ದೇವರೇ ಇಲ್ಲ ಎನ್ನುವವರಿಗೆ ದೇಗುಲ ಪ್ರವೇಶವೇಕೆ ಬೇಕು?


Team Udayavani, Oct 23, 2018, 6:00 AM IST

16.jpg

ವಿವೇಚನೆಯುಳ್ಳ ಯಾವ ಹಿಂದೂ ಸ್ತ್ರೀಗೂ ಬಂಡಾಯವೆದ್ದು ಸಮಾನ ಹಕ್ಕಿಗಾಗಿ ಹೋರಾಟ ಮಾಡಬೇಕೆಂದಿನಿಸಿಲ್ಲ. ಅವಳು ಕಾಯುವುದಕ್ಕೆ ಸಿದ್ಧ.  ಪ್ರಗತಿಪರರು, ಫೆಮಿನಿಸ್ಟುಗಳು, ವಿಚಾರವಾದಿಗಳಿಗೆ, ದೇವರಲ್ಲೇ ನಂಬಿಕೆಯಿಲ್ಲವೆನ್ನುವುದು ಸಾರ್ವತ್ರಿಕ ಸತ್ಯ. ಅದರಲ್ಲೂ ಸ್ತ್ರೀ ಹೋರಾಟಗಾರರಿಗೆ ಗಂಡು ದೇವರನ್ನು ನೋಡುವ ಹುಚ್ಚೇತಕೆ?

ಶಬರಿಮಲೆ ತೀರ್ಪು ಕುರಿತು ಅನೇಕರು ಪ್ರತಿಕ್ರಿಯೆ ಕೇಳಿದ್ದಾರೆ. ತೀರ್ಪಿನ ಬಗ್ಗೆ ನನ್ನ ಅಭಿಪ್ರಾಯಕ್ಕೆ ನಂತರ ಬರುತ್ತೇನೆ, ಆದರೆ ಮೂಲತಃ ಮೊಕದ್ದಮೆಯ ಬಗ್ಗೆಯೇ ನನಗೆ ತಕರಾರಿದೆ. ಸಾಮಾನ್ಯವಾಗಿ ಯಾವುದೇ ಒಂದು ಪದ್ಧತಿ, ಕಾನೂನು, ವ್ಯಕ್ತಿ ಅಥವಾ ಸಂಸ್ಥೆಯಿಂದ ನೊಂದವರು, ಶೋಷಣೆಗೆ ಒಳಗಾದವರು ಅಥವಾ ಸಮಸ್ಯೆಯಲ್ಲಿ ಪಾಲುದಾರರಾದವರು ಕೋರ್ಟ್‌ ಮೆಟ್ಟಿಲೇರುತ್ತಾರೆ. ಶಬರಿಮಲೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ  ಮೊರೆ ಹೋದವರಾರು? ಅಯ್ಯಪ್ಪನ ಭಕ್ತರಾ? ಅಯ್ಯಪ್ಪನಲ್ಲಿ ನಂಬಿಕೆ ಉಳ್ಳವರಾ? ಹಿಂದೂಗಳಾ? ಧಾರ್ಮಿಕ ಆಚರಣೆಗಳನ್ನು ನಡೆಸುವವರಾ? ಅಲ್ಲ.

ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್ನಿನ ಸದಸ್ಯೆಯರಾದ ಭಕ್ತಿ ಸೇಠಿ, ಅಲ್ಕಾ ಶರ್ಮ, ಲಕ್ಷ್ಮೀ ಶಾಸ್ತ್ರಿ, ಪ್ರೇರಣಾ ಕುಮಾರಿ, ಸುಧಾ ಪಾಲ್‌ ಮೊಕದ್ದಮೆಯನ್ನು ಹೂಡಿದವರು. ಅಸೋಸಿಯೇಶನ್‌ನ ಅಧ್ಯಕ್ಷ ನೌಶಾದ್‌ ಎಂಬಾತ. ಇವರಲ್ಲಿ ಯಾರೂ ಕೇರಳದವರಲ್ಲ. ಅಯ್ಯಪ್ಪನಲ್ಲಿ ಭಕ್ತಿ ಇದ್ದು ಅಲ್ಲಿಗೆ ಹೋಗೋದಿರಲಿ, ಇವರ್ಯಾರಿಗೂ ಶಬರಿಮಲೆ ಕುರಿತ ಗಂಧ ಗಾಳಿ ಇರಲಿಲ್ಲ. ಬರ್ಖಾದತ್‌ 2006ರಲ್ಲಿ ಬರೆದ ಒಂದು ಅಂಕಣ ಇವರಿಗೆ ಪ್ರೇರಕವಂತೆ! ಐವರಲ್ಲಿ ಮೂವರು, ಮೊಕದ್ದಮೆ ಪ್ರಾರಂಭವಾಗುತ್ತಿದ್ದಂತೆಯೇ ತಮ್ಮ ಮೂರ್ಖತನದ ಅರಿವು ಮೂಡಿತು ಎಂದು ತಾವೇ ಒಪ್ಪಿಕೊಂಡಿದ್ದಾರೆ. ಉಳಿದ ಇಬ್ಬರು ವಕೀಲರು ಮತ್ತು ಹ್ಯಾಪಿ ಟು ಬ್ಲೀಡ್‌ ಎಂದು ಬೋರ್ಡನ್ನು ಕುತ್ತಿಗೆಗೆ ನೇತು ಹಾಕಿಕೊಂಡ ಇಂದಿರಾ ಜೈಸಿಂಗ್‌ನಂತಹ ಎಡಪಂಥೀಯರು ಶಬರಿಮಲೆ ಪ್ರವೇಶ ತಮ್ಮ ಸಾಂವಿಧಾನಿಕ ಸಮಾನತೆಯ ಹಕ್ಕೆಂದು ಪ್ರತಿಪಾದಿಸಿದವರು.

ದುರದೃಷ್ಟವೆಂದರೆ, ಯಾವ ವಾದವು “ಆಸ್ತಿಕರ ಧಾರ್ಮಿಕ ಸ್ವಾತಂತ್ರ್’ ಮತ್ತು “ನಾಸ್ತಿಕರ ಸಮಾನತೆಯ ಹಕ್ಕಿನ’ ಬಲಾಬಲಗಳ ಪರಿಶೀಲನೆ ನಡೆಸಬೇಕಿತ್ತೋ, ಹಾಗಾಗದೇ “ಆಚರಣೆ’ ವರ್ಸಸ್‌ “ಸ್ತ್ರೀ ಸಮಾನತೆ’ಯ ಸ್ವರೂಪವನ್ನು ತಾಳಿತು. “ದೇವರಲ್ಲಿ ವಿಶ್ವಾಸವೇ ಇಲ್ಲದ ನಿಮ್ಮ ಮೊಕದ್ದಮೆಯನ್ನು ನಾವ್ಯಾಕೆ ಪರಿಶೀಲಿಸೋಣ?’ ಎಂದು ಸಾಂವಿಧಾನಿಕ ಪೀಠ ಕೇಳಿದ್ದರೆ, ಪೆಟಿಶನ್‌ ಅಡ್ಮಿಟ್ಟೇ ಆಗುತ್ತಿರಲಿಲ್ಲ. ಸಂಪ್ರದಾಯವನ್ನೇ ಪಟ್ಟು ಹಿಡಿದು ದೇವಸ್ವಂ ಬೋರ್ಡ್‌ ಒಂದೆಡೆ ವಿಫ‌ಲವಾದರೆ, ಹಿಂದೂ ಧಾರ್ಮಿಕತೆಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ಕೇರಳದ ಕಮ್ಯುನಿಸ್ಟ್ ಸರ್ಕಾರದ ವಾದ ಮತ್ತೂಂದೆಡೆ. ಇವೆಲ್ಲವೂ ಹಿಂದೂಗಳಿಗೆ ಅನ್ಯಾಯವಾಗುವಂಥ ಆಘಾತದ ತೀರ್ಪಿಗೆ ಕಾರಣವಾಯಿತು. ಸರಿ, “ರೆಡಿ ಟು ವೆಯ್‌r’ ಅಂತೀರಲ್ಲ…ಯಾಕೆ? ಸ್ತ್ರೀಯರ ಪರ ದನಿಯನ್ನೇಕೆ ಎತ್ತುವುದಿಲ್ಲ ನೀವು ಎನ್ನುವುದಾದರೆ… 

