ನಂಬಿ ನಾರಾಯಣನ್‌ಗೆ “ಪದ್ಮ’: ತಪ್ಪಿಗೆ ಪ್ರಾಯಶ್ಚಿತ್ತವೇ “ಭೂಷಣ’


Team Udayavani, Jan 31, 2019, 12:30 AM IST

z-8.jpg

ಬೇಹುಗಾರಿಕೆ ಮೂಲಕ ವಿದೇಶಿ ಶಕ್ತಿಯೊಂದಕ್ಕೆ ನೆರವಾದರೆಂಬ ಆರೋಪದಲ್ಲಿ ನಂಬಿ ನಾರಾಯಣನ್‌ “ತಪ್ಪಿತಸ್ಥರಲ್ಲ’ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಅದಕ್ಕೂ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಕೈಗೊಂಬೆ ಎಂಬ ಆರೋಪಕ್ಕೆ ಒಳಗಾಗುವ ಸಿಬಿಐ ಕೂಡ ನಂಬಿ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು. ಈಗ ಅವರ ಸೇವೆಗೆ ಪದ್ಮ ಪ್ರಶಸ್ತಿ‌ ಕೊಡುವ ಮೂಲಕ ಸರ್ಕಾರ ಅವರನ್ನು ಈಗ ಗೌರವಿಸಿದೆ.

ಕೇಂದ್ರ ಸರಕಾರದ ಪದ್ಮ ಪ್ರಶಸ್ತಿಯ ಪಟ್ಟಿ ಯಾವ ವರ್ಷದಲ್ಲೂ ಟೀಕೆಗೆ ಹೊರತಾಗಿಲ್ಲ. ಈ ಸಲವೂ ನಡೆದಾಡುವ ದೇವರೆಂದೇ ಜನಜನಿತರಾದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಘೋಷಿಸಲು ನರೇಂದ್ರ ಮೋದಿ ಸರಕಾರ ವಿಫ‌ಲವಾಗಿರುವುದು ಕರ್ನಾಟಕದಲ್ಲಿ ತೀವ್ರ ಅಸಂತೋಷವನ್ನು ಉಂಟುಮಾಡಿದೆ. ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಎಸ್‌. ನಂಬಿ ನಾರಾಯಣನ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದೂ ವಿವಾದಕ್ಕೆ ಕಾರಣವಾಗಿದೆ. ಈಗ ದೋಷಮುಕ್ತರಾಗಿದ್ದರೂ ಬಹುಚರ್ಚಿತ ಇಸ್ರೋ ಬೇಹುಗಾರಿಕಾ ಪ್ರಕರಣದಲ್ಲಿ ನಂಬಿ ನಾರಾಯಣನ್‌ ಆರೋಪಿಯಾಗಿದ್ದುದೇ ವಿವಾದಕ್ಕೆ ಪ್ರಮುಖ ಕಾರಣ.

ಆದರೆ, ಕೇರಳ ಹಾಗೂ ಕೇಂದ್ರ ಸರಕಾರಗಳು ಈ ಹಿಂದೆ ನಂಬಿ ನಾರಾಯಣನ್‌ ಅವರಿಗೆ ಸತತವಾಗಿ ನೀಡಿರುವ ಕಿರುಕುಳಕ್ಕೆ ಪ್ರಾಯಶ್ಚಿತ್ತ ಅಥವಾ ಪರಿಹಾರ ರೂಪದಲ್ಲಿ ಕೇಂದ್ರ ಸರಕಾರ ಈ ಬಾರಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣವನ್ನು ಘೋಷಿಸಿದೆ ಎಂಬುದನ್ನು ಟೀಕಾಕಾರರು ಮರೆತಿದ್ದಾರೆ. “ನಿಮ್ಮ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ. ಅದಕ್ಕಾಗಿ ನಾವು ನಿಮ್ಮ ಕ್ಷಮೆ ಕೋರುತ್ತೇವೆ’ ಎಂಬ ಸಂದೇಶ ಈ ಪ್ರಶಸ್ತಿಯ ಹಿಂದಿರುವಂತಿದೆ.

