ಪ್ರತಿಮೆ ಕೆಡವಿದ ಘಟನೆ: ಯಾಕಿಷ್ಟು ಪ್ರತಿಭಟನೆ?
Team Udayavani, Mar 14, 2018, 7:55 AM IST
ವಾಸ್ತವವಾಗಿ ಕಾನ್ಸಂಟ್ರೇಶನ್ ಕ್ಯಾಂಪ್‌ಗ್ಳಿಗೆ ಓನಾಮ ಹಾಕಿದಾತ ಅಡಾಲ್ಫ್ ಹಿಟ್ಲರ್ ಅಲ್ಲ, ಲೆನಿನ್! ಝಾರ್ ನಿಕೊಲಸ್ (ದ್ವಿತೀಯ), ಆತನ ಮಹಾರಾಣಿ ಅಲೆಗಾಡ್ರಿನಾ ಹಾಗೂ ಅವರ ಐವರು ಮಕ್ಕಳ ಹತ್ಯೆಗೂ ಲೆನಿನ್ ಅವರೇ ಕಾರಣ ಎಂಬುದು ಇನ್ನೊಂದು ತೀವ್ರ ಆಕ್ಷೇಪ.
ತ್ರಿಪುರದ ದೂರಗಮ್ಯ ಪಟ್ಟಣವೊಂದರಲ್ಲಿ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಇಲಿÂಚ್ ಲೆನಿನ್ ಪ್ರತಿಮೆಯನ್ನು ಕೆಡವಿ ಹಾಕಲಾದ ಘಟನೆಗೆ ಇಷ್ಟೊಂದು ಪ್ರತಿಭಟನೆ ಯಾಕೆಂದೇ ಅರ್ಥವಾಗುತ್ತಿಲ್ಲ. ನಮ್ಮದು ನಿಜಕ್ಕೂ ವಿಚಿತ್ರವಾದ ದೇಶ! ತನ್ನ ಸ್ವಂತ ದೇಶವಾದ ರಷ್ಯಾ (ಭೂತಪೂರ್ವ ಸೋವಿಯತ್ ಒಕ್ಕೂಟ)ದಲ್ಲೇ ವಿಸ್ಮತಿಗೆ ಸರಿದಿರುವ ಲೆನಿನ್ ಎಂಬ ನಾಯಕನನ್ನು ಭಾರತದಲ್ಲಿ ಇನ್ನೂ ಒಬ್ಬ ದೇವತೆಯೆಂಬಂತೆ ಆರಾಧಿಸಲಾಗುತ್ತಿದೆ.
ಲೆನಿನ್ (1870-1924) ಅವರನ್ನು ಕುರಿತು ಸಾಕಷ್ಟು ಓದಿಕೊಂಡಿರುವ ನಾನು ಸ್ಪಷ್ಟವಾಗಿ ಹೇಳಬಲ್ಲೆ – 1917ರಲ್ಲಿ ನಿಧನ ಹೊಂದಿದ ಈ ಕಮ್ಯುನಿಸ್ಟ್ ನಾಯಕ ಸೋವಿಯತ್ ಒಕ್ಕೂಟದ ಮುಖ್ಯಸ್ಥನಾಗಿ ಅಲ್ಪ ಅವಧಿಯವರೆಗೆ ಹುದ್ದೆಯಲ್ಲಿದ್ದವರು; ಖುದ್ದು ಆತನಿಗೇ ವ್ಯಕ್ತಿಪೂಜೆ ಇಷ್ಟವಿರಲಿಲ್ಲ. ಲೆನಿನ್ ಪತ್ನಿ ನಾದೆಜಾ ಕ್ರುಪ್‌ಸ್ಕಾಯಾ ಮೃತ ಪತಿಯ ದೇಹವನ್ನು ಸುವಾಸಿತ ಲೇಪನ ಮೂಲಕ ರಕ್ಷಿಸಿಡುವ ಪ್ರಯತ್ನವನ್ನು ವಿರೋಧಿಸಿದ್ದರು; ಶವವನ್ನು ವಿಧ್ಯುಕ್ತವಾಗಿ ದಫನ ಮಾಡಬೇಕೆಂದೇ ಬಯಸಿದ್ದರು. ಕಮ್ಯುನಿಸಂ ಯುಗದ ಬಳಿಕ ಬಂದ ರಷ್ಯಾದ ನಾಯಕರು ಲೆನಿನ್‌ಗಾಗಿ ನಿರ್ಮಿಸಲಾದ ಸಮಾಧಿ ಕಟ್ಟಡದಿಂದ ಆತನ ಕಳೇಬರವನ್ನು ತೆಗೆಸಿಹಾಕುವ ಕೆಲಸಕ್ಕೆ ಮುಂದಾಗಲಿಲ್ಲ. 1960ರಲ್ಲಿ ಸ್ಟಾಲಿನ್ ಯುಗದ ನೆನಪನ್ನು ನಿರ್ನಾಮ ಮಾಡುವ ಅಭಿಯಾನದ ಅಂಗವಾಗಿ ಲೆನಿನ್ ಉತ್ತರಾಧಿಕಾರಿಯಾಗಿದ್ದ ಜೋಸೆಫ್ ಸ್ಟಾಲಿನ್ ಅವರ ಸುಗಂಧ ಲೇಪಿತ ಶವವನ್ನು ಮಾತ್ರ ಹೂಳಲಾಗಿತ್ತು. ಈ ಅಭಿಯಾನದ ಮುಂಚೂಣಿಯಲ್ಲಿದ್ದವರು ನಿಕಿಟ ಕ್ರುಶ್ಚೇವ್ ಅವರು.
