ಜೆಎನ್‌ಯು ಎಂಬ ಸಮಸ್ಯೆಯ ಮಗು


Team Udayavani, Jan 10, 2020, 6:10 AM IST

41

ಕರ್ನಾಟಕದಲ್ಲಿ ವಿವಿಗಳು ಜಾತಿ ಮೋಹ, ಕಳಪೆ ಉಪನ್ಯಾಸಕರಿಂದ ಕಳೆಗುಂದಿದರೆ ಜೆಎನ್‌ಯು ಎಡಪಂಥೀಯ ವಾದದತ್ತ ಒಲವು ಹೊಂದಿರುವ ಉಪನ್ಯಾಸಕರು-ವಿದ್ಯಾರ್ಥಿಗಳ ಅತಿಯಾದ ರಾಜಕೀಯ ಚಟುವಟಿಕೆಗಳಿಂದ ಸಮಸ್ಯೆಗೀಡಾಗಿದೆ. ಅಲ್ಲಿನ ಸಮಾಜ ವಿಜ್ಞಾನ ವಿಭಾಗದ ಎಡಪಂಥೀಯ ಉಪನ್ಯಾಸಕರ ದಬ್ಟಾಳಿಕೆ ಎಷ್ಟಿದೆ ಎಂಬುದಕ್ಕೆ ದಿ.ಪ್ರೊ.ಎಂ.ಎಲ್‌. ಸೋಂಧಿ ಎದುರಿಸಿದ ಕಿರುಕುಳವೇ ಸಾಕ್ಷಿ.

ಪ್ರತಿಷ್ಠಿತ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ದಿಲ್ಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆಳುವವರ ಪಾಲಿಗೆ ಎಂದಿಗೂ “ಸಮಸ್ಯೆಯ ಮಗುವಾಗಿ’ ಉಳಿದಿದೆ. 1981ರಲ್ಲಿ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಈ ವಿವಿಯಲ್ಲಿ ನಡೆದ ಭಾರೀ ಹಿಂಸಾಚಾರದ ಕಾರಣ ಅದನ್ನು 45 ದಿನಗಳ ಕಾಲ ಮುಚ್ಚಿದ್ದರು.

ಇಂದಿರಾ ಗಾಂಧಿಯವರೇ 1969ರಲ್ಲಿ ಈ ವಿವಿಯನ್ನು ಸ್ಥಾಪಿಸಿ ಅದಕ್ಕೆ ತನ್ನ ತಂದೆಯ ಹೆಸರಿಟ್ಟಿದ್ದರು. ವಿವಿಯೊಳಗೆ ಒಂದು ವರ್ಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಡೆಸುತ್ತಿದ್ದ ಚಟುವಟಿಕೆಗಳು ಇಂದಿರಾ ಗಾಂಧಿಗೂ ಸಹ್ಯವಾಗಿರಲಿಲ್ಲ. ಕೇಂದ್ರ ಮಾಜಿ ಸಹಾಯಕ ಶಿಕ್ಷಣ ಸಚಿವರಾಗಿದ್ದ ಪ್ರೊ| ನೂರುಲ್‌ ಹಸನ್‌ ಈ ಜೆಎನ್‌ಯು ಸ್ಥಾಪಕ ಎಂಬ ತಪ್ಪು ಭಾವನೆಯಿದೆ. ಇತಿಹಾಸದ ಉಪನ್ಯಾಸಕರಾಗಿದ್ದ ನೂರುಲ್‌ ಹಸನ್‌ ಉತ್ತರ ಪ್ರದೇಶದ ಪಾಳೇಗಾರಿಕೆಯ ಜಮೀನಾªರಿ ಪರಿವಾರಕ್ಕೆ ಸೇರಿದವರು. ಕಮ್ಯುನಿಸಂನ ಕಟ್ಟಾ ಪ್ರತಿಪಾದಕರಾಗಿದ್ದವರು ಅವರು. ಜೆಎನ್‌ಯು ಸ್ಥಾಪನೆಯಾಗಿದ್ದು ಡಾ| ತ್ರಿಗುಣ ಸೇನ್‌ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ. ಅನಂತರ ಡಾ| ವಿ.ಕೆ.ಆರ್‌.ವಿ.ರಾವ್‌ ಈ ವಿವಿಯನ್ನು ಅಭಿವೃದ್ಧಿಗೊಳಿಸಿದರು. ಆದರೆ ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ ತಯಾರಿಸಿ ಕೊಟ್ಟ ಪಟ್ಟಿಯಲ್ಲಿದ್ದ ಉಪನ್ಯಾಸಕರನ್ನು ಸಮಾಜ ವಿಜ್ಞಾನ ವಿಭಾಗಕ್ಕೆ ನೇಮಕಾತಿ ಮಾಡುವ ಮೂಲಕ ಜೆಎನ್‌ಯುವನ್ನು ಎಡಪಂಥೀಯರ ಅಡ್ಡೆಯಾಗಿ ಮಾಡಿದ್ದು ನೂರುಲ್‌ ಹಸನ್‌.

