ಕೇಂದ್ರ-ರಾಜ್ಯಗಳ ಏಕಕಾಲ ಚುನಾವಣೆ ಯಾಕೆ ಮೀನ-ಮೇಷ?


Team Udayavani, Aug 30, 2017, 8:31 AM IST

30-ANAKA-1.jpg

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಅಲ್ಲೋಲ ಕಲ್ಲೋಲಗಳನ್ನು ನೋಡಿದರೆ, ರಾಜ್ಯವೇ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವಂತೆ ತೋರಿಬರುತ್ತಿದೆ. ಈ ನಡುವೆ ಸಮೀಕ್ಷಾ ಸಂಸ್ಥೆಯೊಂದು ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಪ್ರಕಟಿಸಲೂ ಮುಂದಾಗಿದೆ‌. ಅಧಿಕಾರಾರೂಢ ಕಾಂಗ್ರೆಸ್‌ ಪಕ್ಷದ ನಡವಳಿಕೆ ಅಂಥದೇನೂ ಅಚ್ಚರಿ ಮೂಡಿಸುವಂಥದ್ದಲ್ಲವೆಂಬ ರೀತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕರ್ನಾಟಕದ ಬಿಜೆಪಿ ಘಟಕವನ್ನು ಚುನಾವಣಾ ಸನ್ನದ್ಧ ಪಕ್ಷವನ್ನಾಗಿಸಿ ದಿಲ್ಲಿಗೆ ಹಿಂದಿರುಗಿದ್ದಾರೆ. ಆದರೆ ಹೇಳಲೇಬೇಕಾದ ಮಾತೆಂದರೆ ಚೀನದೊಂದಿಗಿನ ಯುದ್ಧ ಸಾಧ್ಯತೆಯನ್ನು ಕರ್ನಾಟಕದಲ್ಲಿನ ಅವಧಿಪೂರ್ವ ಚುನಾವಣಾ ಸಾಧ್ಯತೆಯನ್ನೂ ದೂರಗೊಳಿಸುವುದೇ ಒಳ್ಳೆಯದೆಂದು ಕಾಣುತ್ತದೆ. ಕಾರಣ, ಈ ಎರಡೂ ಸಾಧ್ಯತೆಗಳು ಸಾಮಾನ್ಯ ಜನಜೀವನದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಲ್ಲವಾದರೂ ರಾಜಕಾರಣ ಹಾಗೂ ಚುನಾವಣೆಯ ಬಗ್ಗೆ ಅತೀವವೆನ್ನಿಸುವಷ್ಟು ಆಸಕ್ತಿ ಮೂಡಿಸಿಕೊಂಡಿರುವುದಂತೂ ನಿಜ. ಇದಕ್ಕಿರುವ ಕಾರಣಗಳಲ್ಲಿ ಒಂದು ಎಂದರೆ ಚರ್ಚೆ ನಡೆಸುವುದಕ್ಕೆ ಅತ್ಯಂತ ಸುಲಭವಾಗಿ ನಮಗೆ ದಕ್ಕುವ ವಸ್ತು ರಾಜಕೀಯವೇ. ಭಾರತದಲ್ಲಿ ಪ್ರತಿವರ್ಷವೂ ಚುನಾವಣಾ ವರ್ಷ ಎಂಬಂತಾಗಿದೆ. ಅದರಲ್ಲೂ ನಮ್ಮ ಜನರು ಹೆಚ್ಚಾಗಿ ತಪ್ಪು ಜನರನ್ನೇ ಚುನಾಯಿಸುತ್ತಾರಾದರೂ ಮತದಾನ ಮಾಡುವುದರಲ್ಲಿ ನಿಜಕ್ಕೂ ಸಿದ್ಧಹಸ್ತರು. ಮತದಾರರ ಪೈಕಿ ಕೆಲ ಭ್ರಷ್ಟೋತ್ತಮರಿದ್ದಾರೆ; ಇವರಿಗೆ ರಾಜಕೀಯ ಪಕ್ಷಗಳಿಂದ ಹಾಗೂ ಅಭ್ಯರ್ಥಿಗಳಿಂದ ಹಣ ಹಾಗೂ ಉಡುಗೊರೆಗಳನ್ನು ಹೇಗೆ ಕಿತ್ತುಕೊಳ್ಳುವುದೆನ್ನುವುದು ಚೆನ್ನಾಗಿ ಗೊತ್ತಿದೆ. ಮತ್ತೆ ಮತ್ತೆ ಬರುತ್ತಿರುವ ಚುನಾವಣೆಯೆಂಬ ಪಿಡುಗಿಗೆ ಬಲಿಬಿದ್ದಿರುವ ರಾಷ್ಟ್ರ ನಮ್ಮದೊಂದೇ ಅಲ್ಲವಲ್ಲ ಎಂದು ವಾದಿಸುವವರೂ ಇರಬಹುದು! ಅಮೆರಿಕದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಸತ್ತಿನ ಪ್ರತಿನಿಧಿ ಸಭೆಗೆ ಚುನಾವಣೆ ನಡೆಯುತ್ತಿರುತ್ತದೆ.     

