ರಾಷ್ಟ್ರೀಯ ಗುರಿಯಿಲ್ಲದ ಸಂಕುಚಿತ ಗುಂಪು
Team Udayavani, Jan 21, 2019, 12:50 AM IST
ಎನ್‌ಡಿಎಗೆ ಪರ್ಯಾಯ ಶಕ್ತಿಯನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವವರೇ ಆಗಿ¨ªಾರೆ. ಇಂತಹ ನಾಯಕರ ಅಧಿಕಾರ ಉಳಿಸಿಕೊಳ್ಳುವ ತವಕದ ಮಜಬೂರಿಯ ಒಕ್ಕೂಟ ಕೇಂದ್ರದಲ್ಲಿ ಮಜಬೂತು ಸರ್ಕಾರ ನೀಡಬಲ್ಲದೇ ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಹಾಘಟಬಂಧನದ ಸದ್ದು ಜೋರಾಗಿ ಕೇಳುತ್ತಿದೆ. ಆದರೆ 80 ಲೋಕಸಭಾ ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜಾವಾದಿ ಪಕ್ಷದ ಸೀಟು ಹೊಂದಾಣಿಕೆಯ ಘೋಷಣೆಯ ನಂತರ ಚುನಾವಣೆ ಪೂರ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಅದು ಮೂರ್ತ ರೂಪ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಬೇಕಾಗಿದೆ.
ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೊರೆತ ಗೆಲುವಿನ ಖುಷಿಯಲ್ಲಿ ಮಹಾಘಟಬಂಧನದ ಕುರಿತಂತೆ ವಿಪಕ್ಷ ನಾಯಕರು ಆಶಾವಾದದ ಹೇಳಿಕೆಗಳು ನೀಡಿದ್ದರಾದರೂ ವ್ಯಕ್ತಿ ಕೇಂದ್ರಿತ ಪಕ್ಷಗಳ ಪರಸ್ಪರರ ಬೆಟ್ಟದಷ್ಟಿದ್ದ ಮಹತ್ವಾಕಾಂಕ್ಷೆಯಿಂದಾಗಿ ಕಲ್ಪನೆ ಹಕೀಕತ್ತಿನಲ್ಲಿ ಬದಲಾಗಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಜನ ಸಮಾಜ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಸಕ್ತಿ ವಹಿಸಲಿಲ್ಲವೆಂಬ ಅಸಮಾಧಾನದಲ್ಲಿರುವ ಬಹುಜನ ಸಮಾಜ ಪಕ್ಷ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನೊಂದಿಗೆ ಸೀಟು ಹೊಂದಾಣಿಕೆಗೆ ಆಸಕ್ತಿ ತೋರಲಿಲ್ಲ. ಅಂತೂ ಚುನಾವಣಾಪೂರ್ವ ಮಹಾಘಟಬಂಧನ ಸಾಕಾರಗೊಳ್ಳುವ ಸಾಧ್ಯತೆ ಇಲ್ಲ ಎಂದಾಯ್ತು. ಏನಿದ್ದರೂ ಚುನಾವಣೋತ್ತರ ಮಹಾಘಟಬಂಧನ ಪರಿಕಲ್ಪನೆ ಯೊಂದೇ ಉಳಿದದ್ದು.