ಹಲವು ವಿವಿಗಳು ತಮ್ಮ ಗತ ವೈಭವವನ್ನು ಕಳೆದುಕೊಂಡಿವೆ. ಆದರೆ ಜೆಎನ್‌ಯುಗಿರುವ ಪ್ರತಿಷ್ಠಿತ ಎಂಬ ಹಣೆಪಟ್ಟಿ ಮಾತ್ರ ಇನ್ನೂ ಮುಂದುವರಿದಿದೆ. ಗತ ವೈಭವವನ್ನು ಕಳೆದುಕೊಂಡಿರುವ ವಿವಿಗಳಿಗೆ ನಮ್ಮದೇ ರಾಜ್ಯದಲ್ಲಿದ್ದ ಮೈಸೂರು ವಿವಿ ಮತ್ತು ಕರ್ನಾಟಕ ವಿವಿಯನ್ನು ಉದಾಹರಿಸಬಹುದು. 1980ರ ತನಕ ಬೆಂಗಳೂರು ವಿವಿ ಮತ್ತು ನಿರ್ದಿಷ್ಟವಾಗಿ ಹೇಳುವುದಾದರೆ ಅದರ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ ಅದ್ಭುತ ಪ್ರತಿಭಾವಂತರಾಗಿದ್ದ ಉಪನ್ಯಾಸಕರನ್ನು ಹೊಂದಿತ್ತು. ಕರ್ನಾಟಕದಲ್ಲಿ ವಿವಿಗಳು ಜಾತಿ ಮೋಹ, ಕಳಪೆ ಉಪನ್ಯಾಸಕರು ಮತ್ತು ದುರ್ಬಲ ನಾಯಕತ್ವದಿಂದಾಗಿ ಕಳೆಗುಂದಿದರೆ ಜೆಎನ್‌ಯು ಎಡಪಂಥೀಯ ವಾದದತ್ತ ಒಲವು ಹೊಂದಿರುವ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಅತಿಯಾದ ರಾಜಕೀಯ ಚಟುವಟಿಕೆಗಳ ಕಾರಣ ಸಮಸ್ಯೆಗೀಡಾಗಿದೆ. ಕೆಲವೇ ಕಿಲೋ ಮೀಟರ್‌ಗಳ ದೂರದಲ್ಲಿರುವ ಕೇಂದ್ರ ಸರಕಾರವೇ ಜೆಎನ್‌ಯುನ ಮಹಾ ಪೋಷಕ.ಅದರ ಉಪನ್ಯಾಸಕರಿಗೂ ಅನೇಕ ರೀತಿಯಕೊಡುಗೆಗಳು ಸಲ್ಲುತ್ತಿವೆ.