ಪ್ರಧಾನ ಮಂತ್ರಿಗಳಿಂದ ತೊಡಗಿ ಯಾವುದೇ ಸ್ತರದಲ್ಲಿರುವ ನಮ್ಮ ರಾಜಕೀಯ ನಾಯಕ ಪ್ರತಿವರ್ಷವೂ ಚುನಾವಣಾ ಪ್ರಚಾರಕ್ಕಾಗಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಮ್ಮಲ್ಲಿನ ಮಹಾ ಚುನಾವಣೆಗಾಗಿ ನಮ್ಮ ಬೊಕ್ಕಸಕ್ಕೆ 4,500 ಕೋಟಿ ರೂ. ಹೊರೆ ಬೀಳುತ್ತದೆಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಮುಂಬರುವ ಲೋಕಸಭಾ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸಬೇಕೆಂಬ ಸಲಹೆಗಳು ಅನೇಕ ವೇದಿಕೆಗಳಿಂದ ಕೇಳಿಬಂದಿವೆ. 

ಮುಂದಿನ ಎರಡು ವರ್ಷಗಳಲ್ಲಿ ನಡೆಯಬೇಕೆಂದು ನಿಗದಿಯಾಗಿರುವ ಚುನಾವಣಾ ವೇಳಾಪಟ್ಟಿಯನ್ನು ಗಮನಿಸಿದರೆ ವೃತ್ತಪತ್ರಿಕೆಗಳ ಪುಟ ತುಂಬಿಸಲು, ಟಿವಿಗಳ ಸುದ್ದಿ ಹಾಗೂ ಚರ್ಚೆಗಳಿಗೆ ಸಾಕಷ್ಟು ಗ್ರಾಸ ಸಿಗಲಿದೆಯೆಂದೇ ಇದರ ಅರ್ಥ.

ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ಏರ್ಪಡಿಸಬೇಕೆಂಬ ಬಯಕೆಯನ್ನು ಪ್ರಧಾನಿ ಮೋದಿ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ಪದೇ ಪದೇ ನಡೆಯುವ ಚುನಾವಣೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತವೆ, ಸ್ಥಗಿತಗೊಳ್ಳುತ್ತವೆ, ಅಮೂಲ್ಯ ಸಮಯ ಹಾಗೂ ಹಣ ಪೋಲಾಗುತ್ತವೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. 