ವಿಶ್ವದ ದೊಡ್ಡ ಪ್ರಜಾಪ್ರಭುತ್ವವಾಗಿರುವ ನಮ್ಮ ದೇಶದಲ್ಲಿ ಜಗತ್ತಿನ ಪ್ರಾಚೀನ ಪ್ರಜಾಪ್ರಭುತ್ವವಾಗಿರುವ ಅಮೆರಿಕದಂತೆ ಸದೃಢ ರಾಜಕೀಯ ವ್ಯವಸ್ಥೆ ಬೆಳೆದು ಬಂದಿಲ್ಲವೆನ್ನುವುದು ವಿಷಾದದ ಸಂಗತಿ. ಅಮೆರಿಕದಂತೆ ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿದ ಎರಡು ಬಲವಾದ ರಾಜಕೀಯ ಪಕ್ಷಗಳು ಜನರ ಮುಂದಿಲ್ಲದಿರುವುದರಿಂದ ಜನರ ಆಶೋತ್ತರಗಳನ್ನು ಗಣನೆಗೆ ತೆಗೆದುಕೊಳ್ಳದೇ ಚುನಾವಣೋ ತ್ತರದಲ್ಲಿ ರಾಜಕೀಯ ಪಕ್ಷಗಳು ಇಚ್ಛಾನುಸಾರ ಒಲವು-ನಿಲುವು ತಳೆಯಲು ಕಾರಣವಾಗುತ್ತಿದೆ. ಯಾವ ಬ್ರಿಟನ್ನಿನ ಸಂಸದೀಯ ಪದ್ಧತಿಯನ್ನು ನಾವು ಸ್ವೀಕರಿಸಿದ್ದೇವೋ ಅಲ್ಲಿರುವಂತೆ ಸರಕಾರದ ಸಂಬಂಧಿತ ವಿಭಾಗಗಳ ಮಂತ್ರಿಗೆ ಸಲಹೆ ನೀಡುವ, ನಿರ್ಧಾರಗಳನ್ನು ವಿಮರ್ಶಿಸುವ ಛಾಯಾ ಕ್ಯಾಬಿನೆಟ್ ಸಹಾ ನಮ್ಮ ವಿರೋಧ ಪಕ್ಷದಲ್ಲಿ ಇಲ್ಲ.
ಕೇಂದ್ರದಲ್ಲಿನ ಸತ್ತಾರೂಢ ಬಿಜೆಪಿ, ಕಾಂಗ್ರೆಸ್ ಮುಕ್ತ ವ್ಯವಸ್ಥೆಯನ್ನು ಸ್ಥಾಪಿಸುವ ಮಾತನಾಡುತ್ತಿದ್ದರೆ ವಿರೋಧ ಪಕ್ಷ ಆಡಳಿತ ಪಕ್ಷದ ಎÇÉಾ ನಿರ್ಣಯಗಳನ್ನು ವಿರೋಧಿಸುವುದೇ ತನ್ನ ಆದ್ಯ ಕರ್ತವ್ಯ ಎಂಬ ಧೋರಣೆ ತಳೆಯುತ್ತದೆ. ಹಾಗಾಗಿ ನಮ್ಮ ಸಂಸತ್ತಿನಲ್ಲಿ ಆರೋಗ್ಯಕರ ಮತ್ತು ದೇಶಹಿತದ ಚರ್ಚೆಗಿಂತ ಕೀಳು ಮಟ್ಟದ ಟೀಕೆ, ಗದ್ದಲ-ಗೊಂದಲ ಹೆಚ್ಚಾಗಿ ಸಂಸತ್ತು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ರಾಷ್ಟ್ರೀಯ ಗುರಿಯಿಲ್ಲದ ಪ್ರಾದೇಶಿಕ ಅಸ್ತಿತ್ವವನ್ನು ಹೊಂದಿದ
ಪಕ್ಷಗಳೇ ಪ್ರಬಲವಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಈ ಪಕ್ಷಗಳು ಜನತೆಗೆ ಸ್ಪಷ್ಟ ಸಿದ್ಧಾಂತವನ್ನು ನೀಡುವಲ್ಲಿ ವಿಫಲವಾಗುತ್ತಿವೆ.
ಚುನಾವಣಾ ಚರ್ಚಾವಸ್ತು ಹೇಗಿರಬೇಕು?
