ಮೀಸಲಾತಿ: ಪರಿಶಿಷ್ಟೇತರರ ಬಡ್ತಿ ಭಾಗ್ಯಕ್ಕೆ ಕೊಕ್?
Team Udayavani, Jun 27, 2018, 11:07 AM IST
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ 1978ರಿಂದಲೇ ನೀಡುತ್ತ ಬಂದಿರುವ ಬಡ್ತಿಯನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ (ಬಿ.ಕೆ. ಪವಿತ್ರಾ ಪ್ರಕರಣದಲ್ಲಿ) ನೀಡಿರುವ ತೀರ್ಪು ಇದು. ಈ ತೀರ್ಪಿನ ಪರಿಣಾಮವಾಗಿ ಈಗಾಗಲೇ 63 ಸರಕಾರಿ ಇಲಾಖೆಗಳ ಪರಿಶಿಷ್ಟ ಜಾತಿ-ಪಂಗಡಗಳ ಅಭ್ಯರ್ಥಿಗಳಿಗೆ ಹಿಂಬಡ್ತಿ ನೀಡಲಾಗಿದೆ. ಹಿಂಬಡ್ತಿ ಸಿಕ್ಕವರಿಗೆ ಸಹಜವಾಗಿಯೇ ಅಸಂತೋಷವಾಗಿದೆ; ಬಡ್ತಿ ಸಿಕ್ಕವರು ಸಂತೋಷಗೊಂಡಿದ್ದಾರೆ.
ಖಾಸಗಿ ಕ್ಷೇತ್ರ ಹಾಗೂ ಮತ್ತಿತರ ರಂಗಗಳಲ್ಲಿನ ಉದ್ಯೋಗಿಗಳನ್ನು ಭಾರತ ಸರಕಾರದ ಜಂಟಿ ಕಾರ್ಯದರ್ಶಿಗಳ ಮಟ್ಟದ ಕೆಲವು ಹುದ್ದೆಗಳಿಗೆ ಪರೋಕ್ಷ ವಿಧಾನದಿಂದ ಪ್ರವೇಶಗೊಳಿಸುವ ಕೇಂದ್ರ ಸರಕಾರದ ಕ್ರಮ ಕುರಿತಂತೆ ಈಗ ಸಹಜವಾಗಿಯೇ ಚರ್ಚೆ-ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ಗಮನಕ್ಕೆ ಬಾರದಿ ರುವ ಸಂಗತಿಯೊಂದಿದೆ. ಅದೆಂದರೆ, ಒಟ್ಟಾರೆಯಾಗಿ ದೇಶದಲ್ಲಿದ್ದ ಸರಕಾರಿ ಸೇವಾ ಕ್ಷೇತ್ರದ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ಎರಡು ಬೆಳವಣಿಗೆಗಳು ಈ ತಿಂಗಳಲ್ಲಿ ಘಟಿಸಿವೆ. ಇವುಗಳಲ್ಲಿ ಎರಡನೆಯ ಬೆಳವಣಿಗೆ ಹಿಂದುಳಿದ ವರ್ಗಗಳಿಗೆ (ದಮನಿತ/ದಲಿತ ವರ್ಗಗಳೆಂದು ಈ ಹಿಂದೆ ಇವುಗಳನ್ನು ಕರೆಯುತ್ತಿದ್ದರು) ಮೀಸಲಾತಿ ಕಲ್ಪಿಸುವಲ್ಲಿ ಅಗ್ರಗಾಮಿಯೆನಿಸಿರುವ ಕರ್ನಾಟಕಕ್ಕೆ ಸಂಬಂಧಪಟ್ಟಿದೆ.
ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಕರ್ನಾಟಕ ಸರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಏನೇನೂ ಮನಸ್ಸಿಲ್ಲದೆ ಜಾರಿಗೊಳಿಸಿರುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ 1978ರಿಂದಲೇ ನೀಡುತ್ತ ಬಂದಿರುವ ಬಡ್ತಿಯನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾ
ಲಯ (ಬಿ.ಕೆ. ಪವಿತ್ರಾ ಪ್ರಕರಣದಲ್ಲಿ) ನೀಡಿರುವ ತೀರ್ಪು ಇದು. ಈ ತೀರ್ಪಿನ ಪರಿಣಾಮವಾಗಿ ಈಗಾಗಲೇ 63 ಸರಕಾರಿ ಇಲಾಖೆ ಗಳ ಪರಿಶಿಷ್ಟ ಜಾತಿ-ಪಂಗಡಗಳ ಅಭ್ಯರ್ಥಿಗಳಿಗೆ ಹಿಂಬಡ್ತಿ ನೀಡಲಾಗಿದೆ. ಹಾಗೆಯೇ ಪರಿಶಿಷ್ಠೆàತರ ವರ್ಗಗಳ ಅಭ್ಯರ್ಥಿ
ಗಳಿಗೆ (ಈ ಮುಂಚೆ ನಿರಾಕರಿಸಲಾಗಿದ್ದ) ಬಡ್ತಿಯನ್ನು ನೀಡಲಾ
ಗಿದೆ. ಈ ತೀರ್ಪಿನ ಅನುಷ್ಠಾನ ಸರಕಾರಿ ಹುದ್ದೆಗಳಿಗೆ ಸಂಬಂಧಿ ಸಿದಂತೆ ವ್ಯಾಪಕವಾದ ಕೋಲಾಹಲ ಹಾಗೂ “ಎದೆಯುರಿ’ಗೂ ಕಾರಣವಾಗಿರುವುದು ಸುಳ್ಳಲ್ಲ. ಹಿಂಬಡ್ತಿ ಸಿಕ್ಕವರಿಗೆ ಸಹಜ ವಾಗಿಯೇ ಅಸಂತೋಷವಾಗಿದೆ; ಬಡ್ತಿ ಸಿಕ್ಕವರು ಸಂತೋಷ ಗೊಂಡಿದ್ದಾರೆ. ಬಡ್ತಿ ಸಿಕ್ಕವರ ಸಂತೋಷ ಅಲ್ಪಾಯುಷಿಯೇ ಎಂಬುದು ಈಗ ಹುಟ್ಟಿಕೊಂಡಿರುವ ಪ್ರಶ್ನೆ.
ಪರಿಶಿಷ್ಟ ಜಾತಿ-ವರ್ಗಗಳ ಉದ್ಯೋಗಿಗಳಿಗೆ ಬಡ್ತಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಸರಕಾರ ಕಾನೂನು ರೀತ್ಯಾಗಿ ಮುಂದುವರಿಯಲಿ ಎಂದು ಈ ತಿಂಗಳ ಆರಂಭದಲ್ಲೇ
ಸರ್ವೋಚ್ಚ ನ್ಯಾಯಾಲಯ (ನ್ಯಾ| ಎ.ಕೆ. ಗೋಯೆಲ್ ಹಾಗೂ ನ್ಯಾ| ಅಶೋಕ್ ಭೂಷಣ್ ಇವರನ್ನೊಳಗೊಂಡ ಪೀಠ) ಆದೇಶಿ ಸಿದೆ. 1997ರಿಂದಾಚೆಗಿನ ವರ್ಷಗಳಲ್ಲಿ ಪರಿಶಿಷ್ಟ ಉದ್ಯೋಗಿ
