ನಾಲ್ಕನೇ ಬಾರಿಯೂ ನಾಯಕಿಯಾದ ಮರ್ಕೆಲ್‌


Team Udayavani, Sep 29, 2017, 10:51 AM IST

Markela.jpg

ವಿಶ್ವದ ಆರ್ಥಿಕತೆಯಲ್ಲಿ ಅತಿ ದೊಡ್ಡ ನಾಲ್ಕನೇ ರಾಷ್ಟ್ರ ಹಾಗೂ ಯುರೋಪ್‌ ಒಕ್ಕೂಟದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ
ಪ್ರಭಾವಿಯಾದ ಜರ್ಮನಿಯನ್ನು 12 ವರ್ಷಗಳ ಕಾಲ ಆಳಿದ್ದ ದಿಟ್ಟ ಮಹಿಳೆ ಏಂಜೆಲಾ ಮರ್ಕೆಲ್‌ ಮತ್ತೂಮ್ಮೆ ನಾಲ್ಕನೇ
ಅವಧಿಗೆ ಪ್ರಧಾನಿಯಾಗಿ (ಚಾನ್ಸಲರ್‌) ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಭಾನುವಾರ ನಡೆದ ಮತ ಎಣಿಕೆಯಲ್ಲಿ
ಏಂಜೆಲಾ ಮರ್ಕೆಲ್‌ ನೇತೃತ್ವದ ಕ್ರಿಶ್ಚಿಯನ್‌ ಡೆಮಾಕ್ರಟಿಕ್‌ ಯೂನಿಯನ್‌ (ಸಿಡಿಯು) ಹಾಗೂ ಕ್ರಿಶ್ಚಿಯನ್‌ ಸೋಷಿಯಲ್‌
ಯೂನಿಯನ್‌ ಶೇ.33ರಷ್ಟು ಮತ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಶ್ವದಲ್ಲೇ ಯಾವುದೇ ಒಂದು ಪಕ್ಷವು
ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವುದು ಅಪರೂಪದ ಸಂಗತಿ.

ಚುನಾವಣೆ ಫ‌ಲಿತಾಂಶ
ಚುನಾವಣೆ ಫ‌ಲಿತಾಂಶವನ್ನು ಅವಲೋಕಿಸಿದರೆ ಏಂಜೆಲಾ ಗೆಲುವನ್ನು ರಾಜಕೀಯವಾಗಿ ಹಿನ್ನಡೆ ಎಂದೇ ಹೇಳಬಹುದಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಸಿಡಿಯು ಪಕ್ಷವು ಅತಿ ಕಡಿಮೆ ಮತ (ಶೇ.33) ಪಡೆದಿದೆ. ಕಳೆದ 2013ರ ಚುನಾವಣೆಯಲ್ಲಿ ಏಂಜೆಲಾ ನೇತೃತ್ವದ ಸಿಡಿಯು ಮೈತ್ರಿ ಪಕ್ಷವು ಶೇ.41ರಷ್ಟು ಮತ ಪಡೆದಿತ್ತು. ಇನ್ನು ಪ್ರಬಲ ವಿರೋಧ ಪಕ್ಷವಾದ ಸೋಷಿಯಲ್‌ ಡೆಮಾಕ್ರಟಿಕ್‌ ಯೂನಿಯನ್‌ (ಎಸ್‌ಡಿಪಿ) ಶೇ.20.5 ಮತ ಪಡೆದು ಕಳೆದ ಬಾರಿಗಿಂತ ಶೇ.5.2 ಮತಗಳ ಹಿನ್ನಡೆ ಸಾಧಿಸಿದೆ. ಅಂದರೆ ಈ ಎರಡು ಪ್ರಬಲ ಪಕ್ಷಗಳ ಮತಗಳನ್ನು (ಶೇ.12) ದೋಚಿರುವ ಆಲóನೇಟಿವ್‌ ಫಾರ್‌ ಜರ್ಮನ್‌(ಎಎಫ್ಡಿ) ಪ್ರಮುಖ ಪಾತ್ರ ವಹಿಸಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ¨æ “We Can Change Garmany’ ಎಂಬ ಘೋಷವಾಕ್ಯದಡಿ ಕ್ರಾಂತಿಕಾರಿ ನಿಲುವುಗಳೊಂದಿಗೆ ಜನ್ಮತಾಳಿದ ಎಎಫ್ಡಿ ಕಡಿಮೆ ಅವಧಿಯಲ್ಲಿ ಶೇ.12 ಮತ ಪಡೆದು ಸಂಸತ್‌ ಪ್ರವೇಶಿಸುತ್ತಿರುವುದು ದೊಡ್ಡ ಸಾಧನೆ ಎಂದೇ ಹೇಳಬಹುದಾಗಿದೆ.