ವಿಶ್ವದ ಆರನೇ ದೊಡ್ಡ ಅರ್ಥವ್ಯವಸ್ಥೆ ಹಾಗೂ ಸೈನ್ಯ ಶಕ್ತಿಯೂ ಆಗಿರುವ ಭಾರತದ ಕೇಂದ್ರ ಸರಕಾರವನ್ನು ಚುನಾಯಿಸುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ಮತದಾರ ಪ್ರಾಂತೀಯತೆಯ ಸಂಕುಚಿತ ಮನೋಭಾವದಿಂದ ಹೊರಬಂದು ರಾಷ್ಟ್ರಹಿತವನ್ನು ಆದ್ಯತೆಯಾಗಿರಿಸಿಕೊಂಡು ಕೆಲಸಮಾಡಬಲ್ಲ ಶಕ್ತಿಶಾಲಿ ಸರಕಾರವನ್ನು ಚುನಾಯಿಸಬೇಕಾಗುತ್ತದೆ. ಭಾರತದ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ವರ್ಚಸ್ಸಿಗನುಗುಣವಾಗಿ ದೇಶವನ್ನು ಪ್ರತಿನಿಧಿಸಬಲ್ಲ ಪ್ರಭಾವಶಾಲಿ ನಾಯಕತ್ವ, ಚೀನಾ- ಪಾಕಿಸ್ಥಾನದಂತಹ ಶತ್ರು ರಾಷ್ಟ್ರಗಳ ಕುಟಿಲ ಕಾರ್ಯತಂತ್ರಕ್ಕೆ ಪ್ರತಿತಂತ್ರ ರೂಪಿಸಬಲ್ಲ, ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ-ಆರ್ಥಿಕ ಹಿಂದುಳಿದ ವರ್ಗವನ್ನು ಗಮನದಲ್ಲಿರಿ ಸಿಕೊಂಡು ಕಾರ್ಯಕ್ರಮ ರೂಪಿಸಬಲ್ಲ ಚಾಕಚಕ್ಯತೆಯ ವರ್ಚಸ್ವೀ ನಾಯಕನ ನೇತ್ರತ್ವದ ಸರಕಾರವನ್ನು ಜನತೆ ಬಯಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಸ್ವಾಭಾವಿಕವಾಗಿಯೇ ವಿದೇಶ, ವಿತ್ತ, ರಕ್ಷಣೆ, ಅಂತಾರಾಷ್ಟ್ರೀಯ ವಿದ್ಯಮಾನ, ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ, ಆರ್ಥಿಕ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣ, ನಿರುದ್ಯೋಗ-ಬಡತನ ನಿವಾರಣೆ ಯಂತಹ ಸಮಗ್ರ ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಚರ್ಚೆ ನಡೆಯಬೇಕಾಗಿದೆ. ರಾಷ್ಟ್ರೀಯ ಸರಕಾರವೆಂದ ಮೇಲೆ ರಾಷ್ಟ್ರವ್ಯಾಪಿ ಸಮಸ್ಯೆ ಅಲ್ಲಿ ಆದ್ಯತೆಯಾಗಬೇಕು ತಾನೆ?
ರಾಷ್ಟ್ರವನ್ನು ಕಾಡುವ ಜ್ವಲಂತ ಸಮಸ್ಯೆಗಳು, ದೇಶದ ಏಕತೆಗೆ ಅಡ್ಡಿಯಾಗಿರುವ ಅಡೆತಡೆಗಳ ಕುರಿತು ಲೋಕಸಭಾ ಚುನಾವಣೆಯಲ್ಲಿ ಮುಖ್ಯ ಚರ್ಚಾರ್ಹ ವಿಷಯಗಳಾಗಿರುತ್ತದೆ. ದುರದೃಷ್ಟವಶಾತ್ ಇಂದು ವಿರೋಧ ಪಕ್ಷಗಳು ರಾಷ್ಟ್ರದ ಅಸ್ಮಿತೆಯನ್ನು ಹಿಡಿದೆತ್ತುವ ಸಾಮರ್ಥ್ಯ ತೋರುವ ಬದಲು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಡಿದಾಡುತ್ತಿರುವಂತೆ ಕಾಣುತ್ತಿದೆ. ತಮ್ಮ ಪ್ರಾದೇಶಿಕ ಹಿತರಕ್ಷಣೆಯ ಸಂಕುಚಿತ ದೃಷ್ಟಿಯಿಂದ ಹೊರಗೆ ಯೋಚಿಸುವ ಶಕ್ತಿ ಈ ನಾಯಕರಿಗಿಲ್ಲ ಎನ್ನುವುದು ಮೇಲ್ನೋಟಕ್ಕೂ ರಾಚುವಂತೆ ಕಾಣುತ್ತಿದೆ.