ಬೇಹುಗಾರಿಕೆ ಮೂಲಕ ವಿದೇಶಿ ಶಕ್ತಿಯೊಂದಕ್ಕೆ ನೆರವಾದರೆಂಬ ಆರೋಪದಲ್ಲಿ ನಂಬಿ ನಾರಾಯಣನ್‌ “ತಪ್ಪಿತಸ್ಥರಲ್ಲ’ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಅದಕ್ಕೂ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಕೈಗೊಂಬೆ ಎಂಬ ಆರೋಪಕ್ಕೆ ಒಳಗಾಗುವ ಸಿಬಿಐ ಕೂಡ ನಂಬಿ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು.

ಗಮನಾರ್ಹ ಅಂಶವೆಂದರೆ, ಸುಪ್ರೀಂ ಕೋರ್ಟ್‌ 
ಈ ಪ್ರಕರಣದಲ್ಲಿ ಒಂದು ದೃಷ್ಟಾಂತವನ್ನು ಹಾಕಿಕೊಟ್ಟಿದೆ. ಕಳೆದ ವರ್ಷ ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವು ಇಷ್ಟು ವರ್ಷಗಳ ಸುದೀರ್ಘ‌ ವಿಚಾರಣೆ ಹಾಗೂ ಕಾನೂನು ಸಂಘರ್ಷದ ಸಂದರ್ಭದಲ್ಲಿ ನಂಬಿ ನಾರಾಯಣನ್‌ ಅವರು ಅನುಭವಿಸಿದ ನೋವು, ಯಾತನೆ ಹಾಗೂ ಅವಮಾನಗಳಿಗೆ ಪರಿಹಾರ ರೂಪದಲ್ಲಿ 50 ಲಕ್ಷ ರೂ. ನೀಡುವಂತೆ ಕೇರಳ ಸರಕಾರಕ್ಕೆ ಆದೇಶ ನೀಡಿತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಡಿ.ಕೆ. ಜೈನ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಇಸ್ರೋ ಬೇಹುಗಾರಿಕಾ ಪ್ರಕರಣ ನಿಭಾಯಿಸುವಲ್ಲಿ ಕೇರಳ ಪೊಲೀಸರ ಪಾತ್ರದ ಕುರಿತು ತನಿಖೆ ನಡೆಸುವಂತೆಯೂ ಸೂಚಿಸಿತ್ತು. ಅದಕ್ಕೂ ಮುಂಚೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 

1 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ನಂಬಿ ನಾರಾಯಣನ್‌ ಹಾಗೂ ಇತರ ಕೆಲವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿ ತಪ್ಪು ಮಾಡಿದ ಪೊಲೀಸ್‌ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬಂದ ಕೇರಳ ಸರಕಾರಗಳು ತಮ್ಮ ನಿಲುವನ್ನು ಸಡಿಲಿಸಲೇ ಇಲ್ಲ. ಪೊಲೀಸ್‌ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟ ಕೇರಳ ಸರಕಾರವು ಅವರಲ್ಲಿ ಒಬ್ಬರಾದ ಸಿಬಿ ಮ್ಯಾಥ್ಯೂಸ್‌ ಅವರಿಗೆ ರಾಜ್ಯದ ಮುಖ್ಯ ಮಾಹಿತಿ ಆಯುಕ್ತರಾಗಿ (2011-16) ಭಡ್ತಿಯನ್ನೂ ನೀಡಿತು. ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕಿಂತಲೂ ತಾನು ಶ್ರೇಷ್ಠ ಎಂಬಂತೆ ಕೇರಳ ಸರಕಾರ ವರ್ತಿಸಿತು. ಹೈಕೋರ್ಟ್‌ ಆದೇಶಿಸಿದಂತೆ ನಂಬಿ ನಾರಾಯಣನ್‌ ಅವರಿಗೆ 10 ಲಕ್ಷ ರೂ. ಪರಿಹಾರ ನೀಡಲೂ ಮೀನ-ಮೇಷ ಎಣಿಸಿತು. ಖ್ಯಾತ ವಿಜ್ಞಾನಿಯೊಬ್ಬರ ಮೇಲೆ ಆರೋಪ ಹೊರಿಸುವ ಜತೆಗೆ ತನ್ನ ಪೊಲೀಸ್‌ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುವ ಅಲ್ಲಿನ ರಾಜ್ಯ ಸರಕಾರಗಳ ಹಿತಾಸಕ್ತಿ ಏನು ಎಂಬುದೇ ತಿಳಿಯುತ್ತಿಲ್ಲ. ತುರ್ತು ಪರಿಸ್ಥಿತಿಯ ಕಾಲದಲ್ಲಿ ನಕ್ಸಲ್‌ ಎಂಬ ಶಂಕೆಯಲ್ಲಿ ವಿದ್ಯಾರ್ಥಿ ರಾಜನ್‌ ಎಂಬಾತನನ್ನು ಪೊಲೀಸರೇ ಕೊಲೆ ಮಾಡಿದರೆಂಬ ಆರೋಪವಿದೆ. ಆ ದಿನಗಳಲ್ಲಿ ಕೆ. ಕರುಣಾಕರನ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಕೇರಳದಲ್ಲಿ ಅಧಿಕಾರದಲ್ಲಿತ್ತು.