ಮೈತ್ರಿ ಸರ್ಕಾರ
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಏಂಜೆಲಾ ಮರ್ಕೆಲ್‌ ನೇತೃತ್ವದ ಪಕ್ಷವು ಇತರೆ ಪಕ್ಷಗಳ ನೆರವು ಪಡೆದು
ಸರ್ಕಾರವನ್ನು ರಚಿಸಬೇಕಾಗಿದೆ. ಎಎಫ್ಡಿ ಪಕ್ಷ ಜೊತೆಗೆ ಇತರ ಪಕ್ಷಗಳ ವಿಶ್ವಾಸ ಪಡೆದು ಸರ್ಕಾರ ರಚಿಸುವುದಾಗಿ ಏಂಜೆಲಾ ತಿಳಿಸಿದ್ದಾರೆ. ಈ ಎರಡು ಪಕ್ಷಗಳು ಸೈದ್ಧಾಂತಿಕವಾಗಿ ವಿಭಿನ್ನ ಧೊರಣೆಗಳನ್ನು ಹೊಂದಿದೆ. ಈ ಪಕ್ಷದೊಂದಿಗೆ ಏಂಜೆಲಾ ಮೈತ್ರಿಯು ಅಷ್ಟೊಂದು ಸುಲಭವಲ್ಲ. ಏಂಜೆಲಾ ಮರ್ಕೆಲ್‌ ಅವರ ಮುಂದಿನ ಹಾದಿಗಳು ಮುಳ್ಳಿನ ಹಾದಿಯಿಂದ ಕೂಡಿವೆ ಹಾಗೂ ಇದೊಂದು ದುಸ್ವಪ್ನದ ಗೆಲುವು ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.

50 ವರ್ಷಗಳಲ್ಲಿ ಕಳಪೆ ಸಾಧನೆ
ಈ ಚುನಾವಣೆಯಲ್ಲಿ ಏಂಜೆಲಾ ಪಡೆದ ಫ‌ಲಿತಾಂಶವನ್ನು ಎರಡು ರೀತಿ ಅವಲೋಕಿಸಬಹುದು. ಮೊದಲನೆಯದಾಗಿ
ತಮ್ಮ 12 ವರ್ಷಗಳ ಅಧಿಕಾರಾವಧಿಯಲ್ಲಿ ತೋರಿದ ಸ್ಥಿರ ಸರ್ಕಾರ, ಪಾರದರ್ಶಕ ಆಡಳಿತ, ನಿರುದ್ಯೋಗ ಪ್ರಮಾಣ
ಕಡಿಮೆ, ಜಾಗತಿಕಮಟ್ಟದಲ್ಲಿ ಜರ್ಮನಿಗೆ ಸಿಕ್ಕಿರುವ ಮನ್ನಣೆ ಮತ್ತಿತರ ವಿಷಯಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಿದ
ಏಂಜೆಲಾ ಮರ್ಕೆಲ್‌ ನೇತೃತ್ವದ ಸಿಡಿಯು ಮೈತ್ರಿ ಪಕ್ಷವು ಸ್ಪಷ್ಟ ಬಹುಮತ ಪಡೆಯದೆ ಶೇ.33 ಮತ ಪಡೆದಿರುವುದು ಹಿನ್ನಡೆ ಎಂದು ಭಾವಿಸಬಹುದು. ಇದು ಕಳೆದ ಐವತ್ತು ವರ್ಷಗಳಲ್ಲಿ ಪಕ್ಷವು ತೋರಿದ ಕಳಪೆ ಸಾಧನೆಯಾಗಿದೆ.

