ಇನ್ನು ಆಧಾರ್‌ ಇದ್ದರೆ ಎಲ್ಲವೂ ನಿರಾಳ


Team Udayavani, Jan 7, 2017, 3:30 AM IST

Aadhar-6-1.jpg

ಯಾವುದೇ ಕಾರ್ಯ ಮಾಡಬೇಕಾದರೂ ನಮ್ಮಲ್ಲಿ ಒಂದೋ ಮಾಡಿ ಮುಗಿಸಬೇಕೆಂಬ ಛಲವಿರಬೇಕು. ಇಲ್ಲ ಎಂದರೆ ಬೇರೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಅನಿವಾರ್ಯವಾದಾಗ ಮಾತ್ರ ನಾವು ಕಾರ್ಯ ಮಾಡುವ ಮನಸ್ಸು ಮಾಡುವುದಷ್ಟೇ. ಇಲ್ಲದಿದ್ದರೆ ಸುಲಭದ ದಾರಿ ಹುಡುಕುವವರು ನಾವೆಲ್ಲಾ. 80-90ರ ದಶಕದಲ್ಲಿ ಬ್ಯಾಂಕಿನಲ್ಲಿ ವ್ಯವಹರಿಸುವುದೆಂದರೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಕೇವಲ ಎರಡು ನಿಮಿಷದಲ್ಲಿ ಮುಗಿಸಬಹುದಾದ ಕಾರ್ಯಕ್ಕೆ ಗಂಟೆಗಟ್ಟಲೆ ಕಾದು ಕುಳಿತದ್ದುಂಟು.

ನ್ಯೂಯಾರ್ಕ್‌ನಲ್ಲಿ ಮೊದಲ ಎಟಿಎಂ 
1993ರಲ್ಲಿ ಖಾಸಗಿ ಬ್ಯಾಂಕುಗಳು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಿದವು. ಇವತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲದೆ ಸುಮಾರು 25 ಖಾಸಗಿ ಬ್ಯಾಂಕುಗಳು ಮತ್ತು ದೇಶಿ ಬ್ಯಾಂಕುಗಳು ನಮ್ಮಲ್ಲಿ ವ್ಯವಹಾರವನ್ನು ನಡೆಸುತ್ತಿವೆ. ತದನಂತರ ಬ್ಯಾಂಕಿಂಗ್‌ ಸೇವೆಯಲ್ಲೂ ಹೊಸ ಹೊಸ ಆವಿಷ್ಕಾರಗಳಾದವು. ತಂತ್ರಜ್ಞಾನದ ಕರಾಮತ್ತಿನಿಂದಾಗಿ ಬ್ಯಾಂಕಿಂಗ್‌ ಸೇವಾ ವ್ಯವಸ್ಥೆಯೇ ಬದಲಾಯಿತು. ಎಟಿಎಂ ಅಥವಾ ಅಟೋಮೇಟೆಡ್‌ ಟೆಲ್ಲರ್‌ ಮೆಷಿನ್‌ ಬ್ಯಾಂಕಿನಲ್ಲಿ ಹಣ ಪಡೆಯಲು ಸಾಲಿನಲ್ಲಿ ನಿಂತುಕೊಳ್ಳಬೇಕಾದ ನಮ್ಮ ತಲೆನೋವನ್ನು ದೂರ ಮಾಡಿತು. ನಗದು ಯಂತ್ರ ಅಥವಾ ಎಟಿಎಂ ತಂತ್ರಜ್ಞಾನ 50 ವರ್ಷಗಳಷ್ಟು ಹಳೆಯದು. 1969ರಲ್ಲಿ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಮೊತ್ತ ಮೊದಲ ಎಟಿಎಂ ಯಂತ್ರ ಸ್ಥಾಪಿತವಾಯಿತು. ಇವತ್ತು ಬ್ಯಾಂಕು ತೆರೆದಿರಲಿ, ತೆರೆಯದಿರಲಿ, ಹಣ ಪಡೆಯುವ ವ್ಯವಹಾರ ಮಾತ್ರ ಅಚ್ಚುಕಟ್ಟಾಗಿ ನಡೆಯುತ್ತಲಿದೆ. ಬ್ಯಾಂಕ್‌ಗೆ ರಜೆ ಇದ್ದರೆ ಏನು ಮಾಡುವುದಪ್ಪ ಎಂಬ ಚಿಂತೆ ಮಾಡಬೇಕಾಗಿಲ್ಲ. 

