ವಿಶ್ವಕ್ಕೆ ಸಂಕಟ ತಂದಿತ್ತ ಕೊರೊನಾ ವೈರಸ್ ಸೈರನ್
Team Udayavani, Mar 7, 2020, 6:21 AM IST
ಜಗತ್ತಿಗೆ ಕೊರೊನಾ ವೈರಸ್ ಬಗ್ಗೆ ತಿಳಿಯುವ ಮುನ್ನವೇ ಅದರ ಕುರುಹು ನಾಶಪಡಿಸಲೆಂದು ವೈರಸ್ ಆಕ್ರಮಣಕ್ಕೆ ಒಳಗಾದವರನ್ನೂ ನಿರ್ದಾಕ್ಷಿಣ್ಯವಾಗಿ ಮುಗಿಸಿಬಿಟ್ಟಿತು ಚೀನ. ವೈದ್ಯನೊಬ್ಬನನ್ನು ಕೊಂದೇ ಬಿಟ್ಟಿತು ಅಲ್ಲಿನ ಸರಕಾರ. ಇದೀಗ ಇಡೀ ಜಗತ್ತಿನ ನಿದ್ದೆಗೆಡಿಸಿದ ಮಹಾಮಾರಿಗೆ ಯಾರನ್ನು ಟಾರ್ಗೆಟ್ ಮಾಡಲಿ? ಚೀನದ ಕಿಡಿಗೇಡಿ ಕ್ರೂರ ಕೃತ್ಯಗಳಿಗೆ ಯಾರು ಹೊಣೆ?
ಚೀನವನ್ನು ಅಕ್ಷರಶಃ ನಲುಗಿಸಿ ಮರಣ ಮೃದಂಗಕ್ಕೆ ಬಾರಿ ಸಿರುವ ಕೊರೊನಾ ವೈರಾಣು (ಕೋವಿಡ್ -19) ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಗತ್ತಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಔದ್ಯಮಿಕ ವಲ ಯಗಳ ಕಂಪನಕ್ಕೆ ಕಾರಣವಾಗಿದೆ. ಇಡೀ ಚೀನ ದೇಶವೇ ಅನಾರೋಗ್ಯಕ್ಕೀಡಾಗಿ ಆಸ್ಪ ತ್ರೆ ಯ ಲ್ಲಿ ರು ವಂತೆ ಭಾಸವಾಗುತ್ತಿದೆ. ಚೀನದ ವುಹಾನ್ ಮತ್ತು ಹುಬೈ ಪ್ರಾಂತ್ಯಗಳ ಎಲ್ಲ ಫ್ಯಾಕ್ಟರಿ ಮತ್ತು ಕಚೇರಿಗಳು ಮುಚ್ಚಲ್ಪಟ್ಟಿವೆ. ಈ ವೈರಾಣು ಸೋಂಕಿನ ದುಷ್ಪರಿಣಾಮಕ್ಕೆ ಜಗತ್ತಿಡಿ ತತ್ತ ರಿ ಸಿದೆ. ಈಗಾಗಲೇ ಜಗತ್ತಿನ ಶೇರು ಮಾರುಕಟ್ಟೆಗೆ ತೀವ್ರ ಆಘಾತವಾಗಿ ಕರಡಿ ಕುಣಿಯುತ್ತಿದೆ. ಮಾರುಕಟ್ಟೆ ಸೂಚ್ಯಂಕಗಳು ಕೊರೊನಾಗೆ ಶರಣಾಗಿವೆ. ಚೀನ ಕ್ಲಪ್ತ ಸಮಯದಲ್ಲಿ ಕ್ಲಿಷ್ಟ ಪರಿಸ್ಥಿತಿಯ ನಿವಾರಣೆಗೆ ಸೂಕ್ತ ಕ್ರಮ ನಿರ್ವಹಿಸದಿರುವುದು ಮತ್ತು ಚೀನಿ ಕಮ್ಯೂನಿಸ್ಟ್ ಪಾರ್ಟಿಯ ಪ್ರತಿಷ್ಠೆಗೆ ಧಕ್ಕೆಯಾಗುವುದೋ ಎಂದು ರೋಗದ ತೀವ್ರತೆಯನ್ನು ಮುಚ್ಚಿ ಹಾಕಲೆತ್ನಿಸದ ಪರಿಣಾಮ ಇಂದು ಇಡೀ ವಿಶ್ವದ ನಿದ್ದೆಗೆಡಿಸಲು ಕಾರಣವಾಗಿದೆ.