ಹಾಗೆಂದು ಈ ಎಲ್ಲ ಮಾತುಗಳನ್ನು ಜ.5ರಂದು ಗೂಂಡಾಗಳ ಗುಂಪೊಂದು ಜೆಎನ್‌ಯು ಒಳಗೆ ನುಗ್ಗಿ ನಡೆಸಿದ ದಾಂಧಲೆಯನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿಲ್ಲ. ಟಿವಿಗಳಲ್ಲಿ ಈ ದಾಳಿಯ ದೃಶ್ಯಾವಳಿಗಳನ್ನು ನೋಡಿರುವವರು ಆಘಾತಕ್ಕೊಳಗಾಗುವುದು ಸಹಜ. ವಿದ್ಯಾರ್ಥಿನಿಯೊಬ್ಬಳು ಗೂಂಡಾಗಳಿಂದ ತಪ್ಪಿಸಿಕೊಳ್ಳಲು ದಾರಿ ಸಿಕ್ಕಿದೆಡೆಗೆ ಓಡಿದ ದೃಶ್ಯ ಅನೇಕ ಮಂದಿಯ ಮನಸಿನಲ್ಲಿ ಅಚ್ಚೊತ್ತಿರಬಹುದು. ನಿರೀಕ್ಷಿಸಿದಂತೆಯೇ ದಾಳಿ ನಡೆದ ಬೆನ್ನಿಗೆ ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಆರ್‌ಎಸ್‌ಎಸ್‌ ಮತ್ತು ಎಬಿವಿಪಿಯನ್ನು ದಾಳಿಗೆ ಹೊಣೆ ಮಾಡಿವೆ. ಮುಸುಕುಧಾರಿ ಗೂಂಡಾಗಳಿಗೆ ವಿವಿ ಒಳಗೆ ನುಗ್ಗಿ ಹಲ್ಲೆ ಮಾಡಲು ಅನುಮತಿ ಕೊಟ್ಟ ಸಂಘಟನೆ ಅಥವಾ ವ್ಯಕ್ತಿಯನ್ನು ಮೂರ್ಖರೆಂದೇ ಕರೆಯಬೇಕಾಗುತ್ತದೆ. ಏಕೆಂದರೆ ಅವರಿಗೆ ರಾಜಕೀಯದ ಮೂಲಪಾಠವೂ ಗೊತ್ತಿಲ್ಲ. ನರೇಂದ್ರ ಮೋದಿ ಸರಕಾರ ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಗೃಹ ಸಚಿವ ಅಮಿತ್‌ ಶಾ ಈ ದಾಳಿಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಏಕೆಂದರೆ ದಿಲ್ಲಿಯ ಪೊಲೀಸ್‌ ಇಲಾಖೆ ನೇರವಾಗಿ ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದೆ. ಈ ದಾಳಿಗೆ ಬಿಜೆಪಿ ದಿಲ್ಲಿ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾದೀತು. 2015ರ ಚುನಾವಣೆಯಲ್ಲಿ ಬಿಜೆಪಿಯದ್ದು ಅತಿ ಕಳಪೆ ಸಾಧನೆ. 70 ಪೈಕಿ ಬರೀ 3 ಸ್ಥಾನಗಳಲ್ಲಿ ಗೆಲ್ಲಲಷ್ಟೇ ಬಿಜೆಪಿ ಶಕ್ತವಾಗಿತ್ತು. ನರೇಂದ್ರ ಮೋದಿಯ ಕಟು ಟೀಕಾರರಾಗಿರುವ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಚುನಾವಣೆ ಕಾಲದಲ್ಲಿ ಸಿಕ್ಕಿದ ಈ ಚಿನ್ನದಂಥ ಅವಕಾಶವನ್ನು ಬಿಟ್ಟುಕೊಡಲಿಕ್ಕಿಲ್ಲ.

ಒಂದು ವೇಳೆ ದಿಲ್ಲಿ ಪೊಲೀಸರು ಜೆಎನ್‌ಯು ಒಳಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಲಾಠಿ ಬೀಸಿದ್ದರೆ ಆ ಪ್ರಕರಣ ಇಷ್ಟು ಗಂಭೀರವಾಗುತ್ತಿರಲಿಲ್ಲ. ಏಕೆಂದರೆ ಅಂತಿಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಪೊಲೀಸರ ಕೆಲಸ. ಅದಾಗ್ಯೂ ಸಂಬಂಧಪಟ್ಟವರ ಅನುಮತಿಯಿಲ್ಲದೆ ವಿವಿ ಕ್ಯಾಂಪಸ್‌ನೊಳಗೆ ನುಗ್ಗುವ ಅಧಿಕಾರ ಪೊಲೀಸರಿಗೂ ಇಲ್ಲ.

ಕೆಲವೇ ಮಂದಿಯಿಂದ ರಾಜಕೀಯ
ಜೆಎನ್‌ಯು ಅಥವಾ ಇನ್ಯಾವುದೇ ವಿವಿಗೆ ಸೇರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ರಾಜಕಿಯದಲ್ಲಿ ವಿಶೇಷವಾದ ಆಸಕ್ತಿಯಿರುವುದಿಲ್ಲ. ವಿದ್ಯಾರ್ಥಿಗಳು ಕಾಲೇಜು ಅಥವಾ ವಿವಿಗಳಿಗೆ ಸೇರುವುದು ಕಲಿಯಲೆಂದೇ ಹೊರತು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಥವಾ ಕಲ್ಲು ತೂರಾಟ ಮಾಡಲು ಅಲ್ಲ. ಸಾಮಾನ್ಯವಾಗಿ ಪ್ರಾಯಮೀರಿದ ಬಳಿಕವೂ ವಿವಿಯನ್ನು ವಾಸಸ್ಥಾನವಾಗಿ ಮಾಡಿಕೊಂಡಿರುವ, ಕಲಿಯುವುದರಲ್ಲಿ ಆಸಕ್ತಿಯಿಲ್ಲದ ಕೆಲವೇ ವಿದ್ಯಾರ್ಥಿಗಳು ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮುತ್ತಾರೆ.1950ರಲ್ಲಿ ಬನಾರಸ್‌ ವಿವಿ ಹಾಸ್ಟೆಲ್‌ಗಳಲ್ಲಿ ಖಾಯಂ ಮೊಕ್ಕಾ ಹೂಡಿದ್ದ ವಿದ್ಯಾರ್ಥಿ ಗೂಂಡಾಗಳಿಂದಾಗಿ ಕುಖ್ಯಾತವಾಗಿತ್ತು. ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರು 1970ರಲ್ಲಿ ಹಿಂದಿ ವಿರೋಧಿ ಮತ್ತು ಎಕ್ಸ್‌ಪೋ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ನಾಯಕರೊಬ್ಬರನ್ನು ತನ್ನ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಿಕೊಂಡಿದ್ದರು. ವೀರೇಂದ್ರ ಪಾಟೀಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಎಂದೂ ತರಗತಿಗೆ ಹಾಜರಾಗದ ಕೆಲವು ವಿದ್ಯಾರ್ಥಿಗಳನ್ನು ಮತ್ತು ಬೋಧಿಸುವುದೊಂದನ್ನು ಬಿಟ್ಟು ಉಳಿದೆಲ್ಲ ಕೆಲಸಗಳನ್ನು ಮಾಡುತ್ತಿದ್ದ ಕೆಲವು ಉಪನ್ಯಾಸಕರನ್ನು ಜಪಾನ್‌ನಲ್ಲಿ ನಡೆದ ಔದ್ಯೋಗಿಕ ಮೇಳಕ್ಕೆ ಕಳುಹಿಸಿದ್ದು ಎಕ್ಸ್‌ಪೋ ಹೋರಾಟಕ್ಕೆ ಹೇತುವಾಗಿತ್ತು. ಆ ಮಾಜಿ ಸಚಿವ ಈಗ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ.

ಜೆಎನ್‌ಯುನಲ್ಲಿ ನಡೆದ ಗೂಂಡಾಗಿರಿಯನ್ನು ಖಂಡಿಸುತ್ತಲೇ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೇ ಈ ಸಮಸ್ಯೆಗಳನ್ನೆಲ್ಲ ಮೈಮೇಲೆ ಎಳೆದುಕೊಂಡದ್ದು ಎಂದು ಹೇಳಬೇಕಾಗುತ್ತದೆ.ಇವರಲ್ಲೂ ಎಡಪಂಥೀಯ ಒಲವು ಹೊಂದಿರುವವರು ಹೆಚ್ಚು ದೂಷಣೆಗೆ ಅರ್ಹರು. ಜೆಎನ್‌ಯು ಕ್ಯಾಂಪಸ್‌ನಲ್ಲಿ ಹಿಂಸಾಚಾರ ಹೊಸದಲ್ಲ. ಜೆಎನ್‌ಯು ವ್ಯವಹಾರಗಳನ್ನು 2016ರಲ್ಲಿ ಇಲ್ಲಿನ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ದೇಶದ್ರೋಹದ ಪ್ರಕರಣಗಳ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸುವವರು ವಿವಿ ಆಡಳಿತ ಸದಾ ಒಂದು ವರ್ಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ಸಮಸ್ಯೆಗಳನ್ನು ನಿರೀಕ್ಷಿಸುತ್ತಾ ಇರುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 1972ರಲ್ಲಿ ಎಡಪಂಥೀಯ ವಿಚಾರಧಾರೆಯತ್ತ ಒಲವು ಬೆಳೆಸಿಕೊಂಡಿದ್ದ ಹಿಂದಿಯ ಜನಪ್ರಿಯ ಚಿತ್ರನಟ ಬಲರಾಜ್‌ ಸಾಹಿ° ಘಟಿಕೋತ್ಸವದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು ಭಾರೀ ವಿವಾದಕ್ಕೊಳಗಾಗಿತ್ತು. ಅಂದಿನಿಂದ ಈ ವಿವಿಯಲ್ಲಿ ಘಟಿಕೋತ್ಸವ ನಡೆಯಲಿಲ್ಲ. ಅದು ಮರಳಿ ಶುರುವಾದದ್ದು 2018ರಲ್ಲಿ.

