ರಸ್ತೆ ನಿಯಮ ಉಲ್ಲಂಘನೆಗೆ ದಂಡ: ಮಿತ್ರನೆ, ಶತ್ರುವೇ?


ಅರಕೆರೆ ಜಯರಾಮ್‌, Sep 21, 2019, 5:00 AM IST

u-51

ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾ ರಗಳಿಗೆ ರಾಜ್ಯ ಸರಕಾರಗಳಿಂದ ತೀವ್ರ ವಿರೋಧ ವ್ಯಕ್ತ ವಾಗಿದೆ. ಉದಾ: ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಪಾವತಿಸಬೇಕಾಗಿರುವ ದಂಡ ಮೊತ್ತವನ್ನು ಹೆಚ್ಚಿಸಿರುವ ಕ್ರಮ ಹಾಗೂ “ಏಕ ರಾಷ್ಟ್ರ ಏಕ ಭಾಷೆ’ ಸಿದ್ಧಾಂತ ಕುರಿತು ಕೇಂದ್ರ ನಾಯಕರ ಏರುದನಿಯ ಘೋಷಣೆ.

ಕೇವಲ ಹಿಂದಿ ಭಾಷೆಯಷ್ಟೆ ಇಡೀ ರಾಷ್ಟ್ರದ ಏಕತೆಗೆ ನೆರವಾದೀತು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಸದ್ಯ ಒತ್ತಟ್ಟಿಗಿಡೋಣ. ಈ ಪ್ರಶ್ನೆಯನ್ನು ಪ್ರತ್ಯೇಕ ನೆಲೆಯಲ್ಲಿ ಬಗೆಹರಿಸಿಕೊಳ್ಳಬೇಕಾ ಗುತ್ತದೆ. ಸದ್ಯ ಸಾರಿಗೆ ನಿಯಮ ಉಲ್ಲಂಘನೆಗಾಗಿ ವಿಧಿಸ ಲಾಗಿರುವ ಭಾರೀ ಮೊತ್ತದ ದಂಡದ ಬಗ್ಗೆ ಗಮನ ಹರಿಸೋಣ. ದಂಡ ಮೊತ್ತದಲ್ಲಿ ಮಾಡಲಾಗಿರುವ ತೀವ್ರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತದ ರಾಜ್ಯಗಳೂ ತಮ್ಮ ಸರಕಾರದ ವಿರೋಧವನ್ನು ಪ್ರಕಟಿಸುವ ಧೈರ್ಯ ತೋರಿವೆ. ಸಂಚಾರ ನಿಯಮ ಉಲ್ಲಂಘಿಸಿದರೆ ಕಟ್ಟಬೇ ಕಾದ ದಂಡ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧ್ವರ್ಯುಗಳಿಗೆ ಹಾಗೂ ಅದರ ರಸ್ತೆ ಸಾರಿಗೆ ಖಾತೆ ಹಾಗೂ ಹೆದ್ದಾರಿ ನಿರ್ವಹಣ ಖಾತೆಯ ಸಚಿವ ನಿತಿನ್‌ ಗಡ್ಕರಿಯವರಿಗೆ ಯಾರೋ ಅಸಡ್ಡಾಳ ಸಲಹೆ ನೀಡಿದ್ದಾರೆಂಬುದು ಸ್ಪಷ್ಟ. ಬೈಕ್‌ ಅಥವಾ ಮೊಪೆಡ್‌ಗಳ ಮಾತು ಬಿಟ್ಟು ಬಿಡೋಣ. ಈ ದೇಶದಲ್ಲಿ ಕಾರನ್ನು ಹೊಂದಿರುವ ಪ್ರತಿಯೊಬ್ಬರೂ ಅನುಕೂಲವಂತ ಕುಳಗಳೆಂದೇ ಕೇಂದ್ರದಲ್ಲಿರುವ ಉನ್ನತ ಮಟ್ಟದ ಅಧಿಕಾರಿಗಳು ಭಾವಿಸಿಕೊಂಡಿದ್ದಾರೆಂದು ಕಾಣುತ್ತದೆ. ವಾಸ್ತವವೆಂದರೆ, ವಾಹನವನ್ನು ಹೊಂದಿರುವ ವ್ಯಕ್ತಿಗಳ ಪೈಕಿ ಅನೇಕರು ತಮ್ಮ ಕನಸಿನ ವಾಹನಗಳ ಖರೀದಿ ಗಾಗಿ ಬ್ಯಾಂಕುಗಳಿಂದಲೋ ಇತರ ಯಾವುದೋ ಮೂಲ ಗಳಿಂದಲೋ ಸಾಲ ಮಾಡಿರುತ್ತಾರೆ. ಈಗಾಗಲೇ ಕೆಲ ನಾಗರಿಕರು ಪ್ರತಿಕ್ರಿಯಿಸಿರುವಂತೆ, ಈಗ ವಿಧಿಸಲಾ ಗುತ್ತಿ ರುವ ದಂಡ ವಾಹನಗಳ ಮೌಲ್ಯಕ್ಕಿಂತಲೂ ಅಧಿಕವಾಗಿದೆ.

