ಶಾಲೆ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆಗೆ ಬೈ?


Team Udayavani, Feb 25, 2017, 3:50 AM IST

24-PTI-10.jpg

ಶಾಲೆ – ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವುದರ ಹಿಂದೆ ವಿದ್ಯಾರ್ಥಿಗಳಲ್ಲಿ ಸಮಾನತೆ, ಏಕತೆಯಂತಹ ಉನ್ನತ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶವಿರುತ್ತದೆ. ಈ ಶಿಸ್ತಿನ ಅನುಷ್ಠಾನಕ್ಕೆ ಧರ್ಮ ಸಂಹಿತೆಯನ್ನು ಅಡೆತಡೆಯಾಗಿ ತೋರಿಸಿ, ಶಿಸ್ತನ್ನು ಉಲ್ಲಂ ಸುವ ಪ್ರಯತ್ನ ವಿಷಾದನೀಯ.

ಕರಾವಳಿ ಜಿಲ್ಲೆಯ ಕಾಲೇಜೊಂದರಲ್ಲಿ ಆರಂಭವಾದ ಬುರ್ಖಾ ವರ್ಸಸ್‌ ಕೇಸರಿ ಶಾಲು ವಿವಾದ ಹಾವೇರಿ ಜಿಲ್ಲೆಯ ಹಾನಗಲ್‌, ಅಕ್ಕಿ ಆಲೂರು, ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಾಟಿ ಸಿರಸಿಯವರೆಗೂ ವ್ಯಾಪಿಸಿದೆ. ಹಾಗೆಯೇ ಈ ವಿವಾದ ಅಷ್ಟು ಬೇಗ ತಣ್ಣಗಾಗದೇ ಪಸರಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಸಂಬಂಧಪಟ್ಟವರು ಅದಕ್ಕೊಂದು ಖಾಯಂ ಪರಿಹಾರ ನೀಡದೇ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ತಮ್ಮ ವಿದ್ಯಾಸಂಸ್ಥೆಗಳ ವಸ್ತ್ರ ಸಂಹಿತೆಯನ್ನು ಬದಿಗಿಟ್ಟು ಕಾಲೇಜು ತರಗತಿಯೊಳಗೆ ಬುರ್ಖಾ ಮತ್ತು ಕೇಸರಿ ಶಾಲುಗಳನ್ನು ಧರಿಸಲು ಅನುವು ಮಾಡಿಕೊಟ್ಟು, ಕ್ಯಾಂಪಸ್‌ನಲ್ಲಿನ ಬಿಗು ವಾತಾವರಣವನ್ನು ತಿಳಿಗೊಳಿಸಿ¨ªಾರೆ. ಆದರೂ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಅಥವಾ ವಸ್ತ್ರ ಸಂಹಿತೆ ಎನ್ನುವ ಪರಿಕಲ್ಪನೆ ಇತಿಹಾಸದ ಗರ್ಭ ಸೇರಿ, ಕಾಲೇಜುಗಳು ಫ್ಯಾಷನ್‌ ಶೋ ಗಳ ನಿತ್ಯದರ್ಶಿನಿಯಾಗಬಹುದು ಅಥವಾ ಧಾರ್ಮಿಕ ಐಡೆಂಟಿಟಿಯನ್ನು ತೋರಿಸುವ ಒಡ್ಡೋಲಗವಾಗಬಹುದೆನ್ನುವ ಭಯ ಆವರಿಸುತ್ತಿದೆ.