ಗಳಿಗೆ ಜಾರಿಗೊಳಿಸಲಾಗಿದ್ದ ಬಡ್ತಿ ಕ್ರಮವನ್ನು ರದ್ದುಗೊಳಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸ
ಲಾಗಿದ್ದ ದೂರನ್ನು ಆಲಿಸಿ ಸವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ. ನರೇಂದ್ರ ಮೋದಿ ಸರಕಾರ ದಿಲ್ಲಿ ಉಚ್ಚ ನ್ಯಾಯಾಲ
ಯದ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿನ “ಕಾನೂನು ರೀತ್ಯಾ’ ಎಂಬ ಮಾತು 2006ರ ಎಂ. ನಾಗರಾಜ್ ಹಾಗೂ ಕರ್ನಾಟಕ ಸರಕಾರದ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನೊಂದಿಗೆ ಸಂಬಂಧ ಹೊಂದಿದೆ. ಈ ತೀರ್ಪಿನಲ್ಲಿ ಪರಿಶಿಷ್ಟ ಉದ್ಯೋಗಿಗಳಿಗೆ ಕೆಲ ಷರತ್ತುಗಳಿ ಗನುಗುಣವಾಗಿ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಕ್ರಮವನ್ನು ಎತ್ತಿಹಿಡಿಯಲಾಗಿತ್ತು. ಇಂಥ ವರ್ಗಗಳಿಗೆ ಸರಕಾರಿ ಸೇವೆಯಲ್ಲಿ ಸಾಕಷ್ಟು ಪ್ರಮಾಣದ ಪ್ರಾತಿನಿಧ್ಯ ಸಿಕ್ಕಿಲ್ಲವೆಂದಾದರೆ ಇಂಥ ಮೀಸಲಾತಿ ಕ್ರಮವನ್ನು ಜಾರಿಗೊಳಿಸಬಹುದೆಂದು ನ್ಯಾಯಾ
ಲಯ ಅಭಿಪ್ರಾಯಪಟ್ಟಿತ್ತು. ಆದರೆ ಇಂಥ ಮೀಸಲಾತಿ ಕ್ರಮ ಸೇವಾ ಹುದ್ದೆಗಳಿಗೆ ಸಂಬಂಧಿಸಿದ ನಿರ್ವಹಣಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವಂತಿರಬಾರದು ಎಂದೂ ನ್ಯಾಯಾಲಯ ಹೇಳಿತ್ತು. ಆಡಳಿತ ಪ್ರಕ್ರಿಯೆಯ ಸಾಮ
ರ್ಥ್ಯಕ್ಕೆ ಪೋಷಕವಾಗುವ ರೀತಿಯಲ್ಲಿ ಇಂಥ ಹುದ್ದೆಗಳಲ್ಲಿರುವ ಪರಿಶಿಷ್ಟ ಉದ್ಯೋಗಿಗಳ ಹಕ್ಕು ಸಾಧನೆಗಳು ಇರತಕ್ಕದ್ದು ಎಂಬ ಉಲ್ಲೇಖವೂ ಸಂವಿಧಾನದ 335ನೆಯ ವಿಧಿಯಡಿಯಲ್ಲಿರುವು ದನ್ನೂ ಇಲ್ಲಿ ಗಮನಿಸಬೇಕಾಗಿದೆ.
