ಭಾರತ-ಅಮೆರಿಕ ಬಾಂಧವ್ಯಕ್ಕೆ ಹೊಸ ಉದಯ


Team Udayavani, Jun 26, 2023, 7:41 AM IST

MODI- BIDEN

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪುಹಾಸು ಹಾಸಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಜೋ ಬೈಡೆನ್‌ ದಂಪತಿ ಭಾರತ-ಅಮೆರಿಕ ಸಂಬಂಧಗಳಿಗೆ ಐತಿಹಾಸಿಕ ತಿರುವನ್ನು ಕೊಟ್ಟಿದ್ದಾರೆ. ಹಿಂದೆಂದು ಸಿಗದ ಮಹತ್ವ ಮಾನ್ಯತೆ ಬಲಿಷ್ಠ ಭಾರತಕ್ಕೆ ಸಿಕ್ಕಿರುವುದು ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುವ ಆಗುಹೋಗುಗಳಲ್ಲಿ ಮಹತ್ವದ ಪಾತ್ರ ಭಾರತ ವಹಿಸಲಿದೆ ಎನ್ನುದರ ದಿಕ್ಸೂಚಿಯಂತಿದೆ ಈ ಅಮೆರಿಕ ಭೇಟಿ.

ರಕ್ಷಣ ವಲಯ, ತಂತ್ರಜ್ಞಾನ ವಲಯ ಮತ್ತು ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಭಾರತ ಅತ್ತು ಅಮೆರಿಕ ಸಹಿ ಹಾಕಿದೆ.

ರಕ್ಷಣ ವಲಯದ ಉತ್ಪಾದನೆಗೆ ಪುಷ್ಟಿ ನೀಡುವ ಪ್ರಮುಖ ಒಪ್ಪಂದವೆಂದರೆ ಜನರಲ್‌ ಎಲೆಕ್ಟ್ರಿಕ್‌(ಜೆಇ) ಮತ್ತು ಎಚ್‌ಎಎಲ್‌ ನಡುವೆ ಎಫ್‌414 ವಿಮಾನ ಎಂಜಿನ್‌ ಅನ್ನು ಜಂಟಿಯಾಗಿ ಭಾರತ ದಲ್ಲೇ ಇನ್ಮುಂದೆ ತಯಾರು ಮಾಡುವ ತೀರ್ಮಾನ. ಎಫ್‌414 ಎಂಜಿನ್‌ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಈ ಎಂಜಿನ್‌ ಅನ್ನು ಯುದ್ಧ ವಿಮಾನಗಳಲ್ಲಿ ಬಳಸಲಾಗುತ್ತದೆ. ಇನ್ಮುಂದೆ ಇದು ಭಾರತದಲ್ಲೇ ತಯಾರಾಗುತ್ತದೆ. ಮತ್ತೂಂದು ಮಹತ್ವದ ಒಪ್ಪಂದವೆಂದರೆ ಎಮ್‌ಕ್ಯೂ-9ಬಿ ಡ್ರೋನ್‌. ಇದು ಕರಾವಳಿ ರೇಖೆಯನ್ನು ಕಾಯುವ ವಿಶೇಷ ಡ್ರೋನ್‌. ಇದನ್ನು ಭಾರತಕ್ಕೆ ನೀಡಲು ಅಮೆರಿಕ ಒಪ್ಪಿದೆ. ಈ ಡ್ರೋನ್‌ನ ಮಾಲಕತ್ವ ಹೊಂದಿರುವ ಜನರಲ್‌ ಅಟೋಮಿಕ್ಸ್‌ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ-ಅಮೆರಿಕ ರಕ್ಷಣ ನಾವೀನ್ಯತೆ ಮತ್ತು ಅವಿಷ್ಕಾರಿ ಸ್ಟಾರ್ಟ್‌ಅಪ್‌ಗ್ಳಿಗೆ ಪ್ರೋತ್ಸಾಹಿಸಲು ಇಂಡಸ್‌-ಎಕ್ಸ್‌ ಎಂಬ ಸಹಯೋಗ ಮತ್ತು ಪಾಲುದಾರಿಕೆಯ ಒಪ್ಪಂದಕ್ಕೆ ಸಹಿಹಾಕಿವೆ.

