಬಂಧಿ ಲೆಫ್ಟಿನೆಂಟ್‌ ಕರ್ನಲ್‌ ಶ್ಯಾಮರಾವ್‌ ಸಿಂಧಿಯಾ ಮೈಸೂರು ಲ್ಯಾನ್ಸರ್‌ ಮುಖ್ಯಸ್ಥರಾಗಿದ್ದರು. 

ಮೈಸೂರು ಇನ್‌ ಫ್ಯಾಂಟ್ರಿಯ ಸಾಧನೆಗಳೂ ಉಲ್ಲೇಖನೀಯ. ಅದರ ಸೈನಿಕರು 1940ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾ ಕಾರ್ಯಾಚರಣೆಯಲ್ಲಿ, 1947ರಲ್ಲಿ ಕಾಶ್ಮೀರ ಯುದ್ಧದಲ್ಲಿ ಹಾಗೂ 1948ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಪೊಲೀಸ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಎರಡನೇ ಮಹಾಯುದ್ಧದ ವೇಳೆ ಜಪಾನೀಯರು ಈ ದಳದ 517 ಸೈನಿಕರನ್ನು ಬಂಧಿಸಿ ಯುದ್ಧ ಖೈದಿಗಳಾಗಿ ಮಾಡಿಕೊಂಡಿದ್ದರೂ ಈ ದಳದ ಸೇವೆ ಹೆಚ್ಚು ಉಲ್ಲೇಖ ಪಡೆದಿಲ್ಲ. ಸುಭಾಶ್ಚಂದ್ರ ಬೋಸ್‌ ಅವರ ಇಂಡಿಯನ್‌ ನ್ಯಾಷನಲ್‌ ಆರ್ಮಿ ಸೇರಿದ್ದರಿಂದ ಈ ದಳದ ಸೇವೆಯನ್ನು ಪರಿಗಣಿಸಿಲ್ಲ ಎಂಬ ಊಹೆಯೂ ಇದೆ. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ವಂಶಸ್ಥರಾದ ಕರ್ನಲ್‌ ಡಿ.ಸಿ. ನಂಜರಾಜ ಬಹಾದ್ದೂರ್‌ (1894-1977) ಅವರು ಮೈಸೂರು ಇನ್‌ ಫ್ಯಾಂಟ್ರಿಯ ಪ್ರಖ್ಯಾತ ಕಮಾಂಡರ್‌ಗಳಲ್ಲಿ ಒಬ್ಬರು. ಅವರು ಹೆಸರಾಂತ ಪೋಲೋ ಆಟಗಾರರೂ ಆಗಿದ್ದರು. ದೇಶ ಸ್ವತಂತ್ರವಾದ ಸಂದರ್ಭದಲ್ಲಿ ಬ್ರಿಗೇಡಿಯರ್‌ ಕೆ.ಎಚ್‌. ಪ್ರಿಸ್ಟನ್‌ ಅವರು ಮೈಸೂರು ರಾಜ್ಯದ ಸೇನೆಯ ಕಮಾಂಡೆಂಟ್‌ ಆಗಿದ್ದರು. ಮತ್ತೂಬ್ಬ ಕಮಾಂಡೆಂಟ್‌ ಬ್ರಿಗೇಡಿಯರ್‌ ಸಿ.ಬಿ. ಪೊನ್ನಪ್ಪ ಅವರ ಆತ್ಮಕತೆಯೂ ಲಭ್ಯವಿದೆ. ಮೈಸೂರು ರಾಜ್ಯದ ಖ್ಯಾತ ಕ್ರಿಕೆಟ್‌ ಆಟಗಾರರಾಗಿದ್ದ ಸಿ.ಜೆ. ರಾಮದೇವ್‌ ಅವರೂ ಇನ್‌ಫ್ಯಾಂಟ್ರಿಯ ಒಬ್ಬ ಅಧಿಕಾರಿಯಾಗಿದ್ದರು. ದುರದೃಷ್ಟವಶಾತ್‌ ಅವರು ಟೆಸ್ಟ್‌ ಪಂದ್ಯಗಳನ್ನು ಆಡಲಾಗಲಿಲ್ಲ. ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎನ್‌. ನರಸಿಂಹ ರಾವು ಹಾಗೂ ಮೇಜರ್‌ ಎ.ಎನ್‌. ಪುಟ್ಟನಂಜರಾಜ ಅರಸ್‌ ಅವರ ಸೇವೆಯೂ ಉಲ್ಲೇಖನೀಯ.

ಬೆಂಗಳೂರಿನ ಜಯಮಹಲ್‌ ರಸ್ತೆಯಲ್ಲಿರುವ ಮೈಸೂರು ರಾಜ್ಯದ ಸೈನ್ಯಕ್ಕೆ ಸಂಬಂಧಿಸಿದ ಭೂಮಿಯಲ್ಲೀಗ ಭೂಸೇನೆಯ ಪಯೋನಿಯರ್‌ ಕಾರ್ಪ್‌Õ ಸೆಂಟರ್‌, ಸಿಐಎಲ್‌ ಹಾಗೂ ದೂರದರ್ಶನ ಕಾರ್ಯ ನಿರ್ವಹಿಸುತ್ತಿವೆ. ತನ್ನ ಉಚ್ಛಾಯ ಸ್ಥಿತಿಯಲ್ಲಿ ಮೈಸೂರು ಲ್ಯಾನ್ಸರ್ಸ್‌ 600 ಕುದುರೆಗಳನ್ನು ಹೊಂದಿತ್ತು. ಇಂದಿಗೂ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಸವಾರ್‌ ಲೈನ್ಸ್‌ (ಮುನಿರೆಡ್ಡಿ ಪಾಳ್ಯ) ಹಾಗೂ ರಿಸಲ್ದಾರ್‌ ಸ್ಟ್ರೀಟ್‌ (ಶೇಷಾದ್ರಿಪುರಂ) ಇತ್ಯಾದಿ ಹೆಸರುಗಳಿವೆ. ಮೈಸೂರು ಲ್ಯಾನ್ಸರ್ಸ್‌, ಮೈಸೂರು ಇನ್‌ಫ್ಯಾಂಟ್ರಿ ಸೇವೆಗೆ ಇಷ್ಟು ಸಾಕೇ?

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.