ಮೊದಲನೆಯದಾಗಿ, ಶಬರಿಮಲೆಯಲ್ಲಿ ಸ್ತ್ರೀಯರ ಪ್ರವೇಶ ನಿಷಿದ್ಧವಲ್ಲ, ಅದು ಷರತ್ತು ಬದ್ಧವಷ್ಟೆ. ಅರ್ಥಾತ್‌, ಅಲ್ಲಿಗೆ ಹೋಗಲೇ ಕೂಡದೆಂದು ಯಾರೂ ಹೇಳಿಲ್ಲ, 10ರಿಂದ 50 ವರ್ಷದೊಳಗಿನವರು ಹೋಗುವಂತಿಲ್ಲವೆಂಬುದಷ್ಟೆ ವಾಡಿಕೆ. ಯಾಕೆ? ಏಕೆಂದರೆ, ಅಯ್ಯಪ್ಪ ನೈಸಿcತ ಬ್ರಹ್ಮಚಾರಿ. ಸಂತಾನೋತ್ಪತ್ತಿ ಸಾಧ್ಯವಿರುವ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ. “ಮುಟ್ಟು ನಿಲ್ಲದವರು ಅಪವಿತ್ರರು, ಹಾಗಾಗಿ ಪ್ರವೇಶವಿಲ್ಲ’ವೆಂಬುದು ಶುದ್ಧ ಸುಳ್ಳು. ಹಾಗೆ ಯೋಚಿಸುವುದಾದರೆ, ಭಾರತದ 25 ಲಕ್ಷಕ್ಕೂ ಹೆಚ್ಚು ದೇವಾಲಯಗಳಲ್ಲಿ ಹೆಣ್ಣಿಗೆ ಎಲ್ಲೂ ಪ್ರವೇಶವಿರುವುದಿಲ್ಲ. 