ಜಾಗತೀಕರಣದ ಫ‌ಲವಾದ ಅರ್ಥ ವ್ಯವಸ್ಥೆಯ ಅಂಗಗಳು ನಾವೆಂದು ನಾವು ಆಗಾಗ ಹೇಳಿಕೊಳ್ಳುತ್ತಿರು ವುದೇನೋ ಹೌದು. ಇಂಥದೊಂದು ಆರ್ಥಿಕ ಸನ್ನಿವೇಶ ದಲ್ಲಿ ನಮ್ಮಲ್ಲಿ ವಿಧಿಸಲಾಗುತ್ತಿರುವ ಸಾರಿಗೆ ದಂಡ ಮೊತ್ತ ಗಳು ಅಮೆರಿಕದಲ್ಲಿನ ದಂಡ ಮೊತ್ತಗಳಿಗಿಂತ ಕಡಿಮೆ ಎಂದು ಕೆಲ ತಲೆತಿರುಕರು ವಾದಿಸುತ್ತಿರು ವುದನ್ನು ನೋಡಿ ದ್ದೇವೆ. ಆದರೆ ಹೀಗೆ ವಾದಿಸುತ್ತಿರುವವರು ಒಂದು ಅಂಶ ವನ್ನು ಮರೆತಿದ್ದಾರೆ. ಅದೆಂದರೆ, ಅಮೆರಿಕದಲ್ಲಿನ ತಲಾ ಆದಾಯ ನಮ್ಮಲ್ಲಿಗಿಂತ ಅಧಿಕ ಪ್ರಮಾಣದಲ್ಲಿದೆ ಯೆಂಬುದು. ಅಲ್ಲೂ ದಂಡ ಹೇರಿಕೆ ವ್ಯವಸ್ಥೆ ಕಟ್ಟುನಿಟ್ಟಾಗಿ ದೆಯೆನ್ನುವುದು ನಿಜ. ಆದರೆ ಅಮೆರಿಕ ಒಂದು ಸಂಯುಕ್ತ ಸಂಸ್ಥಾನ; ಒಕ್ಕೂಟ ರಾಜ್ಯ ಹಾಗೂ ಸ್ಥಳೀಯ ಸರ್ಕಾರ- ಎಂಬ ತ್ರಿಸ್ತರ ಆಡಳಿತವಿರುವ ದೇಶ. ಅಲ್ಲಿನ ಬೇರೆ ಬೇರೆ ಸರಕಾರಗಳಲ್ಲಿ ಬೇರೆ ಬೇರೆ ದಂಡ ಮೊತ್ತಗಳು ಜಾರಿ ಯಲ್ಲಿವೆ. ನಮ್ಮಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನಗಳನ್ನು ಓಡಿಸಲು ಉತ್ಸುಕರಾ ಗಿರುವವರು ಅನೇಕ ಮಂದಿ ಇದ್ದಾರೆ. ಇಂಥವರಿಗೆ ಅಮೆರಿಕದ ಆಯೋವಾ, ಇಲಿನಾ ಯಿಸ್‌ ಹಾಗೂ ನ್ಯೂಹ್ಯಾಮ್‌ಶೈರ್‌ನಂಥ ರಾಜ್ಯಗಳಲ್ಲೂ ಹೆಲ್ಮೆಟ್‌ ಇಲ್ಲದೆ ರಸ್ತೆಗಿಳಿಯುವವರು ಇದ್ದಾರೆ ಎಂಬ ಸಂಗತಿ ಕೇಳಿ ಖುಷಿಯಾಗ ಬಹುದು. ಆದರೆ ಅಲಬಾಮಾ, ಅಲಾಸ್ಕಾದಂಥ ರಾಜ್ಯಗಳಲ್ಲಿ ಹೀಗೆ ಮಾಡಿದರೆ ಜೈಲೇಗತಿ! ಹೆಲ್ಮೆಟ್‌ ಇಲ್ಲದೆ ಗಾಡಿ ಓಡಿಸಿದರೆ ಕಟ್ಟಬೇಕಾದ ಮೊತ್ತ ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿರುತ್ತದೆ.

