ವಿವಿಗಳ ಕಿರೀಟಕ್ಕೀಗ ಜಾತಿಸೂಚಕ “ಗರಿ’ಗಳ “ಕಾಟ’?


Team Udayavani, Oct 18, 2017, 11:23 AM IST

Banaras.jpg

ದೇಶದಲ್ಲಿರುವ ಹತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಅಕ್ರಮ ಹಾಗೂ ಅಸಮರ್ಪಕತೆಗಳ ಕುರಿತಾದ ಆರೋಪಗಳ ಬಗೆಗಿನ ತನಿಖೆಗಾಗಿ ವಿ.ವಿ. ಅನುದಾನ ಆಯೋಗದಿಂದ ಸೀಮಿತವಾಗಿರುವ ಸಮಿತಿ, ನಿರೀಕ್ಷಿತ ಕಾರ್ಯವ್ಯಾಪ್ತಿಯಿಂದ  ಕೊಂಚ ಮುಂದೆ ಹೋಗಿ ಬನಾರಸ್‌ ಹಿಂದೂ ವಿ.ವಿ.ಯ ಹೆಸರಿನಲ್ಲಿರುವ “ಹಿಂದೂ’ ಎಂಬ ಪದವನ್ನು ಹಾಗೂ ಅಲಿಗಢ  ಮುಸ್ಲಿಂ ವಿ.ವಿ. ಎಂಬ ಹೆಸರಿನಲ್ಲಿನ “ಮುಸ್ಲಿಂ’ ಎಂಬ ಪದವನ್ನು ಕೈ ಬಿಡುವಂತೆ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಭಾರತೀಯ ಸಂವಿಧಾನದಲ್ಲಿ “ಜಾತ್ಯತೀತ ಧೋರಣೆಗೆ ಬದ್ಧತೆ’ ಎಂಬ ಉಲ್ಲೇಖವಿದೆಯಷ್ಟೆ? ಮೇಲೆ ತಿಳಿಸಿದ ಎರಡು ಪದಗಳು ಈ ಉಲ್ಲೇಖಕ್ಕೆ ವಿರುದ್ಧವಾಗಿವೆ ಎಂಬ ಕಾರಣ ಮುಂದೊಡ್ಡಿ ತನಿಖಾ ಸಮಿತಿ ಮಾಡಿರುವ ಶಿಫಾರಸು ಇದು.ಆದರೆ, ಕೇಂದ್ರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರು ಈ ಶಿಫಾರಸನ್ನು ನ್ಯಾಯವಾಗಿಯೇ ತಳ್ಳಿ ಹಾಕಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎಂಬ ಪದಗಳನ್ನು ತೆಗೆದು ಹಾಕುವ ಇಚ್ಛೆ ಸರಕಾರಕ್ಕೆ ಇಲ್ಲ ಎಂದವರು ಸ್ಪಷ್ಟ ಪಡಿಸಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯಗಳೆಲ್ಲವೂ ಜಾತ್ಯತೀತ ಧೋರಣೆಯವೇ ಆಗಿವೆ ಎಂಬ ಅಭಿಪ್ರಾಯವನ್ನು ಇತರ ನಾಯಕರೂ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದಿಲ್ಲಿಯಲ್ಲಿರುವ ಅಲಿಗಢ ಮುಸ್ಲಿಂ ವಿವಿ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಗಳೆರಡೂ “ಅಲ್ಪಸಂಖ್ಯಾಕ ಸಂಸ್ಥೆಗಳಲ್ಲ’ವೆಂಬ ತನ್ನ ನಿಲುವನ್ನು ಕೂಡ ನರೇಂದ್ರ ಮೋದಿ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕಟಿಸಿದೆ. ಅಲಿಗಢ ವಿ.ವಿ. ಸ್ಥಾಪಿಸಿದ್ದು ಸಂಸತ್ತೇ ಹೊರತು, ಮುಸ್ಲಿಂ ಸಮುದಾಯವಲ್ಲ. ಇದೇ ಕೇಂದ್ರ ಸರಕಾರದ ನಿಲುವು. ಹೀಗಿರುತ್ತ ಯುಜಿಸಿಯ ಈ ತನಿಖಾ ಸಮಿತಿ ಅನಗತ್ಯವಾದ ಶಿಫಾರಸೊಂದನ್ನು ಮಾಡಿದೆ. ಇದರ ಜತೆಗೆ ವಿನೋದದ ಧಾಟಿಯಲ್ಲಿ ಹೀಗೂ ಹೇಳಬಹುದೇನೋ – ಎಲ್‌.ಕೆ. ಆಡ್ವಾಣಿಯವರಾದಿಯಾಗಿ ಎಲ್ಲ ಬಿಜೆಪಿ ನಾಯಕರೂ “ಹಿಂದೂ’ ಎಂಬ ಪದ “ಜಾತ್ಯತೀತ’ ಪದಕ್ಕೆ ಸಂವಾದಿಯೇ ಆಗಿದೆ ಎಂಬ ಅಭಿಪ್ರಾಯದವರೇ ಆಗಿರುವುದರಿಂದ, ಮೋದಿ ಸರಕಾರ ಬನಾರಸ್‌ ಹಿಂದೂ ವಿ.ವಿ.ಯ ವಿಷಯದಲ್ಲಿ ಏನನ್ನೂ ಹೇಳುವ ಅಗತ್ಯವಿಲ್ಲವೆಂದು ಕಾಣುತ್ತದೆ!

