ರಾಜಕೀಯ ಬೆಳವಣಿಗೆ ಮತ್ತು ಕುಶಾಗ್ರಮತಿ ಸ್ಪೀಕರ್‌ ನಡವಳಿಕೆ


ಅರಕೆರೆ ಜಯರಾಮ್‌, Jul 17, 2019, 5:01 AM IST

n-31

ಅಪಾಯದಲ್ಲಿರುವಂತೆ ಕಾಣುತ್ತಿರುವ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರಕಾರವು ಜುಲೈ 18ರಂದು ವಿಶ್ವಾಸಮತ ಯಾಚನೆಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿಯೂ ಸ್ಪೀಕರ್‌ ರಮೇಶ್‌ ಕುಮಾರ್‌ ಮೇಲೆ ನೆಟ್ಟಿದೆ. ರಾಜೀನಾಮೆ ನೀಡಿರುವ 10 ಬಂಡಾಯ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ಕೂಡ ಸ್ಪೀಕರ್‌ ಪ್ರತಿಕ್ರಿಯೆಯನ್ನು ನಿರ್ಧರಿಸಬಹುದು. ವಿಧಾನಸಭೆ ಮತ್ತು ಅದರ ಸಭಾಧ್ಯಕ್ಷರಿಗೆ ಇರುವ ಅಧಿಕಾರಗಳ ಬಗ್ಗೆ ಸ್ಪೀಕರ್‌ ಪ್ರಬಲವಾದ ಅಭಿಪ್ರಾಯ ಹೊಂದಿದ್ದರೂ ಅವರು ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸಬೇಕಾಗಿ ಬರಬಹುದು.

ಜುಲೈ 11ರಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ, ಸದ್ಯ ಮುಂಬಯಿಯಲ್ಲಿ ನೆಲೆಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಂಡಾಯ ಶಾಸಕರು ಸ್ಪೀಕರನ್ನು ಅವರ ಕಚೇರಿಯಲ್ಲೇ ಭೇಟಿಯಾಗಿ ಎರಡನೇ ಬಾರಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜೀನಾಮೆ ಹಿಂದೆಗೆದುಕೊಳ್ಳುವಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಲವಾದ ಒತ್ತಡ ಹಾಕಿದರೂ ಯಾರೊಬ್ಬರೂ ಇದಕ್ಕೆ ಸ್ಪಂದಿಸಲಿಲ್ಲ. ಶಾಸಕರ ರಾಜೀನಾಮೆ ಕುರಿತು ಕೂಡಲೇ, ಈ ದಿನವೇ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದ್ದರೂ ಸ್ಪೀಕರ್‌ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇಂಥದ್ದೊಂದು ಸೂಚನೆಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ನ್ಯಾ.ಮೂ. ದೀಪಕ್‌ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರು ಸ್ಪೀಕರ್‌ಗೆ ನೀಡಿದ್ದರು. ಇದಕ್ಕೂ ಮೊದಲು ಸ್ಪೀಕರ್‌ ಅವರು, ರಾಜೀನಾಮೆ ನೀಡಿದ್ದ 15 ಶಾಸಕರ ಪೈಕಿ 5 ಮಂದಿಯ ರಾಜೀನಾಮೆ ಪತ್ರ ಮಾತ್ರವೇ ವಿಧಾನಸಭೆಯ ನಿಯಮ 202ರ ಪ್ರಕಾರ ಕ್ರಮಬದ್ಧವಾಗಿವೆ ಎಂದು ಹೇಳಿದ್ದರು.

ತಾನು ಹಿಂದಿನ ದಿನ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ಮರುದಿನ ಪರಿಷ್ಕರಿಸಿ, ಈ ಪ್ರಕರಣದಲ್ಲಿ ಮಹತ್ವದ ಸಾಂವಿಧಾನಿಕ ವಿಷಯಗಳು ಅಡಕವಾಗಿರುವುದರಿಂದ ಜುಲೈ 16ರವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಯಥಾಸ್ಥಿತಿ ಕಾಪಾಡುವಂತೆ ಸ್ಪೀಕರ್‌ಗೆ ಸೂಚಿಸಿ ವಿಚಾರಣೆಯನ್ನು ಜು. 16ಕ್ಕೆ ಮುಂದೂಡಿತ್ತು.

ವಿಧಾನಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್‌ ನೀಡಿದ್ದ ಸೂಚನೆಯಲ್ಲಿ ಎರಡು ಆಭಿಪ್ರಾಯಗಳಿದ್ದವು ಎಂಬುದರಲ್ಲಿ ಸಂಶಯವಿಲ್ಲ. ಕೋರ್ಟ್‌ ಅವಸರದಲ್ಲಿ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಸಂವಿಧಾನದ 190ನೇ ಆರ್ಟಿಕಲ್ ಪ್ರಕಾರ ಶಾಸಕರ ರಾಜೀನಾಮೆಯು ಸ್ವಯಂಪ್ರೇರಿತವಲ್ಲ ಮತ್ತು ಅದರಲ್ಲಿ ನೈಜತೆಯಿಲ್ಲ ಎಂಬುದು ಸ್ಪಷ್ಟವಾದರೆ ಅದನ್ನು ತಿರಸ್ಕರಿಸುವ ಅಧಿಕಾರ ಸ್ಪೀಕರ್‌ಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಈ ವಿಷಯದಲ್ಲಿ ಸ್ಪೀಕರ್‌ ಅವರು ರಾಜೀನಾಮೆಯ ಅಸಲಿಯತ್ತನ್ನು ತಿಳಿದುಕೊಳ್ಳಲು ದಿನ ಗೊತ್ತುಪಡಿಸಿ ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡಲು ನಿರ್ಧರಿಸಿದರು. ಇವರ ಈ ಕ್ರಮವು ಕುಮಾರಸ್ವಾಮಿ ಸರಕಾರವನ್ನು ಉಳಿಸುವುದಕ್ಕಾಗಿ ತೆಗೆದುಕೊಂಡ ಪಕ್ಷಪಾತದಿಂದ ಕೂಡಿದ್ದು ಎಂದು ಭಾವಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಸ್ಪೀಕರ್‌ ತನಗೆ ಸೂಕ್ತವೆಂದು ಕಂಡುಬಂದ ಒಂದು ದಿನ ರಾಜೀನಾಮೆ ನೀಡಿದ ಶಾಸಕರನ್ನು ಬಹಿರಂಗ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದು ಎಲ್ಲರಿಗೂ ಸ್ವೀಕಾರಾರ್ಹವಾಗದು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ರಾಜೀನಾಮೆ ನೀಡಿರುವ ಬಹುತೇಕ ಶಾಸಕರು ಪ್ರಮುಖ ನಾಯಕರು ಎಂಬುದು ಮೇಲ್ನೋಟಕ್ಕೇ ತಿಳಿದು ಬರುತ್ತಿದ್ದು, ಇದೇ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲೂ ಈ ಪ್ರಕರಣದಲ್ಲಿ ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳಿವೆ ಎಂದು ಹೇಳಿದ್ದು ಎನ್ನಬಹುದು. ಜತೆಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಕೂಡ ಪ್ರಮುಖ ನಾಯಕರು. ರಾಜೀನಾಮೆ ನೀಡಿರುವ ಶಾಸಕರು ಕೂಡಾ ದುರ್ಬಲರಲ್ಲ, ಕಡಿಮೆ ಶಿಕ್ಷಣ ಹೊಂದಿದವರಲ್ಲ, ಹಣ ಮತ್ತು ತೋಳ್ಬಲದಲ್ಲೂ ದುರ್ಬಲರಲ್ಲ. ಇವರ ಹಿಂದೆ ಜಾತಿ ಮತ್ತು ಹಣದ ಪ್ರಭಾವಿದೆ. ರಾಜೀನಾಮೆ ನೀಡಿರುವ ಶಾಸಕರು ಸುಲಭವಾಗಿ ಯಾರ ಆಮಿಷ, ಪ್ರಭಾವಕ್ಕೆ ಒಳಗಾಗುವವರಲ್ಲ. ಇವರು ಬೇರೆ ಶಾಸಕರನ್ನು ಆಮಿಷಕ್ಕೊಳಪಡಿಸವಷ್ಟು ಸಮರ್ಥರಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ಬಂಡಾಯ ಶಾಸಕರನ್ನು ಇದುವರೆಗೆ ಮನವೊಲಿಸುವಲ್ಲಿ ವಿಫ‌ಲವಾಗಿವೆ. ಮೇಲಿನ ರಾಜೀನಾಮೆ ಪ್ರಕ್ರಿಯೆ ವಿಳಂಬದಿಂದಾಗಿ ಶಾಸಕರಿಗೆ ತಾವು ಆಯ್ಕೆಯಾಗಿ ಬಂದಿರುವ ಪಕ್ಷಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಸೇರುವ ಮೂಲಭೂತ ಹಕ್ಕನ್ನು ತಡೆಹಿಡಿದಂತಾಗುತ್ತದೆ.