ಇನ್ನು ತಂತ್ರಜ್ಞಾನ ವಲಯದಲ್ಲಿ ಮೈಕ್ರಾನ್‌ ಟೆಕ್ನಾಲಜಿ ಸಂಸ್ಥೆ ಒಂದು ನೂತನ ಚಿಪ್‌ ಅಸೆಂಬ್ಲಿ ಪ್ಲಾಂಟ್‌ ಭಾರತದಲ್ಲಿ ಸ್ಥಾಪಿಸಲು ಸಮ್ಮತಿಸಿದೆ. ಆರಂಭಿಕ ಬಂಡವಾಳ 825 ಮಿಲಿಯನ್‌ ಡಾಲರ್‌ ಹೂಡುವುದಲ್ಲದೆ ಒಟ್ಟಾರೆಯಾಗಿ 2.75 ಬಿಲಿ ಯನ್‌ ಡಾಲರ್‌ ಬಂಡವಾಳ ಹೂಡಲು ಮುಂದಾ ಗಿದೆ. ಇದರಿಂದ 5,000 ಹುದ್ದೆ ನೇರವಾಗಿ ಸೃಷ್ಟಿ ಯಾಗಲಿದೆ. ಮತ್ತೂಂದು ಮಹತ್ವದ ನಿರ್ಧಾರವೆಂದರೆ ಎಚ್‌1ಬಿ ವೀಸಾ ನವೀಕರಣಕ್ಕೆ ಭಾರತಕ್ಕೆ ಬರುವ ಆವಶ್ಯಕತೆ ಇರುವುದಿಲ್ಲ. ಅಮೆರಿಕದಲ್ಲೆ ಇದ್ದುಕೊಂಡು ನವೀಕರಿಸಬಹುದು. ಇದು ನಮ್ಮ ಐಟಿ ಬಿಟಿ ಕಂಪೆನಿಗಳಿಗೆ ಬಹಳ ಉಪಯೋಗಿ. ಅದೇ ರೀತಿ ಬಹಳ ದಿನಗಳಿಂದ ಹಾಗೆ ಉಳಿದಿದ್ದ ಬೇಡಿಕೆಯೆಂದರೆ ನಮ್ಮ ಬೆಂಗಳೂರಿನಲ್ಲೇ ಅಮೆರಿಕದ ಒಂದು ರಾಯ ಭಾರ ಕಚೇರಿ ಪ್ರಾರಂಭ ಮಾಡುವುದು. ಕನ್ನಡಿಗರು ಇನ್ನು ಚೆನ್ನೈ, ಹೈದರಾಬಾದ್‌, ಮುಂಬಯಿಗೆ ವೀಸಾಕ್ಕಾಗಿ ಹೋಗಬೇಕಾಗಿಲ್ಲ.

ಇನ್ನು ಕ್ರಿಟಿಕಲ್‌ ಮತ್ತು ಎಮರ್ಜಿಂಗ್‌ ಟೆಕ್ನಾಲಜಿ ಉಪಕ್ರಮದಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು, ಸ್ಟಾರ್ಟ್‌ಅಪ್‌ಗ್ಳು, ಖಾಸಗಿ ಸಂಸ್ಥೆಗಳು ತಂತ್ರಜ್ಞಾನ ಸಂಶೋಧನೆಯನ್ನು ಅಮೆರಿಕದ ಸಂಸ್ಥೆಗಳ ಜತೆ ಜಂಟಿಯಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕ್ವಾಂಟಮ್‌ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನೆಗೆ 2 ಮಿಲಿಯನ್‌ ಡಾಲರ್‌ ಅನುದಾನದ ವಿನೂತನ ಕಾರ್ಯಕ್ರಮಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ.