ಪ್ರೊ| ಸೋಂಧಿಗೆ ನೀಡಿದ ಕಿರುಕುಳ
ಜೆಎನ್‌ಯುನ ಸಮಾಜ ವಿಜ್ಞಾನ ವಿಭಾಗದ ಎಡಪಂಥೀಯ ಉಪನ್ಯಾಸಕರ ದಬ್ಟಾಳಿಕೆ ಎಷ್ಟಿದೆ ಎಂದು ತಿಳಿಯಲು ಈ ಒಂದು ಘಟನೆ ಸಾಕು. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿದ್ದ ಅನಂತರ ರಾಜಕಾರಣಿ ಮತ್ತು ಉಪನ್ಯಾಸಕರಾದ ದಿ.ಮನೋಹರ್‌ ಲಾಲ್‌ ಸೋಂಧಿ (ಪ್ರೊ| ಎಂ.ಎಲ್‌.ಸೋಂಧಿ) ಜೆಎನ್‌ಯುಗೆ ಉಪನ್ಯಾಸಕರಾಗಿ ಸೇರಿದ್ದರು. ಐಎಎಸ್‌ ಸೇರಿ ಹಲವು ಪರೀಕ್ಷೆಗಳಲ್ಲಿ ಅವರು ಉನ್ನತ ಸ್ಥಾನಗಳನ್ನು ಪಡೆದಿದ್ದರು. ದೇಶದ ವಿದೇಶಾಂಗ ನೀತಿಯ ಬಗ್ಗೆ ಭ್ರಮೆನಿರಸನಗೊಂಡು ಅವರು ಐಎಫ್ಎಸ್‌ ಸೇವೆಗೆ ರಾಜೀನಾಮೆ ನೀಡಿದ್ದರು. 1967ರಲ್ಲಿ ಜನಸಂಘದ ಟಿಕೇಟಿನಲ್ಲಿ ಅವರು ದಿಲ್ಲಿಯಿಂದ ಲೋಕಸಭೆಗೆ ಚುನಾಯಿತರಾಗಿದ್ದರು. 1967-71ರ ಸಂಸತ್ತಿನಲ್ಲಿ ಅವರು ಶ್ರೇಷ್ಠ ಸಂಸದೀಯ ಪಟುವಾಗಿದ್ದರು. 1970ರಲ್ಲಿ ಜೆಎನ್‌ಯುನ ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದ ಬಳಿಕ ಅವರು ಅನುಭವಿಸಿದ ಕಿರುಕುಳ ಅಷ್ಟಿಷ್ಟಲ್ಲ. ಕೆಲವು ಉಪನ್ಯಾಸಕರು, ಆಡಳಿತಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ತಮ್ಮ ಶತ್ರುವಿನಂತೆ ಕಾಣುತ್ತಿದ್ದರು. ಬಿಜೆಪಿಯ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಏಕಾಂಗಿಯಾಗಿಸಿದ್ದರು. ಅವರಿಗೆ ಬಡ್ತಿ ನಿರಾಕರಿಸಲಾಗಿತ್ತು ಕೆಲವು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಕ್ರಿಯ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಬೆದರಿಕೆಯನ್ನೂ ಒಡ್ಡಲಾಗಿತ್ತು.ಬಿಜೆಪಿಯ ಈಗಿನ ಪೀಳಿಗೆಯ ನಾಯಕರಿಗೆ ಸೋಂಧಿ ಯಾರೆಂದು ತಿಳಿದಿರಲಿಕ್ಕಿಲ್ಲ. ನಮ್ಮ ವಿದೇಶಾಂಗ ನೀತಿಯಲ್ಲಿ ಆಗಿರುವ ಅನೇಕ ಬದಲಾವಣೆಗಳಿಗೆ ಸೋಂಧಿ ಮೂಲಕಾರಣಕರ್ತರು. ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅವರನ್ನು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೌನ್ಸಿಲ್‌ನ ಅಧ್ಯಕ್ಷರನ್ನಾಗಿ ನೇಮಿಸಿತ್ತು.