ಭೌಗೋಳಿಕವಾಗಿ ಭಾರತಕ್ಕಿಂತ ಮೂರು ಪಟ್ಟು ದೊಡ್ಡದಾಗಿರುವ ಚೀನ ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ಪ್ರಸಕ್ತ 141 ಕೋಟಿ ಜನಸಂಖ್ಯೆ ಹೊಂದಿದೆ. 1980ರ ದಶಕದಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ಕಟ್ಟುನಿಟ್ಟಿನ ನೀತಿಯನ್ನು ಪಾಲಿಸದಿರುತ್ತಿದ್ದರೆ ಅಲ್ಲಿನ ಜನಸಂಖ್ಯೆ 200 ಕೋಟಿಗೂ ಮೀರುತ್ತಿತ್ತು. ಅಷ್ಟು ದೊಡ್ಡ ಜನಸಂಖ್ಯೆಯ ರಾಷ್ಟ್ರ ಜನರ ಕೌಶಲ ವೃದ್ಧಿಸಿ, ರಾಷ್ಟ್ರದ ಉತ್ಪಾದನೆ ಹೆಚ್ಚಿಸಿ ಇದೀಗ ಜಗತ್ತಿನ ಅತೀ ದೊಡ್ಡ ರಫ್ತುದಾರ ದೇಶವಾಗಿ ದೆ. ಜಗತ್ತಿನ ಅತೀ ಹೆಚ್ಚಿನ ಶ್ರೀಮಂತರೂ ಚೀನದಲ್ಲಿದ್ದಾರೆ. ಹೆಚ್ಚು ಕಡಿಮೆ ನಮ್ಮಷ್ಟೇ ಜನಸಂಖ್ಯೆ ಹೊಂದಿರುವ ಚೀನಾದ ರಾಷ್ಟ್ರೀಯ ಆದಾಯ 15 ಟ್ರಿಲಿಯನ್ ಡಾಲರ್ ಇದ್ದರೆ ನಮ್ಮದು 2.9 ಟ್ರಿಲಿಯನ್ ಡಾಲರ್. ಕೆಲವೊಂದು ವಿಚಾರಗಳಲ್ಲಿ ಚೀನ ಜಗತ್ತಿನ ಒಂದು ಮಾದರಿ ರಾಷ್ಟ್ರ. ಅಲ್ಲದೆ ತನ್ನ ಕುಯುಕ್ತಿ ಮತ್ತು ಕಪಟ ನಾಟಕಕ್ಕೆ ಹೆಸರುವಾಸಿ. ಇದೀಗ ಕೊರೊನಾ ವೈರಸ್ ದಾಳಿ ಚೀನದ ಆರ್ಥಿಕತೆಯನ್ನು ಮೂರು ದಶಕಗಳ ಹಿಂದಿನ ಸ್ಥಿತಿಗೆ ಒಯ್ದಿದೆ. ವಿಶ್ವದ ಎರಡನೆಯ ಅತಿ ದೊಡ್ಡ ಆರ್ಥಿಕತೆಯಾಗಿ ರುವ ಚೀನದಲ್ಲಿ ಉದ್ಭವಿಸುವ ಋಣಾತ್ಮಕ ಪರಿಸ್ಥಿತಿಗಳು ವಿಶ್ವದ ಇತರ ದೇಶಗಳ ಮೇಲೂ ಪ್ರಭಾವ ಬೀರುತ್ತವೆ.
ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿ0ಗ್ ಬದುಕಿರುವವರೆಗೆ ತಾನೇ ಅಧ್ಯಕ್ಷನಾಗಿರಲು ಅನುಮತಿ ಪಡೆದುಕೊಂಡಂತೆ ಗೋಚರವಾಗುತ್ತಿತ್ತು. ಇದೀಗ ಪರಿಸ್ಥಿತಿ ಉಲ್ಟಾ. ಲಿ ಕಿಕಿಯಾಂಗ್ ರನ್ನು ದೇಶದ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಡಿಸೆಂಬರ್‌ನಲ್ಲಿ ಈ ವೈರಾಣುವಿನ ತಾಂಡವ ನೃತ್ಯ ಪ್ರಾರಂಭವಾಗಿತ್ತು. ಜನವರಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಕ್ಸಿ ಜಿನ್‌ಪಿಂಗ್ ಪ್ರತಿಯೊಬ್ಬ ಚೀನಿಯನೂ ಮಹಾಯುಗದಲ್ಲಿ ವಾಸಿಸುವುದಕ್ಕೆ ಹೆಮ್ಮೆ ಪಡಬೇಕು. ಎಂತಹ ಬಿರುಗಾಳಿಗೂ ನಮ್ಮ ಪ್ರಗತಿ ಓಟ ನಿಲ್ಲುವುದಿಲ್ಲ ಎಂದಿ ದ್ದರು. ಅವರು ಹೇಳಿದ ಬಿರುಗಾಳಿಯೇ ಈ ಕೊರೊನಾ ವೈರಸ್. ಈ ದಾಳಿಯನ್ನು ಚೀನದೆದುರಿಗಿನ ಮಹಾ ಸವಾಲು ಎಂದು ಬಣ್ಣಿಸಿರುವ ಜಿನ್‌ಪಿಂಗ್ ಇದು ವ್ಯವಸ್ಥೆ ಮತ್ತು ಸರಕಾರದ ತಾಕತ್ತನ್ನು ಪರೀಕ್ಷಿಸಲೆಂದೇ ಬಂದಿದೆ ಎಂದು ಜನರನ್ನು ಹುರಿದುಂಬಿಸಿದರು. ಆರಂಭದಲ್ಲಿ ಇದನ್ನು ಹತೋಟಿಗೆ ತರುವುದು ಇವರಿಗೆ ಸುಲಭವೆಂದೆನಿಸಿತ್ತು. ಕೈ ಮೀರಿದ ಕೂಡಲೇ ಬಾಹ್ಯ ಜಗತ್ತಿಗೆ ಕಾಣಿಸಿಕೊಳ್ಳುವುದನ್ನೇ ಬಿಟ್ಟರು. ಕ್ಸಿ ಜಿನ್‌ಪಿ0ಗ್‌ರವರ ಅಹಂಕಾರ ವುಹಾನ್ ನಗರವನ್ನು ಖಾಲಿ ಮಾಡಿದೆ. ಬೇರೆ ನಗರಗಳ ಜನರನ್ನು ಮನೆಯಿಂದ ಹೊರಬರದಂತೆ ತಡೆಯ ಲಾಗು ತ್ತಿದೆ. ಶ್ಮಶಾನಗಳಲ್ಲಿ ಬಿಡುವಿಲ್ಲದ ಕಾರ್ಯವಂತೆ. ಡ್ರೋನ್‌ಗಳು ಎಲ್ಲೆಲ್ಲೂ ಅಡ್ಡಾಡುತ್ತಿದ್ದು ಅಲ್ಲಲ್ಲೇ ಸಂದೇಶಗಳನ್ನು ಬಿತ್ತರಿ ಸುವ ದೃಶ್ಯ ವೈರಲ್ ಆಗಿದೆ. ಹಾಂಗ್‌ಕಾಂಗ್ ಪ್ರತಿಭಟನೆಯಲ್ಲಿ ಕೈಯಾಡಿಸಿ ಜಿನ್‌ಪಿಂಗ್ ಕೈಸುಟ್ಟುಕೊಂಡಿದ್ದಾರೆ. ತೈವಾನ್ ಚುನಾವಣೆ, ಟಿಬೆಟಿಯನ್ನರ ಆಕ್ರೋಶ, ಅಲ್ಲಿರುವ ಮುಸಲ್ಮಾನರ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿರುವುದು, ಹಿಂದೂಗಳ ಮೇಲಿರುವ ಕಿಚ್ಚು ಮತ್ತು ಈ ನಿರ್ದಯ ಕೃತ್ಯಗಳೆಲ್ಲವನ್ನೂ ಈ ವೈರಾಣು ದಮನಿಸುತ್ತಿದೆಯೇ ಎಂದೆನಿಸುತ್ತದೆ.