ಅದೇ ರೀತಿ ಭಾರತ ಸರಕಾರದ ಸ್ವಾಮ್ಯದ ಸೆಂಟರ್‌ ಫಾರ್‌ ಡೆವೆಲಪ್‌ಮೆಂಟ್‌ ಆಫ್‌ ಅಡ್ವಾನ್ಸಡ್‌ ಕಂಪ್ಯೂಟಿಂಗ್‌ (ಸಿ- ಡಿಎಸಿ) ಮತ್ತು ಅಮೆರಿಕದ ಅನಲಿಟಿಕ್ಸ್‌ ಮತ್ತು ಕಂಪ್ಯೂಟಿಂಗ್‌ ಸಂಸ್ಥೆಗಳು (ಎಎಸಿಐ) ಜಂಟಿಯಾಗಿ ಸಂಶೋಧನೆ ನಡೆಸುವ ಒಪ್ಪಂದ ಆಗಿದೆ. ಅಮೆರಿ ಕದ ವಿಜ್ಞಾನ ಸಂಸ್ಥೆ , ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜಂಟಿಯಾಗಿ ಸೈಬರ್‌ ಸೆಕ್ಯುರಿಟಿ ಕುರಿತು ಸಂಶೋಧನೆ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಅಮೆರಿಕದ ದೈತ್ಯ ಶಕ್ತಿಗಳಲ್ಲಿ ಒಂದಾದ ಗೂಗಲ್‌ ತನ್ನ ಕೃತಕ ಬುದ್ಧಿಮತ್ತೆ ಸಂಶೋಧನ ಕೇಂದ್ರ ಸ್ಥಾಪನೆಗೆ ಭಾರತದಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಸಮ್ಮತಿಸಿದೆ. ಸೆಮಿಕಂಡಕ್ಟರ್‌ ತಂತ್ರಜ್ಞಾನ ಭಾರತದಲ್ಲಿ ಆರಂಭಿಕ ಹಂತದಲ್ಲಿ ರುವುದರಿಂದ ಲಾಮ್‌ ರಿಸರ್ಚ್‌ ಎಂಬ ಸಂಸ್ಥೆಯು ಭಾರತದ 60,000 ಎಂಜಿನಿಯರ್‌ಗಳನ್ನು ತನ್ನ ಸೆಮಿವರ್ಸ್‌ ತರಬೇತಿ ಪ್ಲಾಟ್‌ಫಾರ್ಮ್ ಮೂಲಕ ತರಬೇತಿ ನೀಡಲು ಮುಂದಾಗಿದೆ. ಅಪ್ಲೆ„ಡ್‌ ಮೆಟೀರಿಯಲ್‌ ಸಂಸ್ಥೆ ತನ್ನ ನೂತನ ಎಂಜಿ ನಿಯರಿಂಗ್‌ ಕೇಂದ್ರವನ್ನು ಪ್ರಾರಂಭಿಸಲು 400 ಮಿಲಿಯನ್‌ ಡಾಲರ್‌ ಬಂಡವಾಳ ಹೂಡಲು ಒಪ್ಪಂದ ಮಾಡಿಕೊಂಡಿದೆ. ಇನ್ನು ಭಾರತದಲ್ಲಿ ಮೊಬೈಲ್‌ ನೆಟ್‌ವರ್ಕ್‌ನ 6ಜಿ ಟೆಕ್ನಾಲಜಿ ಅಳವಡಿಸುವ ಬಗ್ಗೆ ಒಪ್ಪಂದವಾಗಿದೆ.

ಬಾಹ್ಯಾಕಾಶ ಸಂಶೋಧನೆ ವಲಯದಲ್ಲಿ ಆದ ಮಹತ್ವದ ಒಪ್ಪಂದಗಳೆಂದರೆ ನಾಸಾ ಮತ್ತು ಇಸ್ರೋ ಬಾಹ್ಯಾಕಾಶಕ್ಕೆ ಮಾನವ ಮಿಷನ್‌ ಕುರಿತು ಜಂಟಿ ಯಾಗಿ ಸಂಶೋಧನೆ ಮಾಡಲಿದ್ದಾರೆ. ಇದರಲ್ಲಿ ನಾಸಾ ತನ್ನ ಟೆಕ್ಸಾಸ್‌ ನಗರದಲ್ಲಿರುವ ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿ ಭಾರತದ