ತಾತ್ಕಾಲಿಕ ಪರಿಹಾರಗಳ ಅಪಾಯ
ಯಾವುದೇ ಸಮಸ್ಯೆಗಳಿರಲಿ; ಈ ದೇಶದಲ್ಲಿ ತತ್ಕಾಲದ ಪರಿಹಾರ ನೀಡಿ, ಖಾಯಂ ಪರಿಹಾರದ ಭರವಸೆಯ ರೈಲು ಬಿಟ್ಟು ದಿನಗಳೆಯುವುದು ತೀರಾ ಮಾಮೂಲು. ಇದರಿಂದಾಗಿ ತತ್ಕಾಲಕ್ಕೆ ಪರಿಹಾರಗೊಂಡಂತೆ ಕಾಣುವ ಸಮಸ್ಯೆಗಳು ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಮುಂದೊಂದು ದಿನ ಬೃಹತ್ತಾಗಿ ಬೆಳೆದು ಸ್ಫೋಟಗೊಳ್ಳುತ್ತವೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆ ಮಾತು ಎಲ್ಲ ಸಮಸ್ಯೆಗಳಂತೆ ಇದಕ್ಕೂ ಅರ್ಥವತ್ತಾಗಿ ಅನ್ವಯವಾಗುತ್ತದೆ. ಸಮಸ್ಯೆಗಳು ಎದುರಾದಾಗ ಸಮಿತಿಗಳನ್ನು ರಚಿಸಿ ಕಾಲಹರಣ ಮಾಡುವ ಅಥವಾ ಸದ್ಯದ ಸಂದಿಗ್ಧತೆಯಿಂದ ತಪ್ಪಿಸಿಕೊಳ್ಳುವ ಮಾರ್ಗೋಪಾಯವನ್ನು ಅನುಸರಿಸುವುದು ಇನ್ನೊಂದು ತಪ್ಪಿಸಿಕೊಳ್ಳುವ ಮಾರ್ಗ. ಸದ್ಯ ಅಂಥ ಸಮಿತಿ ರಚನೆಯಾಗದಿರುವುದೇ ಒಂದು ಸಮಾಧಾನಕರ ಬೆಳವಣಿಗೆ. ತಾವೇ ರೂಢಿಸಿಕೊಂಡ ನೀತಿ ನಿಯಮಾವಳಿ, ತತ್ವ -ಆದರ್ಶಗಳು, ನೀತಿ ಸಂಹಿತೆ ಮತ್ತು ಶಿಸ್ತನ್ನು ಜಾರಿಗೊಳಿಸಲಾಗದ ಅಸಹಾಯಕತೆಯನ್ನು ಶಿಕ್ಷಣ ಸಂಸ್ಥೆಗಳು ಅನುಭವಿಸುತ್ತಿರುವುದು ತೀರಾ ವಿಷಾದನೀಯ. ಸರಕಾರ ಕೂಡಾ ಈ ನಿಟ್ಟಿನಲ್ಲಿ ದಿಟ್ಟ ನಿಲುವು ತಳೆಯದಿರುವುದು ಶಿಕ್ಷಣ ಸಂಸ್ಥೆಗಳಿಗೆ ಇನ್ನೊಂದು ಬಲವಾದ ಹಿನ್ನಡೆ. ಶಿಕ್ಷಣ ಸಂಸ್ಥೆಯಲ್ಲಿ ಅತ್ಯವಶ್ಯವಾಗಿರುವ ಶಿಸ್ತನ್ನು ಪಾಲಿಸಲು ನಿರ್ದೇಶಿಸದೆ ಮಂತ್ರಿಗಳೊಬ್ಬರು ಶಿಸ್ತಿನ ಕಟ್ಟುನಿಟ್ಟಾದ ಜಾರಿಗೆ ಒತ್ತಾಯಿಸುವವರನ್ನು ಬಂಧಿಸಲು, ಅವರ ವಿರುದ್ಧ ಎಫ್ಐಆರ್‌ ದಾಖಲಿಸಲು ಚಿಂತಿಸುವುದು ಇನ್ನೊಂದು ಮಹಾದುರಂತ. ಇಂತಹ ವಿಚಾರಗಳಲ್ಲಿ ಧಾರ್ಮಿಕ ಭಾವನೆಗಳ ಜತೆಗೆ ರಾಜಕೀಯವೂ ಸೇರಿಕೊಂಡು ತೀರಾ ಸಣ್ಣದಾಗಿರುವ ವಿಚಾರ ದೊಡ್ಡದಾಗಿ ಬೆಳೆಯುತ್ತದೆ ಎಂಬುದು ಬಹಿರಂಗ ಸತ್ಯ. ಇದು ಈ ಹಿಂದಿನ ಅನೇಕ ಘಟನೆಗಳಿಂದ ಸಾಬೀತಾಗಿದೆ. ರಾಜಕೀಯವೂ ಧರ್ಮವೂ ಪ್ರತ್ಯೇಕವಾಗಿರುವ ವಿಚಾರಗಳು, ಅವು ಒಂದರ ವ್ಯಾಪ್ತಿಯೊಳಗೆ ಇನ್ನೊಂದು ಪ್ರವೇಶಿಸಬಾರದು. ಇವೆರಡೂ ಒಂದಾಗಿ ಶಿಕ್ಷಣದಂತಹ ಒಂದು ಪೀಳಿಗೆಯನ್ನು ರೂಪಿಸುವ ಕ್ಷೇತ್ರದೊಳಕ್ಕಂತೂ ಕಾಲಿಡಲೇ ಬಾರದು.