ಈ ನಡುವೆ ವಿ.ವಿ. ಅನುದಾನ ಆಯೋಗ, ದೇಶದಲ್ಲಿರುವ ವಿವಿಧ ಖಾಸಗಿ ಹಾಗೂ ಪರಿಗಣಿತ ವಿ.ವಿ.ಗಳಿಗೆ, “ಸಮಾಜವಾದಿ’ ಸಿದ್ಧಾಂತಕ್ಕೆ ಬದ್ಧವಾಗಿ ಕಾರ್ಯಾಚರಿಸುವಂತೆ, ತನ್ಮೂಲಕ ವಿವಿಧ ಕೋರ್ಸುಗಳ ವ್ಯಾಪಾರೀಕರಣವನ್ನು ನಿಲ್ಲಿಸುವಂತೆ ಯಾಕೆ ಮನವಿ ಮಾಡಿಕೊಂಡಿಲ್ಲ – ಎಬುದೇ ಅಚ್ಚರಿಯ ಸಂಗತಿ. ಇಂಥ ವಿವಿಗಳು ದೇಶದಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿವೆ, ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುತ್ತಿವೆ. ಅವು ಕ್ಯಾಪಿಟೇಶನ್‌ ಶುಲ್ಕ ಆಧಾರಿತ ಕಾಲೇಜುಗಳಿಗಿಂತ ಹಾಗೂ ಶಾಲೆಗಳಿಗಿಂತ ಯಾವ ರೀತಿಯಲ್ಲೂ ಭಿನ್ನವಲ್ಲ! ಮೇಲೆ ಹೇಳಿದ ಎರಡೂ ವರ್ಗಗಳ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು ಸ್ಥಾಪನೆಗೊಂಡು ಕಾರ್ಯಾಚರಿಸುತ್ತಿರುವುದು ವಿ.ವಿ. ಅನುದಾನ ಆಯೋಗದ 1956ರ ಕಾಯ್ದೆಯ ಅಡಿಯಲ್ಲೇ. ಖಾಸಗಿ ವಿವಿಗಳ ಯುಜಿಸಿಯಿಂದ ಅನುದಾನ ಪಡೆಯುತ್ತಿಲ್ಲವಾದರೂ ಪರಿಗಣಿತ ವಿವಿಗಳ ಬಗ್ಗೆ ಈ ಮಾತನ್ನು ಹೇಳುವಂತಿಲ್ಲ.