ಚುನಾವಣೆಯಲ್ಲಿ ಸೋತ ಬಳಿಕ ಪಕ್ಷ ಬದಲಿಸಿದ ವಿಷಯದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಕೂಡ ಅಪರಿಚಿತರೇನಲ್ಲ. ಈಗ ಕಾಂಗ್ರೆಸ್‌ನಲ್ಲಿರುವ ಅವರು ಈ ಹಿಂದೆ ಜನತಾದಳದಲ್ಲೂ ಇದ್ದರು. ಅವರು 10 ಬಾರಿ ಚುನಾವಣೆಗೆ ಸ್ಪರ್ಧಿಸಿ 6 ಬಾರಿ ಗೆದ್ದಿರುವ ಅನುಭವಿ. ತನ್ನ ಬ್ರಾಹ್ಮಣ ಸಮುದಾಯದ ಕೇವಲ 1000 ಮತಗಳಿರುವ ಹಾಗೂ ರೆಡ್ಡಿ ಸಮುದಾಯದ ಪ್ರಾಬಲ್ಯವಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಅವರು ಆರಿಸಿ ಬರುತ್ತಿದ್ದಾರೆ. ಅವರು ಪ್ರಥಮ ಬಾರಿಗೆ 1994ರಿಂದ 1999ರವರೆಗೆ ಸ್ಪೀಕರ್‌ ಆಗಿದ್ದ ಕಾಲದಲ್ಲಿ ಜೆಡಿಎಸ್‌ ಸದಸ್ಯರಾಗಿದ್ದರು. ಪ್ರಸ್ತುತ ಅವರು ಕಾಂಗ್ರೆಸ್‌ ಸದಸ್ಯ.

ಈಗ ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷದ್ರೋಹದ ಆರೋಪದಲ್ಲಿ ಅನರ್ಹಗೊಳಿಸಬೇಕು ಎಂಬ ಆಗ್ರಹದ ಹಿಂದಿರುವ ಉದ್ದೇಶವೇನು? ಅವರು ತಮ್ಮ ಶಾಸಕ ಸ್ಥಾನಕ್ಕೆ ಮಾತ್ರವೇ ರಾಜೀನಾಮೆ ನೀಡಿದ್ದಾರೆಯೇ ಹೊರತು ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ ಅವರ ಆತ್ಮಸಾಕ್ಷಿ ಮಾತ್ರ ಅವರು 2018ರ ಮೇ ತಿಂಗಳಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಪಕ್ಷದಲ್ಲಿ ಉಳಿಯುವುದು ಖಚಿತ ಎಂದೇನೂ ಹೇಳುವುದಿಲ್ಲ. ರಾಜೀನಾಮೆ ಅಂಗೀಕಾರವಾದ ಬಳಿಕ ಅವರು ಬಿಜೆಪಿಯನ್ನೋ ಅಥವಾ ಬೇರೆ ಯಾವುದೇ ಪಕ್ಷವನ್ನೋ ಸೇರುವುದನ್ನು ತಡೆಯಲು ಸಾಧ್ಯ ಎನ್ನಲಾಗದು. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿರುವ ನೈತಿಕತೆಯ ಅಧಃಪತನವನ್ನು ಗಮನಿಸಿ ಈ ಮಾತನ್ನು ಹೇಳಬೇಕಾಗುತ್ತದೆ.

ಐವರು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿದೆ ಮತ್ತು ಇತರರು ಸರಿಯಾದ ವಿಧಾನದಲ್ಲಿ ಕ್ರಮಬದ್ಧವಾಗಿ ರಾಜೀನಾಮೆ ನೀಡಬೇಕು ಎಂದು ಸ್ಪೀಕರ್‌ ತಿಳಿಸಿದ್ದರು. ಯಾವುದಾದರೂ ಶಾಸಕರು ಅಮಾನ್ಯತೆಯ ಭೀತಿಯನ್ನು ಎದುರಿಸುವುದಾದರೆ ಆ ವಿಷಯವು ಆರ್ಟಿಕಲ್ 192ರ ಪ್ರಕಾರ ರಾಜ್ಯಪಾಲರ ಗಮನಕ್ಕೆ ಬರಬೇಕಾಗಿದೆ ಮತ್ತು ಅವರು ಚುನಾವಣಾ ಅಯೋಗದ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಬೇಕಾಗುತ್ತದೆ. ಶಾಸಕರು ರಾಜೀನಾಮೆ ಪತ್ರವನ್ನು ಅಂಚೆ ಮೂಲಕ ಅಥವಾ ನೇರವಾಗಿ ಭೇಟಿ ಮಾಡದೆ ಬೇರೆ ಯಾವುದಾದರೂ ರೂಪದಲ್ಲಿ ನೀಡಿದಾಗ ಮಾತ್ರ ರಾಜೀನಾಮೆಯ ನೈಜತೆಯನ್ನು ತಿಳಿದುಕೊಳ್ಳಲು ವಿಚಾರಣೆ ನಡೆಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಶಾಸಕರು ತಮ್ಮ ಕೈಬರಹದಲ್ಲೇ ಖುದ್ದಾಗಿ ರಾಜೀನಾಮೆಯನ್ನು ಸ್ಪೀಕರ್‌ಗೆ ನೀಡಿದ್ದಾರೆ. ಇಂಥ ಸಂದರ್ಭದಲ್ಲಿ ರಾಜೀನಾಮೆಯು ಸ್ವಯಂ ಪ್ರೇರಿತವಾದುದಲ್ಲ ಮತ್ತು ಅದರ ನೈಜತೆಯಲ್ಲಿ ಸಂಶಯವಿದೆ ಎಂಬುದನ್ನು ತನ್ನ ವಿವೇಚನೆ ಅಥವಾ ತನಗೆ ಸಿಕ್ಕಿರುವ ಮಾಹಿತಿ ಆಧರಿಸಿ ತಿರಸ್ಕರಿಸುವ ಅಧಿಕಾರ ಸ್ಪೀಕರ್‌ಗಿದೆ. ಸದ್ಯ ಶಾಸಕರ ರಾಜೀನಾಮೆಯ ಹಿಂದೆ ರಾಜ್ಯದ ಮೈತ್ರಿ ಸರಕಾರವನ್ನು ಅತಂತ್ರಗೊಳಿಸುವ ಸ್ಪಷ್ಟ ಉದ್ದೇಶವಿದೆ ಎಂದು ಸ್ಪೀಕರ್‌ನ ‘ಕ್ರಿಯಾಶೀಲತೆ’ ಅಥವಾ ‘ನಿಷ್ಕ್ರಿಯತೆ’ಯನ್ನು ಸಮರ್ಥಿಸುವವರು ವಾದಿಸಬಹುದು.

ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸುವ ಅಫಿದವಿತ್‌ನಲ್ಲಿ, ಶಾಸಕರ ರಾಜೀನಾಮೆಯ ಅರ್ಜಿ ಮತ್ತು ಅವರ ವಿರುದ್ಧದ ಅನರ್ಹತೆಯನ್ನು ಅರ್ಜಿಯನ್ನು ಜತೆಯಾಗಿ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸ್ಪೀಕರ್‌ ರಾಜೀನಾಮೆಯನ್ನು ವಿಳಂಬ ಮಾಡುವುದರ ಹಿಂದೆ ಅತೃಪ್ತ ಶಾಸಕರನ್ನು ಅವುಗಳ ಪಕ್ಷದ ಮುಖಂಡರು ವಿಪ್‌ ಮೂಲಕ ಕಟ್ಟಿಹಾಕುವ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸುವ ಉದ್ದೇಶವಿದೆ ಎಂದೂ ಹೇಳಲಾಗುತ್ತಿದೆ.

2018ರ ಮೇ ತಿಂಗಳಲ್ಲಿ ಸ್ಪೀಕರ್‌ ಆಗಿ ರಮೇಶ್‌ ಕುಮಾರ್‌ ಅವರು ಆಯ್ಕೆಯಾಗಿದ್ದ ಸಂದರ್ಭದಲ್ಲಿ ಈ ಅಂಕಣದಲ್ಲಿಯೇ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು ಹಾಗೂ ಆ ಹುದ್ದೆಗೆ ರಮೇಶ್‌ ಕುಮಾರ್‌ ಅವರು ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಿಸಲಾಗಿತ್ತು. ಇತರ ಸ್ಪೀಕರ್‌ಗಳಂತೆ ಇವರು ಅಧಿಕಾರಿಗಳು ಸಿದ್ಧಪಡಿಸಿದ್ದನ್ನು ಓದುವುದಕ್ಕೆ ಮಾತ್ರ ಸೀಮಿತವಾಗುವ ಸಭಾಧ್ಯಕ್ಷರಾಗಲಾರರು ಎಂದು ಆಗಲೇ ಹೇಳಿದ್ದೆ. ಈಗಿನ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅಧ್ಯಕ್ಷರು ವಿಧಾನಮಂಡಲದ ಅಧಿಕಾರಿಗಳಷ್ಟು ನೈತಿಕತೆಯನ್ನು ಉಳಿಸಿಕೊಳ್ಳುವುದಿಲ್ಲ ಎಂಬುದು ವಾಸ್ತವ.