ನಮ್ಮ ಸಿದ್ಧಾಂತ ನಿಷ್ಠ ವಾಮಪಂಥೀಯ ಹಾಗೂ ಸೋಗಲಾಡಿ ವಾಮಪಂಥೀಯ ಕಾಮ್ರೇಡ್‌ಗಳು ವ್ಲಾದಿಮಿರ್ ಲೆನಿನ್ ಅವರನ್ನು ಆರಾಧಿಸುವಲ್ಲಿ ತೋರುತ್ತಿರುವ “ಧಾರ್ಮಿಕ’ ಮನೋಭಾವಕ್ಕೂ ಮಹಾತ್ಮಾ ಗಾಂಧಿಯವರು ಅಲಿ ಸಹೋದರರೊಂದಿಗೆ ಸೇರಿಕೊಂಡು ಆರಂಭಿಸಿದ್ದ ಖೀಲಾಫತ್ ಚಳವಳಿಯ ಹಿಂದಿನ ಮನೋಭಾವಕ್ಕೂ ಸ್ವಲ್ಪ ಮಟ್ಟಿನ ಸಾಮ್ಯವಿದೆ. ಗಾಂಧೀಜಿ ಖೀಲಾಫತ್ ಚಳವಳಿಯನ್ನು ಆರಂಭಿಸಿದ್ದು ಹಿಂದೂ-ಮುಸ್ಲಿಂ ಏಕತೆಯ ಉದ್ದೇಶದಿಂದ.
ಕೊನೆಯ ಖಲೀಫರಾಗಿದ್ದ ದ್ವಿತೀಯ ಅಬ್ದುಲ್ ಮಸಿದ್ ಅವರನ್ನು ಬ್ರಿಟಿಷರು ಹಾಗೂ ತುರ್ಕಿಗಳು ಇಸ್ಲಾಮೀ ಜಗತ್ತಿನ ಮುಖ್ಯಸ್ಥನನ್ನಾಗಿ ಮರು ನೇಮಿಸಬೇಕೆಂಬುದು ಗಾಂಧೀಜಿಯ ಬಯಕೆಯಾಗಿತ್ತು. ಓಟೋಮನ್ ಟರ್ಕಿಯು ತನ್ನ ಮಿತ್ರ ರಾಷ್ಟ್ರಗಳಾದ ಕೈಸರ್‌ನ ಜರ್ಮನಿ ಹಾಗೂ ಆಸ್ಟ್ರಿಯಾ ಯುದ್ಧದಲ್ಲಿ ಹೋರಾಟ ನೀಡಿತ್ತು. ಕೋಮುವಾದಿ ಅಲಿ ಸಹೋದರರಾದ ಮಹಮದ್ ಅಲಿ ಹಾಗೂ ಶೌಕತ್ ಅಲಿ ಇವರುಗಳು ಗಾಂಧೀಜಿಯವರನ್ನು ಅಕ್ಷರಶಃ ಹಾದಿ ತಪ್ಪಿಸಿದ್ದರು. ತುರ್ಕಿಗಳು ಖಲೀಫರ ಆಡಳಿತ ಬಯಸುತ್ತಿದ್ದಾರೆಂದು ಗಾಂಧೀಜಿ ನಂಬುವಂತೆ ಮಾಡಿದ್ದರು. ಏತನ್ಮಧ್ಯೆ ಮುಸ್ತಾಫಾ ಕೇಮಲ್ ಅತಾತುರ್ಕ್ ಟರ್ಕಿಯ ಅಧಿಕಾರವನ್ನು ವಶಪಡಿಸಿಕೊಂಡು ಖಲೀಫಾ ಆಡಳಿತವನ್ನು ರದ್ದುಪಡಿಸಿ ದೇಶದಲ್ಲಿ ಆಧುನೀಕರಣ ಪ್ರಕ್ರಿಯೆಯ ಅಳವಡಿಕೆಗೆ ಜಾತ್ಯತೀತ ನಿಲುವಿನ ಅನುಷ್ಠಾನಕ್ಕೆ ತಕ್ಕ ಕ್ರಮ ಕೈಗೊಂಡರು. ಇದರೊಂದಿಗೆ ಖೀಲಾಫತ್ ಚಳವಳಿ ತನ್ನ ಕಾವನ್ನು ಕಳೆದುಕೊಂಡಿತು.