ಲೋಕಸಭೆ-ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕೆಂಬ ಶಿಫಾರಸು ಮೊದಲ ಬಾರಿಗೆ ಬಂದುದು ಕಾನೂನು ಆಯೋಗದಿಂದ, 1999ರಲ್ಲಿ ಚುನಾವಣಾ ಕಾಯ್ದೆಗಳ ಸುಧಾರಣೆ ಕುರಿತಂತೆ ಅದು ಸಲ್ಲಿಸಿದ್ದ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿತ್ತು. 2015ರ ಡಿಸೆಂಬರಿನಲ್ಲಿ “ಕಾನೂನು ಹಾಗೂ ಸಿಬಂದಿ’ ಕುರಿತ ಸಂಸದೀಯ ಸ್ಥಾಯಿ ಸಮಿತಿ ಈ ರೀತಿ ಜಂಟಿ ಚುನಾವಣೆ ನಡೆಸುವ ಬಗೆಗಿನ ಸಾಧಕ ಬಾಧಕಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಬಳಿಕ ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ವಿವಿಧ ವಿಧಾನ ಸಭೆಗಳ ಐದು ವರ್ಷಗಳ ಅವಧಿಯ ಮುಕ್ತಾಯದಲ್ಲಿ ವ್ಯತ್ಯಾಸವಿರುವುದರಿಂದ ದೇಶದ ಎಲ್ಲ ಕಡೆಗಳಲ್ಲೂ ಈ ರೀತಿ ಏಕವೇಳೆಯಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗದು ಎಂಬ ಅಂಶವನ್ನೂ ಈ ಸ್ಥಾಯಿ ಸಮಿತಿ ಗಮನಕ್ಕೆ ತೆಗೆದುಕೊಂಡಿತ್ತು. ಎರಡು ಹಂತಗಳಲ್ಲಿ ಇಂಥ ಚುನಾವಣಾ ಸುಧಾರಣೆಯನ್ನು ಕಾರ್ಯರೂಪಕ್ಕಿಳಿಸಬಹುದೆಂದು ಸಮಿತಿ ಸೂಚಿಸಿತ್ತು – ಮೊದಲ ಹಂತದಲ್ಲಿ ರಾಜ್ಯಗಳ ಪೈಕಿ ಅರ್ಧದಷ್ಟರ ವಿಧಾನಸಭೆಗಳ ಅವಧಿಯನ್ನು ಲೋಕಸಭೆಯ ಅವಧಿಯೊಂದಿಗೆ ಸರಿದೂಗಿಸುವುದು; ಎರಡನೆಯ ಹಂತದಲ್ಲಿ ಉಳಿದ ಅರ್ಧದಷ್ಟು ರಾಜ್ಯಗಳ ಚುನಾವಣೆಯನ್ನು, ಲೋಕಸಭೆಯ ಅವಧಿಯ ಪ್ರಥಮ 30 ತಿಂಗಳ ಅವಧಿ ಪೂರ್ಣಗೊಂಡೊಡನೆ ನಡೆಸುವುದು.

ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಗಳನ್ನು ಅವಧಿಪೂರ್ವವಾಗಿ ನಡೆಸುವುದಾದರೆ, ಅವುಗಳ ಅವಧಿಯನ್ನು ಐದು ವರ್ಷಗಳಿಗಿಂತಲೂ ದೀರ್ಘ‌ಗೊಳಿಸಬಹುದಾಗಿದೆ ಎಂದು ಈ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಸಾಮಾನ್ಯವಾಗಿ ರಾಷ್ಟ್ರಪತಿಗಳು ಸಂವಿಧಾನದ 352ನೆಯ ವಿಧಿಯಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗುವ ಸಂದರ್ಭದಲ್ಲಷ್ಟೇ ಸಂಸತ್ತು ಹಾಗೂ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸಬಹುದಾಗಿದೆ. ಯುದ್ಧ, ಅನ್ಯರಾಷ್ಟ್ರಗಳ ಆಕ್ರಮಣ ಹಾಗೂ ಸಶಸ್ತ್ರ ದಂಗೆ ನಡೆಯುವ ಸಂದರ್ಭಗಳಲ್ಲಿ ಮಾತ್ರ ರಾಷ್ಟ್ರದ ಮೇಲೆ ತುರ್ತುಪರಿಸ್ಥಿತಿ ಹೇರಬಹುದಾಗಿದೆ. ಮಾಜಿ ಪ್ರಧಾನಿ ಇಂದಿರಾ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ (1975ರಿಂದ 1977) 42ನೆಯ ಸಂವಿಧಾನ ತಿದ್ದುಪಡಿ ಮೂಲಕ ಸಂಸತ್ತಿನ ಹಾಗೂ ರಾಜ್ಯ ವಿಧಾನಸಭೆಗಳ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಿದ್ದರು. ಆ ಕಾಲದಲ್ಲಿ 5ನೆಯ ಕರ್ನಾಟಕ ವಿಧಾನಸಭೆಯ (ಆಗ ದೇವರಾಜ ಅರಸ್‌ ಮುಖ್ಯಮಂತ್ರಿ) ಅವಧಿ 1977ಕ್ಕೆ ಬದಲಾಗಿ 1978ಕ್ಕೆ ಮುಕ್ತಾಯವಾದುದು ಇದೇ ಕಾರಣಕ್ಕಾಗಿ.