ಇಸ್ರೋದಲ್ಲಿ ಕ್ರಯೋಜೆನಿಕ್‌ ವಿಭಾಗದ ಮುಖ್ಯಸ್ಥರಾಗಿದ್ದ ನಂಬಿ ನಾರಾಯಣನ್‌ (ಜನನ 1941) ಅವರನ್ನು ಮಾಲ್ಡೀವ್ಸ್‌ ಬೇಹುಗಾರಿಕಾ ಅಧಿಕಾರಿಗಳಾಗಿದ್ದ ಇಬ್ಬರು ಮಹಿಳೆಯರಿಗೆ ಭಾರತದ ಭದ್ರತಾ ಮಾಹಿತಿಯನ್ನು ರವಾನಿಸಿದ್ದಾರೆ, ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನೂ ಪಡೆದಿದ್ದಾರೆ ಎಂಬ ಆರೋಪದಲ್ಲಿ ಕೇರಳ ಪೊಲೀಸರು 1994ರಲ್ಲಿ ಬಂಧಿಸಿ, ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ಕೇಂದ್ರ ಗುಪ್ತಚರ ಆಯೋಗವೂ ಅವರನ್ನು ಹೀನಾಯವಾಗಿ ನೋಡಿತು. ಇದೇ ಕಾರಣಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಬೇಕಾಯಿತು.

ಬಹುದೊಡ್ಡ ಬೇಹುಗಾರಿಕಾ ಜಾಲವೊಂದನ್ನು ಬಯಲಿಗೆಳೆದ ಭ್ರಮೆಯಲ್ಲಿದ್ದ ಕೇರಳ ಪೊಲೀಸರು ಅದಕ್ಕೆ ಪೂರಕ ಸಾûಾÂಧಾರಗಳನ್ನು ಸಂಗ್ರಹಿಸುವಲ್ಲಿ ವಿಫ‌ಲರಾದರು. ಆದರೆ, ತಮ್ಮ ತಪ್ಪಿಗಾಗಿ ಎಂದಿಗೂ ಪಶ್ಚಾತ್ತಾಪ ಪಡಲೇ ಇಲ್ಲ. ಕೇಂದ್ರ ಸರಕಾರವು ನಂಬಿ ನಾರಾಯಣನ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದ ಬಳಿಕವೂ ಕೇರಳದ ನಿವೃತ್ತ ಪೊಲೀಸ್‌ ಮುಖ್ಯಸ್ಥ ಟಿ.ಪಿ. ಸೇನ್‌ ಕುಮಾರ್‌ ಅವರು, “ನಂಬಿ ನಾರಾಯಣನ್‌ ಒಬ್ಬ ಸಾಧಾರಣ ವಿಜ್ಞಾನಿ. ಅವರಿಗೆ ಇಷ್ಟು ಉನ್ನತ ಪ್ರಶಸ್ತಿ ಕೊಡುವುದು ಬೇಕಿರಲಿಲ್ಲ’ ಎಂದು ಕ್ಯಾತೆ ತೆಗೆದರು. ಮುಂದಿನ ವರ್ಷ ಕ್ರಿಮಿನಲ್‌ಗ‌ಳಿಗೆ ಪ್ರಶಸ್ತಿ ಘೋಷಿಸಿದರೂ ಅಚ್ಚರಿ ಏನಿಲ್ಲ ಎಂದೂ ಹೇಳಿದ್ದು ಮಾಧ್ಯಮಗಳಲ್ಲಿ ಉಲ್ಲೇಖವಾಗಿದೆ.