ಇತ್ತೀಚಿನವರೆಗೂ ಒಂದು ಎಟಿಎಂನಲ್ಲೇನಾದರೂ ಕ್ಯೂ ಇದೆಯಾದರೆ ಹತ್ತಿರದ ಕ್ಯೂ ಇಲ್ಲದ ಎಟಿಎಂ ಅನ್ನು ಹುಡುಕಿ ಹೋಗುವವರು ನಾವು. ಮೊದಲೆಲ್ಲಾ ಬ್ಯಾಂಕ್‌ನ ಕಚೇರಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ನಗದು ಯಂತ್ರ ಇವತ್ತು ವಿಮಾನ ನಿಲ್ದಾಣ, ಶಾಪಿಂಗ್‌ ಮಾಲ್‌, ರಸ್ತೆ ಬದಿಯಲ್ಲಿ ಹೀಗೆ ಎಲ್ಲೆಡೆ ಕಾಣುತ್ತಿವೆ. ಎಟಿಎಂ ಅಥವಾ ನಗದು ಯಂತ್ರ ಅತ್ಯಂತ ಜನಪ್ರಿಯ ಸಾಧನ. ಇವತ್ತು ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಬ್ಯಾಂಕಿಂಗ್‌ ವ್ಯವಹಾರ ನೆಟ್‌ ಮೂಲಕ ಸಾಧ್ಯವಾಗಿದೆ. ಸ್ಮಾರ್ಟ್‌ ಫೋನ್‌ ಮೂಲಕ ಸಾಧ್ಯವಾಗಿದೆ. ಎಟಿಎಂ ಯಂತ್ರವು ಕಾರ್ಡ್‌ ನೀಡಿದ ಕೂಡಲೇ ನಮ್ಮನ್ನು ಬ್ಯಾಂಕಿಗೆ ಸ್ವಾಗತಿಸುತ್ತದೆ. ಬಳಕೆಯಾದ ನಂತರ ನಿರ್ಗಮನದ ವೇಳೆ ಕೃತಜ್ಞತೆ ತಿಳಿಸುತ್ತದೆ. ಇದನ್ನು ಕೇಳುವಾಗ ನಮಗೆ ಬಹಳ ಖುಷಿಯಾಗಿರುವುದುಂಟು. ಈ ರಾಜೋಪಚಾರ ನಮಗೆ ಬ್ಯಾಂಕಿನಲ್ಲೂ ಸಿಗಲಿಕ್ಕಿಲ್ಲವೇನೋ? ಕಳೆದೆರಡು ತಿಂಗಳಿನಿಂದ ಈ ಸೌಲಭ್ಯಕ್ಕೆ ಸ್ವಲ್ಪ ತೊಡಕಾಗಿದೆ.

