ಅಭಿಮತ; ಅಶ್ವೇತ ಮತದಾರರ ಮನ ಗೆದ್ದರೆಂತು ಬೈಡೆನ್‌?

ಡೆಮಾಕ್ರಾಟರ‌ನ್ನು ಬಹುತೇಕ ಸಮುದಾಯಗಳು "ತಮ್ಮ ಪರ' ಎಂದು ಭಾವಿಸಿದವು

Team Udayavani, Nov 10, 2020, 6:10 AM IST

Lead

“ನೀವು ನಮ್ಮ ಪರ ನಿಂತಿದ್ದಕ್ಕಾಗಿ ಧನ್ಯವಾದ’  ನವೆಂಬರ್‌ 3ರ ಅಮೆರಿಕನ್‌ ಅಧ್ಯಕ್ಷೀಯ ಚುನಾವಣೆಗೂ ಮುನ್ನಾದಿನ ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗರೊಬ್ಬರಿಗೆ ಭಾರತೀಯ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ಹೇಳಿದ ಮಾತಿದು.

ಬಹುಶಃ ಕಳೆದೊಂದು ವರ್ಷದ ಭಾರತ-ಅಮೆರಿಕ ನಡುವಿನ ಸಂಬಂಧದಲ್ಲಿ ಈ ಸಾಫ್ಟ್ವೇರ್‌ ಎಂಜಿನಿಯರ್‌ ಪ್ರಮುಖ ಪಾತ್ರವಹಿಸುವ ಮೀಟುಗೋಲಾಗಿದ್ದರು ಎನಿಸುತ್ತದೆ. ಏಕೆಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ನಮಸ್ತೆ ಟ್ರಂಪ್‌’ ಕಾರ್ಯಕ್ರಮ ಆಯೋಜಿಸಿದ್ದರು, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ರನ್ನು “ಗೆಳೆಯ’ ಎಂದು ಕರೆದಿದ್ದರು ಎನ್ನುವುದೇನೋ ಸರಿ. ಆದರೆ, ಅಮೆರಿಕದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಎಚ್‌1-ಬಿ ವೀಸಾ ಮೇಲೆ ಹಾಗೂ ಈ ವೀಸಾ ಇರುವವರು ಗ್ರೀನ್‌ ಕಾರ್ಡ್‌ ಪಡೆಯುವ ಪ್ರಕ್ರಿಯೆಯ ಮೇಲೆ ತಡೆ ಹೇರಲಾಗಿದೆ. ಇದರಿಂದಾಗಿ, ಲಕ್ಷಾಂತರ ಭಾರತೀಯ ಸಾಫ್ಟ್ವೇರ್‌ ತಂತ್ರಜ್ಞರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ ಮತ್ತು ಕೋವಿಡ್‌-19 ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಟ್ರಂಪ್‌ ಆಡಳಿತದ ಈ ನಡೆಗಳು ಅಪಾರ ಆಘಾತ ಉಂಟುಮಾಡಿವೆ.

ಸಾಮಾನ್ಯವಾಗಿ, ಟ್ರಂಪ್‌ರ ವಲಸಿಗ ವಿರೋಧಿ ನಿಲುವು ಮೆಕ್ಸಿಕೋದ ಅಕ್ರಮ ವಲಸಿಗರನ್ನು ಗುರಿಯಾಗಿಟ್ಟುಕೊಂಡೇ ರೂಪಿತವಾಗಿದೆ ಎಂದು ಗ್ರಹಿಸಲಾಗುತ್ತದಾದರೂ ಇದರ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಅಲ್ಲದೇ ಇತರ ವರ್ಣದ ಜನರ ಬಗ್ಗೆ(ಭಾರತೀಯರನ್ನೂ ಒಳಗೊಂಡು) ಶ್ವೇತವರ್ಣೀಯ ಅಮೆರಿಕನ್ನರಿಗೆ ಇರುವ ಅಪನಂಬಿಕೆಯನ್ನೇ ಇದು ಪ್ರತಿಫ‌ಲಿಸುತ್ತದೆ. ಕೋವಿಡ್‌-19 “ಏಷ್ಯಾ ಮೂಲದ’ ವೈರಸ್‌ ಎಂಬ ಗ್ರಹಿಕೆಯಿಂದಾಗಿ, ನಿರ್ದಿಷ್ಟವಾಗಿ ಚೀನಿಯರ ಕುರಿತು ಮತ್ತು ಶ್ವೇತವರ್ಣೀಯರಿಗಿಂತ “ಭಿನ್ನವಾಗಿ’ ಗೋಚರಿಸುವ ಜನರೆಡೆಗೆ ಒಂದು ರೀತಿಯ ಹಗೆತನದ ವಾತಾವರಣ ಗೋಚರಿಸುತ್ತಿದೆ.

ಇನ್ನೊಂದೆಡೆ ಜೋ ಬೈಡೆನ್‌ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ-ಜಮೈಕನ್‌ ಮೂಲದ ಕಮಲಾ ಹ್ಯಾರಿಸ್‌ರನ್ನು ಆಯ್ಕೆ ಮಾಡುವ ಮೂಲಕ, “ಡೆಮಾಕ್ರಾಟ್‌ಗಳು ನಿಮ್ಮೊಂದಿಗಿದ್ದಾರೆ’ ಎನ್ನುವ ಸಷ್ಟ ಸಂದೇಶವನ್ನು ಅಮೆರಿಕದ ಜನಾಂಗೀಯ ಅಲ್ಪಸಂಖ್ಯಾಕ‌ರಿಗೆ ಕಳುಹಿಸಿದ್ದಾರೆ. ಆದರೆ, ಡೆಮಾಕ್ರಾಟ್‌ಗಳ ಈ ಭರವಸೆ ಎಲ್ಲ ಸಮುದಾಯಗಳಿಗೂ ಹಿತ ಭಾವನೆ ಮೂಡಿಸಿಲ್ಲ.

ಬಹುಶಃ ತಮ್ಮನ್ನು ತಾವು “ಶ್ವೇತವರ್ಣೀಯರು’ ಎಂದು ಭಾವಿಸುವ ಕ್ಯೂಬನ್ನರು ಮತ್ತು ವೆನಿಜುವೆಲಾ ಮೂಲದ ಲ್ಯಾಟಿನೋಗಳು ಟ್ರಂಪ್‌ರ ಪರ ನಿಂತರು. ಆದರೆ ಒಟ್ಟಾರೆಯಾಗಿ, ಉಳಿದೆಲ್ಲ ಸಮುದಾಯಗಳು ಡೆಮಾಕ್ರಾಟ್‌ಗಳನ್ನು “ತಮ್ಮ ಪರ’ ಇರುವ ಪಕ್ಷ ಎಂದು ಭಾವಿಸಿದವು.

ಅಮೆರಿಕದಲ್ಲಿರುವ ಭಾರತೀಯ ಸಮುದಾಯಕ್ಕೆ ಮೊದಲು ಹಾಗೂ ಅತ್ಯಂತ ತುರ್ತಾಗಿ ಬಗೆಹರಿಯಬೇಕಾದ ಸಂಗತಿಯೆಂದರೆ, ಎಚ್‌1-ಬಿ ವೀಸಾ ಮೇಲೆ ಹೇರಲಾಗಿರುವ ತಡೆಯನ್ನು ತೆರವುಗೊಳಿಸುವುದು ಮತ್ತು ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವುದು. ಈ ವಲಯದಲ್ಲಿರುವ ಭಾರತೀಯ ಸಮುದಾಯ ಕಮಲಾರನ್ನು ತಮ್ಮವರು ಎಂದು ಒಪ್ಪಿಕೊಂಡಿದ್ದು, ವೀಸಾ ಮೇಲಿನ ನಿರ್ಬಂಧ ತೆರವಿನ ವಿಚಾರದಲ್ಲಿ “ಭರವಸೆ ಈಡೇರಿಸಿ’ ಎಂದು ಡೆಮಾಕ್ರಾಟ್‌ಗಳ ಮೇಲೆ ಒತ್ತಡ ತರುವ ಸಾಧ್ಯತೆ ಅಧಿಕವಿದೆ. ಆದರೆ ಸಾಂಕ್ರಾಮಿಕವು ಅಮೆರಿಕದಲ್ಲಿನ ಲಕ್ಷಾಂತರ ಉದ್ಯೋಗಗಳನ್ನು ನಷ್ಟ ಮಾಡಿರುವ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವ ಬಗ್ಗೆ ಬೈಡೆನ್‌ ಯೋಚಿಸಬೇಕಿದೆ. ಆದಾಗ್ಯೂ ಈಗ ಟೆಕ್‌ ಸೆಕ್ಟರ್‌ನಲ್ಲಿ ನೇಮಕಾತಿಗಳು ಮುಂದುವರಿದಿವೆಯಾದರೂ ಉದ್ಯೋಗ ಮಾರುಕಟ್ಟೆಯಂತೂ ಅತ್ಯಂತ ಬಿಗುವಾಗಿಯೇ ಇದೆ.

ಭಾರತ-ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದಾದ ಇನ್ನೆರಡು ಅಂಶಗಳೆಂದರೆ ಕಾಶ್ಮೀರ ಮತ್ತು ಚೀನದ ವಿಚಾರ. ಬೈಡೆನ್‌ ಮತ್ತು ಕಮಲಾ ಅಂತೂ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅತ್ಯಂತ ಸ್ಪಷ್ಟ ನಿಲುವು ಹೊಂದಿದ್ದಾರೆ. ಆರ್ಟಿಕಲ್‌ 370 ರದ್ದತಿ ಹಾಗೂ ಜಮ್ಮು- ಕಾಶ್ಮೀರವನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿರುವ ಮೋದಿ ಸರಕಾರದ ಕ್ರಮವು “ತಪ್ಪು’ ಎಂದು ಅವರು ಪರಿಗಣಿಸುತ್ತಾರೆ. ಮುಸ್ಲಿಂ ಅಮೆರಿಕನ್ನರಿಗಾಗಿ ರೂಪಿಸಿದ ಅಜೆಂಡಾದಲ್ಲೂ ಬೈಡೆನ್‌ ಅವರು “”ಭಾರತ ಸರಕಾರ ಜಮ್ಮು ಕಾಶ್ಮೀರಿಗರ ಹಕ್ಕುಗಳನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ಟ್ರಂಪ್‌ ಅವರು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಆರೋಪಗಳ ಬಗ್ಗೆಯಾಗಲಿ ಅಥವಾ ವಿವಿಧ ವಿಷಯಗಳಿಂದಾಗಿ ಭಾರತದಲ್ಲಿ ಆಗುತ್ತಿರುವ ಕೋಮು ಲಿಂಚಿಂಗ್‌(ಥಳಿಸಿ ಹತ್ಯೆ) ಪ್ರಕರಣಗಳ ಬಗ್ಗೆಯಾಗಲಿ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ ಕಮಲಾ ಹ್ಯಾರಿಸ್‌, ಬೈಡೆನ್‌ ಮತ್ತು ಅವರ ಡೆಮಾಕ್ರಟಿಕ್‌ ಪಕ್ಷವು ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಬಲಿಷ್ಠ ನಿಲುವು ತಾಳಿದ್ದಾರೆ. 2019ರ ಅಕ್ಟೋಬರ್‌ ತಿಂಗಳಲ್ಲಿ ಕಮಲಾ-“”ಈ ಜಗತ್ತಿನಲ್ಲಿ ನೀವು ಒಂಟಿಯಲ್ಲ ಎಂದು ನಾವು ಕಾಶ್ಮೀರಿಗಳಿಗೆ ನೆನಪಿಸಬೇಕಿದೆ” ಎಂದಿದ್ದರು. ಆದರೆ ಈ ವಿಚಾರವಾಗಿ ಡೆಮಾಕ್ರಟಿಕ್‌ ಪಕ್ಷ ಮುಂದೆಯೂ ಪ್ರಬಲ ಸಂದೇಶಗಳನ್ನು ನೀಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡುವ ಸಾಧ್ಯತೆ ಇಲ್ಲ. ಆದರೂ ಈ ಸಂಗತಿಗಳಂತೂ ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಲಿವೆ.

ಚೀನದ ವಿಚಾರದಲ್ಲಿ ಟ್ರಂಪ್‌ ಮತ್ತು ಬೈಡೆನ್‌ರ ನಿಲುವು ಒಂದೇ ರೀತಿಯಿದೆ. ಇವರಿಬ್ಬರಿಗೂ ಚೀನದ ಮೇಲೆ ಅನುಮಾನವಿದೆ. ಆದರೆ ಬೈಡೆನ್‌ ಸ್ವಲ್ಪ ಸಮಾಧಾನಕರ ಧ್ವನಿಯಲ್ಲಿ ಮಾತನಾಡುವ ಸಾಧ್ಯತೆ ಇದೆ, ಅಲ್ಲದೇ ಒಂದು ವೇಳೆ ಭಾರತವೇನಾದರೂ ಚೀನ ವಿರುದ್ಧ ಬಲಿಷ್ಠ ನಿಲುವು ಮುಂದುವರಿಸಿದರೂ, ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಪ್ರಯತ್ನಿಸಬಹುದು. ಇದೇನೇ ಇದ್ದರೂ ಚೀನ ವಿಚಾರದಲ್ಲಿ ಭಾರತ-ಅಮೆರಿಕದ ನಡುವೆ ಮೂರು ಒಪ್ಪಂದಗಳಾಗಿದ್ದು (ಮೋದಿ- ಟ್ರಂಪ್‌ ಸಹಿಹಾಕಿದ್ದರು), ಈ ಒಪ್ಪಂದಗಳನ್ನು ಬೈಡೆನ್‌ ಗೌರವಿಸುವ ಸಾಧ್ಯತೆಯಿದೆ.

ಇನ್ನು ಸಾಂಕ್ರಾಮಿಕ ಉಂಟುಮಾಡಿದ ಕುಸಿತದಿಂದ ಹೊರಬರಲು ಭಾರತ ಮತ್ತು ಅಮೆರಿಕ ಪ್ರಯತ್ನಿಸುತ್ತಿವೆಯಾದ್ದರಿಂದ, ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿನ ಆರ್ಥಿಕ ಆಯಾಮ ಬಹಳ ಗುಣಾತ್ಮಕವಾಗಿ ಗೋಚರಿಸುತ್ತಿದೆ.

ಒಬಾಮಾರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್‌ ಭಾರತದೊಂದಿಗೆ ಆರ್ಥಿಕ ಸಂಬಂಧ ಹೆಚ್ಚಿಸುವ ವಿಚಾರದಲ್ಲಿ ಬಹಳ ಸಕ್ರಿಯರಾಗಿದ್ದರು. ಈ ಕಾರಣಕ್ಕಾಗಿ ಅವರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಜನವರಿಯಲ್ಲಿ ಶ್ವೇತಭವನ ಪ್ರವೇಶಿಸಲು ಬೈಡೆನ್‌ ಸಿದ್ಧತೆ ನಡೆಸಿರುವ ಈ ಹೊತ್ತಲ್ಲೇ, ಭಾರತ ಮತ್ತು ಅಮೆರಿಕದಲ್ಲಿನ ಉದ್ಯಮ ಸಮೂಹವು ಆ ವಿಚಾರವನ್ನು ನೆನಪು ಮಾಡಿಕೊಳ್ಳುತ್ತಿವೆ.

(ಲೇಖಕರು ಕರ್ನಾಟಕದ ಮಾಜಿ ಪತ್ರಕರ್ತರಾಗಿದ್ದು, ಪ್ರಸಕ್ತ ಅಮೆರಿಕದಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)

ಸೌಮ್ಯ ಆಜಿ, ಅಮೆರಿಕ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.