ಚುನಾವಣಾ ಆಯೋಗ ಕೂಡ ಕೇಂದ್ರ ಹಾಗೂ ರಾಜ್ಯಮಟ್ಟದ ಚುನಾವಣೆಗಳನ್ನು ಅವಧಿಗೆ ಮುನ್ನ ನಡೆಸುವ ಪ್ರಸ್ತಾವವನ್ನು ಒಪ್ಪಿಕೊಂಡಿಲ್ಲ. ಇಂಥ ಅವಧಿಪೂರ್ವ ಚುನಾವಣೆಗಳನ್ನು ತಪ್ಪಿಸಲು ರಚನಾತ್ಮಕ ಕ್ರಮ ಕೈಗೊಳ್ಳಬೇಕಿದೆ ಎಂದದು ಸೂಚಿಸಿತ್ತು. ಅದರ ಶಿಫಾರಸು ಇದು - ವಿರೋಧ ಪಕ್ಷವು ಸರಕಾರದ ವಿರುದ್ಧ ಅವಿಶ್ವಾಸ ಸೂಚಕ ನಿರ್ಣಯ ಮಂಡಿಸುವುದಾದರೆ, ಸರಕಾರ ಕೂಡ ವಿಶ್ವಾಸ ಸೂಚಕ ನಿರ್ಣಯವನ್ನು ಮಂಡಿಸಬೇಕು. ಇದರಿಂದ ಸರಕಾರದ ದಾಡ್ಯì ಹಾಗೂ ವಿರೋಧ ಪಕ್ಷದ ಪರ್ಯಾಯ ನಾಯಕತ್ವ ಕುರಿತ ಸನ್ನದ್ಧತೆ ಎರಡೂ ಪ್ರಕಟವಾಗಲು ಸಾಧ್ಯ. 1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರ ಪ್ರಥಮ ಸರಕಾರ ಕೇವಲ ಹದಿಮೂರೇ ದಿನ ಅಧಿಕಾರದಲ್ಲಿದ್ದು ರಾಜೀನಾಮೆ ಕೊಡಬೇಕಾದ ಪ್ರಸಂಗ ಬಂದಾಗ ದೇಶದಲ್ಲಿ ಕೋಲಾಹಲವೆದ್ದುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್‌ ಬೇಜವಾಬ್ದಾರಿಯಿಂದ ವರ್ತಿಸಿದ ಫ‌ಲವಾಗಿ ಯಡಿಯೂರಪ್ಪ ಅವರ ಪ್ರಥಮ ಸರಕಾರ ಒಂದೇ ವಾರದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಜೆಡಿಎಸ್‌ ಅಂದು ರಾಜ್ಯದ ಆಳ್ವಿಕೆಯನ್ನು ಮಕ್ಕಳಾಟವೆಂಬಂತೆ ಭಾವಿಸಿತು. ಯಡಿಯೂರಪ್ಪ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಏಕಾಏಕಿ ಹಿಂದೆಗೆದುಕೊಂಡ ಜೆಡಿಎಸ್‌, ಹೊಸ ಸರಕಾರದ ಪ್ರಸ್ತಾವದೊಂದಿಗೆ ರಾಷ್ಟ್ರಪತಿ ಎದುರು ತನ್ನ ಬೆಂಬಲಿಗರ ಪೆರೇಡ್‌ ನಡೆಸಿ ತನ್ನ ಕಾರ್ಯದಲ್ಲಿ ಯಶಸ್ವಿಯಾಯಿತು. ಇಂಥ ರಾಜಕೀಯ ನಾಟಕಕ್ಕೆ ಕಾರಣರಾದರು ಜಮೀರ್‌ ಅಹ್ಮದ್‌ ಅವರಂಥವರು.