ಹಣದ ವ್ಯವಹಾರ ಇಂಟರ್‌ನೆಟ್‌ ಮೂಲಕ, ಸ್ಮಾರ್ಟ್‌ ಫೋನ್‌ ಮೂಲಕ ಸಾಧ್ಯವಾದರೂ ನಾವು ನಗದು ವ್ಯವಹಾರವನ್ನು ಮಾತ್ರ ಬಿಟ್ಟಿಲ್ಲ. ವ್ಯವಹಾರ ನಗದಲ್ಲೇ ಆಗುವುದರಿಂದ ತಂತ್ರಜ್ಞಾನದ ಕಿರಿಕಿರಿ ಯಾಕೆ ಎಂದು ಯೋಚಿಸುತ್ತೇವೆ. ನೋಟು ನೀಷೇಧದ ನಂತರ ಸುಮಾರು 30-35 ಕೋಟಿ ಜನರು ಹಣ ಪಡೆಯಲು ಕ್ಯೂನಲ್ಲಿ ಗಂಟೆಗಟ್ಟಲೆ ಕಾದದ್ದನ್ನು ನೋಡಿ ಪಾಠ ಕಲಿತಿದ್ದೇವೆ. ಹಣಕ್ಕೋಸ್ಕರ ಜನರು ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರಾಯಶಃ ನಮ್ಮ ದೇಶವು ಈ ಹಿಂದೆ ಕಂಡ ನೋಟಿನ ಅಮಾನ್ಯತೆ (40 ವರ್ಷಗಳ ಹಿಂದೆ) ಈಗಿನಷ್ಟು ಕಷ್ಟಕರವಾಗಿರಲಿಲ್ಲ. ಇವತ್ತು ಕಷ್ಟ ಪಟ್ಟಷ್ಟು ಜನರು ಯಾವತ್ತೂ ಪಟ್ಟಿರಲಿಕ್ಕಿಲ್ಲ. ಅಂದು ಹಣವೇ ಎಲ್ಲವೂ ಆಗಿರಲಿಲ್ಲ. ಆದರೆ ಈಗ ಹಣವೇ ಎಲ್ಲ. ಹಣವಿಲ್ಲದಿದ್ದರೆ ಏನೂ ಇಲ್ಲ. ಇನ್ನು ನಮ್ಮ ಕೊಳ್ಳುಬಾಕ ಪರಿಸ್ಥಿತಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೂ ಈ ನೀತಿಯನ್ನು ಬೆಂಬಲಿಸುವ ಹಲವರಲ್ಲಿ ನಾವು ಸೇರಿಕೊಂಡಿದ್ದೇವೆ. 

ತಂತ್ರಜ್ಞಾನ ಬಳಸುವುದಕ್ಕೆ ಹಿಂದೇಟು
ನಮ್ಮ ಕೇಂದ್ರ ಬ್ಯಾಂಕಿನ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 26 ಕೋಟಿ ಕ್ರೆಡಿಟ್‌ ಕಾರ್ಡ್‌ ಮತ್ತು 71 ಕೋಟಿ ಡೆಬಿಟ್‌ ಕಾರ್ಡ್‌ಗಳು ಬಳಕೆಯಲ್ಲಿವೆ. ಆದರೆ ಹೆಚ್ಚಿನ ಅಂದರೆ ಶೇ.85ರಷ್ಟು ಡೆಬಿಟ್‌ ಕಾರ್ಡ್‌ ವ್ಯವಹಾರ ಬರೀ ಹಣ ಪಡೆಯಲು ಮಾತ್ರ ನಡೆಯುತ್ತಿದೆ. ಬ್ಯಾಂಕಿನ ಉತ್ಪನ್ನದಿಂದ ಬರಬಹುದಾದ ಇತರ ಸೇವೆಗಳನ್ನು ಬಳಸುವಲ್ಲಿ ನಾವು ಮನಸ್ಸು ಮಾಡುತ್ತಿಲ್ಲ. ಹೊಸತನಕ್ಕೆ ಒಗ್ಗಿಕೊಳ್ಳುವುದರಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಆದರೆ, ಈಗ ಅನಿವಾರ್ಯವಾಗಿ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡುಗಳನ್ನು ಅಂಗಡಿಗಳಲ್ಲಿ ಬಳಸತೊಡಗಿದ್ದೇವೆ. ಏಕೆಂದರೆ ಕೈಯಲ್ಲಿ ಹಣವಿಲ್ಲ.ನಾವು ಬದಲಾಗದಿದ್ದರೆ ವ್ಯವಸ್ಥೆಯೇ ನಮ್ಮನ್ನು ಬದಲಾಯಿಸುತ್ತದೆ.