ಸ್ಪೀಕರ್‌ ಆಗಿ ತನ್ನ ಹಕ್ಕು, ಅಧಿಕಾರಗಳ ಬಗ್ಗೆ ಇದರ ಬಗೆಗಿನ ನ್ಯಾಯಾಂಗ ಹಸ್ತಕ್ಷೇಪದ ಬಗ್ಗೆ ರಮೇಶ್‌ ಕುಮಾರ್‌ಗೆ ಸರಿಯಾದ ಜ್ಞಾನವಿದೆ. 1998ರಲ್ಲಿ ಶಾಸಕರ ಭವನದ ಕಾಮಗಾರಿಯೊಂದಕ್ಕೆ ಸಂಬಂಧಿಸಿಯೂ ಇವರು ಕಾನೂನು ಹೋರಾಟ ಮಾಡಿದ್ದರು. ಆಗ ವಿಧಾನಸೌಧ ಮತ್ತು ಅದರ ಪರಿಸರವು ಕಬ್ಬನ್‌ಪಾರ್ಕ್‌ ವ್ಯಾಪ್ತಿಗೆ ಬರುತ್ತದೆ ಮತ್ತು ಇಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಕೋರ್ಟಿನಲ್ಲಿ ದೂರುದಾರರು ಕೇಳಿಕೊಂಡಿದ್ದರು. ಆಗ ರಮೇಶ್‌ ಕುಮಾರ್‌ ಅವರು ಹೈಕೋರ್ಟಿನ ನ್ಯಾಯಮೂರ್ತಿ ಎಂ.ಎಫ್. ಸಲ್ದಾನ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು. ಇವರಿಗೆ ಬಿಜೆಪಿಯ ಎಚ್. ಎನ್‌, ನಂಜೇಗೌಡ ಮೊದಲಾದವರ ಬೆಂಬಲವೂ ಸಿಕ್ಕಿತ್ತು. ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದಕ್ಕೆ 1964ರ ಖ್ಯಾತ ಕೇಶವ್‌ ಸಿಂಗ್‌ ಪ್ರಕರಣದ ಮತ್ತಷ್ಟು ವಿಷಯಗಳು ಸೇರ್ಪಡೆಯಾಗುತ್ತಾ ಹೋದವು. ಇದು ಉತ್ತರಪ್ರದೇಶ ವಿಧಾನಸಭೆ ಮತ್ತು ಅಲ್ಲಹಾಬಾದ್‌ ಹೈಕೋರ್ಟು ನಡುವಿನ ವಿಷಯವಾಗಿತ್ತು. ಅದರಲ್ಲಿ ಜ| ಬೇರ್‌ ಮತ್ತು ಶೆರ್ಗಿಲ್ ಅವರು ನ್ಯಾಯವಾದಿ ಮೂಲಕ ಸಲ್ಲಿಸಲಾಗಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಬೆಂಬಲಿಸಿದ್ದರು. ಆಗಿನ ಸ್ಪೀಕರ್‌ ಮದನ್‌ ಮೋಹಲ್ ವರ್ಮ ಅವರ ಆದೇಶದಂತೆ ಕೇಶವ್‌ ಸಿಂಗ್‌ರನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರು ಹೈಕೋರ್ಟಿನ ನ್ಯಾಯಮೂರ್ತಿಗಳ ಬಂಧನಕ್ಕೂ ಸ್ಪೀಕರ್‌ ಆದೇಶ ಹೊರಡಿಸಿದ್ದರು. ಇದನ್ನು ಆಗಿನ ರಾಷ್ಟ್ರಪತಿ ಡಾ| ಎಸ್‌. ರಾಧಾಕೃಷ್ಣನ್‌ ಅವರು ಸುಪ್ರೀಂಕೋರ್ಟಿನ ಗಮನಕ್ಕೂ ತಂದಿದ್ದರು. ಇವೆಲ್ಲವೂ ಮೇಲಿನ ಕರ್ನಾಟಕದ ಪ್ರಕರಣದಲ್ಲೂ ಉಲ್ಲೇಖವಾಯಿತು.

ರಮೇಶ್‌ ಕುಮಾರ್‌ ತಮ್ಮ ಅನುಭವ ಮತ್ತು ಜ್ಞಾನವನ್ನು ಬಳಸಿ ಸದನದಲ್ಲಿ ಹೆಚ್ಚು ಮಾತನಾಡುವ ಸ್ಪೀಕರ್‌ ಎಂದು ಗುರುತಿಸಿಕೊಂಡಿದ್ದಾರೆ. ಅವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆಯೂ ಮಾತನಾಡುತ್ತಾರೆ. ದೇಶದಲ್ಲಿರುವ ಇತರ ಸ್ಪೀಕರ್‌ಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಈ ವಿಷಯದಲ್ಲಿ ದಾಖಲೆ ಸೃಷ್ಟಿಸಿದ್ದ್ದಾರೆ. 1991ರಲ್ಲಿ ಆಗಿನ ಕಂದಾಯ ಸಚಿವ ಬಿ. ಸೋಮಶೇಖರ್‌ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದ ಸಂದರ್ಭದಲ್ಲಿ ಇವರು ಸಭಾಧ್ಯಕ್ಷ ಸ್ಥಾನದಿಂದ ಎದ್ದು ಹೋಗಿದ್ದರು. ಸಚಿವ ಸೋಮಶೇಖರ್‌ ಅವರು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ಮಿನಿ ವಿಧಾನಸಭೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಪಿಎಂ ಸದಸ್ಯ ಶ್ರೀರಾಮ ರೆಡ್ಡಿ ಅವರು ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು. ಹಕ್ಕುಚ್ಯುತಿ ಮಂಡನೆಯನ್ನು ಸಚಿವ ಸೋಮಶೇಖರ್‌ ಪ್ರಶ್ನಿಸಿದ್ದರು ಮತ್ತು ಸಭಾಧ್ಯಕ್ಷರು ಇದನ್ನು ನಡೆಸುವಂತಿಲ್ಲ ಎಂದಿದ್ದರು. ಸಚಿವರಿಗೆ ವೀರಪ್ಪ ಮೊಯಿಲಿ ಸಹಿತ ಕೆಲವು ವಿಪಕ್ಷ ಸದಸ್ಯರ ಬೆಂಬಲವೂ ಸಿಕ್ಕಿತ್ತು. ಈ ಕಾರಣದಿಂದ ರಮೇಶ್‌ ಕುಮಾರ್‌ ಅವರು ತಮ್ಮ ಪೀಠದಿಂದ ಎದ್ದು ಹೋಗಿದ್ದರು.