ಯುಜಿಸಿ ತನಿಖಾ ಸಮಿತಿ ಕೇವಲ ಎರಡೇ ವಿವಿಗಳ ಹೆಸರನ್ನಷ್ಟೇ ಉಲ್ಲೇಖೀಸಿರುವುದೇಕೆ? ದೇಶದಲ್ಲಿ ಇಂಥ ಹೆಸರಿನ ಹಲವು ವಿವಿಗಳಿವೆ. ವೆಲ್ಲೂರ್‌ನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು, ಚೆನ್ನೈಯ ಇನ್ನೆರಡು ಕ್ರಿಶ್ಚಿಯನ್‌ ಕಾಲೇಜುಗಳು, ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಇತ್ಯಾದಿ. ಈ ಕಾಲೇಜುಗಳು ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಮುಕ್ತವಾಗಿವೆ ಎಂಬುದೇನೋ ನಿಜ. ಹಾಗೆ ನೋಡಿದರೆ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾಕ ಶೈಕ್ಷಣಿಕ ಸಂಸ್ಥೆಗಳಿಗೆ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿದೆ. ಕ್ರಿಶ್ಚಿಯನ್‌ ಎಂಬ ಹೆಸರುಳ್ಳ ಅನೇಕ ವಿ.ವಿ.ಗಳು ಅಮೆರಿಕದಲ್ಲೂ ಇವೆ.

ಅಲಿಗಢ ವಿವಿ ಹಾಗೂ ಬೆನಾರಸ್‌ ವಿವಿಗಳು ಧಾರ್ಮಿಕ ಹಿನ್ನೆಲೆಯ ಹೆಸರನ್ನು ಪಡೆದಿದ್ದರೆ, ಇದಕ್ಕೆ ಐತಿಹಾಸಿಕವೆನ್ನಬಹುದಾದಂಥ ಕಾರಣಗಳಿವೆ. ಸರ್‌ ಸಯ್ಯದ್‌ ಅಹ್ಮದ್‌ ಖಾನ್‌ (1817-1898) ಅವರು ಮುಸ್ಲಿಂ ಸಮುದಾಯದವರಿಗೆ ಆಧು ನಿಕ ಹಾಗೂ ವೈಜ್ಞಾನಿಕ ಶಿಕ್ಷಣ ಲಭಿಸಬೇಕೆಂಬ ಉದ್ದೇಶದಿಂದ ಅಲಿಗಢ್‌ ಓರಿಯೆಂಟಲ್‌ ಕಾಲೇಜನ್ನು ಸ್ಥಾಪಿಸಿದರು. ಮುಂದೆ ಇದೇ ವಿಶ್ವವಿದ್ಯಾಲಯವಾಯಿತು. ಸಯ್ಯದ್‌ ಅಹ್ಮದ್‌ ಖಾನ್‌ ಅವರನ್ನು “ಅವಳಿ ರಾಷ್ಟ್ರ ಸಿದ್ಧಾಂತದ ಪಿತಾಮಹ’ ಎಂದು ಬಣ್ಣಿಸಲಾಗಿರುವುದು; ಅವರ ಇದೇ ಧೋರಣೆಯೇ ರಾಷ್ಟ್ರ
ವಿಭಜನೆಗೆ ಕಾರಣವಾಯಿತೆನ್ನುವುದು ಬೇರೆ ಮಾತು. ಅಲಿಗಢ ವಿವಿ ಮುಸ್ಲಿಮೇತರ ವಿದ್ಯಾರ್ಥಿಗಳನ್ನು, ಮುಸ್ಲಿಮೇತರ ಅಧ್ಯಾಪಕರನ್ನು ಕೂಡ ಸ್ವೀಕರಿಸುತ್ತಿರುವುದು ನಿಜ. ಈ ವಿವಿ  ಯಲ್ಲಿ ಮುಸ್ಲಿಂ ಹಾಗೂ ಮುಸ್ಲಿಮೇತರ ವಿದ್ಯಾರ್ಥಿಗಳನ್ನು 60:40 ಅನುಪಾತದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಆದರೆ ಈ ಯುನಿವರ್ಸಿಟಿ ವಿಭಜನಪೂರ್ವ ವರ್ಷಗಳಲ್ಲಿ ಮುಸ್ಲಿಂವಾದದ ಹಾಗೂ ಪಾಕ್‌ಪರ ಶಕ್ತಿಗಳ ಬಿಸಿ ಕುಲುಮೆಯಾಗಿತ್ತೆನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಾಕಿಸ್ಥಾನದ ಭವಿಷ್ಯದ ನಾಯಕರನೇಕರು (ಆ ರಾಷ್ಟ್ರದ ಪ್ರಥಮ ಪ್ರಧಾನಿ ಲಿಯಾಕತ್‌ ಅಲಿ ಖಾನ್‌ ಸಹಿತ) ಈ ವಿವಿಯ ಗಣನೀಯ ವಿದ್ಯಾರ್ಥಿಗಳಾಗಿದ್ದವರೇ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಮುಸ್ಲಿಂ ಸಮುದಾಯದ ಯುವಜನತೆಯ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡುವ ವಿಷಯದಲ್ಲಿ ಅಲಿಗಢ ವಿವಿಯ ಪಾತ್ರ ಉಳಿದೆಲ್ಲ ವಿವಿಗಳಿಗಿಂತ ದೊಡ್ಡದೇ ಹೌದು.

ಬನಾರಸ್‌ ಹಿಂದೂ ವಿವಿಯನ್ನು ಸ್ಥಾಪಿಸಿದವರು ಪಂಡಿತ್‌ ಮದನಮೋಹನ ಮಾಳವೀಯರು (1861-1946). ಇದನ್ನು
ಸ್ಥಾಪಿಸಿದ್ದು, ಉತ್ತರಪ್ರದೇಶದಲ್ಲಿ (ಆಗಿನ ಸಂಯುಕ್ತ ಪ್ರಾಂತ್ಯ). ಹಿಂದೂ – ಮುಸ್ಲಿಂ ಸಮುದಾಯಗಳ ನಡುವೆ ತಾಕಲಾಟ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಆ್ಯನಿಬೆಸೆಂಟ್‌ ಅವರು 1898ರಲ್ಲಿ ಸ್ಥಾಪಿಸಿದ್ದ ಕೇಂದ್ರೀಯ ಹಿಂದೂ ಕಾಲೇಜು, ಈ ವಿವಿಯ ಮಾತೃಸಂಸ್ಥೆ. ಇದರ ಪ್ರಥಮ ಕುಲಪತಿಯಾಗಿದ್ದವರು ನಮ್ಮ ಮೈಸೂರಿನ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು. 1919ರಲ್ಲಿ ನಡೆದ ವಿವಿಯ ಪ್ರಥಮ ಪದವಿದಾನ ಸಮಾರಂಭದ ಅಧ್ಯಕ್ಷರಾಗಿದ್ದವರೂ ಅವರೇ. ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ನಡೆಸಿದ ಪಾಶವಿಕ ದಾಳಿಯ ಘಟನೆಯಿಂದ
ಸುದ್ದಿ ಮಾಡಿರುವ ಈ ವಿವಿ ಈ ಹಿಂದೆ ಅನೇಕ ವರ್ಷಗಳ ಕಾಲ ವಿದ್ಯಾರ್ಥಿ – ರಾಜಕೀಯದ ಆಡುಂಬೋಲವಾಗಿತ್ತು; ವಿದ್ಯಾರ್ಥಿಗಳ ರ್ಯಾಗಿಂಗ್‌ಗೆ ಹೆಸರಾಗಿತ್ತು.

ಅಲಿಗಢ ವಿವಿಗೇಕೆ ಕೋಮುವಾದಿ ಬಣ್ಣ?
ಅಲಿಗಢ ಮುಸ್ಲಿಂ ವಿವಿಗೆ ಕೋಮುವಾದದ ಬಣ್ಣ ಬಳಿ ದುದು “ಜಾತ್ಯತೀತ ಹಾಗೂ ಸಮಾಜವಾದಿ’ ನಿಲುವಿನ ಇಂದಿರಾಗಾಂಧಿ ಸರಕಾರ. 1981ರಲ್ಲಿ ಈ ವಿವಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆಗಿನ ಸರಕಾರ ಈ ಕೆಲಸ ಮಾಡಿತು. ಈ ತಿದ್ದುಪಡಿಯ ಮೂಲಕ, ಭಾರತೀಯ ಮುಸ್ಲಿಮರ ಉನ್ನತೀಕರಣದ ಹಾಗೂ ಅವರ ಶಿಕ್ಷಣದ ಹೊಣೆಯನ್ನು ಈ ವಿವಿಗೆ ವಹಿಸಲಾಯಿತು. 2006ರಲ್ಲಿ ಅಲಹಾಬಾದ್‌ ಉಚ್ಚ ನ್ಯಾಯಾಲಯ (ನ್ಯಾ| ಎ. ಎನ್‌.ರೇ ಹಾಗೂ ನ್ಯಾ| ಅಶೋಕ್‌ ಭೂಷಣ್‌ ಇವರನ್ನೊಳಗೊಂಡ ನ್ಯಾಯಪೀಠ) ಈ ತಿದ್ದುಪಡಿಯನ್ನು ಅಸಿಂಧುಗೊಳಿಸಿತು. ಈ ಆದೇಶದ ಮೂಲಕ ನ್ಯಾಯಾಲಯ, ಈ ವಿವಿಯ “ಅಲ್ಪಸಂಖ್ಯಾಕ ಸ್ಥಾನ -ಮಾನ’ವನ್ನು ಅಲ್ಲಗಳೆದಂತಾಯಿತು. ಆದರೆ ಈ ಆದೇಶವನ್ನು ಒಪ್ಪದ ವಿವಿ ಆಡಳಿತ, ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಎನ್‌ಡಿಎ ಸರಕಾರ, ಸರ್ವೋಚ್ಚ ನ್ಯಾಯಾಲಯ ದಲ್ಲಿ “ಅಲಿಗಢ ವಿವಿಯನ್ನು ಸ್ಥಾಪಿಸಿರುವುದು ಮುಸ್ಲಿಮರಲ್ಲ’ ಎಂಬ ಅಭಿಪ್ರಾಯವನ್ನು ಪ್ರಕಟಿಸಿರುವುದು, ಇದೇ ಮೇಲ್ಮನ
ವಿಯ ಸಂಬಂಧದಲ್ಲಿ. ಆದರೆ ವಿವಿ ಅನುದಾನ ಆಯೋಗ ನಿಜಕ್ಕೂ ಆತಂಕಪಡಲೇಬೇಕಾದ ಸಂಗತಿಯೊಂದಿದೆ. 

ಅದೆಂದರೆ ನಮ್ಮ ವಿವಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ವಿವಿಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಜಾತೀಯತೆಯ ಮನೋಭಾವ. ಜಾತೀಯತೆಯ ಪಿಡುಗು ಹುಟ್ಟಿಸಿರುವ ಆತಂಕದ ಎದುರಲ್ಲಿ, ಹಿಂದೂ ಅಥವಾ ಮುಸ್ಲಿಂ ಎಂಬ ಪದಗಳು ಹುಟ್ಟಿಸುತ್ತಿರುವ ಭೀತಿ ಕಡಿಮೆ ಪ್ರಮಾಣದ್ದೆಂದೇ ಹೇಳಬಹುದು! ಕರ್ನಾಟಕದ ವಿವಿಗಳ ಪೈಕಿ ಯಾವುದಾದ ರೊಂದರ ಹೆಸರೆತ್ತಿದರೆ ಸಾಕು, ಆ ವಿವಿಯಲ್ಲಿ ಯಾವ ಜಾತಿ ಮೇಲುಗೈ ಸಾಧಿಸಿದೆ ಎಂಬುದನ್ನು ತುಂಬ ಸುಲಭವಾಗಿ ಹೇಳಿಬಿಡಬಹುದು. ರಾಜ್ಯದ ನಿರ್ದಿಷ್ಟ ಭಾಗದಲ್ಲಿರುವ ರಾಜಕೀಯ ಬಲವುಳ್ಳ ಜಾತಿ/ಸಮುದಾಯದ ಮಂದಿ, ಸ್ಥಳೀಯ ಸರಕಾರದ ಹಣದಿಂದ ನಡೆಯುವ ವಿವಿ ತಮಗೆ ಸೇರಿದ್ದೆಂದೇ ಭಾವಿಸುತ್ತಿದ್ದಾರೆ.

ಮೊದಲಿಗೆ ಮೂರು ಹಳೆಯ ವಿವಿಗಳಾದ ಮೈಸೂರು, ಕರ್ನಾಟಕ ಹಾಗೂ ಬೆಂಗಳೂರು ವಿವಿಗಳಲ್ಲಿ ಆರಂಭವಾಗಿದ್ದ ಈ ಕಾಯಿಲೆ ಈಗ ರಾಜ್ಯದಲ್ಲಿರುವ ಸುಮಾರು 30 ವಿವಿಗಳಿಗೂ ಹರಡಿದೆ. ಬೆಂಗಳೂರು ವಿವಿಯ ಸೆನೆಟ್‌ ಸಭೆಗಳಲ್ಲಿ ವಿವಿಧ ಜಾತಿ-ಗುಂಪುಗಳು ಕಿತ್ತಾಡಿದ ಘಟನೆಗಳನ್ನು ಈ ಹಿಂದೆ ನಾನೇ ವರದಿ ಮಾಡಿದ್ದಿದೆ. ರಾಜ್ಯ ಸರಕಾರ ಸೆನೆಟ್‌ಗಳನ್ನು ನಿಷೇಧಿಸಿದ್ದರೂ, ನಾಮಾಂಕಿತ ಸದಸ್ಯರಿರುವ ವಿವಿ ಸಿಂಡಿಕೇಟ್‌ಗಳ ಸಭೆಗಳು ಕೂಡ ವಿವಿಧ ಜಾತಿಗಳ ರಣಾಂಗಣಗಳಾಗಿ ಮಾರ್ಪಟ್ಟಿವೆ. ವಿವಿಗಳ ಕುಲಪತಿಗಳು ಹಾಗೂ ಇತರ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವ ಬಗ್ಗೆ ನೇರವಾಗಿ ಮಾತನಾಡಬಲ್ಲ ಬಸವರಾಜ ರಾಯರೆಡ್ಡಿಯವರಂಥ ಉನ್ನತ ಶಿಕ್ಷಣ ಸಚಿವರೊಬ್ಬರು ನಮಗೆ ಇದ್ದಾರೆನ್ನುವುದು ನಮ್ಮ ಅದೃಷ್ಟವೆಂದೇ ಹೇಳಬೇಕು.

ರಾಯರೆಡ್ಡಿಯವರು ನಮ್ಮ ವಿವಿಗಳಲ್ಲಿ ತಾಂಡವವಾಡುತ್ತಿರುವ ಜಾತೀಯತೆಯ ಬಗೆಗೂ ದನಿಯೆತ್ತಬೇಕಾಗಿದೆ. ಇದೆಲ್ಲಕ್ಕೆ ಮೂಲ ಕಾರಣವೆಂದರೆ, ಕುಲಪತಿಗಳನ್ನು ಜಾತಿಯ ಆಧಾರದಲ್ಲಿ ನೇಮಿಸಲಾಗುತ್ತಿರುವುದು. ಕುಲಪತಿಗಳ ಆಯ್ಕೆಗೆ ಮುನ್ನ
ಕುಲಾಧಿಪತಿಗಳು (ರಾಜ್ಯಪಾಲರು) ಶೋಧ ಸಮಿತಿಗಳನ್ನು ರೂಪಿಸುವುದೇ ಮುಂತಾದ ನೇಮಕಾತಿ ಪೂರ್ವ ಪ್ರಕ್ರಿಯೆಗಳೆಲ್ಲ ಕೇವಲ ಕಣ್ಣೊರೆಸುವ ತಂತ್ರಗಳು ಎಂಬಂತಾಗಿದೆ.

ಬನಾರಸ್‌ ವಿವಿ ಅಥವಾ ಅಲಿಗಢ ವಿವಿ ಜಾತ್ಯತೀತವೇ ಆಗಿರಲಿ ಅಥವಾ ಇಲ್ಲದಿರಲಿ, ಅವು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನೀಡಿರುವ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ಎರಡೂ ವಿವಿಗಳನ್ನು ಅಸ್ತಿತ್ವಕ್ಕೆ ತಂದವರು ದೇಶದಲ್ಲಿದ್ದ ಮಹಾರಾಜರು, ಜಮೀನಾªರರು ಹಾಗೂ ಶ್ರೀಮಂತ ಕುಳಗಳು. ವಿವಿಗಳಿಗೆ ಹಣ ಪೂರೈಸಲೆಂದೇ ಸ್ಥಾಪಿಸಲ್ಪಟ್ಟ ಸಂಸ್ಥೆಯಾದ ಯುಜಿಸಿ ಜನ್ಮ ತಳೆಯುವುದಕ್ಕೂ ಮುನ್ನವೇ ಈ ವಿವಿಗಳು ಪ್ರತಿಷ್ಠಿತ ಸ್ಥಾನ ಪಡೆದಿದ್ದವು. ಉದಾಹರಣೆಗೆ, ಬನಾರಸ್‌ ವಿವಿ, ದೇಶದಲ್ಲಿ ಐಐಟಿಗಳು ಸ್ಥಾಪನೆಗೊಳ್ಳುವ ಎಷ್ಟೋ ಮೊದಲೇ ತಾಂತ್ರಿಕ ಶಿಕ್ಷಣದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣದ ಒದಗಣೆಗೆ ಹೆಸರಾಗಿತ್ತು. ವಿಜ್ಞಾನ ಅಥವಾ ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಲೆಂದೇ ಕರ್ನಾಟಕದ ಅನೇಕ ಯುವ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಬನಾರಸ್‌ ವಿವಿಗೆ ಸೇರ್ಪಡೆಗೊಳ್ಳುತ್ತಿದ್ದರು. ಕಾಶಿ (ವಾರಣಾಸಿ) ಕ್ಷೇತ್ರ ದೇಶದ ಎಲ್ಲ ಹಿಂದೂ ಯಾತ್ರಿಕರನ್ನೂ ಆಕರ್ಷಿಸುವ ತಾಣವಾಗಿದ್ದರೆ, ಬನಾರಸ್‌ ಹಿಂದೂ ವಿವಿ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದ ಪ್ರತಿಷ್ಠಿತ ಶೈಕ್ಷಣಿಕ ಕೇಂದ್ರವಾಗಿತ್ತು.

ಉಪನಾಮ ಕೈಬಿಟ್ಟಿದ್ದ ಅಯ್ಯಂಗಾರ್‌ಗಳು
ಹಳೆ ಮೈಸೂರನಲ್ಲಿ ಪ್ರಮುಖ ರಾಜಕಾರಣಿಗಳು, ಅದ ರಲ್ಲೂ ವಿಶೇಷವಾಗಿ ಬ್ರಾಹ್ಮಣ ರಾಜಕಾರಣಿಗಳು ತಮ್ಮ ಜಾತಿ ಅಥವಾ ಉಪಜಾತಿ ಸೂಚಿಸುವ ಉಪನಾಮಗಳನ್ನು ಕೈಬಿಟ್ಟ ಉದಾಹರಣೆಗಳಿವೆ. ಕೆ.ಟಿ. ಭಾಷ್ಯಂ, ಎ.ಆರ್‌. ಬದರೀ ನಾರಾಯಣ್‌ ಹಾಗೂ ಬೆಂಗಳೂರಿನ ಎರಡನೆಯ ಮೇಯರ್‌ ಎನ್‌. ಕೇಶವ ಮುಂತಾದ ರಾಜಕೀಯ ಮುಖಂಡರು ತಮ್ಮ ಹೆಸರಿನ ಜತೆಗಿದ್ದ “ಅಯ್ಯಂಗಾರ್‌’ ಎಂಬ ಪದವನ್ನು ಕೈಬಿಟ್ಟಿದ್ದರು. ಕೇಶವ ಅವರಂತೂ ಆ ಕಾಲದ ಹೊಟೇಲುಗಳ ಹೆಸರಿನ ಫ‌ಲಕದಲ್ಲಿದ್ದ ಜಾತಿ ಸೂಚಕ ಪದಗಳನ್ನು ತೆಗೆದುಹಾಕುವಂತೆ ಹೊಟೇಲುಗಳ ಮಾಲಕರುಗಳ ಮನವೊಲಿಸಿದ್ದರು. ಇದರ ಫ‌ಲವಾಗಿ, ಅನೇಕ “ಬ್ರಾಹ್ಮಣ ಊಟದ ಹೊಟೇಲ್‌’ಗಳು ಜಾತ್ಯತೀತ  ಚ್‌ಹೊಮ್‌ಗಳಾಗಿ ಪರಿವರ್ತಿತವಾಗಿದ್ದವು.

*ಅರಕೆರೆ ಜಯರಾಮ್‌

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.