ಇನ್ನು ಆಧಾರ್‌ – ಬೆರಳಚ್ಚೇ ಆಧಾರ
ಇತ್ತೀಚೆಗೆ ಸರಕಾರ ಬಿಡುಗಡೆ ಮಾಡಿದ ಆಧಾರ್‌ ಆಧಾರಿತ ಭೀಮ್‌ ಆ್ಯಪ್‌ ನಮ್ಮ ಎಲ್ಲಾ ತರಹದ ಕಾರ್ಡ್‌ ಬಳಕೆಗೆ ಮುಕ್ತಿ ನೀಡಲಿದೆ. ಏನನ್ನಾದರೂ ಖರೀದಿಸುವ ಅಥವಾ ಸೇವೆ ಪಡೆಯುವ ಗ್ರಾಹಕನು ತನ್ನ ಆಧಾರ್‌ ಸಂಖ್ಯೆಯನ್ನು ಆ್ಯಪ್‌ಗೆ ನೀಡಬೇಕು. ಆಗ ಬ್ಯಾಂಕುಗಳ ಆಯ್ಕೆ ಅಲ್ಲಿ ಬರುತ್ತದೆ. ತನ್ನ ಖಾತೆಯಿಂದ ಬ್ಯಾಂಕ್‌ ಅನ್ನು ಅಲ್ಲಿ ಗ್ರಾಹಕ ಆಯ್ಕೆ ಮಾಡಬೇಕು. ಬ್ಯಾಂಕು ಯಾವುದೆಂದು ಗೊತ್ತಿದೆ. ನಮ್ಮಲ್ಲಿ ಒಂದೋ ಎರಡೋ ಬ್ಯಾಂಕ್‌ ಖಾತೆಗಳಿರುವುದು. ಯಾಕೆಂದರೆ ನಮ್ಮಲ್ಲಿರುವುದು ಲೆಕ್ಕದ ಖಾತೆ, ಲೆಕ್ಕದ್ದೇ ಹಣ. ಇದೇ ಸಂದರ್ಭದಲ್ಲಿ ಬೆರಳ ಗುರುತುಗಳನ್ನು ಬಯೋಮೆಟ್ರಿಕ್‌ ರೀಡರ್‌ಗೆ ನೀಡಿದರೆ ಸಾಕು. ನಮ್ಮ ಬೆರಳ ಗುರುತೇ ನಮ್ಮ ‘ಪಾನ್‌ ಕಾರ್ಡ್‌.’ ನಾವು ನೀಡಬೇಕಾದ ಹಣ ವರ್ತಕನಿಗೆ ತಲುಪುತ್ತದೆ. ಸ್ಮಾರ್ಟ್‌ ಫೋನ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಅಥವಾ ನಗದು ರಹಿತ ವ್ಯವಸ್ಥೆಗೆ ಬೇಕಾದ ಸ್ವೆ„ಪ್‌ ಮೆಷಿನ್‌ ಸಹ ಬೇಕಿಲ್ಲ. ಬೆರಳಚ್ಚನ್ನು ನಕಲು ಮಾಡಲು ಸಾಧ್ಯವಿಲ್ಲದ ಕಾರಣ ಈ ಡಿಜಿಟಲ್‌ ವ್ಯವಸ್ಥೆ ಅತ್ಯಂತ ಸುರಕ್ಷಿತ ಎಂಬುದು ಪರಿಣತರ ಅಭಿಪ್ರಾಯ.

ಈಗಾಗಲೇ ಸರಕಾರ ತಾನು ಹಿಂಪಡೆದಷ್ಟು ನೋಟನ್ನು ಪುನಃ ಮುದ್ರಿಸುವುದಿಲ್ಲ ಎಂಬ ನೀತಿ ತಾಳಿದೆ. ಇವತ್ತಲ್ಲ ನಾಳೆ ನಮ್ಮನ್ನು ಡಿಜಿಟಲ್‌ನತ್ತ ಮೊರೆ ಹೋಗದೆ ಬಿಡುವುದಿಲ್ಲವೆನ್ನುವಂತಿದೆ. ಹಾಗಾದರೆ ಇನ್ನು ಉಳಿದಿರುವುದೊಂದೇ ದಾರಿ. ಖಾತೆದಾರನಿಗೆ ತಮ್ಮ ಖಾತೆಯಿಂದ ಹಣವನ್ನು ಹಿಂದಕ್ಕೆ ಪಡೆಯಲು ಈಗಿರುವ ಮಿತಿ ಮತ್ತಷ್ಟು ದಿನಗಳ ಕಾಲ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳದೆ ಬೇರೆ ದಾರಿ, ಬೇರೆ ಉಪಾಯವೇ ಇಲ್ಲವಾಗಿದೆ.