ಆಚರಣೆ ವೈಯಕ್ತಿಕವಾಗಿರಲಿ
ಶಿಸ್ತಿನ ಅನುಷ್ಠಾನಕ್ಕೆ ಧರ್ಮ ಸಂಹಿತೆಯನ್ನು ಅಡೆತಡೆಯಾಗಿ ತೋರಿಸಿ, ಶಿಸ್ತನ್ನು ಉಲ್ಲಂ ಸುವ ಪ್ರಯತ್ನ ವಿಷಾದನೀಯ. ಒಂದು ದೇಶಕ್ಕೆ ಧರ್ಮ ತಳಹದಿಯಾಗಿರಬೇಕು ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ, ಎಲ್ಲ ಕಡೆಗೂ ಧರ್ಮವನ್ನು ಎಳೆದು ತಂದು ಸಹಜ ಚಟುವಟಿಕೆಗಳಿಗೆ, ಹಾಕಿಕೊಂಡ ಶಿಸ್ತು, ನೀತಿ ನಿಯಮಾವಳಿ ಮತ್ತು ಆದರ್ಶಗಳಿಗೆ ಅಡಚಣೆ ಉಂಟುಮಾಡುವುದೂ ಸರಿಯಾದ ಧೋರಣೆಯಲ್ಲ. ಧರ್ಮ ಮತ್ತು ಅದಕ್ಕೆ ಸಂಬಂಧಪಟ್ಟ ಆಚರಣೆ ಮತ್ತು ವಿಧಿ ವಿಧಾನಗಳನ್ನು ಮನೆ-ಮಠ, ಮಸೀದಿ, ಚರ್ಚ್‌ ಮತ್ತು ಗುರುದ್ವಾರಗಳಿಗೆ ಸೀಮಿತಗೊಳಿಸಬೇಕು, ಧಾರ್ಮಿಕ ಆಚರಣೆಗಳು ವೈಯಕ್ತಿಕವಾಗಿರಬೇಕೇ ಹೊರತು ಸಾಮಾಜಿಕವಾಗಬಾರದು ಎನ್ನುವ ಮಾತು ಪ್ರಜ್ಞಾವಂತರಿಂದ ಆಗಾಗ ಕೇಳಿಬರುತ್ತದೆ. ಆದರೆ ಇದನ್ನು ಕಾರ್ಯ ರೂಪಕ್ಕೆ ತರುವ ರಾಜಕೀಯ ಸ್ಥೈರ್ಯ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಧರ್ಮಗಳ ಹಿರಿಯರು ಮಾರ್ಗದರ್ಶನ ಮಾಡಬೇಕು. ಶೈಕ್ಷಣಿಕ ಸಂಸ್ಥೆಗಳು ಅವುಗಳ ಉದ್ದೇಶಕ್ಕೆ ಹೊರತು ಬೇರೆ ಉದ್ದೇಶಗಳಿಗೆ ಆಸರೆ ಕೊಡಬಾರದು. ಈ ನಿಟ್ಟಿನಲ್ಲಿ ತಾವು ಹಾಕಿಕೊಂಡ ಬದ್ಧತೆ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಾಗಿ ನಿಗಾವಹಿಸಬೇಕು.