2001ರಲ್ಲಿ ನಿವೃತ್ತರಾದ ಇಸ್ರೋದ ವಿಜ್ಞಾನಿ ನಂಬಿ ನಾರಾಯಣನ್‌ ಅವರ ಮೇಲೆ ಸೇನ್‌ ಕುಮಾರ್‌ ವಾಗ್ಧಾಳಿ ನಡೆಸಿದ್ದು ಸರಿಯಲ್ಲ ಎಂಬುದನ್ನು ನಿರೂಪಿಸಬಲ್ಲ ಕೆಲವು ವಿಚಾರಗಳಿವೆ. ಇಸ್ರೋದ ಪ್ರಥಮ ಅಧ್ಯಕ್ಷರಾಗಿದ್ದ ಡಾ| ವಿಕ್ರಂ ಸಾರಾಭಾಯಿ ಅವರೇ ತುಂಬಾ ರಾಕೆಟ್‌ ಉಡಾವಣ ಕೇಂದ್ರಕ್ಕೆ ನಂಬಿ ನಾರಾಯಣನ್‌ ಸಹಿತ ಕೆಲವು ಶ್ರೇಷ್ಠ ವಿಜ್ಞಾನಿಗಳನ್ನು ಆಯ್ಕೆ ಮಾಡಿದ್ದರು ಎಂಬುದು ಉಲ್ಲೇಖನೀಯ. ಅಮೆರಿಕದ ಪ್ರಿನ್‌ಸ್ಟನ್‌ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ನಂಬಿ ನಾರಾಯಣನ್‌ 1969ರಲ್ಲಿ ಇಸ್ರೋ ವಿಜ್ಞಾನಿಯಾಗಿ ಸೇವೆಗೆ ಸೇರಿದರು. ಬಾಹ್ಯಾಕಾಶ ಸಂಸ್ಥೆ ರಾಕೆಟ್‌ಗಳಿಗೆ ಮದ್ಯಸಾರವನ್ನೇ ಇಂಧನವಾಗಿ ಬಳಸುವ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಅವರು ಮಲಯಾಳಂನಲ್ಲಿ ಆತ್ಮಕಥೆ ಬರೆದಿದ್ದು, ಅವರ ಜೀವನವನ್ನು ಆಧರಿಸಿ ಸಿನಿಮಾ ಕೂಡ ಬರುತ್ತಿದೆ. ಟೀಕಾಕಾರರು ಈ ಎಲ್ಲ ಅಂಶಗಳನ್ನೂ ಗಮನಿಸುವುದು ಅಗತ್ಯ.

ಶತ್ರು ರಾಷ್ಟ್ರಗಳಲ್ಲದೆ, ನಮ್ಮ ದೇಶದೊಂದಿಗೆ ಸ್ನೇಹದಿಂದಿರುವ ಅಮೆರಿಕ ಕೂಡ ಬೇಹುಗಾರಿಕೆ ಮೂಲಕ ಆಘಾತ ನೀಡಿದೆ ಎನ್ನುವುದು ಗಮನಾರ್ಹ. ಉನ್ನತ ಸೇನಾಧಿಕಾರಿಗಳಾಗಿದ್ದ ಲರ್ಕಿನ್ಸ್‌ ಸಹೋದರರು ಬೇಹುಗಾರಿಕೆ ಕಾರಣಕ್ಕೆ 1985ರಲ್ಲಿ ಸೆರೆಯಾಗಿದ್ದನ್ನು ನೆನಪಿಸಿಕೊಳ್ಳಿ. ಮೇ| ಜ| ಫ್ರಾಂಕ್‌ ಲರ್ಕಿನ್ಸ್‌ ಹಾಗೂ ಅವರ ಸಹೋದರ ಏರ್‌ ವೈಸ್‌ ಮಾರ್ಷಲ್‌ ಕೆನೆತ್‌ ಲರ್ಕಿನ್ಸ್‌ ಅವರು ಸೋವಿಯತ್‌ ಯೂನಿಯನ್‌ ಹಾಗೂ ಅಮೆರಿಕದ ಜತೆಗೆ ಸೇನೆಯ ಗುಪ್ತ ಮಾಹಿತಿಗಳನ್ನು ಹಂಚಿಕೊಂಡಿಡ ಆರೋಪ ಸಾಬೀತಾಗಿ 10 ವರ್ಷ ಸೆರೆವಾಸವನ್ನೂ ಅನುಭವಿಸಿದ್ದರು.

ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಕಾರ್ಯಾಲಯ ಹಾಗೂ ರಾಷ್ಟ್ರಪತಿ ಭವನದ ಕೆಲವು ಅಧಿಕಾರಿಗಳು ಬೇರೆ ದೇಶವೊಂದರ ಜತೆ ಕೈಜೋಡಿಸಿ ಬೇಹುಗಾರಿಕೆ ಮಾಡಿದ್ದಾರೆಂಬ ಆರೋಪ ದೇಶವನ್ನೇ ತಲ್ಲಣಗೊಳಿಸಿತ್ತು. ಆಗ ಪ್ರಧಾನಿಯವರ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ| ಪಿ.ಸಿ. ಅಲೆಕ್ಸಾಂಡರ್‌ ಪದತ್ಯಾಗ ಮಾಡಬೇಕಾಯಿತು. ಆದರೆ, ಅವರ ಕುರಿತಾಗಿ ಯಾರೂ ತುಟಿ ಪಿಟಕ್‌ ಎನ್ನಲಿಲ್ಲ. ಆಮೇಲೆ ಅವರು ಮಹಾರಾಷ್ಟ್ರದ ರಾಜ್ಯಪಾಲರೂ ಆದರು. 2002ರಲ್ಲಿ ವಾಜಪೇಯಿ ಸರಕಾರವಿದ್ದಾಗ ರಾಷ್ಟ್ರಪತಿ ನೇಮಕದ ಮೊದಲ ಆಯ್ಕೆಯೂ ಆಗಿದ್ದರು. ಆದರೆ, ಸೋನಿಯಾ ಗಾಂಧಿ ಪ್ರಬಲವಾಗಿ ವಿರೋಧಿಸಿದ್ದರಿಂದ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ರಾಷ್ಟ್ರಪತಿ ಆಗುವಂತಾಯಿತು. ಐಎಎಸ್‌ ಅಧಿಕಾರಿಯಾಗಿದ್ದ 
ಡಾ| ಅಲೆಕ್ಸಾಂಡರ್‌ (1921-2011) ಉತ್ಕೃಷ್ಟ ನಾಗರಿಕ ಸೇವಕ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಬೇಹುಗಾರಿಕೆ ವಿಚಾರದಲ್ಲಿ ವಿವಾದಗಳು ಅಮೆರಿಕದಂತಹ ರಾಷ್ಟ್ರಗಳನ್ನೂ ಬಿಟ್ಟಿಲ್ಲ. ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್‌ ರೋಸೆನ್‌ಬರ್ಗ್‌ (ಜನನ 1915) ಹಾಗೂ ಅವರ ಪತ್ನಿ ಇಥೆಲ್‌ ರೋಸೆನ್‌ಬರ್ಗ್‌ ಅವರು ಸೋವಿಯತ್‌ ಒಕ್ಕೂಟಕ್ಕೆ ಪರಮಾಣು ಬಾಂಬ್‌ ಕುರಿತಾದ ಮಾಹಿತಿಯನ್ನು ಒದಗಿಸಿದರೆಂಬ ಆರೋಪದಲ್ಲಿ 1953ರಲ್ಲಿ ಶಿಕ್ಷೆಗೆ ಗುರಿಯಾಗಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಈಗಲೂ ಹಲವರಲ್ಲಿದೆ. ಈ ಇಬ್ಬರೂ ವಿಜ್ಞಾನಿಗಳಲ್ಲ. ಅಮೆರಿಕದ ಪರಮಾಣು ಶಕ್ತಿ ಕೇಂದ್ರದಲ್ಲಿ ಜೂಲಿಯನ್‌ ಎಂಜಿನಿಯರ್‌ ಆಗಿದ್ದರೆ, ಅವರ ಪತ್ನಿ ಆಡಳಿತಾಧಿಕಾರಿಯಾಗಿದ್ದರು. ಸೋವಿಯತ್‌ ಒಕ್ಕೂಟದ ಜತೆಗಿನ ಶೀತಲ ಸಮರದ ಸಂದರ್ಭದಲ್ಲಿ ಎಡಪಂಥೀಯರ ಶೋಧ ನಡೆಸುತ್ತಿದ್ದಾಗ ಈ ಇಬ್ಬರನ್ನೂ ವಿದ್ಯುತ್‌ ಕುರ್ಚಿಯ ಮೇಲೆ ಕುಳ್ಳಿರಿಸಿ ಮರಣದಂಡನೆಗೆ ಗುರಿಪಡಿಸ ಲಾಯಿತು. ಒಂದೊಮ್ಮೆ ಅಮೆರಿಕದ ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿದ್ದುದೇ ಅವರಿಗೆ ಮುಳುವಾಯಿತು. ಪತಿ ಸೋವಿಯತ್‌ ಒಕ್ಕೂಟಕ್ಕೆ ಮಾಹಿತಿ ಒದಗಿಸಿರುವ ಸಾಧ್ಯತೆ ಇದ್ದರೂ ಇಥೆಲ್‌ ಮುಗೆœಯಾಗಿದ್ದರು ಎಂಬ ಅಭಿಪ್ರಾಯ ಅಮೆರಿಕನ್ನರಲ್ಲಿದೆ. ಅವರ ಇಬ್ಬರು ಮಕ್ಕಳು ಹಾಗೂ ಹಲವು ನಾಯಕರು ಜ್ಯೂಲಿಯಸ್‌ ಹಾಗೂ ಇಥೆಲ್‌ ಅವರಿಗೆ ಮರಣೋತ್ತರವಾಗಿ ಕ್ಷಮಾದಾನ ನೀಡುವಂತೆ ಅಭಿಯಾನಗಳನ್ನೂ ಕೈಗೊಂಡರು. ಈಥನ್‌ ರೋಸೆನ್‌ಬರ್ಗ್‌ ಅವರ ಜನ್ಮಶತಮಾನೋತ್ಸವ ವರ್ಷವಾದ 2015ರಲ್ಲೂ ಈ ನಿಟ್ಟಿನಲ್ಲಿ ಪ್ರಮುಖ ಪ್ರಯತ್ನವೊಂದು ನಡೆಯಿತು. ಆದರೆ, ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.