ಗಗನ ಯಾತ್ರಿಗಳಿಗೆ ಸುಧಾರಿತ ತರಬೇತಿ ನೀಡ ಲಿದೆ, ಇದರ ಉದ್ದೇಶ ಜಂಟಿಯಾಗಿ ಭಾರತ ಮತ್ತು ಅಮೆರಿಕ ಸ್ಪೇಸ್‌ ಸ್ಟೇಶನ್‌ ಸ್ಥಾಪಿಸುವುದು. ನಾಸಾ ಇಸ್ರೋ ಈಗಾಗಲೆ ಪರಸ್ಪರ ಸಹಯೋಗದಲ್ಲಿ ತಯಾರಿಸಿದ ಸಿಂತೆಟಿಕ್‌ ಅಪರ್ಚರ್‌ ಉಪಗ್ರಹವನ್ನ (ಎನ್‌ಐಎಸ್‌ಎಆರ್‌) ಯು.ಆರ್‌.ರಾವ್‌ ಉಪ ಗ್ರಹ ಕೇಂದ್ರಕ್ಕೆ ಈ ಸಂದರ್ಭದಲ್ಲಿ ಸಮರ್ಪಿ ಸಲಾಯಿತು. ಭಾರತ ಬಾಹ್ಯಾಕಾಶ ನೀತಿ-2023ರನ್ನ ಅಮೆರಿಕ ಸ್ವಾಗತಿಸಿ ವಾಣಿಜ್ಯ ಉಪಗ್ರಹ ಉಡಾ ವಣೆ ಮಾಡುವುದರ ಬಗ್ಗೆ ಒಪ್ಪಂದ ಮಾಡಿ ಕೊಂಡಿದೆ. ಇದರಿಂದ “ಸ್ಪೇಸ್‌ ಎಕಾನಮಿ’ಯಲ್ಲಿ ಭಾರತ ಇನ್ನಷ್ಟು ಆರ್ಥಿಕವಾಗಿ ಬಲಿಷ್ಠವಾಗಲಿದೆ. 2025-26ರರಲ್ಲಿ ಚಂದ್ರಗ್ರಹಕ್ಕೆ ಮಾನವನನ್ನು ಕಳುಹಿಸುವ “ಆರ್ಟೆಮಿಸ್‌ ಒಪ್ಪಂದಕ್ಕೆ’ ಭಾರತ ಸಹಿ ಹಾಕಿ, ಅಮೆರಿಕದ ಈ ಪ್ರಯತ್ನದಲ್ಲಿ ಪಾಲುದಾರನಾಗಿದೆ.