ಆರ್ಥಿಕ ನೀತಿ ಹೇಳುವುದೇನು?
ಹೊಸ ಉಪಾಯಕ್ಕೆ ಒಗ್ಗಿಕೊಳ್ಳಲು ಜನರಿಗೆ ಸಮಯಾವಕಾಶ ಬೇಕಾಗಿದೆ. ಹೊಸ ತಂತ್ರಜ್ಞಾನದ ಬಗೆಗೆ ನಮಗೆ ಪರಿಪೂರ್ಣ ಅರಿವಿರಬೇಕಾಗುತ್ತದೆ. ಬಳಕೆಯ ಬಗೆಗೆ ಅರಿವು, ತರಬೇತಿ ಕಾರ್ಯಕ್ರಮ ಅತಿ ಅಗತ್ಯ. ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ.8ನಷ್ಟು ದೇಶದಲ್ಲಿ ನಗದು ಇರಬೇಕೆಂದು ಬಲಿಷ್ಠ ಆರ್ಥಿಕ ನೀತಿ ಹೇಳುತ್ತದೆ. ಇವತ್ತು ನಮ್ಮ 150 ಲಕ್ಷ ಕೋಟಿ ಆಂತರಿಕ ಉತ್ಪನ್ನದಲ್ಲಿ 17 ಲಕ್ಷ ಕೋಟಿ ಅಂದರೆ ಶೇ.12ರಷ್ಟು ನಗದು ನಮ್ಮಲ್ಲಿದೆ. 1999ರ ಸಮಯದಲ್ಲಿ ನಮ್ಮ ದೇಶದಲ್ಲಿ ನಗದಿನ ಪ್ರಮಾಣ ಒಟ್ಟು ಆಂತರಿಕ ಉತ್ಪನ್ನದ 9.4ರಷ್ಟಿತ್ತು. ನಗದು ಹರಿವಿನ ಪ್ರಮಾಣ ಕುಗ್ಗಿಸಲು ಇರುವುದೊಂದೇ ದಾರಿ- ಜನರನ್ನು ನಗದು ವ್ಯವಹಾರದಿಂದ ನಗದು ರಹಿತ ವ್ಯವಹಾರಕ್ಕೆ ಪ್ರೇರೇಪಿಸುವುದು. ಕಪ್ಪು ಹಣ ಅಳಿಯಲಿ, ಅಳಿಯದಿರಲಿ, ಚಿಂತೆ ಬೇಡ. ಪಾರದರ್ಶಕ ವ್ಯವಹಾರ ಪ್ರಾಮಾಣಿಕತೆಗೆ ಹೆದ್ದಾರಿ. ಡಿಜಿಟಲ್‌ ತಂತ್ರಜ್ಞಾನದ ಬಳಕೆ ಹೆಚ್ಚಾದಲ್ಲಿ ಯುವಕರಿಗೆ ಸ್ಟಾರ್ಟಪ್‌ ಕಂಪನಿಗಳನ್ನು ಪ್ರಾರಂಭಿಸಲು ಉಜ್ವಲ ಅವಕಾಶ ಸೃಷ್ಟಿಯಾಗಲಿದೆ. ಈಗಾಗಲೇ ಭಾರತವು ನವೋದ್ಯಮಗಳ ಅಭಿವೃದ್ಧಿ ಪಟ್ಟಿಯಲ್ಲಿ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ದಿನನಿತ್ಯ ಸರಾಸರಿ 4 ಸ್ಟಾರ್ಟಪ್‌, ವಾರ್ಷಿಕವಾಗಿ ಸರಾಸರಿ 800 ಸ್ಟಾರ್ಟಪ್‌ ಉದ್ಯಮ ಭಾರತದಲ್ಲಿ ಬೆಳೆಯುತ್ತಿದೆ. 