ಲೆನಿನ್ ಅವರ ಪ್ರತಿಮೆಯನ್ನು ಕೆಡವಲಾದ ಘಟನೆಗೆ ಸಂಬಂಧಿಸಿದಂತೆ ಇದೆಂಥ ಪತನ ಎಂದು ಅಚ್ಚರಿಪಡುವಂತಾಗುತ್ತದೆ. 1950ರ ದಶಕದ ಆದಿಭಾಗದಲ್ಲಿ ಲೆನಿನ್ ಅಲ್ಲವಾದರೂ ಸ್ಟಾಲಿನ್ ಅವರು ನಮ್ಮ ದೇಶದಲ್ಲೊಬ್ಬ ಹೀರೋ ಆಗಿದ್ದರು. ಮೈಸೂರು ವಿವಿ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಾಲಿನ್ ಕುರಿತ ಪುಸ್ತಕವೊಂದನ್ನು ಪಠ್ಯವೆಂದು ನಿಗದಿ ಪಡಿಸಲಾಗಿತ್ತು.
ರಷ್ಯಾ ವಸ್ತುತಃ ಲೆನಿನ್ ಹಾಗೂ ಸ್ಟಾಲಿನ್ ಅವರನ್ನು ಬಹಿರಂಗವಾಗಿ ಖಂಡಿಸುವ ಕೆಲಸಕ್ಕೆ ಅಧಿಕೃತ ಮುದ್ರೆಯೊತ್ತಿದ್ದು 2017ರ ಅಕ್ಟೋಬರ್ 30ರಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾಸ್ಕೋದಲ್ಲಿ ದುಃಖದ ಗೋಡೆ(ವಾಲ್ ಆಫ್ ಗ್ರಿಫ್)ಯನ್ನು ಅನಾವರಣಗೊಳಿಸುವುದರೊಂದಿಗೆ ಸೋವಿಯತ್ ಆಡಳಿತ ಕಾಲದಲ್ಲಿ ನಡೆದ ಅಪರಾಧಗಳನ್ನು ಅಧಿಕೃತವಾಗಿ “ಗುರುತಿಸುವ’ ಮೂಲಕ ರಷ್ಯಾದಲ್ಲಿ ಬಹುತೇಕ ನಗರಗಳ ಹಳೆ ಹೆಸರುಗಳನ್ನು ಮತ್ತೆ ಊರ್ಜಿತಕ್ಕೆ ತರಲಾಗಿದೆ. ಲೆನಿನ್ ಗ್ರಾಡ್‌ನ ಹೆಸರನ್ನು ರದ್ದು ಪಡಿಸಿ ಝಾರ್‌ಗಳ ಆಡಳಿತಾವಧಿಯಲ್ಲಿದ್ದಂತೆ ಸೈಂಟ್ ಪೀಟರ್ ಬರ್ಗ್ ಎಂದು ಪುನರ್‌ನಾಮಕರಣ ಮಾಡಲಾಗಿದೆ. ಲೆನಿನ್, ಸ್ಟಾಲಿನ್ ಹಾಗೂ ಸೋವಿಯತ್ ಕಾಲದ ಇತರ ನಾಯಕರುಗಳ ನೂರಾರು ಪ್ರತಿಮೆಗಳನ್ನು ಕೆಡವಿ ಹಾಕಲಾಗಿದೆ. ಈಗ ಸ್ವತಂತ್ರ ರಾಷ್ಟ್ರವಾಗಿರುವ ಉಕ್ರೇನ್ ಈ ಅಭಿಯಾನದ ಮುಂಚೂಣಿ ಯಲ್ಲಿದೆ. 1920ರ ಮೊದಲ ವರ್ಷಗಳಲ್ಲಿ ಲಕ್ಷಗಟ್ಟಲೆ ಜನರ ಸಾವಿಗೀಡಾದ ಕೃತಕ ಬರಗಾಲಕ್ಕೆ ಕಾರಣ ಲೆನಿನ್ ಎಂಬುದು ಉಕ್ರೇನಿಯನ್ನರ ಪ್ರಬಲ ಆಕ್ಷೇಪ. ಉಕ್ರೇನ್, ಸೋವಿಯತ್ ಒಕ್ಕೂಟದ ಪಾಲಿಗೆ ಸಮೃದ್ಧ ಆಹಾರ ಧಾನ್ಯಗಳ ಕಣಜವೇ ಆಗಿತ್ತು.
