ಅನಕ್ಷರಸ್ಥ ಪೋಷಕರ ಮಕ್ಕಳ ಕೈಗೆಟುಕದ ಖಾಸಗಿ ಶಿಕ್ಷಣ !- ಒಂದು ಚಿಂತನೆ
ಶಿಕ್ಷಣ ಅಂದು ಇಂದು
Team Udayavani, Aug 22, 2019, 8:34 PM IST
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಶಿಕ್ಷಣವೂ ಹೊರತಾಗಿಲ್ಲ. ಗಾಂಧೀಜಿಯವರು ಹೇಳುವಂತೆ “ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ”.
ಆದರೆ ಇಂದಿನ ಶಿಕ್ಷಣ ಪದ್ಧತಿಯ ಕುರಿತಂತೆ ಬಹುಜನರಿಗೆ ಬೇಸರವಿದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗದ ಕನಸನ್ನು ಹೇರುತ್ತಿದೆ ಹೊರತು ನೈತಿಕ ಶಿಕ್ಷಣದ ಕೊರತೆ ಕಾಣುತ್ತಿದೆ ಎಂಬ ವಾದ ಎಲ್ಲಡೆಯಿಂದಲೂ ಕೇಳಿಬರುತ್ತಿದೆ.
ದೇಶದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗ ಐದನೇ ತರಗತಿಯವರೆಗೆ ಇಂಗ್ಲೀಷನ್ನು ಭಾಷೆಯಾಗಿ ಕಲಿಸಲಾಗುತ್ತಿತ್ತು. ಅಂದು ಕನ್ನಡ ಮಾತೃ ಭಾಷೆಯಲ್ಲಿ ಕಲಿತವರು ಎತ್ತರಕ್ಕೆ ಬೆಳೆದು ಅನೇಕ ಸಾಧನೆಗಳನ್ನು ಮಾಡಿರಲ್ಲಿಲ್ಲವೇ? ಅಂದಿನ ಶಿಕ್ಷಣ ಸಾಮರ್ಥ್ಯ ಹಾಗಿತ್ತು.
ಅಂದು ಬಡವ, ಶ್ರೀಮಂತ ಎಂಬ ಭೇದ ಭಾವ ಶಿಕ್ಷಣ ವ್ಯವಸ್ಥೆಯಲ್ಲಿರಲ್ಲಿಲ್ಲ. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನವಾಗಿ ಶಿಕ್ಷಣ ಕಲಿಯುವ ಅವಕಾಶ . ಇದರೊಂದಿಗೆ ಮಕ್ಕಳ ನೈತಿಕ ಗುಣಮಟ್ಟದ ಬೆಳವಣಿಗೆಗೆ ಸಹಕಾರಿಯಾಗಿತ್ತು.
ಸ್ವಾತಂತ್ರ್ಯ ನಂತರದ ಶಿಕ್ಷಣ ಪದ್ಧತಿಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಎಲ್ಲರೂ ಒಂದೇ ಶಾಲೆಯಲ್ಲಿ ಕಲಿಯುವ, ಒಂದೇ ಪಠ್ಯ ಕ್ರಮವನ್ನು ಬೋಧಿಸುವ, ಒಂದೇ ಮಾಧ್ಯಮದಲ್ಲಿ ಕಲಿಯುವ ಒಂದೇ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುವ ಬ್ರಿಟಿಷ್ ಶಿಕ್ಷಣ ಕ್ರಮ ಕೊನೆಯಾಯಿತು. ಬದಲಾಗಿ ಉಳ್ಳವರ ಮಕ್ಕಳಿಗಾಗಿಯೇ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡವು.
ಈ ವ್ಯವಸ್ಥೆಯಲ್ಲಿ ‘ಇಂಗ್ಲಿಷ್’ ಭಾಷೆ ಮಾತನಾಡಲು ಮತ್ತು ಬರೆಯಲು ಬಾರದಿರುವವರನ್ನು ‘ಅನಕ್ಷರಸ್ಥ’ರು ಎಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಇಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಇವರ ದೃಷ್ಟಿಯಲ್ಲಿ ‘ಅನಕ್ಷರಸ್ಥ’ ಪೋಷಕರ ಮಕ್ಕಳು ಇಂತಹ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುವಂತಾಯಿತು. “ವಿದ್ಯಾದಾನ ಮಹಾದಾನ” ಎಂಬ ಮೌಲ್ಯ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣದಾಗಿದೆ.
ಸಮಾಜದಲ್ಲಿ ಸಾಧನೆ ಮಾಡಲು ಪ್ರತಿಭೆ, ಪರಿಶ್ರಮ ಮತ್ತು ವ್ಯವಹಾರ ಜ್ಞಾನ ಮುಖ್ಯವಾಗುತ್ತದೆಯೇ ಹೊರತು ಭಾಷೆ ಅಲ್ಲ. ಭಾಷೆ ಎಂಬುದು ನಮ್ಮ ಸಂವಹನಕ್ಕೆ ಅಗತ್ಯವಾಗಿರುವ ಮಾಧ್ಯಮಷ್ಟೇ ಎಂಬುದನ್ನು ಈ ವ್ಯವಸ್ಥೆಯಲ್ಲಿ ಉಸಿರಾಡುತ್ತಿರುವವರಿಗೆ ತಿಳಿಹೇಳುವವರು ಯಾರು ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.