ಪರಮಾಣು ಸಂಶೋಧನೆಗೆ ಸಂಬಂಧಿಸಿದಂತೆ ಸರಿಸುಮಾರು 140 ಮಿಲಿಯನ್‌ ಡಾಲರ್‌ ಆರಂಭಿಕ ಬಂಡವಾಳ ಹೂಡಿಕೆಯ ಮುಖಾಂತರ ಭಾರತದ ಪರಮಾಣು ಶಕ್ತಿ ಸಂಸ್ಥೆ ಮತ್ತು ಅಮೆ ರಿಕದ ಡಿಪಾರ್ಟ್‌ಮೆಂಟ್‌ ಅಫ್‌ ಎನರ್ಜಿ ಜಂಟಿ ಯಾಗಿ ಹಲವಾರು ಶಂಶೋಧನ ಕಾರ್ಯಕ್ರಮ ಗಳನ್ನು ನಡೆಸುವ ಬಗ್ಗೆ ಒಪ್ಪಂದಗಳಾಗಿವೆ.
ಭಾರತದ ಶಿಪ್‌ ಯಾರ್ಡ್‌ಗಳ ಜತೆ ಮಾಸ್ಟರ್‌ ಶಿಪ್‌ ರಿಪೇರ್‌ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ. ಇದರಿಂದ ದೊಡ್ಡ ದೊಡ್ಡ ಪ್ಯಾನಾಮ್ಯಾಕ್ಸ್‌ ರೇಂಜ್‌ ಶಿಪ್‌ಗ್ಳನ್ನ ರಿಪೇರಿ ಮಾಡುವ, ಸರ್ವಿಸ್‌ ಮಾಡುವ ತಂತ್ರಜ್ಞಾನ ನಮ್ಮ ಶಿಪ್‌ಯಾರ್ಡ್‌ಗಳಿಗೆ ದೊರೆ ಯಲಿದೆ. ಇದರಿಂದ ಹೊಸ ಹೊಸ ಆರ್ಥಿಕ ಅವಕಾಶಗಳು ಶೃಷ್ಟಿಯಾಗಲಿವೆ.
ಕೇವಲ ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ರಕ್ಷಣ ವಲಯದಲ್ಲಿ ಆದ ಒಪ್ಪಂದಗಳು ಇವು. ಇನ್ನೂ ಹಲವಾರು ಆಯಾಮದಲ್ಲಿ ಅಂದರೆ ಬಿಡಿಭಾಗ ಗಳ ತಯಾರಿಕೆ, ಔಷಧ, ಅರೋಗ್ಯ, ಕ್ಲೀನ್‌ ಎನರ್ಜಿ, ಕ್ಯಾನ್ಸರ್‌ ಕ್ಯೂರ್‌ ಟೆಕ್ನಾಲಜಿ ಹೀಗೆ ಭಾರತಕ್ಕೆ ಬಹ ಳಷ್ಟು ಅನುಕೂಲಕರವಾದ ಒಪ್ಪಂದಗಳು ಆಗಿವೆ.

ಇನ್ನು ಅತ್ಯಂತ ಸಂತೋಷದ ವಿಷಯವೆಂದರೆ ಭಾರತದ ಇತಿಹಾಸ ಮತ್ತು ಸಂಸ್ಕೃತಿ ಸಂಶೋಧನೆಗೆ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿದ್ದ “ಸ್ವಾಮಿ ವಿವೇಕಾನಂದ ಚೇರ್‌” ಮರುಸ್ಥಾಪಿಸಲಾಗಿದೆ.

ಹಿಂದೆಂದು ಸಿಗದ ಮಹತ್ವ ಮತ್ತು ಪ್ರಾಮುಖ್ಯ ಭಾರತಕ್ಕೆ ತನ್ನ ಅಮೃತಕಾಲದಲ್ಲಿ ಸಿಕ್ಕಿದೆ. ಇದರ ದೂರದೃಷ್ಟಿಯ ಪ್ರಯೋಜನಗಳು ಮುಂಬರುವ ದಶಕದಲ್ಲಿ ನಮಗೆ ಸಿಗಲಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಸಂಪನ್ಮೂಲ ಸೃಷ್ಟಿ, ಕೈಗಾರಿಕೆಗಳು, ಉತ್ಪಾ ದನೆ ಹೀಗೆ ಎಲ್ಲ ಆಯಾಮಗಳಲ್ಲೂ ಭಾರತಕ್ಕೆ ದೊಡ್ಡ ಮಟ್ಟದ ಅವಕಾಶಗಳು ಹರಿದು ಬರುತ್ತಿವೆ. ಭಾರತ ಅಂತಾರಾಷ್ಟ್ರೀಯ ಸ್ತರದಲ್ಲಿ ಪ್ರಮುಖ ಪಾತ್ರ ಮುಂಬರುವ ದಿನಗಳಲ್ಲಿ ವಹಿಸಲಿದೆ. ಭಾರತವನ್ನು “ವಿಶ್ವಗುರು’ ಆಗಿಸಬೇಕು ಎಂಬ ಗುರಿ ಧ್ಯೇಯದೊಂದಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಇವೆಲ್ಲವೂ ಸಾಧ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವೇ ಹೌದು.

 ಸುರೇಶ್‌ ನೆಲಮಂಗಲ

 

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.