ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ-ಹಾನಿಕಾರಕ ಪಿಡುಗು
Team Udayavani, Oct 19, 2022, 6:10 AM IST
ಪಟ್ಟುಬಿಡದ ಜಾಗತಿಕ ತಾಂತ್ರಿಕ-ಮಂಥನ, ಅಮೃತ ಮತ್ತು ವಿಷ ಎರಡನ್ನೂ ಕಕ್ಕುತ್ತಿದೆ. ನಾವು ಅಮೃತವನ್ನು ಆನಂದದಿಂದ ಸ್ವಾಗತಿಸುತ್ತಿರುವಾಗ; ಈವರೆಗೆ ತಿಳಿದಿಲ್ಲದ ಬಹುಮುಖದ ವಿಷ ಗಂಭೀರ ಮತ್ತು ತುರ್ತು ಕಳಕಳಿ ಯನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಅಪರಾಧ ಈಗ ಜಾಗತಿಕವಾಗಿ ಜಾಲ (ನೆಟ್‌ವರ್ಕ್) ಹೊಂದಿರುತ್ತದೆ -ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಭಯೋತ್ಪಾದನೆ, ಮಕ್ಕಳ ಶೋಷಣೆ ಮತ್ತು ಇತರರು ಯಾವುದೇ ಅಪರಾಧಗಳಿಗೆ ಭೌಗೋಳಿಕ ಗಡಿಗಳ ಮಿತಿ ಹೊಂದಿಲ್ಲ. ಆದರೆ, ಎಲ್ಲಕ್ಕಿಂತ ಅತ್ಯಂತ ಭಯಾನಕ, ಅಸಹ್ಯಕರ, ಕೆಟ್ಟ ಮತ್ತು ಹೇಸಿಗೆ ತರಿಸುವಂತಹ ಅಪರಾಧವೆಂದರೆ – ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ. ದುರಂತವೆಂದರೆ, ಅದು ಹೆಚ್ಚು ಘಾತೀಯವಾಗಿ-ಕಪಟ ರೀತಿಯಲ್ಲಿ, ಗುಟ್ಟಾಗಿ ಮತ್ತು ಅನಾಮಧೇಯವಾಗಿ ಬೆಳೆಯುತ್ತಿದೆ.
ಕ್ರೋಧ ಹುಟ್ಟಿಸುವ ಸತ್ಯವೆಂದರೆ ಚಿತ್ರಗಳು ಮತ್ತು ವೀಡಿಯೋಗಳನ್ನು ವಿವೇಚನೆಯಿಲ್ಲದೆ ಮತ್ತು ಸಾಮಾನ್ಯ ವಾಗಿ ನಿರುಪದ್ರವಿ ಹೆಸರಿನಲ್ಲಿ ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ಮತ್ತು ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತಿವೆ. ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್‌ಗಳು ಈ ವಿಲಕ್ಷಣ ಅಪರಾಧಿಗಳನ್ನು ವಾಸ್ತವವಾಗಿ ಪತ್ತೆಹಚ್ಚಲಾಗದಂತೆ ಮಾಡುತ್ತವೆ. “ಚೈಲ್ಡ್ ಪೋರ್ನ್”, “ಕಿಡ್ ಪೋರ್ನ್” ಅಥವಾ “ಅಶ್ಲೀಲತೆ'(ಪೋರ್ನೋಗ್ರಫಿ) ಮುಂತಾದ ಪದಗಳನ್ನು ಈ ಅತ್ಯಂತ ಹಾನಿಕಾರಕ ಪಿಡುಗನ್ನು ಸೂಚಿಸಲು ಬಳಸಲಾಗುತ್ತದೆ. ಪ್ರತೀ ಚಿತ್ರ ಅಥವಾ ವೀಡಿಯೋ ಹಿಂದೆ ನಿಜವಾದ ಮಗು ಬಲಿಪಶು ವಾಗಿರುತ್ತದೆ, ನಿಜವಾದ ಶೋಷಣೆ ಮತ್ತು ಅಪರಾಧ ವಿರುತ್ತದೆ. ಅಂತಹ ವಸ್ತುಗಳ ನಿರಂತರ ಉತ್ಪಾದನೆ ಮತ್ತು ವಿತರಣೆಯು ಹೊಸ ಮತ್ತು ಹೆಚ್ಚು ಭೀಕರವಾದ ಚಿತ್ರಗಳ ಬೇಡಿಕೆಯನ್ನು ಉತ್ತೇಜಿ ಸುತ್ತದೆ, ಹೊಸದಾಗಿ ಮತ್ತಷ್ಟು ಮಕ್ಕಳ ಕಿರುಕುಳವನ್ನು ಹೆಚ್ಚಿಸುತ್ತದೆ.
ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ನಮ್ಮ ಮಕ್ಕಳನ್ನು ಉಳಿಸುವುದು, ಅಪರಾಧದ ಅಪರಾಧೀಕರಣ, ನಿಯಂತ್ರಣ, ಸಕ್ರಿಯ ಪತ್ತೆ, ಕ್ರಿಮಿನಲ್ ತನಿಖೆ, ಪ್ರಸಾರವಾಗುವುದನ್ನು ತಡೆಯುವುದು, ಬಲಿಪಶು ಆಗಿರುವ ಮಗುವನ್ನು ಗುರುತಿಸುವಿಕೆ/ಸಂತ್ರಸ್ತರಿಗೆ ಪುನರ್ ವಸತಿ ಮತ್ತು ಅಪರಾಧಿಯನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಬಹು ಆಯಾಮದ ಹೋರಾಟವಾಗಿದೆ.
ಇಂಟರ್‌ನೆಟ್ ಲಭ್ಯತೆ ಹೊಂದಿರುವ ಯಾವುದೇ ಮಗುವಿಗೆ ಆನ್‌ಲೈನ್‌ನಲ್ಲಿ ಯಾವುದು ಸ್ವೀಕಾರಾರ್ಹ ನಡವಳಿಕೆ ಮತ್ತು ಯಾವುದು ಸ್ವೀಕಾರಾರ್ಹವಲ್ಲದ ನಡವಳಿಕೆ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು. ನಮ್ಮ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಅವರು ಎದುರಿಸಬಹುದಾದ ಅನೇಕ ವಿಕೃತ ಮತ್ತು ಅಪಾಯಕಾರಿ ಸಂದರ್ಭಗಳ ಬಗ್ಗೆ ನಾವು ಶ್ರದ್ಧೆಯಿಂದ ಶಿಕ್ಷಣ ನೀಡಬೇಕು. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳು ಅಂತಹ ವಿಷಯವನ್ನು ಮೊದಲೇ ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇವುಗಳು ನಿಸ್ಸಂಶಯವಾಗಿ ಪರಿಹಾರದ ಭಾಗವಾಗುತ್ತದೆ. ಆದರೆ ತನಿಖೆಯ ಪ್ರಾಮುಖ್ಯ ಮತ್ತು ಅಪ ರಾಧಿಯ ವಿಚಾರಣ ಕ್ರಮವು ಎಂದಿನಂತೆ ಅತಿ ಮುಖ್ಯವಾಗುತ್ತದೆ.
ಭಾರತ, ವಿಶ್ವದಲ್ಲೇ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. 2011ರ ಜನಗಣತಿಯು ಭಾರತದಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ 472 ಮಿಲಿಯನ್ ಮಕ್ಕಳನ್ನು ಹೊಂದಿದೆ ಎಂದು ತೋರಿಸು ತ್ತದೆ. ಅದರಲ್ಲಿ 225 ಮಿಲಿಯನ್ ಬಾಲಕಿಯರು. ಭಾರತದಲ್ಲಿ ಡಿಜಿಟಲ್ ಅತ್ಯಂತ ವೇಗವಾಗಿ, ಗಡಿ ಮತ್ತು ಮಿತಿಗಳನ್ನು ಮೀರಿ ಮುನ್ನುಗ್ಗಿ ಬೆಳೆಯುತ್ತಿದೆ. ಇದು ಅಪರಾಧದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಭಾರತದಲ್ಲಿ, ಆನ್‌ಲೈನ್ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯನ್ನು ಐಟಿ ಕಾಯಿದೆ ಮತ್ತು ಪೋಕೊÕà ಕಾಯಿದೆ ಮೂಲಕ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ನಿರ್ದಿಷ್ಟಪಡಿಸಿದ ವಿಶೇಷ ನ್ಯಾಯಾಲಯಗಳ ಮೂಲಕ ಮಕ್ಕಳ ಸ್ನೇಹಿ ವರದಿ, ಸಾಕ್ಷÂಗಳ ದಾಖಲು, ತನಿಖೆ ಮತ್ತು ಅಪರಾಧಗಳ ತ್ವರಿತ ವಿಚಾರಣೆಗಾಗಿ ಕಾರ್ಯವಿಧಾನಗಳನ್ನು ಒಳಗೊಂಡಂತೆ ಮಕ್ಕಳನ್ನು ಮೊದಲ ಸ್ಥಾನದಲ್ಲಿರಿಸುವ ದೃಢವಾದ ಕಾನೂನು ಚೌಕಟ್ಟನ್ನು ಪೋಕೊÕà (ಪಿಒಎಸ್‌ಸಿಒ) ಒದಗಿಸುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಸ್ಥಾಪಿಸಲಾಗಿದೆ. ಈ ಮಧ್ಯೆ, ಪೋಕ್ಸೊ ಜಾರಿ ಸ್ಥಿತಿಗತಿಯ ಮೇಲೆ ನಿಗಾ ಇಡಲಾಗುತ್ತಿದೆ.
ಭಾರತದಲ್ಲಿನ ಕಾನೂನು ಜಾರಿ ಸಂಸ್ಥೆಗಳು, ಇಂಟರ್‌ಪೋಲ್ ಮತ್ತು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಕ್ರಿಯ ಸಂಪರ್ಕದ ಮೂಲಕ ಆನ್‌ಲೈನ್ ಮಕ್ಕಳ ದೌರ್ಜನ್ಯದ ವಿರುದ್ಧ ಹೋರಾಡಲು ಬದ್ಧವಾಗಿವೆ. ವಿಷಯ ವನ್ನು ನಿರ್ಬಂಧಿಸುವುದು ಮತ್ತು ಮಾಹಿತಿಯನ್ನು ಹಂಚಿ ಕೊಳ್ಳುವುದನ್ನು ಹೊರತು ಪಡಿಸಿ, ಕ್ರಿಮಿನಲ್ ಅಪರಾಧದ ತನಿಖೆಯನ್ನು ಹೆಚ್ಚಿನ ಆದ್ಯತೆಯ ಮೇಲೆ ಕೈಗೊಳ್ಳಲಾಗುತ್ತಿದೆ. ಆನ್‌ಲೈನ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲು, ಕ್ರೋಡೀಕರಿಸಲು, ತನಿಖೆ ಮಾಡಲು ಮತ್ತು ಪ್ರಚುರ ಪಡಿಸಲು ಸಿಬಿಐ ಒಂದು ನಿರ್ದಿಷ್ಟ ಕೋಶವನ್ನು ಸ್ಥಾಪಿಸಿದೆ.
ಈ ಪಿಡುಗಿನ ವಿರುದ್ಧ ಹೋರಾಡುವ ಬದ್ಧತೆಗೆ ಅನು ಗುಣವಾಗಿ, ಮಕ್ಕಳ ಲೈಂಗಿಕ ನಿಂದನೆ ಮೆಟೀರಿಯಲ್ (ಸಿಎಸ್‌ಎಎಂ)ನ ಬೆಂಬಲಕ್ಕಾಗಿ ಇಂಟರ್‌ಪೋಲ್ ನಿರ್ವಹಿಸುವ ಅಂತಾರಾಷ್ಟ್ರೀಯ ಮಕ್ಕಳ ಲೈಂಗಿಕ ಶೋಷಣೆ (ಐಸಿಎಸ್ ಇ) ದತ್ತಾಂಶಕ್ಕೆ ಸಿಬಿಐ ಸೇರಿದೆ. ಭಾರತವು ಈ ದತ್ತಾಂಶಕ್ಕೆ ಸೇರ್ಪಡೆಗೊಂಡ 68ನೇ ಸದಸ್ಯ ರಾಷ್ಟ್ರವಾಗಿದೆ. ದತ್ತಾಂಶ 27 ಲಕ್ಷಕ್ಕೂ ಹೆಚ್ಚು ಚಿತ್ರಗಳನ್ನು ಹೊಂದಿದೆ ಮತ್ತು 23,000ಕ್ಕೂ ಹೆಚ್ಚು ಸಂತ್ರಸ್ತ ಮಕ್ಕಳನ್ನು ಗುರುತಿಸಲು ಸಹಾಯ ಮಾಡಿದೆ. ಇಂಟರ್‌ಪೋಲ್ ಸೆಕ್ರೆಟರಿ ಜನರಲ್ ಇತ್ತೀಚೆಗೆ ದತ್ತಾಂಶದ ಉಪಯುಕ್ತತೆಯ ಬಗ್ಗೆ ಪ್ರಮುಖ ವಾಗಿ ಪ್ರಸಾವಿಸಿದ್ದಾರೆ. ಆದ್ದರಿಂದ ಇದು ಪ್ರತೀದಿನ ಸರಾಸರಿ 07 ಸಂತ್ರಸ್ತರನ್ನು ಗುರುತಿಸುತ್ತದೆ.
ಈ ಪ್ರಕ್ರಿಯೆಯಲ್ಲಿ ಜಂಟಿ ಸಮನ್ವಯ ಆಧಾರಿತ ಕಾರ್ಯಾಚರಣೆಗಳು ಪ್ರಮುಖವಾಗಿವೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಸಿಬಿಐ ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಬಹುದೊಡ್ಡ ಕಾರ್ಯಾಚರಣೆಗಳನ್ನು ನಡೆಸಿತು. 2021ರಲ್ಲಿ ಆಪರೇಶನ್ ಕಾರ್ಬನ್ ಮತ್ತು 2022ರಲ್ಲಿ ಆಪರೇಶನ್ ಮೇಘಚಕ್ರ ನಡೆಸಿತು. ದುರದೃಷ್ಟಕರ ಸಂಗತಿಯೆಂದರೆ ದೇಶದ ಎಲ್ಲ ಭಾಗಗಳಿಗೂ ಈ ಪಿಡುಗು ಹರಡಿರುವುದು. ಈಗ ಮಾತ್ರ ಜಗತ್ತಿನಾದ್ಯಂತ 100ಕ್ಕೂ ಹೆಚ್ಚು ದೇಶಗಳ ವ್ಯಾಪ್ತಿಗಳಲ್ಲಿ ಅಪರಾಧದ ಹೆಜ್ಜೆಗುರುತು ಇದೆ. ಈ ಕಾರ್ಯಾಚರಣೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ನಿಜವಾದ ಸವಾಲಾಗಿದೆ. ಆದರೂ ಈ ದೇಶವ್ಯಾಪಿ ಕಾರ್ಯಾಚರಣೆಗಳು ಪ್ರಮುಖವಾಗಿ ಸಾರ್ವಜನಿಕ ಅರಿವು ಮೂಡಿಸಲು ಹೆಚ್ಚಿನ ಸಹಾಯ ಮಾಡುತ್ತವೆ.
100ಕ್ಕೂ ಅಧಿಕ ದೇಶಗಳ ವ್ಯಾಪ್ತಿಯಲ್ಲಿ ಅಪರಾಧಿಗಳು ಘೋರ ಅಪರಾಧದಲ್ಲಿ ನಿರಂತರವಾಗಿ ಸಂಪರ್ಕ ಹೊಂದಿರುವಾಗ ಕಾನೂನು ಜಾರಿಯು ನಂಬಲರ್ಹ ಮತ್ತು ಸಂಘಟಿತ ಪ್ರತಿಕ್ರಿಯೆ ನೀಡಲು ತಿಂಗಳುಗಳಲ್ಲ, ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ವಿಪರ್ಯಾಸವಾಗಿದೆ. ಪರಸ್ಪರ ಕಾನೂನು ನೆರವು ವಿಳಂಬ ವನ್ನುಂಟು ಮಾಡುತ್ತದೆ. ಪ್ರಾದೇಶಿಕತೆ, ನ್ಯಾಯವ್ಯಾಪ್ತಿ ಯಾದ್ಯಂತ ದತ್ತಾಂಶವನ್ನು ಹಂಚಿಕೊಳ್ಳುವ ಸಂಕೀರ್ಣ ಕಾರ್ಯವಿಧಾನ, ಅಪರಾಧಿಗಳಿಂದ ಅನಾಮಧೇ ಯರು/ಪ್ರಾಕ್ಸಿಗಳು/ವಿಪಿಎನ್‌ಗಳು/ ಪೀರ್ ಟು ಪೀರ್ ನೆಟ್‌ವರ್ಕ್‌ಗಳ ಬಳಕೆ, ನಕಲಿ ಗುರುತಿನ ಚೀಟಿಗಳ ಬಳಕೆಯಿಂದಾಗಿ ತನಿಖೆಗಳಿಗೆ ಸೂಕ್ತ ಸಮಯದಲ್ಲಿ ಕಾರ್ಯಸಾಧ್ಯವಾದ ದತ್ತಾಂಶ ಲಭ್ಯವಿಲ್ಲದೇ ಇರುವುದು ದೊಡ್ಡ ಲೋಪವಾಗಿದೆ.
ಆನ್‌ಲೈನ್ ಮಕ್ಕಳ ನಿಂದನೆಯನ್ನು ಇತರ ಅಪರಾಧ ಗಳೊಂದಿಗೆ ಸಮೀಕರಿಸಲಾಗುವುದಿಲ್ಲ. ಭೌಗೋಳಿಕ ಅಂಶಗಳು, ಅಸಮರ್ಪಕ ಕಾನೂನುಗಳು ಮತ್ತು ಸಂಕೀರ್ಣ ಕಾರ್ಯವಿಧಾನಗಳಿಂದ ಮುಳುಗಿಹೋಗುವ ಬದಲು ನೀತಿಗಳು ಮತ್ತು ಕಾನೂನು ಜಾರಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಜವಾಬ್ದಾರಿಯುತ ಜಾಗತಿಕ ಸಮುದಾಯವಾಗಿ, ನಾವು ನಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಮತ್ತು ಈ ಪಿಡುಗಿನ ವಿರುದ್ಧ ನಿಜವಾದ ಜಾಗತಿಕ ಪ್ರಯತ್ನ ತೀವ್ರಗೊಳಿಸಿ ರಾಕ್ಷಸಾಕಾರದಲ್ಲಿ ಆಕ್ರಮಣವನ್ನು ಮಾಡಬೇಕು.
ಸದ್ಯ, ಇಂಟರ್‌ಪೋಲ್ ನಿಜವಾಗಿಯೂ ಕಾನೂನು ಜಾರಿ ಏಜೆನ್ಸಿಗಳಲ್ಲಿ ಜಾಗತಿಕ ವಿಶ್ವಾಸ ತುಂಬುವ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಅದರ ವ್ಯಾಪಕ ವಿಸ್ತಾರ ಮತ್ತು ವ್ಯಾಪಕ ಶ್ರೇಣಿಯ ಪಾಲುದಾರಿಕೆಗಳೊಂದಿಗೆ ಅದು ಅತ್ಯುತ್ತಮ ಸ್ಥಾನ ಕಾಯ್ದುಕೊಂಡಿದೆ. ದಿಲ್ಲಿಯಲ್ಲಿ ಮುಂಬರುವ ಇಂಟರ್‌ಪೋಲ್ ಮಹಾಧಿವೇಶನದಲ್ಲಿ ಈ ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲಬೇಕು ಮತ್ತು ಅದು ನಿಜಕ್ಕೂ ಅರ್ಹ ಅಗ್ರ ಆದ್ಯತೆಯಾಗಿದೆ.
“ನಮ್ಮ ಮಕ್ಕಳು ಮೊದಲು-ಪ್ರತೀ ಬಾರಿ, ಎಲ್ಲೆಡೆ’ -ಇದು ಜಾಗತಿಕ ಸಮುದಾಯದ ಧ್ಯೇಯವಾಕ್ಯ ಮತ್ತು ಗುರಿಯಾಗಬೇಕು.
-ರಿಷಿ ಕುಮಾರ್ ಶುಕ್ಲಾ,
ಮಾಜಿ ನಿರ್ದೇಶಕರು, ಸಿಬಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipu: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.