ಕೊರೊನಾ ವೈರಸ್ ಚೀನದ ದುಷ್ಟ ಮನಸ್ಥಿತಿಯನ್ನು ಬಯಲಿಗೆ ತಂದಿದೆ. ಇದನ್ನು ಪುಷ್ಟೀಕರಿಸುವ ಅಂಶಗಳೂ ಕಾಣಿಸುತ್ತಿವೆ. ಕೊರೊನಾ ವೈರಸ್‌ನ ಆಕ್ರಮಣದ ಸುದ್ದಿ ಜಗತ್ತಿಗೆ ಗೊತ್ತಾಗುವ ಒಂದು ತಿಂಗಳು ಮುಂಚೆಯೇ ಚೀನದ ಅಧಿಕಾರಿಗಳಿಗೆ ಅವರ ಪ್ರಮಾದದ ಅರಿವಾಗಿದೆ. ಆದರೆ ಜಗತ್ತಿಗೆ ಇದು ತಿಳಿಯುವ ಮುನ್ನವೇ ಅದರ ಕುರುಹು ನಾಶಪಡಿಸಬೇಕೆಂದು ವೈರಸ್ ಆಕ್ರಮಣಕ್ಕೆ ಒಳಗಾದವರನ್ನೂ ನಿರ್ದಾಕ್ಷಿಣ್ಯವಾಗಿ ಮುಗಿಸಿಬಿಟ್ಟರು. ವೈದ್ಯನೊಬ್ಬನನ್ನು ಕೊಂದೇ ಬಿಟ್ಟಿತು ಸರಕಾರ. ಕ್ಸಿ ಜಿನ್‌ಪಿಂಗ್ ಅಮೆರಿಕದ ಸಹಾಯ ಪಡೆದರೆ ಅವಮಾನವಾಗುತ್ತದೆಂದು ಸಹಾಯವೇ ಬೇಡವೆಂದರು. ಇದೀಗ ಇಡೀ ಜಗತ್ತಿನ ನಿದ್ದೆಗೆಡಿಸಿದ ಮಹಾಮಾರಿಗೆ ಯಾರನ್ನು ಟಾರ್ಗೆಟ್ ಮಾಡಲಿ? ಚೀನದ ಕಿಡಿಗೇಡಿ ಕ್ರೂರ ಕೃತ್ಯಗಳಿಗೆ ಯಾರು ಹೊಣೆ?
ಜಾಗತಿಕ ಷೇರು ಪೇಟೆಯಲ್ಲಿ ದಿಢೀರ್ ಮಹಾಕುಸಿತ, ಅಮೆರಿಕ, ಚೀನಾ, ಯುರೋಪ್, ಟೋಕಿಯೊ ಮಾರುಕಟ್ಟೆ ತಲ್ಲಣ ಭಾರತದ ಹೂಡಿಕೆದಾರರಿಗೂ ಅಪಾರ ನಷ್ಟ. ಇದೀಗ ವ್ಯಾಪಾರ ವಹಿವಾಟಿಗಿಂತಲೂ ವಿಶ್ವದ ಸ್ವಾಸ್ಥ್ಯ ಪ್ರಾಮುಖ್ಯವಾಗಿದೆ. ಚೀನದೊಂದಿಗೆ ಆರ್ಥಿಕ ಸಂಘರ್ಷದಲ್ಲಿರುವ ಅಮೆರಿಕ ಸಕಾರಣ ಕೊಟ್ಟು ಸಹಭಾಗಿತ್ವವನ್ನು ಬದಲಾಯಿಸಿಕೊಂಡರೂ ಆಶ್ಚರ್ಯವಿಲ್ಲ.
ಚೀನ ಜಗತ್ತಿನ ಅತಿದೊಡ್ಡ ರಫ್ತುದಾರ ದೇಶವಾದ್ದರಿಂದ ಪೂರೈಕೆಯ ಸರಪಳಿಯ ಕೊಂಡಿ ಕಳಚಿದೆ. ಜಗತ್ತಿನ ಬಲಾಡ್ಯ ರಾಷ್ಟ್ರ ಅಮೆರಿಕ ಕೂಡಾ ಚೀನಾದೊಂದಿಗೆ ಕೊರತೆಯ ಸಂದಾಯ ಬಾಕಿಯನ್ನು ಹೊಂದಿದೆ. ಭಾರತ ಕಳೆದು ಐದು ವರ್ಷಗಳಲ್ಲಿ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಚೀನದ ಮೇಲಿನ ಅವಲಂಬನೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡಿದೆ. ಆದರೆ ಎಲೆಕ್ಟ್ರಾನಿಕ್ ಬಿಡಿಭಾಗಗಳಿಗೆ ಚೀನವೇ ನಮಗೆ ಗತಿ. ಭಾರತದಿಂದಾಗುವ ವಜ್ರ ಪಾಲಿಷ್ ರಫ್ತು , ಚೀನದಿಂದ ಕಚ್ಚಾ ಉಡುಪು ಸಾಮಗ್ರಿ ಬರದ ಕಾರಣ ಬಾಂಗ್ಲಾ, ಭಾರತದ ಜವಳಿ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಚೀನದ ಕಂಪೆನಿಗಳು ಭಾರತದ ಟೆಲಿಕಾಮ್ ವಲಯವನ್ನು ಆಳುತ್ತಿವೆ. ಭಾರತದ 8 ಶತಕೋಟಿ ಡಾಲರ್ ಸ್ಮಾರ್ಟ್‌ಫೋನ್ ವಹಿವಾಟಿನಲ್ಲಿ ಶೇ. 51ರಷ್ಟು ಪಾಲು ಚೀನದ್ದು. ಭಾರತದ ಸೋಲಾರ್ ಸಾಧನ ಮತ್ತು ಸಿಗಡಿ ಉತ್ಪನವನ್ನು ಚೀನ ಹೈಜಾಕ್ ಮಾಡಿದೆ.