2019ರ ಮೋಟಾರು ವಾಹನ ತಿದ್ದುಪಡಿ ಮಸೂದೆ ಈಗ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಈ ಮಸೂದೆ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಯೂ ಒಂದು ವಿಲಕ್ಷಣ ಘಟನೆಯಾಗಿ ಮಾರ್ಪ ಟ್ಟಿತು. ಈ ಚರ್ಚೆ ವಾಸ್ತವವಾಗಿ ಸಾರ್ವಜನಿಕರ ಅಭಿಪ್ರಾ ಯಗಳನ್ನು ಪ್ರತಿಬಿಂಬಿಸುವಲ್ಲಿ ವಿಫ‌ಲವಾಯಿತು. ಉಭಯ ಸದನಗಳಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಸಂಸದರ ಪೈಕಿ ಅನೇಕರು ದಂಡ ಮೊತ್ತ ಹೆಚ್ಚಳದ ಪ್ರಸ್ತಾ ವವನ್ನು ಸ್ವಾಗತಿಸಿದ್ದರು. ಸಂಸದರು ಒಪ್ಪಿಕೊಳ್ಳಲು ನಿರಾಕ ರಿಸಿದ ಕೆಲ ಪ್ರಸ್ತಾವಗಳ ಪೈಕಿ ಒಂದೆಂದರೆ, ಆ್ಯಂಬುಲೆನ್ಸ್‌ನ‌ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಅಥವಾ ಅವುಗಳನ್ನು ಮುಂದೆ ಹೋಗದಂತೆ ತಡೆಯುವ ವಾಹನ ಸವಾರರಿಗೆ 10,000 ರೂ. ದಂಡ ಹಾಕಬೇಕೆಂಬ ಪ್ರಸ್ತಾವ. ಆ್ಯಂಬುಲೆನ್ಸ್‌ಗಳನ್ನು ಬೇಕೆಂದೇ ತಡೆಗಟ್ಟಿದರೆ ಮಾತ್ರ ಇಂಥ ದಂಡ ಎಂದು ಸಚಿವ ನಿತಿನ್‌ ಗಡ್ಕರಿ ಟಿಎಂಸಿಯ ಸುಗತ ರಾಯ್‌ ಅವರಿಗೆ ವಿವರಿಸಿದ್ದರು. ವಿಪ ರೀತ ವಾಹನ ನಿಬಿಡತೆಯಿದ್ದರೆ (ಟ್ರಾಫಿಕ್‌ ಜ್ಯಾಮ್‌) ಚಾಲಕರೇನು ಮಾಡಬೇಕು ಎಂಬ ಚಿಂತೆಯನ್ನು ಸುಗತ ರಾಯ್‌ ವ್ಯಕ್ತಪ ಡಿಸಿದಾಗ ಸಚಿವರು ಈ ವಿವರ ನೀಡಿದ್ದರು.