ಸಾಮಾನ್ಯವಾಗಿ ಕುಂಡಲಿನಿ ಶಕ್ತಿ, ಮೂಲಾಧಾರದಿಂದ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮಾರ್ಗವಾಗಿ ಸಹಸ್ರಾರವನ್ನು ತಲುಪುತ್ತದೆ ಎಂಬುದು ನಂಬಿಕೆ. ಅಂದರೆ, ಮನುಷ್ಯ ಪ್ರಾರ್ಥನೆ ಮಾಡುವ ಸಮಯದಲ್ಲಿ, ಶಕ್ತಿ ಊಧ್ವì ಮುಖವಾಗಿ ಸಂಚರಿಸುತ್ತದೆ. ಸ್ತ್ರೀಯರಿಗೆ ಋತುಕಾಲದಲ್ಲಿ ಶಕ್ತಿಯ ಹರಿವು ಅಧೋಮುಖವಾಗಿರುವುದರಿಂದ, ಎರಡೂ ಎನರ್ಜಿಗಳ ನಡುವೆ ಘರ್ಷಣೆ ಆಗುವ ಸಾಧ್ಯತೆಗಳು ಹೆಚ್ಚಾದ್ದರಿಂದ, ದೇವರ ಮನೆ, ಸನ್ನಿಧಾನದಂತಹ ಶಕ್ತಿ ಹೆಚ್ಚಿರುವ ಸ್ಥಳಗಳಿಂದ ದೂರವಿರುವ ಪದ್ಧತಿ ನಿರ್ಮಿತವಾಗಿದೆ ಎಂಬುದು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನನ್ನ ಅರ್ಥೈಕೆ. ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಉತ್ತಮ ಹಂತವನ್ನು ತಲುಪಿರುವಂತಹ ಜ್ಞಾನಿಗಳು, ಯೋಗಿನಿಯರಿಗೆ ಶಕ್ತಿಯ ನಿಯಂತ್ರಣದ ರಹಸ್ಯ ತಿಳಿದಿದೆ. ಅವರು, ಪ್ರಾಯಶಃ ಸಾಮಾನ್ಯ ಸ್ತ್ರೀಯರ ವರ್ಗಕ್ಕೆ ಸೇರುವುದಿಲ್ಲ. ಪ್ರಾಣಿಗಳಿಗೆ ಸಾಧ್ಯವಾಗದ ಜೀವನ್ಮುಕ್ತಿ ಮನುಷ್ಯನಿಗೆ ಮಾತ್ರ ಸಾಧ್ಯ ಮತ್ತು ಅರಿಷಡ್ವರ್ಗಗಳನ್ನು ಗೆಲ್ಲುವುದೇ ಮಾನವ ಜನ್ಮದ ಮೂಲಭೂತವಾದ ಉದ್ದೇಶವೆಂಬುದು ಸನಾತನ ಹಿಂದೂ ಧರ್ಮದ ತಳಹದಿ. ಹಾಗಾಗಿ, ಸ್ತ್ರೀ ಅಪವಿತ್ರಳು ಎಂಬ ವಿಚಾರ ನಮ್ಮ ಧರ್ಮದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಇಂತಹವು ಸಾವಿರಾರು ವರ್ಷಗಳ ಆಧ್ಯಾತ್ಮಿಕ ವಿಕಸನದಲ್ಲಿ ಮೂಡಿ ಬಂದಿರುವ ಆಚರಣಾ ವಿಧಾನಗಳಷ್ಟೆ. ಶಬರಿಮಲೆಯ ಅಯ್ಯಪ್ಪ ಹೊತ್ತಿರುವ ಬ್ರಹ್ಮಚರ್ಯವನ್ನು ಗೌರವಿಸಿ, 10-50 ವರ್ಷದೊಳಗಿನ ಸ್ತ್ರೀಯರು ಅವನಿಂದ ದೂರವಿದ್ದಾರೆ. ಭಯ ಹುಟ್ಟಿಸುವ ಮತವಲ್ಲ ಹಿಂದೂಗಳದ್ದು, ನಮ್ಮದು ಭಕ್ತಿ ಪ್ರಧಾನ ಧರ್ಮ. ಭಯ ಬಂಡಾಯಕ್ಕೆ ಕಾರಣವಾದರೆ, ಭಕ್ತಿಯಿಂದ ಹುಟ್ಟುವುದು ಗೌರವ. ಅಂತೆಯೇ, ವಿವೇಚನೆಯುಳ್ಳ ಯಾವ ಹಿಂದೂ ಸ್ತ್ರೀಗೂ ಬಂಡಾಯವೆದ್ದು ಸಮಾನ ಹಕ್ಕಿಗಾಗಿ ಹೋರಾಟ ಮಾಡಬೇಕೆಂದಿನಿಸಿಲ್ಲ. ಅವಳು ಕಾಯುವುದಕ್ಕೆ ಸಿದ್ಧ. 

ಪ್ರಗತಿಪರರು, ಫೆಮಿನಿಸ್ಟುಗಳು, ವಿಚಾರವಾದಿಗಳಿಗೆ, ದೇವರಲ್ಲೇ ನಂಬಿಕೆಯಿಲ್ಲವೆನ್ನುವುದು ಸಾರ್ವತ್ರಿಕ ಸತ್ಯ. ಅದರಲ್ಲೂ ಸ್ತ್ರೀ ಹೋರಾಟಗಾರರಿಗೆ ಗಂಡು ದೇವರನ್ನು ನೋಡುವ ಹುಚ್ಚೇತಕೆ? ಅದರಲ್ಲೂ “ಬಬೇìಡ್ರಮ್ಮ’ ಎನ್ನುವ  ಬ್ರಹ್ಮಚಾರಿಯನ್ನು ನೋಡುವ ಆಲೋಚನೆ ಯಾಕೆ? ನಂಬುವವರಿಗೆ ಹೋಗೋದು ಬೇಡ ಎಂದಮೇಲೆ ನಂಬದವರಿಗ್ಯಾಕೆ ನಮ್ಮ ಬಗ್ಗೆ ಉಸಾಬರಿ? ಯಾರಿಗಾಗಿ ಅವರ ಹೋರಾಟ? ಇಷ್ಟಕ್ಕೂ ಅಯ್ಯಪ್ಪನನ್ನು ನೋಡುವುದು, ನೀರು, ಆಹಾರ, ಆಮ್ಲಜನಕದಂತೆ ಮೂಲಭೂತ ಅವಶ್ಯಕತೆ ಏನಲ್ಲವಲ್ಲ!