ಸಾಮಾಜಿಕ ನ್ಯಾಯVs ನೈಸರ್ಗಿಕ ನ್ಯಾಯ
ಈ ತಿಂಗಳಲ್ಲಿ ನಡೆದ ಇನ್ನೊಂದು ಬೆಳವಣಿಗೆಯೆಂದರೆ,
ಬಡ್ತಿ ಮೀಸಲಾತಿ ಕ್ರಮದ ಆಧಾರದಲ್ಲಿ ಬಡ್ತಿ ಅವಕಾಶ ಪಡೆದ ಪರಿಶಿಷ್ಟ ಜಾತಿ-ಪಂಗಡದ ಉದ್ಯೋಗಿಗಳಿಗೆ “ಕ್ರಮಾನುಗತ/ಆನುಷಂಗಿಕ ಸೇವಾ ಹಿರಿತನ’ ಒದಗಿಸುವ ಆಶಯದ ಕರ್ನಾ
ಟಕದ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಸ್ತುಮುದ್ರೆ ದೊರಕಿರುವುದು. ಕರ್ನಾಟಕ ವಿಧಾನ ಮಂಡಲ
ಈ ಮಸೂದೆಗೆ ಕಳೆದ ವರ್ಷದ ಫೆಬ್ರವರಿಯಲ್ಲೇ ಅಂಗೀಕಾರ ಸೂಚಿಸಿತ್ತು. ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾ ಲಯದ ತೀರ್ಪನ್ನು ಅಸಿಂಧುಗೊಳಿಸುವ ಉದ್ದೇಶದಿಂದ ಕರ್ನಾಟಕದ ಆಗಿನ ಸಿದ್ದರಾಮಯ್ಯ ಸರಕಾರ 2017ರ ಫೆಬ್ರವರಿಯಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಗೆ ಉಭಯ ಸದನಗಳ ಒಪ್ಪಿಗೆಯನ್ನು ದೊರಕಿಸಿ ಕೊಂಡಿತ್ತು. ಜತೆಗೆ ಸರಕಾರ ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು ಕೂಡ. ಇದಕ್ಕೆ ಮುನ್ನ ಈ ವಿಷಯದಲ್ಲಿ ಅಧ್ಯಾದೇಶ ಹೊರಡಿಸುವ ಸರಕಾರದ ಪ್ರಸ್ತಾವಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಅವರು ಅಸಮ್ಮತಿ ಸೂಚಿಸಿ ದ್ದರು. ಮಸೂದೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕೃತಗೊಂಡ ಬಳಿಕ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತ ದೊರಕಿಸುವುದಕ್ಕಾಗಿ ಅದನ್ನು ಕಾಯ್ದಿರಿಸಿದ್ದರು.
ಕರ್ನಾಟಕದ ಈ ಮಸೂದೆಗೆ ಸಮ್ಮತಿ ನೀಡುವಂತೆ ಕೇಂದ್ರ ಸರಕಾರ ರಾಷ್ಟ್ರಪತಿ ಕೋವಿಂದ್ ಅವರಿಗೆ ಶಿಫಾರಸು ಮಾಡಿ
ದ್ದರೆ ಇದರಲ್ಲಿ ಅಚ್ಚರಿಯೇನಿಲ್ಲ. ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಕಾಯ್ದೆಯಡಿಯಲ್ಲಿ ಇಂಥ ಆರೋಪಿಗಳನ್ನು ವ್ಯವಸ್ಥಿತ ವಿಚಾರಣೆಯಿಲ್ಲದೆ ಸಾರಾಸಗಟಾಗಿ ಬಂಧನಕ್ಕೊಳಪಡಿಸುವುದಕ್ಕೆ ಸಂಬಂಧಿಸಿದ ಸೆಕ್ಷನನ್ನು ರದ್ದುಪಡಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಕೇಂದ್ರ ಸರಕಾರ ದಲಿತ ಸಮುದಾಯದ ಕೆಲ ವರ್ಗಗಳಿಂದ ಭಾರೀ ಟೀಕೆ ಹಾಗೂ ವಿರೋಧ ಎದುರಿಸ ಬೇಕಾಗಿ ಬಂದಿತ್ತು. ದೌರ್ಜನ್ಯ ಕಾಯ್ದೆಯನ್ನು ರದ್ದು ಪಡಿಸಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟನೆ ನೀಡಿದ್ದರೂ ದೇಶದ ವಿವಿಧ ಭಾಗಗಳಲ್ಲಿ ದಲಿತರಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ಈ ಸಂದರ್ಭದಲ್ಲಿ “ಆನುಷಂಗಿಕ ಸೇವಾ ಹಿರಿತನ ಮಸೂದೆ’ಯ ಬಗ್ಗೆ ಹಿಂದಿನ ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಈ ಮಸೂದೆಯ ಮೂಲಕ ಎಸ್‌ಸಿ -ಎಸ್‌ಟಿ ಉದ್ಯೋಗಿಗಳಿಗೆ “ಸಾಮಾಜಿಕ ನ್ಯಾಯ’ ಹಾಗೂ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಸೇರಿರದ ಉದ್ಯೋಗಿಗಳಿಗೆ “ನೈಸರ್ಗಿಕ ನ್ಯಾಯ’ ದೊರಕಿಸಿಕೊಟ್ಟಂತಾಗಿದೆ ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದ್ದರು. ಮೊನ್ನೆಯ ಚುನಾವಣೆಯಲ್ಲಿ ಅವರು ಚಿಕ್ಕ ಮಗಳೂರಿನಿಂದ ಆಯ್ಕೆಯಾಗಿ ಬಂದಿದ್ದಾರೆ.