ದಂಡ ಇಳಿಸುವ ನಿರ್ಧಾರವನ್ನು ಕೆಲ ರಾಜ್ಯಗಳು ತೆಗೆದು ಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಡ್ಕರಿ ಮಹಣ್ತೀದ ಹೇಳಿಕೆಯೊಂದನ್ನು ಸಂಸತ್ತಿನಲ್ಲೇ ನೀಡಿದ್ದರು.”ಮಸೂದೆಯನ್ನು ಜಾರಿಗೆ ತರದೇ ಇರುವ ಆಯ್ಕೆ ರಾಜ್ಯಗಳಿಗೆ ಇದ್ದೇ ಇದೆ’ ಎಂದಿದ್ದರು. ಹಾಗಾದರೆ ಇಂಥದೊಂದು (ಆಯ್ಕೆ) ಪ್ರಸ್ತಾವ ಮಸೂದೆಯಲ್ಲಿ ಒಳಗೊಂಡಿಲ್ಲವಲ್ಲ ಎಂದು ಕೆಲ ಸಂಸದರು ಪ್ರಶ್ನಿಸಿದರು. ಸಂಸತ್ತಿನಲ್ಲಿ ಗಡ್ಕರಿಯವರು ನೀಡಿದ್ದ ಆಶ್ವಾಸನೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಕಾಯ್ದೆಗೆ ತಲೆಬಾಗಬೇಕೆಂದು ಕೇಂದ್ರ ರಾಜ್ಯಗಳಿಗೆ ಒತ್ತಾಯಿಸುವುದಿಲ್ಲ; ಅಂಥ ಭಯ ರಾಜ್ಯಗಳಿಗೆ ಬೇಡ ಎಂದಾಗಾಯಿತು. ಮೋಟಾರು ವಾಹನ ತೆರಿಗೆಯ ವಿಷಯ ಸಂವಿಧಾನದಲ್ಲಿ ಉಲ್ಲೇಖೀತ ವಾಗಿರುವ “ಸಮವ್ಯಾಪ್ತಿ’ಯ ಯಾದಿ (ಪ್ರವೇಶಿಕೆ – 35) ಯಲ್ಲಿದೆ. ಯಂತ್ರ ಚಾಲಿತ ವಾಹನಗಳಿಗೆ ಸಂಬಂಧಿಸಿದ ಯಾದಿ ಇದು; ಇಂಥ ವಾಹನಗಳ ಮೇಲೆ ವಿಧಿಸಬೇಕಾದ ತೆರಿಗೆ ಕ್ರಮ ನಿಯಮಗಳನ್ನು ಒಳಗೊಂಡಿರುವ ಪ್ರವೇಶಕೆ ಇದು. ಇಂಥ ಸಹವರ್ತಿ ಯಾದಿಯಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ರಾಜ್ಯಗಳ ಮೇಲಿನ ಹಿಡಿತವನ್ನು ಸಡಿಲಿಸಬಹುದು ಅಥವಾ ಅವುಗಳನ್ನು ಲೆಕ್ಕದಿಂದ ಹೊರ ಗಿಡಬಹುದು. ದಂಡ ಹೆಚ್ಚಳ ಕ್ರಮಕ್ಕೆ ಸಂಬಂಧಿಸಿ ದಂತೆ ಕೆಲ ರಾಜ್ಯಗಳು ಬಳಸಿಕೊಳ್ಳಬಹುದಾದ “ಕೊಕ್ಕೆ” ಇಲ್ಲಿದೆ. ಗುಜರಾತ್‌ ದಂಡ ಇಳಿಕೆ ಮಾಡಿದೆ; ಕರ್ನಾಟಕವೂ ಇಂಥದೇ ಕ್ರಮಕ್ಕೆ ಮುಂದಾಗಿದೆ. ಸಿಎಂ ಯಡಿಯೂರಪ್ಪ ಈ ಒಂದು ವಿಷಯದಲ್ಲಾ ದರೂ ದೃಢತೆ ಪ್ರದರ್ಶಿಸಿದ್ದಾರೆ; ಜನತೆ ಅವರಿಂದ ನಿರೀಕ್ಷಿಸುವುದು ಇದನ್ನೇ.