“ಹಾಗಿದ್ದರೆ, ತ್ರಿವಳಿ ತಲಾಕ್‌ ಬಗ್ಗೆ ಏಕೆ ಮಾತನಾಡುತ್ತೀರಿ, ಅದೂ ಒಂದು ಧರ್ಮದಲ್ಲಿ ಹಸ್ತಕ್ಷೇಪವಲ್ಲವೇ?’ ಎಂದು ಕೇಳುವವರಿಗೆ…ಮೊದಲನೆಯದಾಗಿ, ಇಂದು ಜಾರಿಯಲ್ಲಿ ಇರುವ ವಾಟ್ಸಾಪ್‌, ಫೋನ್‌ ಎಸ್‌ಎಂಎಸ್‌, ಈ ಮೇಲ್‌ ತಲಾಖೀಗೂ ಷ‌ರಿಯಾ ಉಲ್ಲೇಖೀಸುವ ತಲಾಖ್‌ ವಿಧಾನಕ್ಕೂ ಯಾವುದೇ ಸಂಬಂಧವಿಲ್ಲ. ಎರಡನೆಯದಾಗಿ, ಶಬರಿಮಲೆಯ ಮಣಿಕಂಠನ ದರ್ಶನ ಬೇಕೆನ್ನುವ ಬೆರಳೆಣಿಕೆಯ ಜನರ ಹೋರಾಟಕ್ಕೂ ಎಲ್ಲಾ  ಮುಸ್ಲಿಂ ಮಹಿಳೆಯರ ವಿವಾಹಗಳ ಮೇಲೆ ಪರಿಣಾಮ ಬೀರುವ ಪದ್ಧತಿಗೂ ಎಂತಹ ಹೋಲಿಕೆ? 

ಮೂರನೆಯದಾಗಿ, ಶಬರಿಮಲೆಗೆ ಷರತ್ತುಬದ್ಧ ಪ್ರವೇಶ ಮಹಿಳೆಯರ ಮೇಲೆ ಶೋಷಣೆಯಲ್ಲ, ತಾರತಮ್ಯವಷ್ಟೆ. ಆದರೆ ತ್ರಿವಳಿ ತಲಾಕ್‌ ಶೋಷಣೆ ಎನ್ನಿಕೊಳ್ಳುತ್ತದೆ. ಎಲ್ಲದ್ದಕ್ಕಿಂತ ಮಿಗಿಲಾಗಿ ಅಲ್ಲಿ ಕೋರ್ಟ್‌ ಮೆಟ್ಟಲೇರಿದವರು ಶೋಷಿತರು, ಪೀಡಿತರು, ಬೀದಿಗೆ ಬಿದ್ದವರು, ಇಲ್ಲಿ ಕೋರ್ಟಿಗೆ ಹೋದವರು…ಶಬರಿಮಲೆ ಯಾವ ದಿಕ್ಕಿನಲ್ಲಿದೆ, ಅಲ್ಲಿಯ ಆಚರಣೆಗಳೇನು ಎಂಬ ಪರಿವೆ ಕೂಡಾ ಇಲ್ಲದ ನಾಸ್ತಿಕರು! ಶೋಷಿತರಿರಲಿ, ಅವರು ವಂಚಿತರು ಕೂಡಾ ಖಂಡಿತ ಅಲ್ಲ…

