Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?


Team Udayavani, Jan 2, 2025, 8:33 AM IST

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕಲೆಗಳು ಮಾನವನ ವೈವಿಧ್ಯಮಯ ಚಟುವಟಿಕೆಗಳ ಪ್ರತೀಕ. ಅದಕ್ಕೆ ತಕ್ಕಂತೆ ಹೆಸರೂ ಇರಿಸಲಾಗುತ್ತದೆ. ವಿವಿಧ ಕಲೆಗಳಲ್ಲಿ ಕೌಶಲ ಪಡೆದಾಗ ಪ್ರದರ್ಶನಕ್ಕೆ ವೇದಿಕೆ ಬೇಕು. ವೇದಿಕೆ ಸಿದ್ಧಪಡಿಸಿ ಕಲಾಗಾರರನ್ನು ಕರೆದು ಕಾರ್ಯಕ್ರಮ ಏರ್ಪಡಿಸುವ ಸಂಘಟಕರಿರಬೇಕು. ಇಂದಿನ ಕಾಲದಲ್ಲಿ ಇದು ಸುಲಭವಲ್ಲ.

ಕಾರ್ಯಕ್ರಮವೇರ್ಪಡಿಸಿದರೂ ಅದನ್ನು ಆಸ್ವಾದಿಸುವ ಪ್ರೇಕ್ಷಕ ವರ್ಗ ಬೇಕು. ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡುವ ಕಲಾಭಿಮಾನಿಗಳು ಅಗತ್ಯ. ಅದು ಇಲ್ಲವಾದರೆ ಕಲಾವಿದನ ಉತ್ಸಾಹ ಕ್ಷೀಣಿ ಸುತ್ತದೆ. ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕುರ್ಚಿಗಳು ಖಾಲಿಯಾಗಿರುತ್ತವೆ. ಯಾಕೆ ಈ ನಿರಾಸಕ್ತಿ?

ಕಲಾಪೋಷಣೆ ಕಳಾಹೀನವಾಗುತ್ತಿದೆಯಾ?
ಎಲ್ಲ ಸಾಂಸ್ಕೃತಿಕ ಕಲೆಗಳ ಪ್ರೇರಣಾ ಸ್ಥಳ ಪಾಠ ಶಾಲೆ ಗಳು. ಆದರೆ ಇಂದಿನ ಶಾಲೆಗಳು ವಿವಿಧ ಸಾಂಸ್ಕೃತಿಕ ಕಲೆ ಗಳಿಗೆ ಎಷ್ಟು ಮಹತ್ವ ನೀಡುತ್ತಿವೆ?. ಇಂದು ಶಾಲೆಗಳು ಏಕತಾನತೆ ಇರುವ ಯಾಂತ್ರೀಕರಣವಾಗಿರುವ ಉದ್ಯೋ ಗ ಗಿಟ್ಟಿಸುವ ಬೋಧನೆಯನ್ನು ಮಾತ್ರ ನೀಡುತ್ತಿವೆ. ಇದ ಕ್ಕಾಗಿ ಸಿಲೆಬಸ್‌ ಎಂಬ ಹೊರೆಯನ್ನು ಶಿಕ್ಷಕರು ಮಕ್ಕಳ ತಲೆ ಮೇಲೆ ಹೊರಿಸಲೇ ಬೇಕಾಗಿದೆ. ಜೀವನೋತ್ಸಾಹ ನೀಡು ವ ಕಲೆಗಳಿಗೆ ಕನಿಷ್ಠ ಪ್ರೇರಣೆಯನ್ನು ನೀಡುವ ಕೆಲಸವೂ ಶಾಲೆಯ ಪಠ್ಯಕ್ರಮದಲ್ಲಿ ಇಲ್ಲ. ಆಸಕ್ತರು ಶಾಲೆಯ ಹೊರಗೆ ಪ್ರತ್ಯೇಕವಾಗಿ ಕಲಿಯಬೇಕಾಗುತ್ತದೆ.

ಸಂಗೀತ, ಹೇಳುವ ಅಥವಾ ಕೇಳುವ ಮೂಲಕ ಅಬಾ ಲವೃದ್ಧರೂ ಸಂತಸ ಪಡುವ ಕಲೆ. ಪ್ರಾಣಿಗಳೂ ಸಂಗೀತಕ್ಕೆ ಒಲಿಯುತ್ತವೆ. ಅದರೆ ಇದನ್ನು ಎಳವೆಯಲ್ಲಿ ಕಲಿಸುವ ವ್ಯವಸ್ಥೆ ನಮ್ಮ ಪಠ್ಯದ ಸಿಲೆಬಸ್‌ನಲ್ಲಿ ಇದೆಯಾ? ಸಂಗೀತ ಕಲೆಯಲ್ಲಿ ಕೌಶಲ ಪಡೆದವರು ಎಲ್ಲೂ ಉದ್ಯೋಗ ಸಿಗದಿ ದ್ದರೂ ಸ್ವಾವಲಂಬೀ ಜೀವನ ನಡೆಸಬಲ್ಲರು. ವೃದ್ಧಾಪ್ಯದ ತನಕವೂ ಸಂಗೀತ ತರಗತಿಗಳನ್ನು ನಡೆಸುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳಬಹುದು.

ನೃತ್ಯ, ಹಠ ಹಿಡಿದು ಅಭ್ಯಸಿಸಿದವರಿಗೆ ಅತೀವ ಸಂತಸ, ಆರೋಗ್ಯ ನೀಡುವ ಕಲೆ. ಉತ್ತಮ ಭಾಷಣವೂ ಒಂದು ಕಲೆಯೇ. ಯಕ್ಷಗಾನ; ನೃತ್ಯ, ಸಂಗೀತ, ಮಾತುಗಾರಿಕೆಯ ಸಮ್ಮಿಲನ ಕಲೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲೆಗಳ ವೈವಿಧ್ಯಗಳು ನೂರಾರು. ಶಾಸ್ತ್ರೀಯ ಕಲೆಗಳು 64 ಎನ್ನು ತ್ತವೆ ನಮ್ಮ ಗ್ರಂಥಗಳು. ಕ್ರಮಬದ್ಧವಾಗಿ ಕಲಿಯುವ ಕಲೆಗಳು ಶಾಸ್ತ್ರೀಯ ಕಲೆಗಳು. ಶಾಸ್ತ್ರೀಯ ಸಂಗೀತ, ಭರತ ನಾಟ್ಯ, ಯಕ್ಷಗಾನ, ವಾದ್ಯೋಪಕರಣಗಳ ವಾದನ ಇತ್ಯಾ ದಿಗಳ ಕಲಿಯುವಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ಮೂರು ವರ್ಷಗಳ ಹಿಂದೆ ಕೊರೊನಾ ನಮ್ಮೆಲ್ಲರನ್ನೂ ಪೀಡಿಸಿತ್ತು. ಜನ ಮನೆಯಿಂದ ಹೊರಹೋಗದಂತೆ ನಿರ್ಬಂಧಿಸಿತ್ತು. ಜನ ಮನೋರಂಜನೆಗಾಗಿ ಡಿಜಿಟಲ್‌ ಮೀಡಿಯಾದತ್ತ ಕಣ್ಣು ಹಾಯಿಸಿದರು. ಆಗ ಕಲಾವಿದನಿಗೂ ಆನ್‌ಲೈನ್‌ ಪ್ರಸಾರ ಖುಷಿ ನೀಡಿತು. ಆದರೆ ಈಗ?

ಕಲಾರಾಧಕರು ಮನೆಯಲ್ಲಿಯೇ ಕುಳಿತು ನೋಡುವ ಚಾಳಿ ಈಗಲೂ ಮುಂದುವರಿದಿದೆ. ಯಾವುದೇ ಸಾಂಸ್ಕೃ ತಿಕ ಕಾರ್ಯಕಮಗಳಿರಲಿ, ಅದಕ್ಕೆ ಬರುವ ಜನರ ಸಂಖ್ಯೆ ತೀರಾ ಕಡಿಮೆಯಾಗಿದೆ. ಯುಟ್ಯೂಬ್‌ನವರ ಕಾಟ ಎನ್ನಲೇ? ಪ್ರಶ್ನಿಸಿದರೆ ಅಂಗೈಯಲ್ಲೇ ಆಕರ್ಷಕ ರೀತಿಯಲ್ಲಿ ಕಾಣುವಾಗ ಬೇರೆಡೆ ಬಂದು ಕಷ್ಟ, ಹಣ ನಷ್ಟ ಮಾಡು ವುದ್ಯಾಕೆ ಎಂಬ ಮಾತು ಕೇಳಿ ಬರುತ್ತದೆ. ಶಾಸ್ತ್ರೀಯ ಕಲೆಗಳಲ್ಲಿ ಪ್ರೌಢಿಮೆ ಗಳಿಸಲು ಅನೇಕ ವರ್ಷಗಳ ಸತತ ಅಭ್ಯಾಸ ಬೇಕಾಗುತ್ತದೆ. 10 ವರ್ಷ ಕಲಿತು ಪ್ರದರ್ಶನ ನೀಡುವಾಗ 10 ಜನರೂ ವೀಕ್ಷಕರಿಲ್ಲ ಎನ್ನುವಾಗ ಯಾವ ಕಲಾವಿದನಿಗೆ ತಾನೆ ನಿರಾಸೆಯಾಗುವುದಿಲ್ಲ?

ಕಲಾ ಕ್ಷೇತ್ರದಲ್ಲಿ ಎಳೆಯ ಮತ್ತು ಬೆಳೆಯುವ ಕಲಾವಿ ದರಿಗೆ ವೇದಿಕೆಯ ಕೊರತೆ ಈಗ ಹಿಂದಿಗಿಂತ ಹೆಚ್ಚು ಕಾಡು ತ್ತಿದೆ. ಉದಾಹರಣೆಗೆ ಕಿಕ್ಕಿರಿದು ಪ್ರೇಕ್ಷಕರು ತುಂಬಿರುತ್ತಿದ್ದ ತಾಳಮದ್ದಳೆ ಕ್ಷೇತ್ರದಲ್ಲಿ ಮುಮ್ಮೇಳ ತೀರಾ ಬಡವಾಗುತ್ತಿದೆ. ಕಾರಣ ಸಪ್ತಾಹದಂತಹ ಕಾರ್ಯಕ್ರಮಗಳಲ್ಲಿ ಪ್ರತೀ ದಿನವೂ ಹಿರಿಯ ಕಲಾವಿದರಿಗೆ ಮತ್ತು ವೃತ್ತಿನಿರತರಿಗೆ ಮಾತ್ರ ಮಣೆ. ಅದೇ ಕಲಾವಿದ, ಅದೇ ಮಾತುಗಳು. ಬೆಳೆ ಯುವ ಕಲಾವಿದರಿಗೆ ಅವಕಾಶ ತೀರಾ ಕಡಿಮೆ. ಪೋಷಕ ಪಾತ್ರಗಳನ್ನೂ ವೃತ್ತಿನಿರತರೇ ಮಾಡಿ, ಒಂದೆರಡು ಪದ್ಯ ಗಳಿಗೂ ಗಂಟೆಗಟ್ಟಲೆಯ ಅರ್ಥಗಾರಿಕೆ. 3 ಗಂಟೆಯ ಪ್ರಸಂಗವನ್ನು 6 ಗಂಟೆಗೊಯ್ದಾಗ ಪ್ರೇಕ್ಷಕರ ಆಸಕ್ತಿ ಕಡಿಮೆ ಯಾಗುತ್ತದೆ. ಇದರಿಂದಾಗಿ ಕಲಿಯುವ ಕಲಾವಿದರೂ ಇಲ್ಲ. ಪ್ರೇಕ್ಷರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವನ್ನೂ ಸೇವಾ ರೂಪ ದಲ್ಲಿ ಬಯಸುವ ಟ್ರೆಂಡ್‌ ಈಗ ಹೆಚ್ಚುತ್ತಿದೆ. ಹಬ್ಬಗಳಿಗೆ, ಬ್ರಹ್ಮಕಲಶದಂತಹ ಕಾರ್ಯಕ್ರಮಗಳಲ್ಲಿ ಹಣದ ಕೊರತೆ ಎಲ್ಲೂ ಬರುವುದಿಲ್ಲ. ಕೊನೆಗೆ ಲಕ್ಷಗಟ್ಟಲೆ ಉಳಿತಾಯವಾ ಗಿರುತ್ತದೆ. ಸ್ಟಾರ್‌ ಕಲಾವಿದರಿಗೆ ಅತಿಯಾಗಿ ಖರ್ಚು ಮಾಡುತ್ತಾರೆ. ಅದರೆ ಪ್ರದರ್ಶನ ನೀಡಿದ ಊರ ಕಲಾವಿ ದರಿಗೆ ದೇವರ ಪ್ರಸಾದ ಮಾತ್ರ. ಹಿಮ್ಮೇಳದ ಮತ್ತು ಇತರ ಖರ್ಚು ವೆಚ್ಚಗಳನ್ನು ಕಲಾವಿದನೇ ಬರಿಸಿಕೊಳ್ಳಬೇಕು ಅಥವಾ ಪ್ರಾಯೋಜಕರ ಕಾಲು ಹಿಡಿಯಬೇಕು. ಯುವ, ಬೆಳೆಯುತ್ತಿರುವ ಕಲಾವಿದರಿಗಾದರೆ ಸರಿ. ಆದರೆ ಹಿರಿಯ, ನುರಿತ ಕಲಾವಿದರಿಗೂ ಇದೇ ಗತಿ. ನಿರಂತರ ಸೇವೆ ಕಲಾವಿದರಿಗೆ ನಿರಾಸೆ ತರುತ್ತದೆ. ಈ ವ್ಯವಸ್ಥೆಯಿಂದಾಗಿ ಕಲಾವಿದರು ಸದ್ದಿಲ್ಲದೆ ತೆರೆಮರೆಗೆ ಸರಿಯುವಂತೆ ಮಾಡುತ್ತಿದೆ. ಈ ಕಾರಣಗಳಿಂದ ಕಲೆಯ ಉಸಾಬರಿಯೇ ಬೇಡ ಎಂದು ಯುವಜನತೆಯಲ್ಲಿಂದು ಉದಾಸೀನತೆ ಮೂಡುತ್ತಿದೆ. ಕಲಾಪೋಷಕರ ಕೊರತೆ ಯಿಂದ ಕಲೆಗಳೂ ತೆರೆಯ ಮರೆಗೆ ಸರಿಯುತ್ತಿವೆ ಎಂದು ನಿಮಗೂ ಅನಿಸುತ್ತಿದೆಯಲ್ಲವೇ?

– ಶಂಕರ್‌ ಸಾರಡ್ಕ

ಟಾಪ್ ನ್ಯೂಸ್

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.