ಈ ಹೊಸ ಕಾಯ್ದೆ ಸಂಚಾರ ನಿಯಮ ಉಲ್ಲಂ ಸುವ ವರಿಗೆ ಭಾರೀ ದಂಡ ವಿಧಿಸುವುದಕ್ಕಷ್ಟೇ ತನ್ನನ್ನು ಸೀಮಿತ ಗೊಳಿಸಿಕೊಂಡಿಲ್ಲ. ಅದಕ್ಕೆ ಕೆಲವು ಸಲಕ್ಷಣಗಳೂ ಇವೆ; ಇವು ಸ್ವಾಗತಾರ್ಹವೇ. ವಾಸ್ತವವಾಗಿ ದಂಡ ಹೆಚ್ಚಳ ಹಾಗೂ ಇತರ ನಿಯಂತ್ರಣ ಕ್ರಮಗಳನ್ನು 2017ರಲ್ಲೇ ಪ್ರಸ್ತಾವಿಸಲಾಗಿತ್ತು. ಗಮನಿಸಬೇಕಾದ ಸಂಗತಿಯೆಂದರೆ, ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಲಾಗಿರುವ ದಂಡ ಮೊತ್ತಗಳು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಉಲ್ಲೇಖೀತವಾಗಿರುವ ವಿವಿಧ ಅಪರಾಧಗಳಿಗೆ ಸಂಬಂಧಿಸಿದ ದಂಡ ಮೊತ್ತಗಳಿಗಿಂತಲೂ ಅಧಿಕವಾಗಿವೆ. ನಮ್ಮಲ್ಲಿ ಸಾಕಷ್ಟು ಸಂಖ್ಯೆಯ/ಪ್ರಮಾಣದ ತೆರಿಗೆಗಳು ಇಲ್ಲದಿರುವುದರಿಂದ, ಕಂದಾಯ ಪ್ರಮಾಣ ವನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಕೇಂದ್ರ ರಸ್ತೆ ಅಪ ರಾಧ ಸಂಬಂಧಿ ದಂಡ ಹೇರಿಕೆಗೆ ಮುಂದಾಗಿರುವಂತೆ ತೋರಿಬರುತ್ತಿದೆ. ಐಪಿಸಿಯ ಸೆಕ್ಷನ್‌ 63ನ್ನೇ ನೋಡಿ – ದಂಡ ಮೊತ್ತ ವಿಪರೀತವಾಗಿರಬಾರದು ಎಂದು ಅದು ಹೇಳುತ್ತದೆ. ಇಂತಿಂಥ ಅಪರಾಧಗಳಿಗೆ ಇಂತಿಷ್ಟು ದಂಡ ಎಂಬ ನಿಯಮವಿದ್ದರೂ ಯಾರನ್ನೂ ಅಪರಾಧ ಕೃತ್ಯಗಳಿಗೆ ಮುಂದಾಗದಂತೆ ತಡೆಯಲು ಸಾಧ್ಯವಾಗಿಲ್ಲ. ದೇಶದಲ್ಲಿ ಚಾಲ್ತಿಯಲ್ಲಿರುವ ಕಾಯ್ದೆಗಳ ಸಂಖ್ಯೆ ವಿಪರೀತ ಎಂಬಷ್ಟಿದೆ; ಆದರೆ ಇವುಗಳ ಅನುಷ್ಠಾನ ಸಾಧ್ಯತೆ ಹೇಳಿಕೊ ಳ್ಳುವಷ್ಟೇನೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ; ವಿಶೇಷವಾಗಿ ಶಾಲೆ – ಕಾಲೇಜುಗಳ ಸಮೀಪ ಸಿಗರೇಟು ಬೀಡಿ ಸೇದುವವರ ಪೈಕಿ ಎಷ್ಟು ಜನರಿಗೆ ದಂಡ ಹಾಕಲಾಗುತ್ತಿದೆ? ಇಂದಿನ ತನಕವೂ ನಮ್ಮ ಸಂಚಾರಿ ಪೊಲೀಸರು ಸಂಗ್ರ ಹಿಸುವ ದಂಡ ಮೊತ್ತ, ಗೃಹ ಸಚಿವಾಲಯದ ಬಜೆಟ್‌ ಮೊತ್ತಕ್ಕಿಂತಲೂ ಎಷ್ಟೋ ಪಾಲು ಕಡಿಮೆಯೇ, ಹೆಚ್ಚಿಸ ಲಾಗಿರುವ ದಂಡವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಎಷ್ಟೋ ವಾಹನ ಸವಾರರು ಸಂಚಾರ ಪೊಲೀಸರ ಕೈಬಿಸಿ ಮಾಡುವ ಅಪಾಯವೂ ಇದೆ. ಸಾರಿಗೆ ಪೊಲೀಸರು ರಸ್ತೆ ಅಪರಾ ಧಿಗಳಿಂದ ಪಡೆಯಬೇಕಾದ ದಂಡ ಮೊತ್ತವನ್ನು ಸಂಗ್ರಹಿ ಸುತ್ತಿಲ್ಲವೆಂಬುದು ಈ ಮಾತಿನ ಅರ್ಥವಲ್ಲ. ದಂಡ ಹೇರಿಕೆ ಕ್ರಮ, ತಪ್ಪು ಮಾಡಿದ ವಾಹನ ಸವಾರರನ್ನು ದಿವಾಳಿ ಯೆಬ್ಬಿಸುವಂತೆ ಮಾಡಕೂಡದು; ಅವರನ್ನು ಸಾಲದ ಶೂಲಕ್ಕೆ ತಗುಲಿಕೊಳ್ಳುವಂತೆ ಮಾಡಬಾರದು; ಅವರ ಬದುಕನ್ನು ಮೂರಾಬಟ್ಟೆ ಮಾಡುವಂತಿರಬಾರದು. ಯಾವುದೇ ಅಪರಾಧ ಕೃತ್ಯ ಹಣ ಸಂಗ್ರಹ ಮಾಡುವುದಕ್ಕೆ ನೆರವಾಗಬಲ್ಲ “ವಸ್ತು’ ಎಂದು ಯಾವ ಸರಕಾರವೂ ಯೋಚಿಸುವ ಹಾಗಾಗಬಾರದು. ಈಗಾಗಲೇ ವಾಹನ ತಪಾಸಣೆಯ ಹೆಸರಿನಲ್ಲಿ, ಕುಡಿದು ವಾಹನ ಚಲಾಯಿಸಿ ದರೆಂಬ ನೆಪದಲ್ಲಿ ಕಾನೂನು ಭೀತಿಯಿರುವ ಅನೇಕ ಸವಾರರಿಗೆ ಕಿರುಕುಳ ನೀಡುತ್ತಿರುವುದೂ ವರದಿಯಾಗಿವೆ.

