ಕರಾವಳಿಗೆ ಅನ್ಯಾಯವೇನೂ ಹೊಸತಲ್ಲ


Team Udayavani, Jul 12, 2018, 6:00 AM IST

31.jpg

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕರಾವಳಿಯಿಂದ ಮುಖ್ಯಮಂತ್ರಿಯಾಗುವ ಭಾಗ್ಯ ದೊರಕಿದ್ದು ಬರೀ ಇಬ್ಬರಿಗೆ ಮಾತ್ರ. ಪರಿಸ್ಥಿತಿಯ ಕಾರಣ ಮುಖ್ಯಮಂತ್ರಿ ಪಟ್ಟದಲ್ಲಿ ಕುಳಿತ ಅವರಿಂದ ಕರಾವಳಿಗೆ ಕಿಂಚಿತ್ತಾದರೂ ಕೊಡುಗೆ ನೀಡುವ ಅವಕಾಶಗಳು ಮಾತ್ರ ಇದ್ದವು. ಆದರೆ ಉಳಿದವರಂತೆ ಅವರು ಕೂಡಾ ಕರಾವಳಿಯನ್ನು ನಿರ್ಲಕ್ಷಿಸಿದುದರಿಂದ ಇಂದು ಕರಾವಳಿಗೆ ಯಾರೂ ಇಲ್ಲ ಎಂಬ ಸ್ಥಿತಿ ಎದುರಾಗಿದೆ.  

ಕಳೆದ ವಾರ ಮಂಡನೆಯಾದ ರಾಜ್ಯ ಮುಂಗಡಪತ್ರ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಸಾಲಮನ್ನಾ ವಿಚಾರದಲ್ಲಿ ರಾಜ್ಯದ ಅಷ್ಟೂ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದವು. ಮೂರು ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕೂಡ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅಧಿಕಾರಿಗಳ ಜತೆ ಕ್ಯಾಬಿನೆಟ್‌ ಸಭೆ ನಡೆಸಿ ರಾಜ್ಯದ ರೈತರ ಸಾಲ ಮನ್ನಾ ಮಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಬಹುಮತ ಸಾಬೀತಾಗದೇ ಸರಕಾರ ಬಿದ್ದು ಹೊಯಿತು. ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸರಕಾರ ಆಡಳಿತ ಚುಕ್ಕಾಣಿ ಹಿಡಿಯಿತು. ಹೊಸ ಸರಕಾರದ ಬಜೆಟ್‌ ಮಂಡನೆಯೇ ಒಂದು ವಿಚಿತ್ರ ಸಂದರ್ಭದಲ್ಲಿ ಆಗಿದೆ. 

ಮಿತ್ರ ಪಕ್ಷ ಕಾಂಗ್ರೆಸ್‌ಗೆ ಅದರಲ್ಲೂ ನಿರ್ದಿಷ್ಟವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್‌ ಮಂಡನೆಯಾಗು ವುದು ಇಷ್ಟವಿರಲಿಲ್ಲ. ಕೊನೆಗೆ ಅವರು ಹಾಕಿದ ಷರತ್ತುಗಳನ್ನು ಒಪ್ಪಿಕೊಂಡು ಕುಮಾರಸ್ವಾಮಿ ಬಜೆಟ್‌ ಮಾಡಿದ್ದಾರೆ. ಇತ್ತ ಬಿಜೆಪಿಗೂ ಜನಪರ ಬಜೆಟ್‌ ಮಂಡನೆಯಾದರೆ, ಮುಂಬರುವ ಲೋಕಸಭಾ ಚುನಾವಣೆಗೆ ಹೊಡೆತ ಬೀಳಬಹುದು ಎಂಬ ಆತಂಕ ಒಳಗೊಳಗೆ ಮನೆಮಾಡಿತ್ತು. ಸದಾ ರೈತರ ಸಾಲಿನಲ್ಲೇ ಗುರುತಿಸಿಕೊಳ್ಳುವ ದೇವೇಗೌಡರ ಪಕ್ಷ ರೈತರ ಬಾಳಿಗೆ ಬೆಳಕಾಗಲಿದೆ ಎಂದು ರೈತ ಸಮುದಾಯವೇ ಆಶಾಭಾವನೆ ಹೊಂದಿತ್ತು. ರಾಜ್ಯದ ಹಣಕಾಸಿನ ಸ್ಥಿತಿ ಸಂದಿಗ್ಧವಾಗಿದ್ದರೂ ಸಾಲ ಮನ್ನಾ ಮಾಡುವ ವಿಚಾರ ಅಷ್ಟೇ ವೇಗದಲ್ಲಿ ಹರಡಿತ್ತು. ಮೂರು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಸಾಲಮನ್ನಾ ಪ್ರಸ್ತಾವ ಕ್ರಮೇಣ ಚುರುಕುಗೊಳ್ಳುತ್ತಾ ಸಾಗಿತು. 

ಸಮ್ಮಿಶ್ರ ಸರಕಾರವಾದುದರಿಂದ ಹೆಚ್ಚಿನ ಮಂದಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶಗಳು ನಿಶ್ಚಯವಾಗಿ ದೊರೆಯುತ್ತದೆ. ಈ ನಿರೀಕ್ಷೆಯಲ್ಲಿ ಒಂದಷ್ಟು ನವೀನ ಯೋಜನೆ-ಯೋಚನೆಗಳು ಪ್ರಸ್ತಾವವಾಗುವ ನಿರೀಕ್ಷೆ ಇತ್ತು. ಆದರೆ ಅಭಿಪ್ರಾಯಗಳನ್ನು ಬಜೆಟ್‌ಗೆ ಸೇರಿಸುವ ಬದಲು ಲಾಬಿಗಳೇ ಜಾಸ್ತಿಯಾಗುತ್ತಾ ಸಾಗಿತು. ಇದರ ಪರಿಣಾಮ ಕೆಲವರಿಗೆ ಸಿಹಿ, ಕೆಲವರಿಗೆ ಬರೀ ಕಹಿ ಒಳಗೊಂಡ ಬಜೆಟ್‌ ಮಂಡನೆಯಾಯಿತು. ಜೆಡಿಎಸ್‌ ಪ್ರಾಬಲ್ಯವಿರುವ ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಕೇಂದ್ರಿತವಾಗಿ ಕಾರ್ಯ ಯೋಜನೆ ರೂಪಿಸಲಾಯಿತಷ್ಟೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಮಂಡಿಸಲಾದ ಬಜೆಟ್‌ ಎಂಬುದು ರಾಜಕೀಯ ವಿಶ್ಲೇಷಕರ ವಾದವಾದರೆ, ಆರ್ಥಿಕ ಸುಸ್ಥಿರತೆಯನ್ನು ವಿವಿಧ ಆಯಾಮಗಳಲ್ಲಿ ಗಳಿಸಲು ಈ ಬಜೆಟ್‌ ರೂಪಿಸಲಾಗಿದೆ ಎಂಬುದು ಆರ್ಥಿಕ ಚಿಂತಕರ ವಾದ.

ನಿರಾಸೆಯಾಗಿದ್ದು ನಿಜ
ಈ ನಡುವೆ ಕರಾವಳಿ ಕರ್ನಾಟವನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆೆ ಎಂಬ ಆರೋಪಗಳು ಕರಾವಳಿ ಸೇರಿದಂತೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಬಜೆಟ್‌ ಮಂಡನೆಯಾದ ಬಳಿಕ ಮಾಧ್ಯಮಗಳೊಂದಿಗೆ ತಮ್ಮ ಆಕ್ರೋಶವನ್ನು ಅವಿಭಜಿತ ದ.ಕ. ಜಿಲ್ಲೆಯ ಶಾಸಕರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಅಗತ್ಯಗಳಿಗೆ ಸ್ಪಂದಿಸಿಲ್ಲ ಎನ್ನುವುದು ಕೆಲವರ ವಾದವಾದರೆ, ಬಜೆಟ್‌ ರೂಪಿಸುವ ಸಂದರ್ಭ ಸಲ್ಲಿಸಿದ್ದ ಮನವಿಗಳನ್ನು ಪರಿಗಣಿಸಲಾಗಿಲ್ಲ ಎಂಬುದು ಬಹುತೇಕರ ವಾದವಾಗಿತ್ತು. ಕರಾವಳಿಯ ಮೀನುಗಾರರ ಸಮಸ್ಯೆ, ಎಂಡೋಸಲ್ಫಾನ್‌ ಬಾಧಿತರ ಸಮಸ್ಯೆ, ಮರಳು ಸಮಸ್ಯೆಗೆ ಶಾಶ್ವತ ನೀತಿ, ಕುಷ್ಕಿ ಜಮೀನು ವಿವಾದ ಇತ್ಯಾದಿ ಸಮಸ್ಯೆಗಳ ಕುರಿತು ಕರಾವಳಿ ಹಾಗೂ ಮಲೆನಾಡಿನ ಶಾಸಕರು ಆಕ್ರೋಶ ಹೊರಹಾಕಿದರು. ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಬಜೆಟ್‌ನಲ್ಲಿ ಕರಾವಳಿಯ ಅಭಿವೃದ್ಧಿಗೆ ನೀಡಲಾದ ಕೊಡುಗೆಗಳನ್ನು ಮುಂದುವರೆಸಲಾಗುವುದು ಎಂದು ಹೇಳಲಾಗಿದ್ದರೂ ಈ ಹೇಳಿಕೆಯಿಂದ ಕರಾವಳಿ ಶಾಸಕರು ತೃಪ್ತರಾಗಿಲ್ಲ.

ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಭಾರೀ ಮಳೆಗೆ ಮಂಗಳೂರು ನಗರ ಅಕ್ಷರಶಃ ಮುಳಗಡೆಯಾಗಿತ್ತು. ಕೃತಕ ನೆರೆ ಹಿನ್ನೆಯಲ್ಲಿ ನಗರದಲ್ಲಿ ನಡೆಯಬೇಕಾದ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀರಿಕ್ಷಿಸಲಾಗಿತ್ತು. ಒಂದು ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಜನರ ಕೈಯಲ್ಲಿ ಉದ್ಯೋಗದ ಅಗತ್ಯ ಇದೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎನ್ನುವುದೇ ಸಮಸ್ಯೆಯ ಮೂಲ. ಕರಾವಳಿ ಭಾಗಕ್ಕೆ ಒಂದೆರಡು ಉದ್ಯಮಗಳು ಬಂದಿದ್ದರೆ ಮತದಾರರಲ್ಲಿ ನಿರಾಸೆ ಮೂಡುತ್ತಿರಲಿಲ್ಲ. 

ಮಲತಾಯಿ ಧೋರಣೆ
ಬಜೆಟ್‌ ಸಂದರ್ಭ ಕರಾವಳಿಗೆ ಮಾಡಲಾಗುತ್ತಿರುವ ಅನ್ಯಾಯ ಅಥವಾ ಮಲತಾಯಿ ಧೋರಣೆ ಇದೇನು ಹೊಸತಲ್ಲ. ಪ್ರತಿ ಬಜೆಟ್ಟಿನಲ್ಲಿಯೂ ಕರಾವಳಿ ಕರ್ನಾಟಕವನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದ ಕರಾವಳಿಗೆ ಅಂದು ದೊರಕಿದ್ದು ಶೂನ್ಯ, ಇಂದು ದೊರೆಯುತ್ತಿರುವುದು ಶೂನ್ಯವೇ ಆಗಿದೆ. 1992ರಿಂದ 1994ರ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿಯೂ ಭಾರಿ ಕೊಡುಗೆಗಳೇನು ನೀಡಲಾಗಿಲ್ಲ. ರಸ್ತೆಗಳು ಮೇಲ್ದರ್ಜೆಗೆ ಏರಿದ್ದು ಹೊರತಾಗಿ, ಆ ಅವಧಿಯಲ್ಲೂ ಕರಾವಳಿ ಕರ್ನಾಟಕ ಹೆಚ್ಚೇನು ಅಭಿವೃದ್ಧಿಯಾಗಿಲ್ಲ. ಬಳಿಕ ಮೊಯ್ಲಿ ಅವರು ಕೇಂದ್ರ ಸಚಿವರಾದ ಸಂದರ್ಭ ಕಾನೂನು ಹಾಗೂ ಪೆಟ್ರೋಲಿಯಂ ಖಾತೆಯ ಸಚಿವರಾಗಿದ್ದರು. ಈ ಸಂದರ್ಭದಲ್ಲೂ ಅವರಿಗೆ ಕರಾವಳಿಯನ್ನು ಅಭಿವೃದ್ಧಿಪಡಿಸಲು ಅವಕಾಶವಿತ್ತು. 

ನಿರೀಕ್ಷಿಸದೆ ಮುಖ್ಯಮಂತ್ರಿ ಪಟ್ಟಕ್ಕೇರಿದ ಡಿ.ವಿ. ಸದಾನಂದ ಗೌಡರೂ ನೀಡಿದ್ದು ಕೂಡಾ ಶೂನ್ಯವೇ. 26 ಮೇ 2014ರಿಂದ ನವೆಂಬರ್‌ 2014ರ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಡಿವಿಎಸ್‌ ಅವರಿಂದ ಕರಾವಳಿ ಕರ್ನಾಟಕ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ನಮ್ಮವರೇ, ನಮ್ಮ ಕಣ್ಣಮುಂದೆ ಓಡಾಡುತ್ತಿದ್ದವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ ಎಂದಾಗ ಹಬ್ಬದ ವಾತಾವರಣ ಮನೆಮಾಡಿತ್ತು. ಅಭಿವೃದ್ಧಿಯ ಕದ ತಟ್ಟಲು ಅವರೂ ವಿಫ‌ಲರಾದರು. ಕರಾವಳಿಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ, ಈ ಭಾಗದ ಅಭಿವೃದ್ಧಿಗೆ ಭರಪೂರ ಕೊಡುಗೆ ನೀಡುವ ಅವಕಾಶಗಳಿತ್ತು. ತಮಗೆ ರಾಜಕೀಯ ಅವಕಾಶ ನೀಡಿದ ತವರನ್ನೇ ನಿರ್ಲಕ್ಷಿಸಿದರು.

ಡಿವಿಎಸ್‌ ರೈಲ್ವೇ ಸಚಿವರಾದ ಸಂದರ್ಭದಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ದೊರೆಯುವ ನಿರೀಕ್ಷೆ ಇತ್ತಾದರೂ ಅದು ಈಡೇರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ರೈಲ್ವೆ ಸಚಿವರಾದ ಸಂದರ್ಭ ಹೈದರಾಬಾದ್‌ ಕರ್ನಾಟಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದರಲ್ಲದೆ ರೈಲು ಸೇವೆಯ ವಿಸ್ತರಣೆಗೆ ಕಾರಣವಾಗಿದ್ದರು. ಆದರೆ ಕರಾವಳಿಗೆ ದೊರೆತಿದ್ದ ಎರಡು ಅವಕಾಶಗಳಲ್ಲಿ ಇಂಥ ಯಾವ ಸಾಧನೆಯೂ ಸಾಧ್ಯವಾಗಲಿಲ್ಲ. ಜನರಿಗೆ ಸ್ವಾವಲಂಬನೆ ಹಾದಿ ತೊರಿಸಲು ವಿಫ‌ಲವಾಯಿತು. ಅಧಿಕಾರದ ಅವಧಿಯಲ್ಲಿ ವಿಶೇಷ ಅಭಿವೃದ್ಧಿಗಳೇನು ಸಾಧ್ಯವಾಗದ ಪರಿಣಾಮ ತವರು ಕ್ಷೇತ್ರವನ್ನು ಬಿಟ್ಟು ರಾಜಧಾನಿಯ ಕ್ಷೇತ್ರವೊಂದರಲ್ಲಿ ಚುನಾವಣೆಗೆ ಸ್ಪರ್ಧಿಸುವಂತಾಯಿತು. 

ಕರಾವಳಿಯ ಈ ಇಬ್ಬರು ಮುಖ್ಯಮಂತ್ರಿಗಳನ್ನು ಹೊರತಾಗಿ ಉಳಿದೆಲ್ಲಾ ಮಾಜಿ ಮುಖ್ಯಮಂತ್ರಿಗಳು ತಮಗೆ ರಾಜಕೀಯ ಜೀವನದ ಹಾದಿ ತೋರಿದ ಕ್ಷೇತ್ರ ಹಾಗೂ ಮತದಾರರನ್ನು ನಿರ್ಲಕ್ಷಿಸಿಲ್ಲ. ಅಧಿಕಾರದ ಅವಧಿಯಲ್ಲಿ ತಮ್ಮ ತವರು ಕ್ಷೇತ್ರಕ್ಕೆ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಕುಟುಂಬ ರಾಜಕಾರಣದ ತವರು ಎಂದೇ ಟೀಕೆಗೆ ಒಳಗಾಗುತ್ತಿರುವ ಹಾಸನವು ಎಲ್ಲೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿಲ್ಲ. ಸಿದ್ದರಾಮಯ್ಯ ಅವರೂ ಸ್ವಕ್ಷೇತ್ರ ಹಾಗೂ ನೆರೆಯ ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಆವರ ಅವಧಿಯಲ್ಲಿ ಶಿವಮೊಗ್ಗ ಕಂಡ ಅಭಿವೃದ್ಧಿ ಸದಾ ಹಸಿರಾಗಿದೆ. ಈ ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಇದ್ದ ಪ್ರಾಂತೀಯ ಪ್ರೇಮ ಕರಾವಳಿ ಕರ್ನಾಟಕದ ರಾಜಕಾರಣಿಗಳಿಗೆ ಏಕೆ ಇಲ್ಲ? ಲಭಿಸಿದ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ನಮ್ಮ ರಾಜಕಾರಣಿಗಳೇಕೆ ವಿಫ‌ಲರಾಗುತ್ತಿದ್ದಾರೆ? ಬಜೆಟ್‌ನಲ್ಲಿ ಕುಮಾರಸ್ವಾಮಿ ತೋರಿದ ಪ್ರಾಂತೀಯ ಪ್ರೇಮ ಕರಾವಳಿ ಜನಪ್ರತಿನಿಧಿಗಳಿಗೆ ಏಕಿಲ್ಲ? ಹಳೇ ಮೈಸೂರು ಕ್ಷೇತ್ರದ ಪರವಾಗಿ ಮಾತನಾಡುವುದಾದರೆ ತನ್ನ ನಂಬಿದ ಮತದಾರಾರಿಗೆ ಕುಮಾರಸ್ವಾಮಿ ಮೋಸಮಾಡಿಲ್ಲ. 

ರಾಜಕೀಯ ಕಾರಣಗಳು 
ಜಿಲ್ಲೆಯಲ್ಲಿರುವ ಜನಪ್ರತಿನಿಧಿಗಳ ಪಕ್ಷವೇ ಅಧಿಕಾರದಲ್ಲಿದ್ದರೆ ಸೀಮಿತ ಅಭಿವೃದ್ಧಿಯನ್ನಾದರೂ ಸಾಧಿಸಲು ಸಾಧ್ಯವಿದೆ. ರಾಜ ಕೀಯ ಪಕ್ಷಗಳ ನಡುವೆ ಅಭಿವೃದ್ಧಿ ವಿಚಾರದಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಅಭಿವೃದ್ಧಿ ವಿಚಾರದ ನಡುವೆ ಯಾವುದೇ ಲೋಪಗಳು ಉದ್ಭವಿಸಕೂಡದು. ರಾಜಕೀಯ ಕಾರ ಣಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಮುತು ವರ್ಜಿ ತೋರಿಸುತ್ತಿಲ್ಲ. ಅಭಿವೃದ್ಧಿ ವಿಷಯಗಳು ರಾಜಕೀಯ ವಾಗುತ್ತಿರುವ ಪರಿಣಾಮದಿಂದ ಈ ಪರಿಸ್ಥಿತಿ ಉಂಟಾಗಿದೆ. 

ಪ್ರಾದೇಶಿಕ ಒಗ್ಗಟ್ಟಿಲ್ಲ 
ಉತ್ತರ ಕರ್ನಾಟಕ ಭಾಗದ ಶಾಸಕರು ಪಕ್ಷ ಭೇದ ಮರೆತು ಅಭಿವೃದ್ಧಿ ವಿಷಯದಲ್ಲಿ ಒಗ್ಗೂಡುತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವದಲ್ಲಿ ಅಲ್ಲಿನ ಜನಪ್ರತಿನಿಧಿಗಳು ಒಗ್ಗೂಡಿದ್ದರು. ಆದರೆ ಕರಾವಳಿಯ ರಾಜಕೀಯ ಚಿತ್ರಣಗಳೇ ಭಿನ್ನವಾಗಿರುವಂಥದ್ದು. ಜನಪ್ರತಿನಿಧಿಗಳಲ್ಲಿ ರಾಜಕೀಯ ಮರೆತು ಒಗ್ಗಟ್ಟು ಮೂಡುವ ತನಕ ಜಿಲ್ಲೆ ಅಥವಾ ಪ್ರಾದೇಶಿಕ ಅಭಿವೃದ್ಧಿ ಸಾಧ್ಯವಿಲ್ಲ. 

ಸ್ವಪಕ್ಷ ಪ್ರೇಮ
ಆಯಾ ವಿಧಾನಸಭಾ ಕ್ಷೇತ್ರ ಅಥವ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಹಿನ್ನಡೆಗೆ ಮುಖ್ಯ ಕಾರಣವೇ ರಾಜಕೀಯ. ತನ್ನ ಪಕ್ಷ, ತಾನು ಪ್ರತಿನಿಧಿಸುತ್ತಿರುವ ಸಂದರ್ಭದಲ್ಲೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಧೋರಣೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಮನೆಮಾಡಿರುವುದೇ ಜಿಲ್ಲೆಯ ಅಭಿವೃದ್ಧಿ ಕುಂಠಿತಕ್ಕೆ ಕಾರಣ. ಈ ರಾಜಕೀಯ ಜಂಜಾಟದ ನಡುವೆ ಕಂಗಾಲಾಗುತ್ತಿರುವುದು ಮಾತ್ರ ಜನಸಾಮಾನ್ಯರು.

ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.