ಆತ್ಮನಿರ್ಭರತೆ: ಸ್ಪರ್ಧಾತ್ಮಕತೆಯ ಉತ್ಸಾಹ ಹೆಚ್ಚಲಿ
Team Udayavani, Aug 11, 2021, 6:10 AM IST
ಕೊರೊನಾ ಜಾಗತಿಕ ಪಿಡುಗಾಗಿ ಬಾಧಿಸಿದ ಅನಂತರ ಈ ಸಾಂಕ್ರಾಮಿಕದ ಮೂಲದ ಹಿನ್ನೆಲೆ ಯಲ್ಲಿ ಮೂಡಿಬಂದ ಸಂಶಯಗಳು ಚೀನದ ಉತ್ಪ ನ್ನಗಳ ಆಮದಿಗೆ ಕಡಿವಾಣ ಹಾಕಿ ಅದರ ನಾಗಾ ಲೋಟವನ್ನು ತಡೆಯುವ ಚಿಂತನೆಗಳು ಮುನ್ನೆಲೆಗೆ ಬಂದವು. ಕಳೆದೆರಡು ವರ್ಷಗಳಲ್ಲಿ ಕಂಡು ಬಂದ ಅಮೆರಿಕ-ಚೀನ ನಡುವಣ ವ್ಯಾಪಾರಯುದ್ಧ ಕೋವಿಡ್-19ರ ಮಹಾನ್ಪೋಟದೊಂದಿಗೆ ಜಗತ್ತಿನ ಇತರ ರಾಷ್ಟ್ರಗಳು ಸಹ ಚೀನದಿಂದ ಆಮದು ಮಾಡಿ ಕೊಳ್ಳುವ ಬದಲು ತಮ್ಮ ತಮ್ಮ ದೇಶದಲ್ಲಿಯೇ ಸರಕುಗಳನ್ನು ಉತ್ಪಾದಿಸಲು ಆಸಕ್ತವಾಗಿವೆ. ಈ ನಿಟ್ಟಿನಲ್ಲಿ ಭಾರತ ಕೂಡಾ ಹಿಂದೆ ಬಿದ್ದಿಲ್ಲ.
ಕೊರೊನಾ ಹಾಗೂ ಅದನ್ನು ತಡೆಗಟ್ಟಲು ಜಾರಿ ಗೊಳಿಸಿದ ಲಾಕ್‌ಡೌನ್‌ನ ಪರಿಣಾಮವಾಗಿ ಜರ್ಝರಿತವಾದ ಆರ್ಥಿಕತೆಯನ್ನು ಮತ್ತೆ ಗರಿಗೆದ ರುವಂತೆ ಮಾಡಲು ಸಹಜವಾಗಿ ಸ್ವಾವಲಂಬನೆಯ ಮಂತ್ರವನ್ನು ಜಪಿಸಲಾಗುತ್ತಿದೆ. ಇದರ ಹಿಂದಿನ ತರ್ಕ ಬಹಳ ಸರಳವಾಗಿದೆ. ನಾವು ದೇಶದಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿದರೆ ಸಹ ಜವಾಗಿ ದೇಶದಲ್ಲಿ ಉದ್ಯಮಗಳು ಬೆಳವಣಿಗೆ ಹೊಂದುವ ಜತೆಯಲ್ಲಿ ಒಟ್ಟಾರೆಯಾಗಿ ದೇಶದ ಆರ್ಥಿಕತೆಗೆ ಬಲ ತುಂಬಿದಂತಾಗುತ್ತದೆ.
ಭಾರತೀಯ ಉದ್ಯಮ ವ್ಯವಹಾರಗಳನ್ನು ಕಟ್ಟಿ ಬೆಳೆಸಲು 1947ರಿಂದ 1991ರ ತನಕ ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಒಪ್ಪಿಕೊಂಡು ಆಮದಿನ ಮೇಲೆ ನಿರ್ಬಂಧ ಹೇರಿ, ಆಮದು ಪರ್ಯಾಯ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡಲು ಪ್ರೋತ್ಸಾಹಕಗಳನ್ನು ಒದಗಿಸಲಾಯಿತು. ಅಂದಿನ ದಿನಗಳಲ್ಲಿ ಉತ್ಪನ್ನಗಳ ಹಾಗೂ ಗ್ರಾಹಕರ ಸೇವೆಯ ಗುಣಮಟ್ಟ ಬಹಳ ಕೆಟ್ಟದಾಗಿತ್ತು. 1991ರ ಅನಂತರ ಅನಿವಾರ್ಯವಾಗಿ ಭಾರತ ಮುಕ್ತ ಮಾರುಕಟ್ಟೆ ನೀತಿಯನ್ನು ಒಪ್ಪಿಕೊಳ್ಳಬೇಕಾಗಿ ಬಂದುದು ಈಗ ಇತಿಹಾಸ. ನಮ್ಮ ಮಾರುಕಟ್ಟೆಯು ತೆರೆದು ಕೊಳ್ಳು ತ್ತಿದ್ದಂತೆ ಉತ್ಪಾದಕರ ನಡುವಿನ ಸ್ಪರ್ಧೆಯಿಂದಾಗಿ ಉತ್ಪನ್ನಗಳ ಆಯ್ಕೆಯು ನಿರಂತರವಾಗಿ ಹೆಚ್ಚುತ್ತಾ ಹೋಯಿತು. ಆಮದಿನ ಮೇಲೆ ನಿರ್ಬಂಧವಿದ್ದ ಸಮಯದಲ್ಲಿ ಆಂತರಿಕವಾಗಿ ಸೀಮಿತ ಸ್ಪರ್ಧೆ ಇದ್ದುದರಿಂದ ಅನೇಕ ಭಾರತೀಯ ಉತ್ಪಾದಕರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಯೋಗ್ಯವಾದಷ್ಟು ಪ್ರಮಾಣದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲಿಲ್ಲ.
ಭಾರತೀಯ ಮಾರುಕಟ್ಟೆ ಅಂತಾರಾಷ್ಟ್ರೀಯ ಸ್ಪರ್ಧೆಗೆ ತೆರೆದುಕೊಳ್ಳುತ್ತಿದ್ದಂತೆ ಕಡಿಮೆ ಬೆಲೆಯ ಚೀನದ ಉತ್ಪನ್ನಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಇಟ್ಟವು. ಪರಿಣಾಮವಾಗಿ 2017-18ರಲ್ಲಿ ನಮ್ಮ ಒಟ್ಟು ಆಮದಿನಲ್ಲಿ ಚೀನದ ಪಾಲು ಶೇ.16.4(70.4 ಬಿಲಿಯನ್ ಡಾಲರ್) ಹಾಗೂ 2019-20 (11 ತಿಂಗಳ ಅವಧಿಯಲ್ಲಿ)ಶೇ.14.1(62.2 ಬಿಲಿಯನ್ ಡಾಲರ್) ಆಗಿತ್ತು.
ಆತ್ಮನಿರ್ಭರ ಭಾರತ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಆತ್ಮ ನಿರ್ಭರ’ ಎಂದರೆ ಸಶಕ್ತ, ಸ್ವಾವಲಂಬಿ ಭಾರತದ ಪರಿಕಲ್ಪನೆ ದೇಶದಲ್ಲಿ ಸಂಚಲನವನ್ನುಂಟು ಮಾಡಿದೆ. ಇದರೊಂದಿಗೆ ಸ್ಥಳೀಯ ವಸ್ತುಗಳ ಹುಡುಕಾಟ ಹೆಚ್ಚಿದೆ ಮತ್ತು ಉತ್ಪಾದನೆಗೂ ಉತ್ತೇಜನ ದೊರೆಯುತ್ತಿದೆ. ಹಿಂದೆ ಆಮದು ಕಡಿತದ ಮೂಲಕ ಸ್ವದೇಶಿ ಉತ್ಪನ್ನ ಗಳಿಗೆ ಉತ್ತೇಜನ ದೊರೆಯುತ್ತಿದ್ದರೆ ಇದೀಗ ದೇಶದ ನೂತನ ಚಿಂತನೆ, ಘೋಷಣೆ, ಉತ್ತೇಜಕ ಕ್ರಮಗಳು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲಿವೆ. ಬೇಡಿಕೆಯ ಮಟ್ಟವನ್ನು ನಿರಂತರವಾಗಿ ಎತ್ತಿ ಹಿಡಿಯಬೇಕಾದರೆ ನಮ್ಮ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಬೇಕು.
ನಮ್ಮ ಉದ್ಯಮಿಗಳು ಈಗ ಮೂಡಿರುವ ಸ್ವಾವಲಂಬನೆಯ ಸಂಚಲನದ ಸಮಯದಲ್ಲಿ ದೇಶಿಯ ಆರ್ಥಿಕತೆಯನ್ನು ದೃಷ್ಟಿಯಲ್ಲಿರಿಸಿ ಕೊಂಡು ಉತ್ಪಾದನೆಗೆ ತಮ್ಮೆಲ್ಲ ಗಮನವನ್ನು ಕೇಂದ್ರೀಕರಿಸಿದರೆ ಜಾಗತಿಕವಾಗಿ ಬೆಳೆಯುವುದು ಕಷ್ಟಸಾಧ್ಯವಾಗಬಹುದು. ಜನಸಾಮಾನ್ಯರಲ್ಲಿ ಮೂಡಿರುವ ಸ್ವದೇಶಿ ಚಿಂತನೆಗಳು ತಾತ್ಕಾಲಿಕ ಅಂಶಗಳಿಂದ ಬಲ ಪಡೆದುಕೊಂಡಿದೆ. ಹಾಗಾಗಿ ಈ ಚಿಂತನೆಗಳು ಗಟ್ಟಿಯಾಗಿ ನೆಲೆಯೂರಬೇಕಾಗಿದೆ.
ರಕ್ಷಣಾತ್ಮಕ ವ್ಯಾಪಾರ ನೀತಿಯ ಬಹುದೊಡ್ಡ ಪ್ರತಿಪಾದನೆಯಾದ “ಶೈಶವಾವಸ್ಥೆಯ ಕೈಗಾರಿಕೆಗಳ ವಾದ’ದ ಪ್ರತಿಪಾದಕರಾದ ಫ್ರೆಡ್ರಿಕ್ ಲಿಸ್ಟ್ ಮತ್ತು ಅಲೆಗಾÕಂಡರ್ ಹ್ಯಾಮಿಲ್ಟನ್ ಪ್ರಕಾರ ಶೈಶವಾ ವಸ್ಥೆಯಲ್ಲಿರುವ ಆರಂಭಿಕ ಹಂತದಲ್ಲಿ ವಿದೇಶಿ ದೊಡ್ಡ ಕೈಗಾರಿಕೆಗಳೊಂದಿಗೆ ಸ್ಪರ್ಧಿಸಲು ಅಸಮರ್ಥವಾದ, ಆದರೆ ಮುಂದೆ ಸ್ಪರ್ಧಾತ್ಮಕತೆಯನ್ನು ಪಡೆಯ ಬಹುದಾದ ಆಯ್ದ ಉದ್ಯಮಗಳಿಗೆ ತಾತ್ಕಾಲಿಕ ವಾಗಿ ಮಾರುಕಟ್ಟೆಯ ರಕ್ಷಣೆಯನ್ನು ಒದಗಿಸ ಬೇಕು ಎಂಬುದಾಗಿದೆ. ರಕ್ಷಣಾತ್ಮಕ ಯೋಜ ನೆಯ ನೆರಳಿನಲ್ಲಿ ನೂತನ ಕೈಗಾರಿಕೆಗಳು ಆರಂಭವಾಗಿ, ಪ್ರಬುದ್ಧವಾಗಿ ಬೆಳೆಯಬೇಕು. ಅದಕ್ಕೆ ಅನುಕೂಲಕರವಾದ ಉತ್ತೇಜನ ಮತ್ತು ರಕ್ಷಣೆಗಳನ್ನು ಸರಕಾರ ಒದಗಿಸಬೇಕು ಎಂಬುದು ಅವರ ವಾದ. ಈ ವಾದವನ್ನು ರಕ್ಷಣಾತ್ಮಕ ವಾದದ ತಾರ್ಕಿಕವೆಂದು ಉಲ್ಲೇಖೀಸಲಾಗಿದೆ. “ಶಿಶುವನ್ನು ಪೋಷಿಸಿ, ಮಗುವನ್ನು ರಕ್ಷಿಸಿ ಮತ್ತು ವಯಸ್ಕರನ್ನು ಮುಕ್ತಗೊಳಿಸಿ’ ಎಂಬ ಸಾರ್ವಕಾಲಿಕ ಸಿದ್ಧಾಂತವನ್ನು ನೂತನ ಉದ್ಯಮವು ದಕ್ಷತೆಯನ್ನು ಪಡೆದುಕೊ ಳ್ಳಲು ಅನುಕೂಲಕರವಾಗುವ ಹಾಗೆ ಸರಕಾರ ಉತ್ತೇಜಕಗಳನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ವಾದಿಸುತ್ತದೆ.
ನಿರ್ವಹಣ ಸಿದ್ಧಾಂತದಲ್ಲಿ ಸಿ.ಕೆ.ಪ್ರಹ್ಲಾದ್ ಮತ್ತು ಗ್ಯಾರಿ ಹ್ಯಾಮೆಲ್ ಪರಿಚಯಿಸಿದ ಉದ್ಯಮಿಗಳ ಸ್ಪರ್ಧಾತ್ಮಕತೆಯ ಅಡಿಪಾಯ ಪ್ರಮುಖ ಸಾಮರ್ಥ್ಯ (ಕೋರ್ ಕಾಂಪಿಟೆನ್ಸಿ) ಪರಿಕಲ್ಪನೆ ಬಹಳ ಪ್ರಸ್ತುತವಾಗಿದೆ. ಜಾಗತಿಕ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ಭಾರತೀಯ ಉತ್ಪಾದಕರು ತಮ್ಮ ವಿಶಿಷ್ಟ ಸಾಮರ್ಥ್ಯಗಳು ಮತ್ತುಮೌಲ್ಯವರ್ಧನೆಗಳತ್ತ ಗಮನ ಹರಿಸಬೇಕಾಗಿದೆ.
ಆತ್ಮನಿರ್ಭರ ಭಾರತ ಪರಿಕಲ್ಪನೆ ದೇಶದ ಸಾಮರ್ಥ್ಯವರ್ಧನೆಗೆ ಒತ್ತು ಕೊಡುವಂತಾಗಲಿ ಮತ್ತು ನಾವಿದನ್ನು ರಕ್ಷಣಾತ್ಮಕವಾದ ಎಂದು ತಪ್ಪಾಗಿ ಭಾವಿಸುವುದು ಬೇಡ. ಡಾರ್ವಿನ್ನನ ವಿಕಾಸ ವಾದದ ಪ್ರಕಾರ “ಬಲಿಷ್ಠವಾದುದು ಉಳಿಯು ತ್ತದೆ’. ಇಲ್ಲಿ ಬಲಿಷ್ಠವಾದುದು ಎಂದರೆ ಯಾವುದು ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳಿಗೆ ಧನಾತ್ಮಕ ವಾಗಿ ಸ್ಪಂದಿಸಬಲ್ಲುದೋ ಅಥವಾ ಹೊಂದಿ ಕೊಳ್ಳಬಲ್ಲುದೋ ಅದು ಮಾತ್ರ ಉಳಿಯುತ್ತದೆ. ನಮ್ಮಲ್ಲಿ ಸುಪ್ತವಾಗಿರುವ ಸಾಮರ್ಥ್ಯದ ಅನಾವರಣ, ಆ ಮೂಲಕ ಬದಲಾವಣೆಗಳಿಗೆ ಅನುಗುಣವಾಗಿ ಬೆಳೆಯುವ ಸಾಮರ್ಥ್ಯ ನಮ್ಮದಾಗಲಿ ಎಂಬುದೇ ಅತ್ಮನಿರ್ಭರ ಭಾರತದ ಆಶಯ.
ಚಲಿಸದೆನಿಸಿದ ಜಡವನಾವ ಗಾಳಿಯೋ ಸೋಕೆ, ಬಲ ತೀವಿ ಚಲಿಪುದು-ಮಂಕುತಿಮ್ಮ ಎಂದರೆ ತರಗೆಲೆಯೊಂದು ಒಂದು ಸ್ಥಳದಿಂದ ಇನ್ನೊಂದೆಡೆ ಚಲಿಸಲು ಗಾಳಿಯ ಅಗತ್ಯವಿದೆ. ಅಂತೆಯೇ ಮನುಷ್ಯ ಬದುಕಿನಲ್ಲೂ ಜಡತ್ವ ಕಳೆದು ಚೈತನ್ಯವು ಜಾಗೃತಗೊಳ್ಳಲು ಯಾವುದಾದರೊಂದು ಪ್ರಚೋದನೆ ಬೇಕು. ಕೊರೊನಾ ಮತ್ತು ಲಾಕ್‌ಡೌನ್ ಸಹಜವಾಗಿ ನಮ್ಮಲ್ಲಿ ಜಡತ್ವಕ್ಕೆ ಎಡೆ ಮಾಡಿಕೊಟ್ಟಿತು. ನಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆ ಅಭಿವ್ಯಕ್ತಿಗೊಳ್ಳಲು ಉತ್ತೇಜಕಗಳು ಬೇಕು.
ಪ್ರತೀ ಕಾರ್ಮೋಡದ ಹಿಂದೆಯೂ ಒಂದು ಸುಂದರವಾದ ಕಾಮನಬಿಲ್ಲು ಇದೆ. ಕೊರೊನಾ ಮಹಾಮಾರಿ ಇಡೀ ಆರ್ಥಿಕತೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ಉತ್ತೇಜಕಗಳು ಹಾಗೂ ಭರವಸೆಗಳು ಆರ್ಥಿಕತೆಗೆ ಹೊಸ ಚೈತನ್ಯವನ್ನು ತುಂಬಲಿವೆ. ಮಹಾ ಸಂಕಟದ ನಡುವೆಯೂ ನಮ್ಮ ಮನದಲ್ಲೀಗ “ಗೆದ್ದೇ ಗೆಲ್ಲುವೆವು’ ಎಂಬ ಆತ್ಮಸ್ಥೆçರ್ಯ ಮೊಳಕೆಯೊಡೆದು ಸ್ವಾವಲಂಬನೆಯ ಕಹಳೆ ಮೊಳಗಲು ಆರಂಭಿಸಿರುವುದು ಸ್ವಾಗತಾರ್ಹ ಬೆಳವಣಿಗೆ.
– ಡಾ| ಎ.ಜಯ ಕುಮಾರ ಶೆಟ್ಟಿ , ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.