ಆದರೂ ಈ ತಿದ್ದುಪಡಿ ಕಾಯ್ದೆಯ ಕೆಲವೊಂದು ನಿಯಮಗಳನ್ನು ಸ್ವಾಗತಿಸಲೇಬೇಕು. ಯಾಕೆಂದರೆ ಅವು ನಮ್ಮ ರಸ್ತೆಗಳ ಸುರಕ್ಷೆಯನ್ನು ಕಾಪಿಡುವ ಉದ್ದೇಶ ಹೊಂದಿವೆ. ಈ ಕಾಯ್ದೆಯ ಮುಖ್ಯ ಲಕ್ಷಣಗಳಲ್ಲೊಂ ದೆಂದರೆ, ರಸ್ತೆ ನಿರ್ಮಾಣ ಹಾಗೂ ಇತರ ಕಾಮಗಾರಿ ಗಳಂಥ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಳಪೆ ನಿರ್ವಹಣೆ ಸಾಬೀತಾದರೆ, ಅಂಥಹ ಗುತ್ತಿಗೆದಾ ರನನ್ನು ಉತ್ತದರಾಯಿಯಾಗಿಸಬೇಕೆಂಬದು ಕಾಯ್ದೆಯ ಲ್ಲಿದೆ. ಇದೇ ರೀತಿ, ಮಕ್ಕಳು ವಾಹನ ಚಲಾಯಿಸಲು ಅವಕಾಶ ನೀಡುವ ಹೆತ್ತವರನ್ನು ಅಪರಾಧಿಗಳೆಂದು ಪರಿ ಗಣಿಸಲಾಗುವುದು. ವಾಹನ ಚಾಲನೆಯ ಪ್ರಮಾದದಿಂದ ಸಾವು ಸಂಭವಿಸಿದರೆ, ಮೃತ ವ್ಯಕ್ತಿಯ ಸಂಬಂಧಿಕರು ಮೋಟಾರು ವಾಹನ ಪರಿಹಾರ ಮಂಡಳಿಗೆ ದೂರು ನೀಡಲು ಹೋಗದಿದ್ದರೆ ಅವರಿಗೆ ವಾಹನ ಮಾಲಿಕರಿಗೆ ತತ್‌ಕ್ಷಣ ಪರಿಹಾರ ನೀಡಬೇಕು. (5 ಲಕ್ಷ ರೂ.) ಇದೇ ರೀತಿ, ಯಾರಾದರೂ ಗಂಭೀರವಾಗಿ ಗಾಯಗೊಂಡರೆ, ಆತನ ಬಂಧುಗಳು ಪರಿಹಾರ ಮಂಡಳಿಯತ್ತ ಮುಖ ಮಾಡದಿದ್ದರೆ ವಾಹನದ ಮಾಲೀಕರು ಆತನಿಗೆ 2.5 ಲಕ್ಷ ರೂ.ಗಳಷ್ಟು ಮೊತ್ತವನ್ನು ತುರ್ತಾಗಿ ಪಾವತಿ ಮಾಡಬೇಕು ಎನ್ನುತ್ತದೆ ಈ ಹೊಸ ಕಾಯ್ದೆ. ಹಿಟ್‌ ಆ್ಯಂಡ್‌ ರನ್‌ಪ್ರಕರಣ ಗಳಲ್ಲಿ ಮೃತ ವ್ಯಕ್ತಿಯ ಬಂಧುಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಚಾಲಕರ ಪರೀಕ್ಷಣಾ ಪ್ರಕ್ರಿಯೆಗಳಲ್ಲಿ, ಆನ್‌ಲೈನ್‌ ಮೂಲಕ ಚಾಲನೆ ಕಲಿಕೆ ಪರವಾನಿಗೆಗಾಗಿ ಸಲ್ಲಿ ಸುವ ಅರ್ಜಿ ಪ್ರಕ್ರಿಯೆಯಲ್ಲಿ – ಹೀಗೆ ರಸ್ತೆ ಸಾರಿಗೆ ಸಂಬಂಧಿ ಕ್ರಮಗಳನ್ನು ಸಡಿಲಗೊಳಿಸಿ ಒಟ್ಟು ವ್ಯವಸ್ಥೆ ಯನ್ನು ಸರಳೀತಗೊಳಿಸಬೇಕೆಂಬುದು ಈ ಕಾಯ್ದೆ ಯ ಹಿಂದಿನ ಕಾಳಜಿಯಾಗಿದೆ. ಅವಘಡಗಳ ಪ್ರಮಾಣವನ್ನು ಶೇ. 50ರಷ್ಟು ತಗ್ಗಿಸಬೇಕೆಂದು ವಿಶ್ವಸಂಸ್ಥೆ ಭಾರತಕ್ಕೆ ಸಲಹೆ ಮಾಡಿದೆ. ದಂಡ ಹೆಚ್ಚಳ ಕ್ರಮವೆಂಬುದು ನಮ್ಮ ರಸ್ತೆಗಳ ಸುರಕ್ಷಿತೆಗಾಗಿ ರೂಪು ತಳೆದಿದೆ‌ ಅಷ್ಟೇ.

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.