ತಥಾಕಥಿತ ಟುಕ್ಡೆ ಟುಕ್ಡೆ ಗ್ಯಾಂಗ್‌ ಬಹಳ ಸಮಯದಿಂದ ಜೆಎನ್‌ಯುನಲ್ಲಿ ಸಕ್ರಿಯವಾಗಿದೆ. ಮೋದಿ ಸರಕಾರ ಪ್ರತಿರೋಧವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ 1975ರಲ್ಲಿ ಇಂದಿರಾ ಗಾಂಧಿ ಮತ್ತು ಅವರ ದ್ವಿತೀಯ ಪುತ್ರ ಸಂಜಯ್‌ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆಯನ್ನು ಪ್ರತಿಭಟಿಸಿದ ಅನೇಕ ಜೆಎನ್‌ಯು ವಿದ್ಯಾರ್ಥಿಗಳನ್ನು ಬಂಧಿಸಿದ ವಿಚಾರ ಗೊತ್ತಿರಲಿಕ್ಕಿಲ್ಲ. ಕಳೆದೆರಡು ದಶಕಗಳಿಂದ ಜೆಎನ್‌ಯು ಅನಪೇಕ್ಷಿತ ಕಾರಣಗಳಿಂದಾಗಿಯೇ ಸುದ್ದಿಯಲ್ಲಿದೆ. ಕೆಲವು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾರ್ಗಿಲ್‌ ಯುದ್ಧ ಮಾಡಿದ್ದಕ್ಕೆ ವಾಜಪೇಯಿಯವರನ್ನು ಖಂಡಿಸಿ ಪಾಕಿಸ್ಥಾನ ಪರವಾಗಿ ಘೋಷಣೆ ಕೂಗಿದ್ದರು! ಇಂಥ ಘೋಷಾ ವಾಕ್ಯಗಳನ್ನು ವಿರೋಧಿಸಿದ್ದ ಸೇನೆಯ ಅಧಿಕಾರಿಗಳ ಮೇಲೆ ಕಾರ್ಯಕ್ರಮವೊಂದರಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಏರಿ ಹೋಗಿದ್ದರು.

ಜೆಎನ್‌ಯು, ಜಾಧವಪುರ ವಿವಿ ಮತ್ತಿತರ ವಿವಿಗಳ ಈ ಸಮಸ್ಯೆಗೆ ದೂರಗಾಮಿ ಪರಿಹಾರವೆಂದರೆ ಸರಕಾರ ಅಥವಾ ಯುಜಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರು ಮತ್ತು ಉಪನ್ಯಾಸಕರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸುವುದು. ಕೆಲವರು ಕಾಲಕಾಲಕ್ಕೆ ಬಡ್ತಿಗಳನ್ನು ಪಡೆದುಕೊಳ್ಳುತ್ತಾರೆ, ಕೈತುಂಬ ಸಂಬಳ ಎಣಿಸುತ್ತಾರೆ. ಆದರೆ ಸಂಶೋಧನಾ ಕೆಲಸಗಳನ್ನು ಮಾತ್ರ ಮಾಡುವುದಿಲ್ಲ. ಸರಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವಾಗ ಉಪನ್ಯಾಸಕರಿಗೇಕೆ ಈ ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯದಿಂದ ಬೇರ್ಪಡಿಸಬೇಕೆಂದು ಹೇಳಿರುವ ಜೆ.ಎಂ.ಲಿಗೊª ವರದಿಯನ್ನು ಅನುಷ್ಠಾನಿಸಬೇಕು. ಲಿಂಗೊ ಮಾಜಿ ಮುಖ್ಯ ಚುನಾವಣಾ ಆಯುಕ್ತರು.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.