ಎರಡನೆಯದಾಗಿ, ಜರ್ಮನಿಯಲ್ಲಿ ಸತತ ಮೂರು ಬಾರಿ ಅಧಿಕಾರ ನಡೆಸಿದ ಏಂಜೆಲಾಗೆ ಈ ಚುನಾವಣೆಯಲ್ಲಿ
ಸಹಜವಾಗಿ ವಿರೋಧಿ ಅಲೆ ಇತ್ತು. 2015ರಲ್ಲಿ ಅವರ ತೆಗೆದುಕೊಂಡ ಕಠಿಣ ವಲಸೆ ನೀತಿಗೆ ವಿರೋಧ ವ್ಯಕ್ತವಾಗಿತ್ತು. ಸುಮಾರು 13 ಲಕ್ಷ ವಲಸಿಗರು-ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದರು. ಇದರಲ್ಲಿ ಯುದ್ಧಪೀಡಿತ ಸಿರಿಯಾದ ಮುಸ್ಲಿಂ ನಿರಾಶ್ರಿತರು ಇದ್ದರು. ಜೊತೆಗೆ ಕ್ರಾಂತಿಕಾರಿ ನಿಲುವಿನೊಂದಿಗೆ ಹುಟ್ಟಿಕೊಂಡ ಆಲóನೇಟಿವ್‌ ಫಾರ್‌ ಜರ್ಮನ್‌ (ಎಎಫ್ಡಿ), ಮುಸ್ಲಿಂ ಹಾಗೂ ವಲಸೆ ವಿರೋಧಿ ಧೋರಣೆಯೊಂದಿಗೆ ಪ್ರಚಾರ ನಡೆಸಿತ್ತು. ಈ ದೇಶವು ಜರ್ಮನಿಯರಿಗೆ ಸೇರಿದ್ದು, ಜರ್ಮನಿಯನ್ನು ಬದಲಾವಣೆ ಮಾಡುತ್ತೇವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರೀತಿ ದೇಶಾಭಿಮಾನ ಹುಟ್ಟು ಹಾಕಿತ್ತು. ಬಲಪಂಥವಾದ ಕೂಡ ಸೃಷ್ಟಿಯಾ ಗಿತ್ತು. ಚುನಾವಣಾ ಫ‌ಲಿತಾಂಶವನ್ನು ಗಮನಿಸಿದರೆ ಇದರಲ್ಲಿ ಎಎಫ್ಡಿ ಯಶಸ್ವಿ ಕೂಡ ಆಗಿದೆ. ಜೊತೆಗೆ ಪ್ರಬಲ ವಿರೋಧ ಪಕ್ಷವಾದ ಸೋಷಿಯಲ್‌ ಡೆಮಾಕ್ರಟಿಕ್‌ ಯೂನಿಯನ್‌ (ಎಸ್‌ಡಿಪಿ) ಕೂಡ ಏಂಜೆಲಾ ಅವರ ವಿರೋಧಿ ಅಲೆಯ ಯಶಸ್ಸು ಪಡೆಯಲು ತನ್ನದೇ ಆದ ಚುನಾವಣಾ  ತಂತ್ರಗಳನ್ನು ಎಣೆದಿತ್ತು. ಇವುಗಳೆಲ್ಲದರ ನಡುವೆಯೂ ಏಂಜೆಲಾ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಸಾಧನೆ ಎಂದೇ ಹೇಳಬಹುದು.