ರಮೇಶ್‌ ಕುಮಾರ್‌ ಅವರು ತನ್ನ ಅನು ಭವ ಮತ್ತು ಜ್ಞಾನ ವನ್ನು ಬಳಸಿ ಸದನದಲ್ಲಿ ಹೆಚ್ಚು ಮಾತನಾಡುವ ಸ್ಪೀಕರ್‌ ಎಂದು ಗುರುತಿಸಿಕೊಂಡಿದ್ದಾರೆ. ಅವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆಯೂ ಮಾತನಾಡುತ್ತಾರೆ. ದೇಶದಲ್ಲಿರುವ ಇತರ ಸ್ಪೀಕರ್‌ಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಈ ವಿಷಯದಲ್ಲಿ ದಾಖಲೆ ಸೃಷ್ಟಿಸಿದ್ದಾರೆ. 1991ರಲ್ಲಿ ಆಗಿನ ಕಂದಾಯ ಸಚಿವ ಬಿ. ಸೋಮಶೇಖರ್‌ ವಿರುದ್ಧ ಹಕ್ಕು ಚ್ಯುತಿ ಮಂಡನೆಯಾದ ಸಂದರ್ಭದಲ್ಲಿ ಇವರು ಸಭಾಧ್ಯಕ್ಷ ಸ್ಥಾನದಿಂದ ಎದ್ದು ಹೋಗಿದ್ದರು. ಸಚಿವ ಸೋಮಶೇಖರ್‌ ಅವರು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ಮಿನಿ ವಿಧಾನ ಸಭೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಪಿಎಂ ಸದಸ್ಯ ಶ್ರೀರಾಮ ರೆಡ್ಡಿ ಅವರು ಸಚಿವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ್ದರು. ಹಕ್ಕು ಚ್ಯುತಿ ಮಂಡನೆಯನ್ನು ಸಚಿವ ಸೋಮಶೇಖರ್‌ ಪ್ರಶ್ನಿಸಿದ್ದರು ಮತ್ತು ಸಭಾಧ್ಯಕ್ಷರು ಇದನ್ನು ನಡೆಸುವಂತಿಲ್ಲ ಎಂದಿದ್ದರು. ಸಚಿವರಿಗೆ ವೀರಪ್ಪ ಮೊಯಿಲಿ ಸಹಿತ ಕೆಲವು ವಿಪಕ್ಷ ಸದಸ್ಯರ ಬೆಂಬಲವೂ ಸಿಕ್ಕಿತ್ತು. ಈ ಕಾರಣದಿಂದ ರಮೇಶ್‌ ಕುಮಾರ್‌ ಅವರು ತಮ್ಮ ಪೀಠದಿಂದ ಎದ್ದು ಹೋಗಿದ್ದರು.

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.