ತ್ರಿಪುರದ ಬೆಲೋನಿಯಾ ಪಟ್ಟಣದಲ್ಲಿ ಲೆನಿನ್ ವಿಗ್ರಹವನ್ನು ಕೆಡವಿ ಹಾಕಿದ ಜನರನ್ನು ನಾನಿಲ್ಲಿ ಸಮರ್ಥಿಸುತ್ತಿಲ್ಲ. ಈ ರಾಜ್ಯದಲ್ಲಿ ಬಿಜೆಪಿಯ ದಿಗ್ವಿಜಯವನ್ನು ಆಚರಿಸಲು ಹೊರಟ ಈ ಮಂದಿ ಸಂತೋಷದ ಭರದಲ್ಲಿ ಈ ಅತಿರೇಕದ ಕೃತ್ಯವನ್ನು ಎಸಗಿದ್ದಾರೆ.
ಹೊಸ ಸರಕಾರ ಲೆನಿನ್‌ರಂಥ ವಿದೇಶಿ ನಾಯಕರ ಪ್ರತಿಮೆಯ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ತನಕ ಇವರುಗಳು ಕಾಯಬಹುದಿತ್ತು. ಇಂಥ ಕೃತ್ಯಕ್ಕೆ ಪೂರ್ವೋದಾಹರಣೆ ಇಲ್ಲದಿಲ್ಲ. ಈ ಹಿಂದೆ ದೇಶದಲ್ಲಿದ್ದ ಬ್ರಿಟಿಷರ ಪ್ರತಿಮೆಗಳನ್ನು ಹೀಗೆಯೇ ಕೆಡವಿ ಹಾಕಿದ್ದುಂಟು. ವಿಕ್ಟೋರಿಯಾ ರಾಣಿ ಹಾಗೂ ಏಳನೆಯ ಎಡ್ವರ್ಡ್ ದೊರೆಯ ಪ್ರತಿಮೆಗಳು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಇನ್ನೂ ಜನಮನವನ್ನು ಆಕರ್ಷಿಸುತ್ತಿ ವೆಯೆಂದಾದರೆ ಇದು ಅವುಗಳ ಶಿಲ್ಪ ಸೌಂದರ್ಯಕ್ಕೆ ಸಂದ ಮರ್ಯಾದೆ. ವಿಧಾನಸೌಧದ ಎದುರುಗಡೆ ಇರುವ ಜವಾಹರಲಾಲ ನೆಹರೂ ಸಹಿತ ಅನೇಕರ ಪ್ರತಿಮೆಗಳು ನೋಡಿದವರ ಕಣ್ಣಲ್ಲಿ ವಿಷಾದ ಮೂಡಿಸುವಷ್ಟು ಕಳಪೆ ಕಸುಬುಗಾರಿಕೆಯ ಶಿಲ್ಪಗಳಾಗಿ ಉಳಿದುಕೊಂಡಿವೆ. ಇದೀಗ ಚೆನ್ನೈಯಲ್ಲಿ ಸ್ಥಾಪಿಸಲಾಗಿರುವ ಜಯಲಲಿತಾ ಅವರ ಪ್ರತಿಮೆ ಕೂಡ ತುಂಬಾ ಕಳಪೆಯಾಗಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಲೆನಿನ್ ಕೂಡ ಬ್ರಿಟಿಷ್ ಆಡಳಿತಗಾರರಂತೆಯೇ ಓರ್ವ ವಿದೇಶಿ ವ್ಯಕ್ತಿ.