ನಾಗರಿಕತೆ, ಧರ್ಮ, ಸಂಸ್ಕೃತಿಯ ವಿಷಯದಲ್ಲಿ ಸಾವಿರಾರು ವರ್ಷಗಳಿಂದ ಭಾರತ – ಚೀನ ನಡುವೆ ಕೊಡು ಕೊ ಳ್ಳು ವಿ ಕೆ ಯಿ ತ್ತು.. 1962 ರ ಯುದ್ಧದ ಬಳಿಕ ನಮ್ಮ ಬಾಂಧ್ಯವ್ಯ ಅಷ್ಟಕ್ಕಷ್ಟೆ. ಉಗ್ರವಾದದ ಬೆಳೆ ಬೆಳೆಸುವ ಪಾಕಿಸ್ಥಾನಕ್ಕೆ ಕುಮ್ಮಕ್ಕು ನೀಡುತ್ತಿರುವುದು ವೈಷಮ್ಯಕ್ಕೆ ಇನ್ನೊಂದು ಕಾರಣ. ಈ ಜನ ಎಲ್ಲ ಬಗೆಯ ಹಸಿ-ಬಿಸಿ ಮಾಂಸವನ್ನು ಸೇವಿಸುತ್ತಾರೆ. ಇದು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆ. ಅಮೆರಿಕದಲ್ಲಿ ಚೀನಿ ನಿವಾಸಿಗಳಿಗೆ ಮಾಂಸ ಮಾರುಕಟ್ಟೆ ಬೇರೆಯೇ ಇದೆ.
ಕೊರೊನಾ ಸೋಂಕು ಭಾರತಕ್ಕೆ ಹರಡಿದಲ್ಲಿ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗುತ್ತದೆ. ಅತಿಯಾದ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಆರೋಗ್ಯ ಸೇವೆ ಮತ್ತು ಸಂಪನ್ಮೂಲದ ಸಮಸ್ಯೆ ಎದುರಾಗಬಹುದು. ಭಾರತದಲ್ಲಿ ಪ್ರತಿ ಚ.ಕಿ.ಮೀಗೆ 420 ಜನ ವಾಸವಾಗಿದ್ದಾರೆ. ಆದರೆ ಚೀನದಲ್ಲಿ 148 ಜನ. ಇದಕ್ಕೆ ಹೋಲಿಸಿದರೆ ನಮ್ಮ ಜನಸಾಂದ್ರತೆ ಮೂರು ಪಟ್ಟು ಹೆಚ್ಚು. ಕೊರೊನಾ ಬಗ್ಗೆ ನಮ್ಮ ಸುರಕ್ಷತೆ ಮತ್ತು ಜಾಗ್ರತೆ ಆದ್ಯತೆಯಾಗಬೇಕಾಗಿದೆ.
ಕೆಲವೊಂದು ವಿಚಾರಗಳಲ್ಲಿ ಚೀನ ಜಗತ್ತಿನ ಒಂದು ಮಾದರಿ ರಾಷ್ಟ್ರ. ಇದೀಗ ಕೊರೊನಾ ವೈರಸ್ ದಾಳಿ ಚೀನದ ಆರ್ಥಿಕತೆಯನ್ನು ಮೂರು ದಶಕಗಳ ಹಿಂದಿನ ಸ್ಥಿತಿಗೆ ಒಯ್ದಿದೆ.
ಚೀನಾದಿಂದ ಕಚ್ಚಾ ಉಡುಪು ಸಾಮಗ್ರಿ ಬರದ ಕಾರಣ ಭಾರತದ ಜವಳಿ ಉದ್ಯಮ ನಲುಗಿದೆ. ನಮ್ಮ 8 ಶತಕೋಟಿ ಡಾಲರ್ ಸ್ಮಾರ್ಟ್ ಫೋನ್ ವಹಿವಾಟಿನಲ್ಲಿ ಚೀನಾ ಪಾಲು ಶೇ. 51ರಷ್ಟಿದೆ.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.