ಒಂದೆಡೆ ಸ್ವಯಂಪ್ರೇರಿತರಾಗಿ ಬೀದಿಗಿಳಿದು ಕೋರ್ಟಿನ ಆದೇಶವನ್ನು ವಿರೋಧಿಸಿ ನಿಂತಿರುವ ಕೇರಳದ ಲಕ್ಷಾಂತರ ಹಿಂದೂ ಮಹಿಳೆಯರಿದ್ದರೆ, ಇನ್ನೊಂದೆಡೆ, ಫೆಮಿನಿಸ್ಟು ಎಂಬ ಪಟ್ಟ ಹೊತ್ತ, ದೇವರ ಬಗ್ಗೆ ಯಾವುದೇ ಶ್ರದ್ಧಾ ಭಕ್ತಿಗಳಿಲ್ಲದ ರೆಹಾನ ಫಾತಿಮಾ. ಮತ್ತೂಂದೆಡೆ, ಒಂದು ಬೀಡಿ-ಸಿಗರೇಟು, ಗುಂಡು-ತುಂಡು, ಹೆಂಡತಿಯೊಡನೆ ದೈಹಿಕ ಸಂಪರ್ಕ ಎಲ್ಲವನ್ನೂ ಬಿಟ್ಟು ಕಾಲಿಗೆ ಚಪ್ಪಲಿ ಕೂಡಾ ಮೆಟ್ಟದೆ ಮಂಡಲದ ವ್ರತ ಮುಗಿಸಿ ಅಯ್ಯಪ್ಪನಿಗೆ ಕಾಣಿಕೆಯಾಗಿ ಇರುಮುಡಿ ಹೊತ್ತು ಹೋಗುವ ಪುರುಷರು. ಇರುಮುಡಿಯಲ್ಲಿ ಸಾನಿಟರಿ ಪ್ಯಾಡ್‌ ಹೊತ್ತು ಹಿಂದೂಗಳನ್ನು ಹೀಯಾಳಿಸುವುದೇ ಸಮಾನತೆಯೆಂದು ಪ್ರತಿಪಾದಿಸಲು ಹೊರಟಿರುವ ರೆಹಾನ, ಮೇರಿ ಸ್ವೀಟಿ, ಲಿಬಿ ಮತ್ತು ಕವಿತಾ ಜಕ್ಕಲ್‌!

ಮತ್ತೂಂದು ಮುಖ್ಯವಾದ ವಿಚಾರವೆಂದರೆ, ಪ್ರಾಣ ಪ್ರತಿಷ್ಠಾನವಾದ ಮೇಲೆ, ಮನುಷ್ಯರಂತೆ ಹಿಂದೂ ದೇವರುಗಳಿಗೂ ಹಕ್ಕಿದೆ ಎಂಬ ವಾದವಿದೆ. ಹೇಗೆ ಅಯೋಧ್ಯೆಯ ರಾಂ ಲಲ್ಲಾ , ಒಬ್ಬ ವ್ಯಕ್ತಿ ಎಂದು ಡಾ.ಸುಬ್ರಮಣ್ಯಂ ಸ್ವಾಮಿ ರಾಮ ಜನ್ಮಭೂಮಿ ಪ್ರಕರಣದಲ್ಲಿ ವಾದಿಸುತ್ತಿದ್ದಾರೋ ಅಂತೆಯೇ ಮಣಿಕಂಠನೂ Judicially entity ಯೇ..ಅಲ್ಲವೇ? ನಾಲ್ಕು ಪುರುಷ ನ್ಯಾಯಾಧೀಶರು ಪ್ರವೇಶಕ್ಕಾಗಿ ತೀರ್ಪು ನೀಡಿದ ವೇಳೆ, ವಿರೋಧದ ನಿಲುವನ್ನು ಹೊತ್ತು ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ನಮಗಿಲ್ಲ ಎಂದು ನಿಂತವರು, ಪೀಠದ ಏಕೈಕ ಮಹಿಳಾ ಸದಸ್ಯೆ, ಜಸ್ಟಿಸ್‌ ಇಂದು ಮಲ್ಹೋತ್ರ! ಅವರಿಗಿಂತ ಮಹಿಳೆಯರ ಕುರಿತ ಕಾಳಜಿ ಪುರುಷರಿಗಿರಲಾರದು. 

ಮಾಳವಿಕಾ ಅವಿನಾಶ್‌

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.