ವಿರೋಧಿ ಪಾಳಯದಲ್ಲಿರುವ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೆಲವೇ ಕೆಲವು ರಾಜ್ಯಗಳಿಗೆ ಸೀಮಿತವಾಗಿ ಬಲಹೀನ ಸ್ಥಿತಿಯಲ್ಲಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಂತಹ ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಹೊಂದಿದ ದೊಡ್ಡ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾದಳ, ತೃಣ ಮೂಲ ಕಾಂಗ್ರೆಸ್ ಕಾಂಗ್ರೆಸ್ಸಿನ ಜತೆ ಚುನಾವಣಾ ಹೊಂದಾಣಿಕೆಗೆ ಉತ್ಸುಕವಾಗಿಲ್ಲ.
ಪ್ರಾದೇಶಿಕ ಪಕ್ಷಗಳ ಅಜೆಂಡಾ
ವ್ಯಕ್ತಿ ಕೇಂದ್ರಿತ ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕ ಅಸ್ಮಿತೆಯ ರಕ್ಷಕರ ಸೋಗಿನಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಅವುಗಳ ಮುಖ್ಯ ಅಜೆಂಡಾ ತಮ್ಮ ಕುಟುಂಬದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಪ್ರತಿಷ್ಠಾಪಿಸಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಈಗ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಬೆಳೆಸುವ ಆಸೆಯಾದರೆ ಚಂದ್ರ ಬಾಬು ನಾಯ್ಡು, ಚಂದ್ರಶೇಖರ ರಾವ್, ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್‌ರಂತಹವರಿಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಚಿಂತೆಯೇ ಮುಖ್ಯ. ಮಮತಾ ಬ್ಯಾನರ್ಜಿ, ಮಾಯಾವತಿಯಂತಹವರಿಗೆ ಪ್ರಧಾನಿಯಾಗುವ ಹೆಬ್ಬಯಕೆಯೇ ಪ್ರತಿಪಕ್ಷಗಳ ಒಕ್ಕೂಟ ಕಟ್ಟಲು ಪ್ರೇರಣೆ.
ಡಿಎಂಕೆಯ ಸ್ಟಾಲಿನ್, ಉಮರ್ ಫಾರೂಕ್, ಅಜಿತ್ ಸಿಂಗ್, ಶರದ್ ಪವಾರ್‌ರಂತಹ ನಾಯಕರಿಗೆ ಮುಳುಗುತ್ತಿರುವ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮಹದಾಸೆಯೇ ಏಕತೆಯ ಮಂತ್ರ ಜಪಿಸುವಂತೆ ಸ್ಫೂರ್ತಿ ನೀಡುತ್ತಿದೆ.
ನೆಲ-ಜಲ,ನಾಡು-ನುಡಿ ರಕ್ಷಣೆಯ ಉದ್ದೇಶವನ್ನಿಟ್ಟುಕೊಂಡ ಹುಟ್ಟಿದ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಕಾಲಾಂತರದಲ್ಲಿ ಕುಟುಂಬ ರಾಜಕಾರಣಕ್ಕೆ ಶರಣಾಗಿ ಮೂಲ ಉದ್ದೇಶವನ್ನು ಮರೆತಿವೆ. ಇಂತಹ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಪರಸ್ಪರರ ಹಿತಾಸಕ್ತಿಗಳ ಸಂಘರ್ಷ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಹೇಗೆ ತೊಡರುಗಾಲು ಹಾಕಬಹುದೆನ್ನುವುದನ್ನು ಬಾಂಗ್ಲಾ ದೇಶದ ಜತೆ ನದಿ ನೀರು ಹಂಚಿಕೆ, ಶ್ರೀಲಂಕಾ ತಮಿಳು ಸಮಸ್ಯೆಯಂತಹ ವಿಷಯಗಳಲ್ಲಿ ಭಾರತ ಸರಕಾರ ಮುಜುಗರದ ಸ್ಥಿತಿ ಎದುರಿಸಬೇಕಾದದ್ದನ್ನು ಹಿಂದೆ ಹಲವಾರು ಬಾರಿ ಕಂಡಿದ್ದೇವೆ.