ಜಾಗತಿಕ ನಾಯಕಿ ಏಂಜೆಲಾ
ಜರ್ಮನಿಯಲ್ಲಿ ಸ್ಥಿರ ಸರ್ಕಾರ ಇರುವುದು ಯುರೋಪ್‌ ಒಕ್ಕೂಟಕ್ಕೆ ತೀರಾ ಅಗತ್ಯವಾಗಿದೆ. ಯುರೋಪ್‌ನಲ್ಲೇ ಇದೀಗ ಜರ್ಮನಿ ಆರ್ಥಿಕ ಹಾಗೂ ರಾಜಕೀಯವಾಗಿ ಶಕ್ತಿಶಾಲಿ ರಾಷ್ಟ್ರ. ಈ ಒಕ್ಕೂಟವದಲ್ಲಿ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಜರ್ಮನಿ ತನ್ನದೇ ಆದ ಪಾತ್ರ ವಹಿಸಲಿದೆ. ಯುರೋಪ್‌ ಒಕ್ಕೂಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ
ಗಮನಿಸುವುದಾದರೆ, ಒಕ್ಕೂಟದಿಂದ ಹೊರ ಬಂದಿರುವ ಬ್ರಿಟನ್‌, ತನ್ನ ದೇಶವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ
ನಿರತವಾಗಿದೆ. ಇನ್ನೂ ಫ್ರಾನ್ಸ್‌, ಗ್ರೀಕ್‌ ದೇಶಗಳು ತಮ್ಮದೇ ಬಿಕ್ಕಟ್ಟುಗಳಲ್ಲಿ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಜರ್ಮನಿ ಚಾನ್ಸಲರ್‌ ಆಗುತ್ತಿರುವ ಏಂಜೆಲಾ ಮರ್ಕೆಲ್‌, ಒಕ್ಕೂಟದ ಮುಂದಾಳತ್ವ ವಹಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ಜಾಗತಿಕ ವಾಗಿ ಗಮನಿಸುವುದಾದರೆ, ಜಗತ್ತಿನ ದೊಡ್ಡಣ್ಣನೆಂಬ ಖ್ಯಾತಿ ಪಡೆದಿದ್ದ ಅಮೆರಿಕವು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ದೇಶ ಮೊದಲು ಎಂಬ ಧೋರಣೆಯೊಂದಿಗೆ ತನ್ನನ್ನು ಕಟ್ಟಿಕೊಳ್ಳಲು ಮುಂದಾಗಿದೆ. ಜೊತೆಗೆ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರ ನಡೆದಿದೆ. ಇಂತಹ ಸಂದರ್ಭದಲ್ಲಿ ಜರ್ಮನ್‌ ಪ್ರಧಾನಿಯಾಗುತ್ತಿರುವ ಏಂಜೆಲಾ ಮರ್ಕೆಲ್‌ ಜಾಗತಿಕ ನಾಯಕಿಯಾಗಿ ಕಾಣುತ್ತಾರೆ.

ಏಂಜೆಲಾ ರಾಜಕೀಯ ಬದುಕು
ಆಡಂಬರವಿಲ್ಲದ ಸರಳ ಜೀವನ ನಡೆಸುತ್ತಿರುವ 63 ವರ್ಷದ ಏಂಜೆಲಾ ಮರ್ಕೆಲ್‌ ಜರ್ಮನಿಯ ಬರ್ಲಿನ್‌ನಲ್ಲಿ ಚಿಕ್ಕ ಅಪಾರ್ಟ್‌ ಮೆಂಟ್‌ವೊಂದರಲ್ಲಿ  ವಾಸವಿದ್ದಾರೆ. 1997ರಲ್ಲಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಪಡೆದಿರುವ ಅವರು ಕೆಮಿಸ್ಟ್ರಿ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ಸಹಪಾಠಿಯಾಗಿದ್ದ ಯುಲಿಚ್‌ ಅವರನ್ನು ಮದುವೆಯಾಗಿದ್ದ ಏಂಜೆಲಾ ಬರೀ ನಾಲ್ಕೇ ವರ್ಷದಲ್ಲಿ ವಿಚ್ಛೇದನ ನೀಡಿದರು. 1990ರಲ್ಲಿ ಹೆಲ್ಮುಟ್‌ ಕಾಲ್‌ ಜರ್ಮನಿ ಚಾನ್ಸಲರ್‌ ಆಗಿದ್ದ ಅವಧಿಯಲ್ಲಿ ಏಂಜೆಲಾ ಸಚಿವರಾಗಿದ್ದರು.