ಜನಪ್ರಿಯ ಉದ್ಯಮಿ ಮತ್ತು ಟಾಟಾ ಸಮೂಹ ಕಂಪನಿಗಳ ಪಿತಾಮಹ, ಸರ್‌ ಜೆ. ಆರ್‌. ಡಿ. ಟಾಟಾ ಮತ್ತು ಖ್ಯಾತ ಕಾನೂನು ತಜ್ಞ ನಾನೀ ಪಾಲಿವಾಲಾ ತಮ್ಮ ಜೀವಿತದುದ್ದಕ್ಕೂ ಜೀವನದಲ್ಲಿ ಶಿಸ್ತಿನ ಬಗೆಗೆ ಮತ್ತು ಅದನ್ನು ದಿನದ 24 ಘಂಟೆಯೂ ಅಳವಡಿಸಿಕೊಳ್ಳುವುದರ ಬಗೆಗೆ ಒತ್ತು ನೀಡುತ್ತಿದ್ದರು. ಒಂದು ದೇಶ ಪ್ರಗತಿ ಸಾಧಿಸಬೇಕಾದರೆ ಮಾಡುವ ಕಾರ್ಯದಲ್ಲಿ, ಆಡುವ ಆಟದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಪ್ರತಿಯೊಂದು ವೇದಿಕೆಯಲ್ಲೂ ಪ್ರತಿಪಾದಿಸುತ್ತಿದ್ದರಂತೆ. ಬಹುಶಃ ಟಾಟಾ ಕಂಪನಿ ಉದ್ಯಮ ರಂಗದಲ್ಲಿ ಸಾಧನೆಯ ಮಂಚೂಣಿಯಲ್ಲಿರಲು ಇದೇ ಕಾರಣ ಇರಬೇಕು ಎನ್ನುವುದರಲ್ಲಿ ಅರ್ಥವಿಲ್ಲದಿಲ್ಲ. ಸರಿಯಾಗಿ ಶೇವ್‌ ಮಾಡಿಕೊಳ್ಳದೇ ಆಫೀಸಿಗೆ ಬಂದ ತನ್ನ ಸಿಬಂದಿಯನ್ನು ಜೆ. ಆರ್‌. ಡಿ ಟಾಟಾ ಅವರು ನಯವಾಗಿ ತರಾಟೆಗೆ ತೆಗೆದುಕೊಂಡು, “ಗಡ್ಡವನ್ನು ಸರಿಯಾಗಿ ಟ್ರಿಮ್‌ ಮಾಡು ಅಥವಾ ದಿನಾಲೂ ಶೇವ್‌ ಮಾಡು…, ಈ ರೀತಿಯ ದಾಡಿ ಅಶಿಸ್ತಿನ ಪರಮಾವಧಿ ಮತ್ತು ಕ್ಯಾಶುವಲ್‌ ಅಪ್ರೋಚ್‌. ಹಾಗೆಯೇ ಕಂಪೆನಿ ತನ್ನ ಸಿಬಂದಿಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ತಪ್ಪು ಸಂದೇಶವನ್ನೂ ಹೊರಡಿಸುತ್ತದೆ’ ಎಂದು ಹೇಳುತ್ತಿದ್ದರಂತೆ. ಅವರು ಶಿಸ್ತನ್ನು ಎಷ್ಟು ಸೂಕ್ಷ್ಮವಾಗಿ, ಅತ್ಯವಶ್ಯಕವಾಗಿ ಮತ್ತು ಎಷ್ಟು ಆಳವಾಗಿ ಪರಿಗಣಿಸುತ್ತಿದ್ದರು ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೆ?