ಪುಣ್ಯಕ್ಕೆ ಭಾರತೀಯರು ಅಮೆರಿಕನ್ನರಷ್ಟು ಕಟುಕರಲ್ಲ. ಅಪಾಯಕಾರಿ ಅಲ್ಲದಿದ್ದರೆ ಪೊಲೀಸರು ಆರೋಪಿಗಳಿಗೆ ಕೋಳವನ್ನೂ ತೊಡಿಸುವುದಿಲ್ಲ. ಅಮೆರಿಕದಲ್ಲಿ ಕೈಕೋಳ ತೊಡಿಸದೆ ಆರೋಪಿಗಳನ್ನು ಕರೆದೊಯ್ಯುವುದೇ ಇಲ್ಲ. ಸುಪ್ರೀಂ ಕೋರ್ಟ್‌ ನಮ್ಮ ದೇಶದ ಪೊಲೀಸರಲ್ಲಿ ಅಷ್ಟೊಂದು ಪರಿವರ್ತನೆಯನ್ನು ತಂದಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಂಬಿ ನಾರಾಯಣನ್‌ ಅವರು ಸಲ್ಲಿಸಿದ ಸೇವೆಯನ್ನು ಈ ವರ್ಷದ ಗಣರಾಜ್ಯೋತ್ಸವದಲ್ಲಿ ಪದ್ಮಭೂಷಣ ಪ್ರಶಸ್ತಿಯ ಮೂಲಕ ಗೌರವಿಸಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.