ಈಸ್ ಆಫ್ ಡೂಯಿಂಗ್ ಬಿಸಿನೆಸ್
ನಾಲ್ಕೂವರೆ ವರ್ಷದಲ್ಲಿ ಮೋದಿಯವರು ತೆಗೆದುಕೊಂಡ ಆರ್ಥಿಕ ನಿರ್ಣಯಗಳ ಸಫಲತೆಯ ಕುರಿತು ಜನಸಮುದಾಯದ ನಡುವೆ ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿರಬಹುದು. ಮತದಾರರನ್ನು ಆಕರ್ಷಿಸಲು ಸ್ವಾಭಾವಿಕವಾಗಿಯೇ ಎÇÉಾ ನಾಯಕರು ಮಾಡುವಂತೆ ಚುನಾವಣಾ ಪೂರ್ವದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಅವರು ನೀಡಿದ ಆಶ್ವಾಸನೆಗಳು ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲದಿರಬಹುದು. ಉನ್ನತ ಹಂತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ, ಅಂತಾರಾಷ್ಟ್ರೀಯವಾಗಿ ಭಾರತದ ವರ್ಚಸ್ಸು ವೃದ್ಧಿ, ಜಿಎಸ್‌ಟಿಯಂತಹ ದೂರಗಾಮಿ ಪರಿಣಾಮ ಬೀರಬಲ್ಲ ಕಠೊರ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನಲ್ಲಿ ಭಾರತದ ಅಂತಾರಾಷ್ಟ್ರೀಯ ಸ್ಥಾನಮಾನ ಮೇಲಕ್ಕೇರುವಂತೆ ಮಾಡುವಲ್ಲಿ ಅವರು ಶ್ರಮಿಸಿ¨ªಾರೆ.
ಹತ್ತು ವರ್ಷ ಶಾಸನ ಕಾಲದ ಯುಪಿಎ ಅವಧಿಯಲ್ಲಿ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಇದ್ದ ಅನಿರ್ಣಾಯಕ ಸ್ಥಿತಿಯಿಂದ ಯುದ್ಧ ವಿಮಾನಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ, ಯುದ್ಧ ಸನ್ನದ್ಧ ತೋಪುಗಳು ಮತ್ತು ಟ್ಯಾಂಕ್‌ಗಳ ಕ್ಷೀಣಿಸುವಿಕೆಯಂತಹ ಹದಗೆಟ್ಟ ಸ್ಥಿತಿಯನ್ನು ಸುಧಾರಿಸಿ ಸೇನೆಯ ಸ್ಥಿತಿಯನ್ನು ಬಲಗೊಳಿಸುವ ಮೂಲಕ ಸೇನಾಪಡೆಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅವರು ಕ್ರಮಕೈಗೊಂಡಿ¨ªಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಡೋಕ್ಲಾಂನಲ್ಲಿ ಚೀನಾವನ್ನು ನಿಭಾಯಿಸಿದ ರೀತಿ, ಸ್ವಾತಂತ್ರೊéàತ್ತರದ ಎÇÉಾ ಸರಕಾರಗಳನ್ನು ಕಾಡಿದ್ದ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಏಕಾಕಿಯಾಗಿಸುವಲ್ಲೂ ಅವರ ನಡೆ ಪ್ರಶಂಸೆಗೆ ಪಾತ್ರವಾದದ್ದೇ. ಡಿಮಾನಿಟೈಸೇಶನ್‌ನಂತಹ ಕಠೊರ ನಿರ್ಣಯದ ಜಾರಿಯಲ್ಲಿ ತಳಮಟ್ಟದಲ್ಲಿನ ನೌಕರಶಾಹಿಯ ಅಸಹಕಾರ-ಅಸಮರ್ಥತೆಯಿಂದಾಗಿ ನಿರೀಕ್ಷಿತ ಉದ್ದೇಶ ಸಾಧನೆಯಾಗದಿದ್ದರೂ ಕರ ಸಂಗ್ರಹಣೆಯಲ್ಲಿ ವೃದ್ಧಿ, ಕಾಳಧನ ನಿಯಂತ್ರಣ, ಅರ್ಥವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗೆ ಸಹಾಯಕವಾಗಿದೆ.
G20, BRICS, ASEANನಂತಹ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ ಮತ್ತು ನ್ಯೂಕ್ಲಿಯರ್ ಸಪ್ಲೆ„ ಗ್ರೂಪ್ ಸದಸ್ಯತ್ವ (NSG), ಭದ್ರತಾ ಸಂಸ್ಥೆಯ (UN SECURITY COUNCIL) ಖಾಯಂ ಸದಸ್ಯತ್ವವನ್ನು ಬಯಸುವ ಭಾರತ ಶಕ್ತಿಹೀನ, ನಿರ್ಣಯ ತೆಗೆದುಕೊಳ್ಳಲಾಗದ ಸಮ್ಮಿಶ್ರ ಸರಕಾರದಿಂದ ವಿಶ್ವಕ್ಕೆ ಎಂತಹ ಸಂದೇಶ ನೀಡಿದಂತಾಗುವುದು? ತೀವ್ರಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ಅರ್ಥವ್ಯವಸ್ಥೆ ಮತ್ತು ಸುರûಾ ಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ವರ್ಚಸ್ವಿ ನಾಯಕತ್ವದ ಬಲಿಷ್ಟ ಸರಕಾರ ಅಗತ್ಯ. ಶಕ್ತ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಮತ್ತು ಶಕ್ತಿ ಸಂಘರ್ಷದ ವಿಕಟ ಸ್ಥಿತಿಯನ್ನು ವಿಶ್ವ ಎದುರಿಸುತ್ತಿರುವ ಸಂದರ್ಭದಲ್ಲಿ ಖೀಚಡಿ ಸರ್ಕಾರಗಳ ಪರಸ್ಪರರ ಹಿತಾಸಕ್ತಿ ಸಂಘರ್ಷದಲ್ಲಿ ದೇಶ ದೂರಗಾಮಿ ದುಷ್ಪ್ರಭಾವ ಎದುರಿಸಬೇಕಾದೀತು. ಧಾರ್ಮಿಕ ಮತಾಂಧತೆ, ಭ್ರಷ್ಟಾಚಾರ ರಾಷ್ಟ್ರವನ್ನು ಒಳಗಿಂದೊಳಗೇ ಗೆದ್ದಲಿನಂತೆ ತಿನ್ನುತ್ತಿರುವ ಸಂದರ್ಭದಲ್ಲಿ ವೋಟ್ ಬ್ಯಾಂಕ್ ಭದ್ರಪಡಿಸಲಿಚ್ಚಿಸುವುದರಲ್ಲಿ ಆಸಕ್ತ ಸಂಕೀರ್ಣ ಮನಸ್ಥಿತಿಯ ಪ್ರಾದೇಶಿಕ ಪಕ್ಷಗಳ ಕೂಟ ರಾಷ್ಟ್ರದ ಒಟ್ಟಾರೆ ಹಿತ ಎತ್ತಿ ಹಿಡಿಯುವ ಸಾಹಸ ಮಾಡಬಲ್ಲವೇ?
ಎನ್‌ಡಿಎಗೆ ಪರ್ಯಾಯ ಶಕ್ತಿಯನ್ನು ಎತ್ತಿ ಕಟ್ಟುವವರಲ್ಲಿ ಹೆಚ್ಚಿನವರು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವವರೇ ಆಗಿ¨ªಾರೆ. ಇಂತಹ ನಾಯಕರ ಅಧಿಕಾರ ಉಳಿಸಿಕೊಳ್ಳುವ ತವಕದ ಮಜಬೂರಿಯ ಒಕ್ಕೂಟ ಕೇಂದ್ರದಲ್ಲಿ ಮಜಬೂತು ಸರ್ಕಾರ ನೀಡಬಲ್ಲದೇ ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ. ತಮ್ಮ ಕುಟುಂಬದ ಹಿತಾಸಕ್ತಿ ರಕ್ಷಿಸಿ
ಕೊಳ್ಳಲು ತವಕಿಸುತ್ತಿರುವ ನಾಯಕರ ಕೃಪಾಶ್ರಯದಲ್ಲಿ ಎದ್ದು ನಿಲ್ಲುವ ಮಹಾಘಟಬಂಧನದಲ್ಲಿ ತಮ್ಮ ಉಜ್ವಲ ಭವಿಷ್ಯವನ್ನು ಅರಸುವ ಕಠಿಣ ಸವಾಲು ಶ್ರೀಸಾಮಾನ್ಯ ಮತದಾರ ಎದುರಿಸಬೇಕಾಗಿದೆ.
– ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.