ಇದೀಗ ಕೇಳಲೇಬೇಕಾದ ಪ್ರಶ್ನೆಯೊಂದಿದೆ. ರಷ್ಯಾದಲ್ಲಾಗಲಿ, ಭೂತಪೂರ್ವ ಸೋವಿಯತ್ ಒಕ್ಕೂಟದ ರೂಪಗಳಲ್ಲಾಗಲಿ ಗಾಂಧೀಜಿಯವರ ಅಥವಾ ಇತರ ಭಾರತೀಯ ನೇತಾರರ ಎಷ್ಟು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ?
ಆದರೆ ವ್ಲಾದಿಮಿರ್ ಲೆನಿನ್ (ಇವರ ನಿಜ ಉಪನಾಮ ಉಲ್ಯಾನೋವ್/ಉಲ್ಯಾನೊಫ್) ಅವರು ಸೋವಿಯತ್ ನೇತಾರರ ಪೈಕಿ ಅತ್ಯಂತ ಎತ್ತರದ ವಕ್ತಿತ್ವದವರೆಂಬುದನ್ನು ಅಲ್ಲಗಳೆಯುವಂತಿಲ್ಲ. ಕಮ್ಯುನಿಸಂ ಸಿದ್ಧಾಂತದತ್ತ ಹೊರಳುವುದಕ್ಕೆ ಹಾಗೂ ಝಾರ್‌ಗಳ ವಿರುದ್ಧ ಸೆಟೆದು ನಿಲ್ಲುವುದಕ್ಕೆ ಅವರಿಗೆ ಅವರದೇ ಕಾರಣಗಳಿದ್ದವು. ಅವರ ಅಣ್ಣನೊಬ್ಬನಿಗೆ 1887ರಲ್ಲಿ ಝಾರ್ ಸರಕಾರ ಮರಣದಂಡನೆ ನೀಡಿತ್ತು. ಸ್ವತಃ ಲೆನಿನ್ ಅವರು ಜಮೀನಾªರರ (ಸೋವಿಯತ್ ಒಕ್ಕೂಟದಲ್ಲಿ ಇವರನ್ನು ಕುಲಕ್‌ಗಳೆಂದು ಕರೆಯುತ್ತಿದ್ದರು) ಕುಟುಂಬಕ್ಕೆ ಸೇರಿದವರಿದ್ದರು. ಅವರದು ಸರ್ವಾಧಿಕಾರಿ ಪ್ರವೃತ್ತಿ ಎಂಬುದು ಅವರ ಟೀಕಾಕಾರರ ಆಕ್ಷೇಪ; ಅಲ್ಲಿ ನಡೆದ ರಾಜಕೀಯ ದಬ್ಟಾಳಿಕೆ ಹಾಗೂ ಜನರ ಮಾರಣಹೋಮಕ್ಕೆ ಅವರೇ ಕಾರಣ ಎಂಬುದು ಅವರ ಮೇಲಿನ ಪ್ರಬಲ ಆರೋಪ. ತಪ್ಪು ನಡೆಗಳಿಂದ ತತ್ತರಿಸುತ್ತಿದ್ದ ಜ| ಕೆರೆನ್‌ಸ್ಕಿ ನೇತೃತ್ವದ ಸರಕಾರದಿಂದ ಅಧಿಕಾರ ಕಿತ್ತುಕೊಂಡ ಬಳಿಕದ ಮೊದಲ ಕೆಲವು ತಿಂಗಳುಗಳಲ್ಲೇ ಕಮ್ಯುನಿಸ್ಟ್ ಸಿದ್ಧಾಂತಿಗಳ ವಿರೋಧಿಗಳಲ್ಲಿ, ಬುದ್ಧಿಜೀವಿಗಳಲ್ಲಿ, ರಷ್ಯನ್ ರಾಜವಂಶದ ಬೆಂಬಲಿಗರಲ್ಲಿ ಹಾಗೂ ತನ್ನನ್ನು ವಿರೋಧಿಸುತ್ತಿದ್ದ ಎಲ್ಲರಲ್ಲಿ “ಕೆಂಪು ಭಯ’ವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಲಕ್ಷಗಟ್ಟಲೆ ಜನರನ್ನು ಕೊಂದು ಹಾಕಲಾಯಿತು. ಅಥವಾ ಕಾನ್ಸಂಟ್ರೇಶನ್ ಕ್ಯಾಂಪ್‌ಗ್ಳಲ್ಲಿ ಬಂಧಿಗಳನ್ನಾಗಿಸಲಾಯಿತು. ವಾಸ್ತವವಾಗಿ ಕಾನ್ಸಂಟ್ರೇಶನ್ ಕ್ಯಾಂಪ್‌ಗ್ಳಿಗೆ ಓನಾಮ ಹಾಕಿದಾತ ಅಡಾಲ್ಫ್ ಹಿಟ್ಲರ್ ಅಲ್ಲ, ಲೆನಿನ್! ಝಾರ್ ನಿಕೊಲಸ್ (ದ್ವಿತೀಯ), ಆತನ ಮಹಾರಾಣಿ ಅಲೆಗಾÕಂಡ್ರಿನಾ ಹಾಗೂ ಅವರ ಐವರು ಮಕ್ಕಳನ್ನು ಎಕತಿನಾಬರ್ಗ್ ನಲ್ಲಿ 1918ರ ಜುಲೈಯಲ್ಲಿ ಹತ್ಯೆ ಮಾಡಲಾಗಿದ್ದು, ಈ ಪಾಶವಿ ಕೃತ್ಯಕ್ಕೂ ಲೆನಿನ್ ಅವರೇ ಕಾರಣ ಎಂಬುದು ಇನ್ನೊಂದು ತೀವ್ರ ಆಕ್ಷೇಪ. ರಾಜಕುಮಾರಿಯರಲ್ಲಿ ಒಬ್ಬಳಾದ ಅನಾಸ್ತಾಸಿಯಾ ಎಂಬಾಕೆ ಪಾರಾಗಿ, ಎಷ್ಟೋ ವರ್ಷಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದು, ಮುಂದೆ ಅಮೆರಿಕಾದಲ್ಲಿ ಕಾಣಿಸಿಕೊಂಡಳೆಂದೂ ಹೇಳಲಾಗುತ್ತಿದೆ. ಅಜ್ಞಾತಳಾಗಿದ್ದ ಆಕೆಯನ್ನು ಪತ್ತೆ ಮಾಡಿದಾಕೆ, ರೋಮನೋವ್ ಸಾಮ್ರಾಜ್ಯದ ಪತನಕ್ಕೆ ಕಾರಣಕರ್ತನೆನ್ನಲಾಗಿರುವ ರಷ್ಯಾದ “ದಾರ್ಶನಿಕ’ ಗ್ರಿಗೊರಿ ರಾಸ್‌ಪುಟಿನ್‌ನ ಪುತ್ರಿ. ನಿಜಕ್ಕಾದರೆ ಲೆನಿನ್‌ಗಿಂತ ಅವರು ಉತ್ತಾರಾಧಿಕಾರಿ ಸ್ಟಾಲಿನ್ ಅವರೇ ಹೆಚ್ಚು ಟೀಕೆಗೊಳಗಾಗಿರುವವರು. ಸ್ಟಾಲಿನ್ ಆಡಳಿತ ತನ್ನ ಪಾಶವೀಕತೆಗೆ ಕುಪ್ರಸಿದ್ಧವಾಗಿತ್ತು. ಬಲವಂತವಾಗಿ ಕೃಷಿ ಭೂಮಿಯನ್ನು ಸಾಮುದಾಯಿಕ ಜಮೀನಾಗಿ ಪರಿವರ್ತಿಸಿದ್ದರಿಂದ ಸಾವಿರಾರು ಜನಸಾಮಾನ್ಯರು ಸಾವು ಕಂಡರು. 1936-38ರ ಅವಧಿಯಲ್ಲಿ ಸ್ಟಾಲಿನ್ ತನ್ನ ವಿರೋಧಿಗಳ ಹಾಗೂ ಮಾಜಿ ಕಾಮ್ರೇಡ್‌ಗಳ ವಿರುದ್ಧ “ಶುದ್ಧೀಕರಣ ಪ್ರಕ್ರಿಯೆ’ಯನ್ನು ಪ್ರಯೋಗಿಸಿದ್ದಲ್ಲದೆ ದೇಶದ ಹೊರಗಡೆ ಕೂಡ ಲೆನಿನ್‌ರ ಅತ್ಯಂತ ನಿಕಟ ಸಹೋದ್ಯೋಗಿ, ಬುದ್ಧಿಜೀವಿ ಲಿಯೋನಿಡ್ ಟ್ರಾಟ್‌ಸ್ಕಿಯಂಥವರನ್ನು ಬೇಟೆಯಾಡಿದ್ದು ಈಗ ಇತಿಹಾಸ. 1940ರಲ್ಲಿ ಸ್ಟಾಲಿನ್‌ನ ಏಜೆಂಟರು ಟಾಟ್‌ಸ್ಕಿಯನ್ನು ಮೆಕ್ಸಿಕೋದಲ್ಲಿ ಹತ್ಯೆಗೈದರು. ಹಿಟ್ಲರ್‌ನ ಶೈಲಿಯಲ್ಲೆ ಸ್ಟಾಲಿನ್ ಕೂಡ ಅನೇಕ ಹಿರಿಯ ಮಿಲಿಟರಿ ಜನರಲ್‌ಗಳನ್ನು, ವಿಜ್ಞಾನಿಗಳನ್ನು, ಬುದ್ಧಿಜೀವಿಗಳನ್ನು ಹಾಗೂ ಪ್ರೊಫೆಸರ್‌ಗಳನ್ನು ಸಾವಿನ ಮನೆಗೆ ಅಟ್ಟಿದ್ದನ್ನು ಚರಿತ್ರೆ ಕಂಡಿದೆ. ಸ್ಟಾಲಿನ್ ಕೈಗೊಂಡ “ಶುದ್ಧತಾ ಕಾರ್ಯ’ದಲ್ಲಿ 36 ಲಕ್ಷ ರಷ್ಯನರು ಜೀವ ಕಳೆದುಕೊಂಡರೆಂಬುದು ಒಂದು ಅಂದಾಜು. ದುಷ್ಟತನವೆಂಬುದು ಸ್ಟಾಲಿನ್ ವ್ಯಕ್ತಿತ್ವದಲ್ಲಿ ಹಿಟ್ಲರ್‌ಗಿಂತ ಕಡಿಮೆ ಪ್ರಮಾಣದಲ್ಲಿರಲಿಲ್ಲ. ಅನೇಕರಿಗೆ ತಿಳಿದಿರದ ಸಂಗತಿಯೆಂದರೆ ಸ್ಟಾಲಿನ್ ಹಾಗೂ ಹಿಟ್ಲರ್ ಇಬ್ಬರೂ ಒಳ್ಳೆಯ ಮಿತ್ರರಾಗಿದ್ದರು. 1939ರಲ್ಲಿ ಮೊಲೊತೊವ್ – ರಿಬ್ಬನ್ ಟ್ರಾಪ್ ಒಪ್ಪಂದಕ್ಕೆ (ಅನಾಕ್ರಮಣ ಒಪ್ಪಂದ) ಏರ್ಪಡಿಸಿಕೊಂಡಿದ್ದರು. ಆದರೆ ಮುಂದೆ ಹಿಟ್ಲರ್ ಈ ಒಪ್ಪಂದವನ್ನು ಉಲ್ಲಂ ಸಿ ಸೋವಿಯತ್ ಒಕ್ಕೂಟದ ಮೇಲೆ ದಾಳಿ ಮಾಡಿದ್ದ. ನಮ್ಮ ದೇಶದಲ್ಲಿ ಅನೇಕರ ಗಮನಕ್ಕೆ ಬಾರದೆ ಉಳಿದಿರುವ ಸಂಗತಿಯೊಂದಿದೆ. ಅದೆಂದರೆ ಲೆನಿನ್‌ಗೆ ನಿಕಟರಾಗಿದ್ದ, ಚೀನವನ್ನು ಕಮ್ಯುನಿಸಂನತ್ತ ಹೊರಳುವಂತೆ ಮಾಡುವಲ್ಲಿ ತನ್ನ ಪ್ರಭಾವ ಬೀರಿದ್ದ ನಮ್ಮ ಶ್ರೇಷ್ಠ ಕಮ್ಯುನಿಸ್ಟ್ ಸಿದ್ಧಾಂತಿ ಎಂ.ಎನ್. ರಾಯ್ ಅವರನ್ನು ಮುಗಿಸಲು ಮುಂದಾದುದು. ರಾಯ್ ಅವರು ಸಾವಿನ ದವಡೆಯಿಂದ ಪಾರಾಗಿ 1928ರಲ್ಲಿ ಸೋವಿಯತ್ ಒಕ್ಕೂಟದಿಂದ ಪಲಾಯನ ಮಾಡಿದರು. ಮುಂದೆ ರಾಯ್ ಕಮ್ಯುನಿಸಮ್‌ಗೆ ತಿಲಾಂಜಲಿಯಿತ್ತರು; ಕ್ರಾಂತಿಕಾರಿ ಮಾನವತಾವಾದಿ ಚಳವಳಿ (ರ್ಯಾಡಿಕಲ್ ಹ್ಯೂಮನಿಸ್ಟ್ ಮೂವ್‌ಮೆಂಟ್)ಯನ್ನು ಹುಟ್ಟು ಹಾಕಿದರು. ಆದರೆ ಭಾರತದ ಇನ್ನೋರ್ವ ಕಮ್ಯುನಿಸ್ಟ್ ನಾಯಕ (ಸಿಪಿಐನ ಸಹ ಸ್ಥಾಪಕ) ಅಬನಿ ಮುಖರ್ಜಿ (1891-1937) ಅವರು ರಾಯ್ ಅವರಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಪ್ರಾಚೀನ ಭಾರತದ ಚರಿತ್ರೆಯ ವಿದ್ವಾಂಸರೂ, ನಮ್ಮ ಕಮ್ಯುನಿಸ್ಟ್ ಆಂದೋಲನದ ಆದ್ಯ ಪ್ರವರ್ತಕರಲ್ಲೊಬ್ಬರೂ ಆಗಿದ್ದ ಅಬನಿ ಮುಖರ್ಜಿಯವರನ್ನು ಸ್ಟಾಲಿನ್ ಆಡಳಿತ ಯಮಪುರಿಗೆ ಅಟ್ಟಿತು. ಬಹುಶಃ ಪ್ರಕಾಶ್ ಕಾರಟ್ ಹಾಗೂ ಸೀತಾರಾಮ ಯಚೂರಿಯವರಂಥ ಕಮ್ಯುನಿಸ್ಟ್ ನಾಯಕರು ಇದೆಲ್ಲ ತಮಗೆ ಗೊತ್ತೇ ಇಲ್ಲವೇನೋ ಎಂಬಂತಿದ್ದಾರೆ.
ಈ ನಡುವೆ ಕೊಲ್ಕತಾದಲ್ಲಿ ದೇಶಭಕ್ತ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಪ್ರತಿಮೆಯನ್ನು ಅಪವಿತ್ರಗೊಳಿಸಿದ ಘಟನೆ ನಡೆದಿದ್ದು, ನಮ್ಮ ರಾಜಕಾರಣಿಗಳ ಪೈಕಿ ಅನೇಕರು ಏಕೆ ಈ ಮೌನ ತಳೆದಿದ್ದಾರೆಂಬ ಪ್ರಶ್ನೆಯನ್ನಿಲ್ಲಿ ಕೇಳಲೇಬೇಕಾಗಿದೆ. ಅವರು ವಿದೇಶೀ ಪ್ರಜೆಯೇನಲ್ಲ; ಅಥವಾ ಲೆನಿನ್-ಸ್ಟಾಲಿನ್ ಅವರಂತೆ ದುರ್ಮನಸ್ಸಿನ ವ್ಯಕ್ತಿಯೂ ಅಲ್ಲ. ಈ ನಡುವೆ ಇನ್ನೊಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು – ಪಶ್ಚಿಮಬಂಗಾಲದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಅವರು 2001ರಲ್ಲಿ ಏರ್ಪಡಿಸಲಾಗಿದ್ದ ಡಾ| ಮುಖರ್ಜಿಯವರ ಜನ್ಮಶತಮಾನೋತ್ಸವ ಸಮಾರಂಭವನ್ನು ಬಹಿಷ್ಕರಿಸಿದ್ದರು. ಅವರು ಬಾರದಿದ್ದರೂ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಖಂಡ ಬಂಗಾಳದ ಈ ವರಪುತ್ರನ ಬಗೆಗಿನ ತನ್ನ ಸಣ್ಣ ಮನಸ್ಸಿನ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದ ಬಸು ಅವರು, ತಮ್ಮ ನಡುವೆ (ತನ್ನ ಹಾಗೂ ಡಾ| ಮುಖರ್ಜಿ ನಡುವೆ) ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು ಎಂದಿದ್ದರು.
– ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.