ಉಭಯರಲ್ಲಿ ತಾಳ್ಮೆ, ಸಮನ್ವಯತೆ ಅಗತ್ಯ


Team Udayavani, Jun 11, 2018, 10:12 AM IST

maitri.jpg

ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಎರಡು ಮೈತ್ರಿ ಸರಕಾರಗಳು ಪೂರ್ಣಾವಧಿಗೂ ಮುನ್ನವೇ ಪತನವಾಗಿದ್ದವು. ಸಮ್ಮಿಶ್ರ ಸರಕಾರಗಳ ಸ್ವಭಾವ, ಸ್ವರೂಪ ಹಾಗೂ ಆಳ, ಅಗಲ ತೀರಾ ನಿಗೂಢ. ಹಾಗಾಗಿ, ಯಾವ ಹಂತ ದಲ್ಲಿ ಏನಾಗುತ್ತದೋ ಎಂಬ ಆತಂಕ ಕಾಡುತ್ತಿರುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂದು ಮುಂದೆ ಸಾಗುವುದರಲ್ಲೇ ಸರ್ಕಾರದ ಭಾಗಿದಾರ ಪಕ್ಷಗಳ ಹಿತ ಅಡಗಿರುತ್ತದೆ. ಇದನ್ನು ಸಾಧಿಸಬೇಕೆಂದರೆ ಉಭಯರಲ್ಲಿ ತಾಳ್ಮೆ, ಸಮನ್ವಯತೆ ಹಾಗೂ ತ್ಯಾಗ ಮನೋಭಾವ ತೀರಾ ಅಗತ್ಯ.

ಯಾವುದೇ ಒಂದು ಪಕ್ಷದ ಸರ್ಕಾರ ಅಥವಾ ಮೈತ್ರಿ ಸರ್ಕಾರಕ್ಕೆ ಜನ ಕಲ್ಯಾಣದ ಬಗ್ಗೆ ತನ್ನದೇ ಆದ ನಿರ್ದಿಷ್ಟ ದೃಷ್ಟಿಕೋ® ವಿರಬೇಕಾಗುತ್ತದೆ. ಅನ್ನದಾತ ರೈತರು, ಬಡವರು, ಕೂಲಿ ಕಾರ್ಮಿ ಕರು, ಮಹಿಳೆಯರು, ಮಕ್ಕಳು, ಹಿಂದುಳಿದವರು ಸೇರಿದಂತೆ ನಾಡಿನ ತುಳಿತಕ್ಕೊಳಗಾದವರ ಅಭ್ಯುದಯಕ್ಕಾಗಿ ಯಾವ ಯಾವ ಕಾರ್ಯ ಕ್ರಮಗಳನ್ನು ಜಾರಿಗೊಳಿಸಬೇಕೆಂಬ ಬಗ್ಗೆ ಸ್ಪಷ್ಟತೆ ಇರಬೇಕಾಗುತ್ತದೆ. ಒಂದೇ ಪಕ್ಷದ ಸರ್ಕಾರವಿದ್ದರೆ ಅದರ ಖದರೇ ಬೇರೆೆ. ಆದರೆ, ಮೈತ್ರಿ ಸರ್ಕಾರ ಎಂಬ ಹಡಗಿನ ನಾವಿಕರಾದವರು ಯಾವುದಾದರೂ ಪ್ರಮುಖ ನಿರ್ಧಾರವನ್ನು ಕೈಗೊಳ್ಳಬೇಕಾದರೆ ಸರ್ಕಾರದ ಭಾಗಿದಾರ ಪಕ್ಷದ ಸಹಮತ ಪಡೆದೇ ಮುಂದಡಿ ಇಡಬೇಕಾಗುತ್ತದೆ. ಒಂದೊಮ್ಮೆ ಅದಕ್ಕೆ ಆ ಪಕ್ಷ ಕಬೂಲ್‌ ಆಗದಿದ್ದರೆ ಎಲ್ಲವೂ ಗೋಜಲಾಗಿ ಪರಿಣ ಮಿಸುತ್ತದೆ. ಹಾಗಾಗಿ, ಹಡಗಿನಲ್ಲಿ ಒಂದು ಚಿಕ್ಕ ರಂಧ್ರವೂ ಕಾಣಿಸಿ ಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ಅರ್ಥದಲ್ಲಿ ಮೈತ್ರಿ ಸರ್ಕಾರವನ್ನು “ಮರ್ಜಿ’ ಸರ್ಕಾರ ಎನ್ನಲೂಬಹುದು. 

ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗಿ ಬರೋಬ್ಬರಿ 15 ದಿನಗಳ ನಂತರ ಕೊನೆಗೂ ಹಲವಾರು ಆತಂಕಗಳ ನಡುವೆಯೇ ಎಲ್ಲವನ್ನೂ ತೂಗಿ ನೋಡಿ ಸಚಿವ ಸಂಪುಟ ರಚಿಸ ಲಾಗಿದೆ. ಈ ವೇಳೆ ಘಟಾನುಘಟಿಗಳೆನಿಸಿಕೊಂಡಿದ್ದ ಹಳೆ ಹುಲಿಗಳನ್ನೇ ಕಡೆಗಣಿಸಲಾಗಿದೆ. ಹಾಗಾಗಿ, ಉಭಯ ಪಕ್ಷಗಳಲ್ಲಿ ಅಸಮಾಧಾನದ ಜ್ವಾಲೆ ಭುಗಿಲೆದ್ದಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿದ್ದ ಎರಡೂ ಪಕ್ಷಗಳ ಬಹುತೇಕ ಶಾಸಕರಿಗೆ ನಿರಾಸೆಯಾಗಿದೆ. ಸಚಿವ ಸ್ಥಾನ ಗ್ಯಾರಂಟಿ ಎಂದು ನಂಬಿ ಹೊಸ ಸೂಟು ಹೊಲಿಸಿಕೊಂಡು ಪ್ರಮಾಣ ವಚನಕ್ಕಾಗಿ ಕಾಯುತ್ತಿದ್ದವರು ಇಂದು ಒಳಗೊಳಗೇ ಕುದಿಯುವಂತಾಗಿದೆ. ಆ ಪೈಕಿ ಕೆಲವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೆಲ್ಲ ಎಲ್ಲಾ ಸರ್ಕಾರಗಳ ಸಂಪುಟ ರಚನೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಕಾಣಬರುವ ಸಹಜ ಪ್ರಕ್ರಿಯೆ. ಆದರೂ, ಮೈತ್ರಿ ಸರ್ಕಾರದ ಮಟ್ಟಿಗೆ ಹೇಳುವುದಾದರೆ ಸ್ವಲ್ಪ ಗಂಭೀರ ವಿಚಾರ. 

ಈಗ ಸಮ್ಮಿಶ್ರ ಸರ್ಕಾರದ ಸಾರಥ್ಯ ವಹಿಸಿರುವ ಜೆಡಿಎಸ್‌ನಲ್ಲಿ ಒಂದು ರೀತಿಯ ಸಂಭ್ರಮ ಮನೆಮಾಡಿರಬಹುದು. ಆದರೆ, ಆ ಖುಷಿ 79 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್‌ನಲ್ಲಿ ಅಷ್ಟಾಗಿ ಗೋಚರಿಸುತ್ತಿಲ್ಲ. ಉಪ ಮುಖ್ಯಮಂತ್ರಿ ಸ್ಥಾನ ಪಡೆದಿರುವ ಕಾಂಗ್ರೆಸ್‌ನ ಡಾ.ಪರಮೇಶ್ವರ್‌ ಅವರ ಮಟ್ಟಿಗೆ ಅದೊಂದು ಬಹುದೊಡ್ಡ ಸದವಕಾಶ ಆಗಿರಲೂಬಹುದು. ಮೈತ್ರಿ ಸರ್ಕಾರದ ಬಹುಮತ ಸಾಬೀತಾಗುವವರೆಗೂ ಕಾಂಗ್ರೆಸ್‌ ಶಾಸಕರು ಎಲ್ಲೂ ಕದಲದಂತೆ ನೋಡಿಕೊಂಡಿದ್ದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ಅವರು ಕೂಡ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಖರ್ಗೆ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಲಾಗಿದೆ. 

ಇನ್ನು ಕಾಂಗ್ರೆಸ್‌ನಿಂದ ಆಯ್ಕೆಯಾದ ಯಾವೊಬ್ಬ ಮಹಿಳಾ ಶಾಸಕಿಯರಿಗೂ ಸಂಪುಟದಲ್ಲಿ ಸ್ಥಾನ ನೀಡದಿರುವುದು ವಿಪರ್ಯಾಸದ ಸಂಗತಿ. ಕಾಂಗ್ರೆಸ್‌ ಹೈಕಮಾಂಡ್‌ನ‌ಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಕೆಜಿಎಫ್ನಿಂದ ಆಯ್ಕೆಯಾದ ತಮ್ಮ ಮಗಳು ರೂಪಕಲಾ ಶಶಿಧರ್‌ರಿಗೆ ಶತಾಯ ಗತಾಯ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವಲ್ಲಿ ಯಶಸ್ವಿಯಾಗುತ್ತಾರೆಂದು ಹೇಳಲಾಗುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಸರ್ಕಾರದ ನಾಯಕತ್ವ ವಹಿಸಿರುವ ಜೆಡಿಎಸ್‌ನ ಹಿರಿಯ ಶಾಸಕರೇ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್‌ನ ಹಿರಿಯ ಸದಸ್ಯ ಹಾಗೂ ಉತ್ತರ ಕರ್ನಾಟಕದ ಪಕ್ಷದ ಪ್ರಭಾವಿ ನಾಯಕ ಬಸವರಾಜ ಹೊರಟ್ಟಿ ಅವರು, ಯಾವ ಕಾರಣಕ್ಕಾಗಿ ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇನ್ನು ಮೈತ್ರಿ ಸರ್ಕಾರದ

ಹಿರಿಯಣ್ಣನಾಗಿರುವ ಕಾಂಗ್ರೆಸ್‌ ಪಕ್ಷದಲ್ಲೂ ಸಚಿವ ಸ್ಥಾನ ವಂಚಿತರು ಸಾಕಷ್ಟು ಮಂದಿ ಇದ್ದಾರೆ. ಆ ಪೈಕಿ ಉತ್ತರ ಕರ್ನಾಟಕದ ಹಿರಿಯ ಪ್ರಭಾವಿ ನಾಯಕರಾದ ಎಚ್‌.ಕೆ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್‌, ಎಂ.ಬಿ.ಪಾಟೀಲ್‌, ಹೈದರಾಬಾದ್‌ ಕರ್ನಾಟಕ ಭಾಗದ ಈಶ್ವರ್‌ ಖಂಡ್ರೆ, ಬೆಂಗಳೂರಿನ ರೋಷನ್‌ ಬೇಗ್‌ ಮುಂತಾದವರು ಪ್ರಮುಖರಾಗಿದ್ದಾರೆ. 

ಒಂದು ಮಹತ್ವದ ಸಂಗತಿ ಎಂದರೆ, ಉತ್ತರ ಕರ್ನಾಟಕದ ಹೃದಯ ಭಾಗವಾದ ಧಾರವಾಡ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನೇ ನೀಡಿಲ್ಲ. ಅದೇ ರೀತಿ, ಜಿಲ್ಲೆಯ 6 ಶಾಸಕ ಸ್ಥಾನಗಳ ಪೈಕಿ 5 ಮಂದಿ ಶಾಸಕರನ್ನು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆ ಮಾಡಿ ಕಳುಹಿಸಿರುವ ಚಿನ್ನದ ನಾಡು ಕೋಲಾರ ಜಿಲ್ಲೆಗೂ ಸಂಪುಟದಲ್ಲಿ ಯಾವುದೇ ಸ್ಥಾನ ಸಿಕ್ಕಲ್ಲ. ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಆಯ್ಕೆಯಾದ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಸಚಿವ ಸ್ಥಾನ ಸಿಗುತ್ತದೆ ಎಂದು ನಂಬಿ, ಪ್ರಮಾಣ ವಚನಕ್ಕಾಗಿ ತುದಿಗಾಲಲ್ಲಿ ನಿಂತಿದ್ದರು. ಆದರೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬಹಿರಂಗವಾಗಿಯೇ ತಮ್ಮ ಬೇಸರ ಹೊರಹಾಕಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಜೆಡಿಎಸ್‌ಗಿಂತ ಹೆಚ್ಚಾಗಿ ಕಾಂಗ್ರೆಸ್‌ ಪಕ್ಷದ ಭವಿಷ್ಯದ ಮೇಲೆ ಬಹುದೊಡ್ಡ ಹೊಡೆತ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. 

ನಾಡಿನ ಪ್ರಮುಖ ಲಿಂಗಾಯತ ಹಾಗೂ ಕುರುಬ ಸಮುದಾಯಗಳಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಕಲ್ಪಿಸಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಜತೆಗೆ, ಇನ್ನಿತರ ಸಮುದಾಯ ಗಳಿಂದಲೂ ಇದೇ ರೀತಿಯ ಅತೃಪ್ತಿ ವ್ಯಕ್ತವಾಗಿದೆ. ಈ ಎಲ್ಲ ಬೆಳವಣಿಗೆಗಳು ಮೈತ್ರಿ ಸರ್ಕಾರದ ಮೇಲೆ ಏನಾದರೂ ಗಂಭೀರ ಪರಿಣಾಮ ಉಂಟು ಮಾಡಬಲ್ಲವೇ?
ಇನ್ನು ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸಿದ ಮೂರ್‍ನಾಲ್ಕು ದಿನಗಳಲ್ಲಿ ರೈತರ ಸಾಲ ಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷ ಬಿಜೆಪಿ ಬಂದ್‌ಗೆ ಕರೆ ನೀಡಿತ್ತು. ಆದರೆ, ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿಲುವು ಸ್ಪಷ್ಟವಾಗಿರ ಬಹುದಾದರೂ, ಅದನ್ನು ಕಾರ್ಯರೂಪಕ್ಕೆ ತರಲು ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷ ಕಾಂಗ್ರೆಸ್‌ನ ಅಣತಿಗಾಗಿ ಕಾಯಲೇಬೇಕಾದ ಅನಿವಾರ್ಯತೆ ಜೆಡಿಎಸ್‌ಗೆ ಇದೆ ಎಂಬುದು ಸತ್ಯ. ಸ್ವಂತ ಬಲದ ಸರ್ಕಾರವಾದರೆ ಜನತೆಗೆ ನೀಡಿದ ಭರವಸೆಗಳನ್ನು ಯಾವುದೇ ಮುಜುಗರವಿಲ್ಲದೇ, ಯಾರ ಹಂಗೂ ಇಲ್ಲದೇ ಕರಾರುವಾಕ್ಕಾಗಿ ಈಡೇರಿಸಿಬಿಡಬಹುದು. ಆದರೆ, ಮೈತ್ರಿ ಎಂಬ ಮಂತ್ರದಡಿ ಆ ರೀತಿ ದಢೀರ್‌ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇಂತಹ ಹತ್ತಾರು ಸವಾಲುಗಳು ಯಾವುದೇ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗುವುದು ಸಹಜವೇ. ಅದೆಲ್ಲವನ್ನೂ ಮೀರಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸುವುದರಲ್ಲಿಯೇ ಆ ಸರ್ಕಾರದ ಮುಖ್ಯಸ್ಥರ ರಾಜಕೀಯ ಜಾಣ್ಮೆ ಅಡಗಿರುತ್ತದೆ. 

ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಎರಡು ಮೈತ್ರಿ ಸರ್ಕಾರಗಳು ಪೂರ್ಣಾವಧಿಗೂ ಮುನ್ನವೇ ಪತನವಾಗಿದ್ದವು. ಸಮ್ಮಿಶ್ರ ಸರ್ಕಾರಗಳ ಸ್ವಭಾವ, ಸ್ವರೂಪ ಹಾಗೂ ಆಳ, ಅಗಲ ತೀರಾ ನಿಗೂಢ. ಹಾಗಾಗಿ, ಯಾವ ಹಂತದಲ್ಲಿ ಏನಾಗುತ್ತದೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿರುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನ್ನು ಅರಿತು ಮುಂದೆ ಸಾಗುವುದರಲ್ಲೇ ಸರ್ಕಾರದ ಭಾಗಿದಾರ ಪಕ್ಷಗಳ ಹಿತ ಅಡಗಿರುತ್ತದೆ. ಇದನ್ನು ಸಾಧಿಸಬೇಕೆಂದರೆ ಉಭಯರಲ್ಲಿ ತಾಳ್ಮೆ, ಸಮನ್ವಯತೆ ಹಾಗೂ ತ್ಯಾಗ ಮನೋಭಾವ ತೀರಾ ಅಗತ್ಯ. ಇಲ್ಲದಿದ್ದರೆ, ಸರ್ಕಾರದ ಅಸ್ತಿತ್ವವೇ ಅಲ್ಲಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. 

ಈ ವಿಚಾರದಲ್ಲಿ ಹಿಂದೊಮ್ಮೆ ಬಿಜೆಪಿ, ಜೆಡಿಎಸ್‌ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅನುಭವಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರಲ್ಲಿರುವ ತಾಳ್ಮೆ ಹಾಗೂ ನಾಯಕತ್ವದ ಗುಣಗಳನ್ನು ಮನಗಂಡೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ವರಿಷ್ಠರು ಮುಖ್ಯಮಂತ್ರಿ ಗಾದಿ ಬಿಟ್ಟುಕೊಟ್ಟಿರ ಬಹುದು. ಆದರೆ, ಇಲ್ಲಿ ಗಮನಿಸಬಹುದಾದ ಒಂದು ಮಹತ್ವದ ಅಂಶವೆಂದರೆ, 79 ಸಂಖ್ಯಾ ಬಲದ ಕಾಂಗ್ರೆಸ್‌, 38 ಸದಸ್ಯ ಬಲದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದೇ ಸೋಜಿಗದ ಸಂಗತಿ.

ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಅನ್ನು ಮುಂದಿಟ್ಟುಕೊಂಡು ತನ್ನ ಭವಿಷ್ಯದ ರಾಜಕಾರಣ ಹಾಗೂ ಚುನಾವಣೆಗಳಿಗೆ ಭೂಮಿಕೆ ಸಿದ್ಧಪಡಿಸಿಕೊಳ್ಳಲು ಈ ರೀತಿಯ ನಿರ್ಧಾರ ಕೈಗೊಂಡಿದೆಯೇ ಎಂಬ ಸಂದೇಹ ಬಾರದಿರದು. ಏನೇ ಆದರೂ, ಉಭಯ ಪಕ್ಷಗಳು ತಮ್ಮದೇ ಆದ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿಯೇ ಹೆಜ್ಜೆ ಹಾಕುತ್ತವೆ.

ಆದರೆ, ಐದು ವರ್ಷ ಸಂಪೂರ್ಣವಾಗಿ ಸಿಎಂ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ಕಾಂಗ್ರೆಸ್‌ ವರಿಷ್ಠರ ತೀರ್ಮಾನದ ವಿರುದ್ಧ ಪಕ್ಷದ ಹಲವು ಹಿರಿಯ ನಾಯಕರು ಅಪಸ್ವರ ವ್ಯಕ್ತಪಡಿಸಿದ್ದರು. ನಂತರ ವಿಧಿಯಿಲ್ಲದೇ, ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ತಲೆಬಾಗ ಲೇಬೇಕೆಂಬ ಸಮಜಾಯಿಷಿಯನ್ನೂ ನೀಡಿದರು. ಏಕೆಂದರೆ, ಈ ಬಗ್ಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಅಧಿನಾಯಕರ ನಡುವೆ ಒಪ್ಪಂದವಾಗಿರುವುದರಿಂದ ಯಾರು ಯಾರನ್ನೂ ದೂರುವಂತಹ ಪ್ರಮೇಯವೇ ಇಲ್ಲದಂತಾಗಿದೆ. ಹಾಗಾಗಿ, ಉಭಯ ಪಕ್ಷಗಳ ದೋಸ್ತಿ ವಿಚಾರ ಬಹುತೇಕ ಹಿರಿಯ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಏನಾದರೂ ಮಾತನಾಡಿದರೆ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ “ಗುಮ್ಮ’ ಅವರನ್ನು ಕಾಡುತ್ತಿರಬಹುದು. ಹೀಗಾಗಿ, ಎಷ್ಟೇ ಬೇಸರವಿದ್ದರೂ ಮೌನಕ್ಕೆ ಶರಣಾಗುವ ಮೂಲಕ ಕಾದುನೋಡುವ ತಂತ್ರ ಅನುಸರಿಸುತ್ತಿರುವುದು ಕಂಡುಬರುತ್ತಿದೆ.

ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ
ಮೊದಲಿನಿಂದಲೂ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಪ್ರಾಬಲ್ಯ ಮೆರೆದಿವೆ, ಈಗಲೂ ಮೆರೆಯುತ್ತಿವೆ. ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೇ ತೀರ್ಮಾನಗಳನ್ನು ರಾಷ್ಟ್ರೀಯ ದೃಷ್ಟಿಕೋನದಿಂದಲೇ ಕೈಗೊಳ್ಳಬೇಕಾಗುತ್ತದೆ. ಆದರೆ, ಪ್ರಾದೇಶಿಕ ಪಕ್ಷಗಳ ನೀತಿ ಹಾಗಿರುವುದಿಲ್ಲ. ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಮಟ್ಟದ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ರಾಜ್ಯದ ಹಿತದೃಷ್ಟಿಯೊಂದೇ ಪ್ರಮುಖ ಧ್ಯೇಯವಾಗಿರುತ್ತದೆ. ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದೊಂದಿಗೆ ಯಾವುದೇ ಹಂಗಿಲ್ಲದೇ ಎಂತಹ ಸಮರಕ್ಕೂ ಸಿದ್ಧವಾಗುವಂತಹ ದಿಟ್ಟತನ ಮೈಗೂಡಿಸಿ ಕೊಂಡಿ ರುತ್ತವೆ. ಒಂದೊಮ್ಮೆ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಏನಾದರೂ ರಚನೆಯಾಗುವಂತಹ ಸಂದರ್ಭ ಒದಗಿಬಂದರೆ, ಆಗ ಪ್ರಾದೇಶಿಕ ಪಕ್ಷಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗುತ್ತದೆ. ಆ ಹಂತದಲ್ಲಿ ತಮ್ಮ ಸಂಸದರ ಸಂಖ್ಯಾ ಬಲವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ನೆಪದಲ್ಲಿ ಚೌಕಾಸಿ ರಾಜಕಾರಣಕ್ಕೆ ಇಳಿಯುತ್ತವೆ. ಆ ಮೂಲಕ ತಮ್ಮ ರಾಜ್ಯದ ನದಿ ನೀರಿನ ಸಮಸ್ಯೆ, ಗಡಿ ಸಮಸ್ಯೆ ಸೇರಿದಂತೆ ಎಲ್ಲಾ ಅಗತ್ಯತೆಗಳನ್ನು ಮುಲಾಜಿಲ್ಲದೇ ಪೂರೈಸಿಕೊಳ್ಳಲು ಮುಂದಾಗುತ್ತವೆ. 

ಇದಕ್ಕೆ ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷಗಳು ಜ್ವಲಂತ ಉದಾಹರಣೆ. ದೇಶದ ರಾಜಕೀಯ ಇತಿಹಾಸದಲ್ಲಿ ಬಹುಶಃ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಪಡೆದಷ್ಟು ಲಾಭವನ್ನು ಬೇರಾವ ರಾಜ್ಯಗಳೂ ಪಡೆದಿರಲು ಸಾಧ್ಯವಿಲ್ಲ.  ಪ್ರಾಯಶಃ, ರಾಜ್ಯದ ಜೆಡಿಎಸ್‌ ವರಿಷ್ಠರು ಈ ಹಿನ್ನೆಲೆ ಯಲ್ಲಿಯೇ ತಮ್ಮದು “ಪ್ರಾದೇಶಿಕ ಪಕ್ಷ’ ಎಂದು ಪ್ರತಿಪಾದಿಸುತ್ತಿರಬ ಹುದು. ಆದರೆ, ರಾಜ್ಯದಲ್ಲಿ ಇಂದು ಪ್ರಾದೇಶಿಕ ಪಕ್ಷ ಜೆಡಿಎಸ್‌ ರಾಷ್ಟ್ರೀಯ ಪಕ್ಷವೊಂದರ ಜತೆ ಸೇರಿ ಸರ್ಕಾರ ರಚಿಸಿ

ರುವುದರಿಂದ, ಕೆಲವು ವಿಚಾರಗಳಲ್ಲಿ ಪ್ರಾದೇಶಿಕ ಹಿತಾಸಕ್ತಿಗಳನ್ನು ಮೀರಿ ತನ್ನ ನಿಲುವುಗಳನ್ನು ಸಡಿಲಿಸಿಕೊಂಡು ರಾಜಿ ಆಗಲೇಬೇಕು.

– ಬಿ.ಎಸ್‌.ಅಶೋಕ್‌

ಟಾಪ್ ನ್ಯೂಸ್

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.