1978ರಲ್ಲಿ ಕರ್ನಾಟಕದಲ್ಲಿ ಬಡ್ತಿ ಮೀಸಲಾತಿ ಕ್ರಮ ಜಾರಿ ಯಾದಂದಿನಿಂದಲೂ ಪರಿಶಿಷ್ಟೇತರ ಉದ್ಯೋಗಿಗಳು ತಮಗಾ ಗಿರುವ ಬಡ್ತಿ ನಿರಾಕರಣೆಯ ಬಗ್ಗೆ ಹಾಗೂ ಸೇವಾ ಕ್ಷೇತ್ರದಲ್ಲಿ ಸ್ಥಾಗಿತ್ಯ ಕಂಡುಬಂದಿರುವ ಬಗ್ಗೆ ಆಕ್ಷೇಪಿಸುತ್ತಲೇ ಬಂದಿದ್ದಾರೆ. ಇಂಥ ಬಡ್ತಿ ನೀತಿಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿರುವ ಅರ್ಜಿಗಳ ಪೈಕಿ ಹೆಚ್ಚಿನವು ಕರ್ನಾಟಕದವೇ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಕೇಂದ್ರದಲ್ಲೇ ಆಗಲಿ ರಾಜ್ಯ
ಗಳಲ್ಲೇ ಆಗಲಿ ಸರಕಾರಿ ಸೇವೆಯೆಂಬುದು ಯುವ ಜನತೆಯ ಪಾಲಿಗೆ ಆಕರ್ಷಕವಾಗಿ ಕಂಡು ಬರುತ್ತಿಲ್ಲ. ಯಾವುದೇ ತೆರನ ಸರಕಾರಿ ಸೇವೆಗಳಾಗಲಿ, ಸಾರ್ವಜನಿಕ ವಲಯದ ಕಂಪೆನಿಗಳ ಅಥವಾ ಕೈಗಾರಿಕಾ ಘಟಕಗಳ ಹುದ್ದೆಗಳಾಗಲಿ, ವಿ.ವಿ.ಗಳಾಗಲಿ ಅಥವಾ ವಿವಿಧ ವಿಜ್ಞಾನ – ತಂತ್ರಜ್ಞಾನ ಸಂಸ್ಥೆಗಳೇ ಆಗಲಿ ಇಂಥ ಕ್ಷೇತ್ರಗಳಲ್ಲಿನ ಹುದ್ದೆಗಳತ್ತ ಧಾವಿಸಿಬರುವ ಯುವ ಅಭ್ಯರ್ಥಿ
ಗಳ ಸಂಖ್ಯೆ ತೀರಾ ಕಡಿಮೆ; ಅಥವಾ ಹಾಗೆ ಆಕರ್ಷಿತರಾಗು
ವವರು ಇಲ್ಲವೇ ಇಲ್ಲ ಎನ್ನಬಹುದು. ಮಂಡಲ್ ಆಯೋಗದ ಶಿಫಾರಿಸಿನ ಕಾರಣದಿಂದಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿ
ಗಳು ಆದ್ಯತೆಯ ಮೇರೆಗೆ ಪ್ರವೇಶ ಮಟ್ಟದಲ್ಲೇ (ಐಎಎಸ್, ಐಪಿಎಸ್ ಸಹಿತ) ಮೀಸಲಾತಿ ಸೌಲಭ್ಯದ ಪ್ರಯೋಜನವನ್ನು ದೊರಕಿಸಿಕೊಂಡಿರುತ್ತಾರೆ. ವಿವಿಧ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುವ ಕ್ರಮ ಸೇವಾ ಯೋಗ್ಯತೆ ಹಾಗೂ ಸಾಮರ್ಥ್ಯದ