 ಈಚಿನ ವರ್ಷಗಳಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಬಗ್ಗೆ ಬಲವಾಗಿ ಪ್ರತಿಪಾದಿಸಿರುವವರು ಕೇಂದ್ರದ ಸಂಪುಟ ಕಾರ್ಯದರ್ಶಿ ಟಿ.ಎಸ್‌.ಆರ್‌. ಸುಬ್ರಹ್ಮಣ್ಯನ್‌. ಆದರೆ ಮಾಜಿ ಚುನಾವಣಾ ಆಯುಕ್ತರಲ್ಲೊಬ್ಬರಾದ ಎಸ್‌.ವೈ. ಕುರೇಶಿ ಅವರು ಈ ಸಲಹೆಯನ್ನು “ಸಂವಿಧಾನದಡಿಯಲ್ಲಿ ಕಾರ್ಯರೂಪಕ್ಕೆ ತರಲು ಅಸಾಧ್ಯ’ ಎನ್ನುವ ಮೂಲಕ ತಳ್ಳಿಹಾಕಿದರು. ಏಕಕಾಲಕ್ಕೆ ಚುನಾವಣೆ ಕುರಿತ ಪ್ರಸ್ತಾವವನ್ನು ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳು “ಉದಾತ್ತ ಪ್ರಸ್ತಾವ’ ಎಂದು ಮೆಚ್ಚಿಕೊಂಡಿವೆಯಾದರೂ ಇದರ ಅನುಷ್ಠಾನ ಕಷ್ಟ ಸಾಧ್ಯ ಎನ್ನುತ್ತಿವೆ. ಈ ನಡುವೆ ಕಾಂಗ್ರೆಸ್‌ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ, ತೃಣಮೂಲ ಕಾಂಗ್ರೆಸ್‌ ಈ ಚಿಂತನೆಯನ್ನು ತಿರಸ್ಕರಿಸಿವೆ. ಎಐಎಡಿಎಂಕೆ ಇದನ್ನು ತಣ್ತೀಶಃ ಸ್ವಾಗತಿಸಿದೆ. ಅಕಾಲಿದಳ ಹಾಗೂ ಅಸ್ಸಾಂ ಗಣಪರಿಷತ್‌ ಈ ಪ್ರಸ್ತಾವವನ್ನು ಸ್ವಾಗತಿಸಿದ್ದರೂ ತಮ್ಮದೇ ಸಂದೇಹವನ್ನು ವ್ಯಕ್ತಪಡಿಸಿವೆ.