ಶೇ.72ರಷ್ಟು ಸ್ಟಾರ್ಟಪ್‌ ಮಾಲೀಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 2014-15ರ ಸಾಲಿಗೆ ಸ್ಟಾರ್ಟಪ್‌ಗ್ಳ ಸಂಖ್ಯೆ ಶೇ.40ರಷ್ಟು ಹೆಚ್ಚಿದೆ. ಅದರಲ್ಲಿ ಶೇ.50ರಷ್ಟು ಸ್ಟಾರ್ಟಪ್‌ಗ್ಳು ಇ-ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದವು. ನಾವು ಡಿಜಿಟಲ್‌ ಆಗುವುದರೊಂದಿಗೆ ಉದ್ಯೋಗ ರಹಿತವಾಗಿಯೂ ಅಭಿವೃದ್ಧಿ ಸಾಧ್ಯವಾಗಬಹುದು ಎಂಬ ನಮ್ಮ ಭರವಸೆ ಇಮ್ಮಡಿಗೊಂಡಿದೆ. ಡಿಜಿಟಲ್‌ ವ್ಯವಹಾರ ಭಾರತವನ್ನು ಹೊಸ ದಿಕ್ಕಿಗೆ ಕರೆದುಕೊಂಡು ಹೋಗಬಲ್ಲದು ಎಂಬ ನಂಬಿಕೆ, ಲೆಕ್ಕಚಾರವಿದ್ದರೂ ಇದನ್ನು ಬರುವ ದಿನಗಳೇ ನಿರ್ಧಾರ ಮಾಡಲಿವೆ. ಇನ್ನು ಸರ್ಕಾರ ಬ್ಯಾಂಕಿಗೆ ಬಂದ ಹಣವನ್ನು ಜನರಿಗೆ ಕೊಡಲು ಸಾಧ್ಯವಾಗದೆ ಇರುವ ಕಾರಣಕ್ಕಾಗಿ ಕ್ಯಾಶ್‌ಲೆಸ್‌ ವ್ಯವಹಾರ ಎಂಬ ಹೊಸ ಮಂತ್ರವನ್ನು ತೇಲಿಬಿಟ್ಟಿದೆ ಎಂಬ ಆರೋಪಕ್ಕೂ ಗುರಿಯಾಗಿದೆ. ಏನೆ ಆಗಲಿ ನೋಟು ಬ್ಯಾನ್‌ ವಿಚಾರ ಜನರು ದೇಶದಲ್ಲಿ ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ವರ್ತಿಸುವಂತೆ ಮಾಡಿದೆ. ದಿನ ಕಳೆದಂತೆ ಮತ್ತಷ್ಟು ಬೆಳಕಿಗೆ ಬಾರದ ಸಂಗತಿಗಳೂ ಬಯಲಾಗುವ ಸಾಧ್ಯತೆಗಳಿವೆ. 

– ರಾಘವೇಂದ್ರ ರಾವ್‌ ಬೈಲ್‌

ಟಾಪ್ ನ್ಯೂಸ್

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Bidar: ಗುತ್ತಿಗೆದಾರ ಸಚಿನ್‌ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ

‌Bidar: ಗುತ್ತಿಗೆದಾರ ಸಚಿನ್‌ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ

8(1

Mangaluru: ಪಾಲಿಕೆ ಚುನಾವಣೆ ಅನುಮಾನ?

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

6

Karkala: ಇಳಿಜಾರಿನಲ್ಲಿ ಯು-ಟರ್ನ್; ಅತ್ತೂರು ರಸ್ತೆಯಲ್ಲಿ ಅಪಾಯ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.