ಇದೇ ವೇಳೆ ಹೆಲ್ಮುಟ್‌ ಹಗರಣವೊಂದರಲ್ಲಿ ಸಿಲುಕಿ ರಾಜೀನಾಮೆ ನೀಡಿದಾಗ, ಏಂಜೆಲಾ ಅವರು 2000ರಲ್ಲಿ ಕ್ರಿಶ್ಚಿಯನ್‌ ಡೆಮಾಕ್ರಟಿಕ್‌ ಯೂನಿಯನ್‌ (ಸಿಡಿಯು)  ನೇತೃತ್ವ ವಹಿಸಿದರು. ಬಳಿಕ 2005ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಜರ್ಮನಿಯ ಮೊದಲ ಮಹಿಳಾ ಚಾನ್ಸಲರ್‌ ಎಂಬ ಖ್ಯಾತಿ ಪಡೆದರು.

ಅಲ್ಲಿಂದ ಅವರು ರಾಜಕೀಯವಾಗಿ ಹಿಂದಿರುಗಿ ನೋಡಿಲ್ಲ ಭಾರತದೊಂದಿಗೆ ಜರ್ಮನಿ ನಂಟು ಯುರೋಪ್‌ ಒಕ್ಕೂಟ ರಾಷ್ಟ್ರಗಳ ಪೈಕಿ ಜರ್ಮನಿಯೊಂದಿಗೆ ಭಾರತ ಅತಿ ಹೆಚ್ಚು ವ್ಯಾಪಾರ ವಹಿವಾಟು ಹೊಂದಿದೆ. ಎರಡನೇ ಮಹಾಯುದ್ಧ ಬಳಿಕ ಜರ್ಮನಿಯೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡ ಮೊದಲ ರಾಷ್ಟ್ರ ಭಾರತವಾಗಿದೆ.

ಅಂದು ಪ್ರಧಾನಿಯಾಗಿದ್ದ ನೆಹರು ಎರಡು ಬಾರಿ ಜರ್ಮನಿಗೆ ಭೇಟಿ ನೀಡಿದ್ದರು. ಬಳಿಕ ವಾಜಪೇಯಿ, ಮನಮೋಹನ್‌
ಸಿಂಗ್‌ ಹಾಗೂ ಮೋದಿ ಈ ಸಂಬಂಧ ಮುಂದುವರಿಸಿಕೊಂಡು ಬಂದಿದ್ದಾರೆ. ಉಭಯ ದೇಶಗಳು ಉಗ್ರ ನಿಗ್ರಹಕ್ಕೆ ಜಂಟಿ ಒಪ್ಪಂದ ಮಾಡಿಕೊಂಡಿವೆ. ಕೃಷಿ, ನವೀಕರಣ ಇಂಧನ, ಆಟೊಮೊಬೈಲ್‌, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಒಡಂಬಡಿಕೆ ಮಾಡಿಕೊಂಡಿವೆ. 

ರಕ್ಷಣಾ ಕೇತ್ರದಲ್ಲಿ ಜರ್ಮನಿ ಹೆಚ್ಚು ಹೂಡಿಕೆ ಮಾಡಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಕ್ಷೇತ್ರದಲ್ಲೂ ಜರ್ಮನಿ ಜೊತೆ ಉತ್ತಮ
ಬಾಂಧವ್ಯ ಹೊಂದಿದೆ. ಸಂಸ್ಕೃತವು ಅಲ್ಲಿನ ತೃತೀಯ ಭಾಷೆಯಾ ಗಿದೆ. ಜರ್ಮಿನಿಯಲ್ಲಿರುವ ಹಲವು ವಿವಿಗಳಲ್ಲಿ ಭಾರತೀಯ ಭಾಷಾ ಅಧ್ಯಯನ ಪೀಠಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಫ‌ುಟ್‌ಬಾಲ್‌ ಕ್ರೀಡಾಪಟುಗಳಿಗೆ ಜರ್ಮನಿ ತರಬೇತಿ ನೀಡುತ್ತಿದೆ. ಲಕ್ಷಾಂತರ ಭಾರತೀಯ ಯುವಕರಿಗೆ ಜರ್ಮನಿ ಕೌಶಲ್ಯ ಅಭಿವೃದ್ಧಿ ತಾಂತ್ರಿಕ ತರಬೇತಿ ನೀಡುತ್ತಿದೆ.

*ಎಂ,ಆರ್.ನಿರಂಜನ್

ಟಾಪ್ ನ್ಯೂಸ್

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.