ಅಮೆರಿಕ, ರಶ್ಯಕ್ಕೂ ನಮಗೂ ಇರುವ ಸಾಮ್ಯ
ವಿದೇಶೀ ಆಕ್ರಮಣಕಾರರ ಹೆಸರು ಹೊತ್ತ ಸ್ಥಳಗಳ ಹೆಸರುಗಳನ್ನು ಬದಲಿಸುವ ಹಾಗೂ ವಿದೇಶೀ ಆಡಳಿತಗಾರರ ಪ್ರತಿಮೆಗಳನ್ನು ಕಿತ್ತು ಹಾಕುವ ವಿದ್ಯಮಾನಗಳು ನಡೆದಿರುವುದು ನಮ್ಮಲ್ಲಷ್ಟೇ ಅಲ್ಲ. ಬ್ರಿಟಿಷ್‌ ಆಡಳಿತದ ನೆನಪುಗಳನ್ನು ಅಳಿಸಿ ಹಾಕಲು ನಾವು ಪ್ರಯತ್ನಿಸಿರುವುದು ಹೌದಾದರೂ, ಮುಸ್ಲಿಂ ಆಕ್ರಮಣಕಾರರ ಸ್ಮತಿಗಳನ್ನು ಸಾಮಾನ್ಯವಾಗಿ ಉಳಿಸಿಕೊಂಡಿದ್ದೇವೆ. ಈ ಮಾತಿಗೆ ಒಂದೇ ಅಪವಾದವೆಂದರೆ ಬಾಬ್ರಿ ಮಸೀದಿ ಕಟ್ಟಡದ ನೆಲಸಮ ಘಟನೆ. ಮುಸ್ಲಿಂ ನಾಯಕರಿಂದ ಅಂದು ನಿರ್ಮಿಸಲ್ಪಟ್ಟಿದ್ದ ಕಟ್ಟಡಗಳು ಇಂದಿಗೂ ಹಾಗೆಯೇ ಊನವಿಲ್ಲದೆ ಉಳಿದಿವೆ. ಸಾಮಾನ್ಯವಾಗಿ ಅವರಿಂದ ನಾಮಕರಣಗೊಂಡಿದ್ದ ಹೆಚ್ಚಿನ ಸ್ಥಳಗಳ ಹೆಸರುಗಳನ್ನು ಇಂದೂ ಉಳಿಸಿಕೊಳ್ಳಲಾಗಿದೆ. ದಿಲ್ಲಿಯ ಕೆಲವು ರಸ್ತೆಗಳಿಗೆ ಇದ್ದ ಹೆಸರನ್ನು ಕೈಬಿಟ್ಟು ವಿ.ಕ. ಕೃಷ್ಣ ಮೆನೋನ್‌ ಅಥವಾ ಎ.ಪಿ.ಜೆ. ಅಬ್ದುಲ್‌ ಕಲಾಂ ಮೊದಲಾದ ಮಹನೀಯರ ಹೆಸರನ್ನಿರಿಸಲಾಗಿದೆ. ಇದೀಗ ಅಮೆರಿಕದಲ್ಲಿ ಕೆಲವರು ಜೀತ ಪದ್ಧತಿಯನ್ನು ನಿಷೇಧಿಸಿದ್ದ ಅಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಅವರ ಸರಕಾರದ ವಿರುದ್ಧ ಸಮರ ಸಾರಿದ್ದ ಕನ್‌ಫೆಡರೇಟ್‌ ನಾಯಕರ ಪ್ರತಿಮೆಗಳನ್ನು ಕೆಡವಿ ಹಾಕಲು ಮುಂದಾಗಿದ್ದಾರೆ. ಜೀತ ಪದ್ಧತಿಯನ್ನು ಸಮರ್ಥಿಸಿದ್ದ ಇಂಥ ಅಂತರ್ಯುದ್ಧದ ಹೋರಾಟಗಾರರ ಪ್ರತಿಮೆಗಳನ್ನು ಕೆಡಹುವ ಈ ಅಭಿಯಾನಕ್ಕೆ ವರ್ಣನೀತಿಪರ ಶ್ವೇತ ವರ್ಣೀಯ ಅಮೆರಿಕನ್‌ ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ವರ್ಜೀನಿಯಾ ರಾಜ್ಯದ ಶಾರ್ಲೆಟ್‌ ವಿಲೆಯಲ್ಲಿ ಕಾನ್ಫಡರೇಟ್‌ ನಾಯಕ ರಾಬರ್ಟ್‌ ಇ.ಲೀ ಅವರ ಪ್ರತಿಮೆಯನ್ನು ಕೆಡವಿ ಹಾಕುವ ವಿಷಯದಲ್ಲಿ ಹಿಂಸಾತ್ಮಕ ವಿರೋಧ ವ್ಯಕ್ತವಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಂಥ ಪ್ರತಿಮೆಗಳ ಕೆಡಹುವ ಕೃತ್ಯಗಳ ಬಗ್ಗೆ ಅಸಮ್ಮತಿ ಸೂಚಿಸುವ ಮೂಲಕ ಶ್ವೇತವರ್ಣಿàಯ ವರ್ಣನೀತಿ ಪ್ರತಿಪಾದಕರನ್ನು ಬೆಂಬಲಿಸಿದ್ದಾರೆ. ಅಮೆರಿಕದಲ್ಲೇನು, ರಶ್ಯದಲ್ಲಿ ಕೂಡ ಲೆನಿನ್‌, ಸ್ಟಾಲಿನ್‌ ಮತ್ತಿತರ ಕಮ್ಯುನಿಸ್ಟ್‌ ನಾಯಕರ ಹೆಸರು ಹೊತ್ತ ನಗರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಜತನದಿಂದ ಕಾಯ್ದುಕೊಂಡು ಬರಲಾಗಿದ್ದ ಇವರುಗಳ ಮೃತದೇಹಗಳನ್ನು, ಪ್ರತಿಮೆಗಳನ್ನು ಹುಗಿದುಹಾಕಲಾಗಿದೆ.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.