ಮೇಲೆ ಪರಿಣಾಮ ಬೀರಿದೆಯೇ ಎನ್ನುವುದು ತೀವ್ರ ಪರ – ವಿರೋಧ ಚರ್ಚೆಗೆ ಅವಕಾಶ ಕಲ್ಪಿಸಿಕೊಡುವಂಥ ಪ್ರಶ್ನೆಯಾಗಿದೆ. ಮೀಸಲಾತಿ ವರ್ಗಗಳ ಅಭ್ಯರ್ಥಿಗಳು ಕೂಡ ಅರ್ಹತೆಯ ಆಧಾರದಲ್ಲೇ ನೇಮಕಗೊಳ್ಳುತ್ತಾರೆ. ಅವರ ನೇಮಕ ಕಾರ್ಯ ಸಾಮರ್ಥ್ಯದ ಮೇಲೆ ಯಾವುದೇ ವಿಷಮ ಪರಿಣಾಮ ಬೀರುವುದಿಲ್ಲ ಎಂಬ ವಾದವೇ ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ ಸೇವಾ ಭದ್ರತೆ ಹಾಗೂ ಉತ್ತಮ ವೇತನ ಶ್ರೇಣಿ
ಇದ್ದರೂ ಅತ್ಯುತ್ತಮ ಪ್ರತಿಭೆಯ ಯುವ ಅಭ್ಯರ್ಥಿಗಳು ನಮ್ಮ ಸರಕಾರಿ ಸೇವೆಗಳತ್ತ ಆಕರ್ಷಿತರಾಗುತ್ತಿಲ್ಲ ಎಂಬ ಭಾವನೆಯೇ ಇಂದು ಸರ್ವತ್ರ ವ್ಯಾಪಿಸಿದೆ.
ನೇಮಕಾತಿ ಮಟ್ಟದಲ್ಲೇ ಅಥವಾ ಸೇವಾ ಪ್ರವೇಶ ಮಟ್ಟದಲ್ಲೇ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ (ಹಿಂದುಳಿದ ವರ್ಗ) ಅಭ್ಯರ್ಥಿ ಗಳಿಗೆ ಮೀಸಲಾತಿ ಕಲ್ಪಿಸಿರುವುದನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಿಲ್ಲವಾದರೂ ಎಸ್‌ಸಿ ಹಾಗೂ ಎಸ್‌ಟಿ ವರ್ಗಗಳಿಗೆ ಬಡ್ತಿ ಹಾಗೂ ಕ್ರಮಾನುಗತ/ಅನುಷಂಗಿಕ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಿರುವುದಕ್ಕೆ ವಿರೋಧವಿದ್ದೇ ಇದೆ. ಇನ್ನೂ ಒಂದು ಮಾತಿದೆ, ಈ ವರ್ಗಗಳ “ಕೆನೆಪದರ’ದಲ್ಲಿರುವವರು ಇನ್ನೂ “ಬಡವ’ರಾಗಿ ಉಳಿದಿಲ್ಲ. ಅಥವಾ ಸಾಮಾಜಿಕವಾಗಿಯಾಗಲಿ, ಶೈಕ್ಷಣಿಕವಾಗಿ ಯಾಗಲಿ ಹಿಂದುಳಿದವರಾಗಿ ಉಳಿದಿಲ್ಲ. ಕೆಲವೊಂದು ವರ್ಗ
ಗಳಿಗೆ ಎಸ್‌ಸಿ ಕೋಟಾದಲ್ಲಿ ಒಳ ಮೀಸಲಾತಿ ಕಲ್ಪಿಸುವ ಬಗೆಗಿನ ನ್ಯಾ| ಎ.ಜೆ. ಸದಾಶಿವ ಆಯೋಗದ ಶಿಫಾರಸಿನ ಆಶಯವಾ
ದರೂ ಏನು? ಕೆಲವು ವರ್ಗಗಳು ಉಳಿದವುಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಮೀಸಲಾತಿಯ ಪ್ರಯೋಜನವನ್ನು ಅನುಭೋ
ಗಿಸಿವೆ ಎಂದು ಸದಾಶಿವ ಆಯೋಗ ತನ್ನ ವರದಿಯಲ್ಲಿ ಬೆಟ್ಟು ಮಾಡಿತ್ತು. 1992ರಲ್ಲಿ (ಇಂದ್ರಾ ಸಾಹಿ ಪ್ರಕರಣದಲ್ಲಿ) ಸರ್ವೋಚ್ಚ ನ್ಯಾಯಾಲಯ ಬಡ್ತಿ ಮೀಸಲಾತಿ ಅನಗತ್ಯವೆಂದು ಅಭಿ ಪ್ರಾಯಪಟ್ಟು ಇದನ್ನು ರದ್ದು ಪಡಿಸಿತ್ತು. ಆದರೆ ಈ ಸೌಲಭ್ಯವನ್ನು ಕೇವಲ ಐದು ವರ್ಷಗಳವರೆಗಷ್ಟೇ ಮುಂದುವರಿಸಬಹುದು ಎಂದು ಕೋರ್ಟ್ ಹೇಳಿತು.
ಹೇಳಲೇಬೇಕಾದ ಮಾತೊಂದಿದೆ, ಅದೆಂದರೆ ಬಡ್ತಿ
ಮೀಸಲಾತಿ ಯಿಂದ ಪ್ರಯೋಜನ ಪಡೆದ ಎಸ್‌ಸಿ -ಎಸ್‌ಟಿ ಉದ್ಯೋಗಿಗಳಿಗೆ ಅನುಕ್ರಮಿತ/ಅನುಷಂಗಿಕ ಸೇವಾ ಹಿರಿತನದ ಸೌಲಭ್ಯ ಒದಗಿಸುವ ಆಶಯದ 85ನೆಯ ಸಂವಿಧಾನ
ತಿದ್ದುಪಡಿಗೆ ಕಾರಣ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2000ನೇ ಇಸವಿಯಲ್ಲಿ ಇದಕ್ಕೆ ಮುನ್ನ 1995ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಈ ಎರಡು ಸಮುದಾಯಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಉದ್ದೇಶ ದಿಂದ 77ನೇ ಸಂವಿಧಾನ ತಿದ್ದುಪಡಿಯನ್ನು ಮಾಡಿಕೊಂಡು ನಿಯಮಗಳನ್ನು ಜಾರಿ ಗೊಳಿಸಿತು. ಈ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ 16(4ಎ) ವಿಧಿಯನ್ನು ಸೇರ್ಪಡೆಗೊಳಿಸಲಾಗಿತ್ತು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಡ್ತಿ ಪಡೆದಿರುವ ಸಾವಿರಾರು ಪರಿಶಿಷ್ಟೇತರ ಅಭ್ಯರ್ಥಿಗಳ ಕತೆಯೇನು? ಇದೇ
ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಸಂಗತಿ. ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ದೀರ್ಘ ಕಾಲ ಹೋರಾಟ ನಡೆಸಿದ ಬಳಿಕ ಪರಿಶಿಷ್ಟೇತರರಿಗೆ
ದಕ್ಕಿದ್ದ ಭಾಗ್ಯವನ್ನು ಈಗ ಪಟ್ಟಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ಅವರಿಂದ ದೋಚಿಕೊಳ್ಳುವುದೆ?
n ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.