Children ಹದಿಹರೆಯ -ತಾಯಿಯ ಕರ್ತವ್ಯ


Team Udayavani, Dec 22, 2023, 5:15 AM IST

1-sadsdsa

“ದೇವರು ಎಲ್ಲ ಕಡೆ ಇರಲಾಗುವುದಿಲ್ಲ ಅದಕ್ಕೆ “ತಾಯಿ’ಯನ್ನು ಸೃಷ್ಟಿಸಿದ” ಎಂಬ ಮಾತು ಜನಜನಿತ. ಈ ಸೃಷ್ಟಿ ತಾಯಿಗೆ ದೇವರ ಸ್ಥಾನವನ್ನು ನೀಡಿದೆ. ಬಹುಶಃ ವಿಶ್ವದ ಎಲ್ಲ ಭಾಷೆಗಳಲ್ಲಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಾಯಿಯ ಬಗ್ಗೆ ಮೂಡಿಬಂದಷ್ಟು ಬರೆಹಗಳು, ಚಿಂತನೆಗಳು ಬೇರೆ ವಿಚಾರಗಳತ್ತ ಹರಿದಿಲ್ಲ. ಆದರೂ “ಅಮ್ಮ’, “ತಾಯಿ’ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ -ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ, ಆಗಲು ಸಾಧ್ಯವೂ ಇಲ್ಲ. ದೇವರ ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ?

ಮಕ್ಕಳ ಪಾಲನೆ-ಪೋಷಣೆಗೆ ತಾಯಿ ಎಷ್ಟೇ ಆದ್ಯತೆ ನೀಡುತ್ತಿರಲಿ, ಮಕ್ಕಳನ್ನು ಎಷ್ಟೇ ಸಂಸ್ಕಾರ ತುಂಬಿ ಬೆಳೆಸುತ್ತಿರಲಿ, ಅವರು ಹದಿಹರೆಯಕ್ಕೆ ಕಾಲಿರಿಸಿದರೆಂದರೆ ತಾಯಿಯ ಮನದಲ್ಲಿ ಏನೋ ಕಳವಳ ಶುರುವಾಗತೊಡಗುತ್ತದೆ. ಆಗ ಆಕೆಗೆ ಎದುರಾಗುತ್ತವೆ ನೋಡಿ, ಸವಾಲುಗಳ ಮೇಲೆ ಸವಾಲು ಗಳು… ತಾಯಿಯ ಕರ್ತವ್ಯ ನಿಷ್ಠೆಯ ಅಗ್ನಿಪರೀಕ್ಷೆಗಳು… ತನಗೂ ಒಂದು ಅಸ್ತಿತ್ವವಿದೆ ಎನ್ನುವುದನ್ನೂ ಮರೆತು ಬದುಕಬೇಕಾದ ಅನಿವಾರ್ಯತೆಗಳು.

ಅಪರಿಮಿತ ಉತ್ಸಾಹ ಹಾಗೂ ಮಹತ್ವಾಕಾಂಕ್ಷೆಯೊಂದಿಗೆ ಕನಸುಗಳ ಮೇಲೆ ಕನಸುಗಳನ್ನು ಕಟ್ಟಿಕೊಳ್ಳುತ್ತಾ, ಅತಿವೇಗದಲ್ಲಿ ಅಡಿಯಿಡುವ ಈ ಹದಿಹರೆಯದ ಮಕ್ಕಳನ್ನು ನಿಯಂತ್ರಣದಲ್ಲಿ ಇಡುವುದಾಗಲೀ, ಸಮಾಜಸಮ್ಮತ ನೀತಿ-ನಿಯಮಗಳ ಚೌಕಟ್ಟಿನೊಳಗೆ ಬೆಳೆಸುವುದಾಗಲೀ, ಸುಲಭದ ಕೆಲಸವೇನಲ್ಲ. ತನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವ, ಜಗತ್ತನ್ನೇ ಜಯಿಸಿ ಬಿಡುತ್ತೇನೆ ಎಂದು ಮನಬಂದಂತೆ ಮುನ್ನುಗ್ಗುವ, ಕುತೂಹಲ ಗಳನ್ನೆಲ್ಲ ಒಮ್ಮೆಲೇ ಭೇದಿಸಿಬಿಡಬೇಕೆಂಬ ಧಾವಂತದ, ನಿಷೇಧಿತ ಅಂಶಗಳನ್ನು ಬಗೆದು ತಿಳಿಯಬೇಕೆನ್ನುವ ಮಹತ್ವಾಕಾಂಕ್ಷೆಗಳ ಮನಸುಗಳಲ್ಲಿ ತಾಳ್ಮೆ, ಸಂಯಮಗಳನ್ನು ರೂಢಿಸುವುದಿದೆ ಯಲ್ಲ, ಅದು ತಾಯಂದಿರಿಗೆ ಇರುವ ಅತೀ ದೊಡ್ಡ ಸವಾಲು.

ಹಾಗಾದರೆ ಮಕ್ಕಳ ಹದಿಹರೆಯದ ಈ ಹಂತದಲ್ಲಿ ತಾಯಿ ಯಾದವಳು ಏನು ಮಾಡಬಹುದು? ಆಗಲೇ ಪ್ರಸ್ತಾವಿಸಿದಂತೆ ಶಕ್ತಿ, ಉತ್ಸಾಹ, ಕನಸು, ಭರವಸೆ, ಧೈರ್ಯ, ಆಸೆ-ಆಕಾಂಕ್ಷೆಗಳ ಒಟ್ಟು ಮೊತ್ತವಾದ ಹದಿಹರೆಯದ ಹುಮ್ಮಸ್ಸನ್ನು ಸನ್ಮಾರ್ಗದತ್ತ, ಧನಾತ್ಮಕ ಕಾರ್ಯ ಚಟುವಟಿಕೆಗಳತ್ತ ಪ್ರವಹಿಸುವಂತೆ ಮಾಡುವ ಗುರುತರ ಜವಾಬ್ದಾರಿ ತಾಯಂದಿರದ್ದು. ಇದಕ್ಕೆ ಅಸಾಮಾನ್ಯ ತಾಳ್ಮೆ -ಸಂಯಮಗಳ ಅಗತ್ಯವಿದೆ. ಮಕ್ಕಳ ಬೆಳವಣಿಗೆಯ ಈ ಘಟ್ಟದಲ್ಲಿ ತಾಳ್ಮೆ ಎನ್ನುವ ತಪಸ್ಸು ತಾಯಿಯ ದಾಗಿರಬೇಕು. ಮಕ್ಕಳ ಮೊಂಡುತನವನ್ನು ಅವಡುಗಚ್ಚಿ ಸಹಿಸಬೇಕಾದ ಅನಿವಾರ್ಯತೆ ಇದೆ. ನಿರಂತರ ಚಿಂತನೆಯ ಆವಶ್ಯಕತೆ ತಾಯಿಗಿದೆ. ಮಕ್ಕಳ ಬಾಹ್ಯ ಹಾಗೂ ಆಂತರಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಹೊಣೆಗಾ ರಿಕೆಯೂ ಆಕೆಯ ಮೇಲಿದೆ. ಹದಿಹರೆಯದ ಮಕ್ಕಳ ಮಾನಸಿಕ ತುಮುಲಗಳನ್ನು ಅರ್ಥೈಸಿಕೊಂಡು ಸೂಕ್ತ ರೀತಿಯಲ್ಲಿ ಅವರನ್ನು ಮುನ್ನಡೆಸುವ ದಿಕ್ಸೂಚಿಯಾಗಿ, ಸರಿ-ತಪ್ಪುಗಳನ್ನು ತಿಳಿಸಿ ಹೇಳುವ ಮಾರ್ಗದರ್ಶಕಿಯಾಗಿ, ಶರವೇಗದಲ್ಲಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಕಾಣುತ್ತಿರುವ ಈ ಮಕ್ಕಳಿಗೆ ಮನೆ ವೈದ್ಯೆಯಾಗಿ, ಮಾನಸಿಕ ಒತ್ತಡವನ್ನು ಹತೋಟಿಯಲ್ಲಿ ಇಡಲು ಸಹಕರಿಸುವ ಮನೋವಿಜ್ಞಾನಿಯಾಗಿ, ಎಲ್ಲಕ್ಕೂ ಮಿಗಿಲಾಗಿ ಭವಿಷ್ಯವನ್ನು ರೂಪಿಸುವ ಶಿಲ್ಪಿಯಾಗಿ… ಬಹು ಪಾತ್ರಗಳನ್ನು ನಿಭಾಯಿಸುವ “ಶಕ್ತಿ’ಯಾಗಬೇಕಿದೆ.

ಪರ್ವತಗಳನ್ನು ಕೂಡ ಕೇವಲ ಮಣ್ಣುಗುಡ್ಡೆಗಳೆಂದು ಪರಿಭಾವಿಸುವ ಹದಿಹರೆಯದ ಮಕ್ಕಳು ಯಾವ ಕೆಲಸಕ್ಕೂ ಹಿಂಜರಿಯುವುದಿಲ್ಲ. ಮನೆಯಲ್ಲಿ ಹೆತ್ತವರ ಮತ್ತು ಶಾಲಾ-ಕಾಲೇಜುಗಳಲ್ಲಿ ಗುರುಗಳ ಸಮ್ಮುಖದಲ್ಲಿ ಮಕ್ಕಳು ತೋರುವ ವರ್ತನೆ ಗೆಳೆಯರ ಬಳಗದಲ್ಲಿ ಬೆರೆತಾಗ ಬದಲಾ ಗುವ ಸಾಧ್ಯತೆಗಳಿವೆ. ಹೆತ್ತವರಿಗಿಂತ ಸ್ನೇಹಿತರಿಗೇ ಹೆಚ್ಚಿನ ಆದ್ಯತೆಯನ್ನು ಕೊಡುವ ಈ ವಯೋಮಾನದ ಮಕ್ಕಳ ಚಿತ್ರ-ವಿಚಿತ್ರ ನಡವಳಿಕೆಗಳನ್ನು ಸಹಿಸಿಕೊಂಡು ಅವರ ಉಡಾಫೆಯ ವರ್ತನೆಗಳನ್ನು ನವಿರಾಗಿ ತಿದ್ದುವ ಸಹನೆ ಮತ್ತು ಚಾಕಚಕ್ಯ ತಾಯಿಗಿದ್ದರೆ ಚೆನ್ನ. ತಾರುಣ್ಯಾವಸ್ಥೆಗೆ ಕಾಲಿಟ್ಟ ಈ ಯುವಶಕ್ತಿಗೆ ಲೋಕವೇ ಒಂದು ವಿಸ್ಮಯ! ಕಲ್ಪನಾಲೋಕದಲ್ಲೇ ಇವರ ಪಯಣ! ಅಂಥ ಹೃದಯಗಳನ್ನು ವಾಸ್ತವದತ್ತ ತರಲು ತಾಯಂದಿರು ಹರಸಾಹಸ ಪಡಬೇಕಾಗುತ್ತದೆ. ಈ ಹಂತದಲ್ಲಿ ನಿನ್ನನ್ನು ನಾನು ನಂಬುತ್ತೇನೆ ಎನ್ನುವ ಭರವಸೆಯನ್ನು ಅವರಿಗೆ ನೀಡಿದರೂ ಸಹ ಮಕ್ಕಳು ಶಾಲಾ ಕಾಲೇಜುಗಳಿಗೆ ಸರಿಯಾಗಿ ಹೋಗುತ್ತಿ¨ªಾರೆಯೇ?, ಅವರ ಗೆಳೆಯ -ಗೆಳತಿಯರು ಯಾರು?, ಶಾಲಾ -ಕಾಲೇಜುಗಳನ್ನು ಹೊರತುಪಡಿಸಿ ಹೊರಗಡೆ ಹೋಗುತ್ತಿ¨ªಾರೆ ಎಂದರೆ ಎಲ್ಲಿಗೆ ಹೋಗುತ್ತಾರೆ?, ಯಾವ ವಾತಾವರಣದಲ್ಲಿ ಅವರು ಇರುತ್ತಾರೆ?, ಏನು?, ಎತ್ತ? ಎನ್ನುವ ಬಗ್ಗೆ ತಾಯಿಯಾದವಳಿಗೆ ಕಣ್ಣಿರಬೇಕು. ಕಲಿಕೆಯನ್ನು ಹೊರತುಪಡಿಸಿ ಹೊರ ಪ್ರಪಂಚದ ವ್ಯವಹಾರಗಳಲ್ಲಿ ಮಕ್ಕಳು ನೇರವಾಗಿ ಆಗಲೀ ಫೋನ್‌ ಮುಖೇನವಾಗಲೀ ತೊಡಗಿದ್ದರೆ ಅವರ ಬಗ್ಗೆ ತೀರಾ ನಿಗಾ ವಹಿಸಬೇಕಾದ ಜವಾಬ್ದಾರಿ ತಾಯಿಗಿದೆ. ತಾಯಿಯ ಪ್ರಶ್ನೆಗಳು ಕೆಲವೊಮ್ಮೆ ಮಕ್ಕಳಿಗೆ ಕೋಪ ತರಿಸಬಹುದು, ಆದರೂ ಅಡ್ಡಿಯಿಲ್ಲ, ಪ್ರಶ್ನಿಸುವುದು ತಾಯಿಯ ಹಕ್ಕು. ಮುಜುಗರ ಅನಿಸಿದರೂ ತೊಂದರೆಯಿಲ್ಲ, ತಾಯಂದಿರು ಆಗಾಗ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸುವ ಅಭ್ಯಾಸ ಇಟ್ಟುಕೊಳ್ಳಬೇಕು.

ಮಕ್ಕಳು ಪ್ರೌಢ ಹಂತವನ್ನು ದಾಟಿದ್ದಾರೆ ಎನ್ನುವ ತಾಯಿಯ ನಿರ್ಲಕ್ಷ್ಯವಾಗಲೀ, ಮಕ್ಕಳು ಬದುಕು ಕಟ್ಟಿಕೊಳ್ಳುವವರೆಗೂ ತನ್ನ ತೆಕ್ಕೆಯೊಳಗೇ ಇರಬೇಕು ಎನ್ನುವ ಆಕೆಯ ಅತೀವ ಕಾಳಜಿ ಯಾಗಲಿ ಬಹುಶಃ ನಿರೀಕ್ಷಿತ ಫ‌ಲ ನೀಡಲಾರದು. ಮಕ್ಕಳು ಸೋಲಿನ ಭೀತಿಯಲ್ಲಿ¨ªಾಗ, ಸೋಲು ಗೆಲುವಿನ ಮೊದಲ ಹೆಜ್ಜೆ, ಬದುಕಿಗೆ ನೂರಾರು ದಾರಿಗಳಿವೆ ಎನ್ನುವ ಮನೋ ಸ್ಥೈರ್ಯವನ್ನು ಮಕ್ಕಳಲ್ಲಿ ತುಂಬುವವಳು ತಾಯಿ. ಹದಿಹರೆಯದ ಮಕ್ಕಳು ಮೌನಕ್ಕೆ ಶರಣಾದಾಗ ಅವರಲ್ಲಿ ಜೀವನೋತ್ಸಾಹ ಚಿಮ್ಮಿಸುವವಳು ತಾಯಿ. ಅವಿಭಾಜ್ಯ ಕುಟುಂಬ ವ್ಯವಸ್ಥೆ ಇದ್ದಾಗ ಮನೆ ಮಕ್ಕಳಿಗೆ ನೀತಿ ಬೋಧನೆಯನ್ನು ಕಥೆ ಮೂಲಕ ಹೇಳಿಕೊಡುವ ಹಿರಿಯ ಮನಸುಗಳಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರೀತಿ ಮಮತೆಯ ಮೂಲಕ ಹಿತವಚನ ಹೇಳಬಲ್ಲ ಸಾಮರ್ಥ್ಯ ಇರುವುದು ತಾಯಿಗೆ ಮಾತ್ರ. ಸಮಸ್ಯೆಗಳನ್ನು ಎಳೆದು ಹಾಕಿಕೊಳ್ಳುವಾಗಿನ ಧೈರ್ಯ ಅವುಗಳನ್ನು ಎದುರಿಸಿ ನಿಲ್ಲುವಲ್ಲಿ ಇರದ ತರುಣ -ತರುಣಿಯರು ಮಾನಸಿಕ ಖನ್ನತೆಗೆ ಜಾರದಂತೆ ಕಾಯುವ ತಾಯಿ ಮಕ್ಕಳ ಬದುಕಿನ ಪ್ರೇರಣಾಶಕ್ತಿ. ಈ ಹಂತದಲ್ಲಿ ಮಕ್ಕಳ ಚಿಕ್ಕ ತಪ್ಪುಗಳನ್ನು ಬೆಟ್ಟವಾಗಿಸದೆ ಸೂಕ್ಷ್ಮವಾಗಿ ಅವರನ್ನು ಸರಿ ದಾರಿಗೆ ತರುವ ಸಂಯಮ ಮತ್ತು ಎದೆಗಾರಿಕೆ ತಾಯಿಗೆ ಇರಬೇಕಾದ ಪ್ರಮುಖ ಅಂಶ. ಮಕ್ಕಳ ತಪ್ಪುಗಳಿಗೆ ಸಮರ್ಥನೆ ನೀಡದೆ, ಅದನ್ನು ಒಪ್ಪಿಕೊಂಡು ತಿದ್ದುವ ತಾಯಿ, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಲ್ಲಳು. ಅತಿಯಾದ ಹೊಗಳಿಕೆ ಅಥವಾ ತೆಗಳಿಕೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಒಳ್ಳೆಯದಲ್ಲ ಎನ್ನುತ್ತಾರೆ ಮಕ್ಕಳ ಮನಶಾಸ್ತ್ರಜ್ಞರು.

ಮಕ್ಕಳ ಕಾರ್ಯ ಚಟುವಟಿಕೆಗಳ ಬಗ್ಗೆ ಕಾಳಜಿ ಇರಲಿ, ಆದರೆ ಅವರು ಸ್ವತಂತ್ರವಾಗಿ ನಿಭಾಯಿಸತಕ್ಕಂತಹ ಕೆಲಸಗಳಲ್ಲಿ ತಾಯಿಯ ಪ್ರವೇಶ ಬೇಡ, ಆವಶ್ಯಕತೆ ಇ¨ªಾಗ ಮಾರ್ಗದರ್ಶನ ನೀಡಿದರೆ ಸಾಕು ಎನ್ನುವ ರೋಸೊªà ಅವರ ಅಭಿಪ್ರಾಯ ಒಪ್ಪಿಕೊಳ್ಳತಕ್ಕದ್ದೇ. ಮಕ್ಕಳು ತಪ್ಪು ಹೆಜ್ಜೆ ಹಾಕಿದಾಗ ಬೆದರಿಕೆಗೆ ಬದಲಾಗಿ ಭಾವನಾತ್ಮಕವಾಗಿ ಅವರೊಂದಿಗೆ ವ್ಯವಹರಿಸುವ ತಾಯಿ ನಿಜಕ್ಕೂ ಮಕ್ಕಳ ಉತ್ತಮ ನಾಳೆಗೆ ಬುನಾದಿ ಹಾಕಬಲ್ಲಳು.

ಸಮಸ್ಯೆ ಇಲ್ಲದ ಮನುಷ್ಯರಿಲ್ಲ. ಆದರೆ ಇಂತಹ ಸಮಸ್ಯೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಮಾರಕವಾಗದಂತೆ ನೋಡಿ ಕೊಳ್ಳುವ ಜಾಣ್ಮೆ ತಾಯಿಗೆ ಇರುತ್ತದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಪ್ರತಿಕೂಲವಾಗಿ¨ªಾಗ, ಮನೆಮಂದಿಯ ಸಂಬಂ ಧಗಳಲ್ಲಿ ಬಿರುಕು ಮೂಡಿದಾಗ ಮಕ್ಕಳ ಮನಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಕಾಯುವ ಸೂಕ್ಷ್ಮತೆ ತಾಯಂದಿರದ್ದು. ಮಕ್ಕಳು ಹೇಳಿದ್ದನ್ನು ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಆದ ಕಾರಣ ತಾಯಿಯ ಮಾತು, ವರ್ತನೆ, ಗುಣನಡತೆಗಳು ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎನ್ನುವುದನ್ನು ತಾಯಂದಿರು ಮೊದಲು ತಿಳಿದಿರಬೇಕು.

ಒಟ್ಟಿನಲ್ಲಿ ಭಾವೀ ಜನಾಂಗವನ್ನು ರೂಪಿಸುವ “ತಾಯಿ’ ಗೆ ತನ್ನ ಬಹು ಪಾತ್ರಗಳನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಮನೆ ಮಂದಿಯ ನಿರಂತರ ಸಹಕಾರವಿರಲಿ. ಎಲ್ಲಕ್ಕೂ ಮಿಗಿಲಾಗಿ ದೇವರ ಸಹಾಯ, ಅಭಯಹಸ್ತ ಸದಾ ತಾಯಂದಿರ ಮೇಲಿರಲಿ, ತನ್ಮೂಲಕ ಯುವಜನತೆ ದೇಶದ ಅಪೂರ್ವ ಆಸ್ತಿಯಾಗಲಿ ಎಂದು ಆಶಿಸೋಣ.

ಜಯಲಕ್ಷ್ಮೀ ಕೆ., ಮಡಿಕೇರಿ

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.