ಶಿಸ್ತಿನಲ್ಲಿ ವಿನಾಯಿತಿ ಇರಬಾರದು
ಬುರ್ಖಾ ವರ್ಸಸ್‌ ಕೇಸರಿ ಶಾಲು ವಿವಾದದಲ್ಲಿ ಶಿಸ್ತಿನ ಉಲ್ಲಂಘನೆಯ ಸಂಗಡ ಧರ್ಮದ ಕಾರ್ಮೋಡ ಮುಸುಕಿರುವುದು ದುರ್ದೈವ. ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಪ್ರಯತ್ನಿಸಬೇಕು. ಇದಕ್ಕೊಂದು ಖಾಯಂ ಪರಿಹಾರ ಇಲ್ಲದಿದ್ದರೆ, ಇದು ತನ್ನ ಕಬಂಧ ಬಾಹುಗಳನ್ನು ಪೂಜೆ, ಪ್ರಾರ್ಥನೆ, ಹಬ್ಬ ಹುಣ್ಣಿಮೆಗಳಿಗೂ ವಿಸ್ತರಿಸುವ ಭಯ ಇದೆ. ಶಿಸ್ತನ್ನು ಅಳವಡಿಸಬೇಕಾದರೆ ವಿನಾಯಿತಿಗಳಿಗೆ ಆಸ್ಪದ ಇರಬಾರದು. ಯಾವುದೇ ವಿಚಾರದಲ್ಲಿ ಒಮ್ಮೆ ವಿನಾಯಿತಿ ತೋರಿಸಿದರೆ, ಅದರ ಪಟ್ಟಿ ಉದ್ದವಾಗುವುದಲ್ಲದೇ, ಕಾಲಕ್ರಮೇಣ ಸಡಿಲ ನೀತಿಯೇ ಒಪ್ಪಿತ ನಿಯಮಾವಳಿ ಆಗಿ ಮಾರ್ಪಾಡಾಗುತ್ತದೆ ಮತ್ತು ಅದುವೇ ಕಾನೂನು ಆಗುವುದನ್ನು ತಳ್ಳಿಹಾಕುವಂತಿಲ್ಲ. ನಮ್ಮ ದೇಶದಲ್ಲಿನ ಕೆಲವು ಕಾನೂನುಗಳದ್ದು ಇದೇ ಕತೆ. ಯಾರು ಯಾರನ್ನೋ ಸಂಪ್ರೀತಗೊಳಿಸುವುದಕ್ಕಾಗಿ ಕಾನೂನಿಗಿಂತ, ತಿದ್ದುಪಡಿಗಳೇ ಹೆಚ್ಚು ಭಾರವಾಗುತ್ತಿವೆ. ಇದರಿಂದಾಗಿ ಕಾನೂನು ರೂಪಿಸಿ ಜಾರಿಗೊಳಿಸಿದ ಮೂಲ ಉದ್ದೇಶವೇ ಮಾಯವಾಗಿ ಹೋಗಿರುವ ಉದಾಹರಣೆಗಳೂ ಬೇಕಾದಷ್ಟಿವೆ. ಇಂಥ ವಿಚಾರಗಳಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಒತ್ತಡ, ಬೆದರಿಕೆಗಳನ್ನು ಮೆಟ್ಟಿ ನಿಲ್ಲಬೇಕು. ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ಏಕರೂಪದ ನಾಗರಿಕ ಸಂಹಿತೆಯ ಉದ್ದೇಶವೂ ಇದೇ ಇರಬೇಕು.

 ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ಹಿಂದೆ ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುವುದು, ಶ್ರೀಮಂತ, ಬಡವ, ಜಾತಿ, ಧರ್ಮದ ಆಧಾರದ ಮೇಲೆ ಭೇದ-ಭಾವ ಮತ್ತು ಮೇಲು -ಕೀಳು ಎನ್ನುವುದನ್ನು ಹೋಗಲಾಡಿಸುವ ಉನ್ನತ ಉದ್ದೇಶಗಳಿವೆ. ಇದರಲ್ಲಿ ಯಾವುದೇ ಧಾರ್ಮಿಕ, ವೈಯಕ್ತಿಕ ಮತ್ತು ಸಾಮಾಜಿಕ ಭಾವನೆಗಳನ್ನು ನೋಯಿಸುವ ಇಚ್ಛೆ ಇರುವುದಿಲ್ಲ. ಶಾಲಾ ಕಾಲೇಜು ದಿನಗಳಲ್ಲಿ ಸಮಾನತೆ, ಏಕತೆಯಂತಹ ಉನ್ನತ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಉನ್ನತ ಉದ್ದೇಶ ಮಾತ್ರ ಕಡ್ಡಾಯ ಸಮವಸ್ತ್ರದ ಹಿಂದೆ ಇರುತ್ತದೆಯೇ ಹೊರತು ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಅಲ್ಲ. ಯಾವುದೇ ಶಿಕ್ಷಣ ಸಂಸ್ಥೆ ತನ್ನ ಆವರಣದ ಪರಿಮಿತಿಯಲ್ಲಿ ಮಾತ್ರ ತಾನು ಹೇಳುವ ವಸ್ತ್ರಸಂಹಿತೆಯನ್ನು ಅನುಸರಿಸಲು ಕಡ್ಡಾಯ ಪಡಿಸುತ್ತದೆ. ಹಾಗೆಯೇ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಪರಿಕಲ್ಪನೆಯನ್ನು ಮೂಡಿಸುವುದು ಮತ್ತು ಶಾಲಾ ಆವರಣದ ಹೊರಗೆ ಇಂಥ ಶಾಲೆ- ಕಾಲೇಜು ಮಕ್ಕಳು ಎನ್ನುವ ಐಡೆಂಟಿಟಿಯನ್ನು ಕಾಪಾಡಿಕೊಳ್ಳುವುದು ಕೂಡ ವಸ್ತ್ರಸಂಹಿತೆಯ ಉದ್ದೇಶಗಳಾಗಿವೆ. ಶಾಲಾ ಆವರಣದಲ್ಲಿ ಧಾರ್ಮಿಕ ಮತ್ತು ಇತರ ಗುರುತುಗಳನ್ನು ತೋರಿಸದಂತೆ ಮತ್ತು ಆ ವಿಷಯವಾಗಿ ಮಕ್ಕಳು ಬೇರೆಯಾಗಿ ಕಾಣದಂತೆ ನೋಡುವುದು ಇದರಲ್ಲಿ ಅಡಕವಾಗಿದೆ. ಈ ಸಂಹಿತೆಯಲ್ಲಿ ಉಳ್ಳವರ ಮತ್ತು ಇಲ್ಲದವರ ಮಕ್ಕಳು ಒಂದೇ ಸ್ತರದಲ್ಲಿ ಇರುತ್ತಾರೆ.

 ಈ ವಿಷಯದಲ್ಲಿ ಸರಕಾರಕ್ಕೆ ಗುರುತರವಾದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಭಾವನೆಗಳು ಮೇಲುಗೈ ಸಾಧಿಸದಂತೆ ನಿಗಾ ವಹಿಸಬೇಕಾಗಿದೆ. ಪ್ರತಿಯೊಬ್ಬರ ಭಾವನೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇರುವಾಗ, ಆ ನಿಟ್ಟಿನಲ್ಲಿ ಕೈಕೊಳ್ಳುವ ಕ್ರಮಗಳು ಮತ್ತೂಬ್ಬರು ಪಕ್ಷಪಾತ ನೀತಿ ಎಂದು ಬೆಟ್ಟು ಮಾಡಿ ಪ್ರತಿಭಟಿಸದಂತಿರಬೇಕು. ಅಂತಹ ಕ್ರಮಗಳು ಎಲ್ಲರನ್ನೂ ಸಮಾನವಾಗಿ ನೋಡುವಂತಿರಬೇಕು ಹಾಗೂ ಕೆಲವರು ಮಾತ್ರ ವಿಶೇಷ ಅವಕಾಶವನ್ನು ಪಡೆಯುವಂತೆ ಇರಬಾರದು. ಅಂತಹ ವಿಶಾಲವಾದ ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರದರ್ಶಿಸುವ ಬದ್ಧತೆ ಯಾರಿಗಿದೆ?

ರಮಾನಂದ ಶರ್ಮಾ